ಎಮಿಷನ್ ಸರ್ಟಿಫಿಕೇಟ್ ಇಲ್ಲ, ಪರ್ಮಿಟ್ ಇಲ್ಲ! ಪರಿವಾಹನ್ ದೋಷದಿಂದ ವಾಹನ ಮಾಲೀಕರ ಪರದಾಟ – Kannada News | Karnataka VAHAN 4 Crisis: Emission Certificate Delays Hit Vehicle Owners Hard
ಪರಿವಾಹನ್ ದೋಷದಿಂದ ವಾಹನ ಮಾಲೀಕರ ಪರದಾಟ ಬೆಂಗಳೂರು, ಡಿಸೆಂಬರ್ 24: ಕೇಂದ್ರ ಸರ್ಕಾರದ ವಾಹನ್–4 (Parivahan Portal) ಪೋರ್ಟಲ್ನಲ್ಲಿ ಕಳೆದ ಒಂದು ತಿಂಗಳಿನಿಂದ ತಾಂತ್ರಿಕ ಸಮಸ್ಯೆ ಉಂಟಾಗಿದ್ದು, ರಾಜ್ಯದ ವಾಹನಗಳ ಎಮಿಷನ್ ಸರ್ಟಿಫಿಕೇಟ್ಗಳು ಅಪ್ಡೇಟ್ ಆಗುತ್ತಿಲ್ಲ. ಈ ಸಮಸ್ಯೆಯಿಂದ ವೈಟ್ ಬೋರ್ಡ್ (ಖಾಸಗಿ) ಹಾಗೂ ಯೆಲ್ಲೋ ಬೋರ್ಡ್ (ವಾಣಿಜ್ಯ) ವಾಹನ ಮಾಲೀಕರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಎಮಿಷನ್ ಸರ್ಟಿಫಿಕೇಟ್ ಇಲ್ಲದೆ ಬಾಡಿಗೆಗೆ ಹೋಗುವವರ ಪರದಾಟ ವಾಹನ್–4 ನಲ್ಲಿ ಎಮಿಷನ್ ಸರ್ಟಿಫಿಕೇಟ್ ಅಪ್ಡೇಟ್ ಆಗದ ಕಾರಣ ಸಾವಿರಾರು ಟೂರ್ಸ್…