40 ವರ್ಷದ ಅಂಕಲ್, 19ರ ಯುವತಿಯ ಪ್ರೀತಿ ಪ್ರೇಮ: ಪ್ರೇಮಲೋಕದಲ್ಲಿ ತೇಲಾಡುವಾಗಲೇ ನಡೆಯಿತು ಘನಘೋರ! – Kannada News | 40 Year Old Kunigal Man Killed Who Loves 19 Year old Young Woman at Ramanagar
ರಾಮನಗರ, (ಡಿಸೆಂಬರ್ 19): ಆತನಿಗೆ 40 ವರ್ಷ. ಆ ಯುವತಿಗೆ 19 ವರ್ಷ. ಇಬ್ಬರ ನಡುವೆ ಪ್ರೀತಿ (Love) ಮೂಡಿತ್ತು. ಹದಿನೈದು ದಿನಗಳ ಕೆಳಗೆ ಇಬ್ಬರು ಓಡಿಹೋಗಿದ್ರು. ಈ ವಿಚಾರ ಯುವತಿಯ ತಂದೆಯನ್ನ ಕೆರಳುವಂತೆ ಮಾಡಿದ್ದು, ತನ್ನ ಮಗಳನ್ನ ಪ್ರೀತಿಸಿದವನನ್ನ ಕಿಡ್ಯಾಪ್ ಮಾಡಿ, ಬಳಿಕ ಕತ್ತು ಕೊಯ್ದು ಭೀಕರವಾಗಿ ಹತ್ಯೆ ಮಾಡಿದ್ದಾರೆ. ಹೌದು.. ಬಣ್ಣ ಬಣ್ಣದ ಮಾತುಗಳನ್ನ ಆಡಿ ಮಗಳನ್ನ ಬಲೆಗೆ ಬೀಳಿಸಿಕೊಂಡಿದ್ದ ಪ್ರೀಯಕರನೊಬ್ಬನನ್ನ ಯುವತಿಯ ತಂದೆ, ತನ್ನ ಬಾಮೈದರ ಜೊತೆ ಸೇರಿ ಭೀಕರವಾಗಿ ಹತ್ಯೆ ಮಾಡಿರೋ…