ಕಿಚ್ಚ ಸುದೀಪ್ ಅವರು ಕನ್ನಡ ಮಾತ್ರವಲ್ಲದೆ, ಪರಭಾಷೆಯಲ್ಲೂ ಗಮನ ಸೆಳೆದವರು. ಅವರಿಗೆ ರಾಮನ ಪಾತ್ರ ಹೀಗೆ ಕಾಣಿಸುತ್ತದೆ. ಅವರಿಗೆ ಕೃಷ್ಣನ ಪಾತ್ರ ಹೆಚ್ಚು ಸೂಕ್ತವಾಗುತ್ತಿತ್ತು ಎಂದು ಅನೇಕರು ಹೇಳಿದ್ದಾರೆ.
ಪುನೀತ್ ರಾಜ್ಕುಮಾರ್ ಅವರು ಇಂದು ನಮ್ಮ ಜೊತೆ ಇಲ್ಲ. ಅವರು ಇದ್ದಿದ್ದರೆ ಹಲವು ಸಿನಿಮಾಗಳು ಅವರ ಬತ್ತಳಿಕೆಯಿಂದ ಬರುತ್ತಿದ್ದವು. ಅವರು ಎಐ ಇಮೇಜ್ ಅಲ್ಲಿ ರಾಮನಾಗಿ ಕಾಣಿಸಿದ್ದು ಹೀಗೆ.
ವಿಷ್ಣುವರ್ಧನ್ ರಾಮನಾಗಿ ಕಾಣಿಸಿದ್ದರೆ ಅವರ ಪಾತ್ರ ಹೀಗೆ ಇರುತ್ತಿತ್ತು. ಈ ಫೋಟೋಗಳು ಗಮನ ಸೆಳೆದಿವೆ. ಆದರೆ, ಇವರು ಸಂಪೂರ್ಣವಾಗಿ ವಿಷ್ಣುವರ್ಧನ್ ರೀತಿ ಕಾಣಿಸುತ್ತಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಉಪೇಂದ್ರ ಅವರು ವಿವಿಧ ರೀತಿಯ ಪಾತ್ರಗಳ ಮೂಲಕ ಮೆಚ್ಚುಗೆ ಪಡೆದಿದ್ದಾರೆ. ಈಗ ಅವರು ರಾಮನಾಗಿದ್ದರೆ ಹೀಗೆ ಕಾಣಿಸುತ್ತಿದ್ದರು.
ಕಿಚ್ಚ ಸುದೀಪ್ ಅವರು ಕನ್ನಡ ಮಾತ್ರವಲ್ಲದೆ, ಪರಭಾಷೆಯಲ್ಲೂ ಗಮನ ಸೆಳೆದವರು. ಅವರಿಗೆ ರಾಮನ ಪಾತ್ರ ಹೀಗೆ ಕಾಣಿಸುತ್ತದೆ. ಅವರಿಗೆ ಕೃಷ್ಣನ ಪಾತ್ರ ಹೆಚ್ಚು ಸೂಕ್ತವಾಗುತ್ತಿತ್ತು ಎಂದು ಅನೇಕರು ಹೇಳಿದ್ದರು.
ಶಿವರಾಜ್ಕುಮಾರ್ ಅವರು ನೂರಾರು ಸಿನಿಮಾಗಳಲ್ಲಿ ನಟಿಸಿ ಗಮನ ಸೆಳೆದಿದ್ದಾರೆ. ಅವರು ರಾಮನ ಪಾತ್ರ ಮಾಡಿದ್ದರೆ ಕಾಣಿಸುತ್ತಿದ್ದುದು ಹೀಗೆ.
ದರ್ಶನ್ ಅವರು ಸದ್ಯ ಜೈಲಿನಲ್ಲಿದ್ದಾರೆ. ಅವರು ಯಾವುದೇ ಪಾತ್ರ ಮಾಡಿದರೂ ಉತ್ತಮವಾಗಿ ನಿರ್ವಹಿಸುತ್ತಾರೆ. ಅವರು ರಾಮನಾಗಿದ್ದರೆ ಹೀಗೆ ಕಾಣಿಸುತ್ತಿದ್ದರು.
ಎಐನಿಂದ ಮಾಡಲ್ಪಟ್ಟ ಯಶ್ ಫೋಟೋ ವೈರಲ್ ಆಗಿದೆ. ಯಶ್ ಅವರು ರಾಮನಾಗಿ ಹೇಗೆ ಕಾಣಸುತ್ತಿದ್ದರು ಎಂಬುದನ್ನು ತೋರಿಸಲಾಗಿದೆ. ಅವರಿಗೆ ಗಡ್ಡವೂ ಇದೆ.
ಚಿಕ್ಕಬಳ್ಳಾಪುರ, ಏಪ್ರಿಲ್ 4: ಗಲ್ಫ್ ರಾಷ್ಟ್ರಗಳಲ್ಲಿನ ಯುದ್ಧದ ಕಾರಣದಿಂದ ವಾಣಿಜ್ಯ ಗ್ಯಾಸ್ ಸಿಲಿಂಡರ್‌ಗಳ ಅಭಾವ ಉಂಟಾಗಿ, ಬಹುತೇಕ ದೊಡ್ಡ ಹೋಟೆಲ್‌ಗಳು ಕಾರ್ಯನಿರ್ವಹಿಸುತ್ತಿಲ್ಲ. ಈ ಪರಿಸ್ಥಿತಿಯು ಚಿಕ್ಕಬಳ್ಳಾಪುರ ಜಿಲ್ಲೆಯ ಆಲೂಗಡ್ಡೆ ಬೆಳೆಗಾರರಿಗೆ ತೀವ್ರ ಸಂಕಷ್ಟ ತಂದೊಡ್ಡಿದೆ. ರೈತರು ಮಗುವಿನಂತೆ ಆರೈಕೆ ಮಾಡಿ ಬೆಳೆದ ಆಲೂಗಡ್ಡೆಗೆ ಉತ್ತಮ ಬೆಲೆ ಸಿಗದೆ ಪರದಾಡುತ್ತಿದ್ದಾರೆ. ಕಳೆದ ಹದಿನೈದು ದಿನಗಳಿಂದ ಕೊಯ್ಲು ಮಾಡಿದ ಆಲೂಗಡ್ಡೆಯನ್ನು ಸಂಗ್ರಹಿಸಿಟ್ಟರೂ, ಮಾರುಕಟ್ಟೆಯಲ್ಲಿ ಬೇಡಿಕೆ ಇಲ್ಲದೆ ಮತ್ತು ಹೋಟೆಲ್‌ಗಳು ತೆರೆಯದ ಕಾರಣ ಮಾರಾಟವಾಗುತ್ತಿಲ್ಲ. ಚಿಕ್ಕಬಳ್ಳಾಪುರದ ಎಪಿಎಂಸಿ ಮಾರುಕಟ್ಟೆಯಲ್ಲಿ, ಅತ್ಯುತ್ತಮ ಗುಣಮಟ್ಟದ ಆಲೂಗಡ್ಡೆ (52 ಕೆ.ಜಿ. ಮೂಟೆ) ಕೇವಲ 300 ರೂಪಾಯಿಗೆ ಮಾರಾಟವಾಗುತ್ತಿದ್ದು, ಕಳಪೆ ಗುಣಮಟ್ಟದ ಆಲೂಗಡ್ಡೆಗೆ 20 ರಿಂದ 50 ರೂಪಾಯಿ ಮಾತ್ರ ಸಿಗುತ್ತಿದೆ. ಇದರಿಂದ ರೈತರಿಗೆ ಅಪಾರ ಪ್ರಮಾಣದ ನಷ್ಟ ಉಂಟಾಗಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬಂತಾಗಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿಕ್ಲಿಕ್ ಮಾಡಿ
ಹಾವೇರಿ, ಏಪ್ರಿಲ್ 04: ನಗರದ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಡೆಪ್ಯುಟಿ ಸ್ಪೀಕರ್ ರುದ್ರಪ್ಪ ಲಮಾಣಿ ಅವರ ಎಸ್ಕಾರ್ಟ್ ವಾಹನ ಅಪಘಾತಕ್ಕೀಡಾಗಿದೆ. ಅತಿವೇಗದಲ್ಲಿ ಸಂಚರಿಸುತ್ತಿದ್ದ ವಾಹನ ಬಸ್‌ಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಚಾಲಕ ಚನ್ನಬಸಪ್ಪ ವಿರುದ್ಧ ದೂರು ದಾಖಲಾಗಿದ್ದು, ಹಾವೇರಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಲಾಗಿದೆ.
ಹೈದರಾಬಾದ್, ಏ.4 : ಬೇಸಿಗೆ ಆರಂಭವಾಗುತ್ತಿದ್ದಂತೆ ಮಾರುಕಟ್ಟೆಗೆ ಹಣ್ಣುಗಳ ರಾಜ ಮಾವಿನ ಹಣ್ಣಿನ ಲಗ್ಗೆ ಇಟ್ಟಿದೆ. ಬೆಂಗಳೂರು ಸೇರಿದಂತೆ ದೇಶದ ಬೇರೆ ಬೇರೆ ರಾಜ್ಯಗಳಲ್ಲಿ ಮಾವಿನ ಹಣ್ಣಿನ ಮಾರಾಟ ಜೋರಾಗಿ ನಡೆಯುತ್ತಿದೆ. ಆದರೆ, ಮಾವಿನ ಹಣ್ಣು ಸವಿಯೋ ಅಥವಾ ವಿಷವೋ ಎಂಬ ಬಗ್ಗೆ ಈಗಲೇ ಎಚ್ಚೆತ್ತುಕೊಳ್ಳಿ. ಕೇವಲ ಲಾಭದ ಆಸೆಗೆ ಬಿದ್ದ ಕೆಲವು ವ್ಯಾಪಾರಿಗಳು ಕ್ಯಾಲ್ಸಿಯಂ ಕಾರ್ಬೈಡ್ (Calcium Carbide) ನಂತಹ ಮಾರಕ ರಾಸಾಯನಿಕಗಳನ್ನು ಬಳಸಿ ಹಣ್ಣುಗಳನ್ನು ಮಾಗಿಸುತ್ತಿದ್ದಾರೆ. ಈ ಕುರಿತು ಹೈದರಾಬಾದ್ ಪೊಲೀಸ್ ಕಮಿಷನರ್ ವಿ.ಸಿ. ಸಜ್ಜನರ್ (IPS) ಅವರು ಸಾರ್ವಜನಿಕರಿಗೆ ಮಹತ್ವದ ಎಚ್ಚರಿಕೆ ನೀಡಿದ್ದಾರೆ. ಇದೇ ಬೆಂಗಳೂರಿನಲ್ಲೂ ಕೂಡ ಇಂತಹ ಮಾವಿನ ಹಣ್ಣುಗಳು ಮಾರಾಟವಾಗುತ್ತಿದೆ. ಹೈದರಾಬಾದ್ ಪೊಲೀಸರಂತೆ ಬೆಂಗಳೂರಿನ ಪೊಲೀಸರು ಕೂಡ ಈ ಬಗ್ಗೆ ಸಾರ್ವಜನಿಕ ಜಾಗೃತಿಯನ್ನು ಮೂಡಿಸಬೇಕಾಗಿದೆ.
ರಸ್ತೆ ಬದಿಯ ಅಂಗಡಿಗಳಲ್ಲಿ ಅತಿ ಸುಂದರವಾಗಿ, ಹೊಳೆಯುವ ಚಿನ್ನದ ಬಣ್ಣದಲ್ಲಿ ಕಾಣುವ ಮಾವಿನ ಹಣ್ಣುಗಳನ್ನು ಕಂಡ ತಕ್ಷಣ ಖರೀದಿಸಬೇಡಿ. ಇವು ಹೊರನೋಟಕ್ಕೆ ಹಳದಿಯಾಗಿದ್ದರೂ, ಒಳಗಡೆ ಕಚ್ಚಾ ಮತ್ತು ವಿಷಕಾರಿಯಾಗಿರುತ್ತವೆ. ನೈಸರ್ಗಿಕವಾಗಿ ಹಣ್ಣಾದ ಮಾವು ಎಂದಿಗೂ ಏಕರೂಪದ ಬಣ್ಣವನ್ನು ಹೊಂದಿರುವುದಿಲ್ಲ ಎಂಬುದನ್ನು ನೆನಪಿಡಿ.
ಇಲ್ಲಿದೆ ನೋಡಿ ಎಕ್ಸ್ ಪೋಸ್ಟ್;
King of fruits or fruit of fear? This summer stay away from Toxic Mangoes
The “king of fruits” is back on our plates, but people are advised to exercise caution and avoid being misled by chemically ripened mangoes. They should also be wary of those sold under the label of… https://t.co/nvXZka3SMSpic.twitter.com/ijpPPV006K
— V.C. Sajjanar, IPS (@SajjanarVC_IPS) April 3, 2026
ರಾಸಾಯನಿಕ ಬಳಸಿ ಹಣ್ಣು ಮಾಡಿದ ಮಾವಿನ ಸೇವನೆಯಿಂದ ತಕ್ಷಣವೇ ಈ ಕೆಳಗಿನ ಸಮಸ್ಯೆಗಳು ಕಾಣಿಸಿಕೊಳ್ಳಬಹುದು:
ಗಂಟಲು ಉರಿ ಮತ್ತು ವಾಕರಿಕೆ.
ವಾಂತಿ ಮತ್ತು ಭೇದಿ.
ದೀರ್ಘಕಾಲದ ಬಳಕೆಯಿಂದ ನರಮಂಡಲದ ಹಾನಿ ಹಾಗೂ ಉಸಿರಾಟದ ತೊಂದರೆ.
ಗುರುತಿಸುವುದು ಹೇಗೆ?
ಬಣ್ಣ: ಅತಿಯಾದ ಏಕರೂಪದ ಹಳದಿ ಬಣ್ಣವಿದ್ದರೆ ಜಾಗರೂಕರಾಗಿರಿ.
ವಾಸನೆ: ಹಣ್ಣಿನಿಂದ ರಾಸಾಯನಿಕ ವಾಸನೆ ಬರುತ್ತಿದ್ದರೆ ಅದು ಅಪಾಯಕಾರಿ.
ಬೆಕಿಂಗ್ ಸೋಡಾ ಪರೀಕ್ಷೆ: ಹಣ್ಣನ್ನು ಬೇಕಿಂಗ್ ಸೋಡಾ ಮಿಶ್ರಿತ ನೀರಿನಲ್ಲಿ ತೊಳೆದಾಗ ಅನಿರೀಕ್ಷಿತವಾಗಿ ಬಣ್ಣ ಬದಲಾದರೆ ಅದು ಕೆಮಿಕಲ್ ಹಣ್ಣು ಎಂದು ತಿಳಿಯಿರಿ.
ಆರ್ಗ್ಯಾನಿಕ್ ಲೇಬಲ್: ‘ಆರ್ಗ್ಯಾನಿಕ್’ ಎಂದು ಮಾರಾಟ ಮಾಡುವ ಹಣ್ಣುಗಳ ಅಸಲಿಯತ್ತನ್ನು ಕೂಡ ಪರಿಶೀಲಿಸಿ.
ಸಾರ್ವಜನಿಕರ ಆರೋಗ್ಯದ ಜೊತೆ ಚೆಲ್ಲಾಟವಾಡುವ ವ್ಯಾಪಾರಿಗಳ ವಿರುದ್ಧ ಹೈದರಾಬಾದ್ ಪೊಲೀಸ್ ಇಲಾಖೆಯ H-FAST ತಂಡವು ತೀವ್ರ ನಿಗಾ ವಹಿಸಿದೆ. ಕಾನೂನು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುತ್ತಿದೆ. ಇದರ ಜತೆಗೆ ಸಾರ್ವಜನಿಕರಿಗೆ ಮನವಿಯನ್ನು ಕೂಡ ಪೊಲೀಸ್ ಇಲಾಖೆ ಮಾಡಿದೆ. ನಿಮ್ಮ ಗಮನಕ್ಕೆ ಕಲಬೆರಕೆ ಅಥವಾ ರಾಸಾಯನಿಕಯುಕ್ತ ಮಾವಿನ ಹಣ್ಣುಗಳ ಮಾರಾಟ ಬಂದಲ್ಲಿ ಕೂಡಲೇ ಡಯಲ್ 100 ಅಥವಾ H-FAST ಸಹಾಯವಾಣಿ 8712661212 ಗೆ ಕರೆ ಮಾಡಿ ಮಾಹಿತಿ ನೀಡಿ ಎಂದು ಹೇಳಿದ್ದಾರೆ. ಅದಕ್ಕಾಗಿ “ಜಾಗೃತ ಹೈದರಾಬಾದ್ – ಸುರಕ್ಷಿತ ಹೈದರಾಬಾದ್” ಎಂಬ ಘೋಷವಾಕ್ಯದೊಂದಿಗೆ ಸಜ್ಜನರ್ ಅವರು ಜನರಲ್ಲಿ ಜಾಗೃತಿ ಮೂಡಿಸಿದ್ದಾರೆ.
ಬೆಂಗಳೂರು (ಏ. 04): ಹಾಲು ಆರೋಗ್ಯಕ್ಕೆ ಮಾತ್ರವಲ್ಲದೆ ಚರ್ಮಕ್ಕೂ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಹಾಲಿನಿಂದ (Milk) ಸ್ನಾನ ಮಾಡುವ ಸಂಪ್ರದಾಯ ಸಾವಿರಾರು ವರ್ಷಗಳಷ್ಟು ಹಳೆಯದು. ದೇವತೆಗಳು ಸಹ ಹಾಲಿನಿಂದ ಸ್ನಾನ ಮಾಡುತ್ತಾರೆ ಎಂಬುದನ್ನು ನೀವು ಕೇಳಿರಬಹುದು. ಇದಕ್ಕೆ ಕಾರಣವೆಂದರೆ ಹಾಲಿನಲ್ಲಿ ಚರ್ಮಕ್ಕೆ ಪ್ರಯೋಜನಕಾರಿ ಎಂದು ಸಾಬೀತುಪಡಿಸುವ ಅನೇಕ ಔಷಧೀಯ ಗುಣಗಳಿವೆ. ಹಿಂದಿನವರು ಚರ್ಮವನ್ನು ಸ್ವಚ್ಛಗೊಳಿಸಲು ಹಾಲನ್ನು ಬಳಸುತ್ತಿದ್ದರು. ಮಾರುಕಟ್ಟೆಯಲ್ಲಿ ಲಭ್ಯವಿರುವ ಅನೇಕ ಸೋಪ್‌ಗಳು ಮತ್ತು ಫೇಸ್ ವಾಶ್‌ಗಳಲ್ಲಿ ಸಹ ಹಾಲನ್ನು ಬಳಸಲಾಗುತ್ತದೆ. ಹೀಗಿರುವಾಗ ನೀವು ನಿಮ್ಮ ಆರೈಕೆಯ ದಿನಚರಿಯಲ್ಲಿ ಹಾಲನ್ನು ಸೇರಿಸಿಕೊಳ್ಳಬಹುದು.
ಹಸಿ ಹಾಲನ್ನು ಮುಖಕ್ಕೆ ಹಚ್ಚುವುದರಿಂದಾಗುವ ಪ್ರಯೋಜನಗಳು
ಚರ್ಮವನ್ನು ಸ್ವಚ್ಛಗೊಳಿಸುವುದು – ಹಾಲನ್ನು ನೈಸರ್ಗಿಕ ಕ್ಲೆನ್ಸರ್ ಎಂದು ಪರಿಗಣಿಸಲಾಗುತ್ತದೆ. ಹತ್ತಿ ಉಂಡೆಯನ್ನು ಬಳಸಿ, ಹಸಿ ಹಾಲನ್ನು ನಿಮ್ಮ ಇಡೀ ಮುಖಕ್ಕೆ ಹಚ್ಚಿ ಸ್ವಚ್ಛಗೊಳಿಸಿ. ಇದು ಸತ್ತ ಚರ್ಮದ ಕೋಶಗಳನ್ನು ತೆಗೆದುಹಾಕುತ್ತದೆ ಮತ್ತು ನಿಮ್ಮ ಚರ್ಮವನ್ನು ಸಂಪೂರ್ಣವಾಗಿ ಸ್ವಚ್ಛವಾಗಿರಿಸುತ್ತದೆ.
ಹೊಳೆಯುವ ಚರ್ಮ – ಪ್ರತಿದಿನ ನಿಮ್ಮ ಮುಖಕ್ಕೆ ಹಾಲನ್ನು ಹಚ್ಚುವುದರಿಂದ ನಿಮ್ಮ ಚರ್ಮವು ಶುದ್ಧವಾಗುತ್ತದೆ ಮತ್ತು ಕಾಂತಿ ಹೆಚ್ಚಾಗುತ್ತದೆ. ಹಸಿ ಹಾಲಿನಲ್ಲಿರುವ ಪದಾರ್ಥಗಳು ನಿಮ್ಮ ಚರ್ಮವನ್ನು ಹೊಳೆಯುವಂತೆ ಮಾಡುತ್ತದೆ. ಇದನ್ನು ನಿಮ್ಮ ಚರ್ಮದ ಆರೈಕೆಯ ದಿನಚರಿಯಲ್ಲಿ ಸೇರಿಸಿಕೊಳ್ಳಲು ಮರೆಯದಿರಿ. ಹಾಲಿನೊಂದಿಗೆ ಮಸಾಜ್ ಮಾಡುವುದರಿಂದ ಸುಕ್ಕುಗಳು ಕಡಿಮೆಯಾಗುತ್ತವೆ.
ಕಲೆಗಳನ್ನು ನಿವಾರಿಸುತ್ತದೆ – ಬಹಳಷ್ಟು ಕಲೆಗಳು ಮತ್ತು ಆಗಾಗ್ಗೆ ಮೊಡವೆಗಳನ್ನು ಹೊಂದಿರುವವರಿಗೆ ಹಸಿ ಹಾಲು ತುಂಬಾ ಪ್ರಯೋಜನಕಾರಿಯಾಗಿದೆ. ಹಸಿ ಹಾಲನ್ನು ಹಚ್ಚುವುದರಿಂದ ನಿಮ್ಮ ಚರ್ಮದ ಮೇಲಿನ ಕಲೆಗಳು ಕಡಿಮೆಯಾಗುತ್ತವೆ ಮತ್ತು ಟ್ಯಾನಿಂಗ್‌ಗೆ ಸಹ ಸಹಾಯ ಮಾಡುತ್ತದೆ. ಇದನ್ನು 10-20 ನಿಮಿಷಗಳ ಕಾಲ ಹಾಗೆಯೇ ಬಿಡಿ ಮತ್ತು ನಂತರ ನಿಮ್ಮ ಮುಖವನ್ನು ತೊಳೆಯಿರಿ.
ಮೃದು ಚರ್ಮ – ಒಣ ಮತ್ತು ಮಂದ ಚರ್ಮವನ್ನು ತೊಡೆದುಹಾಕಲು ಹಸಿ ಹಾಲನ್ನು ಸಹ ಬಳಸಬಹುದು. ಹಸಿ ಹಾಲು ಚರ್ಮವನ್ನು ತೇವಗೊಳಿಸುತ್ತದೆ. ಇದು ನಿಮ್ಮ ಒಣ ಚರ್ಮವನ್ನು ಮೃದುವಾಗಿಸುತ್ತದೆ.
ಹಸಿ ಹಾಲು ಚರ್ಮಕ್ಕೆ ಪ್ರಯೋಜನಕಾರಿ. ಇದರಲ್ಲಿ ಹಲವು ಔಷಧೀಯ ಗುಣಗಳಿವೆ. ಇದು ಚರ್ಮವನ್ನು ಹಗುರಗೊಳಿಸಲು ಸಹಾಯ ಮಾಡುತ್ತದೆ. ನೀವು ಯಾವುದೇ ಕಪ್ಪು ಕಲೆಗಳನ್ನು ಗಮನಿಸಿದರೆ, ನೀವು ಹಸಿ ಹಾಲನ್ನು ಹಚ್ಚಬಹುದು. ಆದಾಗ್ಯೂ, ಇದು ಎಲ್ಲರಿಗೂ ಸೂಕ್ತವಲ್ಲದಿರಬಹುದು. ಆದ್ದರಿಂದ, ನೀವು ಮೊದಲ ಬಾರಿಗೆ ಹಸಿ ಹಾಲನ್ನು ಬಳಸುತ್ತಿದ್ದರೆ, ಪ್ಯಾಚ್ ಪರೀಕ್ಷೆಯನ್ನು ಮಾಡಲು ಮರೆಯದಿರಿ.
ಹಿಂದೂ ಸಂಪ್ರದಾಯದ ಪ್ರಕಾರ, ಸೂರ್ಯಾಸ್ತದ ಸಮಯವನ್ನು ಅತ್ಯಂತ ಪವಿತ್ರವಾದ ‘ಸಂಧ್ಯಾ ಕಾಲ’ ಎಂದು ಪರಿಗಣಿಸಲಾಗುತ್ತದೆ. ಈ ಸಮಯದಲ್ಲಿ ಮಹಾಲಕ್ಷ್ಮಿ ದೇವಿಯು ಭೂಲೋಕಕ್ಕೆ ಭೇಟಿ ನೀಡುತ್ತಾಳೆ ಮತ್ತು ಭಕ್ತರ ಮನೆಗಳನ್ನು ಪ್ರವೇಶಿಸುತ್ತಾಳೆ ಎಂಬ ಗಾಢವಾದ ನಂಬಿಕೆಯಿದೆ. ಆದ್ದರಿಂದ, ಮನೆಯಲ್ಲಿ ಸುಖ, ಶಾಂತಿ ಮತ್ತು ಸಮೃದ್ಧಿ ನೆಲೆಸಬೇಕೆಂದರೆ ಈ ಸಂಧ್ಯಾಕಾಲದಲ್ಲಿ ಕೆಲವು ಕೆಲಸಗಳನ್ನು ಮಾಡಬಾರದು ಎಂದು ಜ್ಯೋತಿಷ್ಯ ತಜ್ಞರು ಎಚ್ಚರಿಸುತ್ತಾರೆ.
ಮುಸ್ಸಂಜೆ ನಿದ್ರೆ:
ಸೂರ್ಯಾಸ್ತದ ಸಮಯದಲ್ಲಿ ಮಲಗುವುದು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಅಶುಭ. ಈ ಸಮಯದಲ್ಲಿ ನಿದ್ರಿಸುವ ವ್ಯಕ್ತಿಯು ಸೋಮಾರಿಯಾಗುವುದಲ್ಲದೆ, ಅಂತಹ ಮನೆಯಲ್ಲಿ ನಕಾರಾತ್ಮಕ ಶಕ್ತಿಗಳು ಸುಲಭವಾಗಿ ಆವರಿಸುತ್ತವೆ. ಇದು ವ್ಯಕ್ತಿಯ ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಮೇಲೆ ನೇರ ಪರಿಣಾಮ ಬೀರುತ್ತದೆ. ಆದರೆ ಚಿಕ್ಕ ಮಕ್ಕಳು, ವೃದ್ಧರು ಮತ್ತು ಅನಾರೋಗ್ಯದಿಂದ ಬಳಲುತ್ತಿರುವವರಿಗೆ ಈ ನಿಯಮದಿಂದ ವಿನಾಯಿತಿ ನೀಡಲಾಗಿದೆ.
ದೀಪಾರಾಧನೆ:
ಸಂಜೆ ವೇಳೆ ಮನೆಯನ್ನು ಕತ್ತಲೆಯಲ್ಲಿ ಇಡುವುದು ದಾರಿದ್ರ್ಯಕ್ಕೆ ನಾಂದಿ ಹಾಡಿದಂತೆ. ಸೂರ್ಯ ಮುಳುಗುವ ಸಮಯದಲ್ಲಿ ಮನೆಯ ಮುಖ್ಯ ದ್ವಾರದಲ್ಲಿ ಅಥವಾ ಪೂಜಾ ಕೋಣೆಯಲ್ಲಿ ಕನಿಷ್ಠ ಒಂದು ದೀಪವನ್ನಾದರೂ ಬೆಳಗಿಸಬೇಕು. ಮಹಾಲಕ್ಷ್ಮಿಯು ಬೆಳಕು ಮತ್ತು ಸ್ವಚ್ಛತೆ ಇರುವ ಮನೆಯಲ್ಲಿ ಮಾತ್ರ ವಾಸಿಸುತ್ತಾಳೆ ಎಂದು ಹಿರಿಯರು ಹೇಳುತ್ತಾರೆ. ಹೀಗಾಗಿ, ಸಂಜೆ ವೇಳೆ ಮನೆಯ ಮೂಲೆ ಮೂಲೆಗಳೂ ಪ್ರಕಾಶಮಾನವಾಗಿರುವಂತೆ ನೋಡಿಕೊಳ್ಳುವುದು ಅತ್ಯಗತ್ಯ.
ಹಣಕಾಸಿನ ವ್ಯವಹಾರ:
ಸೂರ್ಯಾಸ್ತದ ನಂತರ ಹಣದ ವ್ಯವಹಾರ ಮಾಡುವುದು ಅಥವಾ ಸಾಲ ನೀಡುವುದು ಶುಭವಲ್ಲ. ವಿಶೇಷವಾಗಿ ಸಂಜೆ ವೇಳೆ ಹಾಲು, ಮೊಸರು ಅಥವಾ ಉಪ್ಪಿನಂತಹ ವಸ್ತುಗಳನ್ನು ಇತರರಿಗೆ ದಾನವಾಗಿ ನೀಡಬಾರದು. ವಿಜ್ಞಾನ ಮತ್ತು ಶಾಸ್ತ್ರಗಳ ಪ್ರಕಾರ, ಈ ವಸ್ತುಗಳು ಅದೃಷ್ಟದ ಸಂಕೇತಗಳಾಗಿದ್ದು, ಇವುಗಳನ್ನು ಸಂಜೆ ಹೊತ್ತು ಪರರಿಗೆ ನೀಡುವುದರಿಂದ ಮನೆಯ ಸಂಪತ್ತು ಮತ್ತು ಐಶ್ವರ್ಯವು ಕ್ಷೀಣಿಸುತ್ತದೆ ಎಂಬ ನಂಬಿಕೆಯಿದೆ.
ಸಂಜೆ ವೇಳೆ ಮನೆ ಗುಡಿಸುವುದು ಅಥವಾ ಹೊರಗೆ ಕಸ ಎಸೆಯುವುದನ್ನು ನಿಷೇಧಿಸಲಾಗಿದೆ. ಹೀಗೆ ಮಾಡುವುದರಿಂದ ಮನೆಯಲ್ಲಿರುವ ಲಕ್ಷ್ಮಿಯನ್ನು ಹೊರಹಾಕಿದಂತಾಗುತ್ತದೆ ಎಂದು ನಂಬಲಾಗಿದೆ. ಹಾಗೆಯೇ, ಸೂರ್ಯಾಸ್ತದ ನಂತರ ಉಗುರು ಅಥವಾ ಕೂದಲನ್ನು ಕತ್ತರಿಸುವುದರಿಂದ ಜಾತಕದಲ್ಲಿನ ಗ್ರಹಗಳ ಮೇಲೆ ಅಶುಭ ಪರಿಣಾಮ ಬೀರುತ್ತದೆ. ಇದು ದೀರ್ಘಕಾಲದ ಆರ್ಥಿಕ ನಷ್ಟ ಮತ್ತು ಮಾನಸಿಕ ಅಶಾಂತಿಗೆ ಕಾರಣವಾಗಬಹುದು.
ತುಳಸಿ ಪೂಜೆ ಮತ್ತು ಶಾಂತಿಯುತ ವಾತಾವರಣ:
ಜ್ಯೋತಿಷ್ಯದ ಪ್ರಕಾರ, ಸೂರ್ಯಾಸ್ತದ ನಂತರ ತುಳಸಿ ಗಿಡವನ್ನು ಮುಟ್ಟುವುದು ಅಥವಾ ಅದರ ಎಲೆಗಳನ್ನು ಕೀಳುವುದು ಮಹಾ ಪಾಪವೆಂದು ಪರಿಗಣಿಸಲಾಗುತ್ತದೆ. ಬದಲಾಗಿ, ತುಳಸಿ ಕಟ್ಟೆಯ ಬಳಿ ದೀಪವನ್ನು ಹಚ್ಚಿ ನಮಸ್ಕರಿಸುವುದು ಕುಟುಂಬದ ಏಳಿಗೆಗೆ ಪೂರಕ. ಎಲ್ಲಕ್ಕಿಂತ ಮುಖ್ಯವಾಗಿ, ಸಂಜೆ ವೇಳೆ ಮನೆಯಲ್ಲಿ ಜಗಳಗಳು ಅಥವಾ ಕೂಗಾಟಗಳಿಲ್ಲದೆ ಶಾಂತಿಯುತ ಮತ್ತು ಭಕ್ತಿಪೂರ್ವಕ ವಾತಾವರಣವಿದ್ದರೆ ಮಾತ್ರ ಲಕ್ಷ್ಮಿ ದೇವಿಯು ಸದಾ ಕಾಲ ಅಲ್ಲಿ ನೆಲೆಸುತ್ತಾಳೆ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಲಾಹೋರ್ನ ಗದ್ದಾಫಿ ಕ್ರೀಡಾಂಗಣದಲ್ಲಿ ನಡೆದ ಪಾಕಿಸ್ತಾನ್ ಸೂಪರ್ ಲೀಗ್ನ 11ನೇ ಪಂದ್ಯದಲ್ಲಿ ಲಾಹೋರ್ ಖಲಂದರ್ಸ್ ತಂಡ ಮುಲ್ತಾನ್ ಸುಲ್ತಾನ್ಸ್ ವಿರುದ್ಧ 20 ರನ್‌ಗಳ ಭರ್ಜರಿ ಜಯ ದಾಖಲಿಸಿದೆ. ಮಳೆಯಿಂದಾಗಿ 13 ಓವರ್‌ಗಳಿಗೆ ಸೀಮಿತಗೊಂಡಿದ್ದ ಈ ಪಂದ್ಯದಲ್ಲಿ ಲಾಹೋರ್ ತಂಡ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಅದ್ಭುತ ಪ್ರದರ್ಶನ ನೀಡಿತು.
ಮೊದಲು ಬ್ಯಾಟಿಂಗ್ ಮಾಡಿದ ಲಾಹೋರ್ ಖಲಂದರ್ಸ್ ಕೇವಲ 13 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 185 ರನ್ ಪೇರಿಸಿತು. ಇದು ಪಿಎಸ್‌ಎಲ್ ಇತಿಹಾಸದಲ್ಲೇ ಅತ್ಯಧಿಕ ರನ್ ರೇಟ್ (14.23) ಹೊಂದಿದ ಇನ್ನಿಂಗ್ಸ್ ಎಂಬ ದಾಖಲೆಗೆ ಪಾತ್ರವಾಯಿತು.
ಲಾಹೋರ್ ಖಲಂದರ್ಸ್ ಪರ 28 ಎಸೆತಗಳನ್ನು ಎದುರಿಸಿದ ಮೊಹಮ್ಮದ್ ನಯೀಮ್ 4 ಭರ್ಜರಿ ಸಿಕ್ಸ್ ಹಾಗೂ 4 ಫೋರ್ಗಳೊಂದಿಗೆ 60 ರನ್ ಚಚ್ಚಿದರು. ಇನ್ನು ಪರ್ವೇಜ್ ಹೊಸೈನ್ ಎಮನ: ಕೇವಲ 19 ಎಸೆತಗಳಲ್ಲಿ 5 ಸಿಕ್ಸರ್‌ಗಳ ನೆರವಿನಿಂದ 45 ರನ್ ಬಾರಿಸಿದರು. ಹಾಗೆಯೇ ಅಬ್ದುಲ್ಲಾ ಶಫೀಕ್ 14 ಎಸೆತಗಳಲ್ಲಿ 33 ರನ್ ಕೊಡುಗೆ ನೀಡುವ ಮೂಲಕ ಲಾಹೋರ್ ಖಲಂದರ್ಸ್ ತಂಡದ ಸ್ಕೋರ್ ಅನ್ನು 13 ಓವರ್‌ಗಳಲ್ಲಿ 185 ಕ್ಕೆ ತಂದು ನಿಲ್ಲಿಸಿದ್ದರು.
ಈ 186 ರನ್‌ಗಳ ಬೃಹತ್ ಗುರಿ ಬೆನ್ನಟ್ಟಿದ ಮುಲ್ತಾನ್ ಸುಲ್ತಾನ್ಸ್ 13 ಓವರ್‌ಗಳಲ್ಲಿ 165 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡು ಸೋಲೊಪ್ಪಿಕೊಂಡಿತು. ತಂಡದ ಪರ ನಾಯಕ ಆಷ್ಟನ್ ಟರ್ನರ್ ಕೇವಲ 22 ಎಸೆತಗಳಲ್ಲಿ ಅಜೇಯ 52 ರನ್ ಬಾರಿಸಿದರೂ ಜಯ ತಂದುಕೊಡಲು ಸಾಧ್ಯವಾಗಲಿಲ್ಲ.
ರಾಷ್ಟ್ರೀಯ ಕ್ರಶ್ ರಶ್ಮಿಕಾ ಮಂದಣ್ಣ (Rashmika Mandanna) ಅಪಾರ ಜನಪ್ರಿಯತೆ ಪಡೆದಿದ್ದಾರೆ. ಯಾವುದೇ ಹಿನ್ನೆಲೆ ಇಲ್ಲದೆ ಬಂದು ಈಗ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಗಮನ ಸೆಳೆದಿದ್ದಾರೆ. ಅವರು ತೆಲುಗು, ತಮಿಳು ಮತ್ತು ಹಿಂದಿ ಭಾಷೆಗಳಲ್ಲಿ ಸರಣಿ ಚಿತ್ರಗಳ ಮೂಲಕ ಮನರಂಜನೆ ನೀಡುತ್ತಾರೆ. ಈಗ, ಈ ನಟಿಯ ಖಾತೆಗೆ ಅಪರೂಪದ ಸಾಧನೆ ಸೇರ್ಪಡೆಯಾಗಿದೆ.
ರಶ್ಮಿಕಾ ಮಂದಣ್ಣ ಪ್ಯಾನ್ ಇಂಡಿಯಾದಲ್ಲಿ ಪ್ರಮುಖ ನಾಯಕಿಯಾಗಿ ತಮಗಾಗಿ ವಿಶೇಷ ಇಮೇಜ್ ಸೃಷ್ಟಿಸಿಕೊಂಡಿದ್ದಾರೆ. ಅಭಿಮಾನಿಗಳಿಂದ ಪ್ರೀತಿಯಿಂದ ನ್ಯಾಷನಲ್ ಕ್ರಶ್ ಎಂದು ಕರೆಯಲ್ಪಡುವ ಈ ನಟಿ ಇತ್ತೀಚೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಬಹಳ ದಿನಗಳಿಂದ ವಿಜಯ್ ದೇವರಕೊಂಡ ಅವರನ್ನು ಪ್ರೀತಿಸುತ್ತಿದ್ದ ರಶ್ಮಿಕಾ, ಈ ವರ್ಷ ಎರಡೂ ಕುಟುಂಬಗಳ ಸಮ್ಮುಖದಲ್ಲಿ ವಿವಾಹವಾದರು. ಈಗ ರಶ್ಮಿಕಾ ತೆಲುಗು ಸೊಸೆ.
ಮತ್ತೊಂದೆಡೆ, ರಶ್ಮಿಕಾ ಇತ್ತೀಚೆಗೆ ಅತ್ಯುತ್ತಮ ನಟಿಗಾಗಿ ಗದ್ದರ್ ಚಲನಚಿತ್ರ ಪ್ರಶಸ್ತಿಯನ್ನು ಪಡೆದರು. ಅವರು ಇತ್ತೀಚೆಗೆ ಮತ್ತೊಂದು ಅಂತರರಾಷ್ಟ್ರೀಯ ಸಾಧನೆ ಮಾಡಿದ್ದಾರೆ. ಜಪಾನ್‌ನಲ್ಲಿ ನಡೆಯಲಿರುವ ಅತ್ಯಂತ ಪ್ರತಿಷ್ಠಿತ ಕ್ರಂಚೈರೋಲ್ ಅನಿಮೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಎರಡನೇ ಬಾರಿಗೆ ಕಾಣಿಸಿಕೊಳ್ಳಲಿದ್ದಾರೆ. ರಶ್ಮಿಕಾ ಈ ಹಿಂದೆ 2024 ರಲ್ಲಿ ಈ ವೇದಿಕೆಯಲ್ಲಿ ಮಿಂಚಿದ್ದರು. ಈಗ ಅವರು ಮತ್ತೊಮ್ಮೆ ಸದ್ದು ಮಾಡಲಿದ್ದಾರೆ.
ರಶ್ಮಿಕಾ ಎರಡು ಬಾರಿ ಈ ಗೌರವವನ್ನು ಪಡೆದ ಮೊದಲ ಭಾರತೀಯ ಚಲನಚಿತ್ರ ಸೆಲೆಬ್ರಿಟಿ ಎಂಬ ದಾಖಲೆಯನ್ನು ಸೃಷ್ಟಿಸಿದ್ದಾರೆ. ಅನಿಮೇಟೆಡ್ ಚಲನಚಿತ್ರಗಳು ಮತ್ತು ವೆಬ್ ಸರಣಿಗಳಲ್ಲಿ ಪ್ರತಿಭೆಯನ್ನು ತೋರಿಸಿದವರಿಗೆ ನೀಡಲಾಗುವ ಈ ಪ್ರಶಸ್ತಿಗಳ 10 ನೇ ಆವೃತ್ತಿಯು ಮೇ 23 ರಂದು ಟೋಕಿಯೊದಲ್ಲಿ ನಡೆಯಲಿದೆ. ಈ ಸಂದರ್ಭದಲ್ಲಿ, ಅವರು ಹಾಲಿವುಡ್ ಸೆಲೆಬ್ರಿಟಿಗಳೊಂದಿಗೆ ವಿಜೇತರಿಗೆ ಪ್ರಶಸ್ತಿಗಳನ್ನು ಪ್ರದಾನ ಮಾಡಲಿದ್ದಾರೆ.
ಪುಷ್ಪ ಚಿತ್ರದಲ್ಲಿ ಶ್ರೀವಲ್ಲಿ ಪಾತ್ರದ ಮೂಲಕ ರಶ್ಮಿಕಾ ಜಪಾನ್‌ನಲ್ಲಿ ಭಾರಿ ಕ್ರೇಜ್ ಸೃಷ್ಟಿಸಿದರು. ರಶ್ಮಿಕಾ ಅಂತರರಾಷ್ಟ್ರೀಯ ಮಟ್ಟದಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ.ಎಲ್ಲಕಿಂತ ಮುಖ್ಯವಾಗಿ ಅನಿಮೇ ಸಿನಿಮಾಗಳ ಬಗ್ಗೆ ಅವರಿಗೆ ಅಪಾರ ಆಸಕ್ತಿ ಇದೆ. ಅನಿಮಲ್, ಪುಷ್ಪ 2, ಕುಬೇರ, ಗರ್ಲ್‌ಫ್ರೆಂಡ್ ಮತ್ತು ತಮ್ಮಾ ಮುಂತಾದ ಚಿತ್ರಗಳೊಂದಿಗೆ ಸತತ ಹಿಟ್‌ಗಳನ್ನು ನೀಡಿದರು. ಅವರು ಪ್ರಸ್ತುತ ಮೈಸಾ ಮತ್ತು ರಣಬಲಿ ಮುಂತಾದ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.
ಬೆಂಗಳೂರು, ಏಪ್ರಿಲ್ 4: ಐಪಿಎಲ್ (IPL) ಪಂದ್ಯದ ವೇಳೆ ಕ್ರಿಕೆಟ್ ಪ್ರೇಮಿಗಳ ಸಂಭ್ರಮವನ್ನೇ ಬಂಡವಾಳ ಮಾಡಿಕೊಂಡಿದ್ದ ಅಂತರರಾಜ್ಯ ಕಳ್ಳರ ಜಾಲವನ್ನು ಕಬ್ಬನ್ ಪಾರ್ಕ್ ಪೊಲೀಸರು ಕೊನೆಗೂ ಪತ್ತೆಹಚ್ಚಿದ್ದಾರೆ. ಇದರೊಂದಿಗೆ, ಆರ್‌ಸಿಬಿ ಹಾಗೂ ಎಸ್‌ಆರ್‌ಎಚ್ (RCB vs SRH) ಪಂದ್ಯದ ವೇಳೆ ನಡೆದಿದ್ದ ಮೊಬೈಲ್ ಕಳ್ಳತನ ಪ್ರಕರಣದಲ್ಲಿ ಪೊಲೀಸರಿಗೆ ಮಹತ್ವದ ಯಶಸ್ಸು ದೊರೆತಂತಾಗಿದೆ. ಸದ್ಯ ಪೊಲೀಸರು 51 ಮೊಬೈಲ್ ಫೋನ್‌ಗಳನ್ನು ಜಪ್ತಿ ಮಾಡಿದ್ದಾರೆ.
ಆರ್‌ಸಿಬಿ ಟೀ ಶರ್ಟ್ ಧರಿಸಿ ಎಂಟ್ರಿ!
ಈ ಕಳ್ಳತನ ಜಾಲದಲ್ಲಿ ಭಾಗಿಯಾಗಿದ್ದ 18 ಅಪ್ರಾಪ್ತರು ಸೇರಿದಂತೆ ಒಟ್ಟು 19 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ. ಈ ಪೈಕಿ ಒಬ್ಬನನ್ನು ಬಂಧಿಸಲಾಗಿದೆ. ವಿಶೇಷವೆಂದರೆ, ಈ ಕಳ್ಳರೆಲ್ಲರೂ ಜಾರ್ಖಂಡ್ ಮೂಲದವರಾಗಿದ್ದು, ಪಂದ್ಯದ ವೇಳೆ ಅಭಿಮಾನಿಗಳಂತೆ ಕಾಣಲು ಆರ್‌ಸಿಬಿ ತಂಡದ ಜೆರ್ಸಿ (T-shirt) ಧರಿಸುತ್ತಿದ್ದರು. ಅಭಿಮಾನಿಗಳಿಂದ ಟಿಕೆಟ್‌ಗಳನ್ನು ಕಸಿದುಕೊಂಡು ಅಥವಾ ಕಳ್ಳತನ ಮಾಡಿ ಕ್ರೀಡಾಂಗಣದ ಒಳಗೆ ಪ್ರವೇಶಿಸುತ್ತಿದ್ದ ಈ ಗ್ಯಾಂಗ್, ಜನಜಂಗುಳಿಯ ನಡುವೆ ಮೊಬೈಲ್‌ಗಳನ್ನು ಲಪಟಾಯಿಸುತ್ತಿತ್ತು.
ಮಾಸ್ಟರ್ ಮೈಂಡ್ ಬಂಧನ
ಈ ಬೃಹತ್ ಜಾಲದ ಹಿಂದೆ ಇದ್ದ ಮಾಸ್ಟರ್ ಮೈಂಡ್ ಶುಭಮ್ ಎಂಬಾತನನ್ನು ಕಬ್ಬನ್ ಪಾರ್ಕ್ ಪೊಲೀಸರು ಬಂಧಿಸಿದ್ದಾರೆ. ಬಂಧಿತರಲ್ಲಿ ಶುಭಮ್ ಮಾತ್ರ ವಯಸ್ಕನಾಗಿದ್ದು, ಉಳಿದ 18 ಮಂದಿ ಅಪ್ರಾಪ್ತ ಬಾಲಕರು. ಈ ಬಾಲಕರನ್ನು ಬಳಸಿಕೊಂಡು ಶುಭಮ್ ನಗರದ ವಿವಿಧೆಡೆ ಕಳ್ಳತನ ಮಾಡಿಸುತ್ತಿದ್ದ ಎಂಬುದು ವಿಚಾರಣೆಯಿಂದ ತಿಳಿದುಬಂದಿದೆ.
ಕಳೆದ RCB vs SRH ಪಂದ್ಯದ ವೇಳೆ ಸ್ಟೇಡಿಯಂ ಒಳಗಡೆ ಹೋಗುವ ಗೇಟ್‌ಗಳ ಬಳಿ ಹಾಗೂ ಗ್ಯಾಲರಿಗಳಲ್ಲಿ ಅತಿ ಹೆಚ್ಚು ಮೊಬೈಲ್ ಕಳ್ಳತನವಾಗಿರುವ ಬಗ್ಗೆ ದೂರುಗಳು ದಾಖಲಾಗಿದ್ದವು. ಸದ್ಯ ಪೊಲೀಸರು ಕಳ್ಳತನವಾಗಿದ್ದ 51 ಮೊಬೈಲ್‌ಗಳನ್ನು ವಶಪಡಿಸಿಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿಕ್ಲಿಕ್ ಮಾಡಿ
ಚಾಮರಾಜನಗರ, ಏಪ್ರಿಲ್ 04: ಜಿಲ್ಲೆಯ ಕೊಳ್ಳೇಗಾಲ ಹೊರವಲಯದಲ್ಲಿ ನಡೆದ ಡ್ರಗ್ಸ್ ಪಾರ್ಟಿ (Drugs Party)ಪ್ರಕರಣ ಸಂಚಲನ ಮೂಡಿಸಿದೆ. ಬೆಂಗಳೂರು ಮೂಲದ ರೌಡಿಶೀಟರ್ ಜಹೀರ್ ನೇತೃತ್ವದಲ್ಲಿ ಸುಮಾರು 50ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದ ಪಾರ್ಟಿ ಪೊಲೀಸರ ದಾಳಿ ವೇಳೆ ಬಯಲಾಗಿದೆ. ಜಹೀರ್ ಜನ್ಮದಿನದ ಅಂಗವಾಗಿ ವಿಶೇಷವಾಗಿ ಈ ಪಾರ್ಟಿ ಆಯೋಜಿಸಲಾಗಿತ್ತು ಎಂದು ತಿಳಿದುಬಂದಿದೆ.
15 ಮಂದಿ ಡ್ರಗ್ಸ್ ಸೇವಿಸಿರುವುದು ದೃಢ
ಪಾರ್ಟಿಯಲ್ಲಿ ಭಾಗಿಯಾದವರು ಗಾಂಜಾ ಹಾಗೂ ಚರಸ್ ಸೇವಿಸಿ ಮೋಜುಮಸ್ತಿಯಲ್ಲಿ ತೊಡಗಿದ್ದರು. ಬಳಿಕ ಪೊಲೀಸರು ನಡೆಸಿದ ವೈದ್ಯಕೀಯ ತಪಾಸಣೆಯಲ್ಲಿ 15 ಮಂದಿ ಡ್ರಗ್ಸ್ ಸೇವಿಸಿರುವುದು ದೃಢಪಟ್ಟಿದೆ. ಈ ಪಾರ್ಟಿ ಕೊಳ್ಳೇಗಾಲದ ಎ1 ಕಾಂಟ್ರಾಕ್ಟರ್ ಫಯಾಜ್ ಖಾನ್ ಅವರ ರೆಸಾರ್ಟ್‌ನಲ್ಲಿ ನಡೆದಿದ್ದು, ಈ ವಿಚಾರ ಇನ್ನಷ್ಟು ಚರ್ಚೆಗೆ ಗ್ರಾಸವಾಗಿದೆ. ಫಯಾಜ್ ಖಾನ್ ಪ್ರಭಾವಿ ರಾಜಕೀಯ ಸಂಪರ್ಕ ಹೊಂದಿರುವ ವ್ಯಕ್ತಿಯಾಗಿದ್ದು, ಕಾಂಗ್ರೆಸ್ ನಾಯಕರ ಆಪ್ತನೆಂದು ಹೇಳಲಾಗುತ್ತಿದೆ.
ಪಾರ್ಟಿಯಲ್ಲಿ ಜಹೀರ್ ಕುಟುಂಬ ಸದಸ್ಯರೂ ಭಾಗಿಯಾಗಿದ್ದರೆಂದು ಮೂಲಗಳು ತಿಳಿಸಿವೆ. ಮಹಿಳೆಯರನ್ನು ಪ್ರತ್ಯೇಕವಾಗಿ ವಿಚಾರಣೆ ನಡೆಸಲಾಗುತ್ತಿದ್ದು, ಲೇಡಿ ಕಾನ್ಸ್ಟೇಬಲ್‌ಗಳು ವಿಚಾರಣೆ ಮುಂದುವರಿಸಿದ್ದಾರೆ. ಸದ್ಯ ಎಲ್ಲಾ ಆರೋಪಿಗಳನ್ನು ಕೊಳ್ಳೇಗಾಲ ಪೊಲೀಸ್ ಠಾಣೆಗೆ ಕರೆತಂದು ವಿಚಾರಣೆ ನಡೆಸಲಾಗುತ್ತಿದೆ. ಪ್ರಕರಣ ಸಂಬಂಧ ಇನ್ನಷ್ಟು ಮಾಹಿತಿಗಾಗಿ ಪೊಲೀಸರು ತನಿಖೆಯನ್ನು ಮುಂದುವರೆಸಿದ್ದಾರೆ.