ಹೊಸ ತಿರುವು ಪಡೆದ ಅಧಿಕಾರಿ ಮೇಲೆ ಪಾಲಿಕೆ ಸದಸ್ಯ ಹಲ್ಲೆ: ಪ್ರಕರಣದಲ್ಲಿ ಶಾಸಕ ರೆಡ್ಡಿ ಎಂಟ್ರಿ
ಬಳ್ಳಾರಿ, ಏಪ್ರಿಲ್ 03: ಬಳ್ಳಾರಿ ಪಾಲಿಕೆಯ 39ನೇ ವಾರ್ಡ್ ಕಾಂಗ್ರೆಸ್ ಸದಸ್ಯ ವಿ. ಕುಬೇರರಿಂದ AEE ವೀರೇಶ್ ಮೇಲೆ ಹಲ್ಲೆ ಪ್ರಕರಣ ಸದ್ಯ ರಾಜಕೀಯ ತಿರುವು ಪಡೆದುಕೊಂಡಿದೆ. ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಅವರ ಸಲಾಂ ಬಳ್ಳಾರಿ ಕಾರ್ಯಕ್ರಮದ ವೇಳೆ ಹಲ್ಲೆ ಮಾಡಿದ್ದಾರೆ. ಇನ್ನು ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕ ನಾರಾ ಭರತ್ ರೆಡ್ಡಿ, ಅದೇ ವಾರ್ಡಿನಲ್ಲಿ ನಾನು ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾಗ ಇಬ್ಬರ ಮಧ್ಯೆ ಮಾತಿನ ಚಕಮಕಿ ನಡೆದಿದ್ದು, ಅದನ್ನ…