ಬೆಂಗಳೂರು, ಜನವರಿ 15: ನಗರದ ಬೇಗೂರು ಪ್ರದೇಶದ ಅಕ್ಷಯನಗರದಲ್ಲಿರುವ ಸ್ಕ್ರಾಪ್ ಗೋದಾಮಿನಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿದೆ. ಗೋದಾಮಿನಲ್ಲಿ ಸಂಗ್ರಹಿಸಿದ್ದ ಹಳೆಯ ಪ್ಲಾಸ್ಟಿಕ್ ವಸ್ತುಗಳು ಧಗಧಗನೆ ಹೊತ್ತಿ ಉರಿದಿದ್ದು, ಇಡೀ ಪ್ರದೇಶದಲ್ಲಿ ಆತಂಕ ಉಂಟಾಯಿತು. ಬೆಂಕಿಯ ಮಾಹಿತಿ ದೊರಕುತ್ತಿದ್ದಂತೆಯೇ ಅಗ್ನಿಶಾಮಕ ದಳದ ನಾಲ್ಕು ವಾಹನಗಳು ಹಾಗೂ 20ಕ್ಕೂ ಹೆಚ್ಚು ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ.
ಅಗ್ನಿ ಅವಘಡದ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿರುವ ಬಗ್ಗೆ ವರದಿಯಾಗಿಲ್ಲ. ಸದ್ಯ ಬೆಂಕಿಯನ್ನು ಬಹುತೇಕ ನಿಯಂತ್ರಣಕ್ಕೆ ತರಲಾಗಿದೆ. ಘಟನೆ ಕುರಿತು ಬೇಗೂರು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.
ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ಅವರು 2026ರ ಜನವರಿ 15ರ ಗುರುವಾರದ ದಿನ ಭವಿಷ್ಯದ ಬಗ್ಗೆ ತಿಳಿಸಿದ್ದಾರೆ. ಇದು ವಿಶ್ವಾವಸುನಾಮ ಸಂವತ್ಸರ, ಪುಷ್ಯಮಾಸ, ಕೃಷ್ಣಪಕ್ಷ ದ್ವಾದಶಿ, ಜೇಷ್ಠಾ ನಕ್ಷತ್ರ, ವೃದ್ಧಿಯೋಗ ಮತ್ತು ಕೌಲವಕರಣ ಇರುವ ದಿನವಾಗಿದೆ. ರಾಹುಕಾಲವು ಮಧ್ಯಾಹ್ನ 1:54 ರಿಂದ 3:20ರ ವರೆಗೆ ಇರುತ್ತದೆ. ಸರ್ವಸಿದ್ಧಿ, ಸಂಕಲ್ಪ ಮತ್ತು ಶುಭಕಾಲವು ಮಧ್ಯಾಹ್ನ 12:29 ರಿಂದ 1:53ರ ವರೆಗೆ ಇರುತ್ತದೆ. ಈ ದಿನದ ಪ್ರಮುಖ ಘಟನೆ ಮಕರ ಸಂಕ್ರಾಂತಿ ಮತ್ತು ಉತ್ತರಾಯಣ ಪುಣ್ಯಕಾಲದ ಆರಂಭ. ಸೂರ್ಯ ಭಗವಾನರು ಇಂದು ಉತ್ತರ ದಿಕ್ಕಿಗೆ ಪ್ರಯಾಣ ಆರಂಭಿಸುತ್ತಾರೆ. ಬೆಳಗ್ಗೆ 6:44 ರಿಂದ 10:11ರ ವರೆಗೆ ಈ ಪುಣ್ಯಕಾಲವಿರುತ್ತದೆ. ಇಂದು ಶ್ರೀರಂಗಪಟ್ಟಣದಲ್ಲಿ ಲಕ್ಷದೀಪೋತ್ಸವ, ಶಿವಗಂಗೋತ್ಪತ್ತಿ ಹಾಗೂ ಭಾರತೀಯ ಸೇನಾ ದಿನವನ್ನು ಆಚರಿಸಲಾಗುತ್ತದೆ. ರವಿ ಮಕರ ರಾಶಿಯಲ್ಲೂ ಮತ್ತು ಚಂದ್ರ ವೃಶ್ಚಿಕ ರಾಶಿಯಲ್ಲೂ ಸಂಚರಿಸಲಿದ್ದಾರೆ. ಇದರ ಜತೆಗೆ ಬಸವರಾಜ ಗುರೂಜಿ 12 ರಾಶಿಗಳ ಆರ್ಥಿಕ, ಉದ್ಯೋಗ, ಕೌಟುಂಬಿಕ ಮತ್ತು ಆರೋಗ್ಯಕ್ಕೆ ಸಂಬಂಧಿಸಿದ ಪ್ರಮುಖ ಫಲಗಳನ್ನು ವಿವರಿಸಿದ್ದಾರೆ. ಪ್ರತಿಯೊಂದು ರಾಶಿಗೂ ಅದೃಷ್ಟದ ಸಂಖ್ಯೆ, ಶುಭ ಬಣ್ಣ ಮತ್ತು ಪಠಿಸಬೇಕಾದ ಮಂತ್ರಗಳನ್ನು ತಿಳಿಸಲಾಗಿದೆ.
ಬೆಂಗಳೂರು, ಜನವರಿ 15: ನಮ್ಮ ಮೆಟ್ರೋ (Namma Metro) ಯೆಲ್ಲೋ ಲೈನ್‌ನಲ್ಲಿ ಇಂದಿನಿಂದ ಮತ್ತೊಂದು ಮೆಟ್ರೋ ರೈಲು ವಾಣಿಜ್ಯ ಸಂಚಾರ ಆರಂಭವಾಗುತ್ತಿದೆ. ಆರ್.ವಿ.ರೋಡ್–ಬೊಮ್ಮಸಂದ್ರ ಮಾರ್ಗದಲ್ಲಿ 7ನೇ ಮೆಟ್ರೋ ರೈಲು ಸೇವೆಗೆ ಸೇರ್ಪಡೆಯಾಗಿದ್ದು, ಇದರಿಂದ ಪ್ರಯಾಣಿಕರಿಗೆ ಸಂಚಾರ ಇನ್ನಷ್ಟು ಸುಗಮವಾಗಲಿದೆ. ಬೆಳಗ್ಗೆ 6 ಗಂಟೆಯಿಂದಲೇ ಯೆಲ್ಲೋ ಮಾರ್ಗದಲ್ಲಿ 7ನೇ ಮೆಟ್ರೋ ರೈಲು ಸಂಚಾರ ಆರಂಭವಾಗುತ್ತಿದ್ದು, ರೈಲುಗಳ ಸಂಚಾರದ ನಡುವಿನ ಅಂತರ ಕಡಿಮೆಯಾಗಿದೆ. ಈವರೆಗೆ ಈ ಮಾರ್ಗದಲ್ಲಿ ಪ್ರತಿ 13 ನಿಮಿಷಕ್ಕೊಮ್ಮೆ ಒಂದು ಮೆಟ್ರೋ ರೈಲು ಸಂಚರಿಸುತ್ತಿತ್ತು. ಇದೀಗ 7ನೇ ರೈಲು ಸೇರ್ಪಡೆಯೊಂದಿಗೆ ಸೋಮವಾರದಿಂದ ಶನಿವಾರದವರೆಗೆ ಪ್ರತಿ 10 ನಿಮಿಷಕ್ಕೊಮ್ಮೆ ಒಂದು ರೈಲು ಸಂಚಾರ ನಡೆಸಲಿದೆ ಎಂದು ಬಿಎಂಆರ್ಸಿಎಲ್ (BMRCL) ತಿಳಿಸಿದೆ.
ಭಾನುವಾರಗಳಂದು ಈ ಹಿಂದೆ 15 ನಿಮಿಷಕ್ಕೊಮ್ಮೆ ಮೆಟ್ರೋ ರೈಲು ಸಂಚರಿಸುತ್ತಿದ್ದರೆ, ಈಗ ಹೊಸ ರೈಲು ಸೇರ್ಪಡೆಯಿಂದ 14 ನಿಮಿಷಕ್ಕೊಮ್ಮೆ ಸೇವೆ ಲಭ್ಯವಾಗಲಿದೆ. ಆದರೆ ಮೊದಲ ಹಾಗೂ ಕೊನೆಯ ಮೆಟ್ರೋ ರೈಲುಗಳ ಸಮಯದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ತಿಳಿಸಿದೆ.
ಯೆಲ್ಲೋ ಲೈನ್‌ಗೆ 2025ರ ಆಗಸ್ಟ್ 10ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಚಾಲನೆ ನೀಡಿದ್ದರು. ಇದೀಗ ಮತ್ತೊಂದು ರೈಲು ಸೇರ್ಪಡೆಯೊಂದಿಗೆ ಪ್ರಯಾಣಿಕರ ಒತ್ತಡ ಕಡಿಮೆಯಾಗುವ ನಿರೀಕ್ಷೆ ವ್ಯಕ್ತವಾಗಿದೆ. ಯೆಲ್ಲೋ ಲೈನ್‌ನಲ್ಲಿ ಸಂಚಾರ ಮಾಡುವುದಕ್ಕೆ 7ನೇ ಚಾಲಕರಹಿತ ರೈಲು ಡಿಸೆಂಬರ್ನಲ್ಲೇ ಬೆಂಗಳೂರಿಗೆ ಆಗಮಿಸಿತ್ತು. ನಂತರ ಟೆಸ್ಟಿಂಗ್ ಕಾರ್ಯಗಳು ನಡೆದಿದ್ದವು.
ಬೆಂಗಳೂರು ಮೆಟ್ರೋ ಹಳದಿ ಮಾರ್ಗವು 19.15 ಕಿಮೀ ಇದ್ದು, ಇದು ಸಂಪೂರ್ಣ ಎಲಿವೇಟೆಡ್ ಕಾರಿಡಾರ್ ಆಗಿದೆ. ರಾಷ್ಟ್ರೀಯ ವಿದ್ಯಾಲಯ (ಆರ್‌ವಿ) ರಸ್ತೆಯನ್ನು ಬೊಮ್ಮಸಂದ್ರಕ್ಕೆ ಸಂಪರ್ಕಿಸುತ್ತದೆ ಮತ್ತು ಈ ಮಾರ್ಗದಲ್ಲಿ 16 ನಿಲ್ದಾಣಗಳಿವೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿಕ್ಲಿಕ್ ಮಾಡಿ
ಮಕರ ಸಂಕ್ರಾಂತಿ 2026 ರ ಆಚರಣೆಯ ದಿನಾಂಕದ ಕುರಿತು ಜನರಲ್ಲಿ ಗೊಂದಲಗಳಿವೆ. ಕೆಲವರು ಜನವರಿ 14 ಅಥವಾ 15 ರಂದು ಆಚರಿಸಬೇಕೇ ಎಂಬ ಪ್ರಶ್ನೆಯನ್ನು ಹೊಂದಿದ್ದಾರೆ. ಈ ಗೊಂದಲವನ್ನು ನಿವಾರಿಸಲು, ಸೂರ್ಯ ಸಿದ್ಧಾಂತದ ಪ್ರಕಾರ, 2026 ರ ಜನವರಿ 15 ರಂದು ಮಕರ ಸಂಕ್ರಾಂತಿ ಆಚರಣೆ ಸೂಕ್ತವಾಗಿದೆ.ಸೂರ್ಯ ಭಗವಾನರು ಧನುರ್ ರಾಶಿಯಿಂದ ಮಕರ ರಾಶಿಗೆ ಪ್ರಯಾಣ ಬೆಳೆಸುವ ಈ ಕಾಲವನ್ನು ಉತ್ತರಾಯಣ ಪುಣ್ಯಕಾಲ ಎಂದು ಕರೆಯಲಾಗುತ್ತದೆ. ಇದು ದೇವತೆಗಳಿಗೆ ಹಗಲಿನ ಕಾಲವೆಂದು ಸಹ ಪರಿಗಣಿಸಲಾಗುತ್ತದೆ. 2026 ರಲ್ಲಿ, ಜನವರಿ 14 ರಂದು ಮಧ್ಯಾಹ್ನ 3:30 ಕ್ಕೆ ಸೂರ್ಯನ ಮಕರ ರಾಶಿ ಪ್ರವೇಶವು ಸಂಭವಿಸುವುದರಿಂದ, ಸೂರ್ಯೋದಯ ಕಾಲದಲ್ಲಿ ಆಚರಣೆಗೆ ಮಾರನೇ ದಿನವಾದ ಜನವರಿ 15, ಗುರುವಾರವು ಹೆಚ್ಚು ಶುಭಕರವಾಗಿದೆ. ಈ ದಿನ ವಿಶ್ವಾ ವಸುನಾಮ ಸಂವತ್ಸರ, ಉತ್ತರಾಯಣ, ಹೇಮಂತ ಋತು, ಪುಷ್ಯ ಮಾಸ, ಕೃಷ್ಣ ಪಕ್ಷ, ದ್ವಾದಶಿ, ಜೇಷ್ಠಾ ನಕ್ಷತ್ರ, ವೃದ್ಧಿ ಯೋಗ, ತೈತಿಲ ಕರಣ ಇರುತ್ತದೆ. ಈ ದಿನ ಎಳ್ಳು-ಬೆಲ್ಲ ಹಂಚುವುದು, ರಂಗೋಲಿ ಹಾಕುವುದು, ಮನೆಯನ್ನು ಸ್ವಚ್ಛಗೊಳಿಸಿ ಹಬ್ಬವನ್ನು ಆಚರಿಸುವುದು ವಾಡಿಕೆ ಎಂದು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ಅವರು ಹೇಳುತ್ತಾರೆ.
ಇಳಯರಾಜ ಕಂಪೋಸ್ ಮಾಡಿದ ಯಾವುದೇ ಹಾಡನ್ನು ಸಿನಿಮಾದಲ್ಲಿ ಬಳಿಸಿದರೂ ಅವರು ಕೇಸ್ ಹಾಕುತ್ತಾರೆ. ಈ ಸಂಬಂಧ ಕೋರ್ಟ್ ಮೆಟ್ಟಿಲು ಹತ್ತುತ್ತಾರೆ. ಕೇವಲ ಮ್ಯೂಸಿಕ್ ಕಂಪನಿಯ ಹಕ್ಕನ್ನು ಪಡೆದರೆ ಮಾತ್ರ ಆಗೋದಿಲ್ಲ, ತಮ್ಮ ಒಪ್ಪಿಗೆಯನ್ನು ಪಡೆಯಬೇಕು ಎಂದು ಅವರು ಹೇಳುತ್ತಾರೆ. ಈಗ ಚಿರಂಜೀವಿ ಸಿನಿಮಾದಲ್ಲಿ ಇಳಯರಾಜ ಹಾಡು ಬಳಕೆ ಮಾಡಲಾಗಿದೆ. ಆದರೂ ಕೇಸ್ ಬಿದ್ದಿಲ್ಲ. ಈ ಬಗ್ಗೆ ನಿರ್ದೇಶಕ ಮಾತನಾಡಿದ್ದಾರೆ.
ಅನಿಲ್ ರವಿಪುಡಿ ನಿರ್ದೇಶನದ ‘ಮನ ಶಂಕರ ವರ ಪ್ರಸಾದ ಗಾರು’ ಸಿನಿಮಾ ಸೂಪರ್ ಹಿಟ್ ಆಗಿದೆ. ಈ ಚಿತ್ರದಲ್ಲಿ ಚಿರಂಜೀವಿ ನಟಿಸಿದ್ದಾರೆ. ಈ ಚಿತ್ರದಲ್ಲಿ ನಯನತಾರಾ ನಟಿಸಿದ್ದಾರೆ. ಅವರು ಬರೋ ದೃಶ್ಯಕ್ಕೆ ‘ಸುಂದರಿ ಕಣ್ಣಾಲ್’ ಹಾಡು ಬಳಕೆ ಆಗಿದೆ. ಇದು 1991ರ ‘ದಳಪತಿ’ ಚಿತ್ರದ ಹಾಡು. ಈ ಹಾಡಿಗೆ ಇಳಯರಾಜ ಸಂಗೀತ ಸಂಯೋಜನೆ ಮಾಡಿದ್ದರು.
ಇದನ್ನು ನೋಡಿದ ಅನೇಕರು, ಇಳಯರಾಜ ಸಿನಿಮಾ ಮೇಲೆ ಕೇಸ್ ಹಾಕುತ್ತಾರೆ ಎಂದುಕೊಂಡಿದ್ದರು. ಇದಕ್ಕೆ ಅನಿಲ್ ಸ್ಪಷ್ಟನೆ ನೀಡಿದ್ದಾರೆ. ‘ಇಳಯರಾಜ ಕೇಸ್ ಹಾಕ್ತಾರೆ ಎಂದು ಎಲ್ಲರೂ ಅಂದುಕೊಳ್ಳುತ್ತಾರೆ. ಜನರಿಗೆ ಗೊತ್ತಿಲ್ಲದ ವಿಷಯ ಒಂದಿದೆ. ಎಲ್ಲದಕ್ಕೂ ಒಂದು ಪ್ರಕ್ರಿಯೆ ಇದೆ. ನಾವು ಸಿನಿಮಾ ಮಾಡಿದ ಬಳಿಕ ಅವರ ಬಳಿ ತೆರಳಿ, ಒಪ್ಪಿಗೆ ಬೇಕಿತ್ತು ಎಂದು ಕೇಳಿದರೆ ಅವರು ಪ್ರೀತಿಯಿಂದ ಒಪ್ಪಿಕೊಳ್ಳುತ್ತಾರೆ’ ಎಂದರು.
‘ನನ್ನ ನಿರ್ಮಾಪಕರು ಅವರ ಬಳಿ ತೆರಳಿ ಒಪ್ಪಿಗೆ ಕೇಳಿದರು. ಚಿರಂಜೀವಿ ಸಿನಿಮಾದಲ್ಲಿ ನಿಮ್ಮ ಹಾಡುಬಳಸಿಕೊಳ್ಳಬೇಕು ಎಂದುಕೊಂಡಿದ್ದೇವೆ ಎಂದೆವು. ಇದಕ್ಕೆ ಅವರು ಖುಷಿಯಿಂದ ಒಪ್ಪಿದರು’ ಎಂದು ಅನಿಲ್ ರವಿಪುಡಿ ಹೇಳಿದ್ದಾರೆ. ಈ ಮೊದಲು ಅನೇಕ ಸಿನಿಮಾಗಳ ಮೇಲೆ ಇಳಯರಾಜ ಕೇಸ್ ಹಾಕಿದ್ದಾರೆ. ‘ಮಂಜುಮೇಲ್ ಬಾಯ್ಸ್’ ತಂಡ ದೊಡ್ಡ ಮೊತ್ತದ ಹಣವನ್ನು ಇಳಯರಾಜ ಅವರಿಗೆ ನೀಡಬೇಕಾದ ಪರಿಸ್ಥಿತಿ ಎದುರಾಗಿತ್ತು.
‘ಮನ ಶಂಕರ ವರ ಪ್ರಸಾದ ಗಾರು’ ಸಿನಿಮಾ ಬಗ್ಗೆ ಹೇಳಬೇಕಾದರೆ ಈ ಸಿನಿಮಾ ಸೂಪರ್ ಹಿಟ್ ಆಗಿದೆ. ಈ ಚಿತ್ರ 100 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದೆ. ಈ ಚಿತ್ರ ದೊಡ್ಡ ಯಶಸ್ಸು ಕಂಡಿದೆ.
ಮಹೇಶ್ ಬಾಬು ಅವರು ಕೇವಲ ನಟನೆ ಮಾತ್ರವಲ್ಲದೆ ಹಲವು ಉದ್ಯಮಗಳಲ್ಲಿ ತೊಡಗಿಕೊಂಡಿದ್ದಾರೆ. ಇದರಲ್ಲಿ ಅವರ ಒಡೆತನದ ಎಎಂಬಿ ಸಿನಿಮಾಸ್ ಕೂಡ ಒಂದು. ಹೈದರಾಬಾದ್ ಸೇರಿದಂತೆ ಕೆಲವೆಡೆ ಅತ್ಯುತ್ತಮ ಸಿನಿಮಾ ಅನುಭವವನ್ನು ಪ್ರೇಕ್ಷಕರಿಗೆ ನೀಡುತ್ತಿದೆ. ಎಎಂಬಿ ಸಿನಿಮಾಸ್ ಮಲ್ಟಿಪ್ಲೆಕ್ಸ್ ಚೈನ್ ಆಗಿದೆ. ಇದೀಗ ಈ ಎಎಂಬಿ ಸಿನಿಮಾಸ್ ಬೆಂಗಳೂರಿನಲ್ಲಿ ಪ್ರಾರಂಭ ಆಗುತ್ತಿದೆ. ಇದಕ್ಕೆ ದಿನಾಂಕ ಫಿಕ್ಸ್ ಆಗಿದೆ. ಮಹೇಶ್ ಬಾಬು ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ಬೆಂಗಳೂರಿನ ಐತಿಹಾಸಿಕ ಚಿತ್ರಮಂದಿರ ಇದ್ದ ಜಾಗದಲ್ಲಿಯೇ ಮಹೇಶ್ ಬಾಬು ತಮ್ಮ ಹೊಸ ಚಿತ್ರಮಂದಿರವನ್ನು ಪ್ರಾರಂಭಿಸುತ್ತಿದ್ದಾರೆ. ಬೆಂಗಳೂರಿನ ಗಾಂಧಿ ನಗರದಲ್ಲಿ ಹಲವು ಚಿತ್ರಮಂದಿರಗಳು ಇದ್ದವು. ಇದರ ಪೈಕಿ ಕಪಾಲಿ ಚಿತ್ರಮಂದಿರ ಕೂಡ ಒಂದಾಗಿತ್ತು. ಇಲ್ಲಿ ಸಾಕಷ್ಟು ಸೂಪರ್ ಹಿಟ್ ಚಿತ್ರಗಳು ಪ್ರದರ್ಶನ ಕಂಡಿದ್ದವು. ಈಗ ಹೊಸ ಚಿತ್ರಮಂದಿರಕ್ಕೆ ‘ಎಎಂಬಿ ಸಿನಿಮಾಸ್ ಕಪಾಲಿ’ ಎಂದೇ ಹೆಸರಿಡಲಾಗಿದೆ. ಇದು ಡಿಸೆಂಬರ್ನಲ್ಲೇ ಆರಂಭ ಆಗಬೇಕಿತ್ತು. ಆದರೆ, ಒಂದು ತಿಂಗಳು ತಡವಾಗಿದೆ.
The doors formally open at AMB Cinemas in Bengaluru on Jan 16th with South India’s first Dolby Cinema experience! Extremely proud of TEAM AMB for putting in an extraordinary effort to see this through … 👏🏻👏🏻👏🏻
Looking forward to seeing u all very soon in Namma Bengaluru…🤗🤗🤗…
ಮಹೇಶ್ ಬಾಬು ಈ ಬಗ್ಗೆ ಟ್ವೀಟ್ ಮಾಡಿದ್ದಾರೆ. ‘ಜನವರಿ 16ರಂದು ಬೆಂಗಳೂರಿನಲ್ಲಿ AMB ಸಿನಿಮಾಸ್ ಕಾರ್ಯಾರಂಭ ಮಾಡಲಿದೆ. ದಕ್ಷಿಣ ಭಾರತದ ಮೊದಲ ಡಾಲ್ಬಿ ಸಿನಿಮಾ ಥಿಯೇಟರ್ ಇದು. ಇದನ್ನು ಮಾಡಲು ಎಎಂಬಿ ತಂಡ ಸಾಕಷ್ಟು ಶ್ರಮ ಹಾಕಿದೆ. ಆ ಬಗ್ಗೆ ನನಗೆ ಹೆಮ್ಮೆ ಇದೆ. ನಮ್ಮ ಬೆಂಗಳೂರಿನಲ್ಲಿ ಶೀಘ್ರದಲ್ಲೇ ನಿಮ್ಮೆಲ್ಲರನ್ನೂ ನೋಡಲು ಕಾದಿದ್ದೇನೆ’ ಎಂದು ಮಹೇಶ್ ಬಾಬು ಹೇಳಿದ್ದಾರೆ.
ಈ ಥಿಯೇಟರ್ ದಕ್ಷಿಣ ಭಾರತದ ಮೊಟ್ಟ ಮೊದಲ ಡಾಲ್ಬಿ ವಿಷನ್ ವಿಥ್ ಅಟ್ಮೋಸ್ ಚಿತ್ರಮಂದಿರ ಆಗಿರಲಿದೆ. 60 ಅಡಿ ಅಗಲದ 9 ಸ್ಕ್ರೀನ್ಗಳು ಇದರಲ್ಲಿ ಇರಲಿವೆ. ಪ್ರತಿ ಸ್ಕ್ರೀನ್ನಲ್ಲಿ 600 ಪ್ರೇಕ್ಷಕರು ಒಮ್ಮೆಲೆ ಸಿನಿಮಾ ನೋಡಬಹುದಾಗಿದೆ. ಸ್ಕ್ರೀನ್ ಗಳು ಅತ್ಯುತ್ತಮ ವಿಡಿಯೋ ಗುಣಮಟ್ಟವನ್ನು ಹೊಂದಿರಲಿದೆಯಂತೆ. ಮಹೇಶ್ ಬಾಬು ಅವರ ಎಎಂಬಿ ಸಿನಿಮಾಸ್ ಈಗಾಗಲೇ ಹೈದರಾಬಾದ್ನಲ್ಲಿ ಕಾರ್ಯನಿರ್ವಹಿಸುತ್ತಿದೆ.
ಬುಧ ಮತ್ತು ಆದಿತ್ಯರು ಖಗೋಳದಲ್ಲಿ ಆಗಾಗ ಸಂಧಿಸುತ್ತಿರುತ್ತಾರೆ. ಇವರ ಸಂಯೋಗದಿಂದ ಬೌದ್ಧಿಕ, ಮಾನಸಿಕ ಹಾಗೂ ಕೌಶಲಗಳ ಆಧಿಕ್ಯವಿರಲಿದೆ. ಆದರೆ ಅವುಗಳ ಸ್ಥಿತಿಯ ಮೇಲೆ ಪರಿಣಾಮದ ವ್ಯತ್ಯಾಸ ಆಗುವುದು. ಬುಧಾದಿತ್ಯಯೋಗವು ಜನವರಿ ಹದಿನೇಳರಿಂದ ಫೆಬ್ರವರಿ ನಾಲ್ಕರ ವರೆಗೆ ಮಕದರಲ್ಲಿ ಇರಲಿದ್ದು ಬುದ್ಧಿ, ವಾಕ್‌ಶಕ್ತಿ, ಆಡಳಿತ ಸಾಮರ್ಥ್ಯ, ಲೆಕ್ಕಾಚಾರ ಮತ್ತು ನಿರ್ಣಯ ಶಕ್ತಿಗೆ ಕಾರಣವಾಗುತ್ತದೆ. ಈ ಯೋಗ ಮಕರ ರಾಶಿಯಲ್ಲಿ ನಿರ್ಮಾಣವಾಗಿದ್ದು, ಶನಿ ಅಧಿಪತ್ಯದ ಕಾರಣ ಫಲಗಳು ತಕ್ಷಣ ವ್ಯಕ್ತವಾಗದೆ ಕಾಲಾನಂತರದಲ್ಲಿ ಶ್ರಮ, ಶಿಸ್ತು ಮತ್ತು ಸಹನೆಯ ಮೂಲಕ ಫಲ ನೀಡುತ್ತವೆ.
ಶುಭ ಫಲರಾಶಿಗಳು:
ಮೀನ: ಧೈರ್ಯ, ಪ್ರಯತ್ನ, ಸಂವಹನ ಕ್ಷೇತ್ರದಲ್ಲಿ ಪ್ರಗತಿ. ಬರವಣಿಗೆ, ಮಾಧ್ಯಮ, ವ್ಯವಹಾರಗಳಲ್ಲಿ ಲಾಭ. ಸಹೋದರರಿಂದ ಸಹಕಾರ ದೊರೆಯುತ್ತದೆ.
ವೃಷಭ: ಬುದ್ಧಿವಂತಿಕೆ, ವಿದ್ಯಾಭ್ಯಾಸ, ಮಕ್ಕಳ ವಿಷಯದಲ್ಲಿ ಶುಭ. ಸೃಜನಶೀಲತೆ, ಹೂಡಿಕೆ, ಸ್ಪರ್ಧಾತ್ಮಕ ಕ್ಷೇತ್ರಗಳಲ್ಲಿ ಯಶಸ್ಸು.
ಕನ್ಯಾ: ಭಾಗ್ಯೋದಯ, ಧರ್ಮ–ವಿದ್ಯೆ, ಗುರುಕೃಪೆ. ದೂರ ಪ್ರಯಾಣ ಲಾಭಕರ. ಜೀವನದ ದಿಕ್ಕು ಸ್ಪಷ್ಟವಾಗಿ ರೂಪುಗೊಳ್ಳುತ್ತದೆ.
ತುಲಾ: ಉದ್ಯೋಗ, ಅಧಿಕಾರ, ಆಡಳಿತ ಕ್ಷೇತ್ರದಲ್ಲಿ ಉನ್ನತಿ. ಸರ್ಕಾರಿ ಕೆಲಸಗಳಲ್ಲಿ ಯಶಸ್ಸು. ಹೆಸರು–ಪ್ರತಿಷ್ಠೆ ಹೆಚ್ಚಳ.
ವೃಶ್ಚಿಕ: ಆದಾಯ ವೃದ್ಧಿ, ಆಶಾಪೂರ್ತಿ. ಸ್ನೇಹ ವಲಯ ವಿಸ್ತರಣೆ. ಹಿರಿಯರ ಸಹಕಾರದಿಂದ ಲಾಭಕರ ಯೋಜನೆಗಳು.
ಅಶುಭ ಫಲರಾಶಿಗಳು:
ಮಿಥುನ: ಷಷ್ಠದಲ್ಲಿ ಶತ್ರುಕಾಟ, ಸಾಲ, ಆರೋಗ್ಯ ಸಮಸ್ಯೆ. ಉದ್ಯೋಗ ಒತ್ತಡ. ಕಾನೂನು ವಿಷಯಗಳಲ್ಲಿ ಎಚ್ಚರ ಅಗತ್ಯ.
ಕರ್ಕಾಟಕ: ಸಪ್ತಮದಲ್ಲಿ ದಾಂಪತ್ಯ ಕಲಹ, ಪಾಲುದಾರಿಕೆ ವ್ಯವಹಾರದಲ್ಲಿ ಸಮಸ್ಯೆ. ಅಹಂಕಾರ, ಮಾತಿನ ಗೊಂದಲದಿಂದ ದೂರ ಸಂಭವ.
ಸಿಂಹ : ರವಿಯ ರಾಶಿಯಗಿದ್ದರೂ ಅಷ್ಟಮಸ್ಥಾನವಾಗಿದ್ದು ಅನಿರೀಕ್ಷಿತ ವಿಘ್ನ, ಭಯ, ಮಾನಸಿಕ ಒತ್ತಡ. ಆರೋಗ್ಯ ಕಡೆ ಹೆಚ್ಚು ಜಾಗ್ರತೆ ಅಗತ್ಯ.
ಧನು: ದ್ವಾದಶದ ಈ ರಾಶಿಯವರಿಗೆ ಆರ್ಥಿಕ ವೆಚ್ಚ ಹೆಚ್ಚಳ, ನಿದ್ರಾಭಂಗ, ಏಕಾಂತ ಭಾವನೆ. ವಿದೇಶ ಸಂಬಂಧಿತ ಚಿಂತನೆ. ಫಲ ವಿಳಂಬ.
ಮಿಶ್ರ ಫಲ ರಾಶಿಗಳು:
ಮಕರ: ಈ ರಾಶಿಯಲ್ಲಿಯೇ ಇರುವ ಬುಧಾದಿತ್ಯರಿಂದ ಆತ್ಮವಿಶ್ವಾಸ, ವ್ಯಕ್ತಿತ್ವ ಬಲ. ಆದರೆ ಅಹಂಕಾರ, ಆರೋಗ್ಯದ ನಿರ್ಲಕ್ಷ್ಯ ಸಾಧ್ಯ. ಶ್ರಮದ ನಂತರ ಫಲ.
ಕುಂಭ: ಹಣ ಮತ್ತು ವಾಕ್ ಶಕ್ತಿಯ ವೃದ್ಧಿ. ಆದಾಯ ಇದ್ದರೂ ಕುಟುಂಬ ಕಲಹ ಸಾಧ್ಯ. ಮಾತಿನಲ್ಲಿ ಸಂಯಮ ಅಗತ್ಯ.
ಮೇಷ: ಈ ರಾಶಿಯವರಿಗೆ ಮನೆ, ಆಸ್ತಿ ಲಾಭ. ಒಳಮನಸ್ಸಿನ ಅಶಾಂತಿ. ತಾಯಿಯ ಆರೋಗ್ಯದ ಬಗ್ಗೆ ಚಿಂತೆ.
ಇತರರ ನಡುವಿನ ಭಿನ್ನಾಭಿಪ್ರಾಯ ಶಮನಕ್ಕೆ ನಿಮಗೆ ಆಹ್ವಾನ ಬಂದರೂ ಹೋಗಬೇಡಿ; ಅವರು ತಮ್ಮ ನಿರೀಕ್ಷೆಯನ್ನು ನಿಮ್ಮ ಮೇಲೆ ಹೇರಬಹುದು. ಹಣದ ವಿಷಯದಲ್ಲಿ ಜಾಣತನ ತೋರಿದರೆ ಬಾಕಿ ವ್ಯವಹಾರಗಳು ಸುಧಾರಣೆಯ ಹಾದಿಗೆ ಬರುತ್ತವೆ. ಪ್ರೀತಿಯಲ್ಲಿ ಇರುವವರು ಮನದ ಮಾತುಗಳನ್ನು ನೇರವಾಗಿ ಹೇಳಿದರೆ ವಿಶ್ವಾಸ ಗಟ್ಟಿಯಾಗುತ್ತದೆ. ಮದುವೆ ಬಗ್ಗೆ ಯೋಚಿಸುತ್ತಿರುವವರಿಗೆ ಕುಟುಂಬದ ಅನುಮೋದನೆ ಸಿಗುವ ಸೂಚನೆಗಳಿವೆ. ಕುಟುಂಬದಲ್ಲಿ ಉಂಟಾಗುವ ಸಣ್ಣ ಉದ್ವಿಗ್ನತೆಯು ಸಹನೆ ಮತ್ತು ಸಮತೋಲನದಿಂದ ಕಡಿಮೆಯಾಗುತ್ತದೆ. ಉದ್ಯೋಗ ಸ್ಥಳದಲ್ಲಿ ನಿಮ್ಮ ನಿಲುವು ಸ್ಪಷ್ಟವಾಗಿದ್ದರೆ ಒತ್ತಡ ಕಡಿಮೆಯಾಗುತ್ತದೆ.
ಸ್ನೇಹಿತರು ಹಾಗೂ ಸಂಬಂಧಿಗಳೊಂದಿಗೆ ಇರುವ ಅಂತರ ನಿಧಾನವಾಗಿ ಕಡಿಮೆಯಾಗುತ್ತದೆ; ನೀವು ತೋರಿಸುವ ಮೃದು ಧೋರಣೆ ಮನೆಯಲ್ಲಿಯ ವಾತಾವರಣವನ್ನೂ ಸುಧಾರಿಸುತ್ತದೆ. ಈ ಹಿಂದಿನ ಅಸಮಾಧಾನಗಳನ್ನು ಬಿಟ್ಟು ಸಂಭಾಷಣೆ ಪುನರ್ ಆರಂಭವಾಗುವುದು ಮನಸಿಗೆ ನೆಮ್ಮದಿ ನೀಡುತ್ತದೆ. ಹಣದ ಹರಿವು ಸಾಮಾನ್ಯವಾಗಿದ್ದರೂ ಲೆಕ್ಕಾಚಾರದಲ್ಲಿ ಜಾಗರೂಕತೆ ಅವಶ್ಯಕ. ಪ್ರೀತಿಯಲ್ಲಿ ಇರುವವರಿಗೆ ಇಂದು ಮನದ ಮಾತು ಹಂಚಿಕೊಳ್ಳಲು ಸೂಕ್ತ ಸಮಯ ಆಗಿರುತ್ತದೆ. ಮದುವೆಗೆ ಯೋಚಿಸುವವರಿಗೆ ಹೊಸ ಮಾತುಕತೆಗಳು ಶುಭ ಸೂಚನೆ ನೀಡುತ್ತವೆ. ಕೆಲಸದಲ್ಲಿ ನಿಮ್ಮ ಅಭಿಪ್ರಾಯಕ್ಕೆ ಮಹತ್ವ ಸಿಗುತ್ತದೆ.
ಸಂಕೀರ್ಣ ವಿಷಯಗಳನ್ನು ಬಹಳ ಸರಳವಾಗಿ ವಿವರಿಸುವ ನಿಮ್ಮ ಕೌಶಲ ಇಂದು ಹೆಚ್ಚು ಮೆಚ್ಚುಗೆ ಪಡೆಯುತ್ತದೆ. ಉದ್ಯೋಗ ಸ್ಥಳದಲ್ಲಿ ನಿಮಗೆ ಬೇಕಿದ್ದ ಪರಿಕರಗಳು ಅಥವಾ ಸಂಪನ್ಮೂಲಗಳು ದೊರೆಯುವುದರಿಂದ ಕೆಲಸದ ವೇಗ ಹೆಚ್ಚಾಗುತ್ತದೆ. ಹಣಕಾಸಿನಲ್ಲಿ ನಿಯಮಿತ ಸಂಗ್ರಹಕ್ಕೆ ಒತ್ತು ಕೊಡುತ್ತೀರಿ; ರೆಕರಿಂಗ್ ಡೆಪಾಸಿಟ್ ಅಥವಾ ಮ್ಯೂಚುವಲ್ ಫಂಡ್‌ನ ಎಸ್‌ಐಪಿ ಬಗ್ಗೆ ಈಗ ತೆಗೆದುಕೊಳ್ಳುವ ನಿರ್ಧಾರ ಭವಿಷ್ಯಕ್ಕೆ ಬಲ ನೀಡುತ್ತದೆ. ಕುಟುಂಬದಲ್ಲಿ ಸಲಹೆ ಕೇಳುವವರು ಹೆಚ್ಚಾಗುತ್ತಾರೆ. ಪ್ರೀತಿ ಜೀವನದಲ್ಲಿ ನೇರವಂತಿಕೆ ವಿಶ್ವಾಸವನ್ನು ಗಟ್ಟಿ ಮಾಡುತ್ತದೆ.
ಈ ದಿನ ನಿಮ್ಮ ಹೊಸ ಯೋಜನೆಗಳು ವೇಗವಾಗಿ ಬೆಳೆಯುತ್ತವೆ. ಉದ್ಯೋಗಸ್ಥರಿಗೆ ನಿರ್ದಿಷ್ಟ ಗುರಿ ತಲುಪಲು ನಿರೀಕ್ಷಿತ ಪ್ರಮಾಣದ ಸಹಾಯ ಸಿಗಲಿದೆ. ಅಂಗಡಿ ಮಾಲೀಕರು ಮತ್ತು ಬ್ಯೂಟಿ ಸಲೂನ್ ನಡೆಸುತ್ತಾ ಇರುವವರಿಗೆ ಹೆಚ್ಚಿನ ಸಂಖ್ಯೆಯ ಗ್ರಾಹಕರಿಂದ ಸಂತೃಪ್ತ ಲಾಭ ದೊರೆಯಲಿದೆ. ರೈತರಿಗೆ ಹವಾಮಾನವು ಹಿತಕರವಾಗಿ ಪರಿಣಮಿಸಿ ಬೆಳೆ ಹಾಗೂ ಮಾರಾಟದಲ್ಲಿ ಸುಧಾರಣೆ ತರುತ್ತದೆ. ವಿದ್ಯಾರ್ಥಿಗಳು ತಮ್ಮ ಅಭ್ಯಾಸದಲ್ಲಿ ಹೊಸ ವಿಧಾನಗಳನ್ನು ಅಳವಡಿಸಿ ಉತ್ತಮ ಫಲಿತಾಂಶ ಪಡೆಯುತ್ತಾರೆ. ಕುಟುಂಬದಲ್ಲಿ ಸದಸ್ಯರೊಂದಿಗೆ ಸಂವಹನ ಸ್ಪಷ್ಟ ಆಗುವುದು ಸಂತೋಷ ಹೆಚ್ಚಿಸುತ್ತದೆ.
ಈ ದಿನ ನಿಮ್ಮ ಮುಖ್ಯ ಕಾರ್ಯಗಳಲ್ಲಿ ಯಶಸ್ಸು ಕಾಣಲಿದೆ. ಪೊಲೀಸ್ ಮತ್ತು ಸೇನೆಯಲ್ಲಿ ಇರುವವರು ನಿಯೋಜನೆ ಆಗಿರುವ ಕೆಲಸಗಳಲ್ಲಿ ಶಿಸ್ತಿನಿಂದ ಉತ್ತಮ ಫಲಿತಾಂಶ ಪಡೆಯುತ್ತಾರೆ. ಆಹಾರ ಸೇವೆ ಅಥವಾ ಕ್ಯಾಂಟೀನ್- ಕಾಂಟ್ರ್ಯಾಕ್ಟ್ ಕೆಲಸದವರು ಒಪ್ಪಂದ ನವೀಕರಣ ಆದ ಬಗ್ಗೆ ಮಾಹಿತಿ ಪಡೆಯಲಿದ್ದಾರೆ ಮತ್ತು ಗ್ರಾಹಕರಿಂದ ಉತ್ತಮ ವಿಮರ್ಶೆ ಪಡೆಯುತ್ತೀರಿ. ಉದ್ಯೋಗದಲ್ಲಿ ಹೊಸ ಜವಾಬ್ದಾರಿಗಳು ಬಂದರೂ ಸಹೋದ್ಯೋಗಿಗಳ ಸಹಕಾರದಿಂದ ಒತ್ತಡ ಕಡಿಮೆಯಾಗುತ್ತದೆ. ಕುಟುಂಬದೊಳಗಿನ ಸಮಸ್ಯೆಗಳಿಗೆ ಮಾತುಕತೆ ಮೂಲಕ ಪರಿಹಾರ ಕಂಡುಕೊಳ್ಳುತ್ತೀರಿ.
ನಿಮ್ಮ ಜೀವನಶೈಲಿಯಲ್ಲಿ ಕೆಲವು ಧಾರ್ಮಿಕ ವಿಧಾನಗಳನ್ನು ಅಳವಡಿಸಿಕೊಳ್ಳಲಿದ್ದೀರಿ. ಯಾವುದೆಲ್ಲ ನಿಮಗೆ ಹಿಂಸೆ- ಕಿರಿಕಿರಿ ನೀಡುತ್ತಿತ್ತೋ ಅದಕ್ಕಾಗಿ ಇತರರನ್ನು ದೂರುವುದು ನಿಲ್ಲಿಸಲಿದ್ದೀರಿ. ವಾಸ್ತವ ನೆಲೆಗಟ್ಟಿನಲ್ಲಿ ಮುಂದೆ ಸಾಗುವುದಕ್ಕೆ ಆದ್ಯತೆ ಕೊಡುತ್ತೀರಿ. ಸಮಾಜ ಸೇವೆಯಲ್ಲಿ ತೊಡಗಿರುವವರಿಗೆ ಉದ್ದೇಶಗಳನ್ನು ಸ್ಪಷ್ಟಗೊಳಿಸುವುದಕ್ಕೆ ಉತ್ತಮ ವೇದಿಕೆ ದೊರೆಯಲಿದೆ. ಹಣದ ಸಮಸ್ಯೆಯಲ್ಲಿ ಸಿಲುಕಿದವರಿಗೆ ಅದರಿಂದ ಹೊರಬರುವ ಮಾರ್ಗೋಪಾಯ ಗೋಚರ ಆಗಲಿದೆ. ಮುಖ್ಯವಾಗಿ ಸಾಂಸಾರಿಕ ಜೀವನ ಸಂತೃಪ್ತಿಯಿಂದ ಇರುತ್ತದೆ.
ಇಂದು ಮನೆಗೆ ಬರುವ ಸಂಬಂಧಿಗಳು ಹರ್ಷ ತುಂಬಿದ ವಾತಾವರಣಕ್ಕೆ ಕಾರಣ ಆಗುತ್ತಾರೆ. ವಿದ್ಯಾರ್ಥಿಗಳು ಗಮನ ಕೇಂದ್ರೀಕರಿಸುವುದರಿಂದ ಪರೀಕ್ಷಾ ಸಿದ್ಧತೆ ಸರಿಯಾದ ದಾರಿಗೆ ಬರುತ್ತದೆ. ಉದ್ಯೋಗದಲ್ಲಿ ಇರುವವರಿಗೆ ಕಾರ್ಯವಿಧಾನ ಬದಲಾವಣೆ ಹೊಸ ಅವಕಾಶ ತರುತ್ತದೆ, ಮೇಲಧಿಕಾರಿಗಳ ನಿರೀಕ್ಷೆ ಪೂರೈಸಲು ಸ್ಪಷ್ಟ ಸಂವಹನ ಅಗತ್ಯ. ವ್ಯವಹಾರ ನಡೆಸುವವರಿಗೆ ಗ್ರಾಹಕರಿಂದ ಬಂದ ಪ್ರತಿಕ್ರಿಯೆ ಮುಂದಿನ ಯೋಜನೆಗೆ ಮಾರ್ಗದರ್ಶಿ ಆಗುತ್ತದೆ. ಫ್ರೀಲಾನ್ಸರ್‌ಗಳಿಗೆ ಹೊಸ ಪ್ರಾಜೆಕ್ಟ್‌ಗಳ ವಿಚಾರಣೆ ಆತ್ಮವಿಶ್ವಾಸ ಹೆಚ್ಚಿಸುತ್ತದೆ.
ಈ ದಿನ ಹೊಸ ಅವಕಾಶಗಳು ನಿಮ್ಮನ್ನು ಹುಡುಕಿ ಬರುತ್ತವೆ. ಉದ್ಯೋಗಸ್ಥರು ತಮ್ಮ ಕೆಲಸದಲ್ಲಿ ಹೊಸ ಪ್ರಯತ್ನಗಳಿಂದ ಮೆಚ್ಚುಗೆಯನ್ನು ಪಡೆಯುತ್ತಾರೆ. ವ್ಯವಹಾರಸ್ಥರಿಗೆ ಹೊಸ ಗ್ರಾಹಕರು ಹಾಗೂ ಒಪ್ಪಂದಗಳಿಂದ ಲಾಭ ಕಾಣಲಿದೆ. ವಿದ್ಯಾರ್ಥಿಗಳು ಹೊಸ ಪಾಠವನ್ನು ಅರ್ಥ ಮಾಡಿಕೊಳ್ಳಲು ಸುಲಭವಾಗುತ್ತದೆ. ಫ್ರೀಲಾನ್ಸರ್‌ಗಳಿಗೆ ಸೃಜನಾತ್ಮಕ ಯೋಜನೆಗಳಲ್ಲಿ ಯಶಸ್ಸು ಸಿಗುತ್ತದೆ. ಕುಟುಂಬದಲ್ಲಿ ಸಂಬಂಧಗಳು ಬಲಗೊಳ್ಳುತ್ತವೆ, ಹಿರಿಯರ ಮಾರ್ಗದರ್ಶನ ಉಪಯುಕ್ತವಾಗಲಿದೆ. ಪ್ರೀತಿಯ ಸಂಬಂಧಗಳಲ್ಲಿ ಪರಸ್ಪರ ನಂಬಿಕೆಯಿಂದ ವಿಶ್ವಾಸವನ್ನು ಗಟ್ಟಿ ಆಗುತ್ತದೆ.
ಈ ದಿನ ನಿಮ್ಮ ತೀಕ್ಷ್ಣ ಅಭಿಪ್ರಾಯ ಮತ್ತು ವಿಶ್ಲೇಷಣಾ ಶಕ್ತಿಯು ವಿವಿಧ ಕ್ಷೇತ್ರದಲ್ಲಿ ಪ್ರಮುಖ ಅವಕಾಶಗಳನ್ನು ತರುತ್ತದೆ. ಉದ್ಯೋಗಸ್ಥರು ಹೊಸ ಯೋಜನೆಗಳೊಂದಿಗೆ ಮೆಚ್ಚುಗೆಯನ್ನು ಪಡೆಯುತ್ತಾರೆ. ವ್ಯವಹಾರಸ್ಥರು ಹೊಸ ಒಪ್ಪಂದಗಳು ಮತ್ತು ಗ್ರಾಹಕರ ವಿಶ್ವಾಸದಿಂದ ಹೆಚ್ಚಿನ ಆದಾಯದ ಮೂಲ ಹಾಗೂ ಲಾಭ ಪಡೆಯುತ್ತಾರೆ. ವಿದ್ಯಾರ್ಥಿಗಳು ಹೊಸ ವಿಷಯಗಳನ್ನು ಅರ್ಥ ಮಾಡಿಕೊಳ್ಳಲು ಸುಲಭವಾಗುತ್ತದೆ. ಫ್ರೀಲಾನ್ಸರ್‌ಗಳು ಕಠಿಣ- ಸವಾಲು ಎನಿಸಿದ ಪ್ರಾಜೆಕ್ಟ್‌ಗಳಲ್ಲಿ ಯಶಸ್ಸು ಪಡೆಯುತ್ತಾರೆ. ಕುಟುಂಬದಲ್ಲಿ ಹಿರಿಯರ ಮಾರ್ಗದರ್ಶನದಿಂದ ಸಮಸ್ಯೆಗಳು ಪರಿಹಾರವಾಗುತ್ತವೆ.