ಕರ್ತವ್ಯ ನಿರತ ಅಧಿಕಾರಿ ಮೇಲೆ ಪಾಲಿಕೆ ಸದಸ್ಯನಿಂದ ಹಲ್ಲೆ: ಕಮಿಷನರ್ ಶಾಕಿಂಗ್ ರಿಯಾಕ್ಷನ್
ಬಳ್ಳಾರಿ, ಏಪ್ರಿಲ್ 03: ಕರ್ತವ್ಯ ನಿರತ ಅಧಿಕಾರಿ ಮೇಲೆ ಪಾಲಿಕೆ ಸದಸ್ಯನಿಂದ ಹಲ್ಲೆ ಮಾಡಿರುವಂತಹ ಘಟನೆ ನಗರದಲ್ಲಿ ನಡೆದಿದೆ. ಫುಟ್ಪಾತ್ ಮೇಲೆ ಇದ್ದ ಶೆಡ್ ತೆರವು ವಿಳಂಬ ಹಿನ್ನೆಲೆ ಬಳ್ಳಾರಿ ಪಾಲಿಕೆಯ 39ನೇ ವಾರ್ಡ್ನ ಕಾಂಗ್ರೆಸ್ ಸದಸ್ಯ ವಿ. ಕುಬೇರ, ಪಾಲಿಕೆಯ ಎಇಇ ವೀರೇಶ್ ಮೇಲೆ ಹಲ್ಲೆ ಮಾಡಿದ್ದಾರೆ. ಇನ್ನು ಈ ಬಗ್ಗೆ ಕಮಿಷನರ್ ಮಾತನಾಡಿದ್ದು, ಸಾರ್ವಜನಿಕ ಪ್ರತಿನಿಧಿಗಳು ಗೌರವ ಕಾಪಾಡಿಕೊಳ್ಳದೆ ಇಂತಹ ಅಮಾನವೀಯ ಕೃತ್ಯ ನಡೆಸಿರುವುದು ಖಂಡನೀಯ ಎಂದಿದ್ದಾರೆ. ಘಟನೆ ಕುರಿತು ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಲಾಗುವುದು…