ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ 5 ತಿಂಗಳು ಕಣಕ್ಕಿಳಿಯಲ್ಲ! – Kannada News | Virat Kohli and Rohit Sharma will be away from national duty until at least June

ಭಾರತ ಮತ್ತು ನ್ಯೂಝಿಲೆಂಡ್ ನಡುವಣ ಏಕದಿನ ಸರಣಿ ಮುಗಿದಿದೆ. ಮೂರು ಪಂದ್ಯಗಳ ಈ ಸರಣಿಯ ಮೊದಲ ಮ್ಯಾಚ್​ನಲ್ಲಿ ಟೀಮ್ ಇಂಡಿಯಾ ಗೆದ್ದರೆ, ಉಳಿದ ಎರಡು ಪಂದ್ಯಗಳಲ್ಲಿ ಜಯ ಸಾಧಿಸುವ ಮೂಲಕ ನ್ಯೂಝಿಲೆಂಡ್ ತಂಡವು ಸರಣಿಯನ್ನು ವಶಪಡಿಸಿಕೊಂಡಿದೆ. ಈ ಸರಣಿ ಮುಕ್ತಾಯದ ಬೆನ್ನಲ್ಲೇ ರೋಹಿತ್ ಶರ್ಮಾ – ವಿರಾಟ್ ಕೊಹ್ಲಿ ಮುಂದಿನ 5 ತಿಂಗಳುಗಳ ಟೀಮ್ ಇಂಡಿಯಾ ಪರ ಕಣಕ್ಕಿಳಿಯಲಿಲ್ಲ ಎಂಬ ವಿಚಾರ ಮುನ್ನಲೆಗೆ ಬಂದಿದೆ.

Source link

ಏರಿದ ಏಣಿಯನ್ನು ಒದೆಯಲಿಲ್ಲ ಗಿಲ್ಲಿ ನಟ; ಬಿಗ್ ಬಾಸ್ ವಿನ್ನರ್ ನಡೆಗೆ ಮೆಚ್ಚುಗೆ – Kannada News | BBK 12 Winner Gilli’s Gratitude: Thanks to Sudeep, His Gang and Zee Kannada

ಬಿಗ್ ಬಾಸ್ ಕನ್ನಡ ಸೀಸನ್ 12ರ ವಿನ್ನರ್ ಆಗಿ ಗಿಲ್ಲಿ ನಟ ಹೊರ ಹೊಮ್ಮಿದ್ದಾರೆ. ಅದ್ದೂರಿ ವೇದಿಕೆ ಮೇಲೆ ಅವರ ಹೆಸರನ್ನು ಘೋಷಣೆ ಮಾಡಲಾಯಿತು ಎಂಬುದು ವಿಶೇಷ. ಗಿಲ್ಲಿ ನಟನಿಗೆ ಎಲ್ಲ ಕಡೆಗಳಿಂದ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಇದರ ಜೊತೆಗೆ ಗಿಲ್ಲಿ ನಟನ ನಡೆಗೆ ಮೆಚ್ಚುಗೆ ವ್ಯಕ್ತವಾಗಿದೆ.

ಕಿಚ್ಚನಿಗೆ ಧನ್ಯವಾದ

112 ದಿನಗಳ ಬಿಗ್ ಬಾಸ್ ಜರ್ನಿಯಲ್ಲಿ ಕಿಚ್ಚ ಸುದೀಪ್ ಅವರು ಗಿಲ್ಲಿಯನ್ನು ಅನೇಕ ಬಾರಿ ತಿದ್ದಿದ್ದಾರೆ. ತಪ್ಪಾದಾಗ ತಪ್ಪು ಎಂದು ಹೇಳಿದ್ದಾರೆ. ಉತ್ತಮವಾಗಿ ಆಡಿದಾಗ ಚಪ್ಪಾಳೆ ನೀಡಿದ್ದಾರೆ. ಇದೆಲ್ಲವನ್ನೂ ಗಿಲ್ಲಿ ನೆನಪಿನಲ್ಲಿ ಇಟ್ಟುಕೊಂಡಿದ್ದಾರೆ. ‘ಸಾಯೋವರೆಗೂ ನಿಮ್ಮನ್ನು ಮರೆಯಲ್ಲ’ ಎಂದು ಗಿಲ್ಲಿ ಹೇಳಿದ್ದಾರೆ. ಈ ಮೂಲಕ ಕಿಚ್ಚನಿಗೆ ವಿಶೇಷ ಗೌರವ ನೀಡಿದ್ದಾರೆ.

ಗ್ಯಾಂಗ್​​ನ ಮರೆತಿಲ್ಲ ಗಿಲ್ಲಿ

ಗಿಲ್ಲಿ ಬಿಗ್ ಬಾಸ್ ಮನೆಯಲ್ಲಿ ತಮ್ಮದೇ ಆದ ಗ್ಯಾಂಗ್ ಕಟ್ಟಿಕೊಂಡಿದ್ದರು. ಇದರಲ್ಲಿ ರಕ್ಷಿತಾ ಶೆಟ್ಟಿ, ರಘು ಹಾಗೂ ಕಾವ್ಯಾ ಪ್ರಮುಖರು. ಇವರಿಗೆ ವೇದಿಕೆ ಮೇಲೆಯೇ ಸುದೀಪ್ ಧನ್ಯವಾದ ಹೇಳಿದ್ದಾರೆ. ‘ನನ್ನ ಜರ್ನಿಯಲ್ಲಿ ಹೊರಗೆ ಅಭಿಮಾನಿಗಳು ಹೇಗೆ ಬೆಂಬಲವಾಗಿ ನಿಂತರೋ ಮನೆ ಒಳಗೆ ರಘು ಅಣ್ಣ, ರಕ್ಷಿತಾ ಹಾಗೂ ಕಾವ್ಯಾ ಬೆಂಬಲವಾಗಿ ನಿಂತರು. ಅವರಿಗೂ ಧನ್ಯವಾದ’ ಎಂದು ಗಿಲ್ಲಿ ಹೇಳಿದ್ದಾರೆ.

ಇದನ್ನೂ ಓದಿ: ಸುದೀಪ್ ಹೃದಯ ವೈಶಾಲ್ಯತೆ ನೋಡಿ; ವೇದಿಕೆ ಮೇಲೆ ಗಿಲ್ಲಿಗೆ 10 ಲಕ್ಷ ಬಹುಮಾನ ಘೋಷಿಸಿದ ಕಿಚ್ಚ

ಜೀ ಕನ್ನಡದ ಪೋಸ್ಟ್

ಜೀ ಕನ್ನಡ ವಾಹಿನಿಯಲ್ಲಿ ಹಲವು ಶೋಗಳನ್ನು ಮಾಡಿದವರು ಗಿಲ್ಲಿ ನಟ. ಅವರ ಪ್ರತಿಭೆಯನ್ನು ಮೊದಲು ಗುರುತಿಸಿದ್ದು ಜೀ ಕನ್ನಡ. ಹೀಗಾಗಿ, ಜೀ ಶುಭಾಶಯ ತಿಳಿಸಿ ಪೋಸ್ಟ್ ಒಂದನ್ನು ಹಂಚಿಕೊಂಡಿದೆ. ‘ತನ್ನ ಕಾಮಿಡಿ ಟೈಮಿಂಗ್, ಅಮೋಘ ಪ್ರತಿಭೆಯ ಮೂಲಕ ವಿಜೇತನಾಗಿ ಕರುನಾಡಿನ ಮನಗೆದ್ದ ನಮ್ಮ ಗಿಲ್ಲಿಗೆ ಅಭಿನಂದನೆ’ ಎಂದಿದೆ ಜೀ. ಈ ಪೋಸ್ಟ್​​ನ ಗಿಲ್ಲಿ ನಟ ಖುಷಿಯಿಂದ ಹಂಚಿಕೊಂಡಿದ್ದಾರೆ. ಅವರು ಏರಿದ ಏಣಿಯನ್ನು ಮರೆತಿಲ್ಲ ಎಂಬುದಕ್ಕೆ ಈ ಘಟನೆಗಳೇ ಸಾಕ್ಷಿ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 8:32 am, Mon, 19 January 26

Source link

Bengaluru Air Quality: ಬೆಂಗಳೂರು ಜೊತೆ ಮಂಗಳೂರಿನಲ್ಲೂ ಸಿಗುತ್ತಿಲ್ಲ ಶುದ್ಧ ಗಾಳಿ! – Kannada News | Bangalore Air Pollution Crisis: Mangaluru’s Air Quality got worst than Bengaluru

ಬೆಂಗಳೂರು ಜೊತೆ ಮಂಗಳೂರಿನಲ್ಲೂ ಸಿಗುತ್ತಿಲ್ಲ ಶುದ್ಧ ಗಾಳಿ!

ಬೆಂಗಳೂರು, ಜನವರಿ 19: ಬೆಂಗಳೂರಿನ ಗಾಳಿಯ ಗುಣಮಟ್ಟದಲ್ಲಿ (Bengaluru Air Quality) ಹಲವು ದಿನಗಳಿಂದ ಏರು ಪೇರಾಗುತ್ತಲೇ ಇದೆ. ಒಮ್ಮೊಮ್ಮೆ 200ರ ಗಡಿ ದಾಟುವ AQI, ನಗರವಾಸಿಗಳಲ್ಲಿ ಆತಂಕ ಸೃಷ್ಟಿಸುತ್ತಿದೆ. ಇದರ ಜೊತೆಗೆ ಮಂಗಳೂರಿನಲ್ಲೂ ಇಂದು ವಾಯು ಗುಣಮಟ್ಟ ಕಳಪೆಯಾಗಿದ್ದು, ಇದರಿಂದ ಮಕ್ಕಳಿಗೆ, ಹಿರಿಯ ನಾಗರಿಕರಿಗೆ ಹಾಗೂ ಉಸಿರಾಟ ಸಮಸ್ಯೆ ಇರುವವರಿಗೆ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.

ಬೆಂಗಳೂರಿಗಿಂತ ಕಳಪೆ ಏರ್ ಕ್ವಾಲಿಟಿ

ಬೆಂಗಳೂರಿನ ಗಾಳಿಯ ಗುಣಮಟ್ಟ 169 ಇದ್ದು, ಏರ್ ಕ್ವಾಲಿಟಿ ಅನಾರೋಗ್ಯಕಾರಿ ಹಂತದಲ್ಲೇ ಇದೆ. ಅದರೊಂದಿಗೆ ಮಂಗಳೂರಿನ ಗಾಳಿಯಗುಣಮಟ್ಟ 185ಕ್ಕೆ ತಲುಪಿದ್ದು, ತೀರಾ ಕಳಪೆ ಮಟ್ಟಕ್ಕೆ ಕುಸಿದಿದೆ. ನಗರದಲ್ಲಿ PM2.5 ಮಟ್ಟ 84 ಹಾಗೂ PM10 ಮಟ್ಟ 116ಕ್ಕೆ ಏರಿಕೆಯಾಗಿದೆ. ಈ ಎರಡೂ ಪ್ರಮಾಣಗಳು ಸುರಕ್ಷಿತ ಮಿತಿಯನ್ನು ಮೀರಿದ್ದು, ಸಾರ್ವಜನಿಕ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಮಟ್ಟದಲ್ಲಿವೆ.

ವಿಶೇಷವಾಗಿ PM2.5 ಸೂಕ್ಷ್ಮ ಕಣಗಳು ಶ್ವಾಸಕೋಶದ ಆಳಕ್ಕೆ ಪ್ರವೇಶಿಸಿ ಉಸಿರಾಟದ ತೊಂದರೆ, ಆಸ್ತಮಾ ಮತ್ತು ಹೃದಯ ಸಂಬಂಧಿತ ಸಮಸ್ಯೆಗಳಿಗೆ ಕಾರಣವಾಗುವ ಸಾಧ್ಯತೆ ಇದೆ. ವಾಹನಗಳ ಅತಿಯಾದ ಬಳಕೆ, ನಿರ್ಮಾಣ ಕಾರ್ಯಗಳಿಂದ ಉಂಟಾಗುವ ಧೂಳು, ಕೈಗಾರಿಕಾ ಉತ್ಸರ್ಜನೆ ಮತ್ತು ಹವಾಮಾನದಲ್ಲಿ ಗಾಳಿಯ ಚಲನೆಯ ಕೊರತೆ ಈ ಪರಿಸ್ಥಿತಿಗೆ ಪ್ರಮುಖ ಕಾರಣಗಳಾಗಿವೆ. ಬೆಳಿಗ್ಗೆ ಮತ್ತು ಸಂಜೆ ಸಮಯದಲ್ಲಿ ಮಾಲಿನ್ಯ ಪ್ರಮಾಣ ಇನ್ನಷ್ಟು ಹೆಚ್ಚುತ್ತಿರುವುದು ಆತಂಕಕಾರಿ ಸಂಗತಿ.

ರಾಜ್ಯದ ಇತರ ನಗರದಲ್ಲಿ ಇಂದಿನ ಗಾಳಿಯ ಗುಣಮಟ್ಟ (Air Quality Index)

  • ಬೆಂಗಳೂರು –169
  • ಮಂಗಳೂರು-185
  • ಮೈಸೂರು – 104
  • ಬೆಳಗಾವಿ – 80
  • ಕಲಬುರ್ಗಿ-84
  • ಶಿವಮೊಗ್ಗ – 64
  • ಬಳ್ಳಾರಿ – 168
  • ಹುಬ್ಬಳ್ಳಿ- 86
  • ಉಡುಪಿ –171
  • ವಿಜಯಪುರ –68

ಗಾಳಿ ಗುಣಮಟ್ಟ ತಿಳಿಯುವುದು ಹೇಗೆ?

  • ಉತ್ತಮ- 0-50
  • ಮಧ್ಯಮ – 50-100
  • ಕಳಪೆ – 100-150
  • ಅನಾರೋಗ್ಯಕರ – 150-200
  • ಗಂಭೀರ – 200 – 300
  • ಅಪಾಯಕಾರಿ – 300 -500+

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಮೈಸೂರಿನ ಉದಯಗಿರಿಯಲ್ಲಿ ಮತ್ತೆ ಝಳಪಿಸಿದ ಲಾಂಗ್​, ಮಚ್ಚುಗಳು: ಭಯಾನಕ ದೃಶ್ಯ ಮೊಬೈಲ್ ಕ್ಯಾಮರಾದಲ್ಲಿ ಸೆರೆ – Kannada News | Public Panic in Mysuru’s Udayagiri as Youths Run Amok with Deadly Weapons, Clash Video Goes Viral

ಮೈಸೂರು, ಜನವರಿ 19: ಮೈಸೂರಿನ ಉದಯಗಿರಿಯಲ್ಲಿ ಕಳೆದ ವರ್ಷ ಸಂಭವಿಸಿದ್ದ ಗಲಭೆ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಪೊಲೀಸ್ ಠಾಣೆ ಮೇಲೆಯೇ ದುಷ್ಕರ್ಮಿಗಳು ಕಲ್ಲುತೂರಾಟ ನಡೆಸಿದ್ದರು. ಇದೀಗ ಅದೇ ಉದಯಗಿರಿಯಲ್ಲಿ ಮತ್ತೆ ಸಾರ್ವಜನಿಕವಾಗಿ ಲಾಂಗ್, ಮಚ್ಚುಗಳು ಝಳಪಿಸಿವೆ. ಮೈಸೂರಿನ ಅಬುಜರ್ ಮಸೀದಿ ಸಮೀಪದ ಪಾರ್ಕಿನಲ್ಲಿ ಉದಯಗಿರಿಯ ಶಕಿಬುಲ್ ರೆಹಮಾನ್ ಅಲಿಯಾಸ್ ಟಿಪ್ಪು, ಇಮ್ರಾನ್, ಆಸೀಫ್, ಅಜಾಂ, ಅಜೀಜ್ ಎಂಬವರ ನಡುವೆ ಕ್ರಿಕೆಟ್ ಆಟದ ವಿಚಾರವಾಗಿ ಮಾರಾಮಾರಿ ನಡೆದಿದ್ದು, ಲಾಂಗು ಮಚ್ಚುಗಳನ್ನು ಹಿಡಿದುಕೊಂಡು ಸಾರ್ವಜನಿಕವಾಗಿ ಓಡಾಡಿದ್ದಾರೆ. ಇದು ಸಾರ್ವಜನಿಕರಲ್ಲಿ ಭೀತಿಗೆ ಕಾರಣವಾಗಿದೆ. ಭಾನುವಾರ ನಡೆದ ಈ ಘಟನೆಯ ದೃಶ್ಯ ಮೊಬೈಲ್ ಕ್ಯಾಮರಾಗಳಲ್ಲಿ ಸರಿಯಾಗಿದೆ. ಘಟನೆ ಸಂಬಂಧ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Train Accident: ಸ್ಪೇನ್​ನಲ್ಲಿ ಎರಡು ಹೈಸ್ಪೀಡ್ ರೈಲುಗಳ ನಡುವೆ ಡಿಕ್ಕಿ, 21 ಮಂದಿ ಸಾವು – Kannada News | Train Tragedy in Southern Spain Claims Dozens of Lives

ಸ್ಪೇನ್, ಜನವರಿ 19: ಆಂಡಲೂಸಿಯಾದ ದಕ್ಷಿಣ ಪ್ರದೇಶದಲ್ಲಿ ಎರಡು ಹೈಸ್ಪೀಡ್ ರೈಲುಗಳ ನಡುವೆ ಡಿಕ್ಕಿ ಸಂಭವಿಸಿ 21 ಜನರು ಸಾವನ್ನಪ್ಪಿ, 70 ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ. ಭಾನುವಾರ ಸಂಜೆ ಮಲಗಾದಿಂದ ಮ್ಯಾಡ್ರಿಡ್‌ಗೆ ಪ್ರಯಾಣಿಸುತ್ತಿದ್ದ ರೈಲು ಅಡಾಮುಜ್ ಬಳಿ ಹಳಿತಪ್ಪಿ, ಇನ್ನೊಂದು ಹಳಿ ದಾಟಿ, ಮುಂದೆ ಬರುತ್ತಿದ್ದ ರೈಲಿಗೆ ಡಿಕ್ಕಿ ಹೊಡೆದ ಪರಿಣಾಮ ಆ ರೈಲು ಕೂಡ ಹಳಿತಪ್ಪಿತ್ತು.ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ.30 ಜನರ ಸ್ಥಿತಿ ಗಂಭೀರವಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಸಾರಿಗೆ ಸಚಿವ ಆಸ್ಕರ್ ಪುಯೆಂಟೆ ಸುದ್ದಿಗಾರರಿಗೆ ತಿಳಿಸಿದ್ದಾರೆ. ಆಂಡಲೂಸಿಯನ್ ನಗರಗಳಾದ ಕಾರ್ಡೋಬಾ, ಸೆವಿಲ್ಲೆ, ಮಲಗಾ ಮತ್ತು ಹುಯೆಲ್ವಾ ನಡುವಿನ ಹೈ-ಸ್ಪೀಡ್ ಸೇವೆಗಳನ್ನು ಕನಿಷ್ಠ ಸೋಮವಾರ ಪೂರ್ತಿ ಸ್ಥಗಿತಗೊಳಿಸಲಾಗುವುದು ಎಂದು ಅಡಿಫ್ ತಿಳಿಸಿದ್ದಾರೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

೩೭ ವರ್ಷಗಳ ಬಳಿಕ ಟೀಮ್ ಇಂಡಿಯಾದ ‘ಗರ್ವಭಂಗ’ – Kannada News | India lose an ODI series to New Zealand at home for the first time in 37 years

ಭಾರತ ಮತ್ತು ನ್ಯೂಝಿಲೆಂಡ್ ನಡುವಿನ ಸರಣಿ ಶುರುವಾಗಿದ್ದು 1988 ರಲ್ಲಿ. ಮೊದಲ ಸರಣಿಯಲ್ಲೇ ಟೀಮ್ ಇಂಡಿಯಾ ಕಿವೀಸ್ ಪಡೆಯನ್ನು 4-0 ಅಂತರದಿಂದ ಸೋಲಿಸಿದ್ದರು. ಇದಾದ ಬಳಿಕ ಭಾರತಕ್ಕೆ ಆಗಮಿಸಿದ ನ್ಯೂಝಿಲೆಂಡ್ 2-3 (1995) 2-3 (1999), 0-5 (2010), 2-3 (2016), 1-2 (2017), 0-3 (2023) ಅಂತರದಿಂದ ಸರಣಿಗಳನ್ನು ಸೋತಿದ್ದರು.

Source link

ಗಿಲ್ಲಿ ನಟನ ಬಿಗ್ ಬಾಸ್ ವಿನ್ನಿಂಗ್ ಮೂಮೆಂಟ್ ಹೇಗಿತ್ತು ನೋಡಿ – Kannada News | Gilli Nata Winning Moment video Goes viral After his hilarious victory In Bigg Boss Kannada

ಬಿಗ್ ಬಾಸ್ ಕನ್ನಡ ಸೀಸನ್ 12ರ ವಿನ್ನರ್ ಹೆಸರನ್ನು ಸುದೀಪ್ ಅವರು ಜನವರಿ 18ರಂದು ಅದ್ದೂರಿ ವೇದಿಕೆ ಮೇಲೆ ಘೋಷಣೆ ಮಾಡಿದರು ಮತ್ತು ಆ ಹೆಸರು ಗಿಲ್ಲಿ ಅವರದ್ದಾಗಿತ್ತು. ಇದು ಅವರ ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ ಎಂದೇ ಹೇಳಬಹುದು. ಗಿಲ್ಲಿಯ ವಿನ್ನಿಂಗ್ ಮೂಮೆಂಟ್ ತುಂಬಾನೇ ಸುಂದರಮಯವಾಗಿತ್ತು. ಕಿಚ್ಚ ಸುದೀಪ್ ವಿನ್ನರ್ ಘೋಷಣೆ ಮಾಡುತ್ತಿದ್ದಂತೆ ಗಿಲ್ಲಿ ಹಾಗೂ ಅವರ ಅಭಿಮಾನಿಗಳು ಖುಷಿಯಾದರು. ಗಿಲ್ಲಿಗೆ ಏನು ಹೇಳಬೇಕು ಎಂಬುದೇ ಗೊತ್ತಾಗಿಲ್ಲ. ಆ ಸಂದರ್ಭದ ವಿಡಿಯೋ ಇಲ್ಲಿದೆ ನೋಡಿ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಮಿರಾಕಲ್ ಆದ ರಕ್ಷಿತಾ ಜರ್ನಿ; ಮೊದಲ ದಿನ ಎಲಿಮಿನೇಷನ್, ಈಗ ರನ್ನರ್ ಅಪ್

Source link

ಸೋಲಿನ ನಡುವೆಯೂ ಯಾರಿಂದಲೂ ಸಾಧ್ಯವಾಗದ ವಿಶ್ವ ದಾಖಲೆ ಬರೆದ ವಿರಾಟ್ ಕೊಹ್ಲಿ – Kannada News | Virat kohli creates new world record with different venues century

ದಾಖಲೆಗಳ ಸರದಾರ ವಿರಾಟ್ ಕೊಹ್ಲಿ (Virat Kohli) ಹೆಸರಿಗೆ ಹೊಸ ವಿಶ್ವ ದಾಖಲೆ ಸೇರ್ಪಡೆಯಾಗಿದೆ. ಅದು ಕೂಡ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ (Sachin Tendulkar) ಅವರ ವರ್ಲ್​ ರೆಕಾರ್ಡ್ ಅನ್ನು ಅಳಿಸಿ ಹಾಕುವ ಮೂಲಕ ಎಂಬುದು ವಿಶೇಷ.

Source link

Daily Devotional: ಮನೆಯಲ್ಲಿ ಜೋಡಿ ಹಂಸಗಳ ಫೋಟೋ ಇದ್ರೆ ಶುಭವಾಗುತ್ತೆ! – Kannada News | Daily Devotional: The Auspicious Influence of Twin Swan Pictures in Your Home

ಬೆಂಗಳೂರು, ಜನವರಿ 19: ಮನೆಯಲ್ಲಿ ಶಾಂತಿ ಮತ್ತು ಸಕಾರಾತ್ಮಕ ವಾತಾವರಣವನ್ನು ನಿರ್ಮಿಸಲು ಅನೇಕ ಮಾರ್ಗಗಳಿವೆ. ಅವುಗಳಲ್ಲಿ ಒಂದು ವಿಶೇಷ ವಿಧಾನವೆಂದರೆ ಜೋಡಿ ಹಂಸಗಳ ಚಿತ್ರವನ್ನು ಮನೆಯಲ್ಲಿ ಇಡುವುದು. ಹಂಸಗಳನ್ನು ಲಕ್ಷ್ಮಿಯ ಸ್ವರೂಪವೆಂದು ಪರಿಗಣಿಸಲಾಗುತ್ತದೆ ಮತ್ತು ಅವು ಧನಾತ್ಮಕ ಶಕ್ತಿಯ ಸಂಕೇತವಾಗಿವೆ.

ವಾಸ್ತು ಶಾಸ್ತ್ರದ ಪ್ರಕಾರ, ಜೋಡಿ ಹಂಸಗಳ ಚಿತ್ರವನ್ನು ಮನೆಯ ಹಾಲ್‌ನಲ್ಲಿ, ಅಂದರೆ ಜನರು ಹೆಚ್ಚು ಓಡಾಡುವ ಜಾಗದಲ್ಲಿ ಪೂರ್ವ ಅಥವಾ ಉತ್ತರ ದಿಕ್ಕಿಗೆ ಮುಖಮಾಡಿ ಇಡುವುದು ಶುಭಕರ. ಇದು ಅರ್ಧಕ್ಕೆ ನಿಂತ ಕೆಲಸಗಳನ್ನು ಪೂರ್ಣಗೊಳಿಸಲು, ಮನೆಯಲ್ಲಿನ ಕಲಹಗಳನ್ನು ಕಡಿಮೆ ಮಾಡಲು ಮತ್ತು ಆರ್ಥಿಕ ಲಾಭವನ್ನು ತರಲು ಸಹಾಯ ಮಾಡುತ್ತದೆ. ಮಕ್ಕಳು ಓದುವ ಜಾಗದಲ್ಲಿ ಈ ಚಿತ್ರವನ್ನು ಇಡುವುದರಿಂದ ಅವರ ಮನಸ್ಸು ಸ್ಥಿರವಾಗಿ, ಏಕಾಗ್ರತೆ ಹೆಚ್ಚಿ ಆಲೋಚನಾ ಶಕ್ತಿ ವೃದ್ಧಿಯಾಗುತ್ತದೆ. ಇದು ನಕಾರಾತ್ಮಕ ಶಕ್ತಿಗಳನ್ನು ನಿವಾರಿಸಿ, ಮನೆಯ ಯಜಮಾನನಿಗೆ ಉದ್ಯೋಗದಲ್ಲಿ ನೆಮ್ಮದಿ ಹಾಗೂ ಗೃಹಿಣಿಗೆ ಆತ್ಮಶಕ್ತಿಯನ್ನು ಹೆಚ್ಚಿಸುತ್ತದೆ. ಈ ನಂಬಿಕೆಗಳು ಮಾನಸಿಕ ಶಾಂತಿ ಮತ್ತು ಧೈರ್ಯವನ್ನು ನೀಡುತ್ತವೆ ಎಂದು ಡಾ. ಬಸವರಾಜ ಗುರೂಜಿ ಹೇಳಿದ್ದಾರೆ.

 

 

 

Source link

Exit mobile version