ಪೇಪರ ಪಾರಿವಾಳ ತಂದ ಅವಾಂತರ: ಮೊದಲ ಮಹಡಿಯಿಂದ ಬಿದ್ರೂ ಬದುಕುಳಿದ 5ರ ಬಾಲಕ – Kannada News | Koppal: 5 Year Old Child Falls from First Floor, Suffers Head Injury
ಕೊಪ್ಪಳ, ಡಿಸೆಂಬರ್ 22: ಐದು ವರ್ಷ ಬಾಲಕ (Child) ಮನೆಯ ಮೊದಲನೇ ಮಹಡಿಯಿಂದ ಕೆಳಗೆ ಬಿದ್ದು (Fall) ಗಂಭೀರ ಗಾಯಗೊಂಡಿರುವಂತಹ ಘಟನೆ ಕೊಪ್ಪಳ ನಗರದ ಹಮಾಲರ ಕಾಲೋನಿಯಲ್ಲಿ ನಡೆದಿದೆ. ಪವಾಡಸದೃಶವೆಂಬಂತೆ ಬಾಲಕ ಪಾರಾಗಿದ್ದಾನೆ. ಮಹಮ್ಮದ್ ಹ್ಯಾರಿಸ್ ಸಾವು ಗೆದ್ದುಬಂದ ಬಾಲಕ. ಕೂಡಲೇ ಕೊಪ್ಪಳ ಖಾಸಗಿ ಆಸ್ಪತ್ರೆಗೆ ಪೋಷಕರು ದಾಖಲಿಸಿದ್ದರು. ಆದರೆ ವೈದ್ಯರ ಪರೀಕ್ಷೆ ವೇಳೆ ಮಹಮ್ಮದ್ ಹ್ಯಾರಿಸ್ ತಲೆಯಲ್ಲಿ ಬಿರುಕು ಕಂಡುಬಂದಿದೆ. ಬಾಲಕ ಮೊದಲನೇ ಮಹಡಿಯಿಂದ ಕೆಳೆಗ ಬಿಳ್ಳುವ ದೃಶ್ಯ ಸೆರೆಯಾಗಿದ್ದು, ಎದೆ ಝಲ್ ಅನ್ನಿಸುತ್ತದೆ. ನಡೆದದ್ದೇನು?…