ಬೆಂಗಳೂರಿನಲ್ಲಿ ಮೆಗಾ ಡಿಪೋರ್ಟೇಷನ್ ಆಪರೇಷನ್: ಬರೋಬ್ಬರಿ 272 ಅಕ್ರಮ ಬಾಂಗ್ಲಾ ವಲಸಿಗರ ಗಡಿಪಾರು

ಬೆಂಗಳೂರಿನಲ್ಲಿ ಮೆಗಾ ಡಿಪೋರ್ಟೇಷನ್ ಆಪರೇಷನ್: ಬರೋಬ್ಬರಿ 272 ಅಕ್ರಮ ಬಾಂಗ್ಲಾ ವಲಸಿಗರ ಗಡಿಪಾರು

ಬೆಂಗಳೂರು, ಏಪ್ರಿಲ್​ 04: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರ (Bangladeshi Illegal Immigrants) ಮೇಲೆ ಸಿಸಿಬಿ ಮತ್ತು ನಗರ ಪೊಲೀಸರು ಬೃಹತ್ ಕಾರ್ಯಾಚರಣೆ ಕೈಗೊಂಡಿದ್ದಾರೆ. ಇದುವರೆಗೆ ಬರೋಬ್ಬರಿ 272 ಜನರನ್ನು ಬೆಂಗಳೂರಿನಿಂದ ಯಶಸ್ವಿಯಾಗಿ ಗಡಿಪಾರು ಮಾಡಲಾಗಿದೆ.

272 ಜನರ ಗಡಿಪಾರು 

ಮಾರ್ಚ್ ಮೊದಲ ವಾರದಲ್ಲಿ ದೆಹಲಿ ಪೊಲೀಸರು ದೆಹಲಿ ಮತ್ತು ಕೊಲ್ಕತ್ತಾದಲ್ಲಿ ಐವರು ಬಾಂಗ್ಲಾ ಮೂಲದ ಉಗ್ರರ ಬಂಧನದ ಬೆನ್ನಲ್ಲೇ ದೇಶದಲ್ಲಿ ಅಕ್ರಮ ವಲಸಿಗರ ಪತ್ತೆಗೆ ಸೂಚಿಸಲಾಗಿತ್ತು. ಅದರಂತೆ
ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ವಲಸಿಗರ ಪತ್ತೆಗೆ ಸಿಸಿಬಿ ಮತ್ತು ಸಿಟಿ ಪೊಲೀಸರು ವಿಶೇಷ ಕಾರ್ಯಾಚರಣೆ ಕೈಗೆತ್ತಿಕೊಂಡಿತು.

ಬೆಂಗಳೂರಿನ ಮೂಲೆಮೂಲೆಯಲ್ಲಿ ಅಕ್ರಮವಾಗಿ ವಾಸವಿದ್ದವರನ್ನು ಪತ್ತೆಹಚ್ಚಿದ ಪೊಲೀಸರು, ದಾಖಲೆಗಳಿಲ್ಲದ 272 ಜನರನ್ನು ವಶಕ್ಕೆ ಪಡೆದಿದ್ದರು. ಇವರನ್ನು ತ್ರಿಪುರಾ ಗಡಿಯ ಮೂಲಕ ಬಾಂಗ್ಲಾದೇಶಕ್ಕೆ ಯಶಸ್ವಿಯಾಗಿ ಗಡಿಪಾರು ಮಾಡಲಾಗಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಅಕ್ರಮ ವಲಸಿಗರ ಮೇಲೆ ಪೊಲೀಸ್ ಕಣ್ಣು; 200ಕ್ಕೂ ಹೆಚ್ಚು ವಿದೇಶಿ ಪ್ರಜೆಗಳಿಗೆ ಗೇಟ್​​​ಪಾಸ್!

ಇನ್ನು ದೇಶದಲ್ಲೇ ಅತಿ ದೊಡ್ಡ ಮಟ್ಟದ ಡಿಪೋರ್ಟೇಷನ್ ಪ್ರಕ್ರಿಯೆ ಇದಾಗಿದ್ದು, ಬೆಂಗಳೂರಿನಿಂದ ಹೊರಹಾಕಲ್ಪಟ್ಟವರಲ್ಲಿ 178 ಪುರುಷರು, 94 ಮಹಿಳೆಯರು ಹಾಗೂ 12 ಮಕ್ಕಳು ಸೇರಿದ್ದಾರೆ. ಇವರೆಲ್ಲರನ್ನೂ ರೈಲಿನಲ್ಲಿ ತ್ರಿಪುರಾ ಗಡಿಯವರೆಗೆ ಕರೆದೊಯ್ದು, ಬಿಎಸ್ಎಫ್ ಮೂಲಕ ಅವರ ದೇಶಕ್ಕೆ ಹಸ್ತಾಂತರಿಸಲಾಯಿತು. ಪಶ್ಚಿಮ ಬಂಗಾಳದ ಚುನಾವಣೆ ಹಾಗೂ ಭದ್ರತಾ ದೃಷ್ಟಿಯಿಂದ ತ್ರಿಪುರಾ ಗಡಿಯನ್ನೇ ಗಡಿಪಾರಿಗೆ ಬಳಸಿಕೊಳ್ಳಲಾಗಿದೆ.

ಅಕ್ರಮವಾಗಿ ಪ್ರವೇಶಿಸುವುದು ಹೇಗೆ?

ಇತ್ತ ಈ ಅಕ್ರಮ ವಲಸೆಯ ಹಿಂದೆ ವ್ಯವಸ್ಥಿತ ಜಾಲವೊಂದು ಕೆಲಸ ಮಾಡುತ್ತಿದೆ. ಒಬ್ಬ ವಲಸಿಗ ಬೆಂಗಳೂರು ಸೇರಲು ಹಂತಹಂತವಾಗಿ ಟೇಕೆದಾರರ ಬಾಂಗ್ಲಾದೇಶದ ಒಳಗಿದ್ದುಕೊಂಡು ವಲಸಿಗರನ್ನು ಭಾರತದ ಗಡಿಯವರೆಗೂ ಕರೆತರುತ್ತಾನೆ. ಅಲ್ಲಿಂದ ಭಾರತದ ಗಡಿಯಲ್ಲಿ ನಿಂತು ಅಕ್ರಮವಾಗಿ ಒಳನುಗ್ಗಿಸುವ ಜವಾಬ್ದಾರಿ ಇನ್ನೊಬ್ಬ ತೆಗೆದುಕೊಳ್ಳುತ್ತಾರೆ. ಇದಕ್ಕಾಗಿ ಈತ ಪ್ರತ್ಯೇಕವಾಗಿ ಹಣ ಪಡೆಯುತ್ತಾನೆ. ಇನ್ನು ಭಾರತದ ಒಳಗೆ ಇನ್ನೋರ್ವ ಏಜೆಂಟ್ ಅವರಿಗೆ ಕೆಲಸ ಕೊಡಿಸುವ ಮತ್ತು ವಸತಿ ಕಲ್ಪಿಸುವ ಕೆಲಸ ಮಾಡುತ್ತಾನೆ. ಇವನು ಪ್ರತಿ ವಲಸಿಗನಿಂದ ಪ್ರತಿ ತಿಂಗಳು 500 ರಿಂದ 1000 ರೂ. ಕಮಿಷನ್ ನಿರಂತರವಾಗಿ ಪಡೆಯಲಾಗುತ್ತೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರ ಬಂಧನ

ಸದ್ಯ ಸಿಸಿಬಿ ಪೊಲೀಸರು ಈ ಜಾಲದ ಇಬ್ಬರು ಪ್ರಮುಖ ಟೇಕೆದಾರರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಏಜೆಂಟ್​​ರು ನಗರದ ಕಾರ್ಖಾನೆಗಳು, ಅಪಾರ್ಟ್‌ಮೆಂಟ್‌ಗಳು ಹಾಗೂ ಹೋಟೆಲ್‌ಗಳಲ್ಲಿ ಇತರೆ ವಲಸಿಗರನ್ನು ಕೂಲಿ ಕೆಲಸಕ್ಕೆ ಸೇರಿಸುತ್ತಿದ್ದರು. ಬಂಧಿತರಿಂದ ಇನ್ನು ಎಷ್ಟು ಜನ ನಗರದಲ್ಲಿ ಅಕ್ರಮವಾಗಿ ನೆಲೆಸಿದ್ದಾರೆ ಎಂಬ ಮಾಹಿತಿ ಕಲೆ ಹಾಕಲಾಗುತ್ತಿದೆ. ಇನ್ನು ಮುಂದೆ ಇಂತಹ ಅಕ್ರಮ ವಲಸಿಗರಿಗೆ ಆಶ್ರಯ ನೀಡುವ ಮಾಲೀಕರ ಮೇಲೂ ಕಾನೂನು ಕ್ರಮ ಜರುಗಿಸಲು ಪೊಲೀಸರು ಮುಂದಾಗಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಮೊಮ್ಮಗನ ಅಜಾಗರೂಕತೆಗೆ ಬಲಿಯಾದ ಅಜ್ಜಿ: ಗೋಡೆ ಹಾಗೂ ಥಾರ್ ನಡುವೆ ಸಿಲುಕಿ ಅಪ್ಪಚ್ಚಿಯಾದ ವೃದ್ಧೆ

ಫರೂಕಾಬಾದ್, ಏ.4: ಉತ್ತರ ಪ್ರದೇಶದ ಮಸೈನಿಯಲ್ಲಿ ನಡೆದ ಘಟನೆಯೊಂದು ಯಾರಿಗಾದರೂ ಎದೆ ನಡುಗಿಸುವಂತಿದೆ. ಮನೆಯೊಳಗೆ ಥಾರ್ (Thar) ವಾಹನವನ್ನು ಪಾರ್ಕ್ ಮಾಡುವ ಸಂದರ್ಭದಲ್ಲಿ ನಡೆದ ಸಣ್ಣ ತಪ್ಪು ಒಬ್ಬ ವೃದ್ಧೆಯ ಪ್ರಾಣವನ್ನೇ ಬಲಿಪಡೆದಿದೆ. ಮನೆಯ ಆವರಣದೊಳಗೆ ಥಾರ್ ವಾಹನವನ್ನು ಪಾರ್ಕ್ ಮಾಡುವಾಗ ಈ ಘಟನೆ ಸಂಭವಿಸಿದೆ. ಚಾಲನೆ ಮಾಡುತ್ತಿದ್ದ ಮೊಮ್ಮಗ ಅಜಾಗರೂಕತೆಯಿಂದ ವಾಹನವನ್ನು ಒಮ್ಮೆಗೆ ರಿವರ್ಸ್ ಗೇರ್ ಹಾಕಿದ್ದಾನೆ. ಈ ವೇಳೆ ಮನೆಯ ಗೇಟ್ ಹಾಕಲು ಬಂದಿದ್ದ ವೃದ್ಧೆ, ವೇಗವಾಗಿ ಬಂದ ವಾಹನ ಮತ್ತು ಗೋಡೆಯ ನಡುವೆ ಸಿಲುಕಿಕೊಂಡಿದ್ದಾರೆ. ಕದ್ರಿ ಗೇಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಈ ಘಟನೆಯ ಸಿಸಿಟಿವಿ (CCTV) ದೃಶ್ಯಗಳು ಲಭ್ಯವಾಗಿವೆ. ವಾಹನದ ಅಡಿಯಲ್ಲಿ ಸಿಲುಕಿದ ವೃದ್ಧೆ ಪ್ರಾಣಭಯದಿಂದ ಎಷ್ಟೇ ಕಿರುಚಿದರೂ, ವಾಹನವನ್ನು ನಿಯಂತ್ರಿಸಲು ಸಾಧ್ಯವಾಗದೆ ಅವರು ಗೋಡೆಗೆ ಅಪ್ಪಳಿಸಿ ನಜ್ಜುಗುಜ್ಜಾಗಿದ್ದಾರೆ. ತಕ್ಷಣವೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಅಷ್ಟರಲ್ಲೇ ಅವರು ಕೊನೆಯುಸಿರೆಳೆದಿದ್ದರು. ವಾಹನವನ್ನು ಚಲಾಯಿಸುತ್ತಿದ್ದ ಮೊಮ್ಮಗನ ನಿರ್ಲಕ್ಷ್ಯವೇ ಈ ಸಾವಿಗೆ ನೇರ ಕಾರಣ ಎನ್ನಲಾಗಿದೆ. ಘಟನೆ ನಡೆದ ಸ್ಥಳಕ್ಕೆ ಆಗಮಿಸಿದ ಪೊಲೀಸರು ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ತನಿಖೆ ಕೈಗೊಂಡಿದ್ದಾರೆ. ಈ ಘಟನೆಯು ವಾಹನ ಚಾಲನೆ ಮಾಡುವಾಗ ಮತ್ತು ಪಾರ್ಕ್ ಮಾಡುವಾಗ ಎಷ್ಟು ಜಾಗರೂಕರಾಗಿರಬೇಕು ಎಂಬುದಕ್ಕೆ ಕಣ್ಣಮುಂದಿನ ಸಾಕ್ಷಿಯಂತಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Recruitment 2026: ಬೆಂಗಳೂರಿನಲ್ಲಿ ಸರ್ಕಾರಿ ಉದ್ಯೋಗಾವಕಾಶ; ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದಲ್ಲಿ ನೇಮಕಾತಿ

ಬೆಂಗಳೂರಿನಲ್ಲಿರುವ ಕರ್ನಾಟಕ ಸರ್ಕಾರದ ಪ್ರತಿಷ್ಠಿತ ಸಂಸ್ಥೆಯಾದ ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ ನಿಯಮಿತ (Dr. B.R.A.D.C.L) ಅಧಿಕೃತ ಅಧಿಸೂಚನೆಯ ಮೂಲಕ ವಿವಿಧ ಹುದ್ದೆಗಳ ಭರ್ತಿಗೆ ಚಾಲನೆ ನೀಡಿದೆ. ಪ್ರಸ್ತುತ ಕಾನೂನು ಸಲಹೆಗಾರರು (Legal Advisor) ಮತ್ತು ಕಂಪನಿ ಕಾರ್ಯದರ್ಶಿ (Company Secretary) ಹುದ್ದೆಗಳಿಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಕರ್ನಾಟಕ ಸರ್ಕಾರದಲ್ಲಿ ವೃತ್ತಿಜೀವನ ರೂಪಿಸಿಕೊಳ್ಳಲು ಬಯಸುವ ಉದ್ಯೋಗಾಕಾಂಕ್ಷಿಗಳಿಗೆ ಇದೊಂದು ಉತ್ತಮ ಅವಕಾಶವಾಗಿದೆ.

ಹುದ್ದೆಗಳ ವಿವರ ಮತ್ತು ಅರ್ಹತೆ:

ಈ ನೇಮಕಾತಿ ಅಭಿಯಾನದ ಮೂಲಕ ಒಟ್ಟು 2 ಪ್ರಮುಖ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಹುದ್ದೆಗಳಿಗೆ ಅನುಗುಣವಾಗಿ ಶೈಕ್ಷಣಿಕ ಅರ್ಹತೆಯನ್ನು ನಿಗದಿಪಡಿಸಲಾಗಿದ್ದು, ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ LLB, MBA ಅಥವಾ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಕಂಪನಿ ಸೆಕ್ರೆಟರಿಯಿಂದ ಸ್ನಾತಕೋತ್ತರ ಪದವಿಯನ್ನು ಪೂರೈಸಿರಬೇಕು. ಅಭ್ಯರ್ಥಿಗಳ ಆಯ್ಕೆಯಲ್ಲಿ ಶೈಕ್ಷಣಿಕ ಅರ್ಹತೆ ಮತ್ತು ಅನುಭವಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ.

ವಯೋಮಿತಿ ಮತ್ತು ಪ್ರಮುಖ ದಿನಾಂಕಗಳು:

ಈ ನೇಮಕಾತಿಯ ವಿಶೇಷತೆಯೆಂದರೆ ಅಭ್ಯರ್ಥಿಗಳ ಗರಿಷ್ಠ ವಯೋಮಿತಿಯನ್ನು 80 ವರ್ಷಗಳವರೆಗೆ ನಿಗದಿಪಡಿಸಲಾಗಿದೆ, ಇದು ಅನುಭವ ಹೊಂದಿರುವ ಹಿರಿಯ ವೃತ್ತಿಪರರಿಗೂ ಅರ್ಜಿ ಸಲ್ಲಿಸಲು ಅನುವು ಮಾಡಿಕೊಡುತ್ತದೆ. ಆಸಕ್ತರು ತಮ್ಮ ಅರ್ಜಿಗಳನ್ನು ಸಲ್ಲಿಸಲು ಏಪ್ರಿಲ್ 21 ಅಂತಿಮ ದಿನಾಂಕವಾಗಿದೆ. ಗಡುವಿನ ನಂತರ ಬರುವ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.

ಇದನ್ನೂ ಓದಿ: ವಿಮಾನ ನಿಲ್ದಾಣದಲ್ಲಿ ಉದ್ಯೋಗ ಪಡೆಯುವುದು ಹೇಗೆ? ಅರ್ಹತೆ ಮತ್ತು ಆಯ್ಕೆ ಪ್ರಕ್ರಿಯೆಯ ಸಂಪೂರ್ಣ ಮಾಹಿತಿ ಇಲ್ಲಿದೆ

ಅರ್ಜಿ ಸಲ್ಲಿಸುವ ವಿಧಾನ:

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಕೆಯು ಆಫ್‌ಲೈನ್ (Offline) ಮೂಲಕ ಮಾತ್ರ ಇರುತ್ತದೆ. ಅರ್ಜಿ ಸಲ್ಲಿಸುವ ಹಂತಗಳು ಈ ಕೆಳಗಿನಂತಿವೆ:

  • ಮೊದಲು ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ ನಿಮ್ಮ ಅರ್ಹತೆಯನ್ನು ಖಚಿತಪಡಿಸಿಕೊಳ್ಳಿ.
  • ನಿಗದಿತ ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಿ, ಸರಿಯಾದ ವಿವರಗಳನ್ನು ಭರ್ತಿ ಮಾಡಿ.
  • ಅರ್ಜಿಯೊಂದಿಗೆ ನಿಮ್ಮ ಐಡಿ ಪ್ರೂಫ್, ವಯಸ್ಸಿನ ದಾಖಲೆ, ಶೈಕ್ಷಣಿಕ ಪ್ರಮಾಣಪತ್ರಗಳು, ರೆಸ್ಯೂಮ್ ಮತ್ತು ಅನುಭವದ ಪತ್ರಗಳನ್ನು ಲಗತ್ತಿಸಿ.
  • ಭರ್ತಿ ಮಾಡಿದ ಅರ್ಜಿಯನ್ನು ಸ್ವಯಂ ದೃಢೀಕರಿಸಿದ ದಾಖಲೆಗಳೊಂದಿಗೆ ಈ ಕೆಳಗಿನ ವಿಳಾಸಕ್ಕೆ ರಿಜಿಸ್ಟರ್ ಪೋಸ್ಟ್ ಅಥವಾ ಸ್ಪೀಡ್ ಪೋಸ್ಟ್ ಮೂಲಕ ಕಳುಹಿಸಿ:

ಅರ್ಜಿ ಕಳುಹಿಸಬೇಕಾದ ವಿಳಾಸ:

ವ್ಯವಸ್ಥಾಪಕ ನಿರ್ದೇಶಕರು, ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ, ವಿಶ್ವೇಶ್ವರಯ್ಯ ಚಿಕ್ಕಗೋಪುರ, 9 ನೇ ಮಹಡಿ, ಅಂಬೇಡ್ಕರ್ ವೀಧಿ, ಬೆಂಗಳೂರು – 560001.

ಉದ್ಯೋಗಕ್ಕೆ ಸಂಬಂಧಿಸಿದ ಮತ್ತಷ್ಟು  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ನಂಬಿದರೆ ನಂಬಿ ಬಿಟ್ಟರೆ ಬಿಡಿ!: 1994ರಲ್ಲಿ ನಾಪತ್ತೆಯಾಗಿದ್ದ ಹುಡುಗಿ ಸಿಕ್ಕಿದ್ದು ಹೇಗೆ? ಈಗ ಆಕೆ ವಯಸ್ಸು ಎಷ್ಟು?

ವಾಷಿಂಗ್ಟನ್, ಏ.4: ದಶಕಗಳ ಕಾಲದ ಹುಡುಕಾಟ, ಕಳೆದು ಹೋದ ಹುಡುಗಿ ಮತ್ತೆ ಸಿಗುತ್ತಾಳೆ ಎಂಬ ಭರವಸೆ, ನಿರಂತರ ಅನಿಶ್ಚಿತತೆಯ ನಂತರ ಅಮೆರಿಕದಲ್ಲಿ ಒಂದು ದೊಡ್ಡ ಪವಾಡ ನಡೆದಿದೆ. 13 ವರ್ಷದವಳಿದ್ದಾಗ ನಿಗೂಢವಾಗಿ ನಾಪತ್ತೆಯಾಗಿದ್ದ ಬಾಲಕಿಯೊಬ್ಬಳು ಮೂರು ದಶಕಗಳ (30 ವರ್ಷ) ನಂತರ ಜೀವಂತವಾಗಿ ಪತ್ತೆಯಾಗುವ ಮೂಲಕ ಎಲ್ಲರನ್ನು ಅಚ್ಚರಿಗೊಳಿಸಿದೆ. ಇದೀಗ ಈ ವಿಚಾರ ಭಾರೀ ವೈರಲ್​ ಆಗುತ್ತಿದೆ.

ಸುಮಾರು 30 ವರ್ಷಗಳ ಹಿಂದೆ ಅಂದರೆ ಮೇ 1994 ರಲ್ಲಿ ಈ ಬಾಲಕಿ ತನ್ನ ಮನೆಯ ಸಮೀಪದಿಂದಲೇ ಕುದುರೆ ಲಾಯಕ್ಕೆ ತನ್ನ ಕುದುರೆ ಸವಾರಿ ಮಾಡಲು ಹೋದವಳು ಅಲ್ಲಿಂದ ನಾಪತ್ತೆಯಾಗಿದ್ದಳು. ಅಂದಿನಿಂದ ಪೊಲೀಸರು ಮತ್ತು ಕುಟುಂಬದವರು ಆಕೆಯನ್ನು ಹುಡುಕಲು ಹರಸಾಹಸ ಪಟ್ಟಿದ್ದರು. ವರ್ಷಗಳು ಕಳೆದಂತೆ ಆಕೆ ಜೀವಂತವಾಗಿರುವ ಸಾಧ್ಯತೆ ಕಡಿಮೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ, ಇತ್ತೀಚಿನ ತಾಂತ್ರಿಕ ಪ್ರಯೋಗ ಹಾಗೂ ತನಿಖಾ ಸಂಸ್ಥೆಗಳ ಸತತ ಪ್ರಯತ್ನದಿಂದ ಆಕೆಯ ಸುಳಿವು ದೊರೆತಿದೆ.

ಇಲ್ಲಿದೆ ನೋಡಿ ಪೋಸ್ಟ್​;

ವರದಿಗಳ ಪ್ರಕಾರ, ಆಧುನಿಕ ಡಿಎನ್‌ಎ (DNA) ತಂತ್ರಜ್ಞಾನ ಮತ್ತು ‘ಕೋಲ್ಡ್ ಕೇಸ್’ (Cold Case) ತನಿಖಾ ತಂಡದ ವಿಶೇಷ ಪ್ರಯತ್ನದಿಂದ ಈ ಬಾಲಕಿಯನ್ನು ಗುರುತಿಸಲಾಗಿದೆ. ಆಕೆ ಈಗ ವಯಸ್ಕ ಮಹಿಳೆಯಾಗಿದ್ದು, ದಶಕಗಳ ನಂತರ ತನ್ನ ಮೂಲ ಕುಟುಂಬವನ್ನು ಸೇರುವ ಮೂಲಕ ಭಾವನಾತ್ಮಕ ಕ್ಷಣಗಳಿಗೆ ಸಾಕ್ಷಿಯಾಗಿದ್ದಾರೆ. ಆಕೆ ಇಷ್ಟು ವರ್ಷಗಳ ಕಾಲ ಎಲ್ಲಿದ್ದಳು ಮತ್ತು ಆಕೆಯನ್ನು ಯಾರಾದರೂ ಅಪಹರಿಸಿದ್ದರೇ ಎಂಬ ಬಗ್ಗೆ ಪೊಲೀಸರು ಈಗ ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: Video: ತನ್ನ ಕಂದಮ್ಮನಿಗೆ ನೀರು ಕೊಟ್ಟು ಬಾಯಾರಿಕೆ ನೀಗಿಸಿದ ಯುವಕನಿಗೆ ಧನ್ಯವಾದ ತಿಳಿಸಿದ ಯುವಕ

ತಮ್ಮ ಮಗಳು ಮರಳಿ ಬರುತ್ತಾಳೆ ಎಂಬ ನಂಬಿಕೆಯನ್ನೇ ಕಳೆದುಕೊಂಡಿದ್ದ ಪೋಷಕರಿಗೆ ಈ ಸುದ್ದಿ ಆಕಾಶದಿಂದ ಬಂದ ಹೂವಿನಂತಾಗಿದೆ. “ಇದು ನಮಗೆ ನಂಬಲು ಸಾಧ್ಯವಾಗದ ಕ್ಷಣ, ನಮ್ಮ ಪ್ರಾರ್ಥನೆಗಳಿಗೆ ಫಲ ಸಿಕ್ಕಿದೆ” ಎಂದು ಆಕೆಯ ಕುಟುಂಬದವರು ಭಾವುಕರಾಗಿ ಹೇಳಿದ್ದಾರೆ.

ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Source link

ಕೊಟ್ಟ ಹಣ ವಾಪಸ್​​ ಕೇಳಿದ್ದಕ್ಕೆ ಮಹಿಳೆಯರ ಮೇಲೆ ಹಲ್ಲೆ ನಡೆಸಿ ವಿಕೃತಿ: ಆರೋಪಿಗಳ ವಿರುದ್ಧ ಕೇಸ್​​ ದಾಖಲು

ಕಾರವಾರ, ಏಪ್ರಿಲ್​​ 03: ಕೊಟ್ಟ ಹಣ ಮರುಪಾವತಿ ಮಾಡುವಂತೆ ಕೇಳಿದ ಕಾರಣಕ್ಕೆ ಮಹಿಳೆಯರನ್ನು ಗ್ಯಾಂಗ್​​ ಥಳಿಸಿರುವ ಘಟನೆ ಉತ್ತರ ಕನ್ನಡ ಜಿಲ್ಲೆ ಶಿರಸಿಯ ನೆಹರು ನಗರದಲ್ಲಿ ನಡೆದಿದೆ. ಯಲ್ಲಾಪುರದ ಮಹಿಳೆಯರಾದ ಆಯಿಷಾ ಮತ್ತು ಗೀತಾ ಎಂಬವರ ಮೇಲೆ ಮೊಹ್ಮದ್ ಸಲ್ಮಾನ್ ಮತ್ತು ಗ್ಯಾಂಗ್ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ. ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಗ್ಯಾಂಗ್​​ ಮಹಿಳೆಯರ ಖಾಸಗಿ ಭಾಗದ ಮೇಲೆ ಅಟ್ಯಾಕ್​​ ಮಾಡಿದ್ದಾರೆ ಎನ್ನಲಾಗಿದ್ದು, ಈ ಸಂಬಂಧ ಶಿರಸಿ ಹೊಸ ಮಾರುಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಲ್ಲೆಗೊಳಗಾದ ಮಹಿಳೆಯರ ಪೈಕಿ ಆಯಿಷಾ ಆರೋಪಿ ಸಲ್ಮಾನ್​​ಗೆ ಅಂಗಡಿ ಹಾಕಲು 3 ಲಕ್ಷದ 80 ಸಾವಿರ ರೂಪಾಯಿ ಹಣವನ್ನು ನೀಡಿದ್ದರು. ಈ ನಡುವೆ ಪತಿ ಮೃತಪಟ್ಟ ಕಾರಣ ಕೆಲ ದಿನಗಳ ಕಾಲ ಹುಬ್ಬಳ್ಳಿಗೆ ತೆರಳಿ ಅವರು ನೆಲೆಸಿದ್ದರು. ಎರಡು ತಿಂಗಳ ಬಳಿಕ ಮರಳಿ ಆಯಿಷಾ ಯಲ್ಲಾಪುರಕ್ಕೆ ಬಂದಾಗ ಸಲ್ಮಾನ್​​ ಊರಲ್ಲಿ ಇರಲಿಲ್ಲ. ಯಲ್ಲಾಪುರ ತೊರೆದಿದ್ದ ಆತ ಶಿರಸಿಗೆ ಬಂದು ಅಲ್ಲಿ ವ್ಯಾಪಾರ ಮಾಡುತ್ತಿದ್ದಾನೆ ಎಂಬ ವಿಷಯ ಸಂತ್ರಸ್ತೆಗೆ ಗೊತ್ತಾಗಿದೆ. ಹೀಗಾಗಿ ನೇರವಾಗಿ ಶಿರಸಿಗೆ ತೆರಳಿರುವ ಅವರು ಕೊಟ್ಟ ಹಣ ಹಿಂದಿರುಗಿಸುವಂತೆ ಸಲ್ಮಾನ್​​ಗೆ ಕೇಳಿದ್ದಾರೆ. ಇದೇ ವಿಚಾರವಾಗಿ ಮಾತುಕತೆ ವೇಳೆ ಏಕಾಏಕಿ ಬಂದ ನಾಲ್ಕೈದು ಜನರ ತಂಡ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ, ಹಿಗ್ಗಾಮುಗ್ಗ ಥಳಿಸಿದೆ ಎಂದು ಆರೋಪಿಸಲಾಗಿದೆ.

ಇದನ್ನೂ ಓದಿ: ಇರಾನ್-ಇಸ್ರೇಲ್ ಯುದ್ಧದ ಎಫೆಕ್ಟ್; ಎಲ್‌ಪಿಜಿ ಬೆನ್ನಲ್ಲೇ ಈಗ ಡಾಂಬರು ಅಭಾವ, ಸ್ಥಗಿತಗೊಂಡ ರಸ್ತೆ ಕಾಮಗಾರಿಗಳು!

ಸಂತ್ರಸ್ತೆ ಹೇಳುವಂತೆ ಯಲ್ಲಾಪುರದಲ್ಲಿ 18-20 ವರ್ಷಗಳಿಂದ ನೆಲೆಸಿದ್ದ ಯುಪಿ ಮತ್ತು ಬಿಹಾರದ ಹುಡುಗರು ಸಲೂನ್​​ ಉದ್ಯಮದ ಪಾಲುದಾರರಾಗುವಂತೆ ಕೇಳಿದ್ದರು. ಅದನ್ನು ನಂಬಿ ನಾವು ಹಣ ನೀಡಿದ್ದೆವು. ಆ ಬಳಿಕ ನಗರದಲ್ಲಿ ಶಾಪ್​​ ಒಂದನ್ನು ತೆರೆದಿದ್ದ ಅವರು, ಬಳಿಕ ಅದನ್ನು ಕ್ಲೋಸ್​​ ಮಾಡಿದ್ದಾರೆ. ಅನುಮಾನಗೊಂಡು ವಿಚಾರಿಸಿದಾಗ ಹಲವೆಡೆ ಅವರು ಸಾಲ ಮಾಡಿರೋದು ಗೊತ್ತಾದ ಕಾರಣ, ಸಂತ್ರಸ್ತೆ ಮಹಿಳೆ ಪೊಲೀಸರಿಗೆ ದೂರು ಕೂಡ ನೀಡಿದ್ದರು. ಆ ವೇಳೆ ಮುಚ್ಚಳಿಕೆ ನೀಡಿ ಹಣ ಕೊಡೋದಾಗಿ ಒಪ್ಪಿದ್ದ ಖದೀಮರು, ಬಳಿಕ ಹಣ ನೀಡದೆ ತಲೆಮರೆಸಿಕೊಂಡಿದ್ದರು. ಈ ನಡುವೆ ಆರೋಪಿಗಳು ಶಿರಸಿಯಲ್ಲಿ ಕೆಲಸ ಮಾಡುತ್ತಿರುವ ವಿಷಯ ಗೊತ್ತಾಗಿದೆ. ಅಲ್ಲಿಹೋಗಿ ಆತನ ಸಹೋದರನ ಬಳಿ ಈ ಬಗ್ಗೆ ತಿಳಿಸಿದಾಗ ಸಂತ್ರಸ್ತೆ ಮತ್ತು ಅವರ ಜೊತೆಗಿದ್ಧ ಮತ್ತೊಬ್ಬ ಮಹಿಳೆ ಮೇಲೆ ಗ್ಯಾಂಗ್​​ ಹಲ್ಲೆ ನಡೆಸಿದೆ ಎನ್ನಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಇರಾನ್ ದಿಗ್ಬಂಧನದ ನಡುವೆಯೂ ಹಾರ್ಮುಜ್ ಜಲಸಂಧಿಯನ್ನು ದಾಟಿದ 8 ಭಾರತೀಯ ಹಡಗು

ನವದೆಹಲಿ, ಏಪ್ರಿಲ್ 4: ಫೆಬ್ರವರಿ 28ರಂದು ಇರಾನ್ (Iran War) ಮೇಲೆ ಯುಎಸ್-ಇಸ್ರೇಲ್ ದಾಳಿಗಳು ಪೂರ್ಣ ಪ್ರಮಾಣದ ಯುದ್ಧವನ್ನು ಪ್ರಚೋದಿಸಿದ ದಿನದಿಂದ ಈ ಪ್ರದೇಶದಲ್ಲಿ ನಡೆಯುತ್ತಿರುವ ಉದ್ವಿಗ್ನತೆಯ ಹೊರತಾಗಿಯೂ ಭಾರತವು ಹಾರ್ಮುಜ್ ಜಲಸಂಧಿಯ ಮೂಲಕ ಸ್ಥಿರವಾದ ಸಮುದ್ರ ಸಂಚಾರವನ್ನು ಕಾಯ್ದುಕೊಂಡಿದೆ. ಭಾರತಕ್ಕೆ ಸಂಬಂಧಿಸಿದ 8 ಹಡಗುಗಳು ನಿರ್ಣಾಯಕ ಚಾಕ್‌ಪಾಯಿಂಟ್ ಅನ್ನು ದಾಟಿವೆ. ಬೇರೆಲ್ಲ ದೇಶಗಳಿಗೆ ಹೋಲಿಸಿದರೆ ಭಾರತದ ಅತಿ ಹೆಚ್ಚು ಹಡಗುಗಳು ಈ ಮಾರ್ಗವನ್ನು ದಾಟಿವೆ.

ಜಾಗತಿಕ ತೈಲ ಮತ್ತು ಅನಿಲ ವ್ಯಾಪಾರದ ಸುಮಾರು 5ನೇ 1 ಭಾಗದಷ್ಟು ಇರುವ ಪ್ರಮುಖ ಕಡಲ ಚಾಕ್‌ಪಾಯಿಂಟ್ ಆಗಿರುವ ಹಾರ್ಮುಜ್ ಜಲಸಂಧಿಯ ಮೇಲೆ ಯುಎಸ್-ಇಸ್ರೇಲಿ ದಾಳಿಯ ನಂತರ ಇರಾನ್ ನಿರ್ಬಂಧ ಹೇರಿತು. ಆದರೆ, ಭಾರತ, ರಷ್ಯಾ, ಚೀನಾ ಮತ್ತು ಪಾಕಿಸ್ತಾನ ಸೇರಿದಂತೆ 5 ತನ್ನ ಮಿತ್ರ ರಾಷ್ಟ್ರಗಳಿಗೆ ಈ ಜಲಮಾರ್ಗವು ಮುಕ್ತವಾಗಿತ್ತು. ಇಂದು ಮುಂಜಾನೆ ಎಲ್‌ಪಿಜಿ ಟ್ಯಾಂಕರ್ ‘ಗ್ರೀನ್ ಸಾನ್ವಿ’ ಹಾರ್ಮುಜ್ ಜಲಸಂಧಿಯನ್ನು ಯಶಸ್ವಿಯಾಗಿ ದಾಟಿ ಭಾರತದ ಕಡೆಗೆ ಸಾಗುತ್ತಿದೆ. ಇದು ಹಾರ್ಮುಜ್ ಜಲಸಂಧಿ ಮಾರ್ಗದ ಮೂಲಕ ಹಾದುಹೋಗುವ 8ನೇ ಹಡಗು ಎನಿಸಿಕೊಂಡಿದೆ.

ಇದನ್ನೂ ಓದಿ: ಭಾರತಕ್ಕೆ ಬರುತ್ತಿದ್ದ ಇರಾನ್​ನ ತೈಲ ತುಂಬಿದ ಹಡಗು ಇದ್ದಕ್ಕಿದ್ದಂತೆ ಚೀನಾದ ಕಡೆ ತಿರುಗಿದ್ದೇಕೆ?

ಈ ಮೂಲಕ ಯುದ್ಧಪೀಡಿತ ಹಾರ್ಮುಜ್ ಜಲಸಂಧಿಯ ಮೂಲಕ ಹಾದುಹೋದ ಅತಿ ಹೆಚ್ಚು ಹಡಗುಗಳನ್ನು ಹೊಂದಿರುವ ದೇಶಗಳಲ್ಲಿ ಭಾರತ ಒಂದಾಗಿದೆ. ಇದುವರೆಗೂ ಭಾರತದ ಶಿವಾಲಿಕ್, ನಂದಾ ದೇವಿ, ಜಗ್ ಲಾಡ್ಕಿ, ಪೈನ್ ಗ್ಯಾಸ್, ಜಗ್ ವಸಂತ, BW ಟೈರ್, BW ಎಲ್ಮ್, ಗ್ರೀನ್ ಸಾನ್ವಿ ಹಾರ್ಮುಜ್ ಜಲಸಂಧಿಯನ್ನು ದಾಟಿವೆ.

ಸುಮಾರು 485 ಭಾರತೀಯ ನಾವಿಕರನ್ನು ಹೊತ್ತ 15ಕ್ಕೂ ಹೆಚ್ಚು ಭಾರತೀಯ ಧ್ವಜ ಹೊಂದಿರುವ ಹಡಗುಗಳು ಗಲ್ಫ್‌ನಲ್ಲಿ ಉಳಿದಿವೆ. ಏಕೆಂದರೆ ಯುದ್ಧವು ಅಂತ್ಯವಿಲ್ಲದೆ ಮುಂದುವರಿಯುತ್ತದೆ. ಭಾರತೀಯ ಮತ್ತು ಇತರ ಹಡಗುಗಳಿಗೆ ಸಮುದ್ರ ಮಾರ್ಗಗಳನ್ನು ಸುರಕ್ಷಿತಗೊಳಿಸಲು ಭಾರತೀಯ ನೌಕಾಪಡೆಯು ಓಮನ್ ಕೊಲ್ಲಿ ಮತ್ತು ಅರೇಬಿಯನ್ ಸಮುದ್ರದಲ್ಲಿ ವರ್ಷಗಳಿಂದ ಇದೆ ಎಂದು ವಿದೇಶಾಂಗ ಸಚಿವಾಲಯ ದೃಢಪಡಿಸಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

‘ಧುರಂಧರ್ 2’ ಬಳಿಕ ಆದಿತ್ಯ ಧರ್ ಮುಂದೆ ಮೂರು ದಾರಿ

ರಣ್ವೀರ್ ಸಿಂಗ್ (Ranveer Singh) ನಟನೆಯ ‘ಧುರಂಧರ್ 2’ ಸಿನಿಮಾ ಭಾರಿ ದೊಡ್ಡ ಹಿಟ್ ಆಗಿದೆ. ಸಿನಿಮಾ, ಬಾಕ್ಸ್ ಆಫೀಸ್​​ನಲ್ಲಿ ದಾಖಲೆಗಳ ಮೇಲೆ ದಾಖಲೆಗಳನ್ನು ಬರೆಯುತ್ತಿದೆ. ‘ಧುರಂದರ್’ ಮತ್ತು ‘ಧುರಂಧರ್ 2’ ಸಿನಿಮಾಗಳ ಮೂಲಕ ಆದಿತ್ಯ ಧರ್, ಭಾರತದ ಟಾಪ್ ನಿರ್ದೇಶಕರ ಸಾಲಿಗೆ ಸೇರಿಬಿಟ್ಟಿದ್ದಾರೆ. ಇದೀಗ ಆದಿತ್ಯ ಧರ್ ಅವರ ಮುಂದಿನ ಸಿನಿಮಾ ಯಾವುದು ಎಂಬ ಕುತೂಹಲ ಸಿನಿಮಾ ಪ್ರೇಕ್ಷಕರಿಗೆ ಮೂಡಿದೆ. ಆದಿತ್ಯ ಧರ್ ಅವರ ಮುಂದೆ ಸದ್ಯಕ್ಕೆ ಮೂರು ಹಾದಿ ಇದೆ. ಅವರು ಯಾವುದು ಆಯ್ಕೆ ಮಾಡಲಿದ್ದಾರೆ ಎಂಬುದು ಕುತೂಹಲ ಕೆರಳಿಸಿದೆ.

ಆದಿತ್ಯ ಧರ್, ಅವರು ಐತಿಹಾಸಿಕ ಸಿನಿಮಾ ಒಂದನ್ನು ನಿರ್ದೇಶನ ಮಾಡಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಮೌರ್ಯ ಸಾಮ್ರಾಜ್ಯದ ದೊರೆ ಚಂದ್ರಗುಪ್ತ ಮೌರ್ಯನ ಕತೆಯನ್ನು ಸಿನಿಮಾ ಮಾಡುವ ಯೋಜನೆ ಅವರ ಮುಂದಿದೆ. ಚಂದ್ರಗುಪ್ತ ಮೌರ್ಯ ಮತ್ತು ಚಾಣಕ್ಯರ ಕತೆಯನ್ನು ಆದಿತ್ಯ ಧರ್ ತೆರೆ ಮೇಲೆ ತರಲಿದ್ದಾರೆ ಎನ್ನಲಾಗುತ್ತಿದೆ. ಸಿನಿಮಾನಲ್ಲಿ ಚಂದ್ರಗುಪ್ತ ಮೌರ್ಯನಾಗಿ ರಣ್ವೀರ್ ಸಿಂಗ್ ಮತ್ತು ಚಾಣಕ್ಯನಾಗಿ ಆದಿತ್ಯ ಅವರ ನೆಚ್ಚಿನ ನಟ ಅಕ್ಷಯ್ ಖನ್ನಾ ನಟಿಸಲಿದ್ದಾರಂತೆ.

ಆದಿತ್ಯ ಧರ್ ಅವರಿಗೆ ಅಶ್ವತ್ಥಾಮನ ಕುರಿತು ಸಿನಿಮಾ ಮಾಡುವ ಕನಸು ಹಲವು ವರ್ಷಗಳಿಂದಲೂ ಇದೆ. ಈ ವಿಷಯವನ್ನು ಈ ಹಿಂದೆಯೂ ಸಹ ಅವರು ಹೇಳಿಕೊಂಡಿದ್ದರು. ಆದರೆ ಅದಕ್ಕೆ ಅತಿಯಾದ ವಿಎಫ್​​ಎಕ್ಸ್, ಸೆಟ್​ಗಳ ಅವಶ್ಯಕತೆ ಇದೆ, ಅದಕ್ಕೆ ಭಾರಿ ಬಂಡವಾಳ ಬೇಕಾಗುತ್ತದೆ ಎಂದು ಆದಿತ್ಯ ಹೇಳಿದ್ದರು. ಇದೀಗ ‘ಧುರಂಧರ್’ ಮತ್ತು ‘ಧುರಂಧರ್ 2’ ಸಿನಿಮಾಗಳು ಭಾರಿ ದೊಡ್ಡ ಹಿಟ್ ಆಗಿದ್ದು, ಎರಡೂ ಸಿನಿಮಾಗಳಿಗೆ ಆದಿತ್ಯ ಧರ್ ಸಹ ನಿರ್ಮಾಪಕರೂ ಸಹ ಆಗಿರುವ ಕಾರಣ, ಇದೀಗ ‘ಅಶ್ವತ್ಥಾಮ’ ಸಿನಿಮಾ ಮಾಡುವಷ್ಟು ಬಂಡವಾಳ ಒಟ್ಟುಗೂಡಿರುವ ಕಾರಣ ಹಾಗೂ ಆದಿತ್ಯ ಮೇಲೆ ಬಂಡವಾಳ ಹೂಡಲು ದೊಡ್ಡ ನಿರ್ಮಾಣ ಸಂಸ್ಥೆಗಳು ರೆಡಿಯಾಗಿವೆ ಹಾಗಾಗಿ ಇದೀಗ ಅವರು ‘ಅಶ್ವತ್ಥಾಮ’ ಸಿನಿಮಾಕ್ಕೆ ಕೈ ಹಾಕುವ ಸಾಧ್ಯತೆಯೂ ಇದೆ.

ಇದನ್ನೂ ಓದಿ:‘ಧುರಂಧರ್ 2’ ಕಥೆ ನಂದು ಎಂದ ವ್ಯಕ್ತಿಯ ಮೈಚಳಿ ಬಿಡಿಸಲು ಮುಂದಾದ ಆದಿತ್ಯ ಧಾರ್

ಇನ್ನು ಕೆಲ ಸುದ್ದಿಗಳ ಪ್ರಕಾರ, ಆದಿತ್ಯ ಧರ್ ಅವರ ಮೊದಲ ಸಿನಿಮಾ ಮಾದರಿಯಲ್ಲೇ ಭಾರತೀಯ ಸೇನೆಯ ಆಪರೇಷನ್ ಒಂದರ ಕತೆಯನ್ನು ಸಿನಿಮಾ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಆದಿತ್ಯ ಧರ್ ನಿರ್ದೇಶನ ಮಾಡಿದ್ದ ‘ಉರಿ: ದಿ ಸರ್ಜಿಕಲ್ ಸ್ಟ್ರೈಕ್’ ಸಿನಿಮಾ ದೊಡ್ಡ ಹಿಟ್ ಆಗಿತ್ತು. ಇದೀಗ ಭಾರತೀಯ ಸೇನೆಯ ಕುರಿತಾಗಿಯೇ ಮತ್ತೊಂದು ಸಿನಿಮಾವನ್ನು ಆದಿತ್ಯ ಕೈಗೆತ್ತಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಈ ಮೂರು ಸಿನಿಮಾಗಳಲ್ಲಿ ಆದಿತ್ಯ ಅವರು ಯಾವ ಸಿನಿಮಾ ಕೈಗೆತ್ತಿಕೊಳ್ಳಲಿದ್ದಾರೆ ಎಂಬುದು ಕುತೂಹಲ ಕೆರಳಿಸಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಉರುಳಿ ಬಿದ್ದ ಪ್ರವಾಸಿಗರ ಬಸ್: ಕಾರಿನಲ್ಲಿದ್ದ ನಾಲ್ವರು ಜಸ್ಟ್​ ಮಿಸ್​!

ಕೊಡಗು, ಏಪ್ರಿಲ್​ 04: ಪ್ರವಾಸಿಗರ ಬಸ್​​ವೊಂದು ಕಾರಿನ‌ ಮೇಲೆ ಉರುಳಿ ಬಿದ್ದಿರುವಂತಹ ಘಟನೆ ಮಡಿಕೇರಿ ತಾಲೂಕಿನ ಮರಗೋಡು ಗ್ರಾಮದಲ್ಲಿ ನಡೆದಿದೆ. ಕಾರಿನಲ್ಲಿದ್ದ ನಾಲ್ವರು ಪವಾಡ ಸದೃಶ್ಯ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸಣ್ಣಪುಟ್ಟ ಗಾಯಗಳಾಗಿವೆ. ಚಾಲಕ‌ ಸುದೀಪ್​ ಅತಿ ವೇಗವಾಗಿ ಬಸ್ ಚಲಾಯಿಸಿದ್ದಾರೆ. ಈ ವೇಳೆ ರಸ್ತೆ‌ ಬದಿ‌ ನಿಂತಿದ್ದ ಕಾರಿನ‌ ಮೇಲೆ ಬಸ್ ಉರುಳಿ ಬಿದ್ದಿದೆ. ಸದ್ಯ ​​ಸ್ಥಳಕ್ಕೆ ಮಡಿಕೇರಿ ಗ್ರಾಮಾಂತರ ಠಾಣಾ ಪೊಲೀಸರು ಭೇಟಿ ನೀಡಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

DC vs MI Playing XI: ಟಾಸ್ ಗೆದ್ದ ಡೆಲ್ಲಿ; ನಾಯಕ ಸೇರಿದಂತೆ ಮುಂಬೈ ತಂಡದಲ್ಲಿ 3 ಬದಲಾವಣೆ

ಐಪಿಎಲ್ 19 ನೇ ಸೀಸನ್​ನ ಮೊದಲ ಡಬಲ್ ಹೆಡರ್​ನ ಮೊದಲ ಮತ್ತು ಎಂಟನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಮುಂಬೈ ಇಂಡಿಯನ್ಸ್ ಪರಸ್ಪರ ಮುಖಾಮುಖಿಯಾಗಿವೆ. ಈ ಪಂದ್ಯ ದೆಹಲಿಯ ತವರು ಮೈದಾನದಲ್ಲಿರುವ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಈ ಸೀಸನ್​ನಲ್ಲಿ ಎರಡೂ ತಂಡಗಳ ಎರಡನೇ ಪಂದ್ಯ ಇದಾಗಿದೆ. ಎರಡೂ ತಂಡಗಳು ಸೀಸನ್ ಅನ್ನು ಗೆಲುವಿನೊಂದಿಗೆ ಆರಂಭಿಸಿವೆ. ಆದ್ದರಿಂದ, ಎರಡೂ ತಂಡಗಳು ಈ ಗೆಲುವಿನ ಓಟವನ್ನು ಮುಂದುವರೆಸಲು ಪ್ರಯತ್ನಿಸಲಿವೆ.

ಟಾಸ್ ಗೆದ್ದ ಡೆಲ್ಲಿ

ಟಾಸ್ ಗೆದ್ದ ಡೆಲ್ಲಿ ನಾಯಕ ಅಕ್ಷರ್ ಪಟೇಲ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.ಹೀಗಾಗಿ ಮುಂಬೈ ಇಂಡಿಯನ್ಸ್ ಮೊದಲು ಬ್ಯಾಟಿಂಗ್ ಮಾಡುತ್ತಿದೆ. ಟಾಸ್ ಬಳಿಕ ಮಾತನಾಡಿದ ಡೆಲ್ಲಿ ನಾಯಕ ಅಕ್ಷರ್ ಪಟೇಲ್ ತಂಡದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ ಎಂದರು. ಅಂದರೆ ಕಳೆದ ಪಂದ್ಯದಲ್ಲಿ ಕಣಕ್ಕಿಳಿದ ತಂಡವೇ ಈ ಪಂದ್ಯದಲ್ಲೂ ಆಡಲಿದೆ. ಇನ್ನು ಮುಂಬೈ ತಂಡದಲ್ಲಿ 3 ಬದಲಾವಣೆಗಳನ್ನು ಮಾಡಲಾಗಿದ್ದು, ನಾಯಕ ಹಾರ್ದಿಕ್ ಪಾಂಡ್ಯ ಅನಾರೋಗ್ಯದ ಕಾರಣ ಈ ಪಂದ್ಯವನ್ನು ಆಡುತ್ತಿಲ್ಲ. ಅವರ ಬದಲಿಗೆ ದೀಪಕ್ ಚಾಹರ್ ಆಡುತ್ತಿದ್ದಾರೆ. ಹಾಗೆಯೇ ಟ್ರೆಂಟ್ ಬೌಲ್ಟ್ ಬದಲಿಗೆ ಕಾರ್ಬಿನ್ ಬಾಷ್ ಆಡುತ್ತಿದ್ದರೆ, ಗಜಾನಫರ್ ಬದಲಿಗೆ ಮಿಚೆಲ್ ಸ್ಯಾಂಟ್ನರ್ ಆಡುತ್ತಿದ್ದಾರೆ.

ಮುಂಬೈ-ಡೆಲ್ಲಿ ಮುಖಾಮುಖಿ ದಾಖಲೆ

ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವೆ ಇದುವರೆಗೆ 37 ಪಂದ್ಯಗಳು ನಡೆದಿವೆ. ಇದರಲ್ಲಿ ಮುಂಬೈ ಇಂಡಿಯನ್ಸ್ 21 ಪಂದ್ಯಗಳನ್ನು ಗೆದ್ದಿದ್ದರೆ, ಡೆಲ್ಲಿ ಕ್ಯಾಪಿಟಲ್ಸ್ 16 ಪಂದ್ಯಗಳನ್ನು ಗೆದ್ದಿದೆ. ಅಂದರೆ ಈ ಮುಖಾಮುಖಿಯಲ್ಲಿ ಮುಂಬೈ ಮೇಲುಗೈ ಸಾಧಿಸಿರುವುದನ್ನು ಕಾಣಬಹುದಾಗಿದೆ. ಇನ್ನು ಈ ಅವೃತ್ತಿಯಲ್ಲಿ ಉಭಯ ತಂಡಗಳು ತಲಾ ಒಂದೊಂದು ಪಂದ್ಯವನ್ನು ಆಡಿವೆ. ಅದರಲ್ಲಿ ಮುಂಬೈ ಇಂಡಿಯನ್ಸ್, ಕೆಕೆಆರ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿದರೆ, ಇತ್ತ ಡೆಲ್ಲಿ ಕ್ಯಾಪಿಟಲ್ಸ್, ಲಕ್ನೋ ತಂಡವನ್ನು ಮಣಿಸಿದೆ. ಹೀಗಾಗಿ ಗೆದ್ದ ತಂಡಗಳ ನಡುವಿನ ಕಾಳಗ ತೀವ್ರ ಕುತೂಹಲ ಕೆರಳಿಸಿದೆ.

ಉಭಯ ತಂಡಗಳ ಪ್ಲೇಯಿಂಗ್ 11

ಮುಂಬೈ ಇಂಡಿಯನ್ಸ್: ರೋಹಿತ್ ಶರ್ಮಾ, ರಿಯಾನ್ ರಿಕಲ್ಟನ್ (ವಿಕೆಟ್ ಕೀಪರ್), ತಿಲಕ್ ವರ್ಮಾ, ಸೂರ್ಯಕುಮಾರ್ (ನಾಯಕ), ನಮನ್ ಧೀರ್, ಶೆರ್ಫಾನೆ ರುದರ್‌ಫೋರ್ಡ್, ಶಾರ್ದೂಲ್ ಠಾಕೂರ್, ದೀಪಕ ಚಾಹರ್, ಮಿಚೆಲ್ ಸ್ಯಾಂಟ್ನರ್, ಜಸ್ಪ್ರೀತ್ ಬುಮ್ರಾ, ಕಾರ್ಬಿನ್ ಬಾಷ್.

ಡೆಲ್ಲಿ ಕ್ಯಾಪಿಟಲ್ಸ್‌: ಪಾತುಮ್ ನಿಸ್ಸಾಂಕ, ಕೆಎಲ್ ರಾಹುಲ್ (ವಿಕೆಟ್ ಕೀಪರ್), ನಿತೀಶ್ ರಾಣಾ, ಟ್ರಿಸ್ಟಾನ್ ಸ್ಟಬ್ಸ್, ಡೇವಿಡ್ ಮಿಲ್ಲರ್, ಅಕ್ಸರ್ ಪಟೇಲ್ (ನಾಯಕ), ವಿಪ್ರಜ್ ನಿಗಮ್, ಕುಲ್ದೀಪ್ ಯಾದವ್, ಲುಂಗಿ ಎನ್‌ಗಿಡಿ, ಮುಖೇಶ್ ಕುಮಾರ್, ಟಿ ನಟರಾಜನ್.

Source link

‘ರಾಮನ ಪಾತ್ರಕ್ಕೆ ರಣಬೀರ್ ಸೂಕ್ತ ಅಲ್ಲ’; ಲಕ್ಷ್ಮಣ ಪಾತ್ರಧಾರಿಯ ನೇರ ಹೇಳಿಕೆ

ಒಂದು ಸಿನಿಮಾ ಅಥವಾ ಸೀರಿಸ್ ಮಾಡಿ ಅದು ಗಮನಸೆಳೆದರೆ ಅದು ಬ್ರ್ಯಾಂಡ್ ಆಗಿ ಬಿಡುತ್ತದೆ. ನಂತರ ಅದೇ ರೀತಿಯ ಪ್ರಾಜೆಕ್ಟ್ ಮಾಡಿದರೆ ಜನರು ಬೇಡ ಬೇಡ ಎಂದರೂ ಅದನ್ನು ಮೂಲ ಸೃಷ್ಟಿಗೆ ಹೋಲಿಕೆ ಮಾಡಿಯೇ ಮಾಡುತ್ತಾರೆ. ಈಗ ‘ರಾಮಾಯಣ’ ಸಿನಿಮಾದ ಪರಿಸ್ಥಿತಿಯೂ ಹಾಗೆಯೇ ಆಗಿದೆ. ಈ ಮೊದಲು ದೂರದರ್ಶನದಲ್ಲಿ ‘ರಾಮಾಯಣ’ ಸೀರಿಯಲ್ ಪ್ರಸಾರ ಕಂಡಿತ್ತು. ಈಗ ನಿತೇಶ್ ತಿವಾರಿದ ನಿರ್ದೇಶನದ ಹೊಸ ರಾಮಾಯಣವನ್ನು ಅನೇಕರು ಆ ಧಾರಾವಾಹಿಗೆ ಹೋಲಿಕೆ ಮಾಡುತ್ತಿದ್ದಾರೆ. ವಿಎಫ್​​ಎಕ್ಸ್ ಬಗ್ಗೆಯೂ ಕೆಲವರು ಅಪಸ್ವರ ತೆಗೆದಿದ್ದಾರೆ.

ರಮಾನಂದ್ ಸಾಗರ್ ಅವರ ‘ರಾಮಾಯಣ’ ಐಕಾನಿಕ್ ಎನಿಸಿಕೊಂಡಿದೆ. ಈ ಸೀರಿಸ್​​ನಲ್ಲಿ ಸುನೀಲ್ ಲಹರಿ ಅವರು ಲಕ್ಷ್ಮಣನ ಪಾತ್ರ ಮಾಡಿದ್ದರು. ಅವರು ಟೀಸರ್ ಬಗ್ಗೆ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಅವರಿಗೆ ರಾಮನ ಪಾತ್ರ ರಣಬೀರ್ ಸೂಕ್ತ ಅಲ್ಲ ಎನಿಸಿದೆ. ತಮ್ಮ ಅಭಿಪ್ರಾಯವನ್ನು ಮುಚ್ಚುಮರೆ ಇಲ್ಲದೆ ಹೇಳಿದ್ದಾರೆ.

‘ರಣಬೀರ್ ರಾಮನಾಗಿ ಚೆನ್ನಾಗಿ ಕಾಣುತ್ತಾರೆ ನಿಜ, ಆದರೆ ಮುಗ್ಧತೆ ಸ್ವಲ್ಪ ಕಡಿಮೆ ಕಾಣುತ್ತದೆ. ಅರುಣ್ ಗೋವಿಲ್ (ರಾಮಾಯಣ ಸರಣಿಯಲ್ಲಿ ರಾಮನ ಪಾತ್ರಧಾರಿ) ಅವರ ತಾಳ್ಮೆ, ಶಾಂತತೆ ಮತ್ತು ಮುಗ್ಧತೆ ಇಲ್ಲಿ ಕಾಣುತ್ತಿಲ್ಲ. ಆದರೆ, ರಣಬೀರ್ ತಮ್ಮ ನಟನೆಯ ಮೂಲಕ ಪಾತ್ರ ಸಮರ್ಥಿಸಿಕೊಳ್ಳುತ್ತಾರೆ ಎಂಬ ನಂಬಿಕೆ ನನಗೆ ಇದೆ’ ಎಂದಿದ್ದಾರೆ ಸುನೀಲ್. ರಾಮನ ಪಾತ್ರದಲ್ಲಿ ನಟಿಸಿದ ಅರುಣ್ ಗೋವಿಲ್ ಅವರನ್ನು ಅನೇಕರು ಈಗಲೂ ಪೂಜ್ಯ ಭಾವನೆಯಲ್ಲೇ ಕಾಣುತ್ತಾರೆ.

‘ರಣಬೀರ್ ಕಪೂರ್ ಲುಕ್ ಹಾರ್ಷ ಆಗಿ ಕಾಣುತ್ತದೆ. ಅವರು ಭರತ ಅಥವಾ ಲಕ್ಷ್ಮಣನ ಪಾತ್ರಕ್ಕೆ ಹೆಚ್ಚು ಸೂಕ್ತರಾಗುತ್ತಿದ್ದರು. ಈ ರೀತಿಯ ಪಾತ್ರಗಳಿಗೆ ಯಾವಾಗಲೂ ಹೊಸ ಮುಖವನ್ನು ತರಬೇಕು. ಯಾವುದೇ ವಿವಾದ ಇಲ್ಲದವರಾದರೆ ಇನ್ನೂ ಉತ್ತಮ. ಆಗ ಎಲ್ಲರೂ ಪಾತ್ರ ಒಪ್ಪುತ್ತಾರೆ’ ಎಂದು ಸುನೀಲ್ ಹೇಳಿದ್ದಾರೆ. ರಣಬೀರ್ ಕಪೂರ್ ಅನೇಕ ನಟಿಯರ ಜೊತೆ ಸುತ್ತಾಡಿದ್ದಾರೆ, ಮದ್ಯ ಸೇವನೆ ಮಾಡುತ್ತಾರೆ ಎಂಬ ಆರೋಪ ಇದ್ದು, ಒಂದು ವರ್ಗದ ಜನರು ಅವರನ್ನು ರಾಮನಾಗಿ ಸ್ವೀಕರಿಸಲು ನಿರಾಕರಿಸಿದ್ದಾರೆ.

ಇದನ್ನೂ ಓದಿ: ರಾವಣನ ಪಾತ್ರ ಮಾಡಿದ ಯಶ್​ನ ಹಾಡಿ ಹೊಗಳಿದ ರಣಬೀರ್ ಕಪೂರ್

ಹಳೆಯ ಮಹಭಾರತದಲ್ಲಿ ಕೃಷ್ಣನ ಪಾತ್ರ ಮಾಡಿದ್ದ ನಿತೀಶ್ ಭಾರದ್ವಾಜ್ ಅವರಿಗೆ ‘ರಾಮಾಯಣ’ ಟೀಸರ್ ಇಷ್ಟ ಆಗಿದೆ. ರಾಮಾಯಣದಲ್ಲಿ ಸೀತೆ ಪಾತ್ರ ಮಾಡಿದ್ದ ದೀಪಿಕಾ ಚಿಖಲಿಯಾ ಕೂಡ ಧಾರಾವಾಹಿ ಇಷ್ಟಪಟ್ಟಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

 

Source link

Exit mobile version