ಹೊಸ ಡಾಂಬರು ರಸ್ತೆಯ ಪರಿಶೀಲನೆಗೆ ಹೋದ ಸಚಿವೆಗೆ ಕಾದಿತ್ತು ಶಾಕ್!

ಭೋಪಾಲ್, ಡಿಸೆಂಬರ್ 23: ಮಧ್ಯಪ್ರದೇಶದ ರಾಯ್‌ಗಾಂವ್ ಕ್ಷೇತ್ರದಲ್ಲಿ ನಡೆದ ಕಾಮಗಾರಿಗಳ ಪರಿಶೀಲನೆ ನಡೆಸುತ್ತಿದ್ದ ಸಚಿವೆ ಪ್ರತಿಮಾ ಬಾಗ್ರಿ ಅವರಿಗೆ ಆಘಾತ ಕಾದಿತ್ತು. ಹೊಸದಾಗಿ ನವೀಕರಿಸಿದ ಡಾಂಬರು ರಸ್ತೆ ಮೇಲೆ ಕಾಲಿಡುತ್ತಿದ್ದಂತೆ ಆ ಡಾಂಬರು ಅವರ ಚಪ್ಪಲಿಯ ಜೊತೆಗೇ ಕಿತ್ತು ಬಂದಿತು. ಇದರಿಂದ ಕೋಪಗೊಂಡ ಸಚಿವೆ ಲೋಕೋಪಯೋಗಿ ಇಲಾಖೆ (ಪಿಡಬ್ಲ್ಯೂಡಿ) ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಸಚಿವರ ಕಾಲಿನ ಕೆಳಗೆ ಡಾಂಬರು ಕಿತ್ತು ಬರುತ್ತಿರುವ ಈ ಘಟನೆಯ ವಿಡಿಯೋ ವೈರಲ್ (Viral Video) ಆಗಿದೆ. ಈ ಕಾಮಗಾರಿ ಮಾಡಿದ ಗುತ್ತಿಗೆದಾರರ…

Read More

ಬೆಂಗಳೂರು-ಮಡಗಾಂವ್‌ ನಡುವೆ ವಂದೇ ಭಾರತ್​​ ರೈಲು ಆರಂಭಕ್ಕೆ ಕೇಂದ್ರ ಸಚಿವ ಹೆಚ್​​.ಡಿ. ಕುಮಾರಸ್ವಾಮಿ ಮನವಿ – Kannada News | Union Minister H.D. Kumaraswamy Writes to Railway Minister for Bengaluru–Madgaon Vande Bharat Express

ವಂದೇ ಭಾರತ್​​ ರೈಲು ಆರಂಭಕ್ಕೆ ಹೆಚ್​​ಡಿಕೆ ಮನವಿ ಬೆಂಗಳೂರು, ಡಿಸೆಂಬರ್​​ 23: ಬೆಂಗಳೂರು-ಕರಾವಳಿ ಜಿಲ್ಲೆಗಳ ನಡುವೆ ವಂದೇ ಭಾರತ್‌ ರೈಲು ಸಂಚಾರ ಆರಂಭಿಸುವಂತೆ ಆಗ್ರಹಿಸಿ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್​ಗೆ ಕೇಂದ್ರ ಸಚಿವ ಹೆಚ್​​.ಡಿ. ಕುಮಾರಸ್ವಾಮಿ ಪತ್ರ ಬರೆದಿದ್ದಾರೆ. ಹಾಸನ, ಮಂಗಳೂರು, ಉಡುಪಿ, ಕಾರವಾರ ಮಾರ್ಗವಾಗಿ ಗೋವಾದ ಮಡಗಾಂವ್‌ಗೆ ರೈಲು ಸಂಚಾರ ಆರಂಭಿಸಿದಲ್ಲಿ ಪ್ರವಾಸೋದ್ಯಮ, ಆರ್ಥಿಕ, ಕೈಗಾರಿಕೋದ್ಯಮಕ್ಕೆ ಅನುಕೂಲವಾಗಲಿದೆ ಎಂದು ಅವರು ತಿಳಿಸಿದ್ದಾರೆ. ಹೆಚ್​​ಡಿಕೆ ಬರೆದ ಪತ್ರದಲ್ಲೇನಿದೆ? ಬೆಂಗಳೂರಿನಿಂದ ಕರಾವಳಿ ಜಿಲ್ಲೆಗಳ ಮಾರ್ಗವಾಗಿ ಗೋವಾ ಸಂಪರ್ಕಿಸುವ ಉತ್ತಮ…

Read More

ಹುಬ್ಬಳ್ಳಿ ವೇದಿಕೆಯಲ್ಲಿ ಪೈರಸಿ ಪದ ಯಾಕೆ ಬಳಸಿಲ್ಲ: ಉತ್ತರ ನೀಡಿದ ಕಿಚ್ಚ ಸುದೀಪ್ – Kannada News | Mark Movie actor Kichcha Sudeep interview about Darshan fans controversy

ಹುಬ್ಬಳ್ಳಿಯಲ್ಲಿ ಇತ್ತೀಚೆಗೆ ‘ಮಾರ್ಕ್’ ಚಿತ್ರದ (Mark Kannada Movie) ಪ್ರೀ-ರಿಲೀಸ್ ಇವೆಂಟ್ ನಡೆಯಿತು. ಆ ವೇದಿಕೆಯಲ್ಲಿ ಸುದೀಪ್ ಅವರು ಮಾತನಾಡಿದ ನಂತರ ದರ್ಶನ್ ಅಭಿಮಾನಿಗಳು ರೊಚ್ಚಿಗೆದ್ದರು. ‘ಮಾತಿಗೆ ಬದ್ಧ, ಯುದ್ಧಕ್ಕೆ ಸಿದ್ಧ’ ಎಂದು ಸುದೀಪ್ ಹೇಳಿದ್ದರ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪರ-ವಿರೋಧದ ಚರ್ಚೆ ಆಗುತ್ತಿದೆ. ತಾವು ಮಾತನಾಡಿದ್ದು ಪೈರಸಿ ಬಗ್ಗೆ ಎಂದು ಸುದೀಪ್ (Kichcha Sudeep) ಹೇಳಿದ್ದಾರೆ. ಹಾಗಾದ್ರೆ ಆ ವೇದಿಕೆಯಲ್ಲಿ ಪೈರಸಿ ಎಂಬ ಪದವನ್ನು ಸುದೀಪ್ ಯಾಕೆ ಬಳಸಲಿಲ್ಲ ಎಂಬ ಪ್ರಶ್ನೆ ಕೂಡ ಉದ್ಘವ ಆಗಿದೆ….

Read More

ಟಿವಿ9 ವರದಿ ಇಂಪ್ಯಾಕ್ಟ್: ದೂರುದಾರರಿಂದ ಪೇಪರ್ ಬಂಡಲ್ ತರಿಸಿದ್ದ ಪಿಸಿ ಅಮಾನತು – Kannada News | Koppal: TV9 Report Impact; Police Constable Suspended for Bringing Bundle of Papers from Complainant

ಕೊಪ್ಪಳ, ಡಿಸೆಂಬರ್​ 23: ದೂರುದಾರರಿಂದ ಠಾಣೆಗೆ ಪೇಪರ್ ಬಂಡಲ್ ತರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಪ್ಪಳ ಜಿಲ್ಲೆಯ ಕನಕಗರಿ ಪೊಲೀಸ್ ಠಾಣೆ ಪಿಸಿ ಪರಶುರಾಮ್​​​ರನ್ನು ಅಮಾನತುಗೊಳಿಸಲಾಗಿದೆ. ಟಿವಿ9 ವರದಿ ಹಿನ್ನೆಲೆಯಲ್ಲಿ ಎಸ್​ಪಿ ರಾಮ್​ ಅರಸಿದ್ದಿ ಕ್ರಮಕೈಗೊಂಡಿದ್ದಾರೆ.  ಪರಶುರಾಮ್ ದೂರುದಾರರ ಬಳಿ ಜೆರಾಕ್ಸ್ ಪೇಪರ್ ತರಿಸಿದ್ದರು. ಈ ಬಗ್ಗೆ ಟಿವಿ9 ವರದಿ ಪ್ರಸಾರ ಮಾಡಿತ್ತು. ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. Source link

Read More

ದೀಕ್ಷಿತ್ ಶೆಟ್ಟಿ ವೇಗಕ್ಕೆ ಬ್ರೇಕ್ ಇಲ್ಲ, ಮತ್ತೊಂದು ಬಿಗ್ ಬಜೆಟ್ ತೆಲುಗು ಸಿನಿಮಾನಲ್ಲಿ ನಟನೆ – Kannada News | Deekshit Shetty to act along with Dulquer Salman and Pooja Hegde

ದೀಕ್ಷಿತ್ ಶೆಟ್ಟಿ(Deekshit Shetty), ತಮ್ಮ ಪ್ರತಿಭೆಯಿಂದ, ಸರಳತೆಯಿಂದ, ಕೆಲಸದ ಮೇಲಿನ ಶ್ರದ್ಧೆಯಿಂದ ಪರಭಾಷೆ ಚಿತ್ರರಂಗದಲ್ಲಿ ಅವಕಾಶ ಮೇಲೆ ಅವಕಾಶಗಳನ್ನು ಪಡೆಯುತ್ತಿರುವ ಕನ್ನಡದ ನಟ. ಕನ್ನಡದ ‘ದಿಯಾ’ ಸಿನಿಮಾ ಮೂಲಕ ಸಿನಿಮಾಕ್ಕೆ ಎಂಟ್ರಿ ಕೊಟ್ಟ ದೀಕ್ಷಿತ್ ಶೆಟ್ಟಿ ಸ್ವಪ್ರತಿಭೆಯಿಂದ ಸಫಲತೆಯ ಮೆಟ್ಟಿಲುಗಳನ್ನು ಒಂದೊಂದಾಗಿ ಏರುತ್ತಾ ಹೋಗುತ್ತಿದ್ದಾರೆ. ಸ್ಟಾರ್ ನಟ ನಾನಿ, ಕೀರ್ತಿ ಸುರೇಶ್ ಜೊತೆಗೆ ‘ದಸರಾ’ ಸಿನಿಮಾದ ಪ್ರಮುಖ ಪಾತ್ರದಲ್ಲಿ ನಟಿಸಿದ್ದ ದೀಕ್ಷಿತ್ ಶೆಟ್ಟಿ, ‘ದಿ ಗರ್ಲ್​​ಫ್ರೆಂಡ್’ ಸಿನಿಮಾನಲ್ಲಿ ರಶ್ಮಿಕಾ ಮಂದಣ್ಣ ಜೊತೆ ನಟಿಸಿದರು. ಇದೀಗ ಮತ್ತೊಂದು ದೊಡ್ಡ…

Read More

ದಾವಣಗೆರೆ: ಗಾಂಜಾ ಕೇಸ್​ನಲ್ಲಿ ರಿಯಲ್​ ಎಸ್ಟೇಟ್​ ಉದ್ಯಮಿ ಅರೆಸ್ಟ್

ದಾವಣಗೆರೆ, ಡಿಸೆಂಬರ್​​ 23: ಅಕ್ರಮವಾಗಿ ಮಾದಕ ವಸ್ತು ಮಾರಾಟ ಹಾಗೂ ಸೇವನೆ ಮಾಡುತ್ತಿದ್ದ ದಾವಣಗೆರೆ ರಿಯಲ್ ಎಸ್ಟೇಟ್ ಉದ್ಯಮಿ‌ ಸೇರಿ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ರಿಯಲ್ ಎಸ್ಟೇಟ್ ಉದ್ಯಮಿ ಮತ್ತು‌ ಕಾಂಗ್ರೆಸ್​ನಲ್ಲಿ ಗುರುತಿಸಿಕೊಂಡಿದ್ದ ಶಾಮನೂರ ವೇದಮೂರ್ತಿ(53) ಬಂಧಿತ ವ್ಯಕ್ತಿ. ಬಂಧಿತರಿಂದ ಅಂದಾಜು 10 ಲಕ್ಷ ರೂ ಮೌಲ್ಯದ 90 ಗ್ರಾಂ ಎಂ.ಡಿ.ಎಂ.ಎ ಹಾಗೂ 200 ಗ್ರಾಂ ಓಪಿಯಂ ಎಂಬ ಮಾದಕ ವಸ್ತು ಹಾಗೂ ಮಾದಕ ವಸ್ತುಗಳನ್ನು ಮಾರಾಟ ಮಾಡಿದ ಒಂದು ಲಕ್ಷ ರೂ. ನಗದು ಹಣ ಸೇರಿದಂತೆ…

Read More

ವೈಯಲೆಂಟ್ ಅವತಾರದಲ್ಲಿ ವಿಜಯ್ ದೇವರಕೊಂಡ, ವಾವ್ ಎಂದ ರಶ್ಮಿಕಾ – Kannada News | Vijay Deverakonda starts another movie, Rashmika sends best wishes

ವಿಜಯ್ ದೇವರಕೊಂಡ (Vijay Deverakonda) ತೆಲುಗು ಚಿತ್ರರಂಗದ ಸ್ಟಾರ್ ನಟ. ಆದರೆ ಕಳೆದ ಕೆಲ ವರ್ಷಗಳಿಂದಲೂ ಗೆಲುವು ಅವರಿಂದ ಬಲು ದೂರವೇ ಉಳಿದಿದೆ. ನಾನಾ ರೀತಿಯ ಪ್ರಯತ್ನಗಳನ್ನು ಮಾಡುತ್ತಲೇ ಇದ್ದಾರಾದರೂ ಗೆಲುವು ಎಂಬುದು ಅವರ ಪಾಲಿಗೆ ಮರೀಚಿಕೆಯೇ ಆಗಿದೆ. ರೊಮ್ಯಾಂಟಿಕ್, ಆಕ್ಷನ್, ಕೌಟುಂಬಿಕ, ಹಾರರ್, ಕಾಮಿಡಿ ಸಿನಿಮಾ ಹೀಗೆ ಹಲವು ಜಾನರ್​​ನ ಸಿನಿಮಾಗಳಲ್ಲಿ ವಿಜಯ್ ದೇವರಕೊಂಡ ಕಳೆದ ಕೆಲ ವರ್ಷಗಳಲ್ಲಿ ನಟಿಸಿದ್ದಾರೆ. ಆದರೆ ಯಾವೊಂದು ಸಿನಿಮಾ ಸಹ ಗೆದ್ದಿಲ್ಲ. ಇದೀಗ ಮತ್ತೊಂದು ಸಿನಿಮಾ ಕೈಗೆತ್ತಿಕೊಂಡಿದ್ದಾರೆ. ಪ್ರತಿ ಬಾರಿಯಂತೆ…

Read More

ಭಾರತದ ಆಟಗಾರರ ವಿರುದ್ಧ ಐಸಿಸಿಗೆ ದೂರು ನೀಡಲು ಮುಂದಾದ ಪಾಕ್ ಕ್ರಿಕೆಟ್ ಮಂಡಳಿ – Kannada News | U19 Asia Cup: PCB Files ICC Complaint Against India Over Player Conduct

ದುಬೈನಲ್ಲಿ ನಡೆದ ಅಂಡರ್-19 ಏಷ್ಯಾಕಪ್ 2025 ರ ಫೈನಲ್​ನಲ್ಲಿ ಟೀಂ ಇಂಡಿಯಾವನ್ನು ಮಣಿಸಿದ್ದ ಪಾಕಿಸ್ತಾನ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಟ್ರೋಫಿ ಗೆದ್ದ ಖುಷಿಯಲ್ಲಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಇದೀಗ ಬಿಸಿಸಿಐ ಹಾಗೂ ಟೀಂ ಇಂಡಿಯಾ ಆಟಗಾರರ ವಿರುದ್ಧ ಐಸಿಸಿಗೆ ದೂರು ನೀಡಲು ಮುಂದಾಗಿದೆ. ವಾಸ್ತವವಾಗಿ ಉಭಯ ತಂಡಗಳ ನಡುವಿನ ಪಂದ್ಯದ ಸಮಯದಲ್ಲಿ ಮತ್ತು ನಂತರ ಉಭಯ ತಂಡಗಳ ಆಟಗಾರರ ವರ್ತನೆ ಸಾಕಷ್ಟು ಸುದ್ದಿ ಮಾಡಿತ್ತು. ಎರಡೂ ತಂಡಗಳ ಆಟಗಾರರು ಮೈದಾನದಲ್ಲಿಯೇ ವಾಗ್ವಾದ ನಡೆಸಿದ್ದರು. ಇದೀಗ ಪಾಕಿಸ್ತಾನ ಕ್ರಿಕೆಟ್…

Read More

ಸಾರಿಗೆ ನಿಗಮದ ಮಹಿಳಾ ನೌಕರರಿಗೆ ಗುಡ್​ನ್ಯೂಸ್: ಋತುಚಕ್ರದ ರಜೆಗೆ ಇಲಾಖೆ ಗ್ರೀನ್​ಸಿಗ್ನಲ್ – Kannada News | Good News for Women Employees of Transport Corporations: Department Gives Green Signal for Menstrual Leave

ಬೆಂಗಳೂರು, ಡಿಸೆಂಬರ್​​ 23: ಕೆಎಸ್‌ಆರ್‌ಟಿಸಿ (KSRTC) ಸೇರಿದಂತೆ ನಾಲ್ಕು ರಾಜ್ಯ ಸಾರಿಗೆ ನಿಗಮಗಳ ಮಹಿಳಾ ನೌಕರರಿಗೆ ಋತುಚಕ್ರದ ರಜೆ (Menstrual Leave) ನೀಡಲು ಸಾರಿಗೆ ಇಲಾಖೆ ಗ್ರೀನ್ ಸಿಗ್ನಲ್ ನೀಡಿದೆ. ಆ ಮೂಲಕ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಜನವರಿ 1ರಿಂದ ಮಹಿಳಾ ಡ್ರೈವರ್, ಕಂಡಕ್ಟರ್ ಸೇರಿ ಮಹಿಳಾ ಸಿಬ್ಬಂದಿ ಋತುಚಕ್ರದ ರಜೆ ಪಡೆಯಬಹುದಾಗಿದೆ. ಕೆಎಸ್ಆರ್​​ಟಿಸಿ, ಬಿಎಂಟಿಸಿ, ಎನ್​​​​ಡಬ್ಲೂಕೆಆರ್​​ಟಿಸಿ ಮತ್ತು ಕೆಕೆಆರ್​ಟಿಸಿ ಎಂಡಿ ಅಕ್ರಂ ಪಾಷ ಈ ಬಗ್ಗೆ ಮಂಗಳವಾರ ಆದೇಶ ಹೊರಡಿಸಿದ್ದಾರೆ. ಆ ಮೂಲಕ ನಾಲ್ಕು ನಿಗಮದ…

Read More

ಉನ್ನಾವ್ ಅತ್ಯಾಚಾರ ಪ್ರಕರಣ; ಮಾಜಿ ಬಿಜೆಪಿ ಶಾಸಕ ಕುಲದೀಪ್ ಸೆಂಗಾರ್​​ಗೆ ಬಿಗ್ ರಿಲೀಫ್ – Kannada News | Unnao rape case Delhi High Court suspends jail sentence of Expelled BJP MLA Kuldeep Sengar

ನವದೆಹಲಿ, ಡಿಸೆಂಬರ್ 23: 2017ರ ಉನ್ನಾವ್ ಅತ್ಯಾಚಾರ ಪ್ರಕರಣದಲ್ಲಿ ಮಾಜಿ ಬಿಜೆಪಿ ಶಾಸಕ ಕುಲದೀಪ್ ಸೆಂಗಾರ್ (Kuldeep Singh Sengar) ಅವರ ಶಿಕ್ಷೆಗೆ ದೆಹಲಿ ಹೈಕೋರ್ಟ್ ತಡೆ ನೀಡಿದೆ. ದೆಹಲಿ ವಿಚಾರಣಾ ನ್ಯಾಯಾಲಯವು ಡಿಸೆಂಬರ್ 2019ರಲ್ಲಿ ಐಪಿಸಿ ಸೆಕ್ಷನ್ 376 (ಅತ್ಯಾಚಾರ) ಮತ್ತು ಪೋಕ್ಸೊ ಕಾಯ್ದೆಯ ಸೆಕ್ಷನ್ 5 (ಸಿ) ಮತ್ತು 6ರ ಅಡಿಯಲ್ಲಿ ಅಪ್ರಾಪ್ತ ವಯಸ್ಕಳ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಕುಲದೀಪ್ ಸೆಂಗಾರ್ ಅವರನ್ನು ತಪ್ಪಿತಸ್ಥರೆಂದು ಘೋಷಿಸಿ ಜೀವಾವಧಿ ಶಿಕ್ಷೆ ವಿಧಿಸಿತ್ತು. ಈ…

Read More