ಪ್ರೇಮ ವಿವಾಹಕ್ಕೆ ಪೋಷಕರ ವಿರೋಧ! ರಾಜಿ ಆಗೋಣವೆಂದು ಕರೆಸಿ ಕುಟುಂಬದವರ ಮೇಲೆ ಹಲ್ಲೆ
ಚಿತ್ರದುರ್ಗ, ಏಪ್ರಿಲ್ 03: ಜಿಲ್ಲೆಯ ಭರಮಸಾಗರ ಗ್ರಾಮದಲ್ಲಿ ಪ್ರೇಮ ವಿವಾಹಕ್ಕೆ ಪೋಷಕರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಗಲಾಟೆ ಸಂಭವಿಸಿದೆ. ಬೇವಿನಹಳ್ಳಿಯ ತೀರ್ಥೇಶ್ವರ ನಾಯ್ಕ್ ತಮ್ಮ ಅತ್ತೆ ಮಗಳು ಭಾವನಾ ಜೊತೆ ಫೆಬ್ರವರಿ 8ರಂದು ರಿಜಿಸ್ಟರ್ ಮದುವೆಯಾಗಿದ್ದರು. ಆದರೆ ಭಾವನಾ ಪೋಷಕರು ಈ ಮದುವೆಗೆ ವಿರೋಧ ವ್ಯಕ್ತಪಡಿಸಿ, ತೀರ್ಥೇಶ್ವರ ವಿರುದ್ಧ ಮತಾಂತರ ಆರೋಪ ಮಾಡಿದ್ದಾರೆ. ನಿನ್ನೆ ರಾಜಿ ಸಂಧಾನಕ್ಕೆ ಕರೆದು ಗಲಾಟೆ ನಡೆದಿದ್ದು, ಯುವತಿಯ ದೊಡ್ಡಪ್ಪ ಮಲ್ಲೇಶ್ ನಾಯ್ಕ್ ಸೇರಿದಂತೆ ಮೂವರಿಗೆ ಗಾಯಗಳಾಗುವೆ. ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ತೀರ್ಥೇಶ್ವರ…