ಮೂರನೇ ಮಗುವೂ ಹೆಣ್ಣಾಗುತ್ತದೆಂದು ಹೆದರಿ ಗರ್ಭಿಣಿ ಹೆಂಡತಿ, ಮಕ್ಕಳನ್ನು ನೀರಲ್ಲಿ ಮುಳುಗಿಸಿ ಕೊಂದ ಪಾಪಿ
ಹೈದರಾಬಾದ್, ಏಪ್ರಿಲ್ 3: ತೆಲಂಗಾಣದಲ್ಲಿ ಶಾಕಿಂಗ್ ಘಟನೆಯೊಂದು ನಡೆದಿದೆ. ಮತ್ತೊಂದು ಬಾರಿ ಗರ್ಭಿಣಿಯಾಗಿದ್ದ (Pregnant Death) ಹೆಂಡತಿ ಈ ಬಾರಿಯೂ ಹೆಣ್ಣುಮಗುವನ್ನೇ ಹೆರುತ್ತಾಳೆ ಎಂಬ ಭಯದಿಂದ ವ್ಯಕ್ತಿಯೊಬ್ಬ ತನ್ನ ಹೆಂಡತಿ ಮತ್ತು ಇಬ್ಬರು ಪುಟ್ಟ ಮಕ್ಕಳನ್ನು ಈಜುಕೊಳಕ್ಕೆ ತಳ್ಳಿ, ನೀರಿನಲ್ಲಿ ಮುಳುಗಿಸಿ ಕೊಲೆ ಮಾಡಿದ್ದಾನೆ. ಆ ಬಳಿಕ ಇದೊಂದು ಆಕಸ್ಮಿಕ ಸಾವು ಎಂದು ಎಲ್ಲರನ್ನೂ ನಂಬಿಸಿದ್ದಾನೆ. ಆದರೂ ಮೃತ ಮಹಿಳೆಯ ಕುಟುಂಬಸ್ಥರ ಅನುಮಾನದಿಂದಾಗಿ ಆತ ಸಿಕ್ಕಿಹಾಕಿಕೊಂಡಿದ್ದಾನೆ. ತೆಲಂಗಾಣದ ಹನ್ಮಕೊಂಡ ಜಿಲ್ಲೆಯ ಐನವೊಲು ಮಂಡಲದ ಪುನ್ನೇಲು ಗ್ರಾಮದಲ್ಲಿ ಈ…