ಬೆಂಗಳೂರು/ಚಿಕ್ಕಮಗಳೂರು, (ಏಪ್ರಿಲ್ 06): ಕೋಲಾರದ ಮಾಲೂರು ವಿಧಾನಸಭಾ ಕ್ಷೇತ್ರದ ಫಲಿತಾಂಶ ತಕರಾರು ಪ್ರಕರಣ ಸುಖಾಂತ್ಯ ಕಂಡಿದೆ. ಇದರ ಬೆನ್ನಲ್ಲೇ ಇದೀಗ ಶೃಂಗೇರಿ ವಿಧಾನಸಭಾ ಕ್ಷೇತ್ರದ (Sringeri Assembly constituency) ಕಾಂಗ್ರೆಸ್ ಶಾಸಕ ಟಿ.ಡಿ.ರಾಜೇಗೌಡ ಆಯ್ಕೆ ಅಸಿಂಧು ಕೋರಿ ಬಿಜೆಪಿ ಅಭ್ಯರ್ಥಿ ಡಿ.ಎನ್.ಜೀವರಾಜ್ ಅವರು ಸಲ್ಲಿಸಿದ್ದ ತಕರಾರು ಅರ್ಜಿ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್ (Karnataka High Court), 279 ಅಂಚೆ ಮತಪತ್ರಗಳನ್ನು 2 ವಾರದಲ್ಲಿ ಮರುಪರಿಶೀಲನೆ ಮಾಡಿ ಫಲಿತಾಂಶ ಪ್ರಕಟಿಸುವಂತೆ ಆದೇಶ ಹೊರಡಿಸಿದೆ. ಹೀಗಾಗಿ ಫಲಿತಾಂಶ ಏನಾಗಲಿದೆ ಎನ್ನುವ ಕುತೂಹಲ ಕೆರಳಿಸಿದೆ.
ಐಪಿಎಲ್ 2026 ರ ಸಂಭ್ರಮದ ನಡುವೆ , ಐಸಿಸಿ ಮಾರ್ಚ್ ತಿಂಗಳ ಆಟಗಾರ ಪ್ರಶಸ್ತಿಗೆ ನಾಮನಿರ್ದೇಶನಗೊಂಡ ಆಟಗಾರರ ಪಟ್ಟಿಯನ್ನು ಪ್ರಕಟಿಸಿದೆ. ಈ ಪಟ್ಟಿಯಲ್ಲಿ ಭಾರತದ ಜಸ್ಪ್ರೀತ್ ಬುಮ್ರಾ ಮತ್ತು ಸಂಜು ಸ್ಯಾಮ್ಸನ್ ಸ್ಥಾನ ಪಡೆದಿದ್ದು, ದಕ್ಷಿಣ ಆಫ್ರಿಕಾದ ವಿಕೆಟ್ ಕೀಪರ್-ಬ್ಯಾಟ್ಸ್ಮನ್ ಕಾನರ್ ಈಸ್ಟರ್ಹ್ಯೂಗೆನ್ ಕೂಡ ಈ ಪ್ರಶಸ್ತಿಗೆ ಮೂರನೇ ನಾಮನಿರ್ದೇಶಿತರಾಗಿದ್ದಾರೆ.
ಬುಮ್ರಾ ಮತ್ತು ಸ್ಯಾಮ್ಸನ್, 2026 ರ ಟಿ20 ವಿಶ್ವಕಪ್ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದರು. ಹೀಗಾಗಿ ಅವರ ಪ್ರದರ್ಶನದ ಆಧಾರದ ಮೇಲೆ ಮಾರ್ಚ್ ತಿಂಗಳ ಐಸಿಸಿ ತಿಂಗಳ ಆಟಗಾರ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿನ ಪ್ರದರ್ಶನದಿಂದಾಗಿ ದಕ್ಷಿಣ ಆಫ್ರಿಕಾದ ವಿಕೆಟ್ ಕೀಪರ್-ಬ್ಯಾಟ್ಸ್ಮನ್ ಅವರನ್ನು ನಾಮನಿರ್ದೇಶಿತರ ಪಟ್ಟಿಯಲ್ಲಿ ಸೇರಿಸಲಾಗಿದೆ.
2025 ರ ಟಿ20 ವಿಶ್ವಕಪ್ನಲ್ಲಿ ನೀಡಿದ ಅಮೋಘ ಪ್ರದರ್ಶನಕ್ಕೆ ಸಂಜು ಸ್ಯಾಮ್ಸನ್ ಟೂರ್ನಮೆಂಟ್ ಆಟಗಾರ ಪ್ರಶಸ್ತಿಯೂ ಲಭಿಸಿತ್ತು . ವೆಸ್ಟ್ ಇಂಡೀಸ್ ವಿರುದ್ಧದ ನಿರ್ಣಾಯಕ ಸೂಪರ್ 8 ಪಂದ್ಯದಲ್ಲಿ ಅವರು ಅಜೇಯ 97ರನ್, ನಂತರ ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್ನಲ್ಲಿ 89 ರನ್ ಆ ನಂತರ ನಡೆದ ಫೈನಲ್ನಲ್ಲಿಯೂ ಸಹ ಉತ್ತಮ ಪ್ರದರ್ಶನ ನೀಡಿದರು.
ಸಂಜು ಸ್ಯಾಮ್ಸನ್ ಈ ನಿರ್ಣಾಯಕ ಮೂರು ಪಂದ್ಯಗಳಲ್ಲಿ 199.27 ಸ್ಟ್ರೈಕ್ ರೇಟ್ನಲ್ಲಿ 275 ರನ್ ಕಲೆಹಾಕಿದ್ದರು. ಅಲ್ಲದೆ ಸತತ ಮೂರು ಪಂದ್ಯಗಳಲ್ಲೂ ಪಂದ್ಯ ಶ್ರೇಷ್ಠ ಪ್ರಶಸ್ತಿಗೂ ಭಾಜನರಾದರು. ಇದರ ಜೊತೆಗೆ ಐಸಿಸಿ ಟಿ20ಬ್ಯಾಟಿಂಗ್ ಶ್ರೇಯಾಂಕದಲ್ಲಿ ಅಗ್ರ 20 ರಲ್ಲಿ ಸ್ಥಾನ ಪಡೆದರು.
2026 ರ ಟಿ20ವಿಶ್ವಕಪ್ನಲ್ಲಿ ಜಸ್ಪ್ರೀತ್ ಬುಮ್ರಾ ಆಡಿದ 8 ಪಂದ್ಯಗಳಲ್ಲಿ 12.42 ರ ಸರಾಸರಿಯಲ್ಲಿ 14 ವಿಕೆಟ್ಗಳನ್ನು ಕಬಳಿಸಿದರು. 15 ರನ್ಗಳಿಗೆ 4 ವಿಕೆಟ್ಗಳನ್ನು ಕಬಳಿಸಿದ್ದು ಅವರ ಅತ್ಯುತ್ತಮ ಪ್ರದರ್ಶನವಾಗಿದ್ದರೆ, ಅವರ ಎಕಾನಮಿ 6.21 ಆಗಿತ್ತು. ನ್ಯೂಜಿಲೆಂಡ್ ವಿರುದ್ಧ 4 ಓವರ್ಗಳಲ್ಲಿ 15 ರನ್ಗಳನ್ನು ಬಿಟ್ಟುಕೊಟ್ಟಿದ್ದ ಬುಮ್ರಾಗೆ ಪಂದ್ಯಶ್ರೇಷ್ಠ ಪ್ರಶಸ್ತಿಯೂ ಲಭಿಸಿತ್ತು.
ಇನ್ನು ದಕ್ಷಿಣ ಆಫ್ರಿಕಾದ ವಿಕೆಟ್ ಕೀಪರ್-ಬ್ಯಾಟ್ಸ್ಮನ್ ಕಾನರ್ ಈಸ್ಟರ್ಹ್ಯೂಗೆನ್ ಇದುವರೆಗೆ ಕೇವಲ ಒಂದು ಟಿ20 ಸರಣಿಯನ್ನು ಮಾತ್ರ ಆಡಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಆ ಸರಣಿಯಲ್ಲಿ, ಅವರು ಅಡಿದ ಐದು ಪಂದ್ಯಗಳಲ್ಲಿ 145.98 ಸ್ಟ್ರೈಕ್ ರೇಟ್ನಲ್ಲಿ ಎರಡು ಅರ್ಧಶತಕಗಳು ಸೇರಿದಂತೆ 200 ರನ್ ಗಳಿಸಿದ್ದಾರೆ.
ಹುಬ್ಬಳ್ಳಿ, (ಏಪ್ರಿಲ್ 06): ಹುಬ್ಬಳ್ಳಿಯಲ್ಲಿ ಒಂದೊಂದೇ ಲವ್ ಜಿಹಾದ್ ಪ್ರಕರಣಗಳು (Hubballi Live Jihad Cases) ಬೆಳಕಿಗೆ ಬರುತ್ತಿವೆ. ಅದರಲ್ಲೂ ಜಿಮ್ ಟ್ರೈನರ್ಗಳು ಹಿಂದೂ ಯುವತಿಯರನ್ನ ಪುಸಲಾಯಿಸಿ ಲೈಂಗಿಕವಾಗಿ ಬಳಿಸಿಕೊಂಡು ಬಳಿಕ ಬ್ಲ್ಯಾಕ್ ಮೇಲ್ ಮಾಡುವ ಆರೋಪಗಳು ಕೇಳಿಬರುತ್ತಿವೆ. ಈ ಪೈಕಿ ಸಮೀರ್ ಎನ್ನುವ ಜಿಮ್ ಟ್ರೈನರ್, ಹಿಂದೂ ಯುವತಿಯರನ್ನೇ ಟಾರ್ಗೆಟ್ ಮಾಡಿ ಅವರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಎನ್ನುವ ಆರೋಪವಿದ್ದು, ಈ ಸಂಬಂಧ ಈಗಾಗಲೇ ಇಬ್ಬರು ಯುವತಿಯರು ಸಮೀರ್ ಮುಲ್ಲಾನ ವಿರುದ್ಧ ದೂರು ದಾಖಲಿಸಿದ್ದಾರೆ. ಇದರ ನಡುವೆ ಇದೀಗ ಸಮೀರ್ ಮುಲ್ಲಾನ ವಿರುದ್ಧದ ಲವ್ ಜಿಹಾದ್ ಪ್ರಕರಣಕ್ಕೆ ನೇಹಾ ಹಿರೇಮಠ ಕೊಲೆ (Neha Hiremath Murder Case) ಲಿಂಕ್ ಇದೆ ಎನ್ನುವ ಆರೋಪ ಕೇಳಿಬಂದಿದೆ. ಈ ಬಗ್ಗೆ ಸ್ವತಃ ನೇಹಾ ತಂದೆ ನಿರಂಜನ್ ಹಿರೇಮಠ ಸ್ಫೋಟಕ ವಿಚಾರಗಳನ್ನು ಬಹಿರಂಗಪಡಿಸಿದ್ದಾರೆ.
ನೇಹಾ ಹಿರೇಮಠ ತಂದೆ ನಿರಂಜನ ಹಿರೇಮಠ ಅವರಯ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದು, ನನ್ನ ಮಗಳ ಹತ್ಯೆಯಲ್ಲೂ ಈ ಸಮೀರ್ ಹಾಗೂ ಅತನ ಸಹೋದರಿ, ತಂದೆಯ ಕೈವಾಡ ಇರಬಹುದು ಎಂಬ ಸಂಶಯ ಬರುತ್ತಿದೆ. ಯಾಕಂದ್ರೆ, ನೇಹಾ ಹಿರೇಮಠ ಹಂತಕ ಫಯಾಜ್ ಇದೇ ಸಮಿರರ ಜಿಮ್ ಗೆ ಹೋಗುತ್ತಿದ್ದ. ಹೀಗಾಗಿ ಅದೇ ಜಿಮ್‌ನಲ್ಲಿ ಹಂತಕ ಫಯಾಜ್ ಗೆ ತರಬೇತಿ ನೀಡಲಾಗಿದೆ ಎಂದು ಆರೋಪಿಸಿದ್ದಾರೆ.
ನೇಹಾ ಹತ್ಯೆಗೂ ಮುನ್ನ ತಂದೆ ನಿರಂಜನ ಹಿರೇಮಠಗೆ ಖೆಡ್ಡ ತೋಡಲುಸಮೀರ್ ಮುಲ್ಲಾನ ಕುಟುಂಬ ಮುಂದಾಗಿತ್ತಾ ಎನ್ನುವ ಅನುಮಾನ ವ್ಯಕ್ತಪಡಿಸಿದ್ದಾರೆ. ಸಮೀರ್ ತಂದೆ ಆಗಾಗ ಕಾಲ್ ಮಾಡುತ್ತಿದ್ದರು. ನಿಮ್ಮ ಏರಿಯಾದಲ್ಲಿ ಬಾಡಿ ಬಿಲ್ಡಿಂಗ್ ಸ್ಪರ್ಧೆ ಏರ್ಪಡಿಸೋಣ, ಅರ್ಥಿಕ ನೆರವು ನೀಡುವಂತೆ ಒತ್ತಾಯಿಸುತ್ತಿದ್ದುರು. ಅಲ್ಲದೇ ಆಗಾಗ್ಗೆ ತಮ್ಮ ಮನೆಗೆ ಬರುವಂತೆ ಆಹ್ವಾನಿಸುತ್ತಿದ್ದರು. ನಾನು ಎಷ್ಟೇ ಕರೆದರು ಹೋಗಲಿಲ್ಲ. ಹೋಗಿದ್ರು ಟ್ರ್ಯಾಪ್ ಮಾಡುವ ಪ್ಲಾನ್ ಇದ್ದಿರಬಹುದು ಎಂದು ಸಂಶಯ ಇತ್ತು. ಹೀಗಾಗಿ ಹೋಗಿರಲಿಲ್ಲ ಎಂದಿದ್ದಾರೆ.
ಫಯಾಜ್ – ನೇಹಾ ಹಿರೇಮಠ 2020 ರಲ್ಲಿ ಹುಬ್ಬಳ್ಳಿಯ ಕಾಲೇಜೊಂದರಲ್ಲಿ ಬಿಸಿಎ ಓದುವಾಗ ಸಹಪಾಠಿಗಳಾಗಿದ್ದರು. ಇವರಿಬ್ಬರೂ ಮೊದಲು ಪರಸ್ಪರ ಸ್ನೇಹಿತರಾಗಿದ್ದು, 2022 ರಲ್ಲಿ ಇಬ್ಬರು ಪ್ರೀತಿಸುತ್ತಿದ್ದರು. ಆದ್ರೆ, ಇಬ್ಬರ ನಡುವೆ ಅದೇನಾಯ್ತೋ ಏನೋ 2024 ರ ಮಾರ್ಚ್ ತಿಂಗಳಲ್ಲಿ ಅವರಿಬ್ಬರ ನಡುವೆ ಮನಸ್ತಾಪ ಉಂಟಾಗಿತ್ತು. ಹೀಗಾಗಿ ನೇಹಾ, ಫಯಾಜ್‌ನ ಜತೆ ಮಾತು ನಿಲ್ಲಿಸಿ ಅವನ ಸಂಪರ್ಕದಿಂದ ದೂರವಾಗಿದ್ದಳು. ಈ ಸಿಟ್ಟಿನಲ್ಲಿ ಆಕೆಯನ್ನು ಕೊಲೆ ಮಾಡಿದ್ದ.
ನವದೆಹಲಿ, ಏಪ್ರಿಲ್ 6: ದೇಶದ ಬೆಳವಣಿಗೆಗೆ ಬೇಕಾದ ಇನ್ಫ್ರಾಸ್ಟ್ರಕ್ಚರ್ನಲ್ಲಿ ರಸ್ತೆ ಸೌಕರ್ಯವೂ ಪ್ರಮುಖವಾದುದು. ಅದರಲ್ಲೂ ದೂರದೂರುಗಳನ್ನು ನಗರಗಳನ್ನು ಸಂಪರ್ಕಿಸುವ ಹೆದ್ದಾರಿ ಉತ್ತಮವಾಗಿರುವುದು ಮುಖ್ಯ. ಇತ್ತೀಚೆಗೆ ಸರ್ಕಾರ ನಿರ್ಮಿಸುತ್ತಿರುವ ಎಕ್ಸ್ಪ್ರೆಸ್ವೇಗಳು ಪ್ರಯಾಣದ ಅವಧಿಯನ್ನು ಗಣನೀಯವಾಗಿ ಕಡಿಮೆ ಮಾಡಲು ಶಕ್ಯಗೊಂಡಿವೆ. ಬೆಂಗಳೂರಿನ ಮೈಸೂರಿಗೆ ಒಂದೆರಡು ಗಂಟೆಯಲ್ಲೇ ಕಾರಿನಲ್ಲಿ ಹೋಗಬಹುದು. ಇದೀಗ ಪುಣೆ ಮತ್ತು ಬೆಂಗಳೂರು ನಡುವೆ ಎಕ್ಸ್ಪ್ರೆಸ್ವೇ (Pune-Bengaluru Expressway) ನಿರ್ಮಿಸುವ ಯೋಜನೆ ಹಾಕಲಾಗಿದೆ.
700ರಿಂದ 745 ಕಿಮೀ ಉದ್ದದ ಪುಣೆ-ಬೆಂಗಳೂರು ಗ್ರೀನ್ಫೀಲ್ಡ್ ಎಕ್ಸ್ಪ್ರೆಸ್ವೇ ಅನ್ನು 40,000 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸುವ ಯೋಜನೆಯ ಪ್ರಸ್ತಾಪ ಸರ್ಕಾರದ ಬಳಿ ಇದೆ. ಸದ್ಯ ಬೆಂಗಳೂರಿನಿಂದ ಮುಂಬೈಗೆ ರಸ್ತೆ ಮೂಲಕ ಹೋಗಲು ಕನಿಷ್ಠ 12 ಗಂಟೆಯಾದರೂ ಬೇಕಾಗುತ್ತದೆ. ಎಕ್ಸ್ಪ್ರೆಸ್ವೇ ನಿರ್ಮಾಣವಾದ ಬಳಿಕ ಪ್ರಯಾಣದ ಅವಧಿ 5.5 ಗಂಟೆಗೆ ಇಳಿಯುತ್ತದೆ. ಕರ್ನಾಟಕ ಮತ್ತು ಮಹಾರಾಷ್ಟ್ರದ 12 ಜಿಲ್ಲೆಗಳಾದ್ಯಂತ ಹೋಗುವ ಈ ಎಕ್ಸ್ಪ್ರೆಸ್ವೇ ಮೂಲಕ ಕೇವಲ ಐದೂವರೆ ಗಂಟೆಗೆ ಬೆಂಗಳೂರಿಂದ ಮುಂಬೈ ತಲುಪಬಹುದು.
ಅಷ್ಟಪಥ ಹೆದ್ದಾರಿ ಇದಾಗಿದ್ದು, ಎಲ್ಲಿಯೂ ಟ್ರಾಫಿಕ್ ನಿಲ್ಲದಂತೆ ಬೈಪಾಸ್ಗಳನ್ನು ನಿರ್ಮಿಸಲಾಗುತ್ತದೆ. ಈ ರಸ್ತೆಯಲ್ಲಿ ಗಂಟೆಗೆ 120 ಕಿಮೀ ವೇಗದಲ್ಲಿ ಹೋಗಲು ಅವಕಾಶ ಇರುತ್ತದೆ. ಪುಣೆಯಿಂದ ಆರಂಭವಾಗಿ ಮಹಾರಾಷ್ಟ್ರದ ಸತಾರಾ, ಸಾಂಗ್ಲಿ ಜಿಲ್ಲೆಗಳನ್ನು ದಾಟಿ, ಬೆಳಗಾವಿ, ಬಾಗಲಕೋಟೆ, ಗದಗ, ಕೊಪ್ಪಳ, ವಿಜಯನಗರ, ದಾವಣಗೆರೆ, ಚಿತ್ರದುರ್ಗ, ತುಮಕೂರು, ಬೆಂಗಳೂರು ಗ್ರಾಮಾಂತರ ಹೀಗೆ ಮಾರ್ಗದ ಪ್ರಸ್ತಾಪ ಇದೆ.
ಈ ಎಕ್ಸ್ಪ್ರೆಸ್ವೇ ನಿರ್ಮಾಣ ಕಾರ್ಯ ಶೀಘ್ರದಲ್ಲೇ ಆರಂಭವಾಗುವ ಸಾಧ್ಯತೆ ಇದ್ದು, 2028ಕ್ಕೆ ಮುಗಿಯುವ ನಿರೀಕ್ಷೆ ಇದೆ.
ವಿಮಾನ ಸಂಚಾರವೇ ಬಂದ್ ಆಗ್ತಿದೆ: ನಿತಿನ್ ಗಡ್ಕರಿ ತಮಾಷೆ
ಎಕ್ಸ್ಪ್ರೆಸ್ವೇ ನಿರ್ಮಾಣ ಮಾಡಿದ ಮಾರ್ಗದಲ್ಲಿ ವಿಮಾನ ಸಂಚಾರವೇ ನಿಲ್ಲಿಸಲಾಗಿದೆ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ಬ್ಯುಸಿನೆಸ್ ಟುಡೇ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡುತ್ತಿದ್ದ ಅವರು ಬೆಂಗಳೂರು ಪುಣೆ ಎಕ್ಸ್ಪ್ರೆಸ್ವೇ ವಿಚಾರ ಮಾತನಾಡುತ್ತಾ ಆ ಮಾತುಗಳನ್ನಾಡಿದರು.
ನಿತಿನ್ ಗಡ್ಕರಿ ಮಾತನಾಡಿರುವ ವಿಡಿಯೋ
Pune-Bengaluru expressway plan to pass through 12 districts.
This will cut travel time from ~18 hours to just 5.5 hours between Mumbai & Bengaluru as envisioned by Union Minister Nitin Gadkari.
ಮುಂಬೈ ಮತ್ತು ಪುಣೆ ಮಧ್ಯೆ ಜೆಟ್ ಏರ್ವೇಸ್ನ ಎಂಟು ಫ್ಲೈಟ್ಗಳಿದ್ದವು. ಹೆದ್ದಾರಿ ಆದ ಬಳಿಕ ಎಲ್ಲಾ ಬಂದ್ ಆದವು. ಮುಂಬೈ ಪುಣೆ ಮಧ್ಯೆ ಜನರು ಫ್ಲೈಟ್ನಲ್ಲಿ ಹೋಗೋದಿಲ್ಲ. ಡಿಸಂಬರ್ನಲ್ಲಿ ದಿಲ್ಲಿಯಿಂದ ಡೆಹ್ರಾಡೂನ್ಗೆ ಫ್ಲೈಟ್ ಬಂದ್ ಆಗಿ ಹೋಗುತ್ತೆ. ದಿಲ್ಲಿಯಿಂದ ಜೈಪುರ್ ಫ್ಲೈಟ್ ಬಂದ್ ಆಗುತ್ತೆ ಎಂದು ಗಡ್ಕರಿ ತಮಾಷೆ ಮಾಡಿದರು.
ಅನೇಕ ಹಿರಿಯ ಕಲಾವಿದರು ಅಭಿನಯಿಸುತ್ತಿರುವ ‘ಕ್ಲಾಸ್ ಆಫ್ ಮೈಸೂರು’ (Class of Mysore) ಸಿನಿಮಾದ ಮೇಲೆ ಸಿನಿಪ್ರಿಯರಿಗೆ ಒಂದು ನಿರೀಕ್ಷೆ ಇದೆ. ಈ ಚಿತ್ರದ ಪಾತ್ರವರ್ಗ ಮತ್ತು ಶೀರ್ಷಿಕೆ ಗಮನ ಸೆಳೆದಿದೆ. ರಂಗಾಯಣ ರಘು, ದತ್ತಣ್ಣ (Dattanna), ಶರತ್ ಲೋಹಿತಾಶ್ವ ಮುಂತಾದ ಹಿರಿಯ ನಟರು ಈ ಸಿನಿಮಾದ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ಬಿರುಸಿನ ಚಿತ್ರೀಕರಣ ನಡೆಯುತ್ತಿದೆ. ಈಗಾಗಲೇ ಮೊದಲ ಹಂತದ ಶೂಟಿಂಗ್ ಪೂರ್ಣಗೊಂಡಿವೆ. ಆ ಬಗ್ಗೆ ‘ಕ್ಲಾಸ್ ಆಫ್ ಮೈಸೂರು’ ಸಿನಿಮಾ ತಂಡ ಮಾಹಿತಿ ಹಂಚಿಕೊಂಡಿದೆ.
ಒಂದಷ್ಟು ಕಾರಣಗಳಿಂದ ನಿರೀಕ್ಷೆ ಹುಟ್ಟಿಸಿರುವ ‘ಕ್ಲಾಸ್ ಆಫ್ ಮೈಸೂರು’ ಚಿತ್ರಕ್ಕೆ ಗೋವಾ ಹಾಗೂ ಗೋಕರ್ಣದ ಸುಂದರ ಲೊಕೇಷನ್ಗಳಲ್ಲಿ ಮೊದಲ ಹಂತದ ಚಿತ್ರೀಕರಣವನ್ನು ಯಶಸ್ವಿಯಾಗಿ ಮಾಡಲಾಗಿದೆ. ರಂಗಾಯಣ ರಘು, ಶರತ್ ಲೋಹಿತಾಶ್ವ, ದತ್ತಣ್ಣ, ಮಹಾಂತೇಶ್, ತಬಲನಾಣಿ, ವೈಜನಾಥ್ ಬಿರಾದಾರ್ ಮುಂತಾದವರು ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ.
‘ಕ್ಲಾಸ್ ಆಫ್ ಮೈಸೂರು’ ಚಿತ್ರವು ಹಾಸ್ಯ ಭರಿತ ಕಥೆಯನ್ನು ಹೊಂದಿರಲಿದೆ. ಅದರ ಜೊತೆಗೆ ಸಂಸ್ಕೃತಿ ಮತ್ತು ಭಾವನೆಗಳನ್ನು ಒಟ್ಟುಗೂಡಿಸಿದ ಕಥೆ ಇದೆ ಎಂದು ಚಿತ್ರತಂಡ ಹೇಳಿದೆ. ಹಿರಿಯ ನಾಗರಿಕರ ಕುರಿತ ಕಥಾವಸ್ತು ಇರುವ ಸಿನಿಮಾ ಆದ್ದರಿಂದ ಇದು ಡಿಫರೆಂಟ್ ಎನಿಸಿಕೊಂಡಿದೆ. ಸೆಟ್ಟೇರಿದ ದಿನದಿಂದಲೂ ಈ ಸಿನಿಮಾ ಗಮನ ಸೆಳೆಯುತ್ತಿದೆ.
ಈ ಸಿನಿಮಾದ ಪಾತ್ರವರ್ಗದಲ್ಲಿ ಹಿರಿಯ ನಟಿ ತಾರಾ ಅನುರಾಧಾ ಕೂಡ ಇದ್ದಾರೆ. ಅಲ್ಲದೇ ಹಿರಿಯ ಹಾಗೂ ಅನುಭವಿ ಕಲಾವಿದರ ಸಮಾಗಮ ಆಗಿದೆ. ಸಹ ನಿರ್ಮಾಪಕರೂ ಆಗಿರುವ ವಿಜಯೇಂದ್ರ ಸೂರ್ಯವಂಶಿ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಜೋ ಕೋಸ್ಟಾ ಅವರ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ. ಎಸ್.ಕೆ. ರಾವ್ ಅವರು ಛಾಯಾಗ್ರಹಣ ಮಾಡಿದ್ದಾರೆ.
ನಾಗಾರ್ಜುನ ಶರ್ಮ ಅವರು ಸಾಹಿತ್ಯ ಬರೆದಿದ್ದಾರೆ. ಮಾಸ್ತಿ ಅವರ ಸಂಭಾಷಣೆ, ಉಲ್ಲಾಸ್ ಹೈದರ್ ಅವರ ಕಲಾ ನಿರ್ದೇಶನ ಈ ಚಿತ್ರಕ್ಕಿದೆ. ಎರಡನೇ ಹಂತದ ಚಿತ್ರೀಕರಣವನ್ನು ಶೀಘ್ರದಲ್ಲೇ ಆರಂಭಿಸಲು ಚಿತ್ರತಂಡ ಪ್ಲ್ಯಾನ್ ಮಾಡಿಕೊಂಡಿದೆ. ಗೌತಮ್ ಬಸವರಾಜು ಅವರು ಈ ಸಿನಿಮಾದ ನಿರ್ದೇಶನ ಮತ್ತು ನಿರ್ಮಾಣದ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ. ‘ಮಾಕ್ಟ್ ಎಂಟರ್‌ಟೈನ್‌ಮೆಂಟ್ಸ್’ ಬ್ಯಾನರ್ ಮೂಲಕ ಈ ಸಿನಿಮಾ ತಯಾರಾಗುತ್ತಿದೆ.
ಆನೇಕಲ್, ಏಪ್ರಿಲ್ 06: ಕಾರು ಖರೀದಿ ವಿಚಾರವಾಗಿ ಬಾಮೈದನಿಂದ ಭಾವನನ್ನು ಕೊಲೆ (murder) ಮಾಡಿರುವಂತಹ ಘಟನೆ ಆಂಧ್ರದ ಇಂದೂಪುರ ಪೊಲೀಸ್ ಠಾಣವ್ಯಾಪ್ತಿಯ ಮೇಳ್ಯ ಬಳಿ ನಡೆದಿದೆ. ವಿನಯ್ ಕುಮಾರ್ (37) ಕೊಲೆಯಾದ ವ್ಯಕ್ತಿ. ಬಾಮೈದ ರಾಜು ಮತ್ತು ಅವನ ಗ್ಯಾಂಗ್ನಿಂದ ಕೊಲೆ ಮಾಡಲಾಗಿದ್ದು, ರಾಜು, ವೇಣು, ಶ್ರೇಯಸ್ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ. ಇಂದೂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಡೆದಿದ್ದೇನು?
ಬೆಂಗಳೂರು ಉತ್ತರ ತಾಲೂಕಿ ಚಿಕ್ಕಬಾಣಾವರದ ನಿವಾಸಿಗಳಾದ ರಂಗಶಾಮಪ್ಪ ಮತ್ತು ಸೌಭಾಗ್ಯಮ್ಮ ದಂಪತಿಯ ಮೂರನೇ ಮಗ ವಿನಯ್ ಕುಮಾರ್, ಕಳೆದ 10 ತಿಂಗಳ ಹಿಂದೆ ಕುಟುಂಬಸ್ತರೇ ನೋಡಿ ಮೇಘನಾ ಎಂಬುವವರೊಂದಿಗೆ ಮದುವೆ ಮಾಡಿದ್ದರು. ಮದುವೆ ಬಳಿಕ ಇಬ್ಬರ ನಡುವೆ ಜಗಳ ಶುರುವಾಗಿದೆ.
ಕೊಲೆ ಮಾಡಿದ ಬೈಕ್ ಸಮೇತ ಕಾಲುವೆಗೆ ಎಸೆದ ದುಷ್ಟರು
ಕಳೆದ 15 ದಿನಗಳಿಂದ ಕಾರು ಖರೀದಿ ವಿಚಾರವಾಗಿ ಮೇಘನಾ ಹಾಗೂ ವಿನಯ್ ನಡುವೆ ಗಲಾಟೆ ಶುರುವಾಗಿತ್ತು. ಕಾರು ಖರೀದಿಗೆ ನನ್ನ ಅಣ್ಣ ರಾಜು ಹಣ ಕೊಡುತ್ತಾನೆ ತೆಗೆದುಕೊಂಡು ಬಾ ಎಂದು ಮೇಘನಾ ಹೇಳಿದ್ದಾರೆ. ಈ ಹಿನ್ನೆಲೆ ಶನಿವಾರ ರಾತ್ರಿ 9ಗಂಟೆಗೆ ಆಂಧ್ರದ ಮೇಳ್ಯ ಬಳಿ ವಿನಯ್ ಹೋಗಿದ್ದಾರೆ. ಈ ವೇಳೆ ಹಣಕಾಸಿನ ವಿಚಾರವಾಗಿ ಬಾಮೈದ ರಾಜು ಮತ್ತು ಅವನ ಗ್ಯಾಂಗ್ನಿಂದ ವಿನಯ್ ತಲೆಗೆ ಹಲ್ಲೆ ಮಾಡಿ ಕೊಲೆ ಮಾಡಿದ್ದಾರೆ. ಆತನನ್ನು ಸೇರಿ ಬೈಕ್ ಸಮೇತ ಕಾಲುವೆಗೆ ಎಸೆದಿದ್ದಾರೆ.
ಇನ್ನು ಬೈಕ್ ಜಿಪಿಆರ್ಎಸ್ನಲ್ಲಿ ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಇತ್ತ ಬೆಳಿಗ್ಗೆ ವಿನಯ್ ಪೊಷಕರಿಗೆ ಮಾಹಿತಿ ನಿಡಲಾಗಿದೆ. ಸದ್ಯ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿದ್ದು, ನಂತರ ಕುಟುಂಬಸ್ತರಿಗೆ ಹಸ್ತಾಂತರ ಮಾಡಲಿದ್ದಾರೆ. ವಿನಯ್ ಹುಟ್ಟೂರು ಅಪ್ಪೆ ಹಳ್ಳಿ ಅನಂತಪುರ ಜಿಲ್ಲೆಯಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ.
ಇತ್ತೀಚೆಗೆ ಸೋಶಿಯಲ್ ಮೀಡಿಯಾದ ಬಳಕೆ ಮಿತಿಮೀರಿ ಹೆಚ್ಚಿದೆ. ಯಾವುದು ಸುಳ್ಳು-ಯಾವುದು ನಿಜ? ಯಾವುದು ಎಐ-ಯಾವುದು ನಿಜವಾಗಲೂ ನಡೆದ ಘಟನೆ ಎಂಬುದನ್ನು ಪತ್ತೆ ಹಚ್ಚಲು ಅಸಾಧ್ಯ ಎಂಬ ರೀತಿಯ ಪರಿಸ್ಥಿತಿ ನಿರ್ಮಾಣ ಆಗಿದೆ. ಈ ಮಧ್ಯೆ ಸೆಲೆಬ್ರಿಟಿಗಳ ಹೆಸರನ್ನು ಬಳಕೆ ಮಾಡಿಕೊಂಡು ಅನೇಕರು ಅಪಪ್ರಚಾರ ಮಾಡುವ ಕೆಲಸ ಮಾಡುತ್ತಿದ್ದಾರೆ. ಅವರ ಬಗ್ಗೆ ಇಲ್ಲ, ಸಲ್ಲದ್ದನ್ನು ಹೇಳಲಾಗುತ್ತದೆ. ಈಗ ನಟಿ ಸುಧಾರಾಣಿ (Sudharani) ಕೂಡ ಈ ರೀತಿಯ ಫೇಕ್ ನ್ಯೂಸ್ನ ಸಂತ್ರಸ್ತೆ ಆಗಿದ್ದಾರೆ. ಅವರು ಇದಕ್ಕೆ ಖಡಕ್ ಆಗಿ ಪ್ರತಿಕ್ರಿಯೆ ನೀಡಿದ್ದಾರೆ.
ಇತ್ತೀಚೆಗೆ ಕೆಲ ಯೂಟ್ಯೂಬರ್ಗಳು ವೀವ್ಸ್ ಪಡೆಯಲು ಹೊಸ ತಂತ್ರವೊಂದನ್ನು ಕಂಡುಹಿಡಿದ್ದಾರೆ. ಸೆಲೆಬ್ರಿಟಿಗಳು ಹೇಳದೇ ಇರುವ ವಿಷಯವನ್ನು, ‘ಇತ್ತೀಚೆಗೆ ಅವರು ಸಂದರ್ಶನದಲ್ಲಿ ಹೇಳಿದ್ದಾರೆ’ ಎಂದು ಸೇರಿಸಿ ಸೃಷ್ಟಿಸುತ್ತಿದ್ದಾರೆ. ಇದರಿಂದ ಯೂಟ್ಯೂಬರ್ಗಳಿಗೆ ವೀವ್ಸ್ ಆಗುತ್ತಿದೆ ನಿಜ. ಆದರೆ, ಸೆಲೆಬ್ರಿಟಿಗಳ ಹೆಸರು ಹಾಳಾಗುತ್ತಿದೆ. ಸುಧಾರಾಣಿ ಬಗ್ಗೆಯೂ ಇದೇ ರೀತಿ ಸುಳ್ಳು ಸುದ್ದಿ ಹಬ್ಬಿಸಲಾಗಿದೆ.
ಸುದ್ದಿಯಲ್ಲೇನಿತ್ತು?
ಯೂಟ್ಯೂಬ್ ಥಂಬ್ನೇಲ್ ಮಾದರಿಯ ಸ್ಕ್ರೀನ್ಶಾಟ್ ಅನ್ನು ಸುಧಾರಾಣಿ ಹಂಚಿಕೊಂಡಿದ್ದಾರೆ. ‘ಶಿವಣ್ಣನನ್ನು ಮದುವೆಯಾಗಬೇಕೆಂದು ಆಸೆ ಪಟ್ಟಿದ್ದರು ಸುಧಾರಾಣಿ. ಆನಂದ್ ಸಿನಿಮಾ ಚಿತ್ರೀಕರಣದ ಸಮಯದಲ್ಲಿ ನಟಿ ಸುಧಾರಾಣಿ ಅವರಿಗೆ ಶಿವರಾಜ್ ಕುವಾರ್ ಕಂಡರೆ ಭಯವಿತ್ತು. ನಂತರ ಅವರ ಮೇಲೆ ಪ್ರೀತಿ ಹುಟ್ಟಿತು ಮತ್ತು ಮದುವೆಯಾಗುವ ಆಸೆಯೂ ಇತ್ತು. ಆದರೆ ಡಾ. ರಾಜ್‌ಕುಮಾರ್ ಅವರ ಮಗ ಎಂಬ ಕಾರಣದಿಂದ ಅವರು ಇದನ್ನು ಯಾರಿಗೂ ಹೇಳದೆ ಸುಮ್ಮನಾಗಿದ್ದರು. ಈ ವಿಷಯವನ್ನು ಅವರು ಇತ್ತೀಚಿನನ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ’ ಎಂದು ಬರೆಯಲಾಗಿದೆ.
ಸುಧಾರಾಣಿ ಅವರು ಇದಕ್ಕೆ ಉತ್ತರ ಕೊಟ್ಟಿದ್ದಾರೆ. ತಾವು ಮನೆಯಲ್ಲಿ ಸಾಕಿದ ಶ್ವಾನಗಳು ಈ ವಿಷಯಕ್ಕೆ ಸ್ಪಷ್ಟನೆ ಕೊಡುವ ರೀತಿಯಲ್ಲಿ ಅವರು ವಿಡಿಯೋ ಮಾಡಿದ್ದಾರೆ. ಇದು ಫೇಕ್ ನ್ಯೂಸ್ ಎಂದಿದ್ದಾರೆ. ಅಲ್ಲದೆ, ಈ ರೀತಿಯ ವಿಡಿಯೋ ಮಾಡಿದರೆ ಕೇಸ್ ದಾಖಲಿಸುವ ಎಚ್ಚರಿಕೆಯನ್ನೂ ನೀಡಲಾಗಿದೆ. ಕಂಡ ಕಂಡವರೆಲ್ಲ ವಿಡಿಯೋ ಮಾಡೋಕೆ ಆರಂಭಿಸಿದರೆ ಈ ರೀತಿ ಆಗುತ್ತದೆ ಎಂದು ಕೂಡ ಸುಧಾರಾಣಿ ಹೇಳಿದ್ದಾರೆ.
ಬಾಗಲಕೋಟೆ, ಏ.6: ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಪರ ಭರ್ಜರಿ ಪ್ರಚಾರ ನಡೆಸಿದ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಸರ್ಕಾರದ ಗ್ಯಾರಂಟಿ ಯೋಜನೆಗಳು ಭವಿಷ್ಯದ ಪೀಳಿಗೆಗೆ ಸಾಲದ ಹೊರೆ ಹೆಚ್ಚಿಸುತ್ತವೆ ಎಂದು ಅವರು ಎಚ್ಚರಿಸಿದರು. ಪ್ರಸ್ತುತ ಸರ್ಕಾರವು 8.17 ಲಕ್ಷ ಕೋಟಿ ರೂಪಾಯಿ ಸಾಲ ಮಾಡಿದೆ ಎಂದು ಕುಮಾರಸ್ವಾಮಿ ಆರೋಪಿಸಿದರು. ಕುಟುಂಬ ರಾಜಕಾರಣದ ಬಗ್ಗೆ ಸಿದ್ದರಾಮಯ್ಯನವರನ್ನು ಟೀಕಿಸಿದ ಕುಮಾರಸ್ವಾಮಿ, ಅವರ ಪುತ್ರನನ್ನು ರಾಜಕೀಯಕ್ಕೆ ತಂದಿರುವುದನ್ನು ಪ್ರಶ್ನಿಸಿದರು. ಅಹಿಂದ ಸಮುದಾಯದ ಹೆಸರನ್ನು ಅಧಿಕಾರಕ್ಕಾಗಿ ಬಳಸಿಕೊಳ್ಳಲಾಗುತ್ತಿದೆ. ಇತ್ತೀಚೆಗೆ ಬೆಳಕಿಗೆ ಬಂದ ವಾಲ್ಮೀಕಿ ಅಭಿವೃದ್ಧಿ ನಿಗಮದ 87 ಕೋಟಿ ರೂಪಾಯಿ ಹಗರಣ ಮಾಡಿದ್ದಾರೆ ಎಂದು ಹೇಳಿದರು. ವೀರಣ್ಣ ಚರಂತಿಮಠ ಅವರನ್ನು ಶಿಕ್ಷಣ ತಜ್ಞ ಎಂದು ಶ್ಲಾಘಿಸಿದ ಕುಮಾರಸ್ವಾಮಿ, ಅವರು ಈ ಭಾಗದ ಅನೇಕ ಕುಟುಂಬಗಳ ಮಕ್ಕಳಿಗೆ ವಿದ್ಯೆ ನೀಡಿ ಬದುಕಿಗೆ ದಾರಿ ತೋರಿದ್ದಾರೆ ಎಂದರು. ರಾಜ್ಯದ ಗೌರವವನ್ನು ಉಳಿಸಲು ಮತ್ತು ಉತ್ತಮ ಆಡಳಿತಕ್ಕಾಗಿ ಚರಂತಿಮಠ ಅವರನ್ನು ಆಯ್ಕೆ ಮಾಡುವಂತೆ ಬಾಗಲಕೋಟೆ ಮತದಾರರಲ್ಲಿ ಕುಮಾರಸ್ವಾಮಿ ಮನವಿ ಮಾಡಿದರು.
ಟೆಹ್ರಾನ್, ಏಪ್ರಿಲ್ 06: ಅಮೆರಿಕ ಮತ್ತು ಇಸ್ರೇಲ್ ಮತ್ತು ಇರಾನ್(Iran) ನಡುವೆ ನಡೆಯುತ್ತಿರುವ ಸಂಘರ್ಷ ಈಗ 37 ನೇ ದಿನವನ್ನು ತಲುಪಿದೆ ಮತ್ತು ಮಧ್ಯಪ್ರಾಚ್ಯದಲ್ಲಿ ಪರಿಸ್ಥಿತಿ ಹದಗೆಡುತ್ತಲೇ ಇದೆ. ಏತನ್ಮಧ್ಯೆ, ರಾಜತಾಂತ್ರಿಕ ಪರಿಹಾರದ ಭರವಸೆ ಇದೆ ಎಂದು ತೋರುತ್ತದೆ. ವರದಿಗಳ ಪ್ರಕಾರ, 45 ದಿನಗಳ ಕದನ ವಿರಾಮದ ಕುರಿತು ಮೂರು ಕಡೆಯ ನಡುವೆ ಮಾತುಕತೆ ತೀವ್ರಗೊಂಡಿದೆ. ಆಕ್ಸಿಯಾಸ್ ವರದಿಯ ಪ್ರಕಾರ, ಈ ಪ್ರಸ್ತಾಪದ ಕುರಿತು ಅಮೆರಿಕ, ಇರಾನ್ ಮತ್ತು ಪ್ರಾದೇಶಿಕ ಮಧ್ಯಸ್ಥಿಕೆ ವಹಿಸುವ ದೇಶಗಳ ನಡುವೆ ಗಂಭೀರ ಚರ್ಚೆಗಳು ನಡೆಯುತ್ತಿವೆ.
ಇದು ಸಂಘರ್ಷವನ್ನು ಕೊನೆಗೊಳಿಸುವ ಪ್ರಮುಖ ಉಪಕ್ರಮವೆಂದು ಪರಿಗಣಿಸಲಾಗಿದೆ. ಪಾಕಿಸ್ತಾನ, ಈಜಿಪ್ಟ್ ಮತ್ತು ಟರ್ಕಿ ಈ ಮಾತುಕತೆಗಳಲ್ಲಿ ಮಧ್ಯವರ್ತಿಗಳ ಪಾತ್ರವನ್ನು ವಹಿಸುತ್ತಿವೆ ಎಂದು ವರದಿಯಾಗಿದೆ. ಮಧ್ಯವರ್ತಿಗಳು 45 ದಿನಗಳ ಕದನ ವಿರಾಮದ ನಿಯಮಗಳನ್ನು ಅಂತಿಮಗೊಳಿಸಲು ತೀವ್ರವಾಗಿ ಪ್ರಯತ್ನಿಸುತ್ತಿದ್ದಾರೆ ಮತ್ತು ಎರಡೂ ಕಡೆಯವರು ಅದಕ್ಕೆ ಒಪ್ಪಿಕೊಳ್ಳುವಂತೆ ಮನವೊಲಿಸಲು ಪ್ರಯತ್ನಿಸುತ್ತಿದ್ದಾರೆ.
ಆದಾಗ್ಯೂ, ಅಮೆರಿಕ, ಇಸ್ರೇಲ್ ಮತ್ತು ಇರಾನ್‌ನ ನಿಲುವುಗಳನ್ನು ಗಮನಿಸಿದರೆ ಶಾಂತಿ ನೆಲೆಸುವುದು ಅಸಾಧ್ಯವೆಂಬಂತೆ ತೋರುತ್ತಿದೆ. ಕನಿಷ್ಠ 45 ದಿನಗಳವರೆಗೆ ಹೋರಾಟವನ್ನು ನಿಲ್ಲಿಸಿ ನಂತರ ಮಾತುಕತೆಗಳನ್ನು ಪುನರಾರಂಭಿಸುವುದು ಯೋಜನೆಯಾಗಿದೆ.
ಚರ್ಚೆಯಲ್ಲಿ ಭಾಗಿಯಾಗಿರುವ ಅಧಿಕಾರಿಗಳು ಮುಂದಿನ ಎರಡು ದಿನಗಳಲ್ಲಿ ಸೀಮಿತ ಒಪ್ಪಂದವು ಅಸಂಭವವೆಂದು ಸೂಚಿಸಿದ್ದಾರೆ. ಅದೇನೇ ಇದ್ದರೂ, ರಾಜತಾಂತ್ರಿಕರು ಇದನ್ನು ಪ್ರಮುಖ ಮುಖಾಮುಖಿಯನ್ನು ತಪ್ಪಿಸಲು ಕೊನೆಯ ಅವಕಾಶವೆಂದು ಪರಿಗಣಿಸಿದ್ದಾರೆ.
ಇರಾನ್ ಮೇಲೆ ದಾಳಿ ಮಾಡುವುದಾಗಿ ಬೆದರಿಕೆ ಹಾಕುತ್ತಾ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿರುವ ಎಚ್ಚರಿಕೆ ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಿದೆ. ಮಾತುಕತೆ ವಿಫಲವಾದರೆ, ಇರಾನ್‌ನಲ್ಲಿ ನಾಗರಿಕ ಮೂಲಸೌಕರ್ಯದ ಮೇಲೆ ದೊಡ್ಡ ಪ್ರಮಾಣದ ಮಿಲಿಟರಿ ದಾಳಿ ನಡೆಸುವುದಾಗಿ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.ಫೆಬ್ರವರಿ 28 ರಂದು ಅಮೆರಿಕ ಮತ್ತು ಇಸ್ರೇಲ್ ಇರಾನ್ ಮೇಲೆ ದಾಳಿ ಮಾಡಿದವು.
ಅಂದಿನಿಂದ ಹೋರಾಟ ಮುಂದುವರೆದಿದೆ. ಇರಾನ್ ಇಸ್ರೇಲ್ ಮತ್ತು ಗಲ್ಫ್ ದೇಶಗಳಲ್ಲಿನ ಅಮೆರಿಕದ ನೆಲೆಗಳು ಮತ್ತು ಕಂಪನಿಗಳನ್ನು ಗುರಿಯಾಗಿಸಿಕೊಂಡಿದೆ.ಈ ಸಂಘರ್ಷವು 10 ಕ್ಕೂ ಹೆಚ್ಚು ದೇಶಗಳ ಮೇಲೆ ನೇರವಾಗಿ ಪರಿಣಾಮ ಬೀರುತ್ತಿದೆ. ಹಾರ್ಮುಜ್ ಜಲಸಂಧಿಯ ಮುಚ್ಚುವಿಕೆಯು ಜಾಗತಿಕ ಇಂಧನ ಬಿಕ್ಕಟ್ಟನ್ನು ಉಲ್ಬಣಗೊಳಿಸುತ್ತಿದೆ.ಇರಾನ್ ಹಾರ್ಮುಜ್ ಜಲಸಂಧಿಯನ್ನು ತೆರೆಯಬೇಕು ಮತ್ತು ಅಮೆರಿಕದ ಪ್ರಸ್ತಾಪವನ್ನು ಒಪ್ಪಿಕೊಳ್ಳಬೇಕು ಎಂದು ಹೇಳಿದ್ದಾರೆ.
ಟೆಹ್ರಾನ್, ಏಪ್ರಿಲ್ 06: ಇರಾನ್(Iran)ಗೆ ಮತ್ತೊಂದು ದೊಡ್ಡ ಹೊಡೆತ ಬಿದ್ದಿದೆ. ದೇಶದ ಪ್ರಬಲ ಮಿಲಿಟರಿ ಸಂಘಟನೆಯಾದ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ನ ಗುಪ್ತಚರ ಮುಖ್ಯಸ್ಥ ಮಜೀದ್ ಖಾದೇಮಿ ಸೋಮವಾರ ಅಮೆರಿಕ ಮತ್ತು ಇಸ್ರೇಲ್ ನಡೆಸಿದ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಆರಂಭದಲ್ಲಿ, ಅವರ ಸಾವಿಗೆ ಕಾರಣದ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿಯನ್ನು ನೀಡಲಾಗಿಲ್ಲ. ಆದರೆ ನಂತರ, IRGC ಅವರು ಅಮೆರಿಕ ಮತ್ತು ಇಸ್ರೇಲ್ ನಡೆಸಿದ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಹೇಳಿಕೊಂಡಿದೆ.
ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಈ ದಾಳಿಗೆ ಅಮೆರಿಕ ಮತ್ತು ಇಸ್ರೇಲ್ ಕಾರಣ ಎಂದು ಆರೋಪಿಸಿದೆ. ಮೇಜರ್ ಜನರಲ್ ಮಜೀದ್ ಖಾದೇಮಿ ಎಲ್ಲಿ ಕೊಲ್ಲಲ್ಪಟ್ಟರು ಎಂಬುದರ ಕುರಿತು IRGC ತಕ್ಷಣದ ವಿವರಗಳನ್ನು ನೀಡಿಲ್ಲ.
ಇರಾನ್ ರಾಜಧಾನಿ ಟೆಹ್ರಾನ್ ಸುತ್ತಮುತ್ತಲಿನ ವಸತಿ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ಸೋಮವಾರ ಮುಂಜಾನೆ ಹಲವಾರು ವೈಮಾನಿಕ ದಾಳಿಗಳನ್ನು ನಡೆಸಲಾಯಿತು.
ಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್‌ನ ಗುಪ್ತಚರ ಸಂಸ್ಥೆಯ ಮುಖ್ಯಸ್ಥ ಮೇಜರ್ ಜನರಲ್ ಮಜೀದ್ ಖಾದೇಮಿ ಅವರು ಅಮೆರಿಕ-ಇಸ್ರೇಲಿ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ. ಮಜೀದ್ ಸುಮಾರು ಐದು ದಶಕಗಳ ಕಾಲ ಇರಾನ್‌ನ ಗುಪ್ತಚರ ಮತ್ತು ಭದ್ರತಾ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಸೋಮವಾರ ಇಸ್ರೇಲ್ ಮತ್ತು ಅಮೆರಿಕ ನಡೆಸಿದ ಸರಣಿ ದಾಳಿಯಲ್ಲಿ 25 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಇರಾನ್ ಇಸ್ರೇಲ್ ಮತ್ತು ಅದರ ನೆರೆಯ ರಾಷ್ಟ್ರಗಳ ಮೇಲೂ ದಾಳಿ ಮಾಡಿದೆ.
ಭಾನುವಾರ, ಹೈಫಾ ನಗರದಲ್ಲಿ ಇರಾನ್ ನಡೆಸಿದ ಕ್ಷಿಪಣಿ ದಾಳಿಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ.ಫೆಬ್ರವರಿ 28, 2026 ರಂದು, ಅಮೆರಿಕ ಮತ್ತು ಇಸ್ರೇಲ್ ಆಪರೇಷನ್ ಎಪಿಕ್ ಫ್ಯೂರಿಯನ್ನು ಪ್ರಾರಂಭಿಸಿದವು. ಸುಪ್ರೀಂ ನಾಯಕ ಅಲಿ ಖಮೇನಿ ವೈಮಾನಿಕ ದಾಳಿಯಲ್ಲಿ ಸಾವನ್ನಪ್ಪಿದ್ದರು. ಖಮೇನಿಯ ಆಪ್ತ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಲಿ ಶಮ್ಖಾನಿ ಕೆಲವೇ ಗಂಟೆಗಳಲ್ಲಿ ಕೊಲ್ಲಲ್ಪಟ್ಟರು. ಐಆರ್‌ಜಿಸಿ ಕಮಾಂಡರ್, ಜನರಲ್ ಸ್ಟಾಫ್ ಮುಖ್ಯಸ್ಥ, ಬಸಿಜ್ ಪಡೆಗಳ ಮುಖ್ಯಸ್ಥ, ಐಆರ್‌ಜಿಸಿ ನೌಕಾ ಕಮಾಂಡರ್, ಗುಪ್ತಚರ ಸಚಿವರು ಮತ್ತು ಹಲವಾರು ಹಿರಿಯ ಮಿಲಿಟರಿ ಯೋಜನಾ ಅಧಿಕಾರಿಗಳು ದಾಳಿಯ ಆರಂಭದಲ್ಲೇ ಸಾವನ್ನಪ್ಪಿದ್ದರು.
ಸೋಮವಾರ ಬೆಳಗ್ಗೆ ಇರಾನ್ ರಾಜಧಾನಿ ಟೆಹ್ರಾನ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಲವಾರು ವಾಯುದಾಳಿಗಳನ್ನು ನಡೆಸಲಾಗಿದೆ. ಈ ದಾಳಿಗಳಲ್ಲಿ ವಸತಿ ಪ್ರದೇಶಗಳು ಸಹ ಹಾನಿಗೊಳಗಾಗಿದ್ದು, ಹಲವಾರು ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಆದಾಗ್ಯೂ, ಈ ದಾಳಿಯ ಬಗ್ಗೆ ಅಮೆರಿಕ ಮತ್ತು ಇಸ್ರೇಲ್‌ನಿಂದ ಯಾವುದೇ ಸ್ಪಷ್ಟ ಅಧಿಕೃತ ದೃಢೀಕರಣ ಬಂದಿಲ್ಲ. ಹೀಗಾಗಿ, ಘಟನೆಯ ಬಗ್ಗೆ ವಿಭಿನ್ನ ಹೇಳಿಕೆಗಳನ್ನು ನೀಡಲಾಗುತ್ತಿದೆ ಮತ್ತು ಪೂರ್ಣ ಸತ್ಯ ಇನ್ನೂ ಸ್ಪಷ್ಟವಾಗಿಲ್ಲ. ದೇಶದ ಭದ್ರತೆ ಮತ್ತು ಗುಪ್ತಚರ ಕಾರ್ಯತಂತ್ರದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಮಜೀದ್ ಖಾದೇಮಿ ಅವರ ಸಾವು ಇರಾನ್‌ಗೆ ದೊಡ್ಡ ಹೊಡೆತ ಎಂದು ತಜ್ಞರು ಹೇಳುತ್ತಾರೆ.