ಮುಟ್ಟಿನ ಬಗ್ಗೆ ಪ್ರಶ್ನೆಗೆ ಶ್ರೀಲೀಲಾ ಕೊಟ್ಟ ದಿಟ್ಟ ಉತ್ತರ

ಮುಟ್ಟಿನ ಬಗ್ಗೆ ಪ್ರಶ್ನೆಗೆ ಶ್ರೀಲೀಲಾ ಕೊಟ್ಟ ದಿಟ್ಟ ಉತ್ತರ

ಬಹುತೇಕ ಮಹಿಳೆಯರು ತಮ್ಮದೇ ವೈಯಕ್ತಿಕ ಆರೋಗ್ಯ, ನೈರ್ಮಲ್ಯ ಕುರಿತಾಗಿ ಬಹಿರಂಗವಾಗಿ ಮಾತನಾಡುವುದಿಲ್ಲ. ವಿಶೇಷವಾಗಿ ಪೀರಿಯಡ್ಸ್ ಅಥವಾ ಮುಟ್ಟಿನ ವಿಷಯವನ್ನು ಗುಟ್ಟು ಮಾಡುವುದು ಸಹ ಇದೆ. ಆದರೆ ಇತ್ತೀಚೆಗೆ ಕಾಲ, ಸಮಯ ಎಲ್ಲ ಬದಲಾಗುತ್ತಿದೆ. ಪೀರಿಯಡ್ಸ್ ಬಗ್ಗೆ ಮುಕ್ತವಾಗಿ ಮಾತನಾಡಲಾಗುತ್ತಿದೆ. ಆದರೆ ಇತ್ತೀಚೆಗೆ ತುಸು ಭಿನ್ನ ಸಮಸ್ಯೆ ಎದುರಾಗಿದೆ. ಕೆಲ ಮಹಿಳೆಯರು, ಪೀರಿಯಡ್ಸ್ ತಮ್ಮ ಯಶಸ್ಸಿಗೆ ಅಡ್ಡಿ ಎಂಬಂತೆ ಬಿಂಬಿಸುವುದೂ ಸಹ ಇದೆ. ಆದರೆ ನಟಿ ಶ್ರೀಲೀಲಾ, ಇಂಥಹವರಿಗೆ ತಕ್ಕ ಉತ್ತರ ನೀಡಿದ್ದಾರೆ.

ಇನ್ನೂ ಯುವ ನಟಿಯಾದರೂ ಸಹ ಸ್ಪಷ್ಟ ಯೋಚನೆ, ಆಲೋಚನೆಗಳನ್ನು ಹೊಂದಿರುವ ಶ್ರೀಲೀಲಾ, ಇತ್ತೀಚೆಗೆ ಮಹಿಳಾ ನೈರ್ಮಲ್ಯ ಕುರಿತಾದ ಕಾರ್ಯಕ್ರಮವೊಂದರಲ್ಲಿ ಭಾಗಿ ಆಗಿದ್ದರು. ಬಹುತೇಕ ಮಹಿಳೆಯರೇ ಇದ್ದ ಕಾರ್ಯಕ್ರಮದಲ್ಲಿ ಶ್ರೀಲೀಲಾಗೆ ಪೀರಿಯಡ್ಸ್ ಕುರಿತಾದ, ವಿಶೇಷವಾಗಿ ಸಿನಿಮಾ ಚಿತ್ರೀಕರಣದ ಸಂದರ್ಭಗಳಲ್ಲಿ ಪೀರಿಯಡ್ಸ್ ಅಡ್ಡಿ ಆಗುವುದಿಲ್ಲವೇ? ಎಂಬ ಪ್ರಶ್ನೆ ಎದುರಾಯ್ತು. ಅದಕ್ಕೆ ಶ್ರೀಲೀಲಾ ಕೊಟ್ಟ ಉತ್ತರ ಇದೀಗ ವೈರಲ್ ಆಗುತ್ತಿದೆ.

‘ನಾನು ಹಲವಾರು ಒಳ್ಳೆಯ ಹಾಡುಗಳಲ್ಲಿ ಡ್ಯಾನ್ಸ್ ಮಾಡಿದ್ದೇನೆ. ನನ್ನ ಹಿಟ್ ಆಗಿರುವ ಡ್ಯಾನ್ಸುಗಳೆಲ್ಲ ಬಹುತೇಕ ನನ್ನ ಪೀರಿಯಡ್ಸ್ ಸಮಯದಲ್ಲಿಯೇ ಚಿತ್ರೀಕರಣಗೊಂಡವು. ಆ ಸನ್ನಿವೇಶದಲ್ಲಿ ಚಿತ್ರೀಕರಿಸಿದ ಹಾಡುಗಳಿಗೆ ನನಗೆ ಹೆಚ್ಚು ಪ್ರಶಂಸೆ ಧಕ್ಕಿದೆ. ಪೀರಿಯಡ್ಸ್ ಎಂಬುದು ಒಬ್ಬ ಮಹಿಳೆಗೆ ನೆಪ ಆಗಬಾರದು. ಅದು ಸವಾಲಾಗಬೇಕು’ ಎಂದಿದ್ದಾರೆ ನಟಿ ಶ್ರೀಲೀಲಾ.

ಇದನ್ನೂ ಓದಿ:ನಟಿ ರಮ್ಯಾ ಬಗ್ಗೆ ಪ್ರೀತಿಯಿಂದ ಮಾತನಾಡಿದ ಶ್ರೀಲೀಲಾ: ಹೇಳಿದ್ದೇನು?

ಮುಂದುವರೆದು ಮಾತನಾಡಿ, ‘ನಾವು (ಮಹಿಳೆಯರು) ಸಮಾನವಾದ ಅವಕಾಶ, ಸಮಾನವಾದ ಶಕ್ತಿ, ಸಮಾನವಾದ ಹಕ್ಕುಗಳನ್ನು ಕೇಳುತ್ತಿರುವಾಗ ನಾವು ಪೀರಿಯಡ್ಸ್ ಅನ್ನು ನೆಪವಾಗಿ ಇರಿಸಿಕೊಂಡು ಹಿಂದುಳಿಯಲು ಹೇಗೆ ಸಾಧ್ಯ? ಮಹಿಳೆಯರಾದ ನಾವು ನಮ್ಮನ್ನು ನಾವು ದೈಹಿಕವಾಗಿ, ಮಾನಸಿಕ ಮಿತಿಗಳನ್ನು ಮೀರಬೇಕು. ನಮ್ಮನ್ನು ನಾವು ಪುಶ್ ಮಾಡಿಕೊಳ್ಳಬೇಕು. ನಮಗೆ ಪೀರಿಯಡ್ಸ್ ಎಂಬುದು ನೆಪ ಆಗಬಾರದು’ ಎಂದಿದ್ದಾರೆ ನಟಿ ಶ್ರೀಲೀಲಾ.

ನಟಿ ಶ್ರೀಲೀಲಾ, ಖುದ್ದು ವೈದ್ಯೆ ಸಹ ಆಗಿದ್ದಾರೆ. ಹಾಗಾಗಿಯೇ ಈ ವಿಷಯಗಳ ಬಗ್ಗೆ ಅವರಿಗೆ ಸ್ಪಷ್ಟತೆ ಇದೆ. ಮಾಹಿತಿ ಇದೆ, ಹಾಗೂ ಇಂಥಹಾ ವಿಷಯಗಳ ಬಗ್ಗೆ ಗಟ್ಟಿಯಾಗಿ ಮಾತನಾಡುವಷ್ಟು ಧೈರ್ಯವನ್ನು ಅವರ ಜ್ಞಾನ ಅವರಿಗೆ ನೀಡಿದೆ. ಶ್ರೀಲೀಲಾರ ಮಾತುಗಳಿಗೆ ಮೆಚ್ಚುಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

RCB vs CSK: ಆರ್​ಸಿಬಿ ಬ್ಯಾಟರ್​ಗಳ ಆರ್ಭಟ; ಸಿಎಸ್​ಕೆಗೆ ದಾಖಲೆಯ ಟಾರ್ಗೆಟ್

ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2026 ರ 11 ನೇ ಪಂದ್ಯದಲ್ಲಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸಿದೆ. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಆರ್​ಸಿಬಿ ನಿಗದಿತ 20 ಓವರ್​ಗಳಲ್ಲಿ 3 ವಿಕೆಟ್​ಗಳನ್ನು ಕಳೆದುಕೊಂಡು 250 ರನ್ ಕಲೆಹಾಕಿದೆ. ಈ ಮೂಲಕ ಸಿಎಸ್​ಕೆಗೆ ದಾಖಲೆಯ 251 ರನ್​ಗಳನ್ನು ಗುರಿಯಾಗಿ ನೀಡಿದೆ. ಇಂದು ಆರ್​ಸಿಬಿ ಪರ ಬ್ಯಾಟಿಂಗ್ ಮಾಡಿದ ಪ್ರತಿಯೊಬ್ಬ ಬ್ಯಾಟರ್ ಕೂಡ ಅಬ್ಬರದ ಇನ್ನಿಂಗ್ಸ್ ಆಡಿದರು. ಇದರ ಫಲವಾಗಿ ಆರ್​ಸಿಬಿ ಈ ಬೃಹತ್ ಗುರಿ ನೀಡಲು ಸಾಧ್ಯವಾಯಿತು.

Source link

ಟ್ರೆಕ್ಕಿಂಗ್ ವೇಳೆ ನಾಪತ್ತೆಯಾಗಿದ್ದ ಯುವತಿ ಪತ್ತೆ: ಕೊನೆಗೂ ನಿಜವಾಯ್ತು ಮಲೆ‌ಕುಡಿಯ ಜನಾಂಗದ ದೈವವಾಣಿ

ಕೊಡಗು, (ಏಪ್ರಿಲ್ 05): ಕೊಡಗಿನ ಅತಿ ಎತ್ತರದ ಶಿಖರ ತಡಿಯಂಡಮೋಳ್ ಬೆಟ್ಟಕ್ಕೆ ಟ್ರೆಕ್ಕಿಂಗ್‌ಗೆ ತೆರಳಿ ಕಳೆದ ನಾಲ್ಕು ದಿನಗಳಿಂದ ನಾಪತ್ತೆಯಾಗಿದ್ದ ಕೇರಳ ಮೂಲದ ಯುವತಿ ಶರಣ್ಯ ಕೊನೆಗೂ ಪತ್ತೆಯಾಗಿದ್ದಾರೆ. ಶರಣ್ಯ ಕಳೆದ ನಾಲ್ಕು ದಿನಗಳ ಹಿಂದೆ ಟ್ರೆಕ್ಕಿಂಗ್ ಮಾಡುವಾಗ ದಾರಿ ತಪ್ಪಿ ಅರಣ್ಯದಲ್ಲಿ ನಾಪತ್ತೆಯಾಗಿದ್ದರು. ಇವರಿಗಾಗಿ ಎಎನ್‌ಎಫ್ (ANF), ಪೊಲೀಸ್ ಇಲಾಖೆ, ಅರಣ್ಯ ಇಲಾಖೆ ಹಾಗೂ ಸ್ಥಳೀಯ ಸ್ವಯಂಸೇವಕರು ತಂಡೋಪತಂಡವಾಗಿ ಬೆಟ್ಟದ ಮೂಲೆ ಮೂಲೆಗಳಲ್ಲಿ ಹುಡುಕಾಟ ನಡೆಸಿದ್ದರು. ದಟ್ಟ ಮಂಜು ಮತ್ತು ಮಳೆಯ ನಡುವೆಯೂ ಕಾರ್ಯಾಚರಣೆ ತಂಡಗಳು ಹಗಲಿರುಳು ಶ್ರಮಿಸಿದ್ದವು. ಬೆಟ್ಟದ ತಪ್ಪಲಿನಲ್ಲಿ ವಾಸಿಸುವ ಮತ್ತು ಅರಣ್ಯದ ಹಾದಿಗಳ ಬಗ್ಗೆ ಅಪಾರ ಜ್ಞಾನ ಹೊಂದಿರುವ ಕುಡಿಯ ಜನಾಂಗದ ಯುವಕರು ಇಂದು ಅರಣ್ಯದ ಆಳ ಪ್ರದೇಶದಲ್ಲಿ ಹುಡುಕಾಟ ನಡೆಸುತ್ತಿದ್ದಾಗ ಶರಣ್ಯ ಪತ್ತೆಯಾಗಿದ್ದಾರೆ. ಯುವತಿ ಆರೋಗ್ಯವಾಗಿದ್ದು, ಸದ್ಯ ಸ್ಥಳೀಯರು ಮತ್ತು ಅರಣ್ಯ ಸಿಬ್ಬಂದಿ ಅವರನ್ನು ಸುರಕ್ಷಿತವಾಗಿ ಅರಣ್ಯದಿಂದ ಹೊರಕ್ಕೆ ಕರೆತಂದಿದ್ದಾರೆ. ಈ ಮೂಲಕ ಕೊಡಗಿನ ದಟ್ಟ ಅರಣ್ಯದಲ್ಲಿ ನಡೆದಿದ್ದ ಬೃಹತ್ ಕಾರ್ಯಾಚರಣೆಗೆ ದೊಡ್ಡ ಯಶಸ್ಸು ಸಿಕ್ಕಂತಾಗಿದೆ.

ನಿಜವಾಯ್ತು ಮಲೆ‌ಕುಡಿಯ ಜನಾಂಗದ ದೈವವಾಣಿ

ಒಂದೆಡೆ ನಿರಂತರ ಕಾರ್ಯಚರಣೆ ನಡೆಸಿದರೂ ಶರಣ್ಯ ಸಿಳಿವು ಸಿಕ್ಕಿರಲಿಲ್ಲ. ಕೊನೆಗೆ ಮಲೆ‌ಕುಡಿಯ ಜನಾಂಗದ ಸಹ ದೈವದ ನಿನ್ನೆ(ಏಪ್ರಿಲ್ 04) ಮೊರೆ ಹೋಗಿದ್ದು, ಶರಣ್ಯ ಬಳಲಿ ಒಂದೆಡೆ ಆಶ್ರಯ ಪಡೆದಿದ್ದಾಳೆ. ಸುರಕ್ಷಿತವಾಗಿ ಸಿಗಲಿದ್ದಾಳೆ‌ ಮಲೆ ತಚ್ಚನ್ ದೈವ ನುಡಿದಿತ್ತು. ದೈವವಾಣಿಯಂತೆ ಶರಣ್ಯ 24 ಗಂಟೆಯಲ್ಲೇ ಸುರಕ್ಷಿತವಾಗಿ ಪತ್ತೆಯಾಗಿದ್ದಾಳೆ. ಇದರೊಂದಿಗೆ ಮಲೆ‌ಕುಡಿಯ ಜನಾಂಗದ ದೈವವಾಣಿ ನಿಜವಾಗಿದ್ದು, ದೈವದ ಮೇಲಿನ ಭಕ್ತ ಮತ್ತಷ್ಟು ಹೆಚ್ಚಾಗಿದೆ.

ಇದನ್ನೂ ಓದಿ: ಕೊಡಗಿನಲ್ಲಿ ಟ್ರೆಕ್ಕಿಂಗ್​ಗೆ ತೆರಳಿ ನಿಗೂಢವಾಗಿ ನಾಪತ್ತೆಯಾಗಿದ್ದ ಯುವತಿ 4 ದಿನದ ಬಳಿಕ ಪತ್ತೆ

4 ದಿನಗಳ ಕಾಲ ಕಾಡಲ್ಲಿ ಬದುಕುಳಿದಿದ್ದೇಗೆ?

ಕಾಡಿನಿಂದ ಹೊರಬಂದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಶರಣ್ಯ, ತಮಗಾದ ರೋಚಕ ಅನುಭವವನ್ನು ಹಂಚಿಕೊಂಡಿದ್ದಾರೆ. ‘ನಾನು ಆರೋಗ್ಯವಾಗಿದ್ದೇನೆ. ಕಾಡಿನಲ್ಲಿ ದಾರಿ ತಪ್ಪಿದಾಗ ನನ್ನ ಸ್ನೇಹಿತರನ್ನು ಸಂಪರ್ಕಿಸಲು ಪ್ರಯತ್ನಿಸಿದೆ. ಆದರೆ ಫೋನ್ ಸ್ವಿಚ್ ಆಫ್ ಆಗಿತ್ತು. ನನ್ನ ಬಳಿ ಇದ್ದಿದ್ದು ಕೇವಲ ಒಂದು ಬಾಟಲಿ ನೀರು ಮಾತ್ರ. ರಕ್ಷಣಾ ತಂಡವು ನನ್ನನ್ನು ಹುಡುಕಲು ಡ್ರೋಣ್ ಬಳಸಬಹುದು ಎಂದು ನನಗೆ ತಿಳಿದಿತ್ತು. ಹಾಗಾಗಿ ಡ್ರೋಣ್‌ಗೆ ಕಾಣಿಸುವಂತಹ ಬಯಲು ಜಾಗದಲ್ಲೇ ನಾನು ಹೆಚ್ಚಾಗಿ ನಿಂತಿದ್ದೆ’ ಎಂದು ಅವರು ವಿವರಿಸಿದ್ದಾರೆ. ಅವರ ಈ ಸಮಯಪ್ರಜ್ಞೆಯೇ ಅವರ ಪ್ರಾಣ ಉಳಿಸಿದೆ ಎನ್ನಬಹುದು.

ರಕ್ಷಣಾ ಕಾರ್ಯಾಚರಣೆಯ ಯಶಸ್ಸು

ಶರಣ್ಯ ನಾಪತ್ತೆಯಾದ ದಿನದಿಂದಲೂ ಕೊಡಗು ಜಿಲ್ಲಾ ಪೊಲೀಸರು, ಅರಣ್ಯ ಇಲಾಖೆ ಸಿಬ್ಬಂದಿ, ಎಎನ್‌ಎಫ್ (ನಕ್ಸಲ್ ನಿಗ್ರಹ ಪಡೆ) ಮತ್ತು ಸ್ಥಳೀಯ ನಿವಾಸಿಗಳು ಹಗಲಿರುಳು ಶೋಧ ನಡೆಸಿದ್ದರು. ಡ್ರೋಣ್, ಥರ್ಮಲ್ ಡ್ರೋಣ್ ಮತ್ತು ಶ್ವಾನ ದಳವನ್ನು ಬಳಸಲಾಗಿತ್ತು. ಕೊನೆಗೆ ಸ್ಥಳೀಯ ನಿವಾಸಿಗಳು ಕಾಡಿನ ಒಂದು ಭಾಗದಲ್ಲಿ ವಿಚಿತ್ರ ಶಬ್ದ ಕೇಳಿ ಅಲ್ಲಿಗೆ ಹೋಗಿ ನೋಡಿದಾಗ ಶರಣ್ಯ ಪತ್ತೆಯಾಗಿದ್ದಾರೆ. “ನಾವು ಶಬ್ದ ಕೇಳಿದ ಜಾಗಕ್ಕೆ ಹೋದಾಗ ಶರಣ್ಯ ಅಲ್ಲಿ ಕುಳಿತಿದ್ದರು,” ಎಂದು ಅವರನ್ನು ಪತ್ತೆ ಮಾಡಿದ ಸ್ಥಳೀಯರು ಸಂತಸ ವ್ಯಕ್ತಪಡಿಸಿದ್ದಾರೆ. ಇನ್ನೊಂದೆಡೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಸಹ ಸಂತಸಗೊಂಡಿದ್ದು, ಶಾರಣ್ಯ ಪತ್ತೆಗೆ ಶ್ರಮಿಸಿದ ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ.

ತಂಡದಿಂದ ಬೇರ್ಪಟ್ಟು ದಾರಿ ತಪ್ಪಿದ್ದ ಶರಣ್ಯ

ಕೊಚ್ಚಿಯ ಐಟಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿರುವ ಕೋಯಿಕ್ಕೋಡ್‌ನ ನಾದಾಪುರಂ ಮೂಲದ ಶರಣ್ಯ, ಏಪ್ರಿಲ್ 2 ರಂದು ಕೊಡಗಿಗೆ ಟ್ರೆಕ್ಕಿಂಗ್‌ಗಾಗಿ ಬಂದಿದ್ದರು. ಆನ್‌ಲೈನ್ ಮೂಲಕ ಟ್ರೆಕ್ಕಿಂಗ್ ಬುಕ್ ಮಾಡಿದ್ದ ಅವರು, ಅರಣ್ಯ ಇಲಾಖೆಯ ಅನುಮತಿಯೊಂದಿಗೆ 10 ಜನರ ತಂಡದ ಜೊತೆ ತಡಿಯಂಡಮೋಳ್ ಬೆಟ್ಟ ಹತ್ತಲು ಆರಂಭಿಸಿದ್ದರು. ಆದರೆ, ಬೆಟ್ಟದ ಮೇಲೆ ತಂಡದೊಂದಿಗೆ ಸಾಗುತ್ತಿದ್ದಾಗ ದಾರಿ ಮಧ್ಯೆ ನಾಯಿಯೊಂದರ ಜೊತೆ ಆಟವಾಡುತ್ತಾ ಶರಣ್ಯ ಹಿಂದೆ ಉಳಿದಿದ್ದರು. ಇದೇ ವೇಳೆ ಅವರು ತಂಡದಿಂದ ಬೇರ್ಪಟ್ಟು ದಾರಿ ತಪ್ಪಿದ್ದರು.

Source link

ವಿಜಯಪುರ: ಅನ್ನದಾತರ ಪಾಲಿಗೆ ಕಂಟಕವಾದ ಕೂಡಗಿ ಉಷ್ಣ ವಿದ್ಯುತ್ ಸ್ಥಾವರ; ಏಕೆ?

ವಿಜಯಪುರ, ಏಪ್ರಿಲ್​ 05: ಕೂಡಗಿ ಉಷ್ಣ ವಿದ್ಯುತ್ ಸ್ಥಾವರ ಅನ್ನದಾತರ (Farmers) ಪಾಲಿಕೆ ಕಂಟಕವಾಗಿದೆ. ಎನ್​ಟಿ ಪಿಸಿ (NTPC) ಕಾರಣದಿಂದ ರೈತರು ಕಣ್ಣೀರು ಹಾಕುತ್ತಿದ್ದಾರೆ. ಸ್ಥಾವರದ ಸುತ್ತಮುತ್ತಲದ ಕೊಳವೆ ಬಾವಿಗಳನ್ನು ನಂಬಿ ಕೃಷಿ ಮಾಡುತ್ತಿದ್ದವರಿಗೆ ಬರೆ ಬಿದ್ದಂತಾಗಿದೆ. ಸಮಸ್ಯೆಗಳ ಬಗ್ಗೆ ಎನ್​​ಟಿಪಿಸಿ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ರೈತರ ಪಾಲಿನ ಜೀವ ಜಲ ವಿಷವಾಗುತ್ತಿದೆ.

ಎಸ್​ಟಿಪಿಸಿ ನಿರ್ಮಾಣಕ್ಕೆ ಮೊದಲಿನಿಂದಲೂ ವಿರೋಧ

ವಿಜಯಪುರ ಜಿಲ್ಲೆಯ ಕೊಲ್ಹಾರ ತಾಲೂಕಿನ ಕೂಡಗಿ ಬಳಿ ಉಷ್ಣ ವಿದ್ಯುತ್ ಸ್ಥಾವರಕ್ಕೆ 2012 ಜೂನ್ 12ರಲ್ಲಿ ಶಿಲಾನ್ಯಾಸ ಮಾಡಲಾಗಿತ್ತು. 2017ರಲ್ಲಿ ಉಷ್ಣ ವಿದ್ಯುತ್ ಸ್ಥಾವರದಲ್ಲಿ ವಿದ್ಯುತ್ ಉತ್ಪಾದನೆ ಮಾಡಲು ಆರಂಭಿಸಲಾಗಿತ್ತು. ಎಸ್​ಟಿಪಿಸಿ ನಿರ್ಮಾಣಕ್ಕೆ ಮೊದಲಿನಿಂದಲೂ ವಿರೋಧ ವ್ಯಕ್ತವಾಗಿತ್ತು. ಸರ್ಕಾರ ಹಾಗೂ ಎನ್​ಟಿಪಿಸಿ ಅಧಿಕಾರಿಗಳು ಆಧುನಿಕ ತಂತ್ರಜ್ಞಾನದಿಂದ ಎಲ್ಲಾ ನಿರ್ವಹಣೆ ಮಾಡೋದಾಗಿ ಭರವಸೆ ನೀಡಿತ್ತು.

ಇದನ್ನೂ ಓದಿ: ಆಲಿಕಲ್ಲು ಮಳೆಗೆ ಕಾಶ್ಮೀರದಂತಾದ ಬಿಸಿಲನಾಡು ಕಲಬುರಗಿ: ಧಾರವಾಡ, ವಿಜಯಪುರದಲ್ಲಿ ಅಪಾರ ಬೆಳೆ ನಾಶ

ವಿದ್ಯುತ್ ಉತ್ಪಾದನೆಯಿಂದ ಸ್ಥಾವರಗಳಿಂದ ಬರುವ ಹಾರು ಬೂದಿಯನ್ನು ನೀರಿನ ಮೂಲಕ ಅನತಿ ದೂರದಲ್ಲಿನ ಮಸೂತಿ ಗ್ರಾಮದ ಬಳಿ ಕೃತಕವಾಗಿ ನಿರ್ಮಾಣ ಮಾಡಿರುವ ಕೆರೆಗಳಲ್ಲಿ ಸಂಗ್ರಹ ಮಾಡಲಾಗುತ್ತದೆ. ಹಾರುಬೂದಿಯನ್ನು ನೀರಲ್ಲಿ ಮಿಶ್ರಣ ಮಾಡಿ ಉಷ್ಣ ವಿದ್ಯುತ್​ ಸ್ಥಾವರದಿಂದ ನಾಲ್ಕು ಕಿ.ಮೀ ದೂರದಲ್ಲಿನ ಮಸೂತಿ ಗ್ರಾಮದ ಬಳಿ 1400 ಎಕರೆ ಪ್ರದೇಶದಲ್ಲಿ ನಿರ್ಮಾಣ ಮಾಡಿರುವ ನಾಲ್ಕು ಕೆರೆಗಳಿಗೆ ಬಿಡಲಾಗುತ್ತಿದೆ. ಅಲ್ಲಿ ನೀರನ್ನು ಮತ್ತೆ ಫಿಲ್ಟರ್ ಮಾಡಿ ನೀರನ್ನು ಮರುಬಳಕೆ ಮಾಡಲಾಗುತ್ತದೆ.

ಹಾರುಬೂದಿ ಹೂಳಿನ ರೂಪದಲ್ಲಿ ಕೆರೆಯಲ್ಲಿ ಸಂಗ್ರಹವಾಗುತ್ತದೆ. ಅದನ್ನು ಸಿಮೆಂಟ್ ಫ್ಯಾಕ್ಟರಿಗೆ ಹಾಗೂ ಇಟ್ಟಿಗೆ ತಯಾರಿಕೆಗೆ ನೀಡಲಾಗುತ್ತದೆ. ಆದರೆ ಸಮಸ್ಯೆ ಇಲ್ಲಿಯೇ ಆರಂಭವಾಗಿದೆ. ಉಷ್ಣ ವಿದ್ಯುತ್ ಸ್ಥಾವರದ ಹಾರುಬೂದಿಯನ್ನು ಹೊತ್ತು ತಂದ ನೀರು ಕೆರೆಗಳಲ್ಲಿ ಸಂಗ್ರಹವಾಗುತ್ತಿದ್ದು, ಅದೇ ನೀರು ಕೆರೆಗಳ ಕೆಳಗಿನ ಭಾಗ ರೈತರ ಪಾಲಿಗೆ ವಿಷವಾಗುತ್ತಿದೆ.

ಶಾಕಿಂಗ್​ ವರದಿ 

ಹಾರುಬೂದಿಯನ್ನು ಸಂಗ್ರಹಿಸಿದ್ದ ಕೆರೆಗಳ ನೀರು ಸುತ್ತಮುತ್ತಲಿನ ಜಮೀನುಗಳಲ್ಲಿನ ತೆರೆದ ಬಾವಿ, ಕೊಳವೆ ಬಾವಿಗಳ ಅಂತರ್ಜಲದಲ್ಲಿ ಸೇರಿಕೊಂಡಿದೆ. ಜಮೀನುಗಳಲ್ಲಿ ತೇವಾಂಶ ಹೆಚ್ಚಾಗಿ ಜಮೀನಿನ ಮೇಲ್ಭಾಗದಲ್ಲಿ ಉಪ್ಪಿನಾಂಶ ಸಂಗ್ರಹವಾಗುತ್ತಾ ಹೋಗಿ ಸವಳು ಜವಳಾಗಿದೆ. ಇಲ್ಲಿ ಯಾವುದೇ ಬೆಳೆಯನ್ನು ಬೆಳೆಯಲು ಅಸಾಧ್ಯವಾಗಿದೆ. ಲಕ್ಷಾಂತರ ರೂ ಹಣ ಖರ್ಚು ಮಾಡಿದರೂ ಫಸಲು ಕುಂಠಿತಗೊಂಡಿದೆ. ಇದರಿಂದ ಬೇಸತ್ತ ರೈತರು ಇಲ್ಲಿನ ತೆರೆದ ಬಾವಿ ಹಾಗೂ ಕೊಳವೆ ಬಾವಿಯ ನೀರನ್ನು ಪ್ರಯೋಗಾಲಯದಲ್ಲಿ ಈ ಹಿಂದೆಯೇ ಪರೀಕ್ಷೆ ಮಾಡಿಸಿದಾಗ ಜನ, ಜಾನುವಾರುಗಳು ಸೇರಿದಂತೆ ಪ್ರಾಣಿ, ಪಕ್ಷಿಗಳಿಗೆ ಕುಡಿಯಲು ಯೋಗ್ಯವಿಲ್ಲವೆಂಬ ಶಾಕಿಂಗ್​ ವರದಿ ಬಂದಿದೆ.

ಒಂದೆಡೆ ಜಮೀನು ಹಾಳಾಗಿದೆ, ಮತ್ತೊಂದೆಡೆ ನಮ್ಮ ಭಾಗದ ಅಂತರ್ಜಲವೂ ವಿಷವಾಗುತ್ತಿದೆ ಎಂದು ರೈತರು ತೀವ್ರ ಆತಂಕವನ್ನು ವ್ಯಕ್ತಪಡಿಸಿದ್ದಾರೆ. ತಮ್ಮದೇ ಜಮೀನಿನ ಬಾವಿ, ಕೊಳವೆ ಬಾವಿಯ ನೀರನ್ನು ಕುಡಿಯುತ್ತಿದ್ದರು. ಆದರೆ ಇದೀಗ ಹಾರುಬೂದಿಯ ಕೆರೆಗಳ ನೀರು ಈ ಭಾಗದ ಅಂತರ್ಜಲವನ್ನು ಸೇರಿಕೊಂಡಿರುವ ಕಾರಣ ಇಲ್ಲಿಯ ನೀರಿನ ಸ್ವಾದನೇ ಬದಲಾಗಿದೆ. ಆರೋಗ್ಯ ಸಮಸ್ಯೆಗಳು ಬಾಧಿಸುತ್ತಿವೆ. ಹಾರುಬೂದಿಯ ಸಂಗ್ರಹ ಮಾಡುವ ಕೆರೆಗಳ ನೀರು ಇಡೀ ರೈತಕುಲಕ್ಕೆ ವಿಷವಾಗಿದೆ.

ಇದನ್ನೂ ಓದಿ: ವಿಶ್ವಗುರು ಬಸವಣ್ಣ-ಅಕ್ಕಮಹಾದೇವಿ ಬಗ್ಗೆ ಅಶ್ಲೀಲ ಮಾತು: ಸಿಡಿದೆದ್ದ ಅನುಯಾಯಿಗಳು

ಉಷ್ಣ ವಿದ್ಯುತ್ ಸ್ಥಾವರದ ಹಾರುಬೂದಿಯ ಜೊತೆಗಿರುವ ಕೆಮಿಕಲ್ಸ್ ಸುತ್ತಮುತ್ತಲ ಭಾಗದ ಅಂತರ್ಜಲ ಸೇರುತ್ತಿರುವುದು ಮಾತ್ರ ಮಹಾದುರಂತವೇ ಆಗಿದೆ. ಸಮಸ್ಯೆಗೀಡಾದ ರೈತರ ಜಮೀನುಗಳನ್ನು ಸ್ವಾಧೀನ ಮಾಡಿಕೊಂಡು ರೈತರಿಗೆ ಸೂಕ್ತ ಪರಿಹಾರ ನೀಡುವುದೇ ಇದಕ್ಕೆ ಪರಿಹಾರವಾಗಿದೆ. ಈ ನಿಟ್ಟಿನಲ್ಲಿ ಸರ್ಕಾರ, ಎನ್​​ಟಿಪಿಸಿ ಹಾಗೂ ಜಿಲ್ಲಾಡಳಿತ ಯಾವ ಕ್ರಮತೆಗೆದುಕೊಳ್ಳುತ್ತಾರೋ ಕಾಯ್ದು ನೋಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

RCB vs CSK Record Alert: ಸಿಎಸ್​ಕೆ ವಿರುದ್ಧ ಅಬ್ಬರಿಸಿ ರೋಹಿತ್ ದಾಖಲೆ ಮುರಿದು ಅಗ್ರಸ್ಥಾನಕ್ಕೇರಿದ ಕೊಹ್ಲಿ

Source link

RCB vs CSK Record Alert: ಸಿಎಸ್​ಕೆ ವಿರುದ್ಧ ಅಬ್ಬರಿಸಿ ರೋಹಿತ್ ದಾಖಲೆ ಮುರಿದು ಅಗ್ರಸ್ಥಾನಕ್ಕೇರಿದ ಕೊಹ್ಲಿ

Source link

ಸಮುದ್ರದಾಳದಲ್ಲಿ ‘ಪಂಚರಂಗಿ’ ನಟಿ ನಿಧಿ ಸುಬ್ಬಯ್ಯ: ವಿಡಿಯೋ

ನಿಧಿ ಸುಬ್ಬಯ್ಯ (Nidhi Subbaiah) ಕನ್ನಡದ ಜನಪ್ರಿಯ ನಟಿಯರಲ್ಲಿ ಒಬ್ಬರು. ‘ಪಂಚರಂಗಿ’, ‘ಅಣ್ಣಬಾಂಡ್’ ಸೇರಿದಂತೆ ಹಲವು ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಒಂದು ಸಣ್ಣ ಬ್ರೇಕ್ ಬಳಿಕ ಚಿತ್ರರಂಗಕ್ಕೆ ಮರಳಿರುವ ನಿಧಿ ಸುಬ್ಬಯ್ಯ ಕೆಲವಾರು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಈ ಹಿಂದೆ ಬಿಗ್​​ಬಾಸ್ ಕನ್ನಡ ಶೋಗೂ ಸಹ ಹೋಗಿ ಬಂದರು ನಿಧಿ ಸುಬ್ಬಯ್ಯ. ನಟನೆಯ ಜೊತೆಗೆ ಪ್ರವಾಸ ನಿಧಿ ಸುಬ್ಬಯ್ಯ ಅವರ ಮೆಚ್ಚಿನ ಹವ್ಯಾಸ. ಇದೀಗ ಸಮುದ್ರದಾಳದಲ್ಲಿ ಈಜಾಟ ನಡೆಸಿ, ಸಮುದ್ರ ಜೀವಿಗಳೊಟ್ಟಿಗೆ ಮುಖಾ-ಮುಖಿ ಆಗಿದ್ದಾರೆ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Source link

RCB vs CSK: ಕಿಂಗ್ ಕೊಹ್ಲಿಯ ನೋ ಲುಕ್ ಸಿಕ್ಸರ್​ಗೆ ಹುಚ್ಚೆದ್ದು ಕುಣಿದ ಫ್ಯಾನ್ಸ್; ವಿಡಿಯೋ

ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್​ನ ಹೈವೋಲ್ಟೇಜ್ ಕದನ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವೆ ನಡೆಯುತ್ತಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಸಿಎಸ್​ಕೆ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಹೀಗಾಗಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ ಆರಂಭಿಸಿರುವ ಆರ್​ಸಿಬಿಗೆ ಸ್ಫೋಟಕವಲ್ಲದಿದ್ದರೂ ಅವಶ್ಯಕ ಆರಂಭ ಸಿಕ್ಕಿದೆ. ಅನುಭವಿ ಬ್ಯಾಟರ್ ವಿರಾಟ್ ಕೊಹ್ಲಿ ಉಪಯುಕ್ತ ಇನ್ನಿಂಗ್ಸ್ ಆಡುವ ಮೂಲಕ ತಂಡಕ್ಕೆ ಉತ್ತಮ ಆರಂಭ ಒದಗಿಸಿಕೊಟ್ಟರು.

ಆರಂಭಿಕರಾಗಿ ಕಣಕ್ಕಿಳಿದ ವಿರಾಟ್ ಕೊಹ್ಲಿ ಹಾಗೂ ಫಿಲ್ ಸಾಲ್ಟ್​ಗೆ ಮೊದಲ ಮೂರು ಓವರ್​ಗಳಲ್ಲಿ ಯಾವುದೇ ಬೌಂಡರಿ ಗಳಿಸಲು ಸಾಧ್ಯವಾಗಲಿಲ್ಲ. ಇವರಿಬ್ಬರು ಬೌಂಡರಿಗಳಿಗೆ ಪ್ರಯತ್ನಿಸಿದರಾದರೂ ಔಟ್​ಫಿಲ್ಡ್ ಸ್ಲೋ ಇದ್ದ ಕಾರಣ ಬಾಲ್ ನೆಲಕ್ಕೆ ಬಿದ್ದ ಕೂಡಲೇ ಅಲ್ಲಿಯೇ ಉಳಿಯುತ್ತಿತ್ತು. ಹೀಗಾಗಿ ಕೆಲವು ಬೌಂಡರಿ ಅವಕಾಶಗಳು ಕೈತಪ್ಪಿದವು. ಆದಾಗ್ಯೂ ಇನ್ನಿಂಗ್ಸ್​ನ 4ನೇ ಓವರ್​ನಲ್ಲಿ ಮೈಚಳಿ ಬಿಟ್ಟು ಬ್ಯಾಟ್ ಬೀಸಿದ ಕೊಹ್ಲಿ, ಮ್ಯಾಟ್ ಹೆನ್ರಿ ಬೌಲ್ ಮಾಡಿದ ಈ ಓವರ್​ನ ಎರಡನೇ ಎಸೆತವನ್ನು ಸಿಕ್ಸರ್​ಗಟ್ಟಿದರು.

ಕೊಹ್ಲಿಯ ಈ ನೋ ಲುಕ್ ಸಿಕ್ಸರ್​ಗೆ ಅಭಿಮಾನಿಗಳು ಹುಚ್ಚೆದ್ದು ಕುಣಿದರು. ಇದು ಆರ್​ಸಿಬಿ ಇನ್ನಿಂಗ್ಸ್​ನ ಮೊದಲ ಸಿಕ್ಸರ್ ಆಗಿತ್ತು. ಅದೇ ಓವರ್​ನ ಐದನೇ ಎಸೆತದಲ್ಲಿ ಕೊಹ್ಲಿ ಒಂದು ಬೌಂಡರಿ ಕೂಡ ಬಾರಿಸಿದರು. ಐದನೇ ಓವರ್​ನಲ್ಲೂ ಒಂದು ಬೌಂಡರಿ ಬಾರಿಸಿದ ಕೊಹ್ಲಿ ಅದೇ ಓವರ್​ನಲ್ಲಿ ಮತ್ತೊಂದು ದೊಡ್ಡ ಹೊಡೆತಕ್ಕೆ ಯತ್ನಿಸಿ ಔಟಾದರು. ಕೊಹ್ಲಿ ತಮ್ಮ ಇನ್ನಿಂಗ್ಸ್​ನಲ್ಲಿ 18 ಎಸೆತಗಳನ್ನು ಎದುರಿಸಿ 2 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 28 ರನ್ ಬಾರಿಸಿ ಔಟಾದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

SRH vs LSG: ಲಕ್ನೋಗೆ ಮೊದಲ ಗೆಲುವು; ಭಾವುಕರಾದ ಮಾಲೀಕ ಸಂಜೀವ್ ಗೋಯೆಂಕಾ

ಹೈದರಾಬಾದ್​ನ ರಾಜೀವ್ ಗಾಂಧಿ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2026 (IPL 2026) ರ 10ನೇ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್‌ ತಂಡವನ್ನು ಮಣಸಿದ ಲಕ್ನೋ ಸೂಪರ್​ಜೈಂಟ್ಸ್ ಈ ಆವೃತ್ತಿಯಲ್ಲಿ ತನ್ನ ಮೊದಲ ಗೆಲುವು ದಾಖಲಿಸಿತು. ಸನ್‌ರೈಸರ್ಸ್ ನೀಡಿದ 157 ರನ್​ಗಳ ಗುರಿಯನ್ನು ಬೆನ್ನಟ್ಟಲು ಸಾಕಷ್ಟು ಕಷ್ಟಪಟ್ಟ ಲಕ್ನೋ, ನಾಯಕ ರಿಷಭ್ ಪಂತ್ ಅವರ ತಾಳ್ಮೆಯ ಆಟದಿಂದಾಗಿ ಕೊನೆಯ ಓವರ್​ನಲ್ಲಿ ಗೆಲುವು ದಾಖಲಿಸಿತು. ಕೊನೆಯ ಓವರ್​ವರೆಗೂ ರೋಚಕತೆಯಿಂದ ಕೂಡಿದ ಈ ಪಂದ್ಯವನ್ನು ಲಕ್ನೋ ತಂಡ ಗೆಲ್ಲುತ್ತಿದ್ದಂತೆ ತಂಡದ ಮಾಲೀಕ ಸಂಜೀವ್ ಗೋಯೆಂಕಾ ಅವರು ತುಂಬಾ ಭಾವುಕರಾಗಿ ಕಾಣಿಸಿಕೊಂಡರು. ತಂಡದ ಗೆಲುವನ್ನು ಚಪ್ಪಾಳೆ ತಟ್ಟುತ್ತ ಸಂಭ್ರಮಿಸಿದರು. ಇದೀಗ ಅದರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

Source link

ಜನ ವಿಶ್ವಾಸ ವಿಧೇಯಕ 2026: ಸಣ್ಣ ತಪ್ಪುಗಳಿಗೆ ಶಿಕ್ಷೆಯಿಲ್ಲ, ದಂಡವಷ್ಟೇ

ಲೋಕಸಭೆಯಲ್ಲಿ 2026ರ ಮಾರ್ಚ್‌ 27ರಂದು ಮಂಡನೆಯಾದ ಮಹತ್ವದ ‘ಜನ ವಿಶ್ವಾಸ (ತಿದ್ದುಪಡಿ) ವಿಧೇಯಕ 2026’ (Jan Vishwas Amendment Bill) ಏಪ್ರಿಲ್‌ 1ರಂದು ಅಂಗೀಕಾರಗೊಂಡಿತು. ಮರುದಿನವೇ ರಾಜ್ಯಸಭೆಯಲ್ಲೂ ಇದಕ್ಕೆ ಅನುಮೋದನೆ ದೊರೆಯಿತು. ಸಣ್ಣಪುಟ್ಟ ತಾಂತ್ರಿಕ ತಪ್ಪುಗಳಿಗೆ ಜೈಲು ಶಿಕ್ಷೆಯ ಬದಲು ಕೇವಲ ದಂಡ ವಿಧಿಸುವ ಮೂಲಕ ಉದ್ಯಮಸ್ನೇಹಿ ವಾತಾವರಣ (Ease of Doing Business) ನಿರ್ಮಿಸುವುದು ಈ ಕಾಯ್ದೆಯ ಪ್ರಮುಖ ಉದ್ದೇಶವಾಗಿದೆ. ಇದು ಏಕರೂಪದ ಆಡಳಿತಾತ್ಮಕ ವ್ಯವಸ್ಥೆಯನ್ನು ಜಾರಿಗೊಳಿಸಲಿದೆ.

24 ಸದಸ್ಯರ ಆಯ್ಕೆ ಸಮಿತಿಯು 49 ಸಭೆಗಳನ್ನು ನಡೆಸಿ, ನಾನಾ ಸಚಿವಾಲಯಗಳು, ತಜ್ಞರು ಹಾಗೂ ಉದ್ಯಮ ವಲಯದೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ಈ ವಿಧೇಯಕಕ್ಕೆ ಅಂತಿಮ ರೂಪ ನೀಡಲಾಗಿದೆ. ಈ ಸುಧಾರಣಾ ವಿಧೇಯಕವು 80 ಕೇಂದ್ರೀಯ ಕಾನೂನುಗಳ 784 ನಿಬಂಧನೆಗಳನ್ನು ಬದಲಾಯಿಸಿದೆ. 42 ಕೇಂದ್ರೀಯ ಕಾನೂನುಗಳಲ್ಲಿದ್ದ 183 ಕ್ರಿಮಿನಲ್‌ ದಂಡನೆಗಳನ್ನು ರದ್ದುಪಡಿಸಲಾಗಿದೆ. ಒಟ್ಟಾರೆ 717 ನಿಬಂಧನೆಗಳನ್ನು ಕ್ರಿಮಿನಲ್‌ ದಂಡನೆಯಿಂದ ಮುಕ್ತಗೊಳಿಸಲಾಗಿದ್ದು, ಉಳಿದ 67 ನಿಬಂಧನೆಗಳನ್ನು ಜನಜೀವನವನ್ನು ಸುಗಮಗೊಳಿಸುವ ಗುರಿಯೊಂದಿಗೆ ಮಾರ್ಪಡಿಸಲಾಗಿದೆ.

ವಿವಿಧ ವಲಯಗಳಲ್ಲಿನ ಪ್ರಮುಖ ಸುಧಾರಣೆಗಳು

ಔಷಧ ಮತ್ತು ಸೌಂದರ್ಯವರ್ಧಕ ಕಾಯಿದೆ (1940): ರಿಟರ್ನ್‌ ಸಲ್ಲಿಸದಿರುವುದು, ದಾಖಲೆಗಳನ್ನು ಇಟ್ಟುಕೊಳ್ಳದಿರುವುದು ಮುಂತಾದ ಸಣ್ಣಪುಟ್ಟ ಪ್ರಮಾದಗಳನ್ನು ಇನ್ನು ಮುಂದೆ ಕ್ರಿಮಿನಲ್‌ ಅಪರಾಧಗಳೆಂದು ಪರಿಗಣಿಸಲಾಗುವುದಿಲ್ಲ. ಇದರಿಂದ ಔಷಧ ತಯಾರಕ ಕಂಪನಿಗಳ ವಿರುದ್ಧದ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಲಿದೆ.

ಇದನ್ನೂ ಓದಿ: ಇರಾನ್​ನ ಅಣು ವಿದ್ಯುತ್ ಸ್ಥಾವರಕ್ಕೆ ಹಾನಿ; ವಿಕಿರಣ ಸೋರಿಕೆಯಿಂದ ಗಲ್ಫ್ ರಾಷ್ಟ್ರಗಳಲ್ಲಿ ಸರ್ವನಾಶ?

ಮೋಟಾರು ವಾಹನಗಳ ಕಾಯಿದೆ (1988): ಸಣ್ಣ ಉಲ್ಲಂಘನೆಗಳು ಮತ್ತು ಗಂಭೀರ ಅಪರಾಧಗಳನ್ನು ಸ್ಪಷ್ಟವಾಗಿ ಪ್ರತ್ಯೇಕಿಸಲಾಗಿದೆ. ಸಣ್ಣಪುಟ್ಟ ನಿಯಮ ಉಲ್ಲಂಘನೆಗಳಿಗೆ ಜೈಲು ಶಿಕ್ಷೆ ಬದಲು ಹಣಕಾಸಿನ ದಂಡ ವಿಧಿಸಲಾಗುತ್ತದೆ. ಆದರೆ, ರಸ್ತೆ ಸುರಕ್ಷತೆ ಮತ್ತು ಸಾರ್ವಜನಿಕರ ಕಲ್ಯಾಣಕ್ಕೆ ಧಕ್ಕೆಯಾಗಬಲ್ಲ ಅಪರಾಧಗಳಿಗೆ ಕ್ರಿಮಿನಲ್‌ ದಂಡನೆ ಮುಂದುವರಿಯಲಿದೆ. ಇದು ರಾಜ್ಯವ್ಯಾಪಿ ನೋಂದಣಿ (Registration) ಪ್ರಕ್ರಿಯೆಯನ್ನೂ ಸುಗಮಗೊಳಿಸಿದೆ.

ಕಾನೂನು ಮಾಪನ ಕಾಯಿದೆ: ಪ್ಯಾಕೇಜಿಂಗ್‌ ಅಥವಾ ಲೇಬಲಿಂಗ್‌ನಲ್ಲಿನ ಸಣ್ಣ ತಪ್ಪುಗಳನ್ನು ಕ್ರಿಮಿನಲ್‌ ಅಪರಾಧಗಳಿಂದ ಮುಕ್ತಗೊಳಿಸಲಾಗಿದೆ. ಈ ಹಿಂದೆ ಇಂತಹ ತಪ್ಪುಗಳಿಗೆ ಒಂದು ವರ್ಷದವರೆಗೆ ಜೈಲು ಶಿಕ್ಷೆ ಇರುತ್ತಿತ್ತು.

ಮೂಲಸೌಕರ್ಯ ಮತ್ತು ಇತರೆ ಕಾಯ್ದೆಗಳು: ದಿಲ್ಲಿ ಅಭಿವೃದ್ಧಿ ಕಾಯಿದೆ (1957), ದಿಲ್ಲಿ ಮುನಿಸಿಪಲ್‌ ಕೌನ್ಸಿಲ್‌ ಕಾಯಿದೆ (1994) ಅಡಿಯಲ್ಲಿನ ಸಣ್ಣಪುಟ್ಟ ನಾಗರಿಕ ಉಲ್ಲಂಘನೆಗಳಿಗೆ ಜೈಲು ಶಿಕ್ಷೆಯನ್ನು ರದ್ದುಪಡಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿ ಕಾಯಿದೆ (1956)ಯನ್ನು ಸುಧಾರಿಸಲಾಗಿದ್ದು, ಲಾಜಿಸ್ಟಿಕ್ಸ್‌ ವಲಯದಲ್ಲಿ ದಂಡಗಳನ್ನು ಸರಳಗೊಳಿಸಲಾಗಿದೆ.

ಉದ್ಯಮಶೀಲತೆಗೆ ಉತ್ತೇಜನ ಮತ್ತು ನ್ಯಾಯಾಲಯಗಳಿಗೆ ರಿಲೀಫ್

ಜನ ವಿಶ್ವಾಸ ವಿಧೇಯಕವು ‘ಮೇಕ್‌ ಇನ್‌ ಇಂಡಿಯಾ’ ಮತ್ತು ‘ಸ್ಟಾರ್ಟಪ್‌ ಇಂಡಿಯಾ’ ಅಭಿಯಾನಗಳಿಗೆ ದೊಡ್ಡ ಮಟ್ಟದ ಬೆಂಬಲ ನೀಡಲಿದೆ. ಭಾರತದಲ್ಲಿರುವ 2.12 ಲಕ್ಷ ಡಿಪಿಐಐಟಿ ಮಾನ್ಯತೆ ಪಡೆದ ಸ್ಟಾರ್ಟಪ್‌ಗಳಿಗೆ ಮುಂದಿನ ಹಂತದ ಬೆಳವಣಿಗೆಗೆ ಇದು ವರದಾನವಾಗಲಿದೆ. ಸುದೀರ್ಘ ಕಾನೂನು ಹೋರಾಟಗಳನ್ನು ಎದುರಿಸುವ ಬದಲು, ಸಣ್ಣಪುಟ್ಟ ಪ್ರಮಾದಗಳನ್ನು ತಾವೇ ಸರಿಪಡಿಸಿಕೊಳ್ಳಲು ಉದ್ಯಮಿಗಳಿಗೆ ಅವಕಾಶ ಸಿಗಲಿದೆ.

ಇದನ್ನೂ ಓದಿ: ಡೊನಾಲ್ಡ್ ಟ್ರಂಪ್ ಸತ್ತರಾ? ಸೋಷಿಯಲ್ ಮೀಡಿಯಾದಲ್ಲಿ ಹರಿದಾಡ್ತಿದೆ ಸುದ್ದಿ; ನಿಜವಾ, ವದಂತಿಯಾ?

ಈ ಹಿಂದೆ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿದ್ದ ಸಂಕೀರ್ಣ ಲೈಸೆನ್ಸ್‌-ಕೋಟಾ ವ್ಯವಸ್ಥೆ ಹಾಗೂ 2012ರ ಪೂರ್ವಾನ್ವಯ ತೆರಿಗೆ (Retrospective tax) ತಿದ್ದುಪಡಿಯಿಂದಾಗಿ ಜಾಗತಿಕ ಹೂಡಿಕೆದಾರರಲ್ಲಿ ಭಾರತದ ವರ್ಚಸ್ಸಿಗೆ ಧಕ್ಕೆಯಾಗಿತ್ತು. ಆದರೆ, ಕಳೆದೊಂದು ದಶಕದಲ್ಲಿ ಮೋದಿ ಸರ್ಕಾರವು ಕಾನೂನುಗಳನ್ನು ಸರಳಗೊಳಿಸುವ ಮೂಲಕ ಹೂಡಿಕೆದಾರರ ವಿಶ್ವಾಸವನ್ನು ಮರಳಿ ಗಳಿಸಿದೆ. ಇದರ ಪರಿಣಾಮವಾಗಿ ಭಾರತವು ವಿಶ್ವಬ್ಯಾಂಕ್‌ನ “ಈಸ್‌ ಆಫ್‌ ಡೂಯಿಂಗ್‌ ಬಿಸಿನೆಸ್‌” ರ‍್ಯಾಂಕಿಂಗ್‌ನಲ್ಲಿ ತನ್ನ ಸ್ಥಾನವನ್ನು ಸುಧಾರಿಸಿಕೊಂಡಿದ್ದು, 2025-26ರಲ್ಲಿ $790.86 ಶತಕೋಟಿ ಡಾಲರ್‌ ರಫ್ತು ವಹಿವಾಟು ನಡೆಸಿದೆ.

ಈ ವಿಧೇಯಕವು 700ಕ್ಕೂ ಹೆಚ್ಚು ಸಣ್ಣಪುಟ್ಟ ಕ್ರಿಮಿನಲ್‌ ಅಪರಾಧಗಳನ್ನು ರದ್ದುಪಡಿಸಿರುವುದರಿಂದ, ನ್ಯಾಯಾಲಯಗಳ ಮೇಲಿನ ಒತ್ತಡ ಶೇ. 25-30ರಷ್ಟು ಕಡಿಮೆಯಾಗುವ ನಿರೀಕ್ಷೆಯಿದೆ. ಪ್ರಸ್ತುತ ನ್ಯಾಯಾಲಯಗಳಲ್ಲಿ 4.8 ಕೋಟಿ ಪ್ರಕರಣಗಳು ಬಾಕಿ ಇದ್ದು, ಇನ್ನು ಮುಂದೆ ಸಣ್ಣ ತಪ್ಪುಗಳಿಗೆ ಕೋರ್ಟ್ ಬದಲು ಸಂಬಂಧಪಟ್ಟ ಅಧಿಕಾರಿಗಳೇ ತೀರ್ಪು ನೀಡಲಿದ್ದಾರೆ.

ಒಟ್ಟಾರೆಯಾಗಿ, ಜನ ವಿಶ್ವಾಸ (ತಿದ್ದುಪಡಿ) ವಿಧೇಯಕ 2026ರ ಮೂಲಕ ಸರ್ಕಾರವು “ಕನಿಷ್ಠ ಸರ್ಕಾರ, ಗರಿಷ್ಠ ಆಡಳಿತ” (Minimum Government, Maximum Governance) ಎಂಬ ಆಶಯವನ್ನು ಸಾಕಾರಗೊಳಿಸಿದೆ. ದಂಡ ಆಧಾರಿತ ವ್ಯವಸ್ಥೆಯಿಂದ ವಿಶ್ವಾಸ ಆಧಾರಿತ ಆಡಳಿತ ಮಾದರಿಗೆ ಬದಲಾಗುವ ಮೂಲಕ ಇದು ಭಾರತದ ಉದ್ದಿಮೆಗಳ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುವುದಲ್ಲದೆ, ನಾಗರಿಕ ಸ್ನೇಹಿ ವ್ಯವಸ್ಥೆಯನ್ನು ರೂಪಿಸಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Exit mobile version