ಮತ್ತೊಂದು ‘ಪುಷ್ಪ’ ಚಿತ್ರ? ಆನೆ ದಂತದ ಕಳ್ಳಸಾಗಣೆಯ ಕಥೆ ‘ಕಾಟಾಳನ್’ – Kannada News | Kattalan Movie Teaser: Ivory Smuggling and Action Saga Multi Language Release details

ಅಲ್ಲು ಅರ್ಜುನ್ ನಟನೆಯ ‘ಪುಷ್ಪ’ ಸಿನಿಮಾ ಸೂಪರ್ ಹಿಟ್ ಆಯಿತು. ಈ ಚಿತ್ರದಲ್ಲಿ ರಕ್ತ ಚಂದನದ ಕಳ್ಳ ಸಾಗಣೆಯ ಕಥೆಯನ್ನು ಹೇಳಲಾಗಿತ್ತು. ಈಗ ‘ಕಾಟಾಳನ್’ ಹೆಸರಿನ ಮಲಯಾಳಂ ಸಿನಿಮಾ ತೆರೆಗೆ ಬರಲು ಸಿದ್ಧವಾಗಿದೆ. ಈ ಚಿತ್ರದ ಆನೆ ದಂತದ ಕಳ್ಳ ಸಾಗಣೆಯ ಕರಾಳ ಜಗತ್ತನ್ನು ತೆರೆದಿಡಲು ನಿರ್ದೇಶಕರು ಪ್ರಯತ್ನಿಸಿದಂತಿದೆ. ಇದರ ಜೊತೆಗೆ ಭರ್ಜರಿ ಆ್ಯಕ್ಷನ್ ಕೂಡ ಸಿನಿಮಾದಲ್ಲಿ ಇರಲಿದೆ.

‘ಕಾಟಾಳನ್’ ಸಿನಿಮಾದ ಟೀಸರ್ ರಿಲೀಸ್ ಬಿಡುಗಡೆ ಕಂಡಿದೆ. ಇದು ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚುವಂತೆ ಮಾಡಿದೆ. ಈ ಸಿನಿಮಾ ಮೇ 14ರಂದು ರಿಲೀಸ್ ಆಗಲಿದೆ. ‘ಕಾಟಾಳನ್’ ಮಲಯಾಳಂ ಚಿತ್ರ. ಈ ಸಿನಿಮಾ ಮಲಯಾಳಂ ಜೊತೆಗೆ ಕನ್ನಡ, ತಮಿಳು, ತೆಲುಗು ಹಾಗೂ ಹಿಂದಿ ಭಾಷೆಯಲ್ಲಿ ಬಿಡುಗಡೆ ಕಾಣಲಿದೆ ಎಂಬುದು ವಿಶೇಷ.

ಈ ಚಿತ್ರದಲ್ಲಿ ಪಾತ್ರಗಳ ಜೊತೆಗೆ ಆನೆಗಳು ಕೂಡ ಹೈಲೈಟ್ ಆಗಿವೆ. ಆನೆಗಳ ಜೊತೆಗಿನ ಸಾಹಸ ದೃಶ್ಯ ಟೀಸರ್​​​ನಲ್ಲಿ ಗಮನ ಸೆಳೆದಿವೆ. ದಂತದ ಕಳ್ಳಸಾಗಣೆ ವಿಷಯ ಕೂಡ ಹೈಲೈಟ್ ಆಗಿದೆ. ಸಾಮಾನ್ಯವಾಗಿ ಆನೆಗಳ ಜೊತೆಗಿನ ಸೆಣೆಸಾಟ ಎಂದಾಗ ಗ್ರಾಫಿಕ್ಸ್ ಬಳಸುತ್ತಾರೆ. ಆದರೆ, ನೈಜವಾಗಿ ಇದನ್ನು ಚಿತ್ರೀಕರಿಸಲಾಗಿದೆ. ಅಂತರಾಷ್ಟ್ರೀಯ ಸ್ಟಂಟ್ ಕೋ-ಆರ್ಡಿನೇಟರ್ ಕೇಚಾ ಖಾನ್ಫಕ್ಡಿ ನೇತೃತ್ವದಲ್ಲಿ ಥೈಲ್ಯಾಂಡ್‌ನಲ್ಲಿ ಸಾಹಸ ದೃಶ್ಯಗಳನ್ನು ಚಿತ್ರೀಕರಿಸಲಾಗಿದೆ.

‘ಕಾಟಾಳನ್’ ಸಿನಿಮಾನ ಪೌಲ್ ಜಾರ್ಜ್ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾದಲ್ಲಿ ಆ್ಯಂಟನಿ ವರ್ಗೀಸ್, ‘ಪುಷ್ಪ’ ಖ್ಯಾತಿಯ ತೆಲುಗು ನಟ ಸುನೀಲ್, ಕಬೀರ್ ಸಿಂಗ್, ದುಶಾರಾ ವಿಜಯನ್ ಮೊದಲಾದವರು ನಟಿಸಿದ್ದಾರೆ. ಯಾವುದೇ ಸಿನಿಮಾ ಯಶಸ್ಸು ಕಾಣಬೇಕು ಎಂದರೆ ಸಂಗೀತದ ಪಾತ್ರ ದೊಡ್ಡದಿರುತ್ತದೆ. ಈ ಚಿತ್ರಕ್ಕೆ ಕನ್ನಡದ ಬಿ. ಅಜನೀಶ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಟೀಸರ್​​ನ ಹಿನ್ನೆಲೆ ಸಂಗೀತ ಗಮನ ಸೆಳೆಯುವ ರೀತಿಯಲ್ಲಿದೆ.

ಇದನ್ನೂ ಓದಿ: Eko: ಮಲಯಾಳಂ ಸಿನಿಮಾ ಮೂಲಕ ಮತ್ತೊಮ್ಮೆ ಯಶಸ್ಸು ಕಂಡ ರಾಜ್ ಬಿ. ಶೆಟ್ಟಿ

ಕ್ಯೂಬ್ ಎಂಟರ್​​​ಟೇನ್​​​ಮೆಂಟ್ ಬ್ಯಾನರ್ ಅಡಿಯಲ್ಲಿ ಶರೀಫ್‌ ಮೊಹಮ್ಮದ್ ಚಿತ್ರ ನಿರ್ಮಿಸಿದ್ದಾರೆ. ಸಿನಿಮಾ ರಿಲೀಸ್​​ಗೂ ಮೊದಲೇ ಸದ್ದು ಮಾಡುತ್ತಿದ್ದು, ಒಟಿಟಿ ಹಾಗೂ ಟಿವಿ ಹಕ್ಕಿಗೆ ಬೇಡಿಕೆ ಬಂದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

‘ಕಲ್ಟ್’ ಟ್ರೈಲರ್ ರಿಲೀಸ್: ಇದು ಭಗ್ನ ಪ್ರೇಮಿಯ ಕತೆ – Kannada News | Zaid Khan starrer Cult Kannada Movie trailer released

ಸಚಿವ ಜಮೀರ್ ಅಹ್ಮದ್ (Zameer Ahmed) ಪುತ್ರ ಝೈದ್ ಖಾನ್ (Zaid Khan) ನಟಿಸಿರುವ ‘ಕಲ್ಟ್’ ಸಿನಿಮಾದ ಟ್ರೈಲರ್ ಇದೀಗ ಬಿಡುಗಡೆ ಆಗಿದೆ. ಸಿನಿಮಾದ ಪೋಸ್ಟರ್​​ನಿಂದ ಸಖತ್ ಗಮನ ಸೆಳೆದಿದ್ದ ‘ಕಲ್ಟ್’ ಸಿನಿಮಾಕ್ಕೆ ಮಲೈಕಾ ವಸುಪಾಲ್ ನಾಯಕಿ. ಝೈದ್ ಖಾನ್ ಮತ್ತು ಮಲೈಕಾ ಅವರು ಸಿನಿಮಾಕ್ಕೆ ಭರ್ಜರಿ ಪ್ರಚಾವನ್ನು ಸಹ ಮಾಡಿದ್ದಾರೆ. ಸಿನಿಮಾದ ಟ್ರೈಲರ್ ಇದೀಗ ಬಿಡುಗಡೆ ಆಗಿದ್ದು, ಮೇಕಿಂಗ್, ಆಕ್ಷನ್ ದೃಶ್ಯಗಳು ಮತ್ತು ಭಾವುಕ ದೃಶ್ಯಗಳಿಂದ ಟ್ರೈಲರ್ ಗಮನ ಸೆಳೆಯುತ್ತಿದೆ.

‘ಕಲ್ಟ್’ ಟ್ರೈಲರ್ ನೋಡಿದರೆ ಇದು ಪಕ್ಕಾ ಭಗ್ನ ಪ್ರೇಮಿಯ ಕತೆ ಎಂಬುದು ತಿಳಿಯುತ್ತದೆ. ಝೈದ್ ಖಾನ್ ಮಾಧವ ಪಾತ್ರದಲ್ಲಿ ನಟಿಸಿದ್ದರೆ ಮಲೈಕಾ ಗೀತಾ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾನಲ್ಲಿ ರಚಿತಾ ರಾಮ್ ಸಹ ನಟಿಸಿದ್ದು, ಅವರುದ್ದ ಕೇವಲ ಅತಿಥಿ ಪಾತ್ರ ಮಾತ್ರವೇ ಅಲ್ಲ ಎಂಬುದು ಟ್ರೈಲರ್​​ನಲ್ಲಿಯೇ ತಿಳಿದು ಬರುತ್ತಿದೆ. ಪ್ರೀತಿಯನ್ನು ಕಳೆದುಕೊಂಡು ಮದ್ಯದ ದಾಸನಾದ ಯುವಕನ ಪಾತ್ರದಲ್ಲಿ ಝೈದ್ ಖಾನ್ ನಟಿಸಿದ್ದಾರೆ.

ಸಿನಿಮಾದಲ್ಲಿ ಪ್ರೇಮಿಯಾಗಿ, ಭಗ್ನ ಪ್ರೇಮಿಯಾಗಿ ಹೀಗೆ ಎರಡು ಶೇಡ್​​ನಲ್ಲಿ ಝೈದ್ ಖಾನ್ ಕಾಣಿಸಿಕೊಂಡಿರುವುದು ಟ್ರೈಲರ್​​ನಲ್ಲಿಯೇ ತಿಳಿದು ಬರುತ್ತಿದೆ. ಮಲೈಕಾ ವಸುಪಾಲ್ ಟ್ರೈಲರ್​​ನಲ್ಲಿ ಕಡಿಮೆ ಕಾಣಿಸಿಕೊಂಡರೂ ಸಹ ಬಲು ಅಂದವಾಗಿ ಕಾಣುತ್ತಾರೆ. ರಚಿತಾ ರಾಮ್ ಅವರ ಪಾತ್ರ ಬೋಲ್ಡ್ ಆಗಿರುವ ಜೊತೆಗೆ ಪ್ರಬುದ್ಧತೆಯನ್ನೂ ಒಳಗೊಂಡಿರುವುದು ಟ್ರೈಲರ್​​ನಿಂದ ತಿಳಿದು ಬರುತ್ತಿದೆ. ಕೆಲವು ಆಕ್ಷನ್ ಸೀನ್​​ಗಳನ್ನು ಟ್ರೈಲರ್​​ನಲ್ಲಿ ತೋರಿಸಲಾಗಿದ್ದು, ಆಕ್ಷನ್ ಒಳ್ಳೆಯ ಗುಣಮಟ್ಟದಿಂದ ಕೂಡಿರುವುದು ಕಾಣುತ್ತಿದೆ.

ಇದನ್ನೂ ಓದಿ:‘ಜನ ನಾಯಗನ್’ ಟ್ರೈಲರ್ ಬಿಡುಗಡೆ: ರೀಮೇಕಾ? ಸ್ವಮೇಕಾ?

ಒಟ್ಟಾರೆಯಾಗಿ ‘ಕಲ್ಟ್’ ಸಿನಿಮಾದ ಟ್ರೈಲರ್ ಕುತೂಹಲ ಮೂಡಿಸುವಂತಿದೆ. ಸಿನಿಮಾನಲ್ಲಿ ಪ್ರೀತಿ, ರೊಮ್ಯಾನ್ಸ್, ಆಕ್ಷನ್, ಭಗ್ನ ಪ್ರೇಮ, ಭಗ್ನ ಪ್ರೇಮದ ಬಳಿಕ ಮತ್ತೆ ಪ್ರೇಮದಲ್ಲಿ ಬೀಳುವುದು, ಮಗ ವ್ಯಸನಗಳಿಗೆ ದಾಸನಾದರೆ ಪೋಷಕರು ಅನುಭವಿಸುವ ನೋವು, ಝೈದ್ ಖಾನ್ (ಮಾಧವ) ಭಗ್ನ ಪ್ರೇಮಿ ಯಾಕಾದ, ರಚಿತಾ ರಾಮ್ ಪಾತ್ರ, ಮಾಧವನ ಹುಡುಕಿ ಬರುವುದೇಕೆ? ಇನ್ನೂ ಹಲವು ಅಂಶಗಳು, ಕುತೂಹಲಗಳು ಸಿನಿಮಾನಲ್ಲಿ ಇರುವಂತಿದೆ.

‘ಕಲ್ಟ್’ ಸಿನಿಮಾವನ್ನು ಅನಿಲ್ ಕುಮಾರ್ ನಿರ್ದೇಶನ ಮಾಡಿದ್ದಾರೆ. ಸಿನಿಮಾಕ್ಕೆ ಸಂಗೀತ ನೀಡಿರುವುದು ಅರ್ಜುನ್ ಜನ್ಯ. ಎ ಹರ್ಷ ಕೊರಿಯೋಗ್ರಫಿ ಮಾಡಿದ್ದಾರೆ. ಝೈದ್ ಖಾನ್, ಮಲೈಕಾ ಹಾಗೂ ರಚಿತಾ ರಾಮ್ ಜೊತೆಗೆ ಅಚ್ಯುತ್ ಕುಮಾರ್, ರಂಗಾಯಣ ರಘು ಇನ್ನೂ ಕೆಲ ಒಳ್ಳೆಯ ನಟ-ನಟಿಯರಿದ್ದಾರೆ. ಸಿನಿಮಾ ನಿರ್ಮಾಣ ಮಾಡಿರುವುದು ಲೋಕಿ ಸಿನಿಮಾಸ್. ಜನವರಿ 23ರಂದು ಸಿನಿಮಾ ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 2:49 pm, Sat, 17 January 26

Source link

ಟೀಮ್ ಇಂಡಿಯಾ ಪ್ಲೇಯಿಂಗ್ 11: ಬಲಗೈ ಬದಲು ಎಡಗೈ ವೇಗಿಗೆ ಸ್ಥಾನ – Kannada News | India’s Predicted Playing XI For 3rd ODI Against New Zealand

ಭಾರತ ಮತ್ತು ನ್ಯೂಝಿಲೆಂಡ್ ನಡುವಣ ಮೂರನೇ ಏಕದಿನ ಪಂದ್ಯವು ಭಾನುವಾರ (ಜ.18) ನಡೆಯಲಿದೆ. ಇಂದೋರ್​ನ ಹೋ್ಲ್ಕರ್ ಸ್ಟೇಡಿಯಂನಲ್ಲಿ ಜರುಗಲಿರುವ ಈ ಪಂದ್ಯಕ್ಕಾಗಿ ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್​ನಲ್ಲಿ ಒಂದು ಬದಲಾವಣೆ ಕಂಡು ಬರುವುದು ಬಹುತೇಕ ಖಚಿತ. ಅದರಲ್ಲೂ ಬಲಗೈ ವೇಗಿಯನ್ನು ಹೊರಗಿಟ್ಟು ಎಡಗೈ ವೇಗದ ಬೌಲರ್​ಗೆ ಸ್ಥಾನ ನೀಡುವ ಸಾಧ್ಯತೆ ಹೆಚ್ಚಿದೆ.

ಏಕೆಂದರೆ ಈ ಸರಣಿಯ ಮೊದಲೆರಡು ಪಂದ್ಯಗಳಲ್ಲಿ ಕಣಕ್ಕಿಳಿದಿದ್ದ ಬಲಗೈ ವೇಗಿಗಳಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿಲ್ಲ. ಅದರಲ್ಲೂ ಮೊಹಮ್ಮದ್ ಸಿರಾಜ್ ಹಾಗೂ ಪ್ರಸಿದ್ಧ್ ಕೃಷ್ಣ ವಿಕೆಟ್ ಪಡೆಯುವಲ್ಲಿ ವಿಫಲರಾಗುತ್ತಿದ್ದಾರೆ. ಹೀಗಾಗಿ ಮೂರನೇ ಪಂದ್ಯದಿಂದ ಇವರಿಬ್ಬರಲ್ಲಿ ಒಬ್ಬರನ್ನು ಕೈ ಬಿಡುವುದು ಖಚಿತ.

ಇಲ್ಲಿ ಪ್ರಸಿದ್ಧ್ ಕೃಷ್ಣ ಅವರನ್ನು ಪ್ಲೇಯಿಂಗ್ ಇಲೆವೆನ್​ನಿಂದ ಕೈ ಬಿಡುವ ಸಾಧ್ಯತೆ ಹೆಚ್ಚಿದೆ. ಅವರ ಬದಲಿಗೆ ಎಡಗೈ ವೇಗಿ ಅರ್ಷದೀಪ್ ಸಿಂಗ್ ಅವರನ್ನು ಆಡುವ ಬಳಗಕ್ಕೆ ಸೇರಿಕೊಳ್ಳಬಹುದು. ಈ ಮೂಲಕ ಟೀಮ್ ಇಂಡಿಯಾ ಮೂವರು ವೇಗಿಗಳೊಂದಿಗೆ ಕಣಕ್ಕಿಳಿಯಬಹುದು.

ಅಂದರೆ ಮೂರನೇ ಪಂದ್ಯದಲ್ಲಿ ವೇಗಿಗಳಾಗಿ ಮೊಹಮ್ಮದ್ ಸಿರಾಜ್, ಹರ್ಷಿತ್ ರಾಣಾ ಹಾಗೂ ಅರ್ಷದೀಪ್ ಸಿಂಗ್ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ. ಅವರೊಂದಿಗೆ ನಿತೀಶ್ ಕುಮಾರ್ ರೆಡ್ಡಿ ಕೂಡ ಹೆಚ್ಚುವರಿ ವೇಗಿಯಾಗಿ ತಂಡದಲ್ಲಿ ಇರಲಿದ್ದಾರೆ. ಹಾಗೆಯೇ ಸ್ಪಿನ್ನರ್ ಆಗಿ ಕುಲ್ದೀಪ್ ಯಾದವ್ ಈ ಪಂದ್ಯದಲ್ಲೂ ಮುಂದುವರೆಯುವುದನ್ನು ನಿರೀಕ್ಷಿಸಬಹುದು.

ಅದರಂತೆ ಟೀಮ್ ಇಂಡಿಯಾ ಪರ ಆರಂಭಿಕರಾಗಿ ಶುಭ್​​ಮನ್ ಗಿಲ್ ಹಾಗೂ ರೋಹಿತ್ ಶರ್ಮಾ ಕಣಕ್ಕಿಳಿದರೆ, ಮೂರನೇ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ ಆಡಲಿದ್ದಾರೆ. ಇನ್ನು ನಾಲ್ಕನೇ ಕ್ರಮಾಂಕದಲ್ಲಿ ಶ್ರೇಯಸ್ ಅಯ್ಯರ್ ಕಾಣಿಸಿಕೊಂಡರೆ, ವಿಕೆಟ್ ಕೀಪರ್ ಬ್ಯಾಟರ್ ಕೆಎಲ್ ರಾಹುಲ್ ಐದನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಲಿದ್ದಾರೆ.

ಇನ್ನು ಆಲ್​ರೌಂಡರ್​ಗಳಾಗಿ ರವೀಂದ್ರ ಜಡೇಜಾ ಹಾಗೂ ನಿತೀಶ್ ಕುಮಾರ್ ರೆಡ್ಡಿ ಸ್ಥಾನ ಪಡೆಯಲಿದ್ದಾರೆ. ಇನ್ನುಳಿದಂತೆ ಮೊಹಮ್ಮದ್ ಸಿರಾಜ್, ಹರ್ಷಿತ್ ರಾಣಾ, ಅರ್ಷದೀಪ್ ಸಿಂಗ್ ಹಾಗೂ ಕುಲ್ದೀಪ್ ಯಾದವ್ ಬೌಲರ್​ಗಳಾಗಿ ಕಣಕ್ಕಿಳಿಯಲಿದ್ದಾರೆ. ಅದರಂತೆ ಟೀಮ್ ಇಂಡಿಯಾದ ಸಂಭಾವ್ಯ ಪ್ಲೇಯಿಂಗ್ ಇಲೆವೆನ್ ಈ ಕೆಳಗಿನಂತಿರಲಿದೆ…

  • ಶುಭಮನ್ ಗಿಲ್ (ನಾಯಕ)
  • ರೋಹಿತ್ ಶರ್ಮಾ
  • ವಿರಾಟ್ ಕೊಹ್ಲಿ
  • ಶ್ರೇಯಸ್ ಅಯ್ಯರ್
  • ಕೆಎಲ್ ರಾಹುಲ್ (ವಿಕೆಟ್ ಕೀಪರ್)
  • ರವೀಂದ್ರ ಜಡೇಜಾ
  • ನಿತೀಶ್ ಕುಮಾರ್ ರೆಡ್ಡಿ
  • ಹರ್ಷಿತ್ ರಾಣಾ
  • ಕುಲ್ದೀಪ್ ಯಾದವ್
  • ಮೊಹಮ್ಮದ್ ಸಿರಾಜ್
  • ಅರ್ಷದೀಪ್ ಸಿಂಗ್.

ಇದನ್ನೂ ಓದಿ: ಹೊಸ ಇತಿಹಾಸ… ಯಾರಿಗೂ ಸಾಧ್ಯವಾಗದ ದಾಖಲೆ ಬರೆದ ಶ್ರೇಯಾಂಕಾ ಪಾಟೀಲ್

ನ್ಯೂಝಿಲೆಂಡ್ ಸಂಭಾವ್ಯ ಇಲೆವೆನ್: ಡೆವೊನ್ ಕಾನ್ವೇ, ಹೆನ್ರಿ ನಿಕೋಲ್ಸ್, ವಿಲ್ ಯಂಗ್, ಡೇರಿಲ್ ಮಿಚೆಲ್, ಗ್ಲೆನ್ ಫಿಲಿಪ್ಸ್, ಮಿಚೆಲ್ ಹೇ(ವಿಕೆಟ್ ಕೀಪರ್), ಮೈಕೆಲ್ ಬ್ರೇಸ್‌ವೆಲ್ (ನಾಯಕ), ಝಕಾರಿ ಫೌಲ್ಕ್ಸ್, ಕ್ರಿಸ್ಟಿಯನ್ ಕ್ಲಾರ್ಕ್, ಕೈಲ್ ಜೇಮಿಸನ್, ಜೇಡನ್ ಲೆನ್ನೆಕ್ಸ್.

Source link

‘ನಾನು ಬಿಗ್ ಬಾಸ್​​ಗೆ ಬರಲು ಆ ವ್ಯಕ್ತಿ ಕಾರಣ’; ಮಾಜಿ ಸ್ಪರ್ಧಿಗೆ ಗಿಲ್ಲಿ ಧನ್ಯವಾದ – Kannada News | Thukali Santhosh was The reason to Gilli Nata’s Bigg Boss Kannada 12 Entry

‘ಬಿಗ್ ಬಾಸ್ ಕನ್ನಡ ಸೀಸನ್ 12’ರ (Bigg Boss) ಸ್ಪರ್ಧಿ ಗಿಲ್ಲಿ ನಟಗೆ ಅಭಿಮಾನಿ ಬಳಗ ಹಿರಿದಾಗಿದೆ. ಅವರಿಗೆ ಇನ್​​ಸ್ಟಾಗ್ರಾಮ್​​ನಲ್ಲಿ 1.5 ಮಿಲಿಯನ್ ಅಂದರೆ 15 ಲಕ್ಷ ಹಿಂಬಾಲಕರು ಸಿಕ್ಕಿದ್ದಾರೆ. ಇದು ಅವರ ಜನಪ್ರಿಯತೆಗೆ ಹಿಡಿದ ಕೈಗನ್ನಡಿ. ಈಗ ಅವರು ಬಿಗ್ ಬಾಸ್​​ಗೆ ಬರಲು ಕಾರಣ ಯಾರು ಎಂಬುದನ್ನು ರಿವೀಲ್ ಮಾಡಿದ್ದಾರೆ. ಅವರು ಬಿಗ್ ಬಾಸ್​​ನ ಓರ್ವ ಮಾಜಿ ಸ್ಪರ್ಧಿಗೆ ಧನ್ಯವಾದ ಹೇಳಿದ್ದಾರೆ.

ಗಿಲ್ಲಿ ನಟ ಅವರು ಜೀ ಕನ್ನಡದಲ್ಲಿ ಶೋಗಳನ್ನು ನೀಡುತ್ತಾ ಬಂದವರು. ಅವರು ಮೊದಲ ಬಾರಿಗೆ ಕಲರ್ಸ್​​ನಲ್ಲಿ ಕಾಣಿಸಿಕೊಂಡಿದ್ದು ‘ಕ್ವಾಟ್ಲೆ ಕಿಚನ್’ ಶೋನಲ್ಲಿ. ಇದರಲ್ಲಿ ಅವರು ಹೆಚ್ಚು ದಿನ ಇರಲಿಲ್ಲ. ಆ ಬಳಿಕ ಗಿಲ್ಲಿ ನಟ ಅವರು ‘ಬಿಗ್ ಬಾಸ್’ ಶೋಗೆ ಬಂದು ಗಮನ ಸೆಳೆದರು. ಅವರು ಅದ್ಭುತವಾಗಿ ಮನರಂಜನೆ ನೀಡುವ ಮೂಲಕ ಎಲ್ಲರ ಮೆಚ್ಚುಗೆ ಪಡೆದಿದ್ದಾರೆ. ಈಗ ಅವರು ಇಲ್ಲಿಗೆ ಬರಲು ಕಾರಣ ತುಕಾಲಿ ಸಂತೋಷ್ ಎಂಬ ವಿಷಯ ಗೊತ್ತಾಗಿದೆ.

ತುಕಾಲಿ ಸಂತೋಷ್ ಅವರು ‘ಗಿಚ್ಚಿ ಗಿಲಿಗಿಲಿ’ ತಂಡದಲ್ಲಿ ಇದ್ದಾರೆ. ಈ ತಂಡ ಬಿಗ್ ಬಾಸ್ ಮನೆಗೆ ಬಂದಿತ್ತು. ಈ ವೇಳೆ ಇಷ್ಟದ ಸ್ಪರ್ಧಿ ಯಾರು ಎಂಬುದನ್ನು ಕೇಳಲಾಯಿತು. ಇದಕ್ಕೆ ಉತ್ತರಿಸಿದ ಗಿಲ್ಲಿ, ಹಲವರ ಹೆಸರನ್ನು ಹೇಳಿದರು. ಆದರೆ, ತುಕಾಲಿ ಹೆಸರನ್ನು ಅವರು ಉಲ್ಲೇಖ ಮಾಡಿಲ್ಲ. ಆಗ ತುಕಾಲಿ ಸಂತು ಅವರು, ‘ನನ್ನ ಹೆಸರನ್ನು ಹೇಳ್ತೀಯಾ ಎಂದು ಕಾಯ್ತಾ ಇದ್ದೆ’ ಎಂದರು.

‘ನಿನ್ನನ್ನು ಮರೆಯೋಕೆ ಹೇಗೆ ಸಾಧ್ಯ? ಈ ಶೋಗೆ ಬರೋಕೆ ನೀನು ಕಾರಣ. ಮರೆತು ಬಿಟ್ಟೆಯಾ? ಅಣ್ಣನೇ ಸಂಧಾನ ಮಾಡ್ಸಿದ್ದು’ ಎಂದು ಗಿಲ್ಲಿ ಹೇಳಿದರು. ಏನು ಸಂಧಾನ ಎಂಬಿತ್ಯಾದಿ ವಿಷಯವನ್ನು ಉಲ್ಲೇಖಿಸಿಲ್ಲ. ಗಿಲ್ಲಿ ಈ ಶೋಗೆ ಬರೋಕೆ ತುಕಾಲಿ ಸಂತೋಷ್ ಕಾರಣ ಎಂಬ ವಿಷಯ ಸ್ಪಷ್ಟವಾಗಿದೆ. ಇದನ್ನು ಕೇಳಿ ಅಭಿಮಾನಿಗಳಿಗೆ ಖುಷಿ ಆಗಿದೆ. ಅವರಿಂದಾಗಿ ಒಂದೊಳ್ಳೆಯ ಕೆಲಸ ಆಗಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಇದನ್ನೂ ಓದಿ: ಗಿಲ್ಲಿಗೆ ಒಳ್ಳೆಯದಾಗಲಿ, ಅವನ ಹೆಸರಲ್ಲಿ ನಡೆಯುತ್ತಿರುವ ನಾಟಕಕ್ಕಲ್ಲ; ಸುದೀಪ್ ಆಪ್ತ ಚಕ್ರವರ್ತಿ ಚಂದ್ರಚೂಡ್

ಈ ಸೀಸನ್ ಅಲ್ಲಿ ಗಿಲ್ಲಿ ಇಲ್ಲದೆ ಇದ್ದಿದ್ದರೆ ಸಾಕಷ್ಟು ನಷ್ಟ ಆಗುತ್ತಿತ್ತು ಎಂದು ಅನೇಕರು ಹೇಳಿದ್ದಾರೆ. ಸಾಮಾನ್ಯರಿಂದ ಹಿಡಿದು ಸೆಲೆಬ್ರಿಟಿವರೆಗೆ ಎಲ್ಲರೂ ಗಿಲ್ಲಿಯ ಅಭಿಮಾನಿಯಾಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಗದಗ: ಆಂಜನೇಯ ದೇಗುಲದಲ್ಲಿ ಮೂರು ದಿನಗಳಿಂದ ನಿರಂತರ ಕೇಳಿಸುತ್ತಿದೆ ನಿಗೂಢ ಗೆಜ್ಜೆ ಶಬ್ದ! – Kannada News | Mysterious Anklet Sounds Echo for Three Days at Anjaneya Temple in Gadag, Villagers on Night Vigil

ಗದಗ, ಜನವರಿ 17: ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಕೊರ್ಲಹಳ್ಳಿಯ ಆಂಜನೇಯ ದೇಗುಲದಲ್ಲಿ ನಿಗೂಢ ಗೆಜ್ಜೆ ಶಬ್ದ ಮೂರು ದಿನಗಳಿಂದ ನಿರಂತರವಾಗಿ ಕೇಳಿಬರುತ್ತಿದ್ದು, ಈ ಅನಿರೀಕ್ಷಿತ ಘಟನೆಯಿಂದ ಗ್ರಾಮಸ್ಥರಲ್ಲಿ ಭೀತಿ ಆವರಿಸಿದೆ. ಮೂಲಗಳ ಪ್ರಕಾರ, ಗ್ರಾಮದಲ್ಲಿ ನಿರ್ಮಿಸಲಾಗುತ್ತಿರುವ ಹೊಸ ದೇವಾಲಯಕ್ಕೆಂದು ತಂದ ದುರ್ಗಮ್ಮ ಮತ್ತು ಮಾಯಮ್ಮ ದೇವಿ ಮೂರ್ತಿಗಳನ್ನು ಆಂಜನೇಯ ದೇಗುಲದಲ್ಲಿ ತಾತ್ಕಾಲಿಕವಾಗಿ ಇರಿಸಿದ ನಂತರ ಗೆಜ್ಜೆನಾದ ಕೇಳಿಸಲು ಪ್ರಾರಂಭಿಸಿದೆ. ಗುರುವಾರ ರಾತ್ರಿ 8 ಗಂಟೆಯಿಂದ ಆರಂಭವಾದ ಈ ಶಬ್ದ ಇದುವರೆಗೆ ನಿಂತಿಲ್ಲ ಎಂದು ಸ್ಥಳೀಯ ನಿವಾಸಿ ಮಹೇಶ್ ತಿಳಿಸಿದ್ದಾರೆ.

ಗೆಜ್ಜೆ ಶಬ್ದ ಕೇಳಿದ ಕೂಡಲೇ ನೂರಾರು ಗ್ರಾಮಸ್ಥರು ದೇವಸ್ಥಾನಕ್ಕೆ ಓಡೋಡಿ ಬಂದಿದ್ದು, ರಾತ್ರಿಯಿಡೀ ಅಲ್ಲೇ ಜಾಗರಣೆ ಮಾಡಿದ್ದಾರೆ. ಈ ಶಬ್ದ ದೇವಸ್ಥಾನದ ಗರ್ಭಗುಡಿಯಿಂದ ಕೇಳಿಬರುತ್ತಿದೆ ಎನ್ನಲಾಗಿದೆ. ಭಯದಿಂದ ಯಾವುದೇ ಗ್ರಾಮಸ್ಥರು ಒಳಗಡೆ ಹೋಗಲು ಮುಂದಾಗಿಲ್ಲ. ಗ್ರಾಮಸ್ಥರು ಈ ಘಟನೆಯ ಬಗ್ಗೆ ಗ್ರಾಮ ಪಂಚಾಯತಿ ಅಧಿಕಾರಿಗಳಿಗೆ ತಿಳಿಸಿದ್ದು, ಸಂಬಂಧಪಟ್ಟ ಅಧಿಕಾರಿಗಳು ಬಂದು ಪರಿಶೀಲಿಸಬೇಕೆಂದು ಒತ್ತಾಯಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Video: ಅಜ್ಜ ಅಜ್ಜಿಯನ್ನು ಮೊದಲ ಬಾರಿಗೆ ವಿಮಾನ ಹತ್ತಿಸಿ ದುಬೈಗೆ ಕರೆದೊಯ್ದ ಮೊಮ್ಮಗ – Kannada News | Grandson takes grandparents on a plane for the first time

ತಾನು ಚೆನ್ನಾಗಿ ಓದಿ, ಒಂದೊಳ್ಳೆ ಉದ್ಯೋಗ ಪಡೆದುಕೊಂಡು ತನ್ನ ಕುಟುಂಬವನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಅಮ್ಮ ಅಪ್ಪ, ಅಜ್ಜ, ಅಜ್ಜಿಯೊಂದಿಗೆ (grand parents) ಊರು ಸುತ್ತಬೇಕು. ಅವರ  ಸಣ್ಣ ಪುಟ್ಟ ಆಸೆಗಳನ್ನು ಈಡೇರಿಸಬೇಕು ಹೀಗೆ ಸಾವಿರಾರು ಕನಸುಗಳನ್ನು ಕಂಡಿರುತ್ತಾರೆ. ಆ ಕನಸುಗಳು ನನಸಾಗುವ ಘಳಿಗೆ ಬಂದರೆ ಹೇಗಿರುತ್ತೆ ಎಂದು ನೀವು ಒಮ್ಮೆಯಾದ್ರೂ ಊಹಿಸಿದ್ದೀರಾ. ಆದರೆ ಈ ಹಿರಿಜೀವಗಳು ಮೊಮ್ಮಗನಿಂದಾಗಿ (grandson) ವಿಮಾನ ಹತ್ತುವಂತಾಗಿದೆ. ಹೌದು, ಮೊಮ್ಮಗನು ತನ್ನ ಅಜ್ಜಿಯನ್ನು ಮೊದಲ ಬಾರಿಗೆ ವಿಮಾನದಲ್ಲಿ ಕರೆದೊಯ್ದಿದ್ದು ಈ ವಿಡಿಯೋ ವೈರಲ್ ಆಗಿದೆ. ಈ ದೃಶ್ಯ ನೋಡಿದ ನೆಟ್ಟಿಗರ ಕಣ್ಣು ತುಂಬಿಬಂದಿದೆ.

ಅಂಕಿತ್ ಬಿಗ್ ಮೌತ್ (ankitranabigmouth) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ ಯುವಕನೊಬ್ಬನು ತನ್ನ ಅಜ್ಜ ಅಜ್ಜಿಯನ್ನು ಮೊದಲ ಬಾರಿಗೆ ವಿಮಾನ ಹತ್ತಿಸಿ ದುಬೈಗೆ ಕರೆದುಕೊಂಡಿರುವ ದೃಶ್ಯವನ್ನು ನೀವಿಲ್ಲಿ ನೋಡಬಹುದು. ಈ ವಿಡಿಯೋದ ಶೀರ್ಷಿಕೆಯಲ್ಲಿ ದಾದಿಜೀ ಕಿ ಫಸ್ಟ್ ಫ್ಲೈಟ್ ಎಂದು ಬರೆಯಲಾಗಿದೆ.

ವೈರಲ್ ವಿಡಿಯೋ ಇಲ್ಲಿದೆ

ಅಜ್ಜ ಅಜ್ಜಿಯ ಮೊದಲ ವಿಮಾನ ಪ್ರಯಾಣದ ಭಾವುಕ ಕ್ಷಣದ ವಿಡಿಯೋ ಇದಾಗಿದೆ. ಈ ವಿಡಿಯೋದಲ್ಲಿ ವೃದ್ಧ ದಂಪತಿಯೂ ತನ್ನ ಮೊಮ್ಮಗನ ಜೊತೆ ವಿಮಾನದಲ್ಲಿ ಏರ್‌ಪೋರ್ಟ್‌ಗೆ ತೆರಳಿ ಅಲ್ಲಿಂದ ವಿಮಾನ ಪ್ರಯಾಣಿಸಿ ದುಬೈಗೆ ಹೋಗುವುದನ್ನು ಕಾಣಬಹುದು. ಈ ಹಿರಿಜೀವಗಳು ವಿಮಾನ ಹಾರಾಟ ಸೇರಿದಂತೆ ದುಬೈನಲ್ಲಿ ಕಳೆಯುವ ಕ್ಷಣವನ್ನು ಎಂಜಾಯ್ ಮಾಡುತ್ತಿದ್ದಾರೆ. ಈ ಪ್ರಯಾಣ ಎಷ್ಟು ಖುಷಿ ತಂದಿದೆ ಎನ್ನುವುದಕ್ಕೆ ಅಜ್ಜ ಅಜ್ಜಿಯ ಮೊಗದಲ್ಲಿನ ನಗುವೇ ಸಾಕ್ಷಿಯಾಗಿದೆ.

ಇದನ್ನೂ ಓದಿ: ಇದು ವೃದ್ಧ ದಂಪತಿಯ ಶುದ್ಧ ಪ್ರೀತಿ; ಮಡದಿಯ ಹುಟ್ಟುಹಬ್ಬಕ್ಕೆ ಸರ್ಪ್ರೈಸ್ ನೀಡಿದ ವೃದ್ಧ ವ್ಯಕ್ತಿ

ಈ ವಿಡಿಯೋ 3 ಮಿಲಿಯನ್‌ಗೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ ಇಂತಹ ಮೊಮ್ಮಗನನ್ನು ಪಡೆದ ನೀವೇ ಧನ್ಯ ಎಂದಿದ್ದಾರೆ. ಇನ್ನೊಬ್ಬರು, ಅಜ್ಜ ಅಜ್ಜಿಯ ಮೊಗದಲ್ಲಿನ ಖುಷಿ ನೋಡಿ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಅನೇಕ ಜನರಿಗೆ ವಿಮಾನದಲ್ಲಿನ ಪ್ರಯಾಣ ಕನಸಿನ ಮಾತು. ಈ ದೃಶ್ಯ ನೋಡಿ ಕಣ್ಣಲ್ಲಿ ನೀರು ಬಂತು ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ನಿಧಿ ಸಿಕ್ಕ ಲಕ್ಕುಂಡಿಯಲ್ಲಿ ಉತ್ಖನನದ ವೇಳೆ ಪುರಾತನ ವಸ್ತು ಪತ್ತೆ! – Kannada News | Ancient Artifacts Unearthed During Excavation at Treasure Site in Lakkundi, Gadag, Watch Video

ಗದಗ, ಜನವರಿ 17: ಗದಗದ ಐತಿಹಾಸಿಕ ತಾಣ ಲಕ್ಕುಂಡಿಯಲ್ಲಿ ಪ್ರಸ್ತುತ ನಡೆಯುತ್ತಿರುವ ಉತ್ಖನನದಲ್ಲಿ ಶಿವಲಿಂಗಕ್ಕೆ ಸಂಬಂಧಿಸಿದ ಪುರಾತನ ವಸ್ತುವೊಂದು ಪತ್ತೆಯಾಗಿದೆ. ಲಕ್ಕುಂಡಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರ ಪ್ರಕಾರ, ಈ ವಸ್ತು ನೀರು ಹರಿಯಲು ಮಾಡಿದ ರೀತಿಯಲ್ಲಿ ಕಂಡುಬರುತ್ತಿದ್ದು, ಶಿವಲಿಂಗ ಪೂಜೆಯ ಸಂದರ್ಭದಲ್ಲಿ ಬಳಸಲಾಗುವ ವಸ್ತು ಎನ್ನಲಾಗಿದೆ. ಈ ಉತ್ಖನನ ಕಾರ್ಯಕ್ಕೆ ಯಾವುದೇ ಯಂತ್ರೋಪಕರಣಗಳನ್ನು ಬಳಸದೆ, ಪುರುಷ ಮತ್ತು ಮಹಿಳಾ ಕಾರ್ಮಿಕರಿಂದ ಮಾನವ ಸಂಪನ್ಮೂಲವನ್ನು ಬಳಸಲಾಗುತ್ತಿದೆ. ಹಿಂದೆ ಮನೆಯ ಅಡಿಪಾಯ ಅಗೆಯುವಾಗ ನಿಧಿ ಪತ್ತೆಯಾದ ನಂತರ ಉತ್ಖನನ ಕಾರ್ಯ ಚುರುಕುಗೊಂಡಿತಾದರೂ, ಈ ಗ್ರಾಮದಲ್ಲಿ ಈ ಹಿಂದೆಯೂ ಉತ್ಖನನ ಕೆಲಸ ನಡೆಯುತ್ತಿತ್ತು.

ಲಕ್ಕುಂಡಿಯ ಗತವೈಭವವನ್ನು ಮರುಕಳಿಸಲು ಮಾಜಿ ಸಚಿವರಾದ ಹೆಚ್.ಕೆ. ಪಾಟೀಲ್ ಅವರು ಪ್ರಮುಖ ಪಾತ್ರ ವಹಿಸಿದ್ದು, ದೇವಾಲಯಗಳ ಸ್ವರ್ಗ ಎಂದು ಹೆಸರಾದ ಲಕ್ಕುಂಡಿಯ ಅಭಿವೃದ್ಧಿಗೆ ಕೋಟ್ಯಂತರ ರೂಪಾಯಿ ಅನುದಾನ ಬಿಡುಗಡೆಯಾಗಿದೆ. ಆರು ದೇವಾಲಯಗಳು ಮತ್ತು ಒಂದು ಬಾವಿಯ ಅಭಿವೃದ್ಧಿಗೆ ಹತ್ತು ಕೋಟಿ ರೂಪಾಯಿ ಹಾಗೂ ಪ್ರವಾಸಿಗರ ಮೂಲಸೌಕರ್ಯಕ್ಕೆ ಐದು ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ ಎಂದು ಲಕ್ಕುಂಡಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ಸಿದ್ಧು ಪಾಟೀಲ್ ತಿಳಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬೆಂಗಳೂರಿನಲ್ಲಿ ಮುಗಿಯುತ್ತಿಲ್ಲ ರಸ್ತೆ ಗುಂಡಿ ಗೋಳು; ಗುಂಡಿಗೆ ಬಿದ್ದು ಕೈ ಮುರಿದುಕೊಂಡ ಟೆಕ್ಕಿ – Kannada News | Bengaluru Pothole Menace: Techie Suffers Fractured Hand in Varthur Accident

ಬೆಂಗಳೂರು, ಜನವರಿ 17: ಬೆಂಗಳೂರಿನಲ್ಲಿ ರಸ್ತೆ ಗುಂಡಿಗಳ ಸಮಸ್ಯೆ ಮತ್ತೆ ಮುನ್ನೆಲೆಗೆ ಬಂದಿದೆ. ವರ್ತೂರಿನಲ್ಲಿ ಜನವರಿ 12ರಂದು ಸಂಜೆ ಸುಮಾರು 5 ಗಂಟೆಗೆ ನಡೆದ ಅಪಘಾತದಲ್ಲಿ ಟೆಕ್ಕಿ ಶ್ರೀಧರ್ ಅವರು ರಸ್ತೆ ಗುಂಡಿಗೆ ಬಿದ್ದು ತಮ್ಮ ಕೈ ಮುರಿದುಕೊಂಡಿದ್ದಾರೆ. ಗುಂಜೂರು ಪಾಳ್ಯ ಸಿಡಿಪಿ ರಸ್ತೆಯಲ್ಲಿ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಅವರ ಗಾಡಿ ಗುಂಡಿಯಿಂದ ಸ್ಕಿಡ್ ಆಗಿ, ಬಲಗೈಗೆ ಫ್ರ್ಯಾಕ್ಚರ್ ಆಗಿದೆ. ವೈದ್ಯರು ಶಸ್ತ್ರಚಿಕಿತ್ಸೆಗೆ ಸಲಹೆ ನೀಡಿದ್ದಾರೆಂದು ತಿಳಿದುಬಂದಿದೆ.

ನಗರದ ರಸ್ತೆ ಗುಂಡಿಗಳಿಗೆ ಸಂಬಂಧಿಸಿದಂತೆ ಈ ಹಿಂದೆ ಬೆಂಗಳೂರು ಹೈಕೋರ್ಟ್ ಸರ್ಕಾರಕ್ಕೆ ಛೀಮಾರಿ ಹಾಕಿತ್ತು. ಅಲ್ಲದೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿರ್ದಿಷ್ಟ ದಿನಾಂಕದೊಳಗೆ ಬೆಂಗಳೂರಿನಲ್ಲಿ ಒಂದು ಗುಂಡಿಯೂ ಕಾಣಿಸಬಾರದು ಎಂದು ಗಡುವು ನೀಡಿದ್ದರು. ಆದರೆ, ಈ ಆದೇಶಗಳು ಮತ್ತು ಗಡುವುಗಳ ಹೊರತಾಗಿಯೂ ರಸ್ತೆ ಗುಂಡಿಗಳ ಸಮಸ್ಯೆ ಸಂಪೂರ್ಣವಾಗಿ ಬಗೆಹರಿದಿಲ್ಲ. ಕೆಲವೆಡೆ ತಾತ್ಕಾಲಿಕವಾಗಿ ತೇಪೆ ಹಾಕುವ ಕಾರ್ಯ ನಡೆದಿದೆಯಾದರೂ, ಇನ್ನೂ ಹಲವು ಪ್ರದೇಶಗಳಲ್ಲಿ ರಸ್ತೆ ಗುಂಡಿಗಳು ಹಾಗೆಯೇ ಉಳಿದುಕೊಂಡಿವೆ. ಟಿವಿ9 ಕನ್ನಡ ವಾಹಿನಿಯು ಗುಂಡಿಗಳ ಕುರಿತು ಅಭಿಯಾನ ನಡೆಸಿದರೂ ಸಮಸ್ಯೆ ಸಂಪೂರ್ಣ ನಿವಾರಣೆಯಾಗಿಲ್ಲ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

 

Source link

ಕೊಲೆ ಮಾಡಿದ್ದೂ ಅವನೇ, ಪೊಲೀಸರಿಗೆ ಹೇಳಿದ್ದೂ ಅವನೇ! ಆ ರಾತ್ರಿ ತೋಟದ ಮನೆಯಲ್ಲಿ ನಡೆದಿದ್ದೇನು ಗೊತ್ತಾ? – Kannada News | Bagalkote Murder: Lover Kills Woman Over Illicit Affair, Fakes Tears Drama

ಕೊಲೆ ಮಾಡಿದ್ದೂ ಅವನೇ, ಪೊಲೀಸರಿಗೆ ಹೇಳಿದ್ದೂ ಅವನೇ!

ಬಾಗಲಕೋಟೆ,ಜನವರಿ 17: ಅನೈತಿಕ ಸಂಬಂಧವಿಟ್ಟುಕೊಂಡಿದ್ದ ಪ್ರಿಯಕರನೇ ಮಹಿಳೆಯನ್ನು ಕೊಂದ ಘಟನೆ ಜನವರಿ 14ರ ರಾತ್ರಿ ಬಾಗಲಕೋಟೆಯ (Bagalakot) ಜಮಖಂಡಿ ತಾಲ್ಲೂಕಿನ ಹಿರೆಪಡಸಲಗಿ ಗ್ರಾಮದಲ್ಲಿ ನಡೆದಿದೆ. ತೋಟದ ಮನೆಯಲ್ಲಿ ಒಂಟಿ ಮಹಿಳೆಯೊಬ್ಬರು ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ತಾನೇ ಕೊಲೆ ಮಾಡಿದ್ದರೂ ಶವದ ಮುಂದೆ ಕಣ್ಣೀರು ಹಾಕಿ ಪ್ರಿಯಕರ ಹೈ ಡ್ರಾಮಾ ಮಾಡಿದ್ದಾನೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ತನಿಖೆ ವೇಳೆ ಆತ ಸತ್ಯ ಬಿಚ್ಚಿಟ್ಟಿದ್ದಾನೆ.

ಮೂರನೆ ವ್ಯಕ್ತಿಗಾಗಿ ನಡೀತಾ ಕೊಲೆ?

ಕೊಲೆಯಾದ ಮಹಿಳೆಯನ್ನು ಯಮನವ್ವ (40)ಎಂದು ಗುರುತಿಸಲಾಗಿದ್ದು, ಆರೋಪಿಯ ಹೆಸರು ಶ್ರೀಶೈಲ ಪಾಟೀಲ್ (67) ಎಂದು ಪೊಲೀಸರು ತಿಳಿಸಿದ್ದಾರೆ. ಯಮನವ್ವ ಸುಮಾರು 20 ವರ್ಷಗಳ ಹಿಂದೆ ಪತಿಯಿಂದ ವಿಚ್ಛೇದನ ಪಡೆದಿದ್ದು, ಬಳಿಕ ಶ್ರೀಶೈಲ ಪಾಟೀಲ್ ಜೊತೆ ಅಕ್ರಮ ಸಂಬಂಧ ಹೊಂದಿದ್ದಳು. ಹೀಗಿರುವಾಗ ಇತ್ತೀಚೆಗೆ ಯಮನವ್ವ 27 ವರ್ಷದ ಯುವಕನೊಂದಿಗೆ ಸಂಪರ್ಕ ಹೊಂದಿದ್ದಾಳೆ ಎಂಬ ವಿಚಾರದಿಂದ ಶ್ರೀಶೈಲ  ಆಕ್ರೋಶಗೊಂಡಿದ್ದನು. ಇದೇ ವಿಷಯಕ್ಕೆ ರಾತ್ರಿ ಇಬ್ಬರ ನಡುವೆ ಆರಂಭವಾಗಿದ್ದ ಜಗಳ ತೀವ್ರ ಸ್ವರೂಪ ಪಡೆದಿತ್ತು.

ಕತ್ತು ಹಿಸುಕಿ ಕೊಂದು, ಶವದ ಮುಂದೆ ಕಣ್ಣೀರಿಟ್ಟ!

ಜಗಳದ ವೇಳೆ ಶ್ರೀಶೈಲ ಪಾಟಿಲ್ ಯಮನವ್ವಳ ಕಿವಿ ಭಾಗಕ್ಕೆ ಬಲವಾಗಿ ಹೊಡೆದಿದ್ದ. ಅಷ್ಟಕ್ಕೆ ಸುಮ್ಮನಾಗದ ಪ್ರಿಯಕರ, ಕತ್ತು ಹಿಸುಕಿ ಕೊಲೆಯೂ ಮಾಡಿದ್ದ. ಮಹಿಳೆಯ ಉಸಿರು ನಿಂತ ಮೇಲೆ ಭಯಕ್ಕೆ ಸ್ಥಳದಿಂದ ಕಾಲ್ಕಿತ್ತಿದ್ದ ಎಂದು ತನಿಖೆಯ ವೇಳೆ ಪೊಲೀಸರಿಗೆ ತಿಳಿದು ಬಂದಿದೆ.

ಇದನ್ನೂ ಓದಿ ಮಾರಿ ಹಬ್ಬಕ್ಕೆಂದು ಹೋದಾತ ಸಿಕ್ಕಿದ್ದು ಹೆಣವಾಗಿ: ಬರ್ಬರವಾಗಿ ಕೊಂದು ಶವ ಸುಟ್ಟರಾ ದುಷ್ಟರು?

ಮರುದಿನ ಬೆಳಿಗ್ಗೆ ಆತನೇ ಮನೆಯ ಬಾಗಿಲು ತೆರೆದು ಯಮನವ್ವ ಸಾವನ್ನಪ್ಪಿದ್ದಾಳೆ ಎಂದು ಇತರರಿಗೆ ಸುದ್ದಿ ತಿಳಿಸಿದ್ದ. ಆಕೆಗೆ ಹೃದಯಾಘಾತವಾಗಿದೆ ಎಂಬಂತೆ ನಾಟಕವಾಡಿ ಕಣ್ಣೀರು ಹಾಕಿದ್ದ ಆರೋಪಿ, ಬಳಿಕ ಸಾವಳಗಿ ಪೊಲೀಸರಿಗೂ ತಾನೇ ಮಾಹಿತಿ ನೀಡಿದ್ದ. ಆದರೆ ವಿಚಾರಣೆಯ ವೇಳೆ ಆರೋಪಿಯ ಮೊಸಳೆ ಕಣ್ಣೀರು ಬಯಲಾಗಿದ್ದು, ಸತ್ಯ ಒಪ್ಪಿಕೊಂಡಿದ್ದಾನೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 12:51 pm, Sat, 17 January 26

Source link

ಶ್ರೀ ಮಹಾಕಾಳೇಶ್ವರನಿಗೆ ವಿರಾಟ್ ಕೊಹ್ಲಿ ವಿಶೇಷ ಪೂಜೆ – Kannada News | Virat Kohli visits Shree Mahakaleshwar Temple in Ujjain

ಭಾರತ ಮತ್ತು ನ್ಯೂಝಿಲೆಂಡ್ ನಡುವಣ 3ನೇ ಏಕದಿನ ಪಂದ್ಯವು ಮಧ್ಯಪ್ರದೇಶದ ಇಂದೋರ್​ನಲ್ಲಿ ನಡೆಯಲಿದೆ. ಈ ಪಂದ್ಯಕ್ಕಾಗಿ ಇಂದೋರ್​​ಗೆ ಆಗಮಿಸಿರುವ ವಿರಾಟ್ ಕೊಹ್ಲಿ ಉಜ್ಜಯಿನಿಯಲ್ಲಿರುವ ಶ್ರೀ ಮಹಾಕಾಳೇಶ್ವರನ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಸರಣಿಯ ನಿರ್ಣಾಯಕ ಪಂದ್ಯಕ್ಕೂ ಮುನ್ನ ಕೊಹ್ಲಿ ತನ್ನ ಸಹ ಆಟಗಾರ ಕುಲ್ದೀಪ್ ಯಾದವ್ ಅವರೊಂದಿಗೆ ಉಜ್ಜಯಿನಿಯ ಶ್ರೀ ಮಹಾಕಾಳೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದರು. ಅಲ್ಲದೆ ಕೆಲ ಹೊತ್ತು ದೇವರ ಸನ್ನಿಧಿಯಲ್ಲೇ ಸಮಯ ಕಳೆದರು.

ಇದೀಗ ವಿರಾಟ್ ಕೊಹ್ಲಿ ಮಹಾಕಾಳೇಶ್ವರನಿಗೆ ತಲೆಬಾಗಿ ಪ್ರಾರ್ಥಿಸುತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅಂದಹಾಗೆ ಕೊಹ್ಲಿ ಈ ದೇವಸ್ಥಾನಕ್ಕೆ ಭೇಟಿ ನೀಡುತ್ತಿರುವುದು ಇದೇ ಮೊದಲೇನಲ್ಲ.

ಈ ಹಿಂದೆ 2023 ರಲ್ಲಿ, ಪತ್ನಿ ಅನುಷ್ಕಾ ಶರ್ಮಾ ಜೊತೆಗೆ ಆಗಮಿಸಿ ಈ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದರು. ಇದೀಗ ಮತ್ತೊಮ್ಮೆ ಕಿಂಗ್ ಕೊಹ್ಲಿ ಶ್ರೀ ಮಹಾಕಾಳೇಶ್ವರನ ಸನ್ನಿಧಿಯಲ್ಲಿ ಕಾಣಿಸಿಕೊಂಡಿದ್ದಾರೆ. ಹೀಗಾಗಿ ಮುಂದಿನ ಪಂದ್ಯದಲ್ಲಿ ವಿರಾಟ್ ಬ್ಯಾಟ್​ನಿಂದ ಭರ್ಜರಿ ಪ್ರದರ್ಶನ ನಿರೀಕ್ಷಿಸುತ್ತಿದ್ದಾರೆ ಅಭಿಮಾನಿಗಳು.

ಅಂದಹಾಗೆ ಭಾರತ ಮತ್ತು ನ್ಯೂಝಿಲೆಂಡ್ ನಡುವಣ ಮೂರನೇ ಏಕದಿನ ಪಂದ್ಯವು ಭಾನುವಾರ (ಜ.18) ನಡೆಯಲಿದೆ. ಈ ಪಂದ್ಯವು ಸರಣಿ ನಿರ್ಣಾಯಕ. ಅಂದರೆ ಮೂರು ಪಂದ್ಯಗಳ ಸರಣಿಯ ಮೊದಲ ಮ್ಯಾಚ್​ನಲ್ಲಿ ಟೀಮ್ ಇಂಡಿಯಾ ಗೆದ್ದರೆ, ದ್ವಿತೀಯ ಪಂದ್ಯದಲ್ಲಿ ನ್ಯೂಝಿಲೆಂಡ್ ಗೆಲುವು ದಾಖಲಿಸಿತ್ತು. ಇದೀಗ ಮೂರನೇ ಪಂದ್ಯದಲ್ಲಿ ಗೆಲ್ಲುವ ತಂಡ ಸರಣಿಯನ್ನು ಜಯಿಸಲಿದೆ. ಹೀಗಾಗಿ ಅಂತಿಮ ಏಕದಿನ ಪಂದ್ಯದಲ್ಲಿ ಉಭಯ ತಂಡಗಳಿಂದ ಭರ್ಜರಿ ಪೈಪೋಟಿ ನಿರೀಕ್ಷಿಸಬಹುದು.

 

 

Source link

Exit mobile version