ಡ್ಯಾರಿಲ್ ಮಿಚೆಲ್ ಭಾರತದ ವಿರುದ್ಧ ಶತಕ ಗಳಿಸಿದಾಗಲೆಲ್ಲಾ 130 ಅಥವಾ ಅದಕ್ಕಿಂತ ಹೆಚ್ಚು ರನ್ ಗಳಿಸಿದ್ದಾರೆ ಎಂಬುದು ಗಮನಾರ್ಹ. ಅವರ ಕೊನೆಯ ಮೂರು ಸ್ಕೋರ್‌ಗಳು 130, 134 ಮತ್ತು ಅಜೇಯ 131 ಆಗಿದೆ. ಈ ಮೂಲಕ ಭಾರತದ ವಿರುದ್ಧ ಏಕದಿನ ಪಂದ್ಯಗಳಲ್ಲಿ ನಾಲ್ಕು ಬಾರಿ 130 ಅಥವಾ ಅದಕ್ಕಿಂತ ಹೆಚ್ಚು ರನ್ ಗಳಿಸಿದ ವಿಶ್ವದ ಮೊದಲ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ.
ನವದೆಹಲಿ, ಜನವರಿ 18: ಗ್ರೀನ್ಲ್ಯಾಂಡ್ ಅನ್ನು ಕೊಡಲು ಒಪ್ಪದ ಡೆನ್ಮಾರ್ಕ್ ದೇಶದ ಪರವಾಗಿ ನಿಂತಿರುವ ಕೆಲ ಐರೋಪ್ಯ ದೇಶಗಳ ಮೇಲೆ ಡೊನಾಲ್ಡ್ ಟ್ರಂಪ್ (Donald Trump) ಶೇ. 10ರಷ್ಟು ಟ್ಯಾರಿಫ್ ಪ್ರಕಟಿಸಿದ್ದಾರೆ. ಫೆಬ್ರುವರಿ 1ರಿಂದ ಈ ಟ್ಯಾರಿಫ್ ಜಾರಿಗೆ ಬರುತ್ತದೆ. ಜೂನ್ 1ರಿಂದ ಈ ಟ್ಯಾರಿಫ್ ಶೇ. 25ಕ್ಕೆ ಏರಲಿದೆ. ಗ್ರೀನ್ಲ್ಯಾಂಡ್ ದಕ್ಕುವವರೆಗೂ ಯೂರೋಪಿಯನ್ ದೇಶಗಳ ಮೇಲಿನ ಈ ಟ್ಯಾರಿಫ್ ಕ್ರಮ ಮುಂದುವರಿಯುತ್ತದೆ ಎಂದು ಟ್ರಂಪ್ ಎಚ್ಚರಿಕೆ ಕೊಟ್ಟಿದ್ದಾರೆ.
ಅಮೆರಿಕದ ನಿಲುವನ್ನು ಖಂಡಿಸಿದ ಯೂರೋಪ್
ಡೆನ್ಮಾರ್ಕ್, ನಾರ್ವೆ, ಸ್ವೀಡನ್, ಫ್ರಾನ್ಸ್, ಜರ್ಮನಿ, ಯುಕೆ (ಬ್ರಿಟನ್), ದಿ ನೆದರ್ಲ್ಯಾಂಡ್ಸ್ ಮತ್ತು ಫಿನ್ಲ್ಯಾಂಡ್ ದೇಶಗಳು ಗ್ರೀನ್ಲ್ಯಾಂಡ್ ವಿಚಾರವಾಗಿ ಅಮೆರಿಕದ ನಿಲುವಿಗೆ ವಿರುದ್ಧವಾಗಿ ನಿಂತಿವೆ. ಈ ಎಂಟು ಯೂರೋಪಿಯನ್ ದೇಶಗಳಿಗೆ ಸದ್ಯ ಟ್ರಂಪ್ ಟ್ಯಾರಿಫ್ ಪ್ರಕಟಿಸಿದ್ದಾರೆ. ಮುಂದೆ ಇದು ಎಲ್ಲಾ ಐರೋಪ್ಯ ದೇಶಗಳಿಗೆ ಜಾರಿಯಾಗಬಹುದು. ಅಮೆರಿಕದ ಈ ಟ್ಯಾರಿಫ್ ಬೆದರಿಕೆ ಕ್ರಮವನ್ನು ಐರೋಪ್ಯ ಒಕ್ಕೂಟದ ಮುಖಂಡರು ಖಂಡಿಸಿದ್ದಾರೆ.
ಯೂರೋಪಿಯನ್ ಯೂನಿಯನ್ನಲ್ಲಿ 27 ಸದಸ್ಯ ದೇಶಗಳಿವೆ. ಇಂದು ಭಾನುವಾರ ತುರ್ತು ಸಭೆ ಕರೆದು ಚರ್ಚಿಸಲಾಯಿತು. ಐರೋಪ್ಯ ದೇಶಗಳ ಮೇಲೆ ಟ್ಯಾರಿಫ್ ಹಾಕುವ ಅಮೆರಿಕದ ನಿರ್ಧಾರ ತಪ್ಪು. ಟ್ಯಾರಿಫ್ ಬೆದರಿಕೆ ಮೂಲಕ ತಮ್ಮನ್ನು ಬ್ಲ್ಯಾಕ್ಮೇಲ್ ಮಾಡಲು ಯತ್ನಿಸಿದರೆ ಬಗ್ಗುವುದಿಲ್ಲ ಎಂದು ಇಯು ಹಾಗೂ ಯುಕೆ ಸ್ಪಷ್ಟಪಡಿಸಿವೆ. ಐರೋಪ್ಯ ಒಕ್ಕೂಟದಲ್ಲಿ ಬ್ರಿಟನ್ ಸದಸ್ಯ ದೇಶವಲ್ಲ. ಆದರೂ ಗ್ರೀನ್ಲ್ಯಾಂಡ್ ವಿಚಾರವಾಗಿ ಐರೋಪ್ಯ ದೇಶಗಳ ನಿಲುವಿಗೆ ಬ್ರಿಟನ್ ಬೆಂಬಲವಾಗಿ ನಿಂತಿದೆ.
ಯೂರೋಪ್ ಮೇಲೆ ಅಮೆರಿಕ ಟ್ಯಾರಿಫ್; ಭಾರತಕ್ಕಿದೆ ದೊಡ್ಡ ಪಾಠ
ಡೊನಾಲ್ಡ್ ಟ್ರಂಪ್ ನಾಯಕತ್ವದಲ್ಲಿ ಅಮೆರಿಕ ಸರ್ಕಾರದ ವರ್ತನೆ ಬಹಳ ಅನಿಶ್ಚಿತ ಮತ್ತು ಆಕ್ರಮಣಕಾರಿಯಾಗಿದೆ. ಅಮೆರಿಕದೊಂದಿಗೆ ಟ್ರೇಡ್ ಡೀಲ್ ಕುದುರಿಸಿದಾಕ್ಷಣ ಎಲ್ಲವೂ ಸರಿಯಾಗಿ ಬಿಡುತ್ತೆ ಎಂದು ನಿಶ್ಚಿತವಾಗಿ ಹೇಳಲು ಸಾಧ್ಯವಿಲ್ಲದಂತಹ ಪರಿಸ್ಥಿತಿ ಇದೆ. ಯೂರೋಪ್, ಕೆನಡಾ, ಆಸ್ಟ್ರೇಲಿಯಾ ಇತ್ಯಾದಿ ಮಿತ್ರ ದೇಶಗಳೊಂದಿಗೆ ಟ್ರಂಪ್ ನಡೆದುಕೊಂಡ ರೀತಿಯು ಅಮೆರಿಕದ ಹೊಸ ನೀತಿಗೆ ಕನ್ನಡಿ ಹಿಡಿದಂತಿದೆ.
ಅಮೆರಿಕದ ಟ್ರೇಡ್ ಡೀಲ್ಗೋಸ್ಕರ ಭಾರತ ತನ್ನ ಹಿತಾಸಕ್ತಿಗಳನ್ನು ಬಲಿಕೊಡಬಾರದು. ಅಮೆರಿಕದ ಒತ್ತಡಕ್ಕೆ ಒಳಗಾಗಿ ಇರಾನ್ನ ಛಾಬಹಾರ್ ಪೋರ್ಟ್ ಪ್ರಾಜೆಕ್ಟ್ನಿಂದ ಹಿಂದಕ್ಕೆ ಸರಿಯಿತು. ತನ್ನ ಇಂಧನ ಆಮದಿನಲ್ಲಿ ವ್ಯತ್ಯಯ ಮಾಡಿಕೊಂಡಿತು. ಬ್ರಿಕ್ಸ್ ಗುಂಪಿನೊಂದಿಗೆ ತನ್ನ ಪಾಲ್ಗೊಳ್ಳುವಿಕೆಯನ್ನು ಮಿತಿಗೊಳಿಸಿತು. ಇಷ್ಟು ರಾಜಿ ಮಾಡಿಕೊಂಡರೂ ಅಮೆರಿಕವು ಭಾರತಕ್ಕೆ ಧಮಕಿ ಹಾಕುವುದು ಮುಂದುವರಿದೇ ಇದೆ. ಹೀಗಾಗಿ, ಭಾರತವು ಸ್ವಾಯತ್ತ ಕಾರ್ಯತಂತ್ರ ನಿಲುವು ಹೊಂದಿರಬೇಕು ಎಂಬುದು ತಜ್ಞರ ಅನಿಸಿಕೆ.
ಬಿಗ್ ಬಾಸ್ ಕನ್ನಡ ಸೀಸನ್ 12ರ ಸ್ಪರ್ಧಿ ಡಾಗ್ ಸತೀಶ್ ಅವರು ಕೆಲವೇ ವಾರ ಇದ್ದರು. ದೊಡ್ಮನೆಯಲ್ಲಿ ಸುದ್ದಿ ಆಗಿಲ್ಲ. ಅವರು ಬಿಗ್ ಬಾಸ್ನಿಂದ ಹೊರ ಬಂದ ಬಳಿಕ ಸಾಕಷ್ಟು ಸುದ್ದಿ ಆಗುತ್ತಿದ್ದಾರೆ. ಅವರು ಸಂದರ್ಶನ ನೀಡಿ ಟ್ರೋಲ್ ಆಗುತ್ತಿದ್ದಾರೆ. ಈ ವಿಷಯವನ್ನು ಇಟ್ಟುಕೊಂಡು ಸುದೀಪ್ ಅವರು ಸತೀಶ್ ಅವರ ಕಾಲೆಳೆದಿದ್ದಾರೆ. ಈ ಸಂದರ್ಭದ ವಿಡಿಯೋ ವೈರಲ್ ಆಗಿದೆ.
ಬಿಗ್ ಬಾಸ್ ಕನ್ನಡ ಸೀಸನ್ 12ರ ಫಿನಾಲೆ ನಡೆಯುತ್ತಿದೆ. ಇದಕ್ಕೆ ಮಾಜಿ ಸ್ಪರ್ಧಿಗಳು ಬಂದಿದ್ದಾರೆ. ಡಾಗ್ ಸತೀಶ್ ಕೂಡ ಬಂದಿದ್ದರು. ಸತೀಶ್ ಅವರು ಕರಿ ಬಣ್ಣದ ಗ್ಲಾಸ್ ಹಾಕಿದ್ದರು. ‘ಇದನ್ನು ಅವರು ಯಾವುದೇ ಕಾರಣಕ್ಕೂ ತೆಗೆಯಲ್ಲ. ಅವರ ಬಗೆಗಿನ ಸತ್ಯ ಬಿಚ್ಚೋಕೆ ಆಗ್ತಿಲ್ಲ ಎಂಬುದು ಬೇಸರ’ ಎಂದು ಸುದೀಪ್ ಹೇಳಿದರು.
ಬಿಗ್ ಬಾಸ್ ಬಳಿಕ ಹೇಗಿದೆ ಜೀವನ ಎಂದು ಎಲ್ಲಾ ಸ್ಪರ್ಧಿಗಳಿಗೆ ಕೇಳಲಾಯಿತು. ‘ಬಿಗ್ ಬಾಸ್ ಮುಗಿದ ಬಳಿಕ ಜೀವನ ಸ್ವಲ್ಪವಾದರೂ ಬದಲಾಗಿರಬೇಕಲ್ಲ’ ಎಂದು ಕಿಚ್ಚ ಕೇಳಿದರು. ಇದಕ್ಕೆ ಉತ್ತರಿಸಿದ ಸತೀಶ್, ‘ನಾನು ಮೊದಲು ಇಂಟರ್ನ್ಯಾಷನಲ್ ಮಟ್ಟದಲ್ಲಿ ಗುರುತಿಸಿಕೊಂಡಿದ್ದೆ. ಆದರೆ, ರೆಕೋಗ್ನೈಸೇಷನ್ ಇರಲಿಲ್ಲ. ಬಿಗ್ ಬಾಸ್ನಿಂದ ಜನಪ್ರಿಯತೆ ಮತ್ತಷ್ಟು ಹೆಚ್ಚಾಗಿದೆ’ ಎಂದರು.
ಸತೀಶ್ ಹೇಳಿದ್ದು ಅರ್ಥ ಆಗಿಲ್ಲ ಎಂದರು ಸುದೀಪ್. ಆಗ, ‘ಅಷ್ಟೊಂದು ರೆಕಗ್ನೈಸ್ ಇರಲಿಲ್ಲ. ಈಗ ಬೀದಿ ಬೀದಿಯಲ್ಲೂ ನನ್ನ ಗುರುತು ಹಿಡಿಯುತ್ತಿದ್ದಾರೆ’ ಎಂದರು ಸತೀಶ್. ಆಗ ಸುದೀಪ್, ‘ನಾನು ಕುಡ್ಕೋ ಬಂದಿದೀನೋ, ಅವರು ಕುಡ್ಕ ಬಂದಿದಾರೋ’ಎಂದು ಸತೀಶ್ಗೆ ಶೇಪ್ಔಟ್ ಮಾಡಿದರು.
ಮೈಸೂರು, ಜನವರಿ 18: ಜಿಲ್ಲೆಯ ನಂಜನಗೂಡು ತಾಲೂಕಿನ ಸುತ್ತೂರು ಜಾತ್ರಾ ಮಹೋತ್ಸವ ಹಿನ್ನೆಲೆ ಸಿಎಂ ಸಿದ್ದರಾಮಯ್ಯ ಕಾರು ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿದ ಘಟನೆ ನಡೆದಿದೆ. ಸುಮಾರು 3 ಕಿ.ಮೀ ಜಾಮ್ ಉಂಟಾಗಿದ್ದು, ಸಿಎಂ ಸಿದ್ದರಾಮಯ್ಯ ಅವರ ವಾಹನಕ್ಕೆ ದಾರಿ ಮಾಡಲು ಪೊಲೀಸ್ ಅಧಿಕಾರಿಗಳು ಹರಸಾಹಸ ಪಟ್ಟರು. ಖುದ್ದು ಮೈಸೂರು ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ರಸ್ತೆಗಿಳಿದರು. ಈ ವೇಳೆ ಸವಾರನಿಗೆ ಕಾಲಿನಲ್ಲಿ ಒದೆಯಲು ಎಸ್ಪಿ ಮುಂದ್ದಾಗಿದ್ದು, ದೃಶ್ಯ ಮೊಬೈಲ್‌ನಲ್ಲಿ ಸೆರೆ ಆಗಿದೆ.
ಶಿವಮೊಗ್ಗ, ಜನವರಿ 18: ಕಾಲುಜಾರಿ ನಾಲೆಗೆ ಬಿದ್ದು ಒಂದೇ ಕುಟುಂಬದ ನಾಲ್ವರು ನೀರುಪಾಲಾದ (death) ಘಟನೆ ಜಿಲ್ಲೆಯ ಭದ್ರಾವತಿ (Bhadravati) ತಾಲೂಕಿನ ಅರಬಿಳಚಿ ಕ್ಯಾಂಪ್ನ ಭದ್ರಾ ನಾಲೆಯಲ್ಲಿ ನಡೆದಿದೆ. ಬಟ್ಟೆ ತೊಳೆಯಲು ನಾಲೆಗೆ ತೆರಳಿದ್ದ ದುರಂತ ಸಂಭವಿಸಿದೆ. ನೀಲಾ ಬಾಯಿ(50), ಮಗ ರವಿ(23), ಮಗಳು ಶ್ವೇತಾ(24) ಮತ್ತು ಅಳಿಯ ಪರಶುರಾಮ(28) ಮೃತರು. ಹೊಳೆಹೊನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ನಡೆದದ್ದೇನು?
ಮಾರಿ ಹಬ್ಬಕ್ಕೆಂದು ಭದ್ರಾವತಿ ತಾಲೂಕಿನ ಅರಬಿಳಚಿ ಕ್ಯಾಂಪ್ ಗ್ರಾಮದಲ್ಲಿರುವ ಸಂಬಂಧಿಕರ ಮನೆಗೆ ಆಗಮಿಸಿದ್ದರು. ಈ ವೇಳೆ ಬಟ್ಟೆ ತೊಳೆಯಲು ನಾಲೆಗೆ ತೆರಳಿದ್ದಾರೆ. ಒಬ್ಬರು ಕಾಲು ಜಾರಿ ಭದ್ರಾ ನಾಲೆಗೆ ಬಿದ್ದಿದ್ದು, ಅವರನ್ನ ರಕ್ಷಿಸಲು ಹೋಗಿ ನಾಲ್ವರೂ ನೀರುಪಾಲಾಗಿದ್ದಾರೆ. ಮೃತರು ಶಿಕಾರಿಪುರ ತಾಲೂಕಿನ ಬೆಂಡೆಕಟ್ಟೆ ಗ್ರಾಮಸ್ಥರು. ಸದ್ಯ ಶವಗಳಿಗಾಗಿ ಹೊಳೆಹೊನ್ನೂರು ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿಯಿಂದ ಶೋಧ ನಡೆದಿದೆ.
ಬಿಗ್ ಬ್ಯಾಷ್ ಲೀಗ್ 2026 ರ 40 ನೇ ಪಂದ್ಯ ಬ್ರಿಸ್ಬೇನ್ ಕ್ರಿಕೆಟ್ ಮೈದಾನದಲ್ಲಿ ಬ್ರಿಸ್ಬೇನ್ ಹೀಟ್ ಮತ್ತು ಸಿಡ್ನಿ ಸಿಕ್ಸರ್ಸ್ ನಡುವೆ ನಡೆಯಿತು. ಈ ಪಂದ್ಯವು ಸಿಡ್ನಿ ಸಿಕ್ಸರ್ಸ್‌ಗೆ ಮಾಡು ಇಲ್ಲವೇ ಮಡಿ ಪಂದ್ಯವಾಗಿತ್ತು. ಆದರೆ ಈ ಪಂದ್ಯದಲ್ಲೂ ಪಾಕಿಸ್ತಾನಿ ಸೂಪರ್‌ಸ್ಟಾರ್ ಬಾಬರ್ ಆಝಂ ಅವರ ಬ್ಯಾಟಿಂಗ್ ಮತ್ತೊಮ್ಮೆ ಎಲ್ಲರನ್ನೂ ನಿರಾಶೆಗೊಳಿಸಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಬ್ರಿಸ್ಬೇನ್ ಹೀಟ್ 20 ಓವರ್‌ಗಳಲ್ಲಿ 9 ವಿಕೆಟ್‌ಗಳ ನಷ್ಟಕ್ಕೆ 171 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಸಿಡ್ನಿ ಸಿಕ್ಸರ್ಸ್ ತಂಡಕ್ಕೆ ಸ್ಫೋಟಕ ಆರಂಭದ ಅಗತ್ಯವಿತ್ತು. ಆದಾಗ್ಯೂ, ಬಾಬರ್ ಅವರ ಇನ್ನಿಂಗ್ಸ್ ತನ್ನದೇ ತಂಡದ ಮೇಲೆ ಒತ್ತಡ ಹೇರಿತು.
172 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಸಿಡ್ನಿ ಸಿಕ್ಸರ್ಸ್ ತಂಡಕ್ಕೆ ಕಳಪೆ ಆರಂಭ ಸಿಕ್ಕಿತು. ಆರಂಭಿಕ ಆಟಗಾರ ಬಾಬರ್ ಆಝಂ 7 ಎಸೆತಗಳಲ್ಲಿ ಕೇವಲ 1 ರನ್ ಗಳಿಸಿ ಔಟಾದರು. 14.28 ರ ಸ್ಟ್ರೈಕ್ ರೇಟ್ನಲ್ಲಿ ಬ್ಯಾಟ್ ಬೀಸಿದ ಬಾಬರ್ಗೆ ಬೌಂಡರಿ ಅಥವಾ ಸಿಕ್ಸರ್ ಬಾರಿಸಲು ಸಾಧ್ಯವಾಗಲಿಲ್ಲ. ಈ ನಿಧಾನಗತಿಯ ಆರಂಭದ ನಂತರ, ಅವರನ್ನು ಕ್ಸೇವಿಯರ್ ಬಾರ್ಟ್ಲೆಟ್ ಪೆವಿಲಿಯನ್ಗಟ್ಟಿದರು.
ಬಾಬರ್ ಔಟಾದಾಗ ತಂಡದ ಸ್ಕೋರ್ 2 ಓವರ್‌ಗಳಲ್ಲಿ 21 ರನ್ ಆಗಿತ್ತು. ಬಾಬರ್ ಜೊತೆಗೆ ಇನ್ನಿಂಗ್ಸ್ ಆರಂಭಿಸಿದ್ದ ಸ್ಟೀವ್ ಸ್ಮಿತ್ ತ್ವರಿತ ಆರಂಭ ನೀಡುವಲ್ಲಿ ಯಶಸ್ವಿಯಾದರು, ಆದರೆ ಬಾಬರ್ ಪ್ರತಿ ರನ್ ಗಳಿಸಲು ಹೆಣಗಾಡಿದರು. ಬಾಬರ್ ಈ ರೀತಿಯ ಕಳಪೆ ಪ್ರದರ್ಶನ ನೀಡುತ್ತಿರುವುದು ಬಿಗ್ ಬ್ಯಾಷ್ ಲೀಗ್‌ನಲ್ಲಿ ಇದು ಮೊದಲ ಬಾರಿಯಲ್ಲ. ಈ ಆವೃತ್ತಿಯ ಉದ್ದಕ್ಕೂ ಅವರ ಸ್ಟ್ರೈಕ್ ರೇಟ್ ಪ್ರಶ್ನಾರ್ಹವಾಗಿದೆ. ಆಡಿರುವ 11 ಪಂದ್ಯಗಳಲ್ಲಿ ಕೇವಲ 203 ರನ್ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ, ಸ್ಟ್ರೈಕ್ ರೇಟ್ 100 ರ ಆಸುಪಾಸಿನಲ್ಲಿದೆ.
ಮಹಿಳೆಯರ ದೇಹವು ವಯಸ್ಸಾದಂತೆ ಜೀವನದ ಪ್ರತಿಯೊಂದು ಹಂತದಲ್ಲೂ ವಿವಿಧ ಬದಲಾವಣೆಗಳಿಗೆ ಒಳಗಾಗುತ್ತದೆ. ಆದ್ದರಿಂದ ರೋಗನಿರೋಧಕ ಶಕ್ತಿ, ಬಲವಾದ ಮೂಳೆಗಳು, ಆರೋಗ್ಯಕರ ಚರ್ಮ, ಕೂದಲು ಮತ್ತು ಹಾರ್ಮೋನುಗಳ ಸಮತೋಲನವನ್ನು ಕಾಪಾಡಿಕೊಳ್ಳಲು ಉತ್ತಮ ಜೀವನಶೈಲಿ ಮತ್ತು ಆರೋಗ್ಯಕರ ಆಹಾರವು ನಿರ್ಣಾಯಕವಾಗಿದೆ. ಹಾಗಾಗಿ ಮಹಿಳೆಯರು ಪ್ರತಿನಿತ್ಯ ಈ ಕೆಲವು ಹಣ್ಣುಗಳನ್ನು (fruits) ಸೇವನೆ ಮಾಡುವ ಮೂಲಕ ಆರೋಗ್ಯವನ್ನು ಉತ್ತಮ ರೀತಿಯಲ್ಲಿ ಕಾಪಾಡಿಕೊಳ್ಳಬಹುದು. ಮಹಿಳೆಯರು ತಿನ್ನಬೇಕಾದ ಆ ಹಣ್ಣುಗಳು ಯಾವುವು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.
ಮಹಿಳೆಯರು ತಿನ್ನಲೇಬೇಕಾದ ಹಣ್ಣುಗಳಿವು:
ದಾಳಿಂಬೆ : ಕಬ್ಬಿಣಾಂಶದಿಂದ ಸಮೃದ್ಧವಾಗಿರುವ ದಾಳಿಂಬೆ ಮಹಿಳೆಯರಲ್ಲಿ ರಕ್ತಹೀನತೆ ಸಮಸ್ಯೆಯನ್ನು ಹೋಗಾಲಾಡಿಸಲು ಸಹಾಯ ಮಾಡುತ್ತದೆ. ಮುಟ್ಟಿನ ಸಮಯದಲ್ಲಿ ಆಯಾಸ ಮತ್ತು ದೌರ್ಬಲ್ಯವನ್ನು ನಿವಾರಿಸಲು ಸಹ ದಾಳಿಂಬೆಯನ್ನು ಸೇವಿಸಬಹುದು.
ಬಾಳೆಹಣ್ಣು: ಪೊಟ್ಯಾಸಿಯಮ್‌ನಿಂದ ಸಮೃದ್ಧವಾಗಿರುವ ಬಾಳೆಹಣ್ಣು ಸ್ನಾಯು ನೋವನ್ನು ಕಡಿಮೆ ಮಾಡಲು ಮತ್ತು ಮನಸ್ಥಿತಿಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.
ಪಪ್ಪಾಯಿ: ಪಪ್ಪಾಯಿಯಲ್ಲಿ ಫೈಬರ್ ಸಮೃದ್ಧವಾಗಿದೆ, ಇದು ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸುತ್ತದೆ ಮತ್ತು ಹಾರ್ಮೋನುಗಳ ಸಮತೋಲನವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಇದನ್ನು ನಿಯಮಿತವಾಗಿ ಸೇವಿಸುವುದರಿಂದ ಮಹಿಳೆಯರಿಗೆ ಪ್ರಯೋಜನಕಾರಿಯಾಗಿದೆ.
ಬೆರಿಹಣ್ಣುಗಳು: ಬೆರಿಹಣ್ಣುಗಳು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿವೆ, ಇದು ವಯಸ್ಸಾಗುವಿಕೆಯ ಲಕ್ಷಣವನ್ನು ನಿಧಾನಗೊಳಿಸುತ್ತದೆ ಮತ್ತು ಚರ್ಮದ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಅವುಗಳನ್ನು ತಿನ್ನುವುದರಿಂದ ರೋಗ ನಿರೋಧಕ ಶಕ್ತಿಯನ್ನು ಬಲಪಡಿಸಬಹುದು.
ಪೇರಳೆ: ಪೇರಳೆ ಹಣ್ಣು ವಿಟಮಿನ್ ಸಿ ಯಲ್ಲಿ ಸಮೃದ್ಧವಾಗಿದೆ, ಇದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ, ರಕ್ತದಲ್ಲಿನ ಸಕ್ಕರೆಯನ್ನು ಸಮತೋಲನಗೊಳಿಸುತ್ತದೆ ಮತ್ತು ಆರೋಗ್ಯಕರ ಚರ್ಮವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
ಅವಕಾಡೊ: ಆವಕಾಡೊಗಳು ಚರ್ಮದ ಆರೋಗ್ಯವನ್ನು ಕಾಪಾಡಿಕೊಳ್ಳಲು ಅತ್ಯುತ್ತಮವಾದ ಹಣ್ಣು. ಅವು ಆರೋಗ್ಯಕರ ಮೊನೊಸಾಚುರೇಟೆಡ್ ಕೊಬ್ಬು ಮತ್ತು ವಿಟಮಿನ್ ಇ ಯಲ್ಲಿ ಸಮೃದ್ಧವಾಗಿದ್ದು, ಇದು ಚರ್ಮವನ್ನು ಹೈಡ್ರೇಟೆಡ್ ಆಗಿರಲು ಮತ್ತು ಕಾಂತಿಯುತವಾಗಿರಕು ಸಹಾಯ ಮಾಡುತ್ತದೆ. ಅಲ್ಲದೆ ಆವಕಾಡೊಗಳು ಚರ್ಮದ ಹಾನಿಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಕಿವಿ: ವಿಟಮಿನ್ ಸಿ ಯಿಂದ ಸಮೃದ್ಧವಾಗಿರುವ ಕಿವಿ, ಹೊಳೆಯುವ ಚರ್ಮವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಕಿವಿ ತಿನ್ನುವುದರಿಂದ ಕಾಲಜನ್ ಉತ್ಪಾದನೆ ಹೆಚ್ಚಾಗುತ್ತದೆ. ಕಿವಿ ಮಹಿಳೆಯರಲ್ಲಿ ಹಿಮೋಗ್ಲೋಬಿನ್ ಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಅಲ್ಲದೆ ಈ ಹಣ್ಣು ತಿನ್ನುವುದರಿಂದ ಸುಕ್ಕುಗಳು ಕಡಿಮೆಯಾಗುತ್ತದೆ.
ಗದಗ, ಜನವರಿ 18: ಲಕ್ಕುಂಡಿ (Lakkundi) ಐತಿಹಾಸಿಕ ನಾಡು. 101 ದೇಗುಲಗಳು, ನೂರೊಂದು ಬಾವಿ ಇರುವ ಬೀಡು. ಚಾಲಕ್ಯರು, ರಾಷ್ಟ್ರಕೂಟರು, ವಿಜಯನಗರದ ಅರಸರು ಆಳಿರುವ ರಾಜ ಗಾಂಭಿರ್ಯದ ನೆಲೆ ಲಕ್ಕುಂಡಿ. ಇದೇ ಐತಿಹಾಸಿಕ ನಾಡು ಲಕ್ಕುಂಡಿಯಲ್ಲಿ ಕಳೆದ ಮೂರು ದಿನಗಳಿಂದ ಉತ್ಖನನ (Excavation) ಕಾರ್ಯ ಭರದಿಂದ ಸಾಗಿದೆ. ಶೋಧದ ವೇಳೆ ಭೂಗರ್ಭದಲ್ಲಿ ಶಿವಲಿಂಗ, ಶಿವಲಿಂಗದ ಅವಶೇಷ, ನಾಗರಕಲ್ಲು ಸೇರಿ ಪುರಾತನ ವಸ್ತುಗಳು ಪತ್ತೆಯಾಗಿವೆ.
ನಾಗರ ಕಲ್ಲು ಪತ್ತೆ
ಉತ್ಖನನದ ವೇಳೆ ನಾಗರ ಕಲ್ಲು ಪತ್ತೆಯಾಗಿದೆ. ನಾಗರ ಹೆಡೆ ಕೆತ್ತನೆಯ ಮತ್ತೊಂದು ಕಲಾಕೃತಿ ಪತ್ತೆಯಾಗಿದ್ದು, ಮತ್ತಷ್ಟು ಕುತೂಹಲ ಹುಟ್ಟಿಸಿದೆ. ಲಕ್ಕುಂಡಿ ಉತ್ಖನನ ಸ್ಥಳಕ್ಕೆ ಪುರಾತತ್ವ ಇಲಾಖೆ ಮೈಸೂರು ವಲಯ ಆಯುಕ್ತ ದೇವರಾಜು ಸೇರಿ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಉತ್ಖನ ಮೊದಲೇ ನಿಗದಿಯಾಗಿತ್ತು
ಜಿಲ್ಲೆಯ ಲಕ್ಕುಂಡಿ ಗ್ರಾಮದ ಗತವೈಭವದ ದಿನಗಳನ್ನು ನೆನಪಿಸುತ್ತಿವೆ. ಠಂಕಶಾಲೆ, ಯುದ್ಧಭೂಮಿ, ರಾಜಾಳ್ವಿಕೆ ನಾಡು, ಸಂಪದ್ಭರಿತ ಬೀಡಾಗಿದ್ದ ಲಕ್ಕುಂಡಿಯ ಇತಿಹಾಸವನ್ನು ಮರುಕಳಿಸುತ್ತಿವೆ. ಜ.16ರಿಂದಲೇ ಉತ್ಖನನ ಮಾಡಲಾಗುತ್ತಿದೆ. ಇದಕ್ಕೆ ಕಾರಣ 10ನೇ ತಾರೀಕು ರಿತ್ತಿ ಕುಟುಂಬಕ್ಕೆ ಮನೆಯ ಪಾಯ ಅಗೆಯುವಾಗ 466 ಗ್ರಾಂ ನಿಧಿ ಸಿಕ್ಕಿದ್ದು. ಆದರೆ ಇದಕ್ಕೂ ಮೊದಲೇ ಕೇಂದ್ರ ಸರ್ಕಾರಕ್ಕೆ ಭಾರತೀಯ ಪುರಾತತ್ವ ಇಲಾಖೆ ಲಕ್ಕುಂಡಿಯ ಭೂಗರ್ಭದಲ್ಲಿ ಹುದುಗಿರುವ ಐತಿಹಾಸಿಕ ಕುರುಹುಗಳ ಸಂಶೋಧನೆಗೆ ಪ್ರಸ್ತಾವನೆ ಸಲ್ಲಿಸಿತ್ತು.
ಆರ್ಕಾಲಾಜಿಕಲ್ ಸರ್ವೆ ಆಫ್ ಇಂಡಿಯಾ ಸಲ್ಲಿಸಿದ್ದ ಪ್ರಸ್ತಾವನೆಗೆ 2025ರ ಮೇ 15ರಂದೇ ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿತ್ತು. ಇತ್ತ, ಜೂನ್ 3ರಂದು ಉತ್ಖನನ ಕಾರ್ಯಕ್ಕೆ ಸಿಎಂ ಸಿದ್ದರಾಮಯ್ಯ ಭೂಮಿ ಪೂಜೆ ನೆರವೇರಿಸಿದ್ದರು. ಸಾಕಷ್ಟು ಮಳೆ ಕಾರಣಕ್ಕೆ ಉತ್ಖನನ ಕಾರ್ಯ ಪ್ರಾರಂಭ ವಿಳಂಬವಾಗಿತ್ತು. ಇದೇ ಹೊತ್ತಲ್ಲಿ ರಿತ್ತಿ ಕುಟುಂಬಕ್ಕೆ 466 ಗ್ರಾಂ ನಿಧಿ ಸಿಕ್ಕಿದ್ದು ಕುತೂಹಲಕ್ಕೆ ಕಾರಣ ಆಗಿದೆ.
ಲಕ್ಕುಂಡಿಯಲ್ಲಿ ಗತವೈಭವ ಮರುಕಳಿಸೋದಕ್ಕೆ ರಾಜ್ಯ ಪುರಾತತ್ವ ಇಲಾಖೆ ಮುಂದಾಗಿದೆ. ಇದೇ ಕಾರಣಕ್ಕಾಗೇ ಉತ್ಖನನ ಕಾರ್ಯ ನಡೆಸಲಾಗ್ತಿದೆ. ಭೂಗರ್ಭ ಶೋಧದ ವೇಳೆ 3ನೇ ದಿನವಾದ ಇಂದು ವೀರಭದ್ರೇಶ್ವರ ದೇವಾಲಯ ಪಕ್ಕದ ಕೋಟೆ ಗೋಡೆಯಲ್ಲಿ ಪುರಾತನ ಕಾಲದ ಶಿವಲಿಂಗ ಪತ್ತೆಯಾಗಿದೆ. ಯಾವ ಕಾಲದ್ದು ಅನ್ನೋ ಬಗ್ಗೆ ಪುರಾತತ್ವ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.
3ನೇ ದಿನದ ಶೋಧದ ವೇಳೆ ಶಿವಲಿಂಗ ಮತ್ತು ನಾಗರಕಲ್ಲು ಸಿಕ್ರೆ, ಎರಡನೇ ದಿನದ ಉತ್ಖನನದ ವೇಳೆ ಪುರಾತನ ವಸ್ತು ಸಿಕ್ಕಿತ್ತು. ಇದು ಶಿವಲಿಂಗ ಪೂಜೆ ನೀರು ಹರಿಯುವ ವಸ್ತುವಿನಂತೆ ಇದೆ ಎಂದು Tv9ಗೆ ಲಕ್ಕುಂಡಿ ಪ್ರಾಧಿಕಾರದ ಸದಸ್ಯರು ಮಾಹಿತಿ ನೀಡಿದ್ದರು. ಇಷ್ಟೇ ಅಲ್ಲ, ಒಡೆದ ಮಣ್ಣಿನ ಮಡಕೆಯ ಚೂರುಗಳು ಕೂಡ 2ನೇ ದಿನದ ಉತ್ಖನನ ವೇಳೆ ಸಿಕ್ಕಿದ್ದವು.
ರಾಜ್ಯ ಪುರಾತತ್ವ ಇಲಾಖೆ ಆಯುಕ್ತ ಎ.ದೇವರಾಜು ಹೇಳಿದ್ದಿಷ್ಟು
ಇನ್ನು, ಎಷ್ಟು ದಿನ ಉತ್ಖನನ ಕಾರ್ಯ ನಡೆಯುತ್ತೆ ಅನ್ನೋ ಪ್ರಶ್ನೆಗೆ ಉತ್ತರಿಸಿದ ರಾಜ್ಯ ಪುರಾತತ್ವ ಇಲಾಖೆ ಆಯುಕ್ತ ಎ.ದೇವರಾಜು, ಸಿಗುವ ಪ್ರಾಚ್ಯಾವಶೇಷಗಳ ಆಧಾರದ ಮೇಲೆ ಉತ್ಖನನದ ವಿಸ್ತರಣೆ ಅಥವಾ ಮುಕ್ತಾಯ ಬಗ್ಗೆ ನಿರ್ಧಾರ ತೆಗೆದುಕೊಳ್ತೇವೆ. ಜೊತೆಗೆ ಸಮಗ್ರ ಅಭಿವೃದ್ಧಿಗೆ ಲಕ್ಕುಂಡಿ ಗ್ರಾಮದಲ್ಲಿ ಅಧ್ಯಯನ ನಡೆದಿದೆ ಅಂತಲೂ Tv9ಗೆ ಪ್ರತಿಕ್ರಿಯಿಸಿದ್ದಾರೆ.
ಉತ್ಖನನ ನಡೆಯುತ್ತಿರುವ ಸ್ಥಳಕ್ಕೆ ಭೇಟಿ ನೀಡಿ ಗದಗ ಡಿಸಿ ಸಿ.ಎನ್.ಶ್ರೀಧರ್ ಪರಿಶೀಲನೆ ಮಾಡಿದ್ದಾರೆ. ಶಿವಲಿಂಗ ಗೋಚರವಾದ ಕೋಟೆ ಗೋಡೆಯನ್ನೂ ವೀಕ್ಷಿಸಿದ್ದಾರೆ. ಡಿಸಿಗೆ ಪುರಾತತ್ವ ಇಲಾಖೆ ಅಧಿಕಾರಿಗಳು ಸಾಥ್ ಕೊಟ್ಟಿದ್ದಾರೆ.
ಬಿಗ್ ಬಾಸ್ ಕನ್ನಡ ಸೀಸನ್ 12ರ ಫಿನಾಲೆ ನಡೆಯುತ್ತಿದೆ. ರಘು, ಗಿಲ್ಲಿ ನಟ, ರಕ್ಷಿತಾ, ಅಶ್ವಿನಿ ಗೌಡ, ಧನುಶ್ ಹಾಗೂ ಅಶ್ವಿನಿ ಅವರು ಬಿಗ್ ಬಾಸ್ ಫಿನಾಲೆಯಲ್ಲಿ ಇದ್ದಾರೆ. ಇವರ ಪೈಕಿ ಒಬ್ಬರಿಗೆ ಗೆಲುವು ಸಿಗಲಿದೆ.
ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ರಕ್ಷಿತಾ ಶೆಟ್ಟಿ ಅವರು ಟಫ್ ಫೈಟ್ ನೀಡುತ್ತಿದ್ದಾರೆ. ಅವರು ಬಂದ ವಾರವೇ ಮನೆಯಿಂದ ಹೊರಹೋಗಿದ್ದರು. ನಂತರ ಅವರನ್ನು ಮತ್ತೆ ಕರೆಸಲಾಯಿತು.
ಈಗ ರಕ್ಷಿತಾ ಅವರೇ ವಿನ್ನರ್ ಎಂದು ಘೋಷಣೆ ಆಗಿದೆ. ಇದನ್ನು ಮಾಡಿದ್ದು ವಿಕಿಪೀಡಿಯಾ. ವಿಕಿಪೀಡಿಯಾದಲ್ಲಿ ರಕ್ಷಿತಾ ವಿನ್ನರ್ ಎಂದು ಬರೆಯಲಾಗಿದೆ. ಈ ರೀತಿ ಎಡಿಟ್ ಮಾಡಲಾದ ಪೋಸ್ಟ್ ವೈರಲ್ ಆಗಿದೆ.
ವಿಕಿಪೀಡಿಯಾನ ಯಾರು ಬೇಕಿದ್ದರೂ ಎಡಿಟ್ ಮಾಡಬಹುದು. ಹೀಗಾಗಿ, ಯಾರೋ ರಕ್ಷಿತಾ ಅಭಿಮಾನಿಗಳು ಈ ಕೆಲಸ ಮಾಡಿರಬಹುದು ಎಂದು ಹೇಳಲಾಗುತ್ತಾ ಇದೆ. ರಾತ್ರಿ ವೇಳೆಗೆ ವಿನ್ನರ್ ಘೋಷಣೆ ಆಗಲಿದೆ.
ಕಿಚ್ಚ ಸುದೀಪ್ ಅವರು ವಿನ್ನರ್ ಘೋಷಣೆ ಮಾಡಲಿದ್ದಾರೆ. ರಕ್ಷಿತಾ ಶೆಟ್ಟಿಗೆ ರನ್ನರ್ ಅಪ್ ಸ್ಥಾನ ಸಿಗಬಹುದು ಎಂಬುದು ಅಭಿಮಾನಿಗಳ ಊಹೆ. ಅಶ್ವಿನಿ ಗೌಡ ಕೂಡ ಒಳ್ಳೆಯ ರೀತಿಯಲ್ಲಿ ಫೈಟ್ ನೀಡುತ್ತಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ 80-90ರ ದಶಕದಲ್ಲಿ ಹಲವು ಸೂಪರ್ ಹಿಟ್ ಗೀತೆಗಳು ಬಂದಿವೆ. ಅವುಗಳನ್ನು ಜನರು ಈಗಲೂ ಇಷ್ಟಪಡುತ್ತಾರೆ. ಈ ಹಾಡುಗಳು ಕಿವಿಗೆ ಕೇಳಲು ಇಂಪು. ಈ ಸಾಲಿನಲ್ಲಿ ಕನ್ನಡದ ‘ಪಲ್ಲವಿ ಅನು ಪಲ್ಲವಿ’ ಚಿತ್ರದ ‘ನಗುವ ನಯನ..’ ಹಾಡು ಕೂಡ ಒಂದು. ಈ ಹಾಡು ಎಲ್ಲರ ಮೆಚ್ಚುಗೆ ಪಡೆಯಿತು. ಇದು ತೆಲುಗು ನಿರ್ದೇಶಕನಿಗೂ ಇಷ್ಟ ಆಗಿದೆ. ಅವರು ಹಾಡನ್ನು ಬಳಸಿಕೊಂಡಿದ್ದಾರೆ.
ಈ ರೀತಿ ಹಾಡು ಬಳಕೆ ಮಾಡಿದ್ದು ಬೇರೆ ಯಾರೂ ಅಲ್ಲ ತೆಲುಗಿನ ಖ್ಯಾತ ನಿರ್ದೇಶಕ ಸಂದೀಪ್ ರೆಡ್ಡಿ ವಂಗ. ‘ಅರ್ಜುನ್ ರೆಡ್ಡಿ’, ‘ಅನಿಮಲ್’ ರೀತಿಯ ಸಿನಿಮಾಗಳನ್ನು ನೀಡಿದ ಖ್ಯಾತಿ ಅವರಿಗೆ ಇದೆ. ಅವರು ಸಖತ್ ರಾ ಆದಂತಹ ಚಿತ್ರಗಳನ್ನು ನೀಡುತ್ತಾರೆ. ಅವರು ಕನ್ನಡದ ‘ನಗುವ ನಯನ’ ಹಾಡನ್ನು ಇಷ್ಟಪಟ್ಟಿದ್ದಾರೆ.
ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ ಸಂದೀಪ್ ರೆಡ್ಡಿ ವಂಗ. ಸಮುದ್ರ ತೀರದಲ್ಲಿ ಹಕ್ಕಿಯೊಂದು ನಡೆದಾಡುವ ವಿಡಿಯೋ ಇದು. ಈ ವಿಡಿಯೋಗೆ ಅವರು ಕನ್ನಡದ ‘ನಗುವ ನಯನ’ ಹಾಡನ್ನು ಹಾಕಿದ್ದಾರೆ. ಈ ವಿಡಿಯೋ ನೋಡಿದ ಅನೇಕರು ಖುಷಿಯಿಂದ ಪ್ರತಿಕ್ರಿಯೆ ನೀಡಿದ್ದಾರೆ. ಕನ್ನಡಿಗರು ಈ ವಿಷಯಕ್ಕೆ ಸಂತಸಪಟ್ಟಿದ್ದಾರೆ.
‘ಪಲ್ಲವಿ ಅನು ಪಲ್ಲವಿ’ ಸಿನಿಮಾ 1983ರಲ್ಲಿ ತೆರೆಗೆ ಬಂತು. ಅನಿಲ್ ಕಪೂರ್, ಲಕ್ಷ್ಮೀ ಮೊದಲಾದವರು ನಟಿಸಿದ್ದರು. ಮಣಿ ರತ್ನಂ ಸಿನಿಮಾಗೆ ನಿರ್ದೇಶನ ಮಾಡಿದ್ದರು. ಇಳಯರಾಜ ಅವರು ಸಂಗೀತ ಸಂಯೋಜನೆ ಚಿತ್ರಕ್ಕೆ ಇತ್ತು.
ಸಂದೀಪ್ ರೆಡ್ಡಿ ಅವರು ಸದ್ಯ ತೆಲುಗಿನಲ್ಲಿ ‘ಸ್ಪಿರಿಟ್’ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಪ್ರಭಾಸ್ ಈ ಚಿತ್ರಕ್ಕೆ ಹೀರೋ. 2027ರಲ್ಲಿ ಸಿನಿಮಾ ತೆರೆಗೆ ಬರಲಿದೆ. ರಾಜಮೌಳಿ ನಿರ್ದೇಶನದ ‘ವಾರಣಾಸಿ’ ಹಾಗೂ ‘ಸ್ಪಿರಿಟ್’ ಚಿತ್ರ ಒಟ್ಟಿಗೇ ತೆರೆಗೆ ಬರೋ ಸಾಧ್ಯತೆ ಇದೆ ಎನ್ನಲಾಗುತ್ತಿದೆ.