ಚಾಮರಾಹನಗರ, (ಏಪ್ರಿಲ್ 05): ದೇಶದ ಜನಪ್ರಿಯ ಹುಲಿ (Tiger) ರಕ್ಷಿತಾರಣ್ಯಗಳಲ್ಲಿ ಒಂದಾದ ಚಾಮರಾಜನಗರ ಜಿಲ್ಲೆಯ (chamarajanagar) ಗುಂಡ್ಲುಪೇಟೆ ತಾಲೂಕಿನ ಬಂಡೀಪುರದಲ್ಲಿ (bandipur national park) ಹುಲಿಗಳ ದರ್ಶನವಾಗಿದೆ. ತಾಯಿಯೊಂದಿಗೆ ಚಿನ್ನಾಟ ಆಡುತ್ತಿರುವ ಹುಲಿ ಮರಿಗಳ ಅಪರೂಪದ ದೃಶ್ಯ ಪ್ರವಾಸಿಗ ಸೆರೆಹಿಡಿದಿದ್ದು, ಸದ್ಯ ವಿಡಿಯೋ ವೈರಲ್ ಆಗಿದೆ. ಮತ್ತೊಂದೆಡೆ ಮಳೆಯಲ್ಲೂ ಅಂಜದೆ ತ್ ವ್ಯಾಘ್ರ ಕುಳಿತು ಕ್ಯಾಮೆರಾಕ್ಕೆ ಪೋಸ್ ಕೊಟ್ಟಿದೆ. ಸಫಾರಿ ರೀ ಓಪನ್ ಆದ ಬಳಿಕ ಮೊದಲ ಬಾರಿಗೆ ವ್ಯಾಘ್ರನ ಕುಟುಂಬವನ್ನ ಕಣ್ತುಂಬಿಕೊಂಡು ಪ್ರವಾಸಿಗರು ಪುಳಕಿತರಾಗಿದ್ದಾರೆ.
ಕಮಲ್ ಹಾಸನ್ (Kamal Haasan) ಭಾರತದ ಸ್ಟಾರ್ ನಟ, ನಿರ್ದೇಶಕ ಮತ್ತು ನಿರ್ಮಾಪಕ ಆಗಿರುವ ಜೊತೆಗೆ ರಾಜಕಾರಣಿಯೂ ಹೌದು. ಇತ್ತೀಚೆಗಷ್ಟೆ ಅವರು ರಾಜ್ಯಸಭೆಗೆ ಸಹ ಆಯ್ಕೆ ಆಗಿದ್ದಾರೆ. ಕೆಲ ವರ್ಷಗಳ ಹಿಂದೆ ಕಮಲ್ ಹಾಸನ್ ಅವರು ‘ಮಕ್ಕಳ್ ನಿಧಿ ಮಯಂ’ ಹೆಸರಿನ ರಾಜಕೀಯ ಪಕ್ಷ ಸ್ಥಾಪಿಸಿದ್ದರು. ರಾಜ್ಯದಾದ್ಯಂತ ಸಂಚರಿಸಿ ಪಕ್ಷವನ್ನು ಬಲಗೊಳಿಸುವ ಪ್ರಯತ್ನ ಮಾಡಿದ್ದರು. ತಮಿಳುನಾಡಿನ ಬಲಿಷ್ಟ ಪಕ್ಷವಾದ ಡಿಎಂಕೆಗೆ ಸವಾಲೊಡ್ಡುವ ಪಕ್ಷ ಎಂದೇ ಆರಂಭದಲ್ಲಿ ಬಿಂಬಿತವಾಗಿತ್ತು. ಆದರೆ ಈ ಬಾರಿ ಕಮಲ್ ಹಾಸನ್ ಅವರ ಪಕ್ಷ ಚುನಾವಣೆ ಸ್ಪರ್ಧಿಸುತ್ತಲೇ ಇಲ್ಲ.
ಡಿಎಂಕೆ ಎದುರಾಳಿ ಎಂದೇ ಗುರುತಿಸಿಕೊಂಡಿದ್ದ ಕಮಲ್ ಹಾಸನ್ ಅವರು ಸ್ವತಃ ಡಿಎಂಕೆಯಿಂದ ಸೀಟು ಪಡೆದು ರಾಜ್ಯಸಭೆ ಪ್ರವೇಶಿಸಿದ್ದು, ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಪಕ್ಷ ಸ್ಪರ್ಧಿಸುವುದಿಲ್ಲ ಎಂದಿದ್ದಾರೆ. ಇದು ಪಕ್ಷದ ಕಾರ್ಯಕರ್ತರು ಮತ್ತು ಪದಾಧಿಕಾರಿಗಳ ಅಸಮಾಧಾನಕ್ಕೆ ಕಾರಣವಾಗಿದ್ದು, ಸ್ವಪಕ್ಷೀಯರಿಂದಲೇ ಕಮಲ್ ಹಾಸನ್ ತೀವ್ರ ಪ್ರತಿರೋಧ ಎದುರಿಸುತ್ತಿದ್ದಾರೆ.
ಚುನಾವಣೆಗೆ ಸ್ಪರ್ಧಿಸಲು ಅಭ್ಯರ್ಥಿಗಳಿಂದ ತಲಾ 50,000 ರೂಪಾಯಿ ಅರ್ಜಿ ಶುಲ್ಕವನ್ನ ‘ಮಕ್ಕಳ್ ನೀಧಿ ಮೈಯಂ’ ಪಕ್ಷ ಸಂಗ್ರಹಿಸಿತ್ತು, ಆದರೆ ಈಗ ಸ್ವತಃ ಕಮಲ್ ಹಾಸನ್ ಅವರೇ ಚುನಾವಣೆಗೆ ಹೋಗದಿರುವ ನಿರ್ಧಾರ ಮಾಡಿದ ಬಳಿಕ, ಆಕಾಂಕ್ಷಿ ಅಭ್ಯರ್ಥಿಗಳು ತೀವ್ರ ಅಸಮಾಧಾನ ಹೊರಹಾಕಿರುವುದು ಮಾತ್ರವೇ ಅಲ್ಲದೆ, ತಮ್ಮ ಹಣವನ್ನು ಮರಳಿ ನೀಡುವಂತೆ ಒತ್ತಾಯಿಸಿದ್ದಾರೆ.
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಆಸಕ್ತಿ ಹೊಂದಿದ್ದ ಅಭ್ಯರ್ಥಿಗಳು ಅರ್ಜಿ ಶುಲ್ಕವಾಗಿ ತಲಾ 50,000 ರೂ.ಗಳನ್ನು ಪಕ್ಷಕ್ಕೆ ಪಾವತಿಸಿದ್ದರು. ಆದರೆ ಈಗ ಕಮಲ್ ಹಾಸನ್ ಅವರು ಚುನಾವಣಾ ಕಣದಿಂದ ಹಿಂದೆ ಸರಿಯಲು ನಿರ್ಧರಿಸಿರುವುದರಿಂದ, ಆಕಾಂಕ್ಷಿಗಳು ತಮ್ಮ ಹಣವನ್ನು ವಾಪಸ್ ಕೇಳುತ್ತಿದ್ದಾರೆ. ಅಭ್ಯರ್ಥಿಗಳ ಈ ಬೇಡಿಕೆಗೆ ಪ್ರತಿಕ್ರಿಯಿಸಿರುವ ಪಕ್ಷದ ಪದಾಧಿಕಾರಿಗಳು, ಪಾವತಿಸಿದ ಮೊತ್ತವನ್ನು ‘ಪಕ್ಷಕ್ಕೆ ನೀಡಿದ ದೇಣಿಗೆ’ ಎಂದು ಪರಿಗಣಿಸಲಾಗುತ್ತದೆ ಮತ್ತು ಈ ಸಮಯದಲ್ಲಿ ಅದನ್ನು ಮರುಪಾವತಿಸಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ. ಇದು ಇನ್ನಷ್ಟು ಅಸಮಾಧಾನಕ್ಕೆ ಕಾರಣವಾಗಿದೆ.
ಡಿಎಂಕೆ ನೇತೃತ್ವದ ಮೈತ್ರಿಕೂಟದ ಭಾಗವಾಗಿರುವ ಎಂಎನ್ಎಂ, ತನಗೆ ನೀಡಲಾದ ಸೀಟುಗಳ ಸಂಖ್ಯೆ ಕಡಿಮೆ ಇರುವುದು ಮತ್ತು ಡಿಎಂಕೆಯ ಚಿಹ್ನೆಯಡಿ ಸ್ಪರ್ಧಿಸುವಂತೆ ಬಂದ ಸಲಹೆಯನ್ನು ಒಪ್ಪದ ಕಾರಣ ಏಪ್ರಿಲ್ 23ರ ಚುನಾವಣೆಯಿಂದ ಹಿಂದೆ ಸರಿಯುವುದಾಗಿ ಘೋಷಿಸಿತ್ತು. ಕಮಲ್ ಹಾಸನ್ ಅವರು ತಮ್ಮ ಪಕ್ಷವು ಚುನಾವಣೆಯಲ್ಲಿ ಸ್ಪರ್ಧಿಸದಿದ್ದರೂ, ಡಿಎಂಕೆ ನೇತೃತ್ವದ ಮೈತ್ರಿಕೂಟದ ಅಭ್ಯರ್ಥಿಗಳಿಗೆ ಬೇಷರತ್ ಬೆಂಬಲ ನೀಡುವುದಾಗಿ ಘೋಷಿಸಿದ್ದಾರೆ. ಆದರೆ ಚುನಾವಣೆ ಕಣಕ್ಕಿಳಿಯಲು ಉತ್ಸುಕರಾಗಿದ್ದ ಅಭ್ಯರ್ಥಿಗಳಿಗೆ ಇದು ತೀವ್ರ ಅಸಮಾಧಾನ ಮೂಡಿಸಿದೆ. ಇದೀಗ ಸ್ವಪಾರ್ಟಿಯಲ್ಲೇ ಕಮಲ್ ವಿರುದ್ಧ ಆಕ್ರೋಶ ಭುಗಿಲೆದ್ದಿದೆ.
ನವದೆಹಲಿ, ಏಪ್ರಿಲ್ 5: ವಿಶ್ವದ ನಾಲ್ಕನೇ ಅತಿದೊಡ್ಡ ಆರ್ಥಿಕತೆ ಹೊಂದಿರುವ ಭಾರತ, ಜಿಡಿಪಿ ತಲಾದಾಯದಲ್ಲಿ (GDP Per Capita Income) ಬಹಳ ಹಿಂದುಳಿದಿದೆ. ಬಡವರು ಮತ್ತು ಕೆಳಮಧ್ಯಮ ವರ್ಗದವರ ಸಂಖ್ಯೆಯೇ ಅತಿಹೆಚ್ಚು ಇರುವುದು. ವಿಶ್ವಖ್ಯಾತ ಆರ್ಥಿಕ ತಜ್ಞ ಸ್ಟೀವ್ ಹ್ಯಾಂಕ್ (Steve Hanke) ಅವರು ಈ ವಿಚಾರವನ್ನು ಪ್ರಸ್ತಾಪಿಸಿ ಮಾಡಿದ ಟ್ವೀಟ್ವೊಂದು ಚರ್ಚೆ ಹುಟ್ಟುಹಾಕಿದೆ.
ಭಾರತ ವಿಶ್ವದ ನಾಲ್ಕನೇ ಅತಿದೊಡ್ಡ ಜಿಡಿಪಿ ಹೊಂದಿದೆ. ಆದರೆ, ತಲಾದಾಯದಲ್ಲಿ 126ನೇ ಸ್ಥಾನದಲ್ಲಿದೆ ಎಂದಿರುವ ಅವರು 1980ರಲ್ಲಿ ಚೀನಾಗಿಂತಲೂ ಭಾರತದ ಜಿಡಿಪಿ ತಲಾದಾಯ ಹೆಚ್ಚು ಇದ್ದದ್ದು, ಈಗ ಅರ್ಧದಷ್ಟು ಇರುವ ಸಂಗತಿಯನ್ನು ಎತ್ತಿ ತೋರಿಸಿದ್ದಾರೆ.
ಪ್ರೊಫೆಸರ್ ಸ್ಟೀವ್ ಹ್ಯಾಂಕ್ ಅವರ ಈ ಟ್ವೀಟ್ಗೆ ಸಾಕಷ್ಟು ಪ್ರತಿಕ್ರಿಯೆಗಳು ಬಂದಿವೆ. ಭಾರತದ ಆರ್ಥಿಕತೆ ಈಗ ವೇಗವಾಗಿ ಬೆಳೆಯುತ್ತಿದೆಯಾದರೂ ಜನಸಂಖ್ಯೆ ಹೆಚ್ಚಿರುವ ಕಾರಣಕ್ಕೆ ಜಿಡಿಪಿ ತಲಾದಾಯ ಸಹಜವಾಗಿ ಕಡಿಮೆ ಇದೆ ಎಂದು ಹೆಚ್ಚಿನ ಮಂದಿ ವಾದಿಸಿದ್ದಾರೆ.
ಸ್ಟೀವ್ ಹ್ಯಾಂಕ್ ಅವರ ಟ್ವೀಟ್
#IndiaWatch: India boasts the WORLD’S 4th largest GDP.
But, when it comes to income per person, India comes in at a lowly 126th in the world. pic.twitter.com/YKTgg6cZcJ
2001ರಲ್ಲಿ ಭಾರತದ ಜಿಡಿಪಿ ತಲಾದಾಯ 450 ಡಾಲರ್ ಇತ್ತು. ಇವತ್ತು ಅದರು 2,700 ಡಾಲರ್ಗಿಂತಲೂ ಹೆಚ್ಚಿದೆ. 25 ವರ್ಷದಲ್ಲಿ ಆರು ಪಟ್ಟು ಹೆಚ್ಚಿದೆ. ದೊಡ್ಡ ಗಾತ್ರದ ಆರ್ಥಿಕತೆಗಳು ಪದರಗಳಲ್ಲಿ ಬೆಳವಣಿಗೆ ಹೊಂದುತ್ತವೆ. ಮೊದಲು ಜಿಡಿಪಿ ಹಿಗ್ಗುತ್ತದೆ. ನಂತರ ಆದಾಯ ಹಂಚಿಕೆ ಬಹಳ ಕ್ರಮೇಣವಾಗಿ ಸುಧಾರಿಸುತ್ತಾ ಹೋಗುತ್ತದೆ ಎಂದು ಒಬ್ಬರು ಕಾಮೆಂಟಿಸಿದ್ದಾರೆ.
ಭಾರತದ ತಲಾದಾಯವನ್ನು ನಾಮಿನಲ್ ಜಿಡಿಪಿ ಬದಲು ಪಿಪಿಪಿ ಆಧಾರದಲ್ಲಿ ಅಳೆಯುವುದು ಸೂಕ್ತ. ನಾಮಿನಲ್ ಜಿಡಿಪಿ ತಲಾದಾಯವನ್ನು ಡಾಲರ್ ಮೌಲ್ಯದ ಮೂಲಕ ಗಣಿಸಲಾಗುತ್ತದೆ. ಆದರೆ, ಪಿಪಿಪಿ ಮಾಡಲ್ನಲ್ಲಿ ಜನರ ಜೀವನಮಟ್ಟವನ್ನು ಹೆಚ್ಚು ನಿಖರವಾಗಿ ಅಳೆಯಬಹುದು ಎಂಬುದು ಕೆಲವರ ವಾದ.
ಐಪಿಎಲ್ 2026 ರಲ್ಲಿ ಇಂದು ಎರಡು ಪಂದ್ಯಗಳು ನಡೆಯಿವೆ. ಇದರಲ್ಲಿ ಮೊದಲ ಪಂದ್ಯ ಸನ್‌ರೈಸರ್ಸ್ ಹೈದರಾಬಾದ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ನಡುವೆ ನಡೆಯುತ್ತಿದೆ. ಎರಡೂ ತಂಡಗಳ ನಡುವಿನ ಪಂದ್ಯವನ್ನು ಸನ್‌ರೈಸರ್ಸ್‌ನ ತವರು ಮೈದಾನವಾದ ಹೈದರಾಬಾದ್‌ನಲ್ಲಿ ನಡೆಸಲಾಗುತ್ತಿದೆ. ಐಪಿಎಲ್ 2026 ರಲ್ಲಿ ಸನ್‌ರೈಸರ್ಸ್ ತಮ್ಮ ತವರು ಮೈದಾನದಲ್ಲಿ ಆಡುವ ಮೊದಲ ಪಂದ್ಯ ಇದು. ಅದೇ ಸಮಯದಲ್ಲಿ, ಲಕ್ನೋ ಸೂಪರ್ ಜೈಂಟ್ಸ್ ತಮ್ಮ ಮನೆಯ ಹೊರಗೆ ಆಡುವ ಮೊದಲ ಪಂದ್ಯ ಇದು.
ನವದೆಹಲಿ, ಏಪ್ರಿಲ್ 05: ದೆಹಲಿಯಲ್ಲಿ ನಕಲಿ ಔಷಧಿಗಳನ್ನು ತಯಾರಿಸುವ ದಂಧೆ ಬಗ್ಗೆ ಮಾಹಿತಿ ಸಿಕ್ಕಿದೆ ಎಂದು ಕ್ರೈಂ ಬ್ರಾಂಚ್ ಡಿಸಿಪಿ ಆದಿತ್ಯ ಗೌತಮ್ ಹೇಳಿದ್ದಾರೆ. ಸೈಬರ್ ಸೆಲ್‌ನ ಎಎಸ್‌ಐಗೆ ಶಹದಾರಾ ಮತ್ತು ಉತ್ತರ ಪ್ರದೇಶದ ಇತರ ಭಾಗಗಳಿಂದ ಮಾಹಿತಿ ಬಂದಿತ್ತು.ಆರೋಪಿಯಿಂದ ಆತನಿಂದ 1.20 ಲಕ್ಷಕ್ಕೂ ಹೆಚ್ಚು ನಕಲಿ ಔಷಧಿಗಳನ್ನು ವಶಪಡಿಸಿಕೊಳ್ಳಲಾಗಿದೆ.ಮಾಯಾಂಕ್ ಅಗರ್ವಾಲ್ ಮತ್ತು ಮೋಹಿತ್ ಶರ್ಮಾ ಸೇರಿದಂತೆ ಇನ್ನೂ ಮೂವರನ್ನು ಬಂಧಿಸಲಾಗಿದೆ. ನಾವು ಮುಜಫರ್ನಗರದಲ್ಲಿ ಸಂಪೂರ್ಣ ಕಾರ್ಖಾನೆಯನ್ನು ಭೇದಿಸಿದ್ದೇವೆ. ಈ ವ್ಯಕ್ತಿಗಳು 2011-12 ರಿಂದ ಈ ಕಾರ್ಯಾಚರಣೆಯನ್ನು ನಡೆಸುತ್ತಿದ್ದರು.ಒಟ್ಟು 6 ಜನರನ್ನು ಬಂಧಿಸಲಾಗಿದೆ ಎಂದುತಿಳಿಸಿದ್ದಾರೆ.
ಇದು 2026ರ ಏಪ್ರಿಲ್ ನ ಮೊದಲ ವಾರದಲ್ಲಿ ಸಾಲದ ಚಿಂತೆ, ನೆಂಟರ ಆಗಮನ, ಸಂಗಾತಿಯಿಂದ ಅಸಹಾಯಕತೆ, ಧಾರ್ಮಿಕ ನಂಬಿಕೆಗೆ ಹೆಚ್ಚು ಪ್ರಾಶಸ್ತ್ಯ ಸಿಗಲಿದೆ. ಸಿಗುವ ಗೌರವವನ್ನು ಕಾಳಜಿಯಿಂದ ಪಡೆಯುವ ಹೊಣೆಗಾರಿಕೆಯೂ ಈ ವಾರದ್ದು.
ಮೇಷ:
ಹೊಸ ಉದ್ಯೋಗ ಪ್ರಯತ್ನಕ್ಕೆ ಮನ್ನಣೆ ಸಿಗಲಿದೆ. ಕುಟುಂಬದಲ್ಲಿ ಶುಭ ಕಾರ್ಯದ ಚರ್ಚೆ ನಡೆಯಲಿದ್ದು, ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಹರಿಸುವುದು ಸೂಕ್ತ.
ವೃಷಭ:
ಭೂಮಿ ಅಥವಾ ವಾಹನ ಖರೀದಿ ಯೋಗವಿದೆ. ದೂರದ ಪ್ರಯಾಣದಿಂದ ಲಾಭವಾಗಲಿದೆ. ಸಂಗಾತಿಯೊಂದಿಗೆ ಮಧುರ ಬಾಂಧವ್ಯ ವೃದ್ಧಿಸಲಿದ್ದು, ಹಿರಿಯರ ಆಶೀರ್ವಾದ ಬೆನ್ನಿಗಿರುತ್ತದೆ.
ಮಿಥುನ:
ವ್ಯಾಪಾರದಲ್ಲಿ ಅನಿರೀಕ್ಷಿತ ಲಾಭ ಕಂಡುಬರಲಿದೆ. ಹಳೆಯ ಸಾಲಗಳಿಂದ ಮುಕ್ತಿ ಪಡೆಯುವ ಕಾಲವಿದು. ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸು ಸಿಗಲಿದೆ, ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಿ.
ಕರ್ಕಾಟಕ:
ಕಚೇರಿಯಲ್ಲಿ ಸಹೋದ್ಯೋಗಿಗಳ ಸಹಕಾರ ಸಿಗಲಿದೆ. ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕಿ. ಮನೆಯಲ್ಲಿ ಸಣ್ಣಪುಟ್ಟ ಕಲಹಗಳು ಉಂಟಾಗಬಹುದು, ತಾಳ್ಮೆಯಿಂದ ವರ್ತಿಸುವುದು ಉನ್ನತ ಫಲ ನೀಡುತ್ತದೆ.
ಸಿಂಹ:
ಸಮಾಜದಲ್ಲಿ ಗೌರವ ಪ್ರತಿಷ್ಠೆಗಳು ಹೆಚ್ಚಾಗಲಿವೆ. ರಾಜಕೀಯ ವ್ಯಕ್ತಿಗಳಿಗೆ ಶುಭ ಕಾಲ. ಹೂಡಿಕೆಯಿಂದ ಲಾಭ ದೊರೆಯಲಿದೆ, ಆದರೆ ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ.
ಕನ್ಯಾ:
ವೃತ್ತಿ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳು ಕಂಡುಬರುತ್ತವೆ. ಸಂಗಾತಿಯ ಸಲಹೆಯು ಸಂಕಷ್ಟದಿಂದ ಪಾರು ಮಾಡಲಿದೆ. ಬೆನ್ನು ನೋವಿನಂತಹ ಸಣ್ಣ ಸಮಸ್ಯೆಗಳು ಕಾಡಬಹುದು, ವಿಶ್ರಾಂತಿ ಅಗತ್ಯ.
ತುಲಾ:
ಶತ್ರುಗಳ ಮೇಲೆ ಜಯ ಸಾಧಿಸುವಿರಿ. ದೇವತಾ ಕಾರ್ಯಗಳಲ್ಲಿ ಆಸಕ್ತಿ ಮೂಡಲಿದೆ. ಸ್ಥಗಿತಗೊಂಡಿದ್ದ ಕಾಮಗಾರಿಗಳು ಪುನರಾರಂಭಗೊಳ್ಳಲಿವೆ. ಹಣಕಾಸಿನ ವ್ಯವಹಾರದಲ್ಲಿ ಜಾಗರೂಕತೆಯಿರಲಿ.
ವೃಶ್ಚಿಕ:
ಮಾನಸಿಕ ನೆಮ್ಮದಿಗಾಗಿ ಪ್ರವಾಸ ಕೈಗೊಳ್ಳುವಿರಿ. ಆಪ್ತ ಸ್ನೇಹಿತರಿಂದ ನೆರವು ಸಿಗಲಿದೆ. ಕೃಷಿ ಚಟುವಟಿಕೆಯಲ್ಲಿ ನಿರತರಾದವರಿಗೆ ಉತ್ತಮ ಆದಾಯವಿದೆ. ಮೌನದಿಂದ ಕೆಟ್ಟ ಪರಿಸ್ಥಿತಿಗಳನ್ನು ನಿಭಾಯಿಸಿ.
ಧನು:
ಹೊಸ ವ್ಯವಹಾರ ಆರಂಭಿಸಲು ಸಕಾಲವಿದು. ಅವಿವಾಹಿತರಿಗೆ ಕಂಕಣ ಭಾಗ್ಯ ಕೂಡಿ ಬರಲಿದೆ. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ ಕಂಡುಬಂದು ಮನಸ್ಸಿಗೆ ಹರ್ಷ ತರಲಿದೆ.
ಮಕರ:
ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ. ವಿನಾಕಾರಣ ಬೇರೆಯವರ ಜಗಳದಲ್ಲಿ ಭಾಗಿಯಾಗಬೇಡಿ. ಆಸ್ತಿ ವಿವಾದಗಳು ಸುಗಮವಾಗಿ ಬಗೆಹರಿಯುವ ಸಾಧ್ಯತೆಯಿದೆ. ತಾಯಿಯ ಆರೋಗ್ಯ ಸುಧಾರಿಸಲಿದೆ.
ಕುಂಭ:
ಸೃಜನಶೀಲ ಕೆಲಸಗಳಿಗೆ ಮನ್ನಣೆ ಸಿಗಲಿದೆ. ವಿದೇಶ ಪ್ರಯಾಣದ ಕನಸು ನನಸಾಗಬಹುದು. ಆರ್ಥಿಕ ಮುಗ್ಗಟ್ಟು ದೂರವಾಗಿ ಹೊಸ ಆದಾಯದ ಮೂಲಗಳು ಸೃಷ್ಟಿಯಾಗಲಿವೆ.
ಮೀನ:
ದೈಹಿಕ ವ್ಯಾಯಾಮದಿಂದ ಚೈತನ್ಯ ಸಿಗಲಿದೆ. ಕಳೆದುಹೋದ ವಸ್ತುಗಳು ಮರಳಿ ಪಡೆಯುವಿರಿ. ಪ್ರೇಮ ಜೀವನದಲ್ಲಿ ಯಶಸ್ಸು ಸಿಗಲಿದೆ. ಗುಪ್ತ ಶತ್ರುಗಳ ಬಗ್ಗೆ ಎಚ್ಚರವಿರಲಿ.
ಕೋಲ್ಕತ್ತಾ, ಏಪ್ರಿಲ್ 05: ಭಾರತ-ಬಾಂಗ್ಲಾ ಗಡಿಯಲ್ಲಿ ಬಿಎಸ್‌ಎಫ್ ಜವಾನರಲ್ಲ ಇನ್ನುಮುಂದೆ ಹಾವು(Snake)ಗಳು, ಮೊಸಳೆಗಳು ಗಸ್ತು ತಿರುಗಲಿವೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಗಡಿಯಲ್ಲಿ ಸಾಕಷ್ಟು ಕಡೆ ಬೇಲಿಗಳೇ ಇಲ್ಲದ ಕಾರಣ ಒಳನುಸುಳುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಇದನ್ನು ತಡೆಯಲು ಗಡಿಯಲ್ಲಿ ಹಾವುಗಳು ಮತ್ತು ಮೊಸಳಗೆಗಳನ್ನು ನಿಯೋಜಿಸಲು ಬಿಎಸ್‌ಎಫ್ ಮುಂದಾಗಿದೆ. ಗಡಿಯಲ್ಲಿ ಸುಮಾರು 175 ಕಿ.ಮೀ ಬೇಲಿ ಇಲ್ಲದ ಪ್ರದೇಶದುದ್ದಕ್ಕೂ ಸರೀಸೃಪಗಳನ್ನು ನಿಯೋಜಿಸಲಾಗುತ್ತದೆ. 4,096 ಕಿ.ಮೀ.ಗಳಲ್ಲಿ, 850 ಕಿ.ಮೀ. ಬೇಲಿಯಿಲ್ಲದೇ ಉಳಿದಿದೆ.ಆದರೆ ಸರ್ಕಾರದಿಂದ ಯಾವುದೇ ಅಂತಿಮ ನಿರ್ಧಾರವಾಗಿಲ್ಲ.
ಉನ್ನತ ಮಟ್ಟದ ಸಭೆಗಳ ನಂತರ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಬಾಂಗ್ಲಾದೇಶದೊಂದಿಗಿನ 175 ಕಿಲೋಮೀಟರ್‌ಗಳಷ್ಟು ಬೇಲಿಯಿಲ್ಲದ ನದಿಗಳು ಮತ್ತು ಜೌಗು ಪ್ರದೇಶಗಳಲ್ಲಿ ದಾಟುವಿಕೆಯನ್ನು ತಡೆಯಲು ಹಾವುಗಳು ಮತ್ತು ಮೊಸಳೆಗಳನ್ನು ನಿಯೋಜಿಸಬಹುದು ಎಂದು ಸಲಹೆ ನೀಡಿತ್ತು.
ಭಾರತ-ಬಾಂಗ್ಲಾದೇಶ ಗಡಿಯಲ್ಲಿ ಹಾವುಗಳು ಮತ್ತು ಮೊಸಳೆಗಳನ್ನು ನಿಯೋಜಿಸಲು ಬಿಎಸ್‌ಎಫ್ ಆಲೋಚಿಸಿದೆ. ಈ ಪ್ರಸ್ತಾವನೆಯನ್ನು ಅಂತಿಮಗೊಳಿಸಲಾಗಿದೆ. ಭಾರತ-ಬಾಂಗ್ಲಾದೇಶ ಗಡಿಯು 4,096 ಕಿಲೋಮೀಟರ್‌ಗಳವರೆಗೆ ವ್ಯಾಪಿಸಿದೆ.
ಬಿಎಸ್‌ಎಫ್‌ನೊಳಗೆ ಈ ವಿಷಯವನ್ನು ಉನ್ನತ ಮಟ್ಟದಲ್ಲಿ ಚರ್ಚಿಸಲಾಗುತ್ತಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಫೆಬ್ರವರಿ 9 ರಂದು ಮಹಾನಿರ್ದೇಶಕ ಪ್ರವೀಣ್ ಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಪ್ರಸ್ತಾಪವನ್ನು ಮಾಡಲಾಯಿತು.
ಮಾರ್ಚ್ 20 ರಂದು ನವದೆಹಲಿಯ ಬಿಎಸ್‌ಎಫ್ ಪ್ರಧಾನ ಕಚೇರಿಯಲ್ಲಿ ನಡೆದ ಮತ್ತೊಂದು ಉನ್ನತ ಮಟ್ಟದ ಸಭೆಯಲ್ಲಿ ಈ ವಿಚಾರವನ್ನು ಮತ್ತೊಮ್ಮೆ ಚರ್ಚಿಸಲಾಗಿದೆ ಎಂದು ವರದಿಯಾಗಿದೆ. ಇದರ ನಂತರ, ಪೂರ್ವ ಮತ್ತು ಈಶಾನ್ಯ ವಲಯಗಳ ಗಡಿ ಮಟ್ಟದ ಅಧಿಕಾರಿಗಳಿಗೆ ಸಂದೇಶಗಳನ್ನು ಕಳುಹಿಸಲಾಯಿತು.
ಪ್ರಸ್ತಾವನೆಯನ್ನು ಕಾರ್ಯಾಚರಣೆಯ ದೃಷ್ಟಿಕೋನದಿಂದ ಪರೀಕ್ಷಿಸಲು ಮತ್ತು ನಿಗದಿತ ಸಮಯದೊಳಗೆ ಕ್ರಮ ಕೈಗೊಂಡ ವರದಿಯನ್ನು ಸಲ್ಲಿಸಲು ಅಧಿಕಾರಿಗಳಿಗೆ ಕೇಳಲಾಯಿತು.
ಭಾರತ-ಬಾಂಗ್ಲಾದೇಶ ಗಡಿಯು ಜನನಿಬಿಡ ಪ್ರದೇಶಗಳು, ಕಾಡುಗಳು, ಪರ್ವತಗಳು, ಜೌಗು ಪ್ರದೇಶಗಳು ಮತ್ತು ನದಿ ಪ್ರದೇಶಗಳನ್ನು ಒಳಗೊಂಡಂತೆ ವೈವಿಧ್ಯಮಯ ಮತ್ತು ಕಷ್ಟಕರವಾದ ಭೂಪ್ರದೇಶದ ಮೂಲಕ ಹಾದುಹೋಗುತ್ತದೆ.
ಈ ಪ್ರದೇಶಗಳಲ್ಲಿ ಒಳನುಸುಳುವಿಕೆ, ಕಳ್ಳಸಾಗಣೆ ಮತ್ತು ಇತರ ಕಾನೂನುಬಾಹಿರ ಚಟುವಟಿಕೆಗಳಿಗೆ ಗುರಿಯಾಗುತ್ತವೆ. ಇತ್ತೀಚಿನ ವರ್ಷಗಳಲ್ಲಿ ಬಿಎಸ್‌ಎಫ್ ತನ್ನ ಕಣ್ಗಾವಲು ಮೂಲಸೌಕರ್ಯವನ್ನು ಗಮನಾರ್ಹವಾಗಿ ಹೆಚ್ಚಿಸಿದೆ. ಯೋಧರು ಬಾಡಿ ಕ್ಯಾಮರಾಗಳನ್ನು ಬಳಸುತ್ತಿದ್ದಾರೆ.
ಈ ಪ್ರಸ್ತಾಪವನ್ನು ಎಷ್ಟೇ ಗಂಭೀರವಾಗಿ ಪರಿಗಣಿಸಿದರೂ, ಹಲವಾರು ಪ್ರಾಯೋಗಿಕ ಪ್ರಶ್ನೆಗಳಿಗೆ ಉತ್ತರಿಸಲಾಗಿಲ್ಲ. ಗಡಿಯಲ್ಲಿ ಯಾವ ಭಾಗದಲ್ಲಿ ಅವುಗಳನ್ನು ಬಿಡಲಾಗುತ್ತದೆ ಎನ್ನುವ ಕುರಿತು ಸ್ಪಷ್ಟನೆ ಸಿಕ್ಕಿಲ್ಲ.
IPL 2026: ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಆರಂಭಿಕ ಜೋಡಿಯಾದ ಯಶಸ್ವಿ ಜೈಸ್ವಾಲ್ ಮತ್ತು ವೈಭವ್ ಸೂರ್ಯವಂಶಿ ಹೊಸ ಇತಿಹಾಸ ಬರೆದಿದ್ದಾರೆ. ಏಪ್ರಿಲ್ 4ರಂದು ಗುಜರಾತ್ ಟೈಟಾನ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಇವರಿಬ್ಬರು ಭಾರತೀಯ ಕ್ರಿಕೆಟ್ನ ದಿಗ್ಗಜ ಜೋಡಿ ವೀರೇಂದ್ರ ಸೆಹ್ವಾಗ್ ಮತ್ತು ಗೌತಮ್ ಗಂಭೀರ್ ಅವರ ಹೆಸರಿನಲ್ಲಿದ್ದ ಹಳೆಯ ದಾಖಲೆಯೊಂದನ್ನು ಅಳಿಸಿ ಹಾಕಿದ್ದಾರೆ.
ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ಯಶಸ್ವಿ ಜೈಸ್ವಾಲ್ ಹಾಗೂ ವೈಭವ್ ಸೂರ್ಯವಂಶಿ ಮೊದಲ ವಿಕೆಟ್ಗೆ 70 ರನ್ಗಳ ಜೊತೆಯಾಟವಾಡಿದ್ದರು. ಈ ಜೊತೆಯಾಟದೊಂದಿಗೆ ಐಪಿಎಲ್ ಇತಿಹಾಸದಲ್ಲೇ ಅತೀ ವೇಗವಾಗಿ (ಕಡಿಮೆ ಎಸೆತಗಳಲ್ಲಿ) 500 ರನ್ಗಳ ಜೊತೆಯಾಟವಾಡಿದ ಭಾರತೀಯ ಜೋಡಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಇದಕ್ಕೂ ಮುನ್ನ ಈ ದಾಖಲೆ ಡೆಲ್ಲಿ ಡೇರ್ಡೆವಿಲ್ಸ್ (ಈಗಿನ ಡೆಲ್ಲಿ ಕ್ಯಾಪಿಟಲ್ಸ್) ಪರ ಆಡಿದ್ದ ವೀರೇಂದ್ರ ಸೆಹ್ವಾಗ್ ಮತ್ತು ಗೌತಮ್ ಗಂಭೀರ್ ಹೆಸರಿನಲ್ಲಿತ್ತು. ಡೆಲ್ಲಿ ಪರ ಆರಂಭಿಕರಾಗಿ ಕಣಕ್ಕಿಳಿದಿದ್ದ ಈ ಜೋಡಿಯು 309 ಎಸೆತಗಳಲ್ಲಿ 500 ರನ್ ಪೂರೈಸಿ ಈ ದಾಖಲೆ ನಿರ್ಮಿಸಿದ್ದರು.
ಇದೀಗ ವೈಭವ್ ಸೂರ್ಯವಂಶಿ ಮತ್ತು ಯಶಸ್ವಿ ಜೈಸ್ವಾಲ್ ಕೇವಲ 248 ಎಸೆತಗಳಲ್ಲಿ 500 ರನ್ಗಳ ಜೊತೆಯಾಟವಾಡಿದ್ದಾರೆ. ಈ ಮೂಲಕ ಐಪಿಎಲ್ನಲ್ಲಿ ಅತೀ ಕಡಿಮೆ ಎಸೆತಗಳಲ್ಲಿ 500 ರನ್ಗಳನ್ನು ಪೂರೈಸಿದ ಭಾರತೀಯ ಆರಂಭಿಕ ಜೋಡಿ ಎಂಬ ಭರ್ಜರಿ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.
ಇನ್ನು ಐಪಿಎಲ್ ಇತಿಹಾಸದಲ್ಲಿ ಅತಿ ವೇಗವಾಗಿ 500 ರನ್ ಪೂರೈಸಿದ ಜೋಡಿಗಳ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಮೊದಲ ಎರಡು ಸ್ಥಾನಗಳಲ್ಲಿ ಟ್ರಾವಿಸ್ ಹೆಡ್-ಅಭಿಷೇಕ್ ಶರ್ಮಾ ಮತ್ತು ಫಿಲ್ ಸಾಲ್ಟ್-ಸುನಿಲ್ ನರೈನ್ ಇದ್ದಾರೆ. ಆದರೆ, ಕೇವಲ ಭಾರತೀಯ ಆಟಗಾರರನ್ನೇ ಹೊಂದಿರುವ ಜೋಡಿಗಳಲ್ಲಿ ಜೈಸ್ವಾಲ್-ಸೂರ್ಯವಂಶಿ ಈಗ ಅಗ್ರಸ್ಥಾನದಲ್ಲಿದ್ದಾರೆ.
ಬೆಂಗಳೂರು, ಏಪ್ರಿಲ್ 05: ಬೆಂಗಳೂರಿನ ದೇವನಹಳ್ಳಿ ಸಮೀಪದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂದು ಬೆಳಗ್ಗೆ ಇಂಡಿಗೋ ವಿಮಾನದಲ್ಲಿ ಹುಸಿ ಬಾಂಬ್ ಬೆದರಿಕೆ ಪ್ರಕರಣ ಆತಂಕ ಮೂಡಿಸಿತ್ತು. ದೆಹಲಿಗೆ ತೆರಳುತ್ತಿದ್ದ ವಿಮಾನದ ಶೌಚಾಲಯದಲ್ಲಿ ಬಾಂಬ್ ಇದೆ ಎಂದು ಬರೆದ ಟಿಷ್ಯೂ ಪೇಪರ್ ಪತ್ತೆಯಾಗುತ್ತಿದ್ದಂತೆ ತಕ್ಷಣ ಎಚ್ಚರಿಕೆ ಕ್ರಮ ಕೈಗೊಳ್ಳಲಾಯಿತು.ವಿಮಾನದಲ್ಲಿದ್ದ 183 ಪ್ರಯಾಣಿಕರನ್ನು ಕೆಳಗಡೆ ಇಳಿಸಿ ತಪಾಸಣೆ ನಡೆಸಿದ ನಂತರ ಹುಸಿ ಬೆದರಿಕೆಯೆಂದು ಗೊತ್ತಾಗಿ ಸಿಬ್ಬಂದಿ ನಿಟ್ಟುಸಿರು ಬಿಟ್ಟಿದ್ದಾರೆ.
ಹುಸಿ ಬೆದರಿಕೆ ಹಾಕಿದವರಿಗಾಗಿ ಶೋಧ
ಪೈಲಟ್ ಏರ್ ಟ್ರಾಫಿಕ್ ಕಂಟ್ರೋಲ್‌ಗೆ ಮಾಹಿತಿ ನೀಡಿದ ನಂತರ, ವಿಮಾನದಲ್ಲಿದ್ದ 183 ಪ್ರಯಾಣಿಕರನ್ನು ತುರ್ತಾಗಿ ಕೆಳಗಿಳಿಸಿ ಸಂಪೂರ್ಣ ತಪಾಸಣೆ ನಡೆಸಲಾಯಿತು. ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾದರೂ, ಯಾವುದೇ ಸ್ಫೋಟಕ ಅಥವಾ ಅನುಮಾನಾಸ್ಪದ ವಸ್ತು ಪತ್ತೆಯಾಗದ ಹಿನ್ನೆಲೆಯಲ್ಲಿ ಇದು ಹುಸಿ ಬೆದರಿಕೆ ಎಂದು ಅಧಿಕಾರಿಗಳು ಘೋಷಿಸಿದ್ದಾರೆ. ವಿಮಾನವು ನಂತರ ದೆಹಲಿಗೆ ಸುರಕ್ಷಿತವಾಗಿ ಪ್ರಯಾಣ ಮುಂದುವರಿಸಿದೆ.
ವಿಮಾನದ ಶೌಚಾಯಲದಲ್ಲಿ ಬಾಂಬ್ ಇದೆ ಎಂದು ಟಿಷ್ಯೂ ಪೇಪರ್‌ನಲ್ಲಿ ಬೆದರಿಕೆ ಸಂದೇಶ ಬರೆದಿರುವುದು ವಿಮಾನದಲ್ಲಿದ್ದ ಪ್ರಯಾಣಿಕರಲ್ಲೆ ಒಬ್ಬರಿರಬಹುದು ಎಂಬ ಶಂಕೆ ವ್ಯಕ್ತವಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಕಿಡಿಗೇಡಿಗಳನ್ನು ಪತ್ತೆಹಚ್ಚಲು ಪೊಲೀಸರು ತನಿಖೆ ಆರಂಭಿಸಿದ್ದಾರೆ.
ದೇಶದ ರಕ್ಷಣಾ ಪಡೆಯಲ್ಲಿ ಸೇವೆ ಸಲ್ಲಿಸುವುದರ ಜೊತೆಗೆ ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಲು ಬಯಸುವ ಯುವಜನರಿಗೆ ಭಾರತೀಯ ನೌಕಾಪಡೆಯು ಅದ್ಭುತ ಅವಕಾಶವೊಂದನ್ನು ಕಲ್ಪಿಸಿದೆ. 2026ನೇ ಸಾಲಿನ ಅಗ್ನಿವೀರ್ MR (ಸಂಗೀತಗಾರ) ಹುದ್ದೆಗಳ ಭರ್ತಿಗಾಗಿ ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದ್ದು, ಇದು ವೃತ್ತಿಜೀವನದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಲು ಬಯಸುವವರಿಗೆ ಉತ್ತಮ ವೇದಿಕೆಯಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಈ ನೇಮಕಾತಿ ಪ್ರಕ್ರಿಯೆಯ ಮೂಲಕ ದೇಶದ ಪ್ರತಿಷ್ಠಿತ ನೌಕಾಪಡೆಯ ಭಾಗವಾಗಬಹುದಾಗಿದೆ.
ಈ ನೇಮಕಾತಿಯ ಆನ್‌ಲೈನ್ ಅರ್ಜಿ ಪ್ರಕ್ರಿಯೆಯು ಏಪ್ರಿಲ್ 11, 2026 ರಿಂದ ಅಧಿಕೃತವಾಗಿ ಪ್ರಾರಂಭವಾಗಲಿದೆ. ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಏಪ್ರಿಲ್ 26, 2026 ರವರೆಗೆ ಕಾಲಾವಕಾಶ ನೀಡಲಾಗಿದೆ. ಕೊನೆಯ ಕ್ಷಣದ ತಾಂತ್ರಿಕ ತೊಂದರೆಗಳನ್ನು ತಪ್ಪಿಸಲು ಆಸಕ್ತರು ನಿಗದಿತ ಅವಧಿಯೊಳಗೆ ಭಾರತೀಯ ನೌಕಾಪಡೆಯ ಅಧಿಕೃತ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ನೋಂದಾಯಿಸಿಕೊಳ್ಳಲು ಸೂಚಿಸಲಾಗಿದೆ.
ಅರ್ಹತೆಯ ಮಾನದಂಡಗಳನ್ನು ನೋಡುವುದಾದರೆ, ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ಮಂಡಳಿಯಿಂದ ಕನಿಷ್ಠ ಶೇ.50 ಅಂಕಗಳೊಂದಿಗೆ 10ನೇ ತರಗತಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವುದು ಕಡ್ಡಾಯವಾಗಿದೆ. ಈ ಶೈಕ್ಷಣಿಕ ಅರ್ಹತೆಯ ಜೊತೆಗೆ ಸಂಗೀತ ಕ್ಷೇತ್ರದಲ್ಲಿನ ಪರಿಣತಿಯು ಅಭ್ಯರ್ಥಿಗಳಿಗೆ ಹೆಚ್ಚಿನ ಬಲ ನೀಡಲಿದೆ. ಆಯ್ಕೆ ಪ್ರಕ್ರಿಯೆಯು ಪ್ರಮುಖವಾಗಿ ಅಭ್ಯರ್ಥಿಗಳು 10ನೇ ತರಗತಿಯಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ (Merit Basis) ನಡೆಯಲಿದ್ದು, ನಂತರದ ಹಂತಗಳಲ್ಲಿ ಅಗತ್ಯವಿರುವ ಇತರ ಪರೀಕ್ಷೆಗಳನ್ನು ನಡೆಸಲಾಗುತ್ತದೆ.
ಅರ್ಜಿ ಸಲ್ಲಿಸುವ ಆಕಾಂಕ್ಷಿಗಳು ನೌಕಾಪಡೆಯ ಅಧಿಕೃತ ಪೋರ್ಟಲ್‌ಗೆ ಭೇಟಿ ನೀಡಿ, ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ಸರಿಯಾಗಿ ಅಪ್‌ಲೋಡ್ ಮಾಡಬೇಕಾಗುತ್ತದೆ. ಅರ್ಜಿ ಸಲ್ಲಿಸಿದ ನಂತರ ಮಾಹಿತಿಯನ್ನು ಮತ್ತೊಮ್ಮೆ ಪರಿಶೀಲಿಸಿ ದೃಢೀಕರಿಸುವುದು ಅವಶ್ಯಕ. ದೇಶ ಸೇವೆ ಮತ್ತು ಕಲಾ ಪ್ರೇಮ ಎರಡನ್ನೂ ಸಮನಾಗಿ ಗೌರವಿಸುವ ಈ ಹುದ್ದೆಯು, ಯುವಜನರಿಗೆ ಗೌರವಯುತ ಬದುಕು ಮತ್ತು ಸಾಹಸಮಯ ವೃತ್ತಿಜೀವನವನ್ನು ನೀಡಲಿದೆ ಎಂಬುದು ವಿಶೇಷ.
ಉದ್ಯೋಗಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ