ಚಿತ್ರದುರ್ಗ, ಡಿಸೆಂಬರ್ 25: ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಗೊರ್ಲತ್ತು ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ 48 ರಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಕನಿಷ್ಠ 17 ಮಂದಿ ಸಜೀವ ದಹನವಾಗಿದ್ದಾರೆ. ಬೆಂಗಳೂರಿನಿಂದ ಗೋಕರ್ಣಕ್ಕೆ ಹೊರಟಿದ್ದ ಸೀಬರ್ಡ್ ಸ್ಲೀಪರ್ ಕೋಚ್ ಬಸ್‌ಗೆ ಎದುರಿನಿಂದ ಬಂದ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಬಸ್ ಸಂಪೂರ್ಣವಾಗಿ ಬೆಂಕಿ ಹೊತ್ತಿಕೊಂಡು ಭಸ್ಮವಾಗಿದೆ. ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆಯೇ ಬಸ್‌ನ ಚಾಲಕ ಮತ್ತು ನಿರ್ವಾಹಕ ತಕ್ಷಣವೇ ಹೊರಗೆ ಜಿಗಿದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಲಾರಿ ಚಾಲಕ ಘಟನಾ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಬಸ್‌ನಲ್ಲಿ 14 ಮಹಿಳೆಯರು ಹಾಗೂ 15 ಪುರುಷರು ಇದ್ದರು. ಗಾಯಗೊಂಡ 21 ಮಂದಿಯನ್ನು ಹಿರಿಯೂರು ಮತ್ತು ತುಮಕೂರಿನ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಘಟನೆ ಕುರಿತು ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಈ ವಾರ ಫ್ಯಾಮಿಲಿ ವೀಕ್ ನಡೆಯುತ್ತಿದೆ. ವಿವಿಧ ಸ್ಪರ್ಧಿಗಳ ಕುಟುಂಬದವರು ದೊಡ್ಮನೆಗೆ ಆಗಮಿಸಿ ಸ್ಪರ್ಧಿಗಳಿಗೆ ಹುರುಪು ತುಂಬುತ್ತಾ ಇದ್ದಾರೆ. ಈಗ ಧನುಷ್ಗೆ ತಾಯಿಯಿಂದಲೇ ಮುಖಭಂಗ ಆಗಿದೆ. ಗಿಲ್ಲಿ ಕಾಮಿಡಿ ವಿಷಯದಲ್ಲಿ ಯಾವಾಗಲೂ ಧನುಷ್ ತಕರಾರರು ತೆಗೆಯುತ್ತಲೇ ಇದ್ದರು. ಗಿಲ್ಲಿಯನ್ನು ನಾಮಿನೇಟ್ ಮಾಡಲು ಧನುಷ್ ಕೊಡುತ್ತಿದ್ದ ಕಾರಣಗಳೇ ಇದಾಗಿತ್ತು. ಆದರೆ, ಗಿಲ್ಲಿಗೆ ಧನುಷ್ ತಾಯಿ ಮೆಚ್ಚುಗೆ ಸೂಚಿಸಿದರು.
ಧನುಷ್ ಅವರು ಯಾವಾಗಲೂ ಗಿಲ್ಲಿ ಬಗ್ಗೆ ಕಂಪ್ಲೇಂಟ್ ಮಾಡುತ್ತಲೇ ಬರುತ್ತಿದ್ದಾರೆ. ಗಿಲ್ಲಿ ಉತ್ತಮವಾಗಿ ಆಡೋದಿಲ್ಲ, ಹಾಸ್ಯದ ಮೂಲಕ ಎಲ್ಲರಿಗೂ ನೋವುಂಟು ಮಾಡುತ್ತಾನೆ ಎಂದೆಲ್ಲ ಹೇಳುತ್ತಿದ್ದರು. ಆದರೆ, ಹೊರಗಿನ ಪ್ರಪಂಚ ಗಿಲ್ಲಿಯನ್ನು ನೋಡುತ್ತಿರುವ ರೀತಿಯೇ ಬೇರೆ ಎನ್ನೋದು ಧನುಷ್ಗೆ ಈಗ ಅರ್ಥವಾದಂತೆ ಇದೆ. ಅದು ಕೂಡ ಧನುಷ್ ತಾಯಿ ಕಡೆಯಿಂದಲೇ ಎಂಬುದು ವಿಶೇಷ.
ಧನುಷ್ ತಾಯಿ ಗಿಲ್ಲಿಯನ್ನು ಹಾಡಿ ಹೊಗಳಿದ್ದಾರೆ. ‘ಗಿಲ್ಲಿ ಕಾಮಿಡಿ ನಂಗೆ ತುಂಬಾನೇ ಇಷ್ಟ ಆಗುತ್ತದೆ’ ಎಂದು ಮನಸಾರೆ ಹೇಳಿದ್ದಾರೆ. ಆಗ ಧನುಷ್ಗೆ ಏನು ಹೇಳಬೇಕು ಎನ್ನುವುದು ಗೊತ್ತಾಗಿಲ್ಲ. ‘ಗಿಲ್ಲಿ ಇಲ್ಲದಿದ್ದರೆ ನಿಮಗೆಲ್ಲ ಬೇಸರ ಆಗುತ್ತಿತ್ತು. ಧನುಷ್ ಈ ಮನೆಯಲ್ಲಿ ಇಲ್ಲದೆ ಇದ್ದಿದ್ದರೆ ನನ್ನೆಲ್ಲ ವೋಟ್ನ ಗಿಲ್ಲಿಗೆ ಹಾಕುತ್ತಿದ್ದೆ’ ಎಂಬುದನ್ನು ಕೂಡ ಉಲ್ಲೇಖ ಮಾಡಿದ್ದಾರೆ ಧನುಷ್ ತಾಯಿ. ಈ ಹೊಗಳಿಕೆಯಿಂದ ಗಿಲ್ಲಿ ಖುಷಿಯಾದರು. ಧನುಷ್ ತಾಯಿ ಮಾತು ಇಡೀ ಮನೆಯವರಿಗೆ ಇದು ಅಚ್ಚರಿ ಎನಿಸಿದೆ.
ಸಾಮಾನ್ಯವಾಗಿ ಯಾವುದೇ ಸ್ಪರ್ಧಿಗಳ ಕುಟುಂಬದವರು ಬಂದವರು ತಮ್ಮ ಮಕ್ಕಳನ್ನು ಹೊಗಳುವ ಕೆಲಸದಲ್ಲಿ ತೊಡಗಿಕೊಳ್ಳುತ್ತಾರೆ. ಮಕ್ಕಳ ಬಗ್ಗೆ ಮೆಚ್ಚುಗೆ ಸೂಚಿಸುತ್ತಾರೆ. ಈ ಸಂದರ್ಭದಲ್ಲಿ ಬೇರೆಯವರನ್ನು ಹೊಗಳಿದರೆ ಅವರ ಆಟಕ್ಕೆ ಮೈಲೇಜ್ ಸಿಗುತ್ತದೆ ಎಂಬುದು ಗೊತ್ತಿದೆ. ಆದಾಗ್ಯೂ ಈ ಕೆಲಸವನ್ನು ಧನುಷ್ ತಾಯಿ ಮಾಡಿರುವುದು ಅನೇಕರ ಮೆಚ್ಚುಗೆಗೆ ಕಾರಣ ಆಗಿದೆ.
ದೇವರ ಟ್ಯಾಟೂಗಳ ಮಹತ್ವ ಮತ್ತು ಅವುಗಳನ್ನು ಹಾಕಿಸಿಕೊಳ್ಳುವಾಗ ಅನುಸರಿಸಬೇಕಾದ ಸೂಕ್ಷ್ಮ ವಿಧಾನಗಳ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ಅವರು ಹೇಳಿದ್ದಾರೆ. ಇತ್ತೀಚಿನ ದಿನಗಳಲ್ಲಿ ದೇಹದ ಮೇಲೆ ದೇವರ ವಿಗ್ರಹಗಳು, ದೇವತಾ ಮೂರ್ತಿಗಳು, ಓಂಕಾರ, ಸ್ವಸ್ತಿಕ್, ಶ್ರೀ ಚಕ್ರದಂತಹ ಚಿಹ್ನೆಗಳನ್ನು ಟ್ಯಾಟೂ ಹಾಕಿಸಿಕೊಳ್ಳುವುದು ಸಾಮಾನ್ಯವಾಗಿದೆ. ಇದು ಭಕ್ತಿಯ ಒಂದು ಸಂಕೇತವಾಗಿ ಕಂಡುಬಂದರೂ, ಶಾಸ್ತ್ರಗಳ ಪ್ರಕಾರ ಈ ದೇಹವು ಮಲ-ಮೂತ್ರಗಳಿಂದ ಕೂಡಿದ ದೇಹ ಎಂಬ ಅರಿವಿರಬೇಕು.ದೇಹದ ಮೇಲೆ ದೇವರ ಚಿತ್ರಗಳನ್ನು ಹಾಕಿಸಿಕೊಳ್ಳುವುದು ಆ ದೈವಿಕ ಶಕ್ತಿಯನ್ನು ದೇಹದೊಳಕ್ಕೆ ಆವಾಹನೆ ಮಾಡಿಕೊಳ್ಳುವ ಸಂಕೇತವಾಗಿದೆ. ಇದನ್ನು ಒಂದು ದೀಕ್ಷೆಯ ಸಮಾನವೆಂದು ಪರಿಗಣಿಸಬೇಕು. ಟ್ಯಾಟೂ ಹಾಕಿಸಿಕೊಂಡ ನಂತರ ನಾವು ಆ ಭಗವಂತನ ಸ್ವರೂಪಕ್ಕೆ ತಕ್ಕಂತೆ ಜೀವನಶೈಲಿಯನ್ನು ಬದಲಾಯಿಸಿಕೊಳ್ಳಬೇಕು. ದುಶ್ಚಟಗಳು ಮತ್ತು ದುರ್ಬುದ್ಧಿಗಳನ್ನು ತ್ಯಜಿಸಿ, ಮನಸ್ಸು ಮತ್ತು ದೇಹವನ್ನು ಶುದ್ಧವಾಗಿಟ್ಟುಕೊಳ್ಳುವ ಸಂಕಲ್ಪದಿಂದ ಹಾಕಿಸಿಕೊಂಡರೆ ಶುಭ ಫಲಗಳು ದೊರೆಯುತ್ತವೆ. ಕೇವಲ ತೋರ್ಪಡಿಕೆಗಾಗಿ ಹಾಕಿಸಿಕೊಂಡರೆ ಅದು ಶುಭವನ್ನು ತರಲಾರದು ಎಂದು ತಿಳಿಸಲಾಗಿದೆ.
ಟಿವಿ9 ಡಿಜಿಟಲ್ ವಾಹಿನಿಯಲ್ಲಿ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ ಗುರೂಜಿ ಅವರು 2025ರ ಡಿಸೆಂಬರ್ 25ರ ದಿನಭವಿಷ್ಯವನ್ನು ನೀಡಿದ್ದಾರೆ. ದ್ವಾದಶ ರಾಶಿಗಳಾದ ಮೇಷದಿಂದ ಮೀನದವರೆಗಿನ ರಾಶಿಚಕ್ರ ಚಿಹ್ನೆಗಳ ಮೇಲೆ ಗ್ರಹಗಳ ಸಂಚಾರದಿಂದಾಗುವ ಪ್ರಭಾವಗಳು, ಆರ್ಥಿಕ ಸ್ಥಿತಿ, ಆರೋಗ್ಯ, ಉದ್ಯೋಗ, ವ್ಯಾಪಾರ, ಅದೃಷ್ಟ ಸಂಖ್ಯೆ, ದಿಕ್ಕು ಮತ್ತು ಬಣ್ಣಗಳ ಕುರಿತು ವಿವರವಾದ ಮಾಹಿತಿಯನ್ನು ಒದಗಿಸಲಾಗಿದೆ.
ಚಿತ್ರದುರ್ಗ, ಡಿಸೆಂಬರ್ 25: ಚಿತ್ರದುರ್ಗ (Chitradurga) ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಗೊರ್ಲತ್ತು ಕ್ರಾಸ್ ಬಳಿ ನಸುಕಿನ 3 ಗಂಟೆಗೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ (Bus Accident) ಕನಿಷ್ಠ 17 ಮಂದಿ ಪ್ರಯಾಣಿಕರು ಸಜೀವ ದಹನವಾಗಿದ್ದಾರೆ. ಬೆಂಗಳೂರಿನಿಂದ ಗೋಕರ್ಣಕ್ಕೆ ತೆರಳುತ್ತಿದ್ದ ಖಾಸಗಿ ಸೀಬರ್ಡ್ ಸ್ಲೀಪರ್ ಕೋಚ್ ಬಸ್‌ಗೆ, ಎದುರಿನಿಂದ ಬರುತ್ತಿದ್ದ ಕಂಟೇನರ್ ಲಾರಿ ಡಿವೈಡರ್ ಹಾರಿ ಬಂದು ಡಿಕ್ಕಿ ಹೊಡೆದ ಪರಿಣಾಮ ಈ ದುರಂತ ಸಂಭವಿಸಿದೆ. ಲಾರಿ ಡಿಕ್ಕಿ ಹೊಡೆದ ತಕ್ಷಣ ಬಸ್‌ಗೆ ಬೆಂಕಿ ಹೊತ್ತಿಕೊಂಡಿದ್ದು, ಬಸ್ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ಬಸ್ನಲ್ಲಿದ್ದವರ ಪೈಕಿ ಹೆಚ್ಚಿನವರು ಗೋಕರ್ಣದವರಾಗಿದ್ದು, ಹೀಗಾಗಿ ಮೃತಪಟ್ಟವರಲ್ಲಿ ಹೆಚ್ಚಿನವರು ಗೋಕರ್ಣದವರೇ ಇರಬಹುದು ಎಂದು ಶಂಕಿಸಲಾಗಿದೆ.
ಬೆಂಗಳೂರಿನ ಮೆಜೆಸ್ಟಿಕ್‌ನಿಂದ ಹೊರಟಿದ್ದ ಖಾಸಗಿ ಸೀಬರ್ಡ್ ಸ್ಲೀಪರ್ ಬಸ್, ಶಿವಮೊಗ್ಗ ಮತ್ತು ಹೊನ್ನಾವರ ಮಾರ್ಗವಾಗಿ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣಕ್ಕೆ ತೆರಳುತ್ತಿತ್ತು. 32 ಆಸನ ಸಾಮರ್ಥ್ಯದ ಬಸ್‌ನಲ್ಲಿ 29 ಆಸನಗಳು ಕಾಯ್ದಿರಿಸಲಾಗಿದ್ದು, 25 ಪ್ರಯಾಣಿಕರು ಗೋಕರ್ಣಕ್ಕೆ, ಇಬ್ಬರು ಕುಮಟಾಕ್ಕೆ ಮತ್ತು ಇಬ್ಬರು ಶಿವಮೊಗ್ಗಕ್ಕೆ ಪ್ರಯಾಣಿಸುತ್ತಿದ್ದರು.
ಅಪಘಾತದ ಮಾಹಿತಿ ದೊರೆತ ತಕ್ಷಣ ಚಿತ್ರದುರ್ಗ ಜಿಲ್ಲೆಯ ಡಿವೈಎಸ್ಪಿ ಶಿವಕುಮಾರ್, ರೂರಲ್ ಇನ್ಸ್‌ಪೆಕ್ಟರ್ ಆನಂದ್, ಇನ್ಸ್‌ಪೆಕ್ಟರ್ ಗುಂಡಪ್ಪ, ಹಾಗೂ ಚಿತ್ರದುರ್ಗ ಎಸ್.ಪಿ. ರಣದೀಪ್ ಮಂಡಾರು ಮತ್ತು ತುಮಕೂರಿನ ಎಸ್.ಪಿ. ಅಶೋಕ್ ಸ್ಥಳಕ್ಕೆ ದಾವಿಸಿ ರಕ್ಷಣಾ ಕಾರ್ಯಗಳನ್ನು ನಡೆಸಿದ್ದಾರೆ. ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ತಕ್ಷಣವೇ ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ನಂದಿಸುವ ಕಾರ್ಯಾಚರಣೆ ನಡೆಸಿದರು. 9 ಮಂದಿ ಗಾಯಾಳುಗಳನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಗಾಯಾಳುಗಳನ್ನು ಹಿರಿಯೂರು, ಶಿರಾಗೆ ಸಮೀಪದ ಆಸ್ಪತ್ರೆಗಳಿಗೆ ಹಾಗೂ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ರಕ್ಷಿಸಲ್ಪಟ್ಟವರ ಸ್ಥಿತಿ ಚಿಂತಾಜನಕವಾಗಿದೆ ಎಂದು ವರದಿಯಾಗಿದೆ.
ರಾಷ್ಟ್ರೀಯ ಹೆದ್ದಾರಿ 48ರಲ್ಲಿ 30 ಕಿಲೋಮೀಟರ್ ಟ್ರಾಫಿಕ್ ಜಾಮ್
ದುರಂತ ಸಂಭವಿಸಿದ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಸುಮಾರು 30 ಕಿಲೋಮೀಟರ್‌ಗಳಷ್ಟು ಉದ್ದಕ್ಕೆ ಸಂಚಾರ ದಟ್ಟಣೆ ಉಂಟಾಗಿದೆ. ಮುಂಬೈಗೆ ಸಂಪರ್ಕ ಕಲ್ಪಿಸುವ ಈ ಹೆದ್ದಾರಿಯಲ್ಲಿ ವಾಹನಗಳು ಸಾಲುಗಟ್ಟಿ ನಿಂತಿವೆ. ಬೆಂಕಿ ನಂದಿಸುವ ಕಾರ್ಯಾಚರಣೆ ಮತ್ತು ಸುಟ್ಟು ಕರಕಲಾದ ಮೃತದೇಹಗಳನ್ನು ಹೊರತೆಗೆಯುವ ಕಾರ್ಯ ಭರದಿಂದ ಸಾಗಿದೆ. ಮೃತದೇಹಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿದ್ದು, ಗುರುತು ಪತ್ತೆ ಹಚ್ಚುವುದು ಕಷ್ಟಕರವಾಗಿದೆ. ಘಟನೆಗೆ ಲಾರಿ ಚಾಲಕನ ನಿರ್ಲಕ್ಷ್ಯವೇ ಕಾರಣ ಎಂದು ಹೇಳಲಾಗುತ್ತಿದ್ದು, ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.
ಕ್ರಿಕೆಟ್ ಅಂಗಳದಲ್ಲಿ ವೈಭವ್ ಸೂರ್ಯವಂಶಿಯ (Vaibhav Suryavanshi) ಪರಾಕ್ರಮ ಮುಂದುವರೆದಿದೆ. ಈವರೆಗೆ ಟಿ20 ಕ್ರಿಕೆಟ್ನಲ್ಲಿ ಅಬ್ಬರಿಸುತ್ತಿದ್ದ ವೈಭವ್ ಇದೀಗ ಏಕದಿನ ಟೂರ್ನಿಯಲ್ಲೂ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಈ ಸಿಡಿಲಬ್ಬರದೊಂದಿಗೆ ಹಲವು ದಾಖಲೆಗಳನ್ನು ಕೂಡ ತಮ್ಮದಾಗಿಸಿಕೊಂಡಿದ್ದಾರೆ. ಆ ದಾಖಲೆಗಳ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ…
ಅತಿ ಕಿರಿಯ ಶತಕಧಾರಿ: ಅರುಣಾಚಲ ಪ್ರದೇಶ್ ವಿರುದ್ಧದ ಪಂದ್ಯದಲ್ಲಿ 190 ರನ್ ಸಿಡಿಸುವ ಮೂಲಕ 14 ವರ್ಷದ ವೈಭವ್ ಸೂರ್ಯವಂಶಿ ಪುರುಷರ ಲಿಸ್ಟ್ ಎ (ಏಕದಿನ) ಕ್ರಿಕೆಟ್ನಲ್ಲಿ ಸೆಂಚುರಿ ಬಾರಿಸಿದ ವಿಶ್ವದ ಅತ್ಯಂತ ಕಿರಿಯ ಆಟಗಾರ ಎನಿಸಿಕೊಂಡಿದ್ದಾರೆ.
ಅತಿ ವೇಗದ 150 ರನ್: ವಿಜಯ ಹಝಾರೆ ಟೂರ್ನಿಯ ಮೊದಲ ಪಂದ್ಯದಲ್ಲಿ ಅರುಣಾಚಲ ಪ್ರದೇಶ್ ವಿರುದ್ಧ ಕೇವಲ 54 ಎಸೆತಗಳಲ್ಲಿ 150 ರನ್ ಪೂರೈಸಿ ಅತೀ ಕಡಿಮೆ ಎಸೆತದಲ್ಲಿ 150 ರನ್ ಕಲೆಹಾಕಿದ ಬ್ಯಾಟರ್ ಎನಿಸಿಕೊಂಡಿದ್ದಾರೆ. ಈ ಮೂಲಕ ಎಬಿ ಡಿವಿಲಿಯರ್ಸ್ (64 ಎಸೆತ) ಅವರ ಹೆಸರಲ್ಲಿದ್ದ ವಿಶ್ವ ದಾಖಲೆಯನ್ನು ಮುರಿದಿದ್ದಾರೆ.
4ನೇ ವೇಗದ ಶತಕ: ಈ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಕೇವಲ 36 ಎಸೆತಗಳಲ್ಲಿ ಶತಕ ಸಿಡಿಸಿದ್ದರು. ಈ ಮೂಲಕ ಅನ್ಮೋಲ್ ಪ್ರೀತ್, ಕೋರೆ ಅ್ಯಂಡರ್ಸನ್ ಹಾಗೂ ಗ್ರಹಾಂ ರೋಸ್ ಬಳಿಕ ಅತ್ಯಂತ ವೇಗದ ಲಿಸ್ಟ್ ಎ ಶತಕ ಬಾರಿಸಿದ ವಿಶ್ವದ ನಾಲ್ಕನೇ ಬ್ಯಾಟರ್ ಎನಿಸಿಕೊಂಡಿದ್ದಾರೆ.
2ನೇ ವೇಗದ ಸೆಂಚುರಿ: ಲಿಸ್ಟ್ ಎ ಕ್ರಿಕೆಟ್ನಲ್ಲಿ ಅತೀ ಕಡಿಮೆ ಎಸೆತಗಳಲ್ಲಿ ಶತಕ ಬಾರಿಸಿದ ಎರಡನೇ ಭಾರತೀಯ ದಾಂಡಿಗ ಎನಿಸಿಕೊಂಡಿದ್ದಾರೆ. ಈ ಪಟ್ಟಿಯಲ್ಲಿ 35 ಎಸೆತಗಳಲ್ಲಿ ಸೆಂಚುರಿ ಸಿಡಿಸಿದ ಅನ್ಮೋಲ್ ಪ್ರೀತ್ ಸಿಂಗ್ ಮೊದಲ ಸ್ಥಾನದಲ್ಲಿದ್ದಾರೆ.
ಸಿಕ್ಸರ್ಗಳ ದಾಖಲೆ: ಅರುಣಾಚಲ ಪ್ರದೇಶ್ ವಿರುದ್ಧದ ಪಂದ್ಯದಲ್ಲಿ 15 ಸಿಕ್ಸ್ ಸಿಡಿಸುವ ಮೂಲಕ ವಿಜಯ ಹಝಾರೆ ಟೂರ್ನಿಯ ಪಂದ್ಯವೊಂದರ ಇನಿಂಗ್ಸ್ನಲ್ಲಿ 15 ಸಿಕ್ಸ್ ಸಿಡಿಸಿದ ಅತ್ಯಂತ ಕಿರಿಯ ಬ್ಯಾಟರ್ ಎಂಬ ಹೆಗ್ಗಳಿಕೆಯನ್ನೂ ಕೂಡ ವೈಭವ್ ಸೂರ್ಯವಂಶಿ ತಮ್ಮದಾಗಿಸಿಕೊಂಡಿದ್ದಾರೆ.
ಚಿಕ್ಕಬಳ್ಳಾಪುರ, ಡಿಸೆಂಬರ್ 25: ಚಿಕ್ಕಬಳ್ಳಾಪುರ (Chikkaballapur) ಜಿಲ್ಲೆಯ ಚೇಳೂರು ಪಟ್ಟಣದಲ್ಲಿ 40 ದಿನದ ನವಜಾತ ಗಂಡು ಶಿಶು ಸಾವಿನ ಪ್ರಕರಣ ಇದೀಗ ತೀವ್ರ ಅನುಮಾನಗಳಿಗೆ ಕಾರಣವಾಗಿದೆ. ಈ ಘಟನೆಯಲ್ಲಿ ಮರ್ಯಾದೆ ಹತ್ಯೆ ಶಂಕೆ ವ್ಯಕ್ತವಾಗಿದ್ದು, ಶಿಶುವಿನ ಸಾವಿನಲ್ಲಿ ಅಜ್ಜಿಯ ಕೈವಾಡವಿರಬಹುದೆಂಬ ಆರೋಪ ಕೇಳಿಬಂದಿದೆ. ಅಪ್ರಾಪ್ತ ಮೊಮ್ಮಗಳು ಹಿಂದೂ ಯುವಕನನ್ನು ಪ್ರೀತಿಸಿ ಮದುವೆ ಮಾಡಿಕೊಂಡಿದ್ದಕ್ಕೆ ದ್ವೇಷ ಹೊಂದಿದ್ದ ಅನ್ಯಕೋಮಿಗೆ ಸೇರಿದ ಅಜ್ಜಿ, ಮೊಮ್ಮಗಳ 40 ದಿನದ ನವಜಾತ ಶಿಶುವನ್ನು ಕೊಂದಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಪ್ರೀತಿಸಿ ಮದುವೆಯಾದ ದಂಪತಿಗೆ ಜನಸಿದ್ದ ಗಂಡು ಮಗು ಡಿಸೆಂಬರ್ 21 ರಂದು ಮೃತಪಟ್ಟಿದೆ.
ಸಾವು ಸಂಭವಿಸಿದ ವೇಳೆ ಮಗು ಅಜ್ಜಿ ಬಳಿ ಇತ್ತು. ಆದರೆ, ಈ ಕುರಿತು ಪೊಲೀಸರಿಗೆ ಮಾಹಿತಿ ನೀಡುವ ಅಗತ್ಯವಿಲ್ಲ ಎಂದು ಅಜ್ಜಿ ವಾದಿಸಿದ್ದಾಳೆ ಎನ್ನಲಾಗಿದೆ. ಆದರೆ ತನ್ನ ಮಗುವಿನ ಸಾವಿನಲ್ಲಿ ಅಜ್ಜಿಯ ಕೈವಾಡವಿದೆ ಎಂಬ ಅನುಮಾನ ವ್ಯಕ್ತಪಡಿಸಿದ 17 ವರ್ಷದ ಅಪ್ರಾಪ್ತ ಬಾಲಕಿ, ಚೇಳೂರು ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾಳೆ.
ಚೇಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
ಈ ದೂರಿನ ಆಧಾರದ ಮೇಲೆ ಬಿಎನ್ಎಸ್ 194 ಸೆಕ್ಷನ್ ಅಡಿ ಯುಡಿಆರ್ (ಅಸಹಜ ಸಾವು) ಪ್ರಕರಣ ದಾಖಲಿಸಲಾಗಿದೆ. ಪ್ರಕರಣದ ಗಂಭೀರತೆಯನ್ನು ಗಮನಿಸಿ ನವಜಾತ ಶಿಶುವಿನ ಮೃತದೇಹವನ್ನು ಹೊರತೆಗೆಯಲಾಗಿದ್ದು, ಚೇಳೂರು ತಹಶಿಲ್ದಾರ್ ಶ್ವೇತಾ ಅವರ ನೇತೃತ್ವದಲ್ಲಿ ಮರಣೋತ್ತರ ಶವ ಪರೀಕ್ಷೆ ನಡೆಸಲಾಗಿದೆ.
ಹಿಂದೂ ಯುವಕನ ವಿರುದ್ಧ ಪೋಕ್ಸೋ ಕೇಸ್
ಇನ್ನೊಂದೆಡೆ, ಅಪ್ರಾಪ್ತ ಬಾಲಕಿಯನ್ನು ಪ್ರೀತಿಸಿ ಮದುವೆ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಹಿಂದೂ ಯುವಕನ ವಿರುದ್ಧ ಪೋಕ್ಸೊ ಕಾಯ್ದೆಯಡಿ ಪ್ರತ್ಯೇಕ ಪ್ರಕರಣ ದಾಖಲಿಸಲಾಗಿದೆ. ಅಪ್ರಾಪ್ತ ಬಾಲಕಿಯ ಮದುವೆ ಹಾಗೂ ಶಿಶು ಸಾವಿನ ಪ್ರಕರಣಗಳು ಇದೀಗ ಚೇಳೂರು ಪಟ್ಟಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿವೆ.
ನವಜಾತ ಶಿಶುವಿನ ಮರಣಕ್ಕೆ ನಿಖರ ಕಾರಣ ಏನು, ಇದರಲ್ಲಿ ಅಜ್ಜಿಯ ಪಾತ್ರವಿದೆಯೇ ಎಂಬುದನ್ನು ತಿಳಿಯಲು ಪೊಲೀಸರು ಮರಣೋತ್ತರ ವರದಿ ನಿರೀಕ್ಷಿಸುತ್ತಿದ್ದಾರೆ. ಪ್ರಕರಣವನ್ನು ಎಲ್ಲ ಆಯಾಮಗಳಲ್ಲಿ ತನಿಖೆ ನಡೆಸಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿಕ್ಲಿಕ್ ಮಾಡಿ
ಚಿತ್ರದುರ್ಗ, ಡಿ.25: ಚಿತ್ರದುರ್ಗದ ಜಿಲ್ಲೆ ಹಿರಿಯೂರು ತಾಲೂಕಿನ ಗೊರ್ಲತ್ತು ಕ್ರಾಸ್ ಭೀಕರ ರಸ್ತೆ ಅಪಘಾತ ನಡೆದಿದೆ. ಘಟನೆಯಲ್ಲಿ 17ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ. ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಖಾಸಗಿ ಬಸ್ಸೊಂದು ಹೊತ್ತಿಉರಿದಿದೆ. ಖಾಸಗಿ ಸ್ಲೀಪರ್ ಕೋಚ್ ಬಸ್ನಲ್ಲಿದ್ದ 17ಕ್ಕೂ ಹೆಚ್ಚು ಪ್ರಯಾಣಿಕರು ಸಜೀವ ದಹನವಾಗಿದ್ದಾರೆ. ಉಳಿದ ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇದೀಗ ಈ ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಒಂದು ಕಡೆಯಿಂದ ಬರುತ್ತಿದ್ದ ಲಾರಿಯೊಂದು ಡಿವೈಡರ್ ಹಾರಿ ಮತ್ತೊಂದು ಕಡೆಯಿಂದ ಬರುತ್ತಿದ್ದ ಬಸ್ಸಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಸ್ಲೀಪರ್ ಕೋಚ್ ಬಸ್ ರಸ್ತೆ ಮಧ್ಯೆ ಹೊತ್ತಿ ಉರಿದಿದೆ. ಈ ಅಪಘಾತಕ್ಕೆ ಲಾರಿ ಚಾಲಕನ ನಿರ್ಲಕ್ಷ್ಯವೇ ಕಾರಣ ಎಂದು ಹೇಳಲಾಗಿದೆ. ಇನ್ನು ಈ ಲಾರಿ ಹಿರಿಯೂರಿನಿಂದ ಬೆಂಗಳೂರಿಗೆ ತೆರಳುತ್ತಿತ್ತು ಎಂದು ಹೇಳಾಗಿದೆ. ಬಸ್ ಬೆಂಗಳೂರಿಂದ ಶಿವಮೊಗ್ಗಕ್ಕೆ ಹೋಗುತ್ತಿತ್ತು. ಇದೀಗ ಘಟನಾ ಸ್ಥಳಕ್ಕೆ ಎಸ್ಪಿ ರಂಜಿತ್ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಹಿರಿಯೂರು ಗ್ರಾಮಾಂತರ ಠಾಣಾಯಲ್ಲಿ ಘಟನೆಗೆ ಸಂಬಂಧಿಸಿದಂತೆ ದೂರು ದಾಖಲಾಗಿದೆ.
ಅತ್ಯಂತ ಕ್ರಿಯಾಶೀಲವಾದ ದಿನ ಇದಾಗಿರುತ್ತದೆ. ಉದ್ಯೋಗಕ್ಕೆ ರಜೆಯ ದಿನವಾಗಿದ್ದರೂ ನಿಮ್ಮ ಮನಸ್ಸು ಮುಂದಿನ ಗುರಿಗಳ ಬಗ್ಗೆ ಯೋಚಿಸುತ್ತಾ ಇರಲಿದೆ. ಕೌಟುಂಬಿಕವಾಗಿ ಸಂಭ್ರಮದ ಸಮಯವನ್ನು ಕಳೆಯಲಿದ್ದೀರಿ. ಮನೆಯ ಹಿರಿಯರೊಂದಿಗೆ ಹಳೆಯ ನೆನಪುಗಳನ್ನು ಮೆಲುಕು ಹಾಕುವಿರಿ. ನಿಮ್ಮ ವ್ಯಕ್ತಿತ್ವದಲ್ಲಿ ಹೊಸ ಆಕರ್ಷಣೆ ಹಾಗೂ ಬದಲಾವಣೆ ಕಂಡುಬರಲಿದ್ದು, ಸಾಮಾಜಿಕವಾಗಿ ನಿಮ್ಮ ಗೌರವ ಹೆಚ್ಚಲಿದೆ. ಆರ್ಥಿಕವಾಗಿ ಹಳೆಯ ಹೂಡಿಕೆಗಳಿಂದ ಸಣ್ಣ ಪ್ರಮಾಣದ ಲಾಭ ನಿರೀಕ್ಷೆ ಮಾಡಬಹುದು. ಮನೆಯ ಜವಾಬ್ದಾರಿಗಳನ್ನು ಹಂಚಿಕೊಳ್ಳುವ ಮೂಲಕ ಸಂಗಾತಿಯ ಮನ ಗೆಲ್ಲುವಿರಿ. ಮಕ್ಕಳೊಂದಿಗೆ ಸಮಯ ಕಳೆಯುವುದು ನಿಮಗೆ ಮಾನಸಿಕ ಒತ್ತಡದಿಂದ ಮುಕ್ತಿ ನೀಡಲಿದೆ. ಸಂಬಂಧಗಳ ವಿಚಾರದಲ್ಲಿ ನೀವು ತೆಗೆದುಕೊಳ್ಳುವ ನಿರ್ಧಾರಗಳು ಭವಿಷ್ಯದಲ್ಲಿ ದೊಡ್ಡ ಬದಲಾವಣೆ ತರಲಿವೆ. ಅತಿಯಾದ ಕೆಲಸದ ಒತ್ತಡ ಮೈ ಮೇಲೆ ಹಾಕಿಕೊಳ್ಳಬೇಡಿ, ವಿಶ್ರಾಂತಿಗೂ ಸಮಯವನ್ನು ಮೀಸಲಿಡಿ.
ಭಾವನಾತ್ಮಕವಾಗಿ ಸಮತೋಲನದಿಂದ ಕೂಡಿರುವ ದಿನ ಇದಾಗಿರಲಿದೆ. ಮನಸ್ಸು ಶಾಂತವಾಗಿದ್ದು, ಸೃಜನಾತ್ಮಕ ಕೆಲಸಗಳಲ್ಲಿ ತೊಡಗಿಸಿಕೊಳ್ಳಲು ಇಷ್ಟಪಡುವಿರಿ. ಮನೆಯಲ್ಲಿ ಶಾಂತಿ ಮತ್ತು ಸೌಹಾರ್ದತೆಯ ವಾತಾವರಣ ಇರುತ್ತದೆ. ನಿಮ್ಮ ಮೃದುವಾದ ಹಾಗೂ ಮನವೊಲಿಸುವ ರೀತಿಯ ಮಾತುಗಳು ಕೌಟುಂಬಿಕ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಲು ಸಹಾಯ ಮಾಡಲಿವೆ. ಸಂಗಾತಿಯಿಂದ ಅನಿರೀಕ್ಷಿತ ಬೆಂಬಲ- ಪ್ರೀತಿ ದೊರೆಯಲಿದೆ. ಪ್ರವಾಸದ ಯೋಜನೆಗಳಿದ್ದರೆ ಅವು ಕಾರ್ಯಗತವಾಗಲಿವೆ. ಹಣಕಾಸಿನ ವಿಚಾರದಲ್ಲಿ ತೃಪ್ತಿದಾಯಕ ವಾತಾವರಣವಿರುತ್ತದೆ. ಕಲೆ ಅಥವಾ ಸಾಹಿತ್ಯದ ಮೇಲೆ ಒಲವು ಹೆಚ್ಚಾಗಲಿದೆ. ಆರೋಗ್ಯದ ದೃಷ್ಟಿಯಿಂದ ಲಘು ಆಹಾರ ಸೇವನೆ ಮಾಡುವುದು ಉತ್ತಮ. ನಿಮ್ಮ ಆಪ್ತ ಸ್ನೇಹಿತರ ಭೇಟಿಯಿಂದ ಮನಸ್ಸಿಗೆ ಹೊಸ ಚೈತನ್ಯ ಸಿಗಲಿದೆ. ಸಣ್ಣಪುಟ್ಟ ಏರುಪೇರಾದಂಥ ವಿಷಯಗಳಿಗೆ ಹೆಚ್ಚು ತಲೆ ಕೆಡಿಸಿಕೊಳ್ಳದೆ ದಿನವನ್ನು ಆನಂದಿಸಿ.
ಜ್ಞಾನ ವೃದ್ಧಿಯಾಗುವ ದಿನ. ಅಂದರೆ ಈ ದಿನ ಸಮಯವನ್ನು ಸ್ವಲ್ಪವೂ ವ್ಯರ್ಥ ಮಾಡದೆ ಏನಾದರೂ ಹೊಸ ವಿಷಯ ಕಲಿಯಲು ಪ್ರಯತ್ನಿಸುವಿರಿ. ಮನೆಯಲ್ಲಿ ಧಾರ್ಮಿಕ ಅಥವಾ ಆಧ್ಯಾತ್ಮಿಕ ಕಾರ್ಯಕ್ರಮಗಳ ಬಗ್ಗೆ ಚರ್ಚೆ ಆಗಬಹುದು. ಹಿರಿಯರ ಮಾರ್ಗದರ್ಶನದಿಂದ ನಿಮ್ಮ ಜೀವನದ ಗೊಂದಲಗಳು ದೂರವಾಗಲಿವೆ. ಆರ್ಥಿಕವಾಗಿ ಸ್ಥಿತಿ ಸುಧಾರಿಸಲಿದ್ದು, ಸ್ಥಗಿತ ಆಗಿದ್ದ ಹಣಕಾಸಿನ ವ್ಯವಹಾರಗಳು ಚೇತರಿಕೆ ಕಾಣಲಿವೆ. ಸಮಾಜದಲ್ಲಿ ನಿಮ್ಮ ವ್ಯಕ್ತಿತ್ವಕ್ಕೆ ಮನ್ನಣೆ ಸಿಗಲಿದೆ. ನಿಮ್ಮಲ್ಲಿ ಕೆಲವರಿಗೆ ಗೌರವ- ಸನ್ಮಾನಗಳು ಆಗಬಹುದು. ಸಂಬಂಧಿಕರು ನಿಮ್ಮನ್ನು ಭೇಟಿ ಆಗುವದರಿಂದ ಮನೆಯಲ್ಲಿ ಸಂಭ್ರಮದ ವಾತಾವರಣವಿರುತ್ತದೆ. ಮಕ್ಕಳ ಶಿಕ್ಷಣ ಮತ್ತು ಭವಿಷ್ಯದ ಬಗ್ಗೆ ಮಹತ್ವದ ಯೋಜನೆ ರೂಪಿಸುವಿರಿ. ನಿಮ್ಮ ನೇರ ನಡೆ- ನುಡಿ ಎಲ್ಲರಿಗೂ ಇಷ್ಟವಾಗಲಿದೆ. ಆರೋಗ್ಯದ ಬಗ್ಗೆ ಕಾಳಜಿ ಇರಲಿ, ದೈಹಿಕ ವ್ಯಾಯಾಮ ಮರೆಯಬೇಡಿ.
ಹಲವು ಅನಿರೀಕ್ಷಿತ ಘಟನೆಗಳು ಈ ದಿನ ನಡೆಯಲಿವೆ. ಬಿಡುವಾಗಿ ಇರೋಣ ಅಥವಾ ವಿಶ್ರಾಂತಿ ಪಡೆಯೋಣ ಎಂದು ನೀವು ಅಂದುಕೊಂಡರೂ ಹಠಾತ್ ಪ್ರಯಾಣ ಅಥವಾ ಅತಿಥಿಗಳ ಆಗಮನ ಆಗಬಹುದು. ಮನೆಯಲ್ಲಿ ಕೆಲವು ತಾಂತ್ರಿಕ ಬದಲಾವಣೆ ಅಥವಾ ದುರಸ್ತಿ ಕೆಲಸಗಳಲ್ಲಿ ಮಗ್ನರಾಗುವಿರಿ. ನಿಮ್ಮ ಶಿಸ್ತುಬದ್ಧ ಜೀವನಶೈಲಿಯಿಂದ ಕುಟುಂಬದ ಕೆಲಸಗಳನ್ನು ಸುಲಭವಾಗಿ ಮುಗಿಸುವಿರಿ. ಆರ್ಥಿಕ ವಿಚಾರದಲ್ಲಿ ಇಂದು ಸ್ವಲ್ಪ ಎಚ್ಚರಿಕೆಯಿಂದ ಇರಿ, ಅನಗತ್ಯ ವೆಚ್ಚಗಳು ಬಜೆಟ್ ಏರುಪೇರು ಮಾಡಬಹುದು. ಇತರರ ವೈಯಕ್ತಿಕ ವಿಚಾರಗಳಲ್ಲಿ ತಲೆಹಾಕಬೇಡಿ, ಅದು ನಿಮ್ಮ ನೆಮ್ಮದಿ ಕೆಡಿಸಬಹುದು. ಹಳೆಯ ಹವ್ಯಾಸಗಳನ್ನು ಪುನರಾರಂಭಿಸಲು ಇದು ಸಕಾಲ. ಸಂಗಾತಿಯೊಂದಿಗೆ ಸಣ್ಣಪುಟ್ಟ ವಾದಗಳು ಬರಬಹುದು, ತಾಳ್ಮೆಯಿಂದ ವರ್ತಿಸಿ. ಹೊಸ ವಸ್ತುಗಳನ್ನು ಖರೀದಿಸುವ ಆಸೆ ಉಂಟಾಗಲಿದೆ. ದಿನದ ಕೊನೆಗೆ ಮಾನಸಿಕ ತೃಪ್ತಿ ಸಿಗುವಂತಹ ಕೆಲಸ ಮಾಡುವಿರಿ.
ಸಂತೋಷದ ಸುದ್ದಿ ಬರುವುದರಿಂದ ಅಥವಾ ನಿಮ್ಮದೇ ಸ್ವಭಾವದ ಕಾರಣಕ್ಕಾಗಿ ಅತ್ಯಂತ ಲವಲವಿಕೆಯ ದಿನ ಇದಾಗಿರುತ್ತದೆ. ಹಳೆಯ ಸ್ನೇಹಿತರೊಂದಿಗೆ ಮಾತುಕತೆ ನಡೆಸುವಿರಿ ಅಥವಾ ಅವರನ್ನು ಭೇಟಿ ಮಾಡುವಿರಿ. ನಿಮ್ಮ ಹಾಸ್ಯಪ್ರವೃತ್ತಿ ಮನೆಯಲ್ಲಿನ ವಾತಾವರಣವನ್ನು ಹಗುರಗೊಳಿಸಲಿದೆ. ವ್ಯಾಪಾರಸ್ಥರಿಗೆ ಕೆಲವು ಲಾಭದಾಯಕ ವ್ಯವಹಾರಗಳ ಬಗ್ಗೆ ಮಾತುಕತೆ ನಡೆಯುವ ಸಾಧ್ಯತೆ ಇದೆ. ಆರ್ಥಿಕವಾಗಿ ಶುಭದಿನವಾಗಿದ್ದು, ಹಣದ ಹರಿವು ಉತ್ತಮವಾಗಿರುತ್ತದೆ. ಹೊಸ ಯೋಜನೆಗಳ ಬಗ್ಗೆ ಆಲೋಚಿಸಲು ಮತ್ತು ಅವುಗಳನ್ನು ರೂಪಿಸಲು ಸೂಕ್ತ ಸಮಯ. ಪ್ರಯಾಣದ ಯೋಗವಿದ್ದು, ಅದು ನಿಮಗೆ ಉಲ್ಲಾಸ- ಉತ್ಸಾಹ ನೀಡಲಿದೆ. ಮಕ್ಕಳ ಪ್ರಗತಿಯಿಂದ ಮನಸ್ಸಿಗೆ ಸಂತೋಷವಾಗಲಿದೆ. ನಿಮ್ಮ ಮಾತುಗಳ ಮೇಲೆ ನಿಯಂತ್ರಣ ಇರಲಿ, ಇಲ್ಲದಿದ್ದರೆ ಆತ್ಮೀಯರ ಮನಸ್ಸಿಗೆ ನೀವಾಡುವ ಮಾತು- ಬಳಸುವ ಶಬ್ದಗಳಿಂದ ನೋವಾಗಬಹುದು. ಇನ್ನು ಹೊಸ ಹವ್ಯಾಸಗಳಿಗೆ ಸಮಯವನ್ನು ಮೀಸಲಿಡುತ್ತೀರಿ.
ಐಷಾರಾಮಿ ಮತ್ತು ಸುಖವಾಗಿ ದಿನ ಕಳೆಯುವಂಥ ಯೋಗ ನಿಮ್ಮ ಪಾಲಿಗೆ ಇದೆ. ಮನೆಯನ್ನು ಸುಂದರಗೊಳಿಸಲು ಅಥವಾ ಅಲಂಕಾರಿಕ ವಸ್ತುಗಳ ಖರೀದಿಗೆ ಹಣ ಖರ್ಚು ಮಾಡುವಿರಿ. ಪ್ರೀತಿಯಲ್ಲಿ ಇರುವವರಿಗೆ ರೋಮ್ಯಾಂಟಿಕ್ ಕ್ಷಣಗಳು ಕಳೆಯುವಂಥ ಅವಕಾಶ ದೊರೆಯಲಿದೆ. ನಿಮ್ಮ ಆಕರ್ಷಕ ವ್ಯಕ್ತಿತ್ವಕ್ಕೆ ಎಲ್ಲರೂ ಮಾರುಹೋಗಲಿದ್ದಾರೆ. ಕೌಟುಂಬಿಕ ಸಮಾರಂಭಗಳಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದ್ದು, ರುಚಿಕರವಾದ ಭೋಜನದ ಸವಿಯನ್ನು ಕುಟುಂಬದವರೊಂದಿಗೆ ಸವಿಯುವಿರಿ. ಆರ್ಥಿಕವಾಗಿ ಸ್ಥಿತಿ ಉತ್ತಮವಾಗಿದ್ದರೂ ಉಳಿತಾಯದ ಕಡೆಗೂ ಗಮನವಿರಲಿ. ಸ್ತ್ರೀಯರಿಂದ ನಿಮಗೆ ವಿಶೇಷ ಸಹಕಾರ ದೊರೆಯಲಿದೆ. ಆರೋಗ್ಯದಲ್ಲಿ ಸುಧಾರಣೆ ಇರಲಿದ್ದು, ಮನಸ್ಸು ಉತ್ಸಾಹದಿಂದ ಇರಲಿದೆ. ಸೃಜನಾತ್ಮಕ ಕೆಲಸಗಳಿಗೆ ಮನ್ನಣೆ ಸಿಗಲಿದೆ. ವಿವಾಹ ವಯಸ್ಕರಿಗೆ ಮನಸ್ಸಿಗೆ ಒಪ್ಪುವಂಥ ವ್ಯಕ್ತಿಯ ಪರಿಚಯ ಆಗಲಿದೆ. ಈ ದಿನ ನೀವು ಎಲ್ಲವನ್ನೂ ಪ್ರೀತಿಯ ಕಣ್ಣಿನಿಂದಲೇ ನೋಡುವಿರಿ.
ಆತ್ಮಾವಲೋಕನದ ದಿನ ಇದಾಗಿರಲಿದೆ. ಮುಂದಿನ ಯೋಜನೆಗಳು, ದೀರ್ಘಾವಧಿ ಕಾರ್ಯಗಳ ಅನುಷ್ಠಾನದ ಬಗ್ಗೆ ಚಿಂತಿಸುವುದಕ್ಕೆ ಏಕಾಂತದಲ್ಲಿ ಸಮಯ ಕಳೆಯಲು ಬಯಸುವಿರಿ. ದಿನದ ಎರಡನೇ ಭಾಗದಲ್ಲಿ ಆಧ್ಯಾತ್ಮಿಕ ಮತ್ತು ತಾತ್ವಿಕ ವಿಷಯಗಳ ಬಗ್ಗೆ ಓದಲು ಅಥವಾ ಚರ್ಚಿಸಲು ಆಸಕ್ತಿ ತೋರುವಿರಿ. ಹಣಕಾಸಿನ ವ್ಯವಹಾರಗಳಲ್ಲಿ ಯಾರನ್ನೂ ಅತಿಯಾಗಿ ನಂಬಬೇಡಿ, ಮೋಸ ಹೋಗುವ ಸಾಧ್ಯತೆ ಇದೆ. ನಿಮ್ಮ ಅಂತಃಪ್ರಜ್ಞೆ ಇಂದು ಬಹಳ ತೀಕ್ಷ್ಣವಾಗಿರಲಿದ್ದು, ಸರಿಯಾದ ನಿರ್ಧಾರ ತೆಗೆದುಕೊಳ್ಳಲು ಅದು ಸಹಾಯ ಮಾಡಲಿದೆ. ಮನೆಯಲ್ಲಿನ ಹಿರಿಯರೊಬ್ಬರ ಆರೋಗ್ಯದ ಬಗ್ಗೆ ಚಿಂತೆ ಕಾಡಬಹುದು. ಹಳೆಯ ನೆನಪುಗಳು ನಿಮ್ಮನ್ನು ಭಾವುಕರನ್ನಾಗಿ ಮಾಡಲಿದೆ. ಯೋಗ ಮತ್ತು ಧ್ಯಾನ ಮಾಡುವುದರಿಂದ ಮಾನಸಿಕ ನೆಮ್ಮದಿ ಸಿಗಲಿದೆ. ಟ್ರಾಫಿಕ್ ಮತ್ತಿತರ ಗದ್ದಲದಿಂದ ದೂರವಿದ್ದು ನಿಮ್ಮ ನೆಮ್ಮದಿಯನ್ನು ಕಂಡುಕೊಳ್ಳುವಿರಿ. ಪಾರದರ್ಶಕ- ನೇರವಂತಿಕೆಯಿಂದ ಮಾತನಾಡಲು ಪ್ರಯತ್ನಿಸಿ, ಅದು ನಿಮಗೆ ಗೌರವ ತರಲಿದೆ.
ಶಿಸ್ತು ಮತ್ತು ಜವಾಬ್ದಾರಿಗಾಗಿ ಇತರರ ಮೆಚ್ಚುಗೆಯನ್ನು ಪಡೆಯಲಿದ್ದೀರಿ. ಮನೆಯಲ್ಲಿನ ಬಾಕಿ ಕೆಲಸಗಳನ್ನು ಪೂರ್ಣಗೊಳಿಸಲು ಶ್ರಮ ಹಾಕಲಿದ್ದೀರಿ. ನ್ಯಾಯ ಮತ್ತು ಧರ್ಮದ ಬಗ್ಗೆ ನಿಮ್ಮ ನಿಲುವು ಕಟ್ಟುನಿಟ್ಟಾಗಿರಲಿವೆ. ಆಸ್ತಿ ಖರೀದಿ ಅಥವಾ ಹೂಡಿಕೆಯ ಬಗ್ಗೆ ಮನೆಯವರೊಂದಿಗೆ ಪ್ರಮುಖ ಚರ್ಚೆ ನಡೆಸುವಿರಿ. ಹಣಕಾಸಿನ ವ್ಯವಹಾರಗಳಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಿ. ಕೆಲಸದ ಒತ್ತಡದಿಂದ ಬೆನ್ನು ನೋವು ಅಥವಾ ಕತ್ತಿನ ನೋವು ಕಾಣಿಸಿಕೊಳ್ಳಬಹುದು, ಜಾಗರೂಕರಾಗಿರಿ. ಹಿರಿಯರ ಆಶೀರ್ವಾದ ಪಡೆಯುವುದರಿಂದ ಈ ತನಕ ನೀವು ಎದುರಿಸುತ್ತಾ ಬಂದಿದ್ದ ಅಡೆತಡೆಗಳು ನಿವಾರಣೆಯಾಗಲಿವೆ. ನಿಮ್ಮ ಸಂಯಮ ಮತ್ತು ಗಾಂಭೀರ್ಯವು ಮನೆಯ ಕಿರಿಯರಿಗೆ ಮಾದರಿಯಾಗಲಿದೆ. ಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ಮೂಲಕ ಮಾನಸಿಕ ತೃಪ್ತಿ ಪಡೆಯುವಿರಿ. ವ್ಯಾಪಾರ ವ್ಯವಹಾರ ಮಾಡುವವರಿಗೆ ನಿರೀಕ್ಷಿತ ಲಾಭ ದೊರೆಯುತ್ತದೆ.
ಯಾವುದೇ ಕಾರ್ಯದಲ್ಲಿ ತೊಡಗಿಕೊಳ್ಳಲು ಶಕ್ತಿ, ಉತ್ಸಾಹ ನಿಮ್ಮಲ್ಲಿ ಇರುತ್ತದೆ. ದೈಹಿಕ ಚಟುವಟಿಕೆಗಳ ಮೂಲಕವಾಗಿ ಸಕ್ರಿಯರಾಗಿರುವಿರಿ. ಮನೆಯಲ್ಲಿನ ಹಳೆಯ ವಿವಾದಗಳನ್ನು ಬಗೆಹರಿಸಲು ಈ ದಿನ ಸೂಕ್ತವಾಗಿದೆ. ಭೂಮಿಗೆ ಸಂಬಂಧಿಸಿದ ಅಥವಾ ರಿಯಲ್ ಎಸ್ಟೇಟ್ ವಿಚಾರಗಳಲ್ಲಿ ನಿಮ್ಮ ನಿರ್ಧಾರಗಳು ಲಾಭ ತರಲಿವೆ. ಕೋಪವನ್ನು ನಿಯಂತ್ರಿಸದಿದ್ದರೆ ಮನೆಯಲ್ಲಿನ ವಾತಾವರಣ ಹಾಳಾಗಬಹುದು, ಹಾಗಾಗಿ ಸಂಯಮದಿಂದಿರಿ. ಕ್ರೀಡೆ ಅಥವಾ ಸಾಹಸಮಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಿರಿ. ಸಹೋದರರೊಂದಿಗೆ ಬಾಂಧವ್ಯ ಸುಧಾರಿಸಲಿದ್ದು, ಅವರ ಸಹಕಾರದಿಂದ ನಿಮ್ಮ ಕಾರ್ಯಗಳು ಪೂರ್ಣಗೊಳ್ಳಲಿವೆ. ಆರ್ಥಿಕವಾಗಿ ಲಾಭದಾಯಕ ದಿನ ಇದಾಗಿರಲಿದೆ. ಹೊಸ ಉದ್ಯಮಗಳ ಬಗ್ಗೆ ಯೋಜನೆಗಳನ್ನು ಹಾಕಿಕೊಳ್ಳುವಿರಿ. ನಿಮ್ಮ ಧೈರ್ಯ ಮತ್ತು ಸಂಕಲ್ಪ ಶಕ್ತಿಯ ಕಾರಣದಿಂದ ನೀವು ಎಲ್ಲರಿಗಿಂತ ಮುಂದೆ ಇರಲಿದ್ದೀರಿ.
ಮೇಷ ರಾಶಿ :
ನಿಮ್ಮ ಸೂಕ್ಷ್ಮ ಮನಸ್ಸಿಗೆ ಭೇದಭಾವ ಬಿಸಿ ಬೇಗ ತಟ್ಟಬಹುದು. ಧಾರ್ಮಿಕತೆಯಲ್ಲಿ ಅಚಲವಾದ ಶ್ರದ್ಧೆ ಶಾಂತಿಯನ್ನು ತಾನಾಗಿಯೇ ನೀಡುತ್ತದೆ. ಆಸ್ತಿ ರಕ್ಷಣೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಿರಿ. ವೃತ್ತಿಯ ಸ್ಥಳದಲ್ಲಿ ನಿಮಗೆ ಕೆಲವು ಬದಲಾವಣೆಯು ಇರಲಿದೆ. ಸ್ನೇಹಿತನ ಮಾತಿನಿಂದ ಯಾರಿಗಾದರೂ ನೀವು ಹಣವನ್ನು ಕೊಡುವ ಸಂದರ್ಭವು ಬರಬಹುದು. ನಿಮ್ಮ ವಸ್ತುಗಳನ್ನು ರಕ್ಷಣೆ ಮಾಡಿಕೊಳ್ಳುವುದು ಉತ್ತಮ. ಶತ್ರುಗಳ ಬಗ್ಗೆ ತಿಳಿದುಕೊಳ್ಳುವ ಆಸಕ್ತಿ ಇರಲಿದೆ. ಅನಿರೀಕ್ಷಿತ ವಾರ್ತೆಯಿಂದ ನಿಮಗೆ ಬೇಸರವಾಗಬಹುದು. ಬಂಧುಗಳು ಪ್ರೀತಿಯನ್ನು ತೋರಿಸುವರು. ನಿಮ್ಮ ಪ್ರಾಮಾಣಿಕತೆಯ ಮಾರ್ಗವನ್ನು ಬಿಡುವುದು ಬೇಡ. ನಿಮಗೆ ಕೊಟ್ಟ ಜವಾಬ್ದಾರಿಯನ್ನು ಪೂರ್ಣ ಮಾಡುವಿರಿ. ಗೃಹನಿರ್ಮಾಣ ಸದ್ಯ ಕನಸಾಗಿ ಮುಂದುವರಿಯುವುದು. ನಿಮಗೆ ನ್ಯಾಯ ಸತ್ಯಕ್ಕಿಂತ ಹೆಚ್ಚಾಗಿ ಕರುಣೆಯಿಂದ ಲಭಿಸುತ್ತದೆ. ನೀವು ಮಾಡಿದ ತಪ್ಪಿನಿಂದ ತಪ್ಪಿಸಿಕೊಳ್ಳಲು ಉಪಾಯವನ್ನು ಮಾಡುವಿರಿ. ಸುಳ್ಳು ಹೇಳುವ ಸಂದರ್ಭವೂ ಬರಬಹುದು. ಸುಲಭವಾದ ಕಾರ್ಯವನ್ನು ಮೊದಲು ಮಾಡಿ ಮುಗಿಸಿ.
ವೃಷಭ ರಾಶಿ :
ನೀವು ಮಂಡಿಸುವ ವಿಚಾರದಲ್ಲಿ ಭಿನ್ನತೆ ಕಾಣಿಸಲಿದ್ದು ಭೇದಭಾವುಂಡಾಗಬಹುದು. ಧಾರ್ಮಿಕ ಮುಖಂಡತ್ವವನ್ನು ವಹಿಸಕೊಳ್ಳಬೇಕಾಗುವುದು. ಸೇವಾ ಕಾರ್ಯಗಳು ಸಮಾಜದಲ್ಲಿ ಗುರುತಿಸಲ್ಪಡುತ್ತವೆ. ನಿಮ್ಮ ಒಳ ಜಗಳವು ಬೀದಿಗೆ ಬರಬಹುದು. ಕೆಲವರನ್ನು ನೀವು ಸರಿಯಾಗಿ ಅಂದಾಜು ಮಾಡಲಾಗದು. ಸುಮ್ಮನೇ ಯಾರ ಬೆಂಬಲಕ್ಕೂ ನಿಲ್ಲಲು ಹೋಗುವುದು ಬೇಡ. ನೀವು ಕಾರ್ಯದಲ್ಲಿ ಮಗ್ನರಾಗಿದ್ದು ಯಾವ ವಿಷಯಕ್ಕೂ ಭಾಗಿಯಾಗಲಾರಿರಿ. ಬಂಧುಗಳ ಸ್ವಭಾವವು ಇಷ್ಟವಾಗಸೇ ಅವರ ಬಗ್ಗೆ ನೀವು ಆಡಿಕೊಳ್ಳುವಿರಿ. ಯಾರ ಮೇಲಾದರೂ ದೋಷಾರೋಪ ಮಾಡುವ ಸಂಭವವಿದೆ. ಬರುವ ಆದಾಯಕ್ಕೆ ವಿಘ್ನವು ಬರಬಹುದು. ಆಸ್ತಿ ವಿಷಯದಲ್ಲಿ ಹೊಸ ನಿರ್ಧಾರ ಮಾಡುವುದೇ ಉಚಿತ. ಹೂಡಿಕೆಯನ್ನು ಪ್ರತಿಷ್ಠೆಗಾಗಿ ಮಾಡುವಿರಿ. ಸ್ಪರ್ಧೆಯಲ್ಲಿ ತಂತ್ರಗಾರಿಕೆ ಫಲಿಸುವುದು. ಹಣದ ಆಮಿಷದಲ್ಲಿ ಸಿಕ್ಕಿಕೊಳ್ಳುವಿರಿ. ಯಾರಾದರೂ ಭೂಮಿಯನ್ನು ವಶಪಡಿಸಿಕೊಳ್ಳಲು ಯೋಚಿಸಬಹುದು. ತಾಳ್ಮೆಯನ್ನು ಕಳೆದುಕೊಳ್ಳದೇ ಪರಿಹಾರವನ್ನು ಕಂಡುಕೊಳ್ಳಿ.
ಮಿಥುನ ರಾಶಿ :
ದೀರ್ಘಕಾಲದ ಹೂಡಿಕೆಯ ಬಗ್ಗೆ ಗಮನವಿರುವುದು. ಗೃಹನಿರ್ಮಾಣ ಯೋಜಿತವಾಗಿ ನಡೆಯುತ್ತದೆ. ಸ್ಪರ್ಧೆಯಲ್ಲಿ ನೀವು ಹಾಕಿದ ಶ್ರಮಕ್ಕೆ ತಕ್ಕ ಫಲ. ಸತ್ಯ ಪ್ರಕಟವಾಗಲು ಸಮಯ ತೆಗೆದುಕೊಳ್ಳುತ್ತದೆ. ಉದ್ಯೋಗದಲ್ಲಿ ನಿಮ್ಮ ಕಣ್ತಪ್ಪಿನಿಂದ ಆದ ತಪ್ಪಿಗೆ ನೀವೇ ತಲೆಕೊಡಬೇಕಾದೀತು. ನಿಮಗೆ ಸಿಗುವ ಸೂಚನೆಗಳನ್ನು ಗಮನಿಸಿಕೊಂಡು ವ್ಯವಹಾರಾದಿಗಳನ್ನು ಮಾಡಿ. ಯಂತ್ರಜ್ಞರು ಇಂದು ಒತ್ತಡದಲ್ಲಿ ಇರುವರು. ಭೂಮಿಯ ವ್ಯವಹಾರದಲ್ಲಿ ಲಾಭವಾಗಲು ತಿರುಗಾಟವನ್ನು ಮಾಡಬೇಕಾಗಬಹುದು. ತುರ್ತು ಹಣವು ಬೇಕಾಗಿದ್ದು ಕಾರ್ಯಸ್ಥಳದ ಭೇದಭಾವ ಕಾಡಬಹುದು. ಧಾರ್ಮಿಕ ಆಚರಣೆ ಮನಸ್ಸಿಗೆ ನೆಮ್ಮದಿ. ಸೇವೆಯಿಂದ ವಿಶ್ವಾಸ ಗಳಿಸಿಕೊಳ್ಳುವಿರಿ. ಸ್ಥಿರಾಸ್ತಿ ಚೂರಾಗುವ ಸಾಧ್ಯತೆ ಇದೆ. ಯಾವ ಕಾರಣಕ್ಕೂ ಸಾಲವನ್ನು ಮಾಡಲು ಹೋಗುವುದು ಬೇಡ. ನಿಮ್ಮ ಕೌಶಲವನ್ನು ಪ್ರದರ್ಶಿಸಲು ಅವಕಾಶವಿದೆ. ನೀವು ಕಾರ್ಯದಲ್ಲಿ ಮಗ್ನರಾಗಿದ್ದು ಯಾವ ವಿಷಯಕ್ಕೂ ಭಾಗಿಯಾಗಲಾರಿರಿ.
ಕರ್ಕಾಟಕ ರಾಶಿ :
ಕುಟುಂಬದಲ್ಲಿ ವಿಚಾರಭೇದದಿಂದ ಅಸಮಾಧಾನ. ಧಾರ್ಮಿಕ ನಂಬಿಕೆಗಳು ದಾರಿ ತೋರಿಸುತ್ತವೆ. ಸೇವೆಯಲ್ಲಿ ನಿಮಗೆ ಸಂತೋಷ ಸಿಗುವುದು. ಆಸ್ತಿ ಸ್ಥಿರತೆಯ ಬಗ್ಗೆ ನಿಶ್ಚಯವಿರಲಿ. ಹೂಡಿಕೆ ವಿಸ್ತರಣೆ ಯೋಚನೆ ಮಾಡಬಹುದು. ಕಾನೂನಿನ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿಕೊಳ್ಳುವಿರಿ. ಆಸ್ತಿಯನ್ನು ಮಾಡುವ ಚಿಂತನೆ ಅಧಿಕವಾಗಿರುವುದು. ಹಠದ ಸ್ವಭಾವವು ಎಲ್ಲರ ಪ್ರೀತಿಯಿಂದ ನಿಮ್ಮನ್ನು ದೂರಮಾಡಬಹುದು. ನಿಮ್ಮವರ ಮೇಲೆ ಅನುಮಾನ ಸಕಾರಣಕ್ಕೆ ಆಗಿರಲಿ. ಇಂದು ಹಣಕಾಸಿನ ವ್ಯವಹಾರ ಮಾಡಲು ಧೈರ್ಯವು ಸಾಕಾಗದು. ಗೃಹನಿರ್ಮಾಣ ಶುಭಾರಂಭ. ವಿಳಂಬವಾದರೂ ಸ್ಪರ್ಧೆಗೆ ಅವಕಾಶ. ನ್ಯಾಯ ವಿಷಯದಲ್ಲಿ ಸತ್ಯದ ಪಕ್ಷವನ್ನು ಬಿಡುವುದು ಬೇಡ. ವಿವಾಹಕ್ಕೆ ಸಂಬಂಧಿಸಿದಂತೆ ನಿಮ್ಮ ನಿರ್ಧಾರವನ್ನು ಸ್ಪಷ್ಟವಾಗಿ ತಿಳಿಸಿ, ಗೊಂದಲ ಬೇಡ. ಹೆದರಿಸಿ ವಸ್ತುವನ್ನು ಪಡೆಯುವಿರಿ. ನಿಮ್ಮ ಇಷ್ಟವಾದ ವಸ್ತುವು ಕಣ್ಮೆಯಾರಿಗಿರುವುದು ಇಂದು ಗೊತ್ತಾಗುವುದು.
ಸಿಂಹ ರಾಶಿ :
ಗುಪ್ತ ವಿರೋಧದಿಂದ ನಿಮಗೆ ಬೇಸರ. ಧಾರ್ಮಿಕ ಕಾರ್ಯದಿಂದ ಮನೋಬಲ ಹೆಚ್ಚಿಸುತ್ತದೆ. ಸೇವೆ ಆತ್ಮಶಕ್ತಿ ಜಾಗೃತಗೊಳಿಸುತ್ತದೆ. ಆಸ್ತಿ ರಕ್ಷಣೆಗೆ ಇನ್ನೊಬರಿಂದ ಎಚ್ಚರಿಕೆ ಬರಲಿದೆ. ಇಂದು ಸಿಕ್ಕಿದ್ದರಲ್ಲಿ ಸಂತೃಪ್ತಿಯಿಂದ ಅನುಭವಿಸುವುದು ಅವಶ್ಯಕ. ಪಕ್ಷಪಾತ ಸ್ವಭಾವದಿಂದ ಒಂಟಿಯಾಗುವ ಸಾಧ್ಯತೆ ಇದೆ. ನಿಮ್ಮನ್ನು ನೋಡು ದೃಷ್ಟಿಯು ಇದರಿಂದ ಬದಲಾದೀತು. ನೂತನ ಉದ್ಯಮಕ್ಕೆ ಹೆಚ್ಚು ಆದ್ಯತೆ ಇರಲಿದೆ. ಕುಟುಂಬದಲ್ಲಿ ನಿಮ್ಮ ಪ್ರತಿ ಮಾತನ್ನು ಅನೇಕ ಅರ್ಥದಲ್ಲಿ ಗ್ರಹಿಸಬಹುದು. ಮೇಲಧಿಕಾರಿಗಳ ಜೊತೆ ನಿಮ್ಮ ಒಡನಾಟವನ್ನು ಚೆನ್ನಾಗಿಟ್ಟುಕೊಳ್ಳಿ. ನಿಮ್ಮ ಇಂದಿನ ಗುರಿಯನ್ನು ಸ್ಪಷ್ಟ ಮಾಡಿಕೊಂಡಿರಿ. ಇಂದಿನ ಹೂಡಿಕೆ ಅಪಾಯಕಾರಿ ಅನುಭವ ಕೊಡುವುದು. ಗೃಹನಿರ್ಮಾಣ ವಿಳಂಬ. ಸ್ಪರ್ಧೆಯಲ್ಲಿ ತೀವ್ರತೆ. ನ್ಯಾಯ ಕಠಿಣ ಪರಿಶ್ರಮದಿಂದ ಸಿಗುತ್ತದೆ. ಕೆಲವು ರಾಜಕೀಯ ವ್ಯಕ್ತಿಗಳ ಪ್ರೇರಣೆಯಿಂದ ನೀವೂ ರಾಜಕೀಯಕ್ಕೆ ಬರುವಿರಿ. ನಿಮ್ಮದೇ ಕೆಲಸವಾದರೂ ನಿಮಗೆ ಅದರ ಸಂಪೂರ್ಣ ಯಶಸ್ಸು ಸಿಗದು. ಮುಖಪ್ರೇಕ್ಷಕತ್ವ ಒಳ್ಳೆಯದಲ್ಲ.
ಕನ್ಯಾ ರಾಶಿ :
ಆಸ್ತಿ ವಿಚಾರದಲ್ಲಿ ಸಂಧಾನ ಸಾಧ್ಯ. ಹೂಡಿಕೆಯಿಂದ ಸಮಾಧಾನಕರ ಲಾಭ. ಗೃಹನಿರ್ಮಾಣ ಬಗ್ಗೆ ಚರ್ಚೋಪಚರ್ಚೆಗಳು ನಡೆಯುವುದು. ಸ್ಪರ್ಧೆಯಲ್ಲಿ ಸಮಾನ ಪೈಪೋಟಿ. ಸ್ನೇಹಿತರ ವಿವಾಹವನ್ನು ನೀವೇ ಮುಂದೆ ನಿಂತು ಮಾಡಿಸುವಿರಿ. ಮಾನಸಿಕವಾಗಿ ಯಾರನ್ನೂ ಕೊಲ್ಲುವುದು ಬೇಡ. ಸ್ನೇಹಿತರ ಮೇಲೆ ಕೂಗಾಡುವಷ್ಟು ಸಲುಗೆ ಬೇಡ. ಉದ್ಯೋಗದಲ್ಲಿ ಒತ್ತಡವನ್ನು ನಿವಾರಿಸಿಕೊಳ್ಳಲು ಯಾರದ್ದಾದರೂ ಸಹಾಯವನ್ನು ಪಡೆಯುವಿರಿ. ನಿಮಗೆ ಸಿಗಬೇಕಾದ ಗೌರವವು ಗೊಂದಲದಲ್ಲಿ ಇದ್ದು ಕೊನೆಗೂ ನಿಮಗೇ ಸಿಗಲಿದೆ. ಸಮತೋಲನ ಕಳೆದುಕೊಂಡರೆ ಭೇದಭಾವ ಅನುಭವ. ಧಾರ್ಮಿಕ ಚಿಂತನೆ ಸಮಾಧಾನ. ಸೇವೆ ಮಾನ ಹೆಚ್ಚಿಸುತ್ತದೆ. ನ್ಯಾಯ ಸಮಾಧಾನದಿಂದ ಸಿಗುತ್ತದೆ. ಹಿರಿಯರ ಜೊತೆ ಕಳೆದ ಸಮಯವು ನಿಮಗೆ ಉಪಯೋಗಕ್ಕೆ ಬರಲಿದೆ. ನಿಮ್ಮ ಆರ್ಥಿಕ ವ್ಯವಸ್ಥೆಯನ್ನು ಸರಿಮಾಡಿಕೊಳ್ಳಿ. ಹಣಕಾಸಿನ ದಾಖಲೆಗಳನ್ನು ಜೋಪಾನವಾಗಿ ಇಟ್ಟುಕೊಳ್ಳಿ. ಯಾರ ಮಾತನ್ನೂ ಕೇಳುವ ಸಹನೆ ಇಲ್ಲವಾದೀತು.
ತುಲಾ ರಾಶಿ :
ಸಣ್ಣ ವಿಷಯಗಳಿಂದ ಮನಸ್ತಾಪ ಮೂಡಬಹುದು. ಧಾರ್ಮಿಕ ಶಿಸ್ತಿನಿಂದ ಗೌರವ ಪ್ರಾಪ್ತಿ. ಸೇವಾ ಮನೋಭಾವದಿಂದ ಪ್ರಶಂಸೆ ತರುತ್ತದೆ. ಆಸ್ತಿ ಲೆಕ್ಕಾಚಾರ ಮುಖ್ಯ. ಕಛೇರಿಯ ಕಾರ್ಯವು ಕುಂಟುತ್ತ ಸಾಗುವುದು. ಮನೆಯಲ್ಲಿ ನಿಮ್ಮ ಬಗ್ಗೆ ಏನಾದರೂ ಮಾತುಗಳು ಬರಬಹುದು. ಧಾರ್ಮಿಕ ಕಾರ್ಯದಲ್ಲಿ ಅಡಚಣೆ ಆಗಬಹುದು. ಕೆಲವು ವಿಚಾರದಲ್ಲಿ ನಿಮಗೆ ಸೂಕ್ಷ್ಮತೆಯು ಇರಬೇಕಾಗುವುದು. ನಿಮ್ಮದೇ ಆದ ದಾರಿಯಲ್ಲಿ ನೀವು ಸಾಗುವಿರಿ. ಕ್ಷಮಾದಾನವೂ ಇಂದು ಅಸ್ತ್ರವಾಗಬಹುದು. ವಿದ್ಯಾರ್ಥಿಗಳು ಓದಿನ ಬಗ್ಗೆ ಗಮನವನ್ನು ಕೊಡುವುದು ಕಷ್ಟವಾಗಬಹುದು. ಹೂಡಿಕೆಯಲ್ಲಿ ವಿವರ ಪರಿಶೀಲನೆ. ಗೃಹ ಯೋಜನೆ ನಿಧಾನಗತಿಯಲ್ಲಿ ಸಾಗುವುದು. ಸ್ಪರ್ಧೆಯಲ್ಲಿ ತಂತ್ರಗಾರಿಕೆಯಿಂದ ಜಯ. ನ್ಯಾಯಕ್ಕೆ ತಾಳ್ಮೆ ಅಗತ್ಯ. ಆಮಿಷಕ್ಕೆ ಒಳಗಾಗಿ ಸಿಕ್ಕಿಬೀಳಬಹುದು. ವಿದೇಶೀ ವ್ಯಾಪಾರದಿಂದ ಅಲ್ಪ ಲಾಭವಾಗಲಿದೆ. ಉದ್ಯೋಗದಲ್ಲಿ ನಿಮಗೆ ಮನಸ್ಸು ಖಿನ್ನವಾಗುವುದು. ಇಂದು ನೀವು ಹಣವನ್ನು ಉಳಿಸಿಕೊಳ್ಳಲು ಸಮಸ್ಯೆಯೇ ಆಗಬಹುದು.
ವೃಶ್ಚಿಕ ರಾಶಿ :
ಸೇವೆಯಿಂದ ನಾಯಕತ್ವ ಪ್ರಾಪ್ತಿಯಾಗಲಿದೆ. ಹೂಡಿಕೆಯಲ್ಲಿ ಲಾಭದ ಸೂಚನೆ. ಸ್ಪರ್ಧೆಯಲ್ಲಿ ಮೇಲುಗೈ ಸಾಧಿಸುವಿರಿ. ನ್ಯಾಯ ವಿಷಯದಲ್ಲಿ ಧೈರ್ಯ ಅಗತ್ಯ. ಮಕ್ಕಳ ಪ್ರೀತಿಯಲ್ಲಿ ನೀವು ಕಳೆದುಹೋಗುವಿರಿ. ಉದ್ಯೋಗಕ್ಕಾಗಿ ನೀವು ವಿದೇಶಕ್ಕೆ ತೆರಳುವ ಆಸೆ ಇರಲಿದೆ. ಸಂಗಾತಿಯ ವಿಷಯದಲ್ಲಿ ವಾಗ್ವಾದ ನಡೆಯಲಿದೆ. ಮಕ್ಕಳಿಂದ ನಿಮಗೆ ಅಸಮಾಧಾನ ಇರಲಿದೆ. ನಿಮ್ಮ ಹಳೆಯ ಸಮಸ್ಯೆಯನ್ನು ಸರಿಮಾಡಿಕೊಳ್ಳುವಿರಿ. ದೇಹದೊಳಗೆ ಆದ ಗಾಯವು ಹೊರಗೆ ಕಾಣಿಸಿಕೊಳ್ಳುವುದು. ವಾಹನ ವಿಚಾರವಾಗಿ ಮನೆಯಲ್ಲಿ ಕಲಹವಾಗುವುದು. ಸಂಗಾತಿಯ ಮಾತಿಗೆ ಏನಾದರೂ ಪ್ರತಿಕ್ರಿಯೆಯನ್ನು ನೀಡಿ. ನಿಮ್ಮ ಅಹಂಕಾರದಿಂದ ಭೇದಭಾವ ಉಂಟಾಗದಂತೆ ಎಚ್ಚರ. ಧಾರ್ಮಿಕ ವಿಧಿಗಳು ಶಾಂತಿ ತರುತ್ತವೆ. ಸಾಮಾಜಿಕ ಕಾರ್ಯದಿಂದ ನಿಮಗೆ ಹೆಸರು ಬರಲಿದೆ. ನಂಬಿಕೆಗಳನ್ನು ಮೀರಿ ಏನನ್ನೂ ಮಾಡಲಾರಿರಿ. ನಿಮ್ಮ ಉತ್ಸಾಹವನ್ನು ಶತ್ರುಗಳು ನಿರುತ್ಸಾಹಗೊಳಿಸುವೆರು.
ಧನು ರಾಶಿ :
ಆಸ್ತಿಗೆ ರಕ್ಷಣೆ ಕ್ರಮವಹಿಸುವುದು ಸೂಕ್ತ. ಹೂಡಿಕೆ ದೀರ್ಘಾವಧಿಗೆ ಒಳ್ಳೆಯದು. ಗೃಹನಿರ್ಮಾಣ ಅರ್ಧಕ್ಕೆ ತಾತ್ಕಾಲಿಕವಾಗಿ ನಿಲ್ಲುವುದು. ಸ್ಪರ್ಧೆಯಲ್ಲಿ ಆತ್ಮವಿಶ್ವಾಸ ಹೊರಗಿನಿಂದ ಬರಲಿದೆ. ನ್ಯಾಯ ನಿಧಾನವಾಗಿ ಸಿಗುತ್ತದೆ. ಸ್ತ್ರೀಯರು ಇಂದಿನ ವ್ಯಾಪಾರದಲ್ಲಿ ಅಧಿಕ ಲಾಭವನ್ನು ಗಳಿಸುವರು. ಚಿಂತಕರ ಜೊತೆ ಮಂಥನ ಮಾಡುವುದಕ್ಕೆ ಈ ದಿನ ಆಗುವುದು. ಎಷ್ಟೋ ಕಾಲದ ಅನಂತರ ನೀವು ಮಿತ್ರನನ್ನು ಭೇಟಿಯಾಗುವಿರಿ. ಅನ್ನಿಸಿದ್ದನ್ನು ನೇರವಾಗಿ ಹೇಳುವುದು ಬೇಡ. ಸಮಯಕ್ಕಾಗಿ ಕಾದು ನೋಡಿ. ದಿನಚರಿಯನ್ನು ಬದಲಾಯಿಸಿಕೊಳ್ಳುವುದು ಬೇಕಾಗಬಹುದು. ಭಾವನಾತ್ಮಕವಾಗಿ ಭೇದಭಾವ ನೋವು ಕೊಡಬಹುದು. ಧಾರ್ಮಿಕ ಆಚರಣೆ ಧೈರ್ಯ ನೀಡುತ್ತದೆ. ಸೇವೆಯಿಂದ ಹೃದಯ ಹಗುರ. ಇಂದು ಕಡಿಮೆ ಕಾರ್ಯದಲ್ಲಿ ಹೆಚ್ಚು ಲಾಭವನ್ನು ನಿರೀಕ್ಷಿಸುವಿರಿ. ಜಾಣತನದಿಂದ ಇಂದಿನ ಕಾರ್ಯವನ್ನು ಮಾಡುವಿರಿ. ಹಣಕಾಸಿನ ವ್ಯವಸ್ಥೆಯನ್ನು ಸರಿ ಮಾಡಿಕೊಳ್ಳುವುದು ಸೂಕ್ತ. ಅರ್ಧ ಪ್ರಯಾಣ ಮಾಡಿ ಮನೆಗೆ ಹಿಂದಿರುಗುವಿರಿ.
ಮಕರ ರಾಶಿ :
ಮಾತಿನಲ್ಲಿ ನಿಮಗೆ ಭೇದಭಾವ ಮಾಡುವ ಅನುಭವವಾಗಲಿದೆ. ಧಾರ್ಮಿಕ ಚಿಂತನೆಯ ಗೊಂದಲವನ್ನು ಮನಸ್ಸು ಸರಿಪಡಿಸುತ್ತದೆ. ಸೇವಾಭಾವದಿಂದ ಸ್ನೇಹ ವೃದ್ಧಿ. ನೀವು ಇಂದು ಸ್ವಂತ ವಾಹನವನ್ನು ಬಾಡಿಗೆ ಕೊಡುವಿರಿ. ಇರುವ ಸಾಲವನ್ನು ತೀರಿಸಿಕೊಳ್ಳಲುಬೇಕಾದ ಯೋಜನೆ ಮಾಡಿ. ಪ್ರೇಮವನ್ನು ಮತ್ತಾವುದೋ ರೀತಿಯಲ್ಲಿ ಪಡೆಯುವಿರಿ. ಯಾವ ಕಾರಣಕ್ಕೂ ಸಾಲವನ್ನು ಮಾಡಲು ಹೋಗುವುದು ಬೇಡ. ಸಂಬಂಧಿಕರನ್ನೇ ಪಾಲುದಾರಿಕೆಯಲ್ಲಿ ಇಟ್ಟಕೊಳ್ಳುವಿರಿ. ಸರ್ಕಾರದಿಂದ ಆಗಬೇಕಾದ ಕಾರ್ಯಕ್ಕೆ ಹೆಚ್ಚು ಓಡಾಟ ಮಾಡಬೇಕಾದೀತು. ಆಸ್ತಿ ಹಾಗೂ ದಾಖಲೆಯ ಪರಿಶೀಲನೆ ಅಗತ್ಯ. ಹೂಡಿಕೆಯಲ್ಲಿ ಅಪಾಯ ತಪ್ಪಿಸಿ. ಗೃಹನಿರ್ಮಾಣ ಯೋಚನೆ ಅಧಿಕವಾಗಲಿ. ನ್ಯಾಯ ವಿಚಾರದಲ್ಲಿ ಸಂಯಮ ಅವಶ್ಯಕ. ಭೂಮಿಯ ವ್ಯವಹಾರದಿಂದ ಲಾಭವಿಲ್ಲದಿದ್ದರೂ ಅದನ್ನೇ ನಡೆಸಲು ಇಷ್ಟಪಡುವಿರಿ. ಸುಖವಾದ ಜೀವನಕ್ಕೆ ಸರಳ ಸೂತ್ರವನ್ನು ಬಳಸಿ.
ಕುಂಭ ರಾಶಿ :
ಸೇವೆಯಿಂದ ಮನಸ್ಸಿಗೆ ನಿಶ್ಚಲತೆ. ಆಸ್ತಿ ವಿಷಯದಲ್ಲಿ ಕುಟುಂಬದ ಬೆಂಬಲ. ಹೂಡಿಕೆ ನಿಧಾನವಾಗಿರಲಿ. ಗೃಹ ಯೋಜನೆ ರೂಪುಗೊಳ್ಳುತ್ತದೆ. ಸ್ಪರ್ಧೆಯಲ್ಲಿ ಸ್ಥೈರ್ಯ ಬೇಕು. ನಿಮ್ಮ ನಿರೀಕ್ಷೆಯು ಹುಸಿಯಾಗುವುದು. ಧನಸಂಪಾದನೆಯ ಚಿಂತೆ ಇರಲಿದೆ. ಆಲಸ್ಯದಿಂದ ನಿಮ್ಮ ಸಾಮರ್ಥ್ಯವು ಕಡಿಮೆ ಆಗಲಿದೆ. ಮಕ್ಕಳಿಗೆ ಬೇಕಾದ ವಸ್ತುಗಳನ್ನು ಕೊಡಿಸುವಿರಿ. ಇನ್ನೊಬ್ಬರ ಮೇಲೆ ದೂರು ಹಾಕಲು ಮುಜುಗರವಾಗದು. ಸಂಗಾತಿಯಿಂದ ಅಧಿಕ ಸಂಪತ್ತನ್ನು ನಿರೀಕ್ಷಿಸುವಿರಿ. ತಾಯಿಯ ಪ್ರೀತಿಯು ನಿಮಗೆ ಸಿಗಲಿದೆ. ಏಕಮುಖವಾದ ನಿರ್ಧಾರದಿಂದ ಸಫಲತೆಯು ಇರದು. ಸಣ್ಣ ವಿಚಾರಗಳಿಗೂ ಸಿಟ್ಟಾಗುವುದನ್ನು ಕಡಿಮೆ ಮಾಡಿ. ವೇತನದ ಅಸಮಾನತೆ ಕಂಡು ಬೇಸರವಾಗಬಹುದು. ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸಿದರೆ ಸಮಾಧಾನ. ನ್ಯಾಯ ನಿಮ್ಮತ್ತ ವಾಲುವ ಸೂಚನೆ. ಅಪರಿಚಿತರ ಸಹವಾಸವು ನಿಮ್ಮಲ್ಲಿ ಬೇಡದ ಭಾವವನ್ನು ಕೊಡಬಹುದು. ಎಲ್ಲವನ್ನೂ ಒಬ್ಬರೇ ಮಾಡುವ ಉತ್ಸಾಹವು ಇದ್ದರೂ ಮತ್ತೊಬ್ಬರ ಸಹಕಾರವನ್ನು ಪಡೆದು ಕಾರ್ಯವನ್ನು ಪೂರ್ಣಗೊಳಿಸಿ.
ಮೀನ ರಾಶಿ :
ಭೇದಭಾವದ ಅನುಭವದಿಂದ ಮನಸ್ಸು ಕಲುಷಿತವಾಗಬಹುದು. ಧಾರ್ಮಿಕ ಆಚರಣೆ ಶಾಂತಿ ನೀಡುತ್ತದೆ. ಸೇವಾಮನೋಭಾವದಿಂದ ಗೌರವ ಸಿಗುತ್ತದೆ. ಆಸ್ತಿ ರಕ್ಷಣೆ ಅಗತ್ಯ. ಇಂದು ನಿಮಗೆ ಧಾರ್ಮಿಕ ಕಾರ್ಯಗಳಿಂದ ನಿಮ್ಮ ಹಣದ ಸಂಪಾದನೆಯಾಗಲಿದೆ. ಮನೋವಿಕಾರಕ್ಕೆ ಆಸ್ಪದ ಕೊಡುವುದು ಬೇಡ. ನಿಮಗೆ ಸೂಚಿತ ದಿಕ್ಕಿನಲ್ಲಿ ತೆರಳಿ ಕಾರ್ಯವನ್ನು ಸಾಧಿಸಿಕೊಳ್ಳಿ. ಸುಮ್ಮನೇ ಒತ್ತಡವಿದ್ದಂತೆ ತೋರಿಸುವಿರಿ. ಕೆಲವು ಸಾಧನೆಗೆ ನಿಯಂತ್ರಣ ಅವಶ್ಯಕ. ಅತಿಥಿಗಳ ಸತ್ಕಾರವನ್ನು ಮಾಡುವಿರಿ. ಸಂಗಾತಿಯ ಜೊತೆ ಸರಸದಿಂದ ಕಾಲ ಕಳೆಯುವಿರಿ. ಮಕ್ಕಳ ಕಾರ್ಯವು ಹೆಮ್ಮೆ ಎನಿಸುವುದು. ಹೂಡಿಕೆಯಲ್ಲಿ ಜಾಗರೂಕತೆ ವಹಿಸಿ. ಗೃಹನಿರ್ಮಾಣ ಚಿಂತನೆ ಮೂಡುತ್ತದೆ. ಸ್ಪರ್ಧೆಯಲ್ಲಿ ಶ್ರಮ ಫಲಿಸುತ್ತದೆ. ನ್ಯಾಯ ವಿಳಂಬವಾದರೂ ಸತ್ಯ ಜಯಿಸುತ್ತದೆ. ಯಾವುದನ್ನೂ ತೋರಿಕೆಗೆ ಮಾಡುವುದು ಬೇಡ. ಕಳೆದ ವ್ಯರ್ಥ ಕಾಲವನ್ನು ಮತ್ತೆ ಸೇರಿಸಲಗಾದು ಎಂದು ವ್ಯಥೆಪಡುವುದು ಬೇಡ. ಮುಂದಿನದ್ದರ ಬಗ್ಗೆ ಆಲೋಚಿಸಿ. ನಿಮ್ಮ ಮಾತಿನಿಂದ ಕುಟುಂಬದ ಕೆಲವು ಸಮಸ್ಯೆಯು ದೂರಾಗುವುದು.
24 ಡಿಸೆಂಬರ್ 2025ರ ಪಂಚಾಂಗ:
ಶಾಲಿವಾಹನ ಶಕೆ 1948ರ ವಿಶ್ವಾವಸು ಸಂವತ್ಸರದ ದಕ್ಷಿಣಾಯನ, ಋತು : ಹೇಮಂತ, ಚಾಂದ್ರ ಮಾಸ : ಪೌಷ, ಸೌರ ಮಾಸ : ಧನು, ಮಹಾನಕ್ಷತ್ರ : ಮೂಲಾ, ವಾರ : ಗುರು, ಪಕ್ಷ : ಶುಕ್ಲ, ತಿಥಿ : ಪಂಚಮೀ, ನಿತ್ಯನಕ್ಷತ್ರ : ಧನಿಷ್ಠ, ಯೋಗ : ವಜ್ರ, ಕರಣ : ಬಾಲವ, ಸೂರ್ಯೋದಯ – 06 – 47 am, ಸೂರ್ಯಾಸ್ತ – 06 – 02 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 13:49 – 15:13, ಯಮಗಂಡ ಕಾಲ 06:47 – 08:11, ಗುಳಿಕ ಕಾಲ 09:36 – 11:00