PM Modi Christmas: ದೆಹಲಿಯ ಚರ್ಚ್‌ನ ಕ್ರಿಸ್ಮಸ್ ಪ್ರಾರ್ಥನೆಯಲ್ಲಿ ಮೋದಿ ಭಾಗಿ; ಕ್ಯಾಥೆಡ್ರಲ್ ಚರ್ಚ್‌ನ ವಿಶೇಷತೆ ಇಲ್ಲಿದೆ – Kannada News | PM Modi’s Christmas Visit to Delhi’s Historic Cathedral Church: History and Architecture

ದೇಶಾದ್ಯಂತ ಇಂದು ಕ್ರಿಸ್‌ಮಸ್‌ ಹಬ್ಬದ ಸಂಭ್ರಮ ಮನೆ ಮಾಡಿದ್ದು, ಈ ವಿಶೇಷ ಸಂದರ್ಭದಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು ದೆಹಲಿಯ ಅತ್ಯಂತ ಹಳೆಯ ಮತ್ತು ಭವ್ಯವಾದ ಚರ್ಚ್‌ಗಳಲ್ಲಿ ಒಂದಾದ ಕ್ಯಾಥೆಡ್ರಲ್ ಚರ್ಚ್‌ಗೆ ಭೇಟಿ ನೀಡಿದ್ದಾರೆ. ಪ್ರಧಾನಿಯವರ ಈ ಭೇಟಿ ಧಾರ್ಮಿಕ ಸಾಮರಸ್ಯದ ಸಂದೇಶ ಮಾತ್ರವಲ್ಲದೆ, ರಾಜಧಾನಿ ದೆಹಲಿಯ ಈ ಐತಿಹಾಸಿಕ ಚರ್ಚ್ ಅನ್ನು ಮತ್ತೊಮ್ಮೆ ಚರ್ಚೆಯ ಕೇಂದ್ರಬಿಂದುವನ್ನಾಗಿ ಮಾಡಿದೆ. ಆದ್ದರಿಂದ ಈ ಚರ್ಚೆ ಯಾವಾಗ ಸ್ಥಾಪನೆಯಾಯಿತು, ಅದ್ಭುತ ಇತಿಹಾಸ ಮತ್ತು ವಾಸ್ತುಶಿಲ್ಪದ ಬಗ್ಗೆ ಮಾಹಿತಿಯನ್ನು ಇಲ್ಲಿ ತಿಳಿದುಕೊಳ್ಳಿ.

ದೆಹಲಿಯಲ್ಲಿರುವ ಅತ್ಯಂತ ಭವ್ಯವಾದ ಚರ್ಚ್:

ರಾಷ್ಟ್ರಪತಿ ಭವನಕ್ಕೆ ಬಹಳ ಹತ್ತಿರದಲ್ಲಿರುವ ಕ್ಯಾಥೆಡ್ರಲ್ ಚರ್ಚ್ ಆಫ್ ದಿ ರಿಡೆಂಪ್ಶನ್ ದೆಹಲಿಯ ಅತ್ಯಂತ ಹಳೆಯ ಚರ್ಚ್‌ಗಳಲ್ಲಿ ಒಂದಾಗಿದ್ದು, ಇದನ್ನು ರಾಜಧಾನಿಯ ಅತಿದೊಡ್ಡ ಚರ್ಚ್ ಎಂದೂ ಪರಿಗಣಿಸಲಾಗಿದೆ. ಇದರ ಬೃಹತ್ ಕಟ್ಟಡ, ಎತ್ತರದ ಗುಮ್ಮಟಗಳು ಮತ್ತು ಸುಂದರವಾದ ಬಣ್ಣದ ಗಾಜು ಇದಕ್ಕೆ ವಿಶಿಷ್ಟ ಗುರುತನ್ನು ನೀಡುತ್ತದೆ. ಇಲ್ಲಿ ಕ್ರಿಸ್‌ಮಸ್ ಸಮಯದಲ್ಲಿ ವಿಶೇಷ ಅಲಂಕಾರಗಳನ್ನು ಪ್ರದರ್ಶಿಸಲಾಗುತ್ತದೆ ಮತ್ತು ಇದರ ಭವ್ಯ ರಚನೆ ಮತ್ತು ಪ್ರಶಾಂತ ವಾತಾವರಣವು ಪ್ರವಾಸಿಗರು ಮತ್ತು ಯಾತ್ರಿಕರಲ್ಲಿ ಅತ್ಯಂತ ಜನಪ್ರಿಯವಾಗಿದೆ.

ಇದನ್ನೂ ಓದಿ: ಶಬರಿಮಲೆ ಅಯ್ಯಪ್ಪ ದೇವಾಲಯದ 18 ಪವಿತ್ರ ಮೆಟ್ಟಿಲುಗಳ ಮಹತ್ವವೇನು ಗೊತ್ತಾ?

ಕ್ಯಾಥೆಡ್ರಲ್ ಚರ್ಚ್‌ನ ಅದ್ಭುತ ಇತಿಹಾಸ:

ದೆಹಲಿಯ ಮುಖ್ಯ ಕ್ಯಾಥೆಡ್ರಲ್ ಚರ್ಚ್, ಇದನ್ನು ವೈಸ್ರಾಯ್ ಚರ್ಚ್ ಎಂದೂ ಕರೆಯುತ್ತಾರೆ, ಇದರ ನಿರ್ಮಾಣವು 1927 ರಲ್ಲಿ ಪ್ರಾರಂಭವಾಯಿತು ಮತ್ತು 1935 ರಲ್ಲಿ ಪೂರ್ಣಗೊಂಡಿತು ಮತ್ತು ಜನವರಿ 18, 1931 ರಂದು ಸಾರ್ವಜನಿಕರಿಗೆ ತೆರೆಯಲಾಯಿತು. ಇದನ್ನು ರೋಮನ್ ಕ್ಯಾಥೋಲಿಕ್ ಸಮುದಾಯದ ಪ್ರಮುಖ ಧಾರ್ಮಿಕ ಕೇಂದ್ರವೆಂದು ಪರಿಗಣಿಸಲಾಗಿದೆ. ಬ್ರಿಟಿಷ್ ಅವಧಿಯಲ್ಲಿ ನಿರ್ಮಿಸಲಾದ ಈ ಚರ್ಚ್‌ನ ವಾಸ್ತುಶಿಲ್ಪವು ಯುರೋಪಿಯನ್ ಶೈಲಿಗಳಿಂದ ಪ್ರಭಾವಿತವಾಗಿದೆ, ಎತ್ತರದ ಕಮಾನುಗಳು, ವಿಶಾಲವಾದ ಪ್ರಾರ್ಥನಾ ಮಂದಿರವನ್ನು ಹೊಂದಿದೆ. ಬ್ರಿಟಿಷ್ ಅವಧಿಯಲ್ಲಿ, ಭಾರತದ ವೈಸ್ರಾಯ್ ಲಾರ್ಡ್ ಇರ್ವಿನ್ ಪ್ರಾರ್ಥನೆ ಸಲ್ಲಿಸಲು ಈ ಚರ್ಚ್‌ಗೆ ನಿಯಮಿತವಾಗಿ ಭೇಟಿ ನೀಡುತ್ತಿದ್ದರು ಎಂದು ಹೇಳಲಾಗುತ್ತದೆ. ಆ ಯುಗದ ಅನೇಕ ಐತಿಹಾಸಿಕ ನೆನಪುಗಳನ್ನು ಚರ್ಚ್ ಇನ್ನೂ ಹೊಂದಿದೆ.

ಕ್ಯಾಥೆಡ್ರಲ್ ಚರ್ಚ್‌ನ ಅದ್ಭುತ ವಾಸ್ತುಶಿಲ್ಪ:

ಕ್ಯಾಥೆಡ್ರಲ್ ಚರ್ಚ್‌ನ ವಿನ್ಯಾಸವನ್ನು ಪ್ರಸಿದ್ಧ ಬ್ರಿಟಿಷ್ ವಾಸ್ತುಶಿಲ್ಪಿ ಹೆನ್ರಿ ಮೆಡ್ಲ್ ಸಿದ್ಧಪಡಿಸಿದ್ದಾರೆ. ಚರ್ಚ್‌ನ ವಾಸ್ತುಶಿಲ್ಪವು ಇಟಾಲಿಯನ್ ಪ್ರಭಾವಗಳನ್ನು ಸ್ಪಷ್ಟವಾಗಿ ಪ್ರತಿಬಿಂಬಿಸುತ್ತದೆ. ಇದರ ಛಾವಣಿಗಳು ಮತ್ತು ಕಮಾನುಗಳನ್ನು ಬೇಸಿಗೆಯಲ್ಲಿಯೂ ಸಹ ಒಳಗಿನ ತಾಪಮಾನವು ಹೊರಗಿನದಕ್ಕಿಂತ ಕಡಿಮೆ ಇರುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಇದರ ಕಿಟಕಿಗಳನ್ನು ಹಗಲಿನಲ್ಲಿ ನೈಸರ್ಗಿಕ ಬೆಳಕು ಚರ್ಚ್‌ನ ಒಳಭಾಗವನ್ನು ಬೆಳಗಿಸುವ ರೀತಿಯಲ್ಲಿ ಕೆತ್ತಲಾಗಿದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 12:40 pm, Thu, 25 December 25

Source link

ಬಾಕ್ಸಿಂಗ್ ಡೇ ಟೆಸ್ಟ್​ಗೆ 12 ಆಟಗಾರರನ್ನು ಹೆಸರಿಸಿದ ಆಸ್ಟ್ರೇಲಿಯಾ – Kannada News | Ashes 2025: Australia possible XI named for Boxing Day Test

ಡಿಸೆಂಬರ್ 26 ರಿಂದ ಶುರುವಾಗಲಿರುವ ಇಂಗ್ಲೆಂಡ್ ವಿರುದ್ಧದ 4ನೇ ಟೆಸ್ಟ್ ಪಂದ್ಯಕ್ಕಾಗಿ ಆಸ್ಟ್ರೇಲಿಯಾ 12 ಆಟಗಾರರ ಪಟ್ಟಿಯನ್ನು ಪ್ರಕಟಿಸಿದೆ. ಈ ಹನ್ನೆರಡು ಆಟಗಾರರಲ್ಲಿ 11 ಮಂದಿ ಕಣಕ್ಕಿಳಿಯುವುದು ಖಚಿತ. ಅದರಂತೆ ಈ ಬಾರಿ ಕೂಡ ಇನಿಂಗ್ಸ್ ಆರಂಭಿಕರಾಗಿ ಟ್ರಾವಿಸ್ ಹೆಡ್ ಹಾಗೂ ಜೇಕ್​ ವೆದರಾಲ್ಡ್​ ಕಣಕ್ಕಿಳಿಯಲಿದ್ದಾರೆ. ಮೂರನೇ ಕ್ರಮಾಂಕದಲ್ಲಿ ಮಾರ್ನಸ್ ಲಾಬುಶೇನ್ ಬ್ಯಾಟ್ ಬೀಸಲಿದ್ದಾರೆ.

ಇನ್ನು ಪ್ಯಾಟ್ ಕಮಿನ್ಸ್ ಅವರ ಅನುಪಸ್ಥಿತಿಯಲ್ಲಿ ನಾಯಕನಾಗಿ ಸ್ಟೀವ್ ಸ್ಮಿತ್ 4ನೇ ಕ್ರಮಾಂಕದಲ್ಲಿ ಕಣಕ್ಕಿಳಿಯಲಿದ್ದಾರೆ. ಐದನೇ ಕ್ರಮಾಂಕದಲ್ಲಿ ಉಸ್ಮಾನ್ ಖ್ವಾಜಾ ಕಾಣಿಸಿಕೊಂಡರೆ, ವಿಕೆಟ್ ಕೀಪರ್ ಬ್ಯಾಟರ್ ಅಲೆಕ್ಸ್ ಕ್ಯಾರಿ ಆರನೇ ಕ್ರಮಾಂಕದಲ್ಲಿ ಆಡಲಿದ್ದಾರೆ. ಹಾಗೆಯೇ ಆಲ್​ರೌಂಡರ್ ಕ್ಯಾಮರೋನ್ ಗ್ರೀನ್ ಏಳನೇ ಕ್ರಮಾಂಕದಲ್ಲಿ ಕಣಕ್ಕಿಳಿಯಲಿದ್ದಾರೆ.

ವೇಗಿಗಳಾಗಿ ಮಿಚೆಲ್ ಸ್ಟಾರ್ಕ್​ ಹಾಗೂ ಸ್ಕಾಟ್ ಬೋಲ್ಯಾಂಡ್ ಪ್ಲೇಯಿಂಗ್ ಇಲೆವೆನ್​ನಲ್ಲಿ ಕಾಣಿಸಿಕೊಳ್ಳುವುದು ಖಚಿತ. ಇನ್ನು ಮತ್ತೋರ್ವ ವೇಗಿಯಾಗಿ ಬ್ರೆಂಡನ್ ಡಾಗೆಟ್​ಗೆ ಸ್ಥಾನ ಸಿಗುವ ನಿರೀಕ್ಷೆಯಿದೆ. ಆದರೆ ಹನ್ನೊಂದನೇ ಆಟಗಾರನ ಸ್ಥಾನಕ್ಕೆ ಮೈಕೆಲ್ ನೇಸರ್ ಹಾಗೂ ಜ್ಯೆ ರಿಚರ್ಡ್ಸನ್ ನಡುವೆ ನೇರ ಪೈಪೋಟಿ ಇದೆ. ಹೀಗಾಗಿ ಇವರಿಬ್ಬರಲ್ಲಿ ಒಬ್ಬರು ಪ್ಲೇಯಿಂಗ್ ಇಲೆವೆನ್​ನ ಭಾಗವಾಗಲಿದ್ದಾರೆ.

ಬಾಕ್ಸಿಂಗ್ ಡೇ ಟೆಸ್ಟ್​​ಗೆ ಆಸ್ಟ್ರೇಲಿಯಾದ 12 ಆಟಗಾರರು: ಟ್ರಾವಿಸ್ ಹೆಡ್, ಜೇಕ್ ವೆದರಾಲ್ಡ್, ಮಾರ್ನಸ್ ಲಾಬುಶೇನ್, ಸ್ಟೀವ್ ಸ್ಮಿತ್ (ನಾಯಕ), ಉಸ್ಮಾನ್ ಖ್ವಾಜಾ, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಕ್ಯಾಮರೋನ್ ಗ್ರೀನ್, ಮಿಚೆಲ್ ಸ್ಟಾರ್ಕ್, ಸ್ಕಾಟ್ ಬೋಲ್ಯಾಂಡ್, ಬ್ರೆಂಡನ್ ಡಾಗೆಟ್, ಮೈಕೆಲ್ ನೇಸರ್, ಜ್ಯೆ ರಿಚರ್ಡ್ಸನ್.

ಇಂಗ್ಲೆಂಡ್ ಪ್ಲೇಯಿಂಗ್ 11: ಝಾಕ್ ಕ್ರಾಲಿ, ಬೆನ್ ಡಕೆಟ್, ಜೇಕಬ್ ಬೆಥೆಲ್, ಜೋ ರೂಟ್, ಹ್ಯಾರಿ ಬ್ರೂಕ್, ಬೆನ್ ಸ್ಟೋಕ್ಸ್ (ನಾಯಕ), ಜೇಮಿ ಸ್ಮಿತ್ (ವಿಕೆಟ್ ಕೀಪರ್), ವಿಲ್ ಜ್ಯಾಕ್ಸ್, ಗಸ್ ಅಟ್ಕಿನ್ಸನ್, ಬ್ರೈಡನ್ ಕಾರ್ಸ್, ಜೋಶ್ ಟಂಗ್.

ಆಸ್ಟ್ರೇಲಿಯಾ ಟೆಸ್ಟ್ತಂಡ: ಸ್ಟೀವ್ ಸ್ಮಿತ್ (ನಾಯಕ), ಸ್ಕಾಟ್ ಬೋಲ್ಯಾಂಡ್, ಅಲೆಕ್ಸ್ ಕ್ಯಾರಿ , ಬ್ರೆಂಡನ್ ಡಾಗೆಟ್, ಕ್ಯಾಮರೋನ್ ಗ್ರೀನ್, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್, ಉಸ್ಮಾನ್ ಖ್ವಾಜಾ , ಮಾರ್ನಸ್ ಲ್ಯಾಬುಶೇನ್, ಟಾಡ್ ಮರ್ಫಿ, ಮೈಕೆಲ್ ನೇಸರ್, ಜ್ಯೆ ರಿಚರ್ಡ್ಸನ್, ಮಿಚೆಲ್ ಸ್ಟಾರ್ಕ್, ಜೇಕ್ ವೆದರಾಲ್ಡ್, ಬ್ಯೂ ವೆಬ್‌ಸ್ಟರ್.

ಇದನ್ನೂ ಓದಿ: ಒಂದೇ ಒಂದು ರನ್​​ನೊಂದಿಗೆ ವರ್ಲ್ಡ್​ ರೆಕಾರ್ಡ್ ಮುರಿದ ವಿರಾಟ್ ಕೊಹ್ಲಿ

ಇಂಗ್ಲೆಂಡ್ ಟೆಸ್ಟ್ ತಂಡ: ಬೆನ್ ಸ್ಟೋಕ್ಸ್ (ನಾಯಕ), ಹ್ಯಾರಿ ಬ್ರೂಕ್ (ಉಪನಾಯಕ), ಜೋಫ್ರಾ ಆರ್ಚರ್, ಗಸ್ ಅಟ್ಕಿನ್ಸನ್, ಶೋಯೆಬ್ ಬಶೀರ್, ಜೇಕಬ್ ಬೆಥೆಲ್, ಬ್ರೈಡನ್ ಕಾರ್ಸ್, ಝಾಕ್ ಕ್ರಾಲಿ, ಬೆನ್ ಡಕೆಟ್, ವಿಲ್ ಜ್ಯಾಕ್ಸ್, ಓಲಿ ಪೋಪ್, ಮ್ಯಾಥ್ಯೂ ಪಾಟ್ಸ್, ಜೋ ರೂಟ್, ಜೇಮಿ ಸ್ಮಿತ್, ಜೋಶ್ ಟಂಗ್.

Source link

ಚಿತ್ರದುರ್ಗದಲ್ಲಿ ಬಸ್​​ ಭಸ್ಮ: ಮೂವರು ನಾಪತ್ತೆ, ಸಾವಿನ ಸಂಖ್ಯೆಯಲ್ಲಿ ಗೊಂದಲ – Kannada News | Chitradurga Bus Tragedy: Confusion Over Death Toll as Software Engineers Navya, Manasa Go Missing

ಚಿತ್ರದುರ್ಗ, ಡಿಸೆಂಬರ್​​ 25: ಗೊರ್ಲತ್ತು ಬಳಿ ಸಂಭವಿಸಿರುವ ಖಾಸಗಿ ಬಸ್ ಭೀಕರ ಅಪಘಾತದಲ್ಲಿ ಮೃತಪಟ್ಟವರ ಸಂಖ್ಯೆ ಕುರಿತು ಅಧಿಕಾರಿಗಳು ಮತ್ತು ಸಚಿವರ ನಡುವೆ ಗೊಂದಲ ಉಂಟಾಗಿದೆ. ಆರಂಭದಲ್ಲಿ, ಐಜಿಪಿ ರವಿಕಾಂತೇಗೌಡ ಅವರು ಒಂಭತ್ತು ಮಂದಿ ಮೃತಪಟ್ಟಿರುವುದಾಗಿ ಮಾಹಿತಿ ನೀಡಿದ್ದರು. ಆದರೆ, ಸಾರಿಗೆ ಸಚಿವರು ಐವರು ಪ್ರಯಾಣಿಕರು ಮಾತ್ರ ಸಾವನ್ನಪ್ಪಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ. ಅಲ್ಲದೆ ಬಸ್​​ನಲ್ಲಿದ್ದ ಮೂವರು ಪ್ರಯಾಣಿಕರು ನಾಪತ್ತೆಯಾಗಿದ್ದು, ಅವರ ಬಗ್ಗೆ ನಿಖರ ಮಾಹಿತಿ ಲಭ್ಯವಾಗಿಲ್ಲ. ಸಾಫ್ಟ್‌ವೇರ್ ಎಂಜಿನಿಯರ್‌ಗಳಾದ ಚನ್ನರಾಯಪಟ್ಟಣ ತಾಲೂಕಿನ ಅಂಕನಹಳ್ಳಿಯ ನವ್ಯಾ ಹಾಗೂ ಚನ್ನರಾಯಪಟ್ಟಣದ ಮಾನಸ ಸೇರಿ ಮತ್ತೊಬ್ಬರು ನಾಪತ್ತೆಯಾಗಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ವಿಶ್ವ ಬಾಕ್ಸ್ ಆಫೀಸ್​​​ನಲ್ಲಿ ‘ಕಾಂತಾರ: ಚಾಪ್ಟರ್ 1’ ಗಳಿಕೆ ಹಿಂದಿಕ್ಕಿದ ‘ಧುರಂಧರ್’ – Kannada News | Dhurandhar Box Office: Ranveer Singh Film Surpasses Kantara, Nears 1000 Cr Global

ರಣವೀರ್ ಸಿಂಗ್ ನಟನೆಯ ‘ಧುರಂದರ್’ (Dhurandhar) 2025ರ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾ ಆಗಿ ಹೊರ ಹೊಮ್ಮಿದೆ. ಈ ಚಿತ್ರದ ವಿಶ್ವ ಮಟ್ಟದ ಕಲೆಕ್ಷನ್ 935 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಈ ಮೂಲಕ ‘ಕಾಂತಾರ: ಚಾಪ್ಟರ್ 1’ ಚಿತ್ರದ ಗಳಿಕೆಯನ್ನು ಈ ಸಿನಿಮಾ ಹಿಂದಿಕ್ಕಿಬಿಟ್ಟಿದೆ. ಈ ಚಿತ್ರ ಸುಲಭದಲ್ಲಿ ಶೀಘ್ರವೇ ಸಾವಿರ ಕೋಟಿ ರೂಪಾಯಿ ಕ್ಲಬ್ ಸೇರುವ ಎಲ್ಲಾ ಸಾಧ್ಯತೆ ಇದೆ. ಚಿತ್ರ ತಂಡಕ್ಕೆ ಎಲ್ಲರೂ ಅಭಿನಂದನೆ ತಿಳಿಸುತ್ತಿದ್ದಾರೆ.

‘ಕಾಂತಾರ: ಚಾಪ್ಟರ್ 1’ ಸಿನಿಮಾದಲ್ಲಿ ರಿಷಬ್ ಶೆಟ್ಟಿ ನಟಿಸಿದ್ದಾರೆ. ಈ ಸಿನಿಮಾ ಸೂಪರ್ ಹಿಟ್ ಆಯಿತು. ರಿಷಬ್ ಅವರೇ ಈ ಚಿತ್ರ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾ ಈ ವರ್ಷದ ಅತಿ ಹೆಚ್ಚು ಗಳಿಕೆ ಮಾಡಿದ ಸಿನಿಮಾ ಇದಾಗಿತ್ತು. ಈ ಚಿತ್ರದ ದಾಖಲೆಯನ್ನು ಈಗ ‘ಧುರಂಧರ್’ ಮುರಿದು ಹಾಕಿದೆ.

‘ಕಾಂತಾರ: ಚಾಪ್ಟರ್ 1’ ಚಿತ್ರದ ಒಟ್ಟಾರೆ ಕಲೆಕ್ಷನ್ 850 ಕೋಟಿ ರೂಪಾಯಿ ಆಗಿತ್ತು. ‘ಧುರಂಧರ್’ ಕಲೆಕ್ಷನ್ 900 ಕೋಟಿ ರೂಪಾಯಿ ದಾಟಿದೆ. ಹಲವು ದೇಶಗಳಲ್ಲಿ ಸಿನಿಮಾ ‘ಧುರಂಧರ್’ ಬ್ಯಾನ್ ಆಗಿದೆ. ಆದಾಗ್ಯೂ ಸಿನಿಮಾ ಕಲೆಕ್ಷನ್ ತಗ್ಗಿಲ್ಲ. ಈ ಚಿತ್ರ ಭಾರತದ ಬಾಕ್ಸ್ ಆಫೀಸ್​​ನಲ್ಲಿ 600 ಕೋಟಿ ರೂಪಾಯಿ ಗಳಿಸಿದೆ.

20ನೇ ದಿನವೂ ‘ಧುರಂಧರ್’ ಸಿನಿಮಾ ಭಾರತದ ಬಾಕ್ಸ್ ಆಫೀಸ್​​ನಲ್ಲಿ 17 ಕೋಟಿ ರೂಪಾಯಿ ಬಾಚಿಕೊಂಡಿದೆ. ಈ ವೀಕೆಂಡ್ ಒಳಗೆ ಚಿತ್ರ ವಿಶ್ವ ಬಾಕ್ಸ್ ಆಫೀಸ್​​ನಲ್ಲಿ ಸಾವಿರ ಕೋಟಿ ರೂಪಾಯಿ ಗಳಿಸೋ ಸಾಧ್ಯತೆ ಇದೆ. ಈ ಮೂಲಕ ಈ ವರ್ಷದ ಮೊದಲ ಸಾವಿರ ಕೋಟಿ ರೂಪಾಯಿ ಕ್ಲಬ್ ಸಿನಿಮಾ ಇದಾಗೋ ಸಾಧ್ಯತೆ ಇದೆ.

ಇದನ್ನೂ ಓದಿ: ‘ಧುರಂಧರ್’ ಯಶಸ್ಸಿನ ಬಳಿಕ ‘ದೃಶ್ಯಂ 3’ ಚಿತ್ರದಿಂದ ಹೊರಬಂದ ಅಕ್ಷಯ್ ಖನ್ನಾ?

‘ಧುರಂಧರ್’ ಸಿನಿಮಾದಲ್ಲಿ ರಣವೀರ್ ಸಿಂಗ್ ನಟಿಸಿದ್ದಾರೆ. ಆದಿತ್ಯ ಧಾರ್ ಈ ಚಿತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾ ಸಾಕಷ್ಟು ನೆಗೆಟಿವ್ ಟಾಕ್ ಪಡೆದಿತ್ತು. ಆದಾಗ್ಯೂ ‘ಧುರಂಧರ್’ ಗೆದ್ದು ಬೀಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Garuda Purana: ಅವಿವಾಹಿತ ವ್ಯಕ್ತಿಯ ಶ್ರಾದ್ಧವನ್ನು ಯಾರು ಮಾಡಬಹುದು? ಈ ಬಗ್ಗೆ ಗರುಡ ಪುರಾಣ ಹೇಳುವುದೇನು? – Kannada News | Garuda Purana: Shradh for Unmarried; Hindu Death Rituals Explained

ಹಿಂದೂ ಧರ್ಮದಲ್ಲಿ, ಮರಣದ ನಂತರ ನಡೆಸುವ ಆಚರಣೆಗಳನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗುತ್ತದೆ. ನಂಬಿಕೆಗಳ ಪ್ರಕಾರ, ಶ್ರಾದ್ಧ ಮತ್ತು ತರ್ಪಣ ಮಾಡಿದ ನಂತರವೇ ಆತ್ಮವು ಶಾಂತಿಯನ್ನು ಪಡೆಯುತ್ತದೆ. ಆದಾಗ್ಯೂ ಒಬ್ಬ ವ್ಯಕ್ತಿಯು ಅವಿವಾಹಿತನಾಗಿ ಮರಣಹೊಂದಿದರೆ, ಶ್ರಾದ್ಧ ಮಾಡುವ ಹಕ್ಕು ಯಾರಿಗೆ ಇದೆ? ಈ ಬಗ್ಗೆ ಗರುಡ ಪುರಾಣ ಹೇಳುವುದೇನು ಎಂಬುದನ್ನು ಇಲ್ಲಿ ವಿವರಿಸಲಾಗಿದೆ.

ಗರುಡ ಪುರಾಣವು ಹಿಂದೂ ಧರ್ಮದ 18 ಮಹಾಪುರಾಣಗಳಲ್ಲಿ ಒಂದಾಗಿದೆ. ಗರುಡ ಪುರಾಣವು ಅವಿವಾಹಿತರು ಮರಣಹೊಂದಿದರೆ, ಶ್ರಾದ್ಧ ಮಾಡುವ ಹಕ್ಕಿನ ಬಗ್ಗೆ ಸ್ಪಷ್ಟವಾಗಿ ಮತ್ತು ವಿವರವಾಗಿ ವಿವರಿಸುತ್ತದೆ.

ತಂದೆಯಿಂದ ಶ್ರಾದ್ಧ ವಿಧಿ:

ಶಾಸ್ತ್ರಗಳಲ್ಲಿ ಮಗನು ತನ್ನ ತಂದೆಗೆ ಶ್ರಾದ್ಧ ಸಂಸ್ಕಾರವನ್ನು ಮಾಡುತ್ತಾನೆ, ಅದು ಅವನಿಗೆ ಮೋಕ್ಷವನ್ನು ನೀಡುತ್ತದೆ ಎಂದು ಹೇಳಲಾಗಿದೆ. ಆದಾಗ್ಯೂ, ಒಬ್ಬ ಮಗ ಅವಿವಾಹಿತನಾಗಿದ್ದು ಅಕಾಲಿಕ ಮರಣ ಹೊಂದಿದಲ್ಲಿ, ಅವನಿಗೆ ಹೆಂಡತಿಯಾಗಲಿ ಅಥವಾ ಮಕ್ಕಳಾಗಲಿ ಇರುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ತಂದೆಯು ತನ್ನ ಮಗನಿಗೆ ಶ್ರಾದ್ಧ ಸಂಸ್ಕಾರವನ್ನು ಮಾಡುವ ಜವಾಬ್ದಾರಿ ಮತ್ತು ಅಧಿಕಾರವನ್ನು ಹೊಂದಿರುತ್ತಾನೆ. ತನ್ನ ಮಗನ ಆತ್ಮವು ಶಾಂತಿ ಮತ್ತು ಮೋಕ್ಷವನ್ನು ಪಡೆಯುವಂತೆ ತಂದೆಯು ಪ್ರಾಥಮಿಕ ಕರ್ತನ ಪಾತ್ರವನ್ನು ವಹಿಸುತ್ತಾನೆ.

ಮೃತರ ತಂದೆ ಈಗ ಜೀವಂತವಾಗಿಲ್ಲದಿದ್ದರೆ ಅಥವಾ ಆರೋಗ್ಯ ಕಾರಣಗಳಿಂದ ಶ್ರಾದ್ಧ ವಿಧಿಗಳನ್ನು ಮಾಡಲು ಸಾಧ್ಯವಾಗದಿದ್ದರೆ, ಶ್ರಾದ್ಧ ವಿಧಿಗಳನ್ನು ನಿರ್ವಹಿಸುವ ಜವಾಬ್ದಾರಿ ಕಿರಿಯ ಸಹೋದರ ಅಥವಾ ಹಿರಿಯ ಸಹೋದರನ ಮೇಲಿರುತ್ತದೆ. ಮೃತರಿಗೆ ಸಹೋದರರು ಇಲ್ಲದಿದ್ದರೆ, ತಂದೆಯ ಸಹೋದರ, ಅಂದರೆ ಅವರ ಚಿಕ್ಕಪ್ಪ, ಶ್ರಾದ್ಧ ವಿಧಿಗಳನ್ನು ಮಾಡಬಹುದು. ಅವರಿಗೆ ಬೇರೆ ಯಾರೂ ಹತ್ತಿರವಿಲ್ಲದಿದ್ದರೆ, ಕುಟುಂಬದ ಯಾವುದೇ ಸದಸ್ಯರು ಆಚರಣೆಗಳನ್ನು ಮಾಡಬಹುದು.

ಇದನ್ನೂ ಓದಿ: ಮನಿ ಪ್ಲಾಂಟ್‌ನ ಬುಡದಲ್ಲಿ ಒಂದು ನಾಣ್ಯ ಹೂತಿಡಿ; ಪ್ರಯೋಜನ ಸಾಕಷ್ಟಿವೆ

ವಿವಾಹವಿಲ್ಲದೆ ಮರಣ ಹೊಂದುವುದನ್ನು ಅಪೂರ್ಣ ಜೀವನವೆಂದು ಪರಿಗಣಿಸಲಾಗುತ್ತದೆ. ಗರುಡ ಪುರಾಣದ ಪ್ರಕಾರ, ಅಂತಹ ಆತ್ಮಗಳಿಗೆ ಸಾಮಾನ್ಯ ಶ್ರಾದ್ಧ ವಿಧಿಗಳನ್ನು ನಡೆಸಲಾಗುತ್ತದೆಯಾದರೂ, ಅಂತಹ ಆತ್ಮಗಳ ಶಾಂತಿಗಾಗಿ ವಿಶೇಷ ನಿಯಮಗಳನ್ನು ಸಹ ಸೂಚಿಸಲಾಗುತ್ತದೆ. ಅಕಾಲಿಕ ಮರಣದ ಸಂದರ್ಭದಲ್ಲಿ, ನಾರಾಯಣ ಬಲಿ ಆಚರಣೆಯನ್ನು ಮಾಡಬೇಕು. ಇದು ಆತ್ಮವನ್ನು ಪ್ರೇತ ಲೋಕದಿಂದ ಮುಕ್ತಗೊಳಿಸುತ್ತದೆ ಮತ್ತು ಪೂರ್ವಜರ ಲೋಕದಲ್ಲಿ ಅದಕ್ಕೆ ಸ್ಥಾನ ನೀಡುತ್ತದೆ ಎಂದು ನಂಬಲಾಗಿದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಚಿತ್ರದುರ್ಗ ಬಸ್ ದುರಂತ: ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರ ಘೋಷಿಸಿದ ಸಿಎಂ ಸಿದ್ಧರಾಮಯ್ಯ – Kannada News | Chitradurga Bus Fire Tragedy: CM Siddaramaiah, PM Modi React, Compensation for Victims

ಚಿತ್ರದುರ್ಗ, ಡಿ.25: ಚಿತ್ರದುರ್ಗದ ಜಿಲ್ಲೆ (Chitradurga Bus Accident) ಹಿರಿಯೂರು ತಾಲೂಕಿನ ಗೊರ್ಲತ್ತು ಕ್ರಾಸ್ ಬಳಿ ಭೀಕರ ರಸ್ತೆ ಅಪಘಾತ ನಡೆದಿದೆ. ಘಟನೆಯಲ್ಲಿ 9ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ. ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಖಾಸಗಿ ಬಸ್ಸೊಂದು ಹೊತ್ತಿ ಉರಿದಿದೆ. ಇದೀಗ ಪ್ರಧಾನಿ ಮೋದಿ ಸೇರಿದಂತೆ ಹಲವು ನಾಯಕರು ಸಂತಾಪ ಸೂಚಿಸಿದ್ದಾರೆ. ಇದೀಗ ರಾಜ್ಯ ಮುಖ್ಯಮಂತ್ರಿ ಸಿದ್ಧರಾಮಯ್ಯ ಕೂಡ ಸಂತಾಪ ಸೂಚಿಸಿದ್ದಾರೆ. ಇದೀಗ ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದ್ದಾರೆ. ಇದರ ಜತೆಗೆ ಗಾಯಾಳುಗಳಿಗೆ ತಲಾ 50 ಸಾವಿರ ಪರಿಹಾರ ಘೋಷಿಸಿದ್ದಾರೆ.

ಇನ್ನು ಈ ಅಪಘಾತಕ್ಕೆ ಸಂಬಂಧಿಸಿದಂತೆ ಕಾರಣದ ಬಗ್ಗೆ ಸರಿಯಾದ ತನಿಖೆ ನಡೆಸಬೇಕು. ಹಾಗೂ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು. ಘಟನೆಯಲ್ಲಿ ಗಾಯಗೊಂಡವರು ಆದಷ್ಟು ಶೀಘ್ರ ಗುಣಮುಖರಾಗಲಿ. ಮೃತರ ಆತ್ಮಕ್ಕೆ ಶಾಂತಿ‌ ಲಭಿಸಲಿ‌ ಎಂದು ಮತ್ತೊಮ್ಮೆ ಪ್ರಾರ್ಥಿಸುತ್ತೇನೆ ಎಂದು ಎಕ್ಸ್​​ ಖಾತೆಯಲ್ಲಿ ಸಂತಾಪ ಸೂಚಿಸಿದ್ದಾರೆ. ಎಕ್ಸ್​​ನಲ್ಲಿ ಈ ಬಗ್ಗೆ ಮತ್ತೊಂದು ಪೋಸ್ಟ್​​ ಹಂಚಿಕೊಂಡಿದ್ದಾರೆ. ಅದರಲ್ಲಿ ಹೀಗೆ ಬರೆದುಕೊಂಡಿದ್ದಾರೆ. ಚಿತ್ರದುರ್ಗ ಬಳಿ ಸಂಭವಿಸಿದ ಲಾರಿ ಮತ್ತು ಬಸ್ ನಡುವಿನ ಅಪಘಾತದಲ್ಲಿ ಹಲವು ಪ್ರಯಾಣಿಕರು ಸಜೀವ ದಹನವಾದ ಘೋರ ದುರಂತದ ಸುದ್ದಿ ಕೇಳಿ ಎದೆ ನಡುಗಿತು. ಕ್ರಿಸ್ಮಸ್ ರಜೆಯಲ್ಲಿ ಊರಿಗೆ ತೆರಳುತ್ತಿದ್ದವರ ಪ್ರಯಾಣ ಈ ರೀತಿ ದುರಂತದಲ್ಲಿ ಕೊನೆಗೊಂಡಿರುವುದು ವಿಷಾದನೀಯ ಎಂದು ಹೇಳಿದ್ದಾರೆ. ಇನ್ನು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್​, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಕೂಡ ಸಂತಾಪ ಸೂಚಿಸಿದ್ದಾರೆ.

ಇದನ್ನೂ ಓದಿ: ಮತ್ತೊಂದು ಘನಘೋರ ದುರಂತ: ಚಿತ್ರದುರ್ಗ ಹೆದ್ದಾರಿಯಲ್ಲಿ ಹೊತ್ತಿ ಉರಿದ ಖಾಸಗಿ ಬಸ್​​​​, 9ಕ್ಕೂ ಹೆಚ್ಚು ಜನ ಸಜೀವ ದಹನ

ಪ್ರಧಾನಿ ನರೇಂದ್ರ ಮೋದಿ ಸಂತಾಪ

ಘಟನೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದು, ಪ್ರಧಾನ ಮಂತ್ರಿಯವರ ರಾಷ್ಟ್ರೀಯ ಪರಿಹಾರ ನಿಧಿನಿಯಿಂದ ನೆರವು ನೀಡುವುದಾಗಿ ಘೋಷಿಸಿದ್ದಾರೆ. ಈ ಬಗ್ಗೆ ಪ್ರಧಾನಿ ಕಾರ್ಯಾಲಯ ಎಕ್ಸ್ ಮೂಲಕ ಮಾಹಿತಿ ಹಂಚಿಕೊಂಡಿದೆ.‘ಕರ್ನಾಟಕದ ಚಿತ್ರದುರ್ಗ ಜಿಲ್ಲೆಯಲ್ಲಿ ಸಂಭವಿಸಿದ ಅಪಘಾತದಲ್ಲಿ ಜೀವಹಾನಿಯಾಗಿದೆ ಎಂದು ತಿಳಿದು ತೀವ್ರ ದುಃಖವಾಗಿದೆ. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡವರಿಗೆ ಸಂತಾಪ ಸೂಚಿಸುತ್ತೇನೆ. ಗಾಯಗೊಂಡವರು ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದು ಹೇಳಿದ್ದಾರೆ .

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಒಂದೇ ದಿನ ಮೂರು ಸ್ಫೋಟಕ ಸೆಂಚುರೀಸ್..! – Kannada News | Fastest Century In List A Cricket By Indian Batters

ಲಿಸ್ಟ್​ ಎ ಕ್ರಿಕೆಟ್​ನಲ್ಲಿ 40 ಕ್ಕಿಂತ ಕಡಿಮೆ ಎಸೆತಗಳಲ್ಲಿ ಭಾರತದ ನಾಲ್ವರು ಶತಕ ಸಿಡಿಸಿದ್ದಾರೆ. ಈ ನಾಲ್ವರಲ್ಲಿ ಮೂವರು ಒಂದೇ ದಿನ ಈ ಸಾಧನೆ ಮಾಡಿರುವುದು ವಿಶೇಷ. ಅದು ಕೂಡ ಡಿಸೆಂಬರ್ 24ರ ಮಧ್ಯಾಹ್ನದೊಳಗೆ ಈ ವಿಸ್ಫೋಟಕ ಸೆಂಚುರಿಗಳು ಮೂಡಿಬಂದಿರುವುದು ಮತ್ತೊಂದು ವಿಶೇಷ.

Source link

Gold Rate Today Bangalore: ಗುರುವಾರವೂ ಹೆಚ್ಚಿದ ಚಿನ್ನ, ಬೆಳ್ಳಿ ಬೆಲೆ – Kannada News | Gold Price Today on 25th December 2025, Gold And Silver Rates In Bengaluru, Delhi, Mumbai | Latest News in Kannada

ಬೆಂಗಳೂರು, ಡಿಸೆಂಬರ್ 25: ಅಮೂಲ್ಯ ಲೋಹಗಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಏರುವುದು ನಿಂತಿಲ್ಲ. ಚಿನ್ನ, ಬೆಳ್ಳಿ ಬೆಲೆಗಳ ಏರಿಕೆಗೆ ವಿಶ್ರಾಂತಿ ಸಿಕ್ಕಂತಿಲ್ಲ. ಇಂದು ಗುರುವಾರ ಇವೆರಡೂ ಬೆಲೆಗಳು ಅಲ್ಪ ಪ್ರಮಾಣದಲ್ಲಿ ಏರಿವೆ. ನಿನ್ನೆ ಗ್ರಾಮ್​ಗೆ 30 ರೂ ಏರಿದ್ದ ಚಿನ್ನದ ಬೆಲೆ (gold rate) ಇವತ್ತೂ ಕೂಡ ಅಷ್ಟೇ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಬೆಳ್ಳಿ ಬೆಲೆ ನಿನ್ನೆ 10 ರೂ ಜಿಗಿದಿತ್ತು. ಇವತ್ತು ಒಂದು ರೂ ಹೆಚ್ಚಿದೆ. ವಿದೇಶಗಳಲ್ಲೂ ಹೆಚ್ಚಿನ ಕಡೆ ಚಿನ್ನದ ಬೆಲೆ ಅಲ್ಪ ಹೆಚ್ಚಳ ಆಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,27,650 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,39,250 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 23,400 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,27,650 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 23,400 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 24,500 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಡಿಸೆಂಬರ್ 25ಕ್ಕೆ)

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,925 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 12,765 ರೂ
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 10,444 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 234 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,925 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 12,765 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 234 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 12,765 ರೂ
  • ಚೆನ್ನೈ: 12,820 ರೂ
  • ಮುಂಬೈ: 12,765 ರೂ
  • ದೆಹಲಿ: 12,780 ರೂ
  • ಕೋಲ್ಕತಾ: 12,765 ರೂ
  • ಕೇರಳ: 12,765 ರೂ
  • ಅಹ್ಮದಾಬಾದ್: 12,770 ರೂ
  • ಜೈಪುರ್: 12,780 ರೂ
  • ಲಕ್ನೋ: 12,780 ರೂ
  • ಭುವನೇಶ್ವರ್: 12,765 ರೂ

ಇದನ್ನೂ ಓದಿ: ಅಂತಿಮ ಡೆಡ್​ಲೈನ್; ಆಧಾರ್​ಗೆ ಲಿಂಕ್ ಆಗದ ಪ್ಯಾನ್ ಜನವರಿ 1ರಿಂದ ಡೆಡ್; ಹಣಕಾಸು ತೊಂದರೆಗಳೇನಾಗಬಹುದು?

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಮಲೇಷ್ಯಾ: 573 ರಿಂಗಿಟ್ (12,723 ರುಪಾಯಿ)
  • ದುಬೈ: 497.50 ಡಿರಾಮ್ (12,166 ರುಪಾಯಿ)
  • ಅಮೆರಿಕ: 139 ಡಾಲರ್ (12,484 ರುಪಾಯಿ)
  • ಸಿಂಗಾಪುರ: 179.90 ಸಿಂಗಾಪುರ್ ಡಾಲರ್ (12,584 ರುಪಾಯಿ)
  • ಕತಾರ್: 496 ಕತಾರಿ ರಿಯಾಲ್ (12,221 ರೂ)
  • ಸೌದಿ ಅರೇಬಿಯಾ: 506 ಸೌದಿ ರಿಯಾಲ್ (12,117 ರುಪಾಯಿ)
  • ಓಮನ್: 53.20 ಒಮಾನಿ ರಿಯಾಲ್ (12,411 ರುಪಾಯಿ)
  • ಕುವೇತ್: 40.69 ಕುವೇತಿ ದಿನಾರ್ (11,896 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 234 ರೂ
  • ಚೆನ್ನೈ: 245 ರೂ
  • ಮುಂಬೈ: 234 ರೂ
  • ದೆಹಲಿ: 234 ರೂ
  • ಕೋಲ್ಕತಾ: 234 ರೂ
  • ಕೇರಳ: 245 ರೂ
  • ಅಹ್ಮದಾಬಾದ್: 234 ರೂ
  • ಜೈಪುರ್: 234 ರೂ
  • ಲಕ್ನೋ: 234 ರೂ
  • ಭುವನೇಶ್ವರ್: 245 ರೂ
  • ಪುಣೆ: 234

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

‘10 ಬಾರಿ ನೋಡಿದ್ರೂ ಬೇಸರ ಬರಲ್ಲ’; ‘ಮಾರ್ಕ್’ ನೋಡಿ ಫ್ಯಾನ್ಸ್ ರಿಯಾಕ್ಷನ್ – Kannada News | Mark Movie Fans Reaction I Can watch Sudeep Movie 10 times Says Sudeep

‘ಮಾರ್ಕ್’ ಸಿನಿಮಾ ಇಂದು (ಡಿಸೆಂಬರ್ 25) ರಿಲೀಸ್ ಆಗಿದೆ. ಸಿನಿಮಾ ನೋಡಿದ ಅಭಿಮಾನಿಗಳು ಚಿತ್ರ ಹೇಗಿದೆ ಎಂಬುದರ ಬಗ್ಗೆ ರಿಯಾಕ್ಷನ್ ಕೊಡುತ್ತಾ ಇದ್ದಾರೆ. ‘ಈ ಚಿತ್ರ 10 ಬಾರಿ ಸಿನಿಮಾ ನೋಡಿದರೂ ಬೇಸರ ಬರಲ್ಲ’ ಎಂದಿದ್ದಾರೆ. ಸಿನಿಮಾದಲ್ಲಿ ಸಾಕಷ್ಟು ಟ್ವಿಸ್ಟ್​​ಗಳು ಇವೆ ಎಂದು ಕೂಡ ಸುದೀಪ್ ಅಭಿಮಾನಿಗಳು ಅಭಿಪ್ರಾಯ ಹೊರಹಾಕಿದ್ದಾರೆ. ಈ ಚಿತ್ರ ಒಟ್ಟಾರೆ ಗಮನ ಸೆಳೆಯುವ ರೀತಿಯಲ್ಲಿ ಇದೆ.

 

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Mark Movie Review: ಮ್ಯಾಕ್ಸ್ ಛಾಯೆಯಲ್ಲೇ ಮೂಡಿಬಂದ ‘ಮಾರ್ಕ್’; ಈ ಬಾರಿ ಹೊಸದೇನು? – Kannada News | Kichcha Sudeep starrer Mark Kannada Movie Review and Rating

ನಟ ಕಿಚ್ಚ ಸುದೀಪ್ (Kichcha Sudeep) ಹಾಗೂ ನಿರ್ದೇಶಕ ವಿಜಯ್ ಕಾರ್ತಿಕೇಯ ಅವರ ಕಾಂಬಿನೇಷನ್​​ನಲ್ಲಿ ಈ ಮೊದಲು ‘ಮ್ಯಾಕ್ಸ್’ ಸಿನಿಮಾ ಬಂದಿತ್ತು. ಈಗ ಅದೇ ಕಾಂಬಿನೇಷನ್​ನಲ್ಲಿ ‘ಮಾರ್ಕ್’ ಸಿನಿಮಾ (Mark Movie) ಮಾಡಲಾಗಿದೆ. ಡಿಸೆಂಬರ್ 25ರಂದು ಬಿಡುಗಡೆ ಆಗಿರುವ ಈ ಸಿನಿಮಾ ಮೇಲೆ ಅಭಿಮಾನಿಗಳಿಗೆ ಬಹಳ ನಿರೀಕ್ಷೆ ಇತ್ತು. ಹಾಗಾದರೆ ಅಭಿಮಾನಿಗಳ ನಿರೀಕ್ಷೆಗೆ ತಕ್ಕಂತೆ ‘ಮಾರ್ಕ್’ ಚಿತ್ರ ಮೂಡಿಬಂದಿದೆಯಾ? ಸಿನಿಮಾ ನೋಡಲು ಚಿತ್ರಮಂದಿರಕ್ಕೆ ಬರುವ ಪ್ರೇಕ್ಷಕರಿಗೆ ಯಾವ ರೀತಿಯ ಮನರಂಜನೆ ಸಿಗಲಿದೆ? ಈ ವಿಮರ್ಶೆಯಲ್ಲಿದೆ ಉತ್ತರ..

‘ಮಾರ್ಕ್’ ಸಿನಿಮಾದ ಟ್ರೇಲರ್ ಬಿಡುಗಡೆ ಆದಾಗ ಈ ಚಿತ್ರದ ಕಥೆ ಏನು ಎಂಬ ಬಗ್ಗೆ ಸುಳಿವು ಸಿಕ್ಕಿತ್ತು. ಈ ಬಾರಿ ಕೂಡ ಕಿಚ್ಚ ಸುದೀಪ್ ಮತ್ತು ಡೈರೆಕ್ಟರ್ ವಿಜಯ್ ಕಾರ್ತಿಕೇಯ ಅವರು ‘ಮ್ಯಾಕ್ಸ್’ ರೀತಿಯ ಸಿನಿಮಾವನ್ನೇ ಮಾಡಿರಬಹುದು ಎಂಬ ಅಭಿಪ್ರಾಯ ಮೂಡಿತ್ತು. ಅದು ನಿಜವಾಗಿದೆ. ‘ಮಾರ್ಕ್’ ಕೂಡ ‘ಮ್ಯಾಕ್ಸ್’ ರೀತಿಯೇ ಇದೆ. ಆರಂಭದಿಂದ ಕೊನೇ ತನಕ ಎರಡೂ ಸಿನಿಮಾಗಳ ನಡುವೆ ಸಾಮ್ಯತೆ ಕಾಣುತ್ತದೆ.

ನೀವು ‘ಮ್ಯಾಕ್ಸ್’ ನೋಡಿ ಇಷ್ಟಪಟ್ಟ ಪ್ರೇಕ್ಷಕರಾಗಿದ್ದರೆ ನಿಮಗೆ ‘ಮಾರ್ಕ್’ ಕೂಡ ಇಷ್ಟ ಆಗುತ್ತದೆ. ಬಹುತೇಕ ಒಂದೇ ರಾತ್ರಿಯಲ್ಲಿ ನಡೆಯುವ ಕಥೆಯನ್ನು ‘ಮ್ಯಾಕ್ಸ್’ ಚಿತ್ರದಲ್ಲಿ ತೋರಿಸಲಾಗಿತ್ತು. ಈಗ ಒಂದೂವರೆ ದಿನದಲ್ಲಿ ನಡೆಯುವ ಕಥೆಯನ್ನು ‘ಮಾರ್ಕ್’ ಸಿನಿಮಾ ತೆರೆದಿಟ್ಟಿದೆ. ಕಲಾವಿದರು ಬೇರೆ ಆದರೂ ಬಹುತೇಕ ಅದೇ ತಂತ್ರಜ್ಞರು ಎರಡೂ ಸಿನಿಮಾಗೆ ಕೆಲಸ ಮಾಡಿರುವುದರಿಂದ ಒಂದೇ ರೀತಿಯ ಫೀಲ್ ಮುಂದುವರಿದಿದೆ.

‘ಮಾರ್ಕ್’ ಮತ್ತು ‘ಮ್ಯಾಕ್ಸ್’ ಸಿನಿಮಾಗಳಿಗೆ ಹೋಲಿಸಿದರೆ ‘ಮಾರ್ಕ್’ ಕಥೆ ಹೊಸದಾಗಿದೆ. ಆದರೆ ಪ್ಯಾಟರ್ನ್ ಒಂದೇ ರೀತಿ ಇದೆ. ಡ್ರಗ್ಸ್ ಮಾಫಿಯಾ, ರಾಜಕೀಯದ ಪಿತೂರಿ ಹಾಗೂ ಮಕ್ಕಳ ಅಪಹರಣದ ಗ್ಯಾಂಗ್. ಈ ಮೂರು ಅಂಶಗಳು ಪೊಲೀಸ್ ಇಲಾಖೆಗೆ ಸವಾಲಾಗುತ್ತದೆ. ಅದನ್ನು ಎದುರಿಸಲು ಕಥಾನಾಯಕನಿಗೆ ಕೆಲವೇ ಗಂಟೆಗಳ ಸಮಯ ಇರುತ್ತದೆ. ಅಂತಿಮವಾಗಿ ಅವನು ದುಷ್ಟರ ವಿರುದ್ಧ ಹೇಗೆಲ್ಲ ಹೋರಾಡುತ್ತಾನೆ? ಒಳ್ಳೆಯವರನ್ನು ಹೇಗೆ ಕಾಪಾಡುತ್ತಾನೆ ಎಂಬುದೇ ‘ಮಾರ್ಕ್’ ಕಥೆಯ ಸಾರಾಂಶ.

ಕಿಚ್ಚ ಸುದೀಪ್ ಅವರು ‘ಮಾರ್ಕ್’ ಸಿನಿಮಾದಲ್ಲಿ ಸಂಪೂರ್ಣ ಮಾಸ್ ಅವತಾರ ತಾಳಿದ್ದಾರೆ. ಅವರ ಗೆಟಪ್ ಬದಲಾಗಿದೆ. ಸಸ್ಪೆಂಡ್ ಆಗಿರುವ ಪೊಲೀಸ್ ಅಧಿಕಾರಿಯ ಪಾತ್ರವನ್ನು ಅವರು ಮಾಡಿದ್ದಾರೆ. ಆ ಪಾತ್ರಕ್ಕೆ ತನ್ನದೇ ಆದ ಇತಿಮಿತಿಗಳಿವೆ. ಅವುಗಳ ನಡುವೆ ಸುದೀಪ್ ಅವರು ಚೆನ್ನಾಗಿ ಅಭಿನಯಿಸಿದ್ದಾರೆ. ಹೊಡಿಬಡಿ ದೃಶ್ಯಗಳಿಂದ ಅವರು ಅಭಿಮಾನಿಗಳನ್ನು ರಂಜಿಸಿದ್ದಾರೆ. ಅಲ್ಲಲ್ಲಿ ಮಾಸ್ ಡೈಲಾಗ್ ಹೇಳುತ್ತಾ ಅಬ್ಬರಿಸಿದ್ದಾರೆ.

‘ಮಾರ್ಕ್’ ಸಿನಿಮಾದಲ್ಲಿ ಕಲಾವಿದರ ದಂಡು ಇದೆ. ಸುದೀಪ್ ಜೊತೆ ಗೋಪಾಲಕೃಷ್ಣ ದೇಶಪಾಂಡೆ, ರೋಶಿನಿ ಪ್ರಕಾಶ್, ಅರ್ಚನಾ ಕೊಟ್ಟಿಗೆ, ಪ್ರತಾಪ್ ನಾರಾಯಣ್, ಅಶ್ವಿನ್ ಹಾಸನ್ ಮುಂತಾದವರು ಅಭಿನಯಿಸಿದ್ದಾರೆ. ವಿಲನ್ ಗ್ಯಾಂಗ್​​ನಲ್ಲಿ ನವೀನ್ ಚಂದ್ರ, ಗುರು ಸೋಮಸುಂದರಂ, ವಿಕ್ರಾಂತ್, ಯೋಗಿ ಬಾಬು, ಶೈನ್ ಟಾಮ್ ಚಾಕೋ ಮುಂತಾದ ಕಲಾವಿದರು ನಟಿಸಿದ್ದಾರೆ. ಎಲ್ಲ ಪಾತ್ರಗಳು ಗಮನ ಸೆಳೆಯುವಂತಿವೆ.

ತಾಂತ್ರಿಕವಾಗಿ ‘ಮಾರ್ಕ್’ ಚೆನ್ನಾಗಿದೆ. ಕಲಾ ನಿರ್ದೇಶಕ ಶಿವಕುಮಾರ್ ಅವರ ಕೆಲಸ ಎದ್ದು ಕಾಣುತ್ತದೆ. ಸಂಗೀತ ನಿರ್ದೇಶನ ಅಜನೀಶ್ ಲೋಕನಾಥ್ ಅವರು ಹಾಡುಗಳ ಜೊತೆಗೆ ಹಿನ್ನೆಲೆ ಸಂಗೀತದಿಂದಲೂ ಸಿನಿಮಾದ ಮೆರುಗು ಹೆಚ್ಚಿಸಲು ಸಾತ್ ನೀಡಿದ್ದಾರೆ. ಶೇಖರ್ ಚಂದ್ರ ಅವರ ಛಾಯಾಗ್ರಹಣ ಕೂಡ ಗಮನ ಸೆಳೆಯುತ್ತದೆ.

ಕಾಮಿಡಿ, ರೊಮ್ಯಾನ್ಸ್ ಇತ್ಯಾದಿ ಅಂಶಗಳು ಈ ಸಿನಿಮಾದಲ್ಲಿ ಇಲ್ಲ. ಹಾಗಾಗಿ ಎಲ್ಲಿಯೂ ಸಮಯ ವ್ಯರ್ಥ ಮಾಡದೇ ಕಥೆ ಪಟಪಟನೆ ಸಾಗುವಂತೆ ನೋಡಿಕೊಂಡಿದ್ದಾರೆ ನಿರ್ದೇಶಕ ವಿಜಯ್ ಕಾರ್ತಿಕೇಯ. ಅದು ಈ ಸಿನಿಮಾಗೆ ಪ್ಲಸ್ ಆಗಿದೆ. ಅನೇಕ ಕಡೆಗಳಲ್ಲಿ ಲಾಜಿಕ್ ಇಲ್ಲದಿದ್ದರೂ ಕೂಡ ಆ ಬಗ್ಗೆ ಆಲೋಚಿಸಲು ಪ್ರೇಕ್ಷಕರಿಗೆ ಸಮಯವನ್ನೇ ನೀಡದಂತೆ ಕಥೆ ಮುಂದೆ ಸಾಗುತ್ತದೆ. ಮುಂದೇನು ಎಂಬ ಕುತೂಹಲವನ್ನು ಪ್ರತಿ ದೃಶ್ಯದಲ್ಲೂ ಮೂಡಿಸುವ ಗುಣ ಈ ಚಿತ್ರಕ್ಕಿದೆ.

ಇದನ್ನೂ ಓದಿ: ಈ ವಾರ ಅಖಾಡಕ್ಕೆ ‘ಮಾರ್ಕ್’, ‘45’: ಇನ್ನೂ ಕಡಿಮೆ ಆಗುತ್ತಾ ‘ದಿ ಡೆವಿಲ್’ ಕಲೆಕ್ಷನ್?

ಒಂದಷ್ಟು ಮೈನಸ್ ಅಂಶಗಳು ಕೂಡ ‘ಮಾರ್ಕ್’ ಸಿನಿಮಾದಲ್ಲಿವೆ. ಒಟ್ಟಾರೆ ಕಥೆಯಲ್ಲಿ ಪ್ರೇಕ್ಷಕರನ್ನು ಹಿಡಿದಿಡುವಂತಹ ಎಮೋಷನ್ ಮಿಸ್ ಆಗಿದೆ ಎನಿಸುತ್ತದೆ. ಸೂಪರ್ ಹೀರೋ ರೀತಿಯಲ್ಲಿ ಕಥಾನಾಯಕನ ಪಾತ್ರವನ್ನು ತೋರಿಸಲಾಗಿದೆ. ಅದರಿಂದಾಗಿ ನೈಜತೆಯ ಫೀಲ್ ಕಾಣೆಯಾಗಿದೆ. ‘ಮ್ಯಾಕ್ಸ್​’ ಚಿತ್ರಕ್ಕಿಂತಲೂ ಏನೋ ಭಿನ್ನವಾಗಿದ್ದು ಬೇಕು ಎಂದು ಬಯಸುವ ಅಭಿಮಾನಿಗಳಿಗೆ ‘ಮಾರ್ಕ್’ ಕೊಂಚ ನಿರಾಸೆ ಮಾಡಬಹುದು. ಆದರೆ ಅಪ್ಪಟ ಸುದೀಪ್ ಅಭಿಮಾನಿಗಳಿಗೆ ಈ ಸಿನಿಮಾ ಖಂಡಿತ ಇಷ್ಟ ಆಗುತ್ತದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Exit mobile version