Headlines

ಒಟಿಟಿಯಲ್ಲಿ ಈ ವಾರ ಒಂದಕ್ಕಿಂತ ಒಂದು ಒಳ್ಳೆ ಸಿನಿಮಾ: ಇಲ್ಲಿದೆ ಪಟ್ಟಿ

‘ಧುರಂಧರ್’ ನಾಯಕಿ ಸಾರಾ ಅರ್ಜುನ್ ನಟನೆಯ ತೆಲುಗು ಸಿನಿಮಾ ‘ಯುಫೋರಿಯಾ’ ಈ ವಾರ ಒಟಿಟಿಗೆ ಬಂದಿದೆ. ವಾಸುದೇವ್ ಮೆನನ್, ಭೂಮಿಕಾ ಚಾವ್ಲಾ ಇನ್ನೂ ಕೆಲವು ಪ್ರಮುಖ ನಟ-ನಟಿಯರು ನಟಿಸಿರುವ ಸಿನಿಮಾ ಇದಾಗಿದೆ. ಸಿನಿಮಾ ಅನ್ನು ಇಟಿವಿ ವಿನ್ ನಲ್ಲಿ ವೀಕ್ಷಿಸಬಹುದಾಗಿದೆ. ಭಾರತದ ಜನಪ್ರಿಯ ವೆಬ್ ಸರಣಿಗಳಲ್ಲಿ ಒಂದಾಗಿರುವ ‘ಮಾಮ್ಲಾ ಲೀಗಲ್ ಹೈ’ನ ಎರಡನೇ ಸೀಸನ್ ಇದೀಗ ಬಿಡುಗಡೆ ಆಗಿದೆ. ರವಿಕಿಶನ್ ಸೇರಿದಂತೆ ಕೆಲವು ಪ್ರತಿಭಾವಂತ ನಟ-ನಟಿಯರು ನಟಿಸಿರುವ ಈ ವೆಬ್ ಸರಣಿ ಲಾಯರ್​​​ಗಳ ಕುರಿತಾದ ಕತೆ ಒಳಗೊಂಡಿದೆ….

Read More

DC vs MI: 0,1.. ಮತ್ತೆ ಮೊದಲ ಓವರ್​ನಲ್ಲೇ ಆಟ ಮುಗಿಸಿದ ರಾಹುಲ್

ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2026 ರ 8 ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಮುಂಬೈ 162 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಡೆಲ್ಲಿ ತಂಡಕ್ಕೆ ಮೊದಲ ಪಂದ್ಯದಂತೆ ಮೊದಲ ಓವರ್​ನಲ್ಲೇ ಆಘಾತ ಎದುರಾಯಿತು. ಲಕ್ನೋ ವಿರುದ್ಧದ ಮೊದಲ ಪಂದ್ಯದಲ್ಲಿ ಡೆಲ್ಲಿ ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದಿದ್ದ ಕೆಎಲ್ ರಾಹುಲ್ ಮೊದಲ ಎಸೆತದಲ್ಲೇ ಸಿಕ್ಸರ್ ಬಾರಿಸಲು ಯತ್ನಿಸಿದ…

Read More

ಬೈಕ್​​ ಟಚ್​ ನೆಪ: ಚಾಕು ಇರಿದು ವ್ಯಕ್ತಿಯ ಬರ್ಬರ ಕೊಲೆ; ಹುಡುಗಿ ವಿಚಾರಕ್ಕೆ ಹರಿಯಿತಾ ನೆತ್ತರು?

ಬೆಂಗಳೂರು, ಏಪ್ರಿಲ್​​ 04: ಕ್ಷುಲ್ಲಕ ಕಾರಣಕ್ಕೆ ಯುವಕನ ಬರ್ಬರ ಹತ್ಯೆ ಮಾಡಿರುವ ಆಘಾತಕಾರಿ ಘಟನೆ ಬೆಂಗಳೂರಿನ (Bengaluru) ಜೆ.ಸಿ. ನಗರದ ಮುಖ್ಯರಸ್ತೆಯಲ್ಲಿ ನಡೆದಿದೆ. 22 ವರ್ಷದ ವಿಜಯ್ ಕೊಲೆಯಾದ ವ್ಯಕ್ತಿಯಾಗಿದ್ದು, ಮಧ್ಯಾಹ್ನ 12 ಗಂಟೆ ಸುಮಾರಿಗೆ ವಿಜಯ್​ಗೆ ಚಾಕು ಇರಿದು ದುಷ್ಕರ್ಮಿಗಳು ಹತ್ಯೆ ಮಾಡಿದ್ದಾರೆ. ಆರೋಪಿಗಳಾದ ಕಿರಣ್ ಮತ್ತು ವಿನೋದ್ ಎಂಬವರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ತನಿಖೆ ಮುಂದುವರಿದಿದೆ. ನಿನ್ನೆ ರಾತ್ರಿ ಕುಡಿದು ಹೋಗುವಾಗ ವಿಜಯ್ ಬೈಕ್​​ಗೆ ವಿನೋದ್ ಗಾಡಿ ಟಚ್ ಆಗಿತ್ತು. ಇದೇ ವಿಚಾರವಾಗಿ ಗಲಾಟೆ…

Read More

Easter: ಈಸ್ಟರ್; ಸಾವನ್ನು ಗೆದ್ದ ಯೇಸುವಿನ ಪುನರುತ್ಥಾನದ ಹಬ್ಬ,ಇಲ್ಲಿದೆ ಈ ದಿನದ ಮಹತ್ವ

ಕ್ರಿಶ್ಚಿಯನ್ ಧರ್ಮದಲ್ಲಿ ಗುಡ್ ಫ್ರೈಡೇ ಮತ್ತು ಈಸ್ಟರ್ ಭಾನುವಾರ ಅತ್ಯಂತ ಪವಿತ್ರವಾದ ದಿನಗಳು. ಈ ವರ್ಷ ಏಪ್ರಿಲ್ 3 ರಂದು ಶುಭ ಶುಕ್ರವಾರವನ್ನು (Good Friday) ಆಚರಿಸಲಾಗಿದ್ದು, ಅದರ ಎರಡು ದಿನಗಳ ನಂತರ ಅಂದರೆ ನಾಳೆ, ಏಪ್ರಿಲ್ 5 ರಂದು ಈಸ್ಟರ್ ಭಾನುವಾರವನ್ನು ವಿಶ್ವಾದ್ಯಂತ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಈ ದಿನವು ಕೇವಲ ಸಂಪ್ರದಾಯವಲ್ಲ, ಬದಲಿಗೆ ಮನುಕುಲಕ್ಕೆ ಭರವಸೆ ಮತ್ತು ಹೊಸ ಜೀವನದ ಸಂದೇಶವನ್ನು ನೀಡುವ ಪವಾಡದ ದಿನವಾಗಿದೆ. ಪವಿತ್ರ ಶನಿವಾರದ ಮೌನ: ಇಂದು ಪವಿತ್ರ ಶನಿವಾರ (Holy…

Read More

ಆರ್​ಸಿಬಿ ಫ್ಯಾನ್ಸ್​ ಎಚ್ಚರ! ಟಿಕೆಟ್ ಬುಕ್ಕಿಂಗ್ ನೆಪದಲ್ಲಿ ವಂಚನೆ: ಲಿಂಕ್​ ಕ್ಲಿಕ್​ ಮಾಡಿದ್ರೆ ಹಣ ಮಾಯ

ಆನೇಕಲ್​, ಏಪ್ರಿಲ್​ 04: ಐಪಿಎಲ್ ಟಿಕೆಟ್ ಬುಕ್ಕಿಂಗ್ ನೆಪದಲ್ಲಿ ಆನ್‌ಲೈನ್ ವಂಚನೆ ಪ್ರಕರಣಗಳು ಹೆಚ್ಚಾಗಿದ್ದು, ಕ್ರಿಕೆಟ್ ಅಭಿಮಾನಿಗಳು ಎಚ್ಚರದಿಂದ ಇರಬೇಕಾಗಿದೆ. “IPL Dhamaka Sale” ಎಂಬ ಹೆಸರಿನ ನಕಲಿ ಖಾತೆಗಳು ಮತ್ತು ವೆಬ್‌ಸೈಟ್‌ಗಳನ್ನು ಸೃಷ್ಟಿಸಿ, ಉಚಿತ ಐಪಿಎಲ್ ಟಿಕೆಟ್‌ಗಳ ಆಮಿಷವೊಡ್ಡಿ ಹಣ ಕಡಿತಗೊಳಿಸುವ ಜಾಲ ಸಕ್ರಿಯವಾಗಿದೆ. ನಕಲಿ ಲಿಂಕ್‌ಗಳನ್ನು ಕ್ಲಿಕ್ ಮಾಡಿದಾಗ ಬ್ಯಾಂಕ್ ಖಾತೆಗಳಿಂದ ಹಣ ಕಡಿತವಾಗುತ್ತಿದ್ದು, ಹಲವರು ಈಗಾಗಲೇ ಮೋಸ ಹೋಗಿದ್ದಾರೆ. ಈ ಕುರಿತು ಹುಳಿಮಾವು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಎಲೆಕ್ಟ್ರಾನಿಕ್ ಸಿಟಿ ಉಪ…

Read More

ಈ ರಾಶಿಯವರು ಏ.05 ರಿಂದ 11ರೊಳಗೆ ನಿಮ್ಮ ಹುಡುಗಿಯನ್ನು ಆಯ್ಕೆ ಮಾಡಿಕೊಳ್ಳಿ, ಮತ್ತೆ ಈ ಭಾಗ್ಯ ಸಿಗುವುದಿಲ್ಲ

ಏಪ್ರಿಲ್ 05ರಿಂದ ಏಪ್ರಿಲ್ 11ರವರೆಗಿನ ಶುಕ್ರನ ಸಂಚಾರ ಮೇಷದಲ್ಲಿ ಆಗಲಿದೆ. ಪ್ರೇಮಕ್ಕೆ ಎಷ್ಟೇ ವಿಘ್ನಗಳು ಬಂದರೂ ಅದನ್ನು ಎದುರಿಸಿ ನಿಲ್ಲುವ ಉತ್ಸಾಹವೂ ಇರಲಿದೆ. ಏನನ್ನೂ ಊಹಿಸಿಕೊಂಡು ಹತಾಶರಾಗುವ ಸಂದರ್ಭವೂ ಬರಬಹುದು. ಎಚ್ಚರದಿಂದ ಇರಿ. ಮೇಷ ​ಈ ವಾರ ಸಂಗಾತಿಯೊಂದಿಗೆ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಉಂಟಾಗಬಹುದು. ಹಳೆಯ ನೆನಪುಗಳು ಕಾಡಿ ದುಃಖ ತರಬಹುದು. ತಾಳ್ಮೆಯಿಂದ ವರ್ತಿಸಿದರೆ ವಾರಾಂತ್ಯದಲ್ಲಿ ಪ್ರೇಮ ಪ್ರಯಾಣಕ್ಕೆ ಶುಭ ಯೋಗವಿದೆ. ಮಾತಿನ ಮೇಲೆ ನಿಗಾ ಇರಲಿ. ​ವೃಷಭ ​ಹೊಸ ಪ್ರೇಮ ಅಂಕುರಿಸುವ ಸಾಧ್ಯತೆ ದಟ್ಟವಾಗಿದೆ. ಸಂಗಾತಿಯ ಜೊತೆ…

Read More

DC vs MI Record Alert: 51 ಸಿಕ್ಸರ್‌, 1092 ರನ್‌.. ಡೆಲ್ಲಿ ವಿರುದ್ಧ ರೋಹಿತ್ ವಿಶೇಷ ಮೈಲಿಗಲ್ಲು

ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2026 ರ 8 ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಮುಂಬೈ ಪರ ಮಾಜಿ ನಾಯಕ ರೋಹಿತ್ ಶರ್ಮಾ 26 ಎಸೆತಗಳಲ್ಲಿ 35 ರನ್‌ಗಳ ಸಣ್ಣ ಆದರೆ ಪ್ರಮುಖ ಇನ್ನಿಂಗ್ಸ್ ಆಡಿದರು. ಅವರ ಈ ಇನ್ನಿಂಗ್ಸ್‌ನಲ್ಲಿ 5 ಬೌಂಡರಿ ಮತ್ತು 1 ಸಿಕ್ಸ್ ಸೇರಿದ್ದವು. ಈ ಇನ್ನಿಂಗ್ಸ್ ಮೂಲಕ ರೋಹಿತ್ ಡೆಲ್ಲಿ ತಂಡದ ವಿರುದ್ಧ…

Read More

IPL ಟಿಕೆಟ್​​ ಪಡೆದ ಶಾಸಕರಿಗೆ ಮಾಜಿ ಸಿಎಂ ಕ್ಲಾಸ್​​: ಸದಾನಂದಗೌಡ ಹೇಳಿದ್ದೇನು?

ಬೆಂಗಳೂರು, ಏಪ್ರಿಲ್​​ 04: IPL ಟಿಕೆಟ್ ನೀಡುವಂತೆ ಸದನದಲ್ಲಿ ಶಾಸಕರ ಬೇಡಿಕೆ ವಿಚಾರ ಸಂಬಂಧ ಬೆಂಗಳೂರಿನಲ್ಲಿ ಮಾಜಿ ಮುಖ್ಯಮಂತ್ರಿ ಸದಾನಂದಗೌಡ ಕಿಡಿ ಕಾರಿದ್ದಾರೆ. ಶಾಸಕರ ಪಿಎಗಳು IPL ಟಿಕೆಟ್ ಪಡೆದಿದ್ದನ್ನು ಖಂಡಿಸಿದ ಡಿವಿಎಸ್, ಪಂದ್ಯದ ಟಿಕೆಟ್​ಗಾಗಿ ಯಾವುದೇ ಶಾಸಕರು ಭಿಕ್ಷೆ ಬೇಡಬಾರದು. ಆರ್​ಸಿಬಿ ವಿಜಯೋತ್ಸವ ವೇಳೆ 11 ಅಭಿಮಾನಿಗಳ ಸಾವಿನ ವಿಚಾರ ವಿಧಾನಸಭೆಯಲ್ಲಿ ಚರ್ಚೆಯಾಗಿದ್ದರೆ ಗೌರವವಿರುತ್ತಿತ್ತು. ಚುನಾವಣೆಯಲ್ಲಿ ನೂರಾರು ಕೋಟಿ ಸುರಿದು ಶಾಸಕರಾದವರು ಟಿಕೆಟ್​ಗೆ ಭಿಕ್ಷೆ ಬೇಡುತ್ತಾರಲ್ಲಾ ನಾಚಿಕೆಯಾಗಬೇಕು. ಯಾವುದೇ ಜನಪ್ರತಿನಿಧಿ ಹೀಗೆ ಮಾಡಬಾರದು. ಕ್ಷೇತ್ರಕ್ಕೆ ಏನಾದರೂ…

Read More

ನಾಲಿಗೆಯಲ್ಲಿ ಹುಣ್ಣುಗಳಾಗುವುದಕ್ಕೆ ಕಾರಣ ಏನ್ ಗೊತ್ತಾ? ಇದು ಗಂಭೀರ ರೋಗದ ಮುನ್ಸೂಚನೆಯೇ? ಇಲ್ಲಿದೆ ಉತ್ತರ

ನೀವು ಗಮನಿಸಿರಬಹುದು ಕೆಲವರಿಗೆ ಪದೇ ಪದೇ ಬಾಯಲ್ಲಿ ಹುಣ್ಣುಗಳಾಗುತ್ತವೆ ಇದನ್ನು ಮೌತ್ ಅಲ್ಸರ್ (Tongue Ulcers) ಎಂದು ಕರೆಯಲಾಗುತ್ತದೆ. ಆದರೆ ಇದರ ಬಗ್ಗೆ ಯಾರೂ ಕೂಡ ಅಷ್ಟಾಗಿ ತೆಲೆಕೆಡಿಕೊಳ್ಳುವುದಿಲ್ಲ, ಬದಲಾಗಿ ದೇಹದಲ್ಲಿ ಉಷ್ಣತೆ ಹೆಚ್ಚಾದಾಗ ಈ ರೀತಿ ಆಗುತ್ತದೆ ಎಂದು ನಿರ್ಲಕ್ಷ್ಯ ಮಾಡುತ್ತಾರೆ. ಹಾಗಾಗಿ ಎಲ್ಲರೂ ಕೂಡ ಇದನ್ನು ಸಾಮಾನ್ಯ ಸಮಸ್ಯೆ ಎಂದೇ ಎಂದುಕೊಳ್ಳುತ್ತಾರೆ. ಆದರೆ ಆರೋಗ್ಯ ತಜ್ಞರು ಹೇಳುವ ಪ್ರಕಾರ, ಈ ರೀತಿ ಆಗುವುದನ್ನು ಸಾಮಾನ್ಯವೆಂದು ನಿರ್ಲಕ್ಷಿಸುವುದು ಸರಿಯಲ್ಲ, ಏಕೆಂದರೆ ಇದು ಕೆಲವೊಮ್ಮೆ ದೇಹದ ಒಳಗಿನ…

Read More

ಐಪಿಎಲ್ ಟಿಕೆಟ್​ಗಾಗಿ ಶಾಸಕ ಸುರೇಶ್ ಕುಮಾರ್‌ಗೆ ಅಪರಿಚಿತ ವ್ಯಕ್ತಿಯಿಂದ ಫೋನ್​ ಕಾಲ್​​

ಬೆಂಗಳೂರು, ಏಪ್ರಿಲ್​ 04: ನಗರದ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಏಪ್ರಿಲ್​ 05ರಂದು ಆರ್​ಸಿಬಿ ಮತ್ತು ಸಿಎಸ್​ಕೆ ಮಧ್ಯೆ ಹೈವೋಲ್ಟೇಜ್ ಪಂದ್ಯ (RCB vs CSK Match) ನಡೆಯಲಿದೆ. ಕ್ರಿಕೆಟ್​ ಫ್ಯಾನ್ಸ್​ ನಾಳೆ ನಡೆಯಲಿರುವ ಪಂದ್ಯ ನೋಡಲು ಕಾತರರಾಗಿದ್ದಾರೆ. ಇತ್ತ ರಾಜ್ಯದ ಶಾಸಕರಿಗೆ ತಲಾ ಮೂರು ಐಪಿಎಲ್ ಟಿಕೆಟ್ ವಿತರಣೆ ಮಾಡಲಾಗಿದೆ. ಹೀಗಾಗಿ ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಸಂಬಂಧಿ ಎಂದು ಹೇಳಿಕೊಂಡು ರಾಜಾಜಿನಗರ ಶಾಸಕ ಸುರೇಶ್ ಕುಮಾರ್‌ಗೆ (MLA Suresh Kumar) ದೂರವಾಣಿ ಕರೆ ಮಾಡಿರುವ ಘಟನೆ ನಡೆದಿದೆ….

Read More