ಬಣ್ಣ ಬಣ್ಣದ ಕೇಕ್ ತಿನ್ನೋ ಮುನ್ನ ಜೋಕೆ: ಯಾಮಾರಿದ್ರೆ ಬರಬಹುದು ಭೀಕರ ಕಾಯಿಲೆ! – Kannada News | Doctors have warned that artificial colors used in cakes can cause severe diseases
ಬೆಂಗಳೂರು, ಡಿಸೆಂಬರ್ 24: ಎಲ್ಲೆಡೆಯೂ ಕ್ರಿಸ್ಮಸ್ ಮತ್ತು ಹೊಸ ವರ್ಷದ ಸಂಭ್ರಮ ಮಾಡಿದೆ. ಇವುಗಳ ಆಚರಣೆ ವೇಳೆ ಕೇಕ್ ಕಟ್ ಮಾಡಿ ಸಂಭ್ರಮಿಸೋದು ಮಾಮೂಲು. ಹೀಗಾಗಿಯೇ ಬಗೆ ಬಗೆಯ ಕೇಕ್ಗಳು ಈಗಾಗಲೇ ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಈ ನಡುವೆ ವೈದ್ಯರು ನೀಡಿರೋ ಅಭಿಪ್ರಾಯ ಬೆಚ್ಚಿ ಬೀಳಿಸುವಂತಿದ್ದು, ನಾವು ತಿನ್ನುವ ರುಚಿ ರುಚಿಯಾದ ಕಲರ್ ಕಲರ್ ಕೇಕ್ಗಳು ಭೀಕರ ಕಾಯಿಲೆಗೆ ಕಾರಣವಾಗಬಹುದು ಎಂದಿದ್ದಾರೆ. ಕೇಕ್ ಅಂದ್ರೆ ದೊಡ್ಡವರಿಂದ ಹಿಡಿದು ಚಿಕ್ಕಮಕ್ಕಳಿಗೂ ಅಚ್ಚುಮೆಚ್ಚು. ಹುಟ್ಟುಹಬ್ಬ, ವಿವಾಹ ವಾರ್ಷಿಕೋತ್ಸವದಿಂದ ಹಿಡಿದು ಯಾವುದೇ…