ಬೆಂಗಳೂರಿನ ಐದೂ ಪಾಲಿಕೆಗಳಿಗೆ ಲೋಗೋ ಭಾಗ್ಯ: ಲಾಂಛನಗಳ ವಿಶೇಷತೆ ತಿಳಿಯಿರಿ
ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಸೇರಿದಂತೆ 5 ನಗರ ಪಾಲಿಕೆಗಳಿಗೆ ಕೊನೆಗೂ ಹೊಸ ಲೋಗೋ ಅನಾವರಣಗೊಳಿಸಲಾಗಿದೆ. ಇತ್ತೀಚೆಗೆ 2026-27ರ ಸಾಲಿನ ಬಜೆಟ್ ಮಂಡನೆ ಮಾಡಿರುವ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಇದೀಗ 5 ನಗರ ಪಾಲಿಕೆಗಳ ಹೊಸ ಲೋಗೋವನ್ನು ಬಿಡುಗಡೆ ಮಾಡಿದೆ. ಖಡ್ಗ ಹಿಡಿದು ನಿಂತಿರುವ ಕೆಂಪೇಗೌಡರ ಚಿತ್ರಣ ಲೋಗೋದ ಪ್ರಮುಖ ಆಕರ್ಷಣೆ. ಬೆಂಗಳೂರಿನ ಪರಂಪರೆ ಮತ್ತು ವೈಭವವನ್ನು ಪ್ರತಿಬಿಂಬಿಸುವಂತೆ ಲೋಗೋವನ್ನು ಹೊಸ ರೀತಿಯಲ್ಲಿ ರೂಪಿಸಲಾಗಿದೆ. ಹಳೆಯ ಬಿಬಿಎಂಪಿ ಚಿಹ್ನೆಯಲ್ಲಿದ್ದ ಕೆಂಪೇಗೌಡರ ಗೋಪುರವನ್ನು ಇಲ್ಲಿಯೂ ಬಳಸಿಕೊಳ್ಳಲಾಗಿದ್ದು,…