ಮಗನ ಬಿಗಿದಪ್ಪಿದ ಸೋನಂ; ಎರಡನೇ ಮಗುವಿನ ಫೋಟೋ ಹಂಚಿಕೊಂಡ ನಟಿ
ನಟಿ ಸೋನಂ ಕಪೂರ್ ಹಾಗೂ ಆನಂದ್ ಅಹೂಜ ಇತ್ತೀಚೆಗೆ ತಮ್ಮ ಎರಡನೇ ಮಗುವನ್ನು ಸ್ವಾಗತಿಸಿದರು. ಈ ದಂಪತಿಗೆ ಗಂಡು ಮಗು ಜನಿಸಿದೆ. ಹೀಗಿರುವಾಗಲೇ ಅವರು ಮಗುವಿನ ಫೋಟೋ ಹಂಚಿಕೊಂಡಿದ್ದಾರೆ. ಸೋನಂ ಕಪೂರ್ ಅವರು ಮಾರ್ಚ್ 29ರಂದು ಗಂಡುಮಗುವಿಗೆ ಜನ್ಮನೀಡಿದರು. ಈಗ ಮಗುವಿನ ಜೊತೆ ಇರುವ ಮುದ್ದಾದ ಫೋಟೋ ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ಅವರು ಮಗುವನ್ನು ಬಿಗಿದಪ್ಪಿದ್ದಾರೆ. ಮತ್ತೊಂದು ಫೋಟೋದಲ್ಲಿ ಅವರು ಆಹಾರ ಸೇವನೆ ಮಾಡುತ್ತಿರುವ ಫೋಟೋ ಇದೆ. ಈ ಫೋಟೋದಲ್ಲಿ ಅವರ ಕೈಗೆ ಬ್ಯಾಂಡೇಜ್ ಮಾದರಿಯ ವಸ್ತುವನ್ನು…