Headlines

ಯುವಕರಿಗೆ ರಜನಿಕಾಂತ್ ಕಿವಿಮಾತು: ಸೂಪರ್ ಸ್ಟಾರ್ ಹೇಳಿದ್ದೇನು?

ತಮ್ಮ ವಿಶಿಷ್ಟ ಮ್ಯಾನರಿಸಂ ಮತ್ತು ಅಭಿನಯದ ಮೂಲಕ ದಶಕಗಳಿಂದ ಚಿತ್ರರಂಗವನ್ನು ಆಳುತ್ತಿರುವ ನಟ ರಜನಿಕಾಂತ್ (Rajinikanth), ಭಾರತದ ಅತ್ಯಂತ ಪ್ರಭಾವಿ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದಾರೆ ಅವರು. ಕೇವಲ ಸಿನಿಮಾ ಪರದೆಯ ಮೇಲೆ ನಾಯಕನಷ್ಟೇ ಅಲ್ಲದೆ ಸಾಮಾಜಿಕ ಕಾಳಜಿಯುಳ್ಳ ವ್ಯಕ್ತಿಯೂ ಹೌದು ರಜನೀಕಾಂತ್. ಇತ್ತೀಚೆಗಂತೂ ತಮ್ಮ ಸಿನಿಮಾ ಕಾರ್ಯಕ್ರಮಗಳಲ್ಲಿಯೂ ಸಹ ರಜನೀಕಾಂತ್ ಅವರು ಸಾಕಷ್ಟು ಸಂದೇಶಗಳನ್ನು, ಕಿವಿಮಾತುಗಳನ್ನು ಹೇಳುತ್ತಾರೆ. ಇದೀಗ ರಜನೀಕಾಂತ್ ಅವರು ಯುವಕರಿಗಾಗಿ ಸಂದೇಶವೊಂದನ್ನು ನೀಡಿದ್ದಾರೆ. ಇದೀಗ ನಟ ರಜನೀಕಾಂತ್ ಮಾಧ್ಯಮಗಳೊಟ್ಟಿಗೆ ಮಾತನಾಡಿದ್ದು, ‘ಯುವಜನತೆಯು ತಮ್ಮ ವಿದ್ಯಾಭ್ಯಾಸ ಮತ್ತು…

Read More

ವಾಯು, ಜಲ ಮತ್ತು ನೆಲ, ಮೂರೂ ಸ್ತರಗಳಲ್ಲೂ ಅಮೋಘವೆನಿಸಿದೆ ಭಾರತದ ಸ್ವಂತ ಬಲದ ರಕ್ಷಣಾ ಸಾಮರ್ಥ್ಯ – Kannada News | From Tejas to INS Vikrant, India’s indigenous defence capabilities developed in last 12 years

ನವದೆಹಲಿ, ಜೂನ್ 18: ಕಳೆದ 12 ವರ್ಷಗಳ ಮೋದಿ ಆಡಳಿತದಲ್ಲಿ ಭಾರತದ ಮಿಲಿಟರಿ ಸಾಮರ್ಥ್ಯ ಗಣನೀಯವಾಗಿ ಹೆಚ್ಚಿದೆ. ಸ್ವಂತ ಬಲದಲ್ಲಿ ಭಾರತ ಸಾಮರ್ಥ್ಯ ಹೆಚ್ಚಿಸಿಕೊಂಡಿರುವುದು ಗಮನಾರ್ಹ. ತಂತ್ರಜ್ಞಾನ, ಸಾಮರ್ಥ್ಯದಲ್ಲಿ ಬಹಳ ಮುಂಚಿತವಾಗಿ ಹೂಡಿಕೆ ಮಾಡುವ ದೇಶಗಳಿಗೆ ಭವಿಷ್ಯ ಉಜ್ವಲವಾಗಿರುತ್ತದೆ. ಅಂತೆಯೇ, ಭಾರತದ ರಕ್ಷಣಾ ಕ್ಷೇತ್ರದ (India defence) ಕಳೆದ 12 ವರ್ಷಗಳ ಪ್ರಯಾಣ ಇದಕ್ಕೆ ಸಾಕ್ಷಿ. ಭಾರತ ಈಗ ಮಿಲಿಟರಿ ಶಕ್ತಿಯಲ್ಲಿ ವಿಶ್ವದ ಅಗ್ರಗಣ್ಯ ರಾಷ್ಟ್ರಗಳ ಸಾಲಿನಲ್ಲಿದೆ. ವಾಯು, ಜಲ ಮತ್ತು ನೆಲ ಈ ಮೂರೂ ವಿಭಾಗಗಳಲ್ಲಿ…

Read More

ಕಬ್ಬಿಗೆ ಗುಡ್‌ ಬೈ ಹೇಳಿ ಬಹುಬೇಡಿಕೆ ಬೆಳೆಯತ್ತ ಮುಖಮಾಡಿದ ಗಡಿ ಜಿಲ್ಲೆಯ ರೈತರು: ಕೈತುಂಬಾ ಲಾಭ – Kannada News | Bidar Farmer Thrives with Chia: From Sugarcane Losses to High Profit

ಬೀದರ್, ಮಾರ್ಚ್​ 02: ಜಿಲ್ಲೆಯ ರೈತ ಉದ್ದು, ಸೋಯಾ, ಕಬ್ಬು ಬೆಳೆಗೆ ಮಾತ್ರ ಸೀಮಿತವಾಗಿದ್ದರು. ಹೀಗಾಗಿ ಪದೇ ಪದೇ ನಷ್ಟಕ್ಕೆ ತುತ್ತಾಗಿ, ಸಾಲದ ಸುಳಿಗೆ ಸಿಲುಕುತ್ತಿದ್ದರು. ಬೆಳೆ ಬದಲಾವಣೆ ಮಾಡಬೇಕೆಂದು ನಿರ್ಧರಿಸಿದ ರೈತನಿಗೆ ಚಿಯಾ ಬೆಳೆ ಕೈ ಹಿಡಿದಿದ್ದು, ಇದೀಗ ಭರ್ಜರಿ ಲಾಭ ಗಳಿಸುತ್ತಿದ್ದಾರೆ. ಬಹುಬೇಡಿಕೆ ಬೆಳೆಯತ್ತ ವಾಲಿದ ರೈತರು ಗಡಿ ಜಿಲ್ಲೆ ಬೀದರ್​ನ ರೈತರು ಒಂದಿಲ್ಲೊಂದು ಸಂಕಷ್ಟಕ್ಕೆ ಸಿಲುಕಿಕೊಂಡು ನಷ್ಟವನ್ನ ಅನುಭವಿಸುತ್ತಿದ್ದರು. ಜೊತೆಗೆ ಪದೇ ಪದೇ ಒಂದೆ ಬೆಳೆಯನ್ನ ನಾಟಿ ಮಾಡಿ ಆರ್ಥಿಕ ಸ್ಥಿತಿವಂತರಾಗುವ ದಿಕ್ಕಿನಲ್ಲಿ…

Read More

ದಾವಣಗೆರೆ ಬೈ ಎಲೆಕ್ಷನ್: ಬಿಜೆಪಿ ಮನೆಯೊಂದು 3 ಬಾಗಿಲು, ಕಾಂಗ್ರೆಸ್​​​​ ಮನೆಯೊಂದು ಎರಡು ಬಾಗಿಲು

ದಾವಣಗೆರೆ, (ಮಾರ್ಚ್ 13): ಜಿಲ್ಲೆಯಲ್ಲಿ ಭಿನ್ನಾಭಿಪ್ರಾಯ ಸರಿಪಡಿಸಲು ಹೋರಾಡುತ್ತಿರುವ ಬಿಜೆಪಿ (BJP) ಈಗ ಉಪಚುನಾವಣೆಯನ್ನು (Davanagere South By Election)  ಗೆದ್ದು ಕೊಳ್ಳುವ ನೆಪದಲ್ಲಾದರೂ ಭಿನ್ನಮತಕ್ಕೆ ಕೊನೆ ಹಾಡಲು ಸರ್ಕಸ್ ಮುಂದುವರಿಸಿದೆ. ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯ ಜೊತೆಗೆ ಎರಡೂ ಬಣಗಳನ್ನು ಕೂರಿಸಿ ಚರ್ಚೆ ನಡೆಸಲಾಗಿದೆ. ಇನ್ನು ಕಾಂಗ್ರೆಸ್​​​ನಲ್ಲೂ (Congress) ಸಹ ಅಭ್ಯರ್ಥಿ ಆಯ್ಕೆಯಲ್ಲಿ ಮುಸುಕಿನ ಗುದ್ದಾಟಗಳು ನಡೆಯುತ್ತಿವೆ. ಸಚಿವರಾದ ಜಮೀರ್ ಅಹಮ್ಮದ್ ಖಾನ್, ಮುಸ್ಲಿಂ ಸಮುದಾಯಕ್ಕೆ ಟಿಕೆಟ್ ನೀಡಬೇಕೆಂದು ಪಟ್ಟು ಹಿಡಿದಿದ್ದರೆ ಇನ್ನೊಂದೆಡೆ ಎಸ್​​ಎಸ್​ ಮಲ್ಲಿಕಾರ್ಜುನ ಇದಕ್ಕೆ…

Read More

Horoscope Today: ಇಂದು ಈ ರಾಶಿಯವರಿಗೆ ಅನಾರೋಗ್ಯ ಚಿಂತೆ ಕಾಡಬಹುದು

ಟಿವಿ9 ಡಿಜಿಟಲ್ ವಾಹಿನಿಯಲ್ಲಿ ಪ್ರಸಾರವಾದ ದಿನಭವಿಷ್ಯ ಕಾರ್ಯಕ್ರಮದಲ್ಲಿ ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು ಮೇ 27, ಬುಧವಾರದ ದ್ವಾದಶ ರಾಶಿಗಳ ಫಲಾಫಲವನ್ನು ನೀಡಿದ್ದಾರೆ. ಈ ದಿನವು ಪರಾಭವನಾ ಸಂವತ್ಸರ, ಉತ್ತರಾಯಣ, ಅಧಿಕ ಜೇಷ್ಠ ಮಾಸ, ಗ್ರೀಷ್ಮ ಋರು, ಶುಕ್ಲ ಪಕ್ಷದ ಏಕಾದಶಿ, ಹಸ್ತ ನಕ್ಷತ್ರ, ವ್ಯತಿಪಾತ ಯೋಗ ಮತ್ತು ಭದ್ರಕರಣದಿಂದ ಕೂಡಿದೆ. ಬುಧವಾರದ ಏಕಾದಶಿಯು ವಿಷ್ಣುವಿನ ಕೃಪೆಗೆ ಪಾತ್ರವಾಗಲು ಉತ್ತಮ ದಿನವಾಗಿದೆ.   Source link

Read More

‘ನಿಮ್ಮ ಲೈಫ್ ನೋಡಿಕೊಳ್ಳಿ’; ಕ್ಯಾನ್ಸರ್ ಪೀಡಿತ ಅಭಿಮಾನಿ ಜೊತೆ ಮಾತನಾಡಿದ ಯಶ್ – Kannada News

ರಾಕಿಂಗ್ ಸ್ಟಾರ್ ಯಶ್ ಅವರು (ಯಶ್) ಕೇವಲ ಹೀರೋ ಆಗಿ ಮಾತ್ರವಲ್ಲ, ಮಾನವೀಯತೆ ತೋರುವ ವ್ಯಕ್ತಿಯಾಗಿಯೂ ಇಷ್ಟ ಆಗುತ್ತಾರೆ. ಅಭಿಮಾನಿಗಳು ಕೊಟ್ಟಷ್ಟೇ ಪ್ರೀತಿಯನ್ನು ಇವರು ಕೊಡುತ್ತಾರೆ. ಇದಕ್ಕೆ ಸಾಕಷ್ಟು ಉದಾಹರಣೆಗಳು ಈಗಾಗಲೇ ಸಿಕ್ಕಿವೆ. ಇತ್ತೀಚೆಗೆ ಕ್ಯಾನ್ಸರ್ ಪೀಡಿತ ಅಭಿಮಾನಿ ಜೊತೆ ಯಶ್ ಅವರು ವಿಡಿಯೋ ಕಾಲ್​​ ಮೂಲಕ ಮಾತನಾಡಿದ್ದಾರೆ. ಅಭಿಮಾನಿಗೆ ಅವರು ಧೈರ್ಯ ತುಂಬಿದ್ದಾರೆ. ಈ ಸಂದರ್ಭದ ವಿಡಿಯೋ ವೈರಲ್ ಆಗಿದ್ದು, ಪ್ರಶಂಸೆಗೆ ಕಾರಣವಾಗಿದೆ. ಯಶ್ ಅವರು ‘ಕೆಜಿಎಫ್’, ‘ಕೆಜಿಎಫ್ 2’ ಬಳಿಕ ಪ್ಯಾನ್ ಇಂಡಿಯಾ ಮಟ್ಟಕ್ಕೆ…

Read More

ಗೃಹಲಕ್ಷ್ಮಿ, ಗೃಹಜ್ಯೋತಿ ಫಲಾನುಭವಿಗಳ ಪರಿಷ್ಕರಣೆಗೆ ನಿರ್ಧರಿಸಿದ ರಾಜ್ಯ ಸರ್ಕಾರ – Kannada News | Karnataka Congress to Revise Gruhalakshmi and Gruhajyothi Beneficiary Lists

ಗೃಹಲಕ್ಷ್ಮಿ, ಗೃಹಜ್ಯೋತಿ ಫಲಾನುಭವಿಗಳ ಪರಿಷ್ಕರಣೆ ಬೆಂಗಳೂರು, ಮೇ 25: ಕಾಂಗ್ರೆಸ್ ಸರಕಾರದ ಮಹತ್ವಾಕಾಂಕ್ಷೆಯ ಗ್ಯಾರಂಟಿ ಯೋಜನೆಗಳಾದ ಗೃಹಲಕ್ಷ್ಮಿ ಮತ್ತು ಗೃಹಜ್ಯೋತಿ ಫಲಾನುಭವಿಗಳ ಪಟ್ಟಿಯನ್ನು ಪರಿಷ್ಕರಿಸಲು ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ನಿನ್ನೆ (ಮೇ 24) ನಡೆದ ಎಸ್ಐಆರ್ ಸಭೆಯಲ್ಲಿ ಈ ಕುರಿತು ವಿಸ್ತೃತವಾಗಿ ಚರ್ಚಿಸಲಾಗಿದ್ದು, ಫಲಾನುಭವಿಗಳ ಅರ್ಹತೆಯನ್ನು ಸಮಗ್ರವಾಗಿ ಪರಿಶೀಲಿಸಲು ಸರಕಾರ ಮುಂದಾಗಿದೆ. ಈ ನಿರ್ಧಾರಕ್ಕೆ ಪ್ರಮುಖ ಕಾರಣಗಳೆಂದರೆ, ಯೋಜನೆಯಲ್ಲಿ ಪಾರದರ್ಶಕತೆ ಮತ್ತು ಅರ್ಹ ಫಲಾನುಭವಿಗಳಿಗೆ ಮಾತ್ರ ಸೌಲಭ್ಯ ದೊರೆಯುವಂತೆ ಮಾಡುವುದಾಗಿದೆ. ಗೃಹಲಕ್ಷ್ಮಿ ಯೋಜನೆಯಡಿ ಹಣವು ಮೃತಪಟ್ಟವರ ಹೆಸರಿನಲ್ಲಿಯೂ…

Read More

Bengaluru Air Quality: ರಾಜ್ಯದ ವಾಯು ಮಾಲಿನ್ಯದಲ್ಲಿ ಭಾರಿ ಸುಧಾರಣೆ! ನಿಮ್ಮ ಏರಿಯಾದ ಎಕ್ಯೂಐ ಎಷ್ಟಿದೆ ಗೊತ್ತಾ? – Kannada News | Bengaluru AQI Update Today: Air Quality Remains Moderate and Healthy Across Karnataka

ರಾಜ್ಯದ ವಾಯು ಮಾಲಿನ್ಯದಲ್ಲಿ ಭಾರಿ ಸುಧಾರಣೆ! ಬೆಂಗಳೂರು, ಜುಲೈ 12: ಇಂದು ಕರ್ನಾಟಕದ ಪ್ರಮುಖ ನಗರಗಳಲ್ಲಿ ವಾಯು ಗುಣಮಟ್ಟ ಸೂಚ್ಯಂಕ (AQI) ಒಟ್ಟಾರೆಯಾಗಿ ತೃಪ್ತಿದಾಯಕ ಮತ್ತು ಸಾಧಾರಣ ಮಟ್ಟದಲ್ಲಿದೆ. ಮುಂಗಾರು ಮಳೆಯ ಪ್ರಭಾವ ಹಾಗೂ ಗಾಳಿಯ ವೇಗ ಹೆಚ್ಚಿರುವುದರಿಂದ ವಾಯು ಮಾಲಿನ್ಯದ ಪ್ರಮಾಣ ಗಣನೀಯವಾಗಿ ನಿಯಂತ್ರಣದಲ್ಲಿದೆ. ರಾಜ್ಯದ ರಾಜಧಾನಿ ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳ ಇಂದಿನ ನಿಖರವಾದ ವಾಯು ಗುಣಮಟ್ಟದ ವಿವರ ಇಲ್ಲಿದೆ. ಬೆಂಗಳೂರಿನ ಇಂದಿನ ವಾಯು ಗುಣಮಟ್ಟ ಬೆಂಗಳೂರಿನಲ್ಲಿ ಇಂದು ವಾಯು ಗುಣಮಟ್ಟ ಸೂಚ್ಯಂಕವು ಕೆಲವೆಡೆ…

Read More

ತಡರಾತ್ರಿ ಊಟ ಮಾಡುವುದರಿಂದ ರಕ್ತದಲ್ಲಿನ ಗ್ಲೂಕೋಸ್ ಮಟ್ಟ ಹೆಚ್ಚಾಗುತ್ತದೆಯೇ? ಇಲ್ಲಿದೆ ತಜ್ಞರ ಮಾಹಿತಿ – Kannada News | Does Eating Late Increase Sugar Levels?

ಇಂದಿನ ಒತ್ತಡದ ಜೀವನ ಅನೇಕ ರೀತಿಯ ಬದಲಾವಣೆಗಳಿಗೆ ಕಾರಣವಾಗಿದೆ. ಕೆಲಸ, ಅತಿಯಾದ ಮೊಬೈಲ್ ಫೋನ್‌ಗಳ ಬಳಕೆ ಮತ್ತು ಬದಲಾಗುತ್ತಿರುವ ಜೀವನಶೈಲಿಯಿಂದಾಗಿ, ಜನರ ಆಹಾರ ಪದ್ಧತಿಯಲ್ಲಿ ಅಡಚಣೆ ಉಂಟಾಗುತ್ತಿದೆ. ಹೀಗಾಗಿ ಅನೇಕರು ತಡವಾಗಿ ಊಟ ಮಾಡುವುದನ್ನು ರೂಢಿಸಿಕೊಂಡಿದ್ದು ಇದನ್ನು ಸಾಮಾನ್ಯ ಅಭ್ಯಾಸವೆಂದು ತಿಳಿದುಕೊಂಡಿದ್ದಾರೆ, ಆದರೆ ಇದರ ಪರಿಣಾಮ ತಕ್ಷಣವೇ ಗಮನಕ್ಕೆ ಬರದಿದ್ದರೂ ಕೂಡ ಕ್ರಮೇಣ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ, ತಡರಾತ್ರಿ ಅಥವಾ ತಡವಾಗಿ ಊಟವನ್ನು (Eating Late) ಮಾಡುವುದರಿಂದ ದೇಹದ ಸಮತೋಲನ ಹಾಳಾಗಬಹುದು ಮತ್ತು ರಕ್ತದಲ್ಲಿನ ಸಕ್ಕರೆ…

Read More

ಬಾಗಲಕೋಟೆಯಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 32.50 ಲಕ್ಷ ರೂ. ಹಣ ಜಪ್ತಿ!

ಬಾಗಲಕೋಟೆ, ಮಾರ್ಚ್​ 22: ಹೊನ್ನಾಕಟ್ಟಿ ಚೆಕ್ ಪೋಸ್ಟ್‌ನಲ್ಲಿ ಮಾರುತಿ ಎರ್ಟಿಗಾ ಕಾರಿನಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 32.50 ಲಕ್ಷ ರೂಪಾಯಿ ನಗದನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ವಶಪಡಿಸಿಕೊಂಡ ಹಣ ರಾಯಚೂರಿನ ಬಿ. ವೀರೇಶ್ ಬಾಬು ಅವರಿಗೆ ಸೇರಿದ್ದು ಎಂದು ತಿಳಿದುಬಂದಿದೆ. ಈ ಹಣವನ್ನು ರಾಯಚೂರಿನಿಂದ ಬೆಳಗಾವಿ ಕಡೆಗೆ ಕಾರಿನಲ್ಲಿ ಸಾಗಿಸಲಾಗುತ್ತಿತ್ತು. ವಾಹನ ತಪಾಸಣೆ ನಡೆಸುತ್ತಿದ್ದ ಪೊಲೀಸರು ಯಾವುದೇ ಸೂಕ್ತ ದಾಖಲೆಗಳಿಲ್ಲದೆ ನಗದು ಸಾಗಿಸುತ್ತಿರುವುದನ್ನು ಪತ್ತೆ ಹಚ್ಚಿ, ತಕ್ಷಣವೇ ಹಣವನ್ನು ವಶಕ್ಕೆ ಪಡೆದಿದ್ದಾರೆ. ಸದ್ಯ ರಾಜ್ಯದಲ್ಲಿ ಬಾಗಲಕೋಟೆ ಹಾಗೂ…

Read More