ಯಶ್ ‘ರಾಮಾಯಣ’ ಟೀಸರ್ ನೋಡಿ ಮಹೇಶ್ ಬಾಬು ಅಭಿಮಾನಿಗಳಿಗೆ ಹೊಟ್ಟೆಕಿಚ್ಚು?

ಯಶ್ ‘ರಾಮಾಯಣ’ ಟೀಸರ್ ನೋಡಿ ಮಹೇಶ್ ಬಾಬು ಅಭಿಮಾನಿಗಳಿಗೆ ಹೊಟ್ಟೆಕಿಚ್ಚು?

ರಣಬೀರ್ ಕಪೂರ್, ಸಾಯಿ ಪಲ್ಲವಿ, ಯಶ್ (Yash) ಮೊದಾದವರು ನಟಿಸಿರೋ ‘ರಾಮಾಯಣ’ ಸಿನಿಮಾದ ಟೀಸರ್ ಇಂದು (ಏಪ್ರಿಲ್ 2) ರಿಲೀಸ್ ಆಗಿದೆ. ಈ ಸಿನಿಮಾದ ಟೀಸರ್ ಗಮನ ಸೆಳೆದಿದೆ. ಹನುಮಂತ ಜಯಂತಿ ಪ್ರಯುಕ್ತ ಟೀಸರ್ ತೆರೆಗೆ ಬಂದಿದೆ. ಈ ಸಿನಿಮಾದ ಟೀಸರ್ ನೋಡಿದ ಎಲ್ಲರೂ ಪಾಸಿಟಿವ್ ಆಗಿ ಕಮೆಂಟ್ ಹಾಕುತ್ತಿದ್ದಾರೆ. ಆದರೆ, ಮಹೇಶ್ ಬಾಬು ಹಾಗೂ ರಾಜಮೌಳಿ ಅಭಿಮಾನಿಗಳು ಮಾತ್ರ ನೆಗೆಟಿವ್ ಆಗಿ ಕಮೆಂಟ್ ಹಾಕುತ್ತಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.

‘ರಾಮಾಯಣ’ ಸಿನಿಮಾದ ಮೊದಲ ಭಾಗ ಈ ಬಾರಿ ದೀಪಾವಳಿಗೆ ರಿಲೀಸ್ ಆಗಲಿದೆ. ಅದಕ್ಕೂ ಮೊದಲು ಸಿನಿಮಾ ಎಷ್ಟು ರಿಚ್ ಆಗಿರಲಿದೆ ಎಂಬುದನ್ನು ತೋರಿಸುವ ನಿಟ್ಟಿನಲ್ಲಿ ಟೀಸರ್ ಬಿಡುಗಡೆ ಮಾಡಲಾಗಿದೆ. ಈ ಟೀಸರ್​ ಅಲ್ಲಿ ಗ್ರಾಫಿಕ್ಸ್ ಗಮನ ಸೆಳೆದಿದೆ. ರಾಮನಾಗಿ ರಣಬೀರ್ ಕಪೂರ್ ಗಮನ ಸೆಳೆದಿದ್ದಾರೆ. ಅವರ ಪಾತ್ರ ಮಾತ್ರ ಹೈಲೈಟ್ ಆಗಿದೆ. ಸೀತೆಯನ್ನು ದೂರದಿಂದ ಹಾಗೂ ರಾವಣನ ಪಾತ್ರವನ್ನು ಹಿಂಭಾಗದಿಂದ ತೋರಿಸಲಾಗಿದೆ.

ಇದನ್ನೂ ಓದಿ: ‘ರಾಮಾಯಣ’ ಟೀಸರ್ ಅಲ್ಲಿ ಯಶ್ ಲುಕ್ ಹೇಗಿದೆ? ಇಲ್ಲಿದೆ ಫೋಟೋಸ್

ಟೀಸರ್ ಇಷ್ಟು ಮೆಚ್ಚುಗೆ ಪಡೆದರೂ ಮಹೇಶ್ ಬಾಬು ಅಭಿಮಾನಿಗಳು ಅಸಮಾಧಾನಗೊಂಡಿದ್ದೇಕೆ? ಆ ಪ್ರಶ್ನೆಗೂ ಉತ್ತರ ಇದೆ. ಮಹೇಶ್ ಬಾಬು ಅವರು ರಾಜಮೌಳಿ ಜೊತೆ ‘ವಾರಣಾಸಿ’ ಹೆಸರಿನ ಸಿನಿಮಾ ಮಾಡುತ್ತಿದ್ದಾರೆ. ಇದು ಸಂಪೂರ್ಣವಾಗಿ ‘ರಾಮಾಯಣ’ ಕಥೆಯನ್ನು ಆಧರಿಸಿ ಇರಲಿದೆಯಂತೆ. ಅದಕ್ಕೂ ಮೊದಲೇ ‘ರಾಮಾಯಣ’ ಚಿತ್ರ ಒಂದು ತೆರೆಗೆ ಬರುತ್ತಿರುವುದು ‘ವಾರಣಾಸಿ’ಗೆ ಹಿನ್ನಡೆ ಆಗಬಹುದು ಎಂಬದು ಮಹೇಶ್ ಬಾಬು ಹಾಗೂ ರಾಜಮೌಳಿ ಫ್ಯಾನ್ಸ್ ಲೆಕ್ಕಾಚಾರ.

‘ಮಹೇಶ್ ಬಾಬು ಮತ್ತು ರಾಜಮೌಳಿ ಅಭಿಮಾನಿಗಳಿಗೆ ನಿದ್ದೆಯಿಲ್ಲದ ರಾತ್ರಿಗಳು ಬರಲಿವೆ. ಅವರು ನಿಜಕ್ಕೂ ಅಳುತ್ತಿದ್ದಾರೆ. ‘ವಾರಣಾಸಿ’ ಸಿನಿಮಾನ ಈ ಚಿತ್ರ ಮೀರಿಸುತ್ತದೆ’ ಎಂದು ಕೆಲವರು ಹೇಳಿದ್ದಾರೆ. ಇನ್ನೂ ಕೆಲವರು ‘ಮಹೇಶ್ ಬಾಬು ಅಭಿಮಾನಿಗಳು ಉದ್ದೇಶಪೂರ್ವಕವಾಗಿ ಟೀಸರ್ ಬಗ್ಗೆ ನೆಗೆಟಿವ್ ಆಗಿ ಮಾತನಾಡುತ್ತಿದ್ದಾರೆ’ ಎಂದು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

15 ದಿನ ಪಶ್ಚಿಮ ಬಂಗಾಳದಲ್ಲೇ ಇರ್ತೀನಿ, ಮಮತಾಗೆ ಬೈ-ಬೈ ಹೇಳಿಯೇ ಬರ್ತೀನಿ: ಅಮಿತ್ ಶಾ

ಕೋಲ್ಕತ್ತಾ, ಏಪ್ರಿಲ್ 02:ಪಶ್ಚಿಮ ಬಂಗಾಳದಲ್ಲಿ 2026ರ ಚುನಾವಣೆಗೂ ಮುನ್ನ ರಾಜಕೀಯ ವಾತಾವರಣ ಬಿಸಿಯಾಗುತ್ತಿದೆ. ಈ ಚುನಾವಣೆಯಲ್ಲಿ ಆಡಳಿತಾರೂಢ ಟಿಎಂಸಿ ಹಾಗೂ ಪ್ರಮುಖ ವಿರೋಧಪಕ್ಷ ಬಿಜೆಪಿ ನಡುವೆ ನೇರ ಹೋರಾಟ ಕಂಡುಬರುತ್ತಿದೆ. ಶುಭೇಂದು ಅಧಿಕಾರಿಯ ನಾಮಪತ್ರ ಸಲ್ಲಿಕೆ ಇದ್ದ ಕಾರಣ ನಂದಿಗ್ರಾಮಕ್ಕೆ ಹೋಗಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ಇನ್ನು 15 ದಿನ ಇಲ್ಲೇ ಇರುತ್ತೇನೆ, ಪಶ್ಚಿಮ ಬಂಗಾಳದಲ್ಲಿಯೇ ಉಳಿದು ಚುನಾವಣಾ ಉಸ್ತುವಾರಿವಹಿಸಿಕೊಳ್ಳುವುದಾಗಿ ಘೋಷಿಸಿದರು.
ತಾನು ಇಡೀ ಬಂಗಾಳವನ್ನು ಪ್ರವಾಸ ಮಾಡಿರುವುದಾಗಿ ಹೇಳಿದ್ದು, ಎಲ್ಲ ಕಡೆಯೂ ಮಮತಾ ಬ್ಯಾನರ್ಜಿ ಸರ್ಕಾರವನ್ನು ಕೊನೆಗೊಳಿಸುವ ಬಗ್ಗೆಯೇ ಬೇಡಿಕೆಗಳು ಕೇಳಿಬಂದಿವೆ.

ಬಂಗಾಳದ ಜನರು ಟಿಎಂಸಿಯ ಗೂಂಡಾಗಿರಿಯಿಂದ ಸಂಪೂರ್ಣವಾಗಿ ಬೇಸತ್ತಿದ್ದಾರೆ, ಆಗಾಗ ಸ್ಫೋಟಗಳು, ನಿರುದ್ಯೋಗ ಸಮಸ್ಯೆ ತಾಂಡವವಾಡುತ್ತಿದೆ. ಬಿಜೆಪಿ ಸರ್ಕಾರವು ನಿರುದ್ಯೋಗ ಸಮಸ್ಯೆಯನ್ನು ನಿವಾರಿಸುತ್ತದೆ, ಅಭಿವೃದ್ಧಿಯ ಹೊಸ ಅಲೆಯನ್ನು ತರುತ್ತದೆ. ಇದರಿಂದ ಬಂಗಾಳವುತನ್ನ ಹಿಂದಿನ ಗುರುತನ್ನು ಮರಳಿ ಪಡೆಯಬಹುದು ಎಂದು ಭರವಸೆ ನೀಡಿದ್ದಾರೆ.

 

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

IPL 2026: ಆರ್​​ಸಿಬಿ ಪರ ಆಡಲು ಬಿಡದ ಕ್ರಿಕೆಟ್ ಮಂಡಳಿ ವಿರುದ್ಧ ಕೋರ್ಟ್​ ಮೆಟ್ಟಿಲೇರಿದ ಕ್ರಿಕೆಟಿಗ

2026 ರ ಐಪಿಎಲ್‌ನಲ್ಲಿ ಮೊದಲ ಹಂತ ಮುಕ್ತಾಯಗೊಂಡಿದೆ. ಅಂದರೆ ಎಲ್ಲಾ 10 ತಂಡಗಳು ತಲಾ ಒಂದೊಂದು ಪಂದ್ಯಗಳನ್ನಾಡಿವೆ. ಮೊದಲ ಈ ಐದು ಪಂದ್ಯಗಳು ಕೆಲವು ಪ್ರಮುಖ ಆಟಗಾರರ ಇಂಜುರಿ ಹಾಗೂ ಅಲಭ್ಯತೆಯ ನಡುವೆ ಅದ್ಧೂರಿಯಾಗಿ ನಡೆದಿವೆ. ಇಂದಿನಿಂದ ಎರಡನೇ ಹಂತ ಆರಂಭವಾಗುತ್ತಿದ್ದು, ಈ ಸುತ್ತಿನಿಂದ ಕೆಲವು ಅಟಗಾರರು ಕಣಕ್ಕಿಳಿಯಲಿದ್ದಾರೆ. ಆದಾಗ್ಯೂ ಶ್ರೀಲಂಕಾ ತಂಡದ ಸ್ಟಾರ್ ವೇಗದ ಬೌಲರ್ ನುವಾನ್ ತುಷಾರಗೆ ಮಾತ್ರ ಐಪಿಎಲ್‌ನಲ್ಲಿ ಆಡುವ ಅವಕಾಶ ಸಿಕ್ಕಿಲ್ಲ. ಐಪಿಎಲ್‌ನಲ್ಲಿ ಆರ್​ಸಿಬಿ ತಂಡದ ಭಾಗವಾಗಿರುವ ತುಷಾರ, ಫಿಟ್​ನೆಸ್ ಪರೀಕ್ಷೆಯಲ್ಲಿ ಪಾಸಾಗದ ಕಾರಣ ಶ್ರೀಲಂಕಾ ಕ್ರಿಕೆಟ್ ಮಂಡಳಿ, ತುಷಾರಗೆ ಎನ್​ಒಸಿ ನೀಡಲು ನಿರಾಕರಿಸಿದೆ. ಹೀಗಾಗಿ ಅವರು ಐಪಿಎಲ್‌ನಲ್ಲಿ ಆಡಲು ಸಾಧ್ಯವಾಗುತ್ತಿಲ್ಲ. ಇದರಿಂದ ಕೆರಳಿರುವ ತುಷಾರ, ಶ್ರೀಲಂಕಾ ಕ್ರಿಕೆಟ್ ಮಂಡಳಿಯ ವಿರುದ್ಧ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದಾರೆ.

ಮಂಡಳಿ ವಿರುದ್ಧ ದೂರು

ಶ್ರೀಲಂಕಾ ಮಾಧ್ಯಮ ವರದಿಗಳ ಪ್ರಕಾರ, ಐಪಿಎಲ್​ನಲ್ಲಿ ಆಡಲು ಎನ್‌ಒಸಿ ನೀಡದ ಶ್ರೀಲಂಕಾ ಕ್ರಿಕೆಟ್ ಮಂಡಳಿಯ ವಿರುದ್ಧ ನುವಾನ್ ತುಷಾರ ಮೊಕದ್ದಮೆ ಹೂಡಿದ್ದಾರೆ. ಮೇಲೆ ಹೇಳಿದಂತೆ ಶ್ರೀಲಂಕಾ ಕ್ರಿಕೆಟ್ ಮಂಡಳಿ ನಡೆಸಿದ ಫಿಟ್‌ನೆಸ್ ಪರೀಕ್ಷೆಯಲ್ಲಿ ನುವಾನ್ ತುಷಾರ ಪಾಸಾಗಿಲ್ಲ. ಹೀಗಾಗಿ ಅವರನ್ನು ಐಪಿಎಲ್‌ನಲ್ಲಿ ಆಡದಂತೆ ನಿಷೇಧಿಸಲಾಗಿದೆ. ಫಿಟ್‌ನೆಸ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ಆಟಗಾರರಿಗೆ ಮಾತ್ರ ವಿದೇಶಿ ಲೀಗ್‌ಗಳಲ್ಲಿ ಆಡಬಹುದು ಎಂಬ ಶ್ರೀಲಂಕಾ ಮಂಡಳಿಯ ನಿಯಮ ನುವಾನ್ ತುಷಾರಗೆ ಮುಳುವಾಗಿದೆ.

ಆರ್‌ಸಿಬಿ ತಂಡದಲಿರುವ ತುಷಾರ

ನುವಾನ್ ತುಷಾರ ಅವರನ್ನು ಕಳೆದ ವರ್ಷ ಆರ್‌ಸಿಬಿ 1.6 ಕೋಟಿಗೆ ಖರೀದಿಸಿದೆ. ಆದಾಗ್ಯೂ ತುಷಾರ ಇದುವರೆಗೂ ಆರ್​​ಸಿಬಿ ತಂಡವನ್ನು ಸೇರದೆ ಇನ್ನೂ ಶ್ರೀಲಂಕಾದಲ್ಲಿದ್ದಾರೆ. ಐಪಿಎಲ್​ನಲ್ಲಿ ಆಡಲು ನಾನಾ ಕಸರತ್ತುಗಳನ್ನು ಮಾಡುತ್ತಿರುವ ನುವಾನ್ ತುಷಾರ ಈಗ ಶ್ರೀಲಂಕಾ ಕ್ರಿಕೆಟ್ ಮಂಡಳಿಯ ವಿರುದ್ಧವೇ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದು, ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಮಂಡಳಿಯೊಂದಿಗಿನ ನನ್ನ ಕೇಂದ್ರ ಒಪ್ಪಂದ ಮಾರ್ಚ್ 31 ರಂದೇ ಮುಕ್ತಾಯಗೊಂಡಿದೆ. ಅಲ್ಲದೆ ನೂತನ ಕೇಂದ್ರ ಒಪ್ಪಂದದಲ್ಲಿ ನನ್ನ ಹೆಸರನ್ನು ಪರಿಗಣಿಸದಂತೆ ನಾನು ಮಂಡಳಿಗೆ ಮನವಿ ಮಾಡಿದ್ದೇನೆ. ಹೀಗಿದ್ದರೂ ಫಿಟ್ನೆಸ್ ಸಮಸ್ಯೆಗಳನ್ನು ಉಲ್ಲೇಖಿಸಿ ಶ್ರೀಲಂಕಾ ಕ್ರಿಕೆಟ್ ಮಂಡಳಿಯು ನನಗೆ NOC ನೀಡುತ್ತಿಲ್ಲ. ಈ ನಿರ್ಧಾರದಿಂದ ನನಗೆ 1.6 ಕೋಟಿ ನಷ್ಟವಾಗುತ್ತಿದೆ ಎಂದು ತುಷಾರ ಮಂಡಳಿ ವಿರುದ್ಧ ಆರೋಪ ಹೊರಿಸಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸುದೀಪ್ ಆತ್ಮಹತ್ಯೆ ಪ್ರಕರಣ: ಪತಿ ಸಾವಿಗೆ ಕಾರಣ ಬಿಚ್ಚಿಟ್ಟ ಉದ್ಯಮಿ ಪತ್ನಿ ಸೌಮ್ಯಾ

ಉಡುಪಿ, ಏಪ್ರಿಲ್​​ 02: ಮದುವೆಯಾದ ಒಂದೇ ತಿಂಗಳಿಗೆ ಪುತ್ತೂರು ತಾಲೂಕಿನ ನೆಲ್ಯಾಡಿ ನಿವಾಸಿ, ಉದ್ಯಮಿ ಸುದೀಪ್ ರೈ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉಡುಪಿಯ ಕಾರ್ಕಳದಲ್ಲಿ ನಡೆದಿತ್ತು. ಮಗನ ಸಾವಿಗೆ ಆತನ ಪತ್ನಿ ಸೌಮ್ಯಾ ಶೆಟ್ಟಿಯೇ ಕಾರಣ ಎಂಬ ಗಂಭೀರ ಆರೋಪವನ್ನು ಸುದೀಪ್​​ ಪೋಷಕರು ಮಾಡಿದ್ದರು. ಆದರೀಗ ತನ್ನ ಮೇಲಿನ ಆರೋಪಗಳಿಗೆ ಸ್ವತಃ ಸೌಮ್ಯಾ ಶೆಟ್ಟಿಯೇ ಪ್ರತಿಕ್ರಿಯೆ ನೀಡಿದ್ದಾರೆ. ಸುದೀಪ್​​ ಹೆತ್ತವರ ಆರೋಪ ಅಲ್ಲಗಳೆದಿರುವ ಈಕೆ, ಪತಿಯ ಸಾವಿಗೆ ತಾನು ಕಾರಣಳಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಸುದೀಪ್​​ ಪೋಷಕರು ಹೇಳುವಂತೆ ನೆಲ್ಯಾಡಿಯಲ್ಲಿ ನಾನು ರಂಪಾಟ ಮಾಡಿಲ್ಲ. ವಿಷಯ ಹಾಕಿ ಸುದೀಪ್​​ರನ್ನು ಕೊಂದಿಲ್ಲ. ಬದಲಾಗಿ ಮನೆಯವರ ಕಿರುಕುಳದಿಂದಲೇ ಸುದೀಪ್ ಆತ್ಮಹತ್ಯೆ ಮಾಡಿಕೊಂಡಿರಬಹುದು. ಸುದೀಪ್​​ ಮೊಬೈಲ್​​ ಸಂಪರ್ಕಕ್ಕೆ ಸಿಗದ ಕಾರಣ ಆತಂಕಗೊಂಡು ತಾನು ನೆಲ್ಯಾಡಿಗೆ ತೆರಳಿದ್ದೆ. ಅವರು ಹೇಳುವಂತೆ ತಾನು ಯಾವುದೇ ರಂಪಾಟ ನಡೆಸಿಲ್ಲ. ಬೇಕಿದ್ದರೆ ಸಿಸಿ ಕ್ಯಾಮರಾ ದೃಶ್ಯಾವಳಿಗಳ ಪರಿಶೀಲನೆ ಮಾಡಿ. ಸುದೀಪ್​​ ತಾಯಿ ನನಗೆ ಕೆಟ್ಟ ಭಾಷೆಯಲ್ಲಿ ಬೈದ ಕಾರಣ ಆ ವೇಳೆ ತಾನು ಕಿರುಚಾಡಿದ್ದು ನಿಜ. ನಮ್ಮ ಮನೆಯಲ್ಲಿಯೇ ಇದ್ದ ಸುದೀಪ್​​ ಮಾರ್ಚ್​​ 16ರಂದು ನೆಲ್ಯಾಡಿಗೆ ತೆರಳಿದ್ದರು. ತಂದೆಯ ಮನೆಗೆ ಹೋದ ನಂತರ ನನಗೆ ಸಮಸ್ಯೆ ಆಗಿದೆ. ನನ್ನ ಮನೆಯಲ್ಲಿ ಮದುವೆಗೆ ಒಪ್ಪುತ್ತಿಲ್ಲ ಎಂದಿದ್ದರು. ಒಂದು ವೇಳೆ ಅವರು ಒಪ್ಪದಿದ್ದರೆ ನಿಮ್ಮ ಮನೆಯಲ್ಲಿ ಒಪ್ಪುತ್ತಾರಲ್ಲ ಎಂದು ಕೇಳಿದ್ದರು. ತಂದೆಯ ಮನೆಗೆ ಹೋಗಿ ಬಂದ ನಂತರ ಆತ್ಮಹತ್ಯೆ ನಿರ್ಧಾರ ಮಾಡಿದ್ದಾರೆ. ಹೀಗಾಗಿ ಅವರ ಮನೆಯವರೇ ಆತ್ಮಹತ್ಯೆಗೆ ಪ್ರಚೋದನೆ ನೀಡಿರಬೇಕು ಎಂದು ಸೌಮ್ಯಾ ಆರೋಪಿಸಿದ್ದಾರೆ.

ಇದನ್ನೂ ಓದಿ: 3 ಮದುವೆ, ಸಾಕಷ್ಟು ಅಫೇರ್; ಮೇಕಪ್ ಆರ್ಟಿಸ್ಟ್​​ ನವರಂಗಿ ಆಟಕ್ಕೆ ಉದ್ಯಮಿಯ ಬಲಿ?

ವೇಣು ಶೆಟ್ಟಿ ಆರೋಪಗಳಿಗೂ ಉತ್ತರಿಸಿರುವ ಸೌಮ್ಯಾ, ನಾವಿಬ್ಬರೂ ರಂಗಭೂಮಿ ಕಲಾವಿದರು. ನನಗೆ ಆತನ ಪರಿಚಯ ಇರಲಲಿಲ್ಲ. ಆದರೆ ಅವನಿಗೆ ನನ್ನ ಪರಿಚಯ ಇತ್ತಂತೆ. ಈ ಹಿಂದೆ ನನಗೆ ಪ್ರಪೋಸಲ್ ಬಂದಿತ್ತು. ಆ ವೇಳೆ ನನಗೆ ಅನೇಕ ಮಂದಿ ಆತನ ಬಗ್ಗೆ ಮಾಹಿತಿ ನೀಡಿದ್ದು, ಹಲವು ಮಹಿಳೆಯರ ಜೊತೆ ಅವನಿಗೆ ಸಂಬಂಧ ಇತ್ತು ಎಂಬುದು ಗೊತ್ತಾಗಿತ್ತು. ಹೀಗಾಗಿ ಆ ಸಂಬಂಧ ಬಿಟ್ಟಿದ್ದೆ. ನಮ್ಮ ಮನೆಗೂ ಆತ ಬಂದು ಹೋಗುತ್ತಿದ್ದ. ನಂತರ ಮನೆಗೆ ಬರಬೇಡ ಎಂದಿದ್ದೆವು. ಆತನೇ ಸುದೀಪ್​​ ಮ ನೆಯವರ ತಲೆ ಕೆಡಿಸಿದ್ದು, ಈ ಬಗ್ಗೆ ಪತಿಯೇ ತನಗೆ ತಿಳಿಸಿದ್ದರು. ಸುದೀಪ್ ತಂದೆಗೆ ವೇಣುಗೋಪಾಲ್ ಕಡೆಯಿಂದ ಅನೇಕ ಬಾರಿ ಕರೆ ಹೋಗಿವೆ. ಹೀಗಾಗಿ ಆತ ಕೂಡ ತನ್ನ ಪತಿಯ ಆತ್ಮಹತ್ಯೆಗೆ ಕಾರಣ. ಹೀಗಾಗಿ ತನ್ನ ಮೇಲೆ ಇಲ್ಲಸಲ್ಲದ ಆರೋಪ ಮಾಡಿದವರ ವಿರುದ್ಧ ದೂರು ನೀಡಿದ್ದೇನೆ. ಕಾರ್ಕಳ ಠಾಣೆಯಲ್ಲಿ ಸುದೀಪ್ ಮನೆಯವರು ಹಾಗೂ ವೇಣುಶೆಟ್ಟಿ ವಿರುದ್ಧ ದೂರು ದಾಖಲಿಸಿದ್ದೇನೆ ಎಂದು ಸೌಮ್ಯಾ ತಿಳಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಹೈದರಾಬಾದ್‌ನಲ್ಲಿ ಸೊಳ್ಳೆ ಪರದೆ ಧರಿಸಿ ಪ್ರತಿಭಟನೆ ನಡೆಸಿದ ಬಿಆರ್‌ಎಸ್ ಶಾಸಕ

ಹೈದರಾಬಾದ್, ಏಪ್ರಿಲ್ 2: ಭಾರತ ರಾಷ್ಟ್ರ ಸಮಿತಿ (ಬಿಆರ್‌ಎಸ್) ಶಾಸಕ ಸುಧೀರ್ ರೆಡ್ಡಿ ಇಂದು ಹೈದರಾಬಾದ್​ನ (Hyderabad) ವಿಧಾನಸಭೆ ಆವರಣದಲ್ಲಿ ನಡೆದ ಪತ್ರಿಕಾಗೋಷ್ಠಿಗೆ ಸೊಳ್ಳೆ ಪರದೆ ಧರಿಸಿಕೊಂಡು, ಫಾಗಿಂಗ್ ಯಂತ್ರವನ್ನು ಹಿಡಿದುಕೊಂಡು ಆಗಮಿಸಿದ್ದಾರೆ. ಹೈದರಾಬಾದ್ ನಗರದಲ್ಲಿ ವ್ಯಾಪಕವಾಗಿ ಹರಡುತ್ತಿರುವ ಸೊಳ್ಳೆ ಸಮಸ್ಯೆಯ ವಿರುದ್ಧ ಅವರು ಈ ವಿನೂತನ ಪ್ರತಿಭಟನೆ ನಡೆಸಿದ್ದಾರೆ. ಮೊದಲು ಮಾಧ್ಯಮ ಕೇಂದ್ರಕ್ಕೆ ಸೊಳ್ಳೆ ಪರದೆ ಮತ್ತು ಫಾಗಿಂಗ್ ಯಂತ್ರವನ್ನು ಕೊಂಡೊಯ್ಯಲು ಪ್ರಯತ್ನಿಸಿದಾಗ ಸುಧೀರ್ ರೆಡ್ಡಿ ಅವರಿಗೆ ವಿಧಾನಸಭೆ ಸಿಬ್ಬಂದಿ ಅನುಮತಿ ನಿರಾಕರಿಸಿದರು. ಭದ್ರತಾ ಸಿಬ್ಬಂದಿಯ ಈ ವರ್ತನೆಯ ಬಗ್ಗೆ ಶಾಸಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕ ಸುಧೀರ್ ರೆಡ್ಡಿ, ಸೊಳ್ಳೆ ಸಮಸ್ಯೆಯ ತೀವ್ರತೆಯಿಂದಾಗಿ ಜನರು ಹೈದರಾಬಾದ್‌ನಿಂದ ಪಲಾಯನ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ. ಈ ಪರಿಸ್ಥಿತಿಯು ನಗರದ ಬ್ರಾಂಡ್ ಇಮೇಜ್‌ಗೆ ಹಾನಿ ಮಾಡುತ್ತಿದೆ ಎಂದ ಅವರು ಸೊಳ್ಳೆಗಳ ಕಾಟದಿಂದ ಸಾರ್ವಜನಿಕರನ್ನು ರಕ್ಷಿಸುವಂತೆ ಸರ್ಕಾರವನ್ನು ಒತ್ತಾಯಿಸಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕಮರ್ಷಿಯಲ್ ಬ್ಯಾಂಕ್​ಗಳ ಎಫ್​ಡಿಗಿಂತಲೂ ಹೆಚ್ಚು ರಿಟರ್ನ್ಸ್ ಕೊಡುತ್ತೆ ಈ ಪೋಸ್ಟ್ ಆಫೀಸ್ ಡೆಪಾಸಿಟ್

ಇವತ್ತಿನ ಷೇರು ಮಾರುಕಟ್ಟೆ ಅಲುಗಾಟದಲ್ಲಿ ನಿಶ್ಚಿತ ಠೇವಣಿಗಳು ಹೆಚ್ಚು ಸುರಕ್ಷಿತ, ಹೆಚ್ಚು ಉಪಯುಕ್ತ ಎನಿಸಿವೆ. ಎಫ್​ಡಿಗಳನ್ನು ಇಡಲು ಬ್ಯಾಂಕ್​ಗಳಲ್ಲಿ ವಿವಿಧ ಪ್ಲಾನ್​ಗಳಿವೆ. ಸಹಕಾರಿ ಬ್ಯಾಂಕುಗಳು, ಎನ್​ಬಿಎಫ್​ಸಿಗಳು ಕೂಡ ಫಿಕ್ಸೆಡ್ ಡೆಪಾಸಿಟ್ (Fixed Deposit) ಸ್ಕೀಮ್ಸ್ ಹೊಂದಿವೆ. ಪೋಸ್ಟ್ ಆಫೀಸ್​ಗಳಲ್ಲೂ (Post Office) ಫಿಕ್ಸೆಡ್ ಡೆಪಾಸಿಟ್ ರೀತಿಯ ಟೈಮ್ ಡೆಪಾಸಿಟ್ ಪ್ಲಾನ್​ಗಳಿವೆ. ನಿಶ್ಚಿತ ಠೇವಣಿಯಲ್ಲಿ ಹೂಡಿಕೆ ಮಾಡಲು ಬಯಸುವ ಮಂದಿಗೆ ಈ ನಾನಾ ಆಯ್ಕೆಗಳಿವೆ. ಆದರೆ, ಯಾವುದು ಉತ್ತಮ?

ಬ್ಯಾಂಕ್ ಎಫ್​ಡಿಗಿಂತ ಪೋಸ್ಟ್ ಆಫೀಸ್​ನಲ್ಲಿ ಹೆಚ್ಚು ಬಡ್ಡಿ

ಪ್ರಮುಖ ಕಮರ್ಷಿಯಲ್ ಬ್ಯಾಂಕುಗಳಾದ ಎಸ್​ಬಿಐ, ಎಚ್​ಡಿಎಫ್​ಸಿ, ಐಸಿಐಸಿಐ, ಬ್ಯಾಂಕ್ ಆಫ್ ಬರೋಡಾ ಇತ್ಯಾದಿ ಕಡೆ 7 ದಿನದಿಂದ ಹಿಡಿದು 10 ವರ್ಷದವರೆಗೆ ವಿವಿಧ ಅವಧಿಗೆ ಫಿಕ್ಸೆಡ್ ಡೆಪಾಸಿಟ್​ಗಳನ್ನು ಆಫರ್ ಮಾಡಲಾಗುತ್ತದೆ.

ಇದನ್ನೂ ಓದಿ: April 2026 Rules Changes: ಡಿಜಿಟಲ್ ಪಾವತಿ, ಪ್ಯಾನ್ ಇತ್ಯಾದಿ ನಿಯಮಗಳಲ್ಲಿ ಬದಲಾವಣೆ; ಆರ್‌ಬಿಐಯಿಂದ ಹೊಸ ಗೈಡ್‌ಲೈನ್ಸ್ ತಿಳಿದಿರಿ

ಪೋಸ್ಟ್ ಆಫೀಸ್​ನಲ್ಲಿ ಫಿಕ್ಸೆಡ್ ಡೆಪಾಸಿಟ್​ಗೆ 4 ಆಯ್ಕೆಗಳಿವೆ. 1 ವರ್ಷ, 2, 3 ಮತ್ತು 5 ವರ್ಷದ ಟೈಮ್ ಡೆಪಾಸಿಟ್ ಪ್ಲಾನ್​ಗಳಿವೆ. 1 ವರ್ಷದ ಟಿಡಿಗೆ ಶೇ. 6.9 ಬಡ್ಡಿ ಇದೆ. 2 ವರ್ಷ, 3 ವರ್ಷ ಮತ್ತು 5 ವರ್ಷದ ಟೈಮ್ ಡೆಪಾಸಿಟ್​ಗಳಿಗೆ ಕ್ರಮವಾಗಿ ಶೇ. 7, ಶೇ. 7.1 ಮತ್ತು ಶೇ. 7.5 ಬಡ್ಡಿ ಸಿಗುತ್ತದೆ.

ಬ್ಯಾಂಕ್ ಎಫ್​ಡಿ ದರಗಳನ್ನು ಹೋಲಿಕೆ ಮಾಡಲು 1 ವರ್ಷದ ಮತ್ತು 5 ವರ್ಷದ ಪ್ಲಾನ್​ಗಳನ್ನು ಪರಿಗಣಿಸಬಹುದು. ಪೋಸ್ಟ್ ಆಫೀಸ್​ನಲ್ಲಿ 1 ವರ್ಷದ ಟೈಮ್ ಡೆಪಾಸಿಟ್​ಗೆ ಶೇ. 6.9 ಬಡ್ಡಿ ಸಿಗುತ್ತದೆ. ಉಳಿದ ಕಮರ್ಷಿಯಲ್ ಬ್ಯಾಂಕುಗಳಲ್ಲಿ ಶೇ. 6.25 ಬಡ್ಡಿ ಇದೆ. 5 ವರ್ಷದ ಎಫ್​ಡಿಗೆ ಶೇ. 6.05ರಿಂದ ಶೇ. 6.50ರವರೆಗೆ ಬಡ್ಡಿ ಆಫರ್ ಮಾಡಲಾಗುತ್ತಿದೆ. ಆದರೆ, ಪೋಸ್ಟ್ ಆಫೀಸ್​ನಲ್ಲಿ 5 ವರ್ಷದ ಟಿಡಿಗೆ ಶೇ. 7.5 ಬಡ್ಡಿ ಕೊಡಲಾಗುತ್ತದೆ.

ಸಹಕಾರಿ ಬ್ಯಾಂಕು ಮತ್ತು ಎನ್​ಬಿಎಫ್​ಸಿಗಳಲ್ಲಿ ಫಿಕ್ಸೆಡ್ ಡೆಪಾಸಿಟ್​ಗಳಿಗೆ ಕಮರ್ಷಿಯಲ್ ಬ್ಯಾಂಕುಗಳಿಗಿಂತ ಹೆಚ್ಚಿನ ಬಡ್ಡಿ ನೀಡಲಾಗುತ್ತದೆಯಾದರೂ ರಿಸ್ಕ್ ಹೆಚ್ಚು. ಒಟ್ಟಾರೆ ಬ್ಯಾಂಕುಗಳಲ್ಲಿ ದೊಡ್ಡ ಮೊತ್ತಕ್ಕೆ (5 ಲಕ್ಷ ರೂ ಮೇಲ್ಪಟ್ಟ) ಇನ್ಷೂರೆನ್ಸ್ ಕವರೇಜ್ ಇರುವುದಿಲ್ಲ ಎನ್ನುವುದು ಗಮನಿಸಬೇಕಾದ ಸಂಗತಿ.

ಇದನ್ನೂ ಓದಿ: ವಿವಿಧ ಪೋಸ್ಟ್ ಆಫೀಸ್ ಸ್ಕೀಮ್ಸ್; ಏಪ್ರಿಲ್-ಜೂನ್ ಕ್ವಾರ್ಟರ್​ಗೆ ಬಡ್ಡಿದರ ಘೋಷಣೆ; ಇಲ್ಲಿದೆ ಪಟ್ಟಿ

ಪೋಸ್ಟ್ ಆಫೀಸ್​ನಲ್ಲಿ ಸಂಪೂರ್ಣ ಮೊತ್ತಕ್ಕೆ ಸರ್ಕಾರದ ಖಾತ್ರಿ ಇರುತ್ತದೆ. ಹೀಗಾಗಿ, ಇಲ್ಲಿಯ ಯಾವುದೇ ಹೂಡಿಕೆ ಪೂರ್ಣ ಸುರಕ್ಷಿತ ಮತ್ತು ಹೆಚ್ಚು ಲಾಭದಾಯಕ. ನೀವು 5 ವರ್ಷದ ಟೈಮ್ ಡೆಪಾಸಿಟ್​ನಲ್ಲಿ 10 ಲಕ್ಷ ರೂ ಹೂಡಿಕೆ ಮಾಡಿದರೆ, ನಾಲ್ಕೂವರೆ ಲಕ್ಷ ರೂನಷ್ಟು ಬಡ್ಡಿಯೇ ಪ್ರಾಪ್ತವಾಗಿರುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಹೋಟೆಲ್​ ಮಾಲೀಕನಿಂದಲೇ ಕಾರ್ಮಿಕನ ಹತ್ಯೆ: ಕೊಲೆ ಮಾಡುವಷ್ಟು ಆಗಿದ್ದೇನು?

ಶಿವಮೊಗ್ಗ, ಏಪ್ರಿಲ್​​ 02: ಹಣಕಾಸಿನ ವಿಚಾರಕ್ಕೆ ಹೋಟೆಲ್​ ಮಾಲೀಕನಿಂದಲೇ ಕಾರ್ಮಿಕನ ಹತ್ಯೆ (kill) ಮಾಡಿರುವಂತಹ ಘಟನೆ ಜಿಲ್ಲೆಯ ಸಾಗರ ಪಟ್ಟಣದ ಶಿವಮೊಗ್ಗ ರಸ್ತೆಯಲ್ಲಿರುವ ರೂಫ್ ಟಾಪ್ ಕೆಫೆಯಲ್ಲಿ ನಡೆದಿದೆ. ಮಾಲೀಕ ಇಮ್ರಾನ್​​ನಿಂದ ಟಿಂಕು ಶರ್ಮಾ(30)ನ ಕೊಲೆ ಮಾಡಲಾಗಿದೆ. ಸದ್ಯ ಸಾಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಇಮ್ರಾನ್​ನನ್ನು ವಶಕ್ಕೆ ಪಡೆದಿದ್ದಾರೆ.

ನಡೆದಿದ್ದೇನು?

ಸಾಗರ ಪಟ್ಟಣದ ಶಿವಮೊಗ್ಗ ರಸ್ತೆಯಲ್ಲಿರುವ ರೂಫ್ ಟಾಪ್ ಕೆಫೆಯಲ್ಲಿ ಬಿಹಾರ ಮೂಲದ ಟಿಂಕು ಶರ್ಮಾ ಕೆಲಸ ಮಾಡುತ್ತಿದ್ದ. ಹಣಕಾಸಿನ ವಿಚಾರಕ್ಕೆ ಮಾಲೀಕ ಇಮ್ರಾನ್ ಮತ್ತು ಟಿಂಕು ನಡುವೆ ಗಲಾಟೆ ಉಂಟಾಗಿದೆ.

ಇದನ್ನೂ ಓದಿ: ಪ್ರಾಧ್ಯಾಪಕನ ಜತೆ ಸಂಬಂಧ ಕಲ್ಪಿಸಿ ಅಪಪ್ರಚಾರ: ಆತ್ಮಹತ್ಯೆಗೂ ಮುನ್ನ ವಿದ್ಯಾರ್ಥಿನಿ ಬರೆದ ಡೆತ್​​ನೋಟ್​​ನಲ್ಲಿ ಸ್ಫೋಟಕ ಮಾಹಿತಿ

ಗುರುವಾರ ಬೆಳಗ್ಗೆ ಕೂಡ ಇದೇ ವಿಷಯಕ್ಕೆ ಸಂಬಂಧಿಸಿದಂತೆ ಇಬ್ಬರ ನಡುವೆ ವಾಗ್ವಾದ ನಡೆದಿದೆ. ಈ ವೇಳೆ ಹಲ್ಲೆ ನಡೆಸಿ ಟಿಂಕು ಶರ್ಮಾನನ್ನು ಇಮ್ರಾನ್ ಕೊಲೆಗೈದಿದ್ದಾರೆ. ಹೋಂಡಾ ಸಿಟಿ ಕಾರಿನಲ್ಲಿ ಶವ ಪತ್ತೆಯಾಗಿದೆ. ಇಮ್ರಾನ್ ಕಾರ್ಮಿಕನ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಶಿವಮೊಗ್ಗ ಎಸ್​​ಪಿ ನಿಖಿಲ್ ಪ್ರಾಥಮಿಕ ಮಾಹಿತಿ ನೀಡಿದ್ದಾರೆ.

ತಡರಾತ್ರಿ ಮಲಗಿದ್ದ ವೇಳೆ ಕಾಲಿಗೆ ಹಾವು ಕಡಿದು ಮಹಿಳೆ ಸಾವು

ತಡರಾತ್ರಿ ಮಲಗಿದ್ದ ವೇಳೆ ಕಾಲಿಗೆ ಹಾವು ಕಡಿದು ಮಹಿಳೆ ಸಾವನ್ನಪ್ಪಿರುವಂತಹ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ 9ನೇ ಮೈಲಿಕಲ್ ಗ್ರಾಮದಲ್ಲಿ ನಡೆದಿದೆ. ಛತ್ತೀಷ್​ಘಡ ಮೂಲದ ಜಾಲ್​ ಬಾಯಿ ಸಿಧಾರ್(42) ಮೃತ ಕಾರ್ಮಿಕ ಮಹಿಳೆ.

ಇದನ್ನೂ ಓದಿ: ಬೆಂಗಳೂರಿನಲ್ಲೊಂದು ಹೃದಯವಿದ್ರಾವಕ ಘಟನೆ: ಬಕೆಟ್ ನೀರಿನಲ್ಲಿ ಮುಳುಗಿ ಮಗು ಸಾವು, ಬೇಸರದಿಂದ ತಾಯಿ ಆತ್ಮಹತ್ಯೆ

ಕಳೆದ ಕೆಲ ದಿನಗಳಿಂದ ಎಕೆಸಿ ಸಿಮೆಂಟ್​ ಇಟ್ಟಿಗೆ ಫ್ಯಾಕ್ಟರಿಯಲ್ಲಿ ಜಾಲ್​ ಬಾಯಿ ಕುಟುಂಬ ಕೆಲಸಕ್ಕಿತ್ತು. ಮಲಗಿದ್ದ ವೇಳೆ ತಡರಾತ್ರಿ ಜಾಲ್​ ಬಾಯಿಗೆ ಹಾವು ಕಡಿದಿದೆ. ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಸಿಂಗಟಗೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Apply Now: ಕರ್ನಾಟಕ ಆರ್‌ಡಿಪಿಆರ್​​ನಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ; ಮಾಸಿಕ 45,000 ರೂ. ವೇತನ

ಕರ್ನಾಟಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು (RDPR) 2026ನೇ ಸಾಲಿನ ಅಧಿಕೃತ ಅಧಿಸೂಚನೆಯನ್ನು ಹೊರಡಿಸಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಖಾಲಿ ಇರುವ ‘ಓಂಬುಡ್ಸ್‌ಮನ್’ (Ombudsman) ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಕರ್ನಾಟಕ ಸರ್ಕಾರದಲ್ಲಿ ಸಾರ್ವಜನಿಕ ಸೇವೆಯ ವೃತ್ತಿಜೀವನವನ್ನು ಬಯಸುವ ಪದವೀಧರರಿಗೆ ಇದೊಂದು ಉತ್ತಮ ಅವಕಾಶವಾಗಿದೆ.

ಅರ್ಹತೆ ಮತ್ತು ವೇತನ ಶ್ರೇಣಿ:

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ (Degree) ಪೂರ್ಣಗೊಳಿಸಿರಬೇಕು. ವಯೋಮಿತಿಯ ವಿಷಯಕ್ಕೆ ಬಂದರೆ, ಮಾರ್ಚ್ 1, 2026 ರ ಅನ್ವಯ ಅಭ್ಯರ್ಥಿಯ ಗರಿಷ್ಠ ವಯಸ್ಸು 66 ವರ್ಷಗಳ ಒಳಗೆ ಇರಬೇಕು. ಆಯ್ಕೆಯಾದ ಅಭ್ಯರ್ಥಿಗಳಿಗೆ ಅವರ ಅನುಭವ ಮತ್ತು ಇಲಾಖೆಯ ಮಾನದಂಡಗಳ ಆಧಾರದ ಮೇಲೆ ಮಾಸಿಕ 10,000 ರೂ.ಗಳಿಂದ 45,000 ರೂ.ಗಳವರೆಗೆ ವೇತನ ನೀಡಲಾಗುವುದು.

ಇದನ್ನೂ ಓದಿ: ವಿಮಾನ ನಿಲ್ದಾಣದಲ್ಲಿ ಉದ್ಯೋಗ ಪಡೆಯುವುದು ಹೇಗೆ? ಅರ್ಹತೆ ಮತ್ತು ಆಯ್ಕೆ ಪ್ರಕ್ರಿಯೆಯ ಸಂಪೂರ್ಣ ಮಾಹಿತಿ ಇಲ್ಲಿದೆ

ಅರ್ಜಿ ಸಲ್ಲಿಸುವ ವಿಧಾನ:

ಅರ್ಹ ಅಭ್ಯರ್ಥಿಗಳು ಆಫ್‌ಲೈನ್ (Offline) ಮೂಲಕ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದೆ. ಆಸಕ್ತರು ಮೊದಲು ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ ತಮ್ಮ ಅರ್ಹತೆಯನ್ನು ಖಚಿತಪಡಿಸಿಕೊಳ್ಳಬೇಕು. ನಂತರ ನಿಗದಿತ ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಿ, ಅಗತ್ಯವಿರುವ ಎಲ್ಲಾ ಮಾಹಿತಿಗಳನ್ನು ಭರ್ತಿ ಮಾಡಬೇಕು. ಅರ್ಜಿಯ ಜೊತೆಗೆ ಶೈಕ್ಷಣಿಕ ದಾಖಲೆಗಳು, ವಯಸ್ಸಿನ ಪುರಾವೆ, ಅನುಭವದ ಪತ್ರ (ಇದ್ದಲ್ಲಿ) ಮತ್ತು ಇತ್ತೀಚಿನ ಭಾವಚಿತ್ರದಂತಹ ಸ್ವಯಂ-ದೃಢೀಕರಿಸಿದ ದಾಖಲೆಗಳನ್ನು ಲಗತ್ತಿಸುವುದು ಕಡ್ಡಾಯವಾಗಿದೆ.

ತಲುಪಿಸಬೇಕಾದ ವಿಳಾಸ ಮತ್ತು ಅಂತಿಮ ದಿನಾಂಕ:

ಭರ್ತಿ ಮಾಡಿದ ಅರ್ಜಿಯನ್ನು ಈ ಕೆಳಗಿನ ವಿಳಾಸಕ್ಕೆ ರಿಜಿಸ್ಟರ್ ಪೋಸ್ಟ್ ಅಥವಾ ಸ್ಪೀಡ್ ಪೋಸ್ಟ್ ಮೂಲಕ ಕಳುಹಿಸಬೇಕು:

ವಿಳಾಸ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, 5ನೇ ಮಹಡಿ, ಪ್ಲಾಟ್ ಸಂಖ್ಯೆ: 1234, ಕೆಎಸ್‌ಐಐಡಿಸಿ ಕಟ್ಟಡ, ಐಟಿ ಪಾರ್ಕ್ ಸೌತ್ ಬ್ಲಾಕ್, ರಾಜಾಜಿನಗರ ಕೈಗಾರಿಕಾ ಎಸ್ಟೇಟ್, ಬೆಂಗಳೂರು – 560010.

ಉದ್ಯೋಗಕ್ಕೆ ಸಂಬಂಧಿಸಿದ ಮತ್ತಷ್ಟು  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Source link

Video: ಕೈಗಳಿಲ್ಲದಿದ್ದರೂ ಮಗನಿಗೆ ಬಾಯಿಂದಲೇ ತುತ್ತು ನೀಡಿದ ತಾಯಿ, ವೈರಲ್‌ ಆಯ್ತು ದೃಶ್ಯ

ಕಣ್ಣಿಗೆ ಕಾಣುವ ದೇವರು ಎಂದರೆ ತಾಯಿ (mother). ಆಕೆಯ ನಿಷ್ಕಲ್ಮಶ ಪ್ರೀತಿ, ಕಾಳಜಿಗೆ ಬೆಲೆ ಕಟ್ಟಲು ಆಗದು. ತನ್ನ ಮಕ್ಕಳಿಗಾಗಿ ಇಡೀ ಜಗತ್ತನ್ನೇ ಎದುರು ಹಾಕಿಕೊಳ್ಳುತ್ತಾಳೆ. ತನ್ನ ನೋವು, ಕಷ್ಟಗಳನ್ನು ಬದಿಗಿರಿಸಿ ಅವರಿಗಾಗಿ ದುಡಿಯುತ್ತಾಳೆ. ಆದರೆ ಇಲ್ಲೊಬ್ಬ ತಾಯಿಯ ದೈಹಿಕ ಕೊರತೆಯೂ ಆಕೆಗೆ ತನ್ನ ಕಂದನ ಮೇಲಿನ ಪ್ರೀತಿ, ಕಾಳಜಿಯನ್ನು ಕಸಿದು ಕೊಂಡಿಲ್ಲ. ಕೈಗಳಿಲ್ಲದಿದ್ದರೂ ಪಕ್ಷಿಯಂತೆ ಬಾಯಿಂದಲೇ ತುತ್ತು ನೀಡಿದ್ದಾಳೆ. ಮಗನ ಮೇಲೆ ತಾಯಿ ಪ್ರೀತಿ ತೋರ್ಪಡಿಸಿದ ರೀತಿ ನೆಟ್ಟಿಗರ ಕಣ್ಣನ್ನು ಒದ್ದೆಯಾಗಿಸಿದೆ.

Whatsinthenews ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ಕ್ಲಿಪಿಂಗ್ ನಲ್ಲಿ ತಾಯಿ ಕಾಳಜಿಯನ್ನು ಕಾಣಬಹುದು. ತಾಯಿಯೊಬ್ಬಳು  ಕೈಗಳಿಲ್ಲದಿದ್ದರೂ ಬಾಯಿಂದ ಮಗನಿಗೆ ತುತ್ತು ನೀಡುತ್ತಿರುವ ದೃಶ್ಯವನ್ನು ಕಾಣಬಹುದು.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ಸ್ನಾನ ಮಾಡಿಸ್ತೀನಿ ಅಂದದ್ದಕ್ಕೆ ಅಮ್ಮನಿಗೆ ವಾರ್ನಿಂಗ್ ಕೊಟ್ಟ ಪುಟಾಣಿ

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ ದೇವರಿಗೆ ಯಾವುದನ್ನು ಕೊಡಬೇಕು ಕೊಡಬಾರದೆನ್ನುವುದು ಚೆನ್ನಾಗಿ ಗೊತ್ತು ಎಂದು ಹೇಳಿದ್ದಾರೆ. ಇನ್ನೊಬ್ಬರು, ಕಣ್ಣಲ್ಲಿ ನೀರು ಬಂತು ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ತಾಯಿ ಪ್ರೀತಿ ಕಾಳಜಿ ಯಾವತ್ತೂ ಬದಲಾಗಲ್ಲ ಎಂದಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪ್ರೇಯಸಿಯನ್ನ ಅಜ್ಜನ ಮನೆಗೆ ಕರೆದೊಯ್ದು ಪ್ರಿಯಕರ: ಮುಂದಾಗಿದ್ದು ಘನಘೋರ!

ಚಾಮರಾಜನಗರ, (ಏಪ್ರಿಲ್ 02): ತಮ್ಮ ಮದುವೆಗೆ (marriage) ಪೋಷಕರ ವಿರೋಧ ವ್ಯಕ್ತಪಡಿಸಿದ್ದರಿಂದ ಮನನೊಂದ ಪ್ರೇಮಿಗಳು (Lovers) ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಾಮರಾಜನಗರ (Chamarajnagar) ಜಿಲ್ಲೆಯ ಹನೂರು ತಾಲೂಕಿನ ಪೊನ್ನಾಚಿ ಗ್ರಾಮದಲ್ಲಿ ನಡೆದಿದೆ. ಮನೆಯಲ್ಲಿ ನದಿಯಾ(19), ನಾಗೇಂದ್ರ(21) ಆತ್ಮಹತ್ಯೆ ಮಾಡಿಕೊಂಡ ಪ್ರೇಮಿಗಳು. ಪರಸ್ಪರ ಪ್ರೀತಿಸುತ್ತಿದ್ದ ಈ ಜೋಡಿ ಮನೆಬಿಟ್ಟು ಹೋಗಿತ್ತು. ಹೀಗಾಗಿ ಇತ್ತ ಯುವತಿ ಕಡೆಯವರು ಮಿಸ್ಸಿಂಗ್ ದೂರು ನೀಡಿದ್ದಾರೆ. ಇದರಿದ ಹೆದರಿ ಪ್ರೇಮಿಗಳು ಜತೆಯಲ್ಲೇ ಸಾಯುಲು ನಿರ್ಧರಿಸಿ ನೇಣಿಗೆ ಶರಣಾಗಿದ್ದಾರೆ.

ನಾಗೇಂದ್ರ ಹಾಗೂ ಪಾಲಾರ್ ಗ್ರಾಮದ ನದಿಯಾ ಪರಸ್ಪರ ಪ್ರೀತಿಸುತ್ತಿದ್ದರು. ಹೀಗಾಗಿ
3 ದಿನದ ಹಿಂದೆ ನಾಗೇಂದ್ರ, ನದಿಯಾಳನ್ನು ಕರೆದುಕೊಂಡು ತನ್ನ ಅಜ್ಜನ ಊರು ಪೊನ್ನಾಚಿಗೆ ಕರೆದುಕೊಂಡು ಹೋಗಿದ್ದ. ಇತ್ತ ನದಿಯಾ ಕುಟುಂಬಸ್ಥರು ಆತಂಕಗೊಂಡಿದ್ದು, ಎಲ್ಲೆಡೆ ಹುಡುಕಾರಿದ್ದಾರೆ. ಆದರೂ ಪತ್ತೆಯಾಗಿಲ್ಲ. ಕೊನೆಗೆ ಮಲೆ ಮಹದೇಶ್ವರ ಬೆಟ್ಟ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕೇಶ್ ದಾಖಲಿಸಿದ್ದರು.

ಇದನ್ನೂ ಓದಿ: ನನ್ನ ಸಾವಿಗೆ ಇವರೇ ಕಾರಣ: ಪ್ರಾಧ್ಯಾಪಕರ ಜತೆ ಸಂಬಂಧ ಕಲ್ಪಿಸಿ ಅಪಪ್ರಚಾರ, ಬಿಎಎಂಎಸ್ ವಿದ್ಯಾರ್ಥಿನಿ ಆತ್ಮಹತ್ಯೆ!

ಕೇಸ್ ದಾಖಲಾದ ವಿಚಾರ ನಾಗೇಂದ್ರ ಹಾಗೂ ನದಿಯಾಗೆ ಗೊತ್ತಾಗಿ ಹೆದರಿಕೊಂಡಿದ್ದು, ಒಂದು ವೇಳೆ ಪೊಲೀಸರ ಕೈಗೆ ಸಿಕ್ಕರೆ ಹೇಗೆ ? ಮುಂದೇನು ಎಂದು ಭಯಗೊಡು ಸಾಯುವ ನಿರ್ಧಾರಕ್ಕೆ ಬಂದಿದ್ದು, ಮನೆಯಲ್ಲಿ ಯಾರು ಇಲ್ಲದ ವೇಳೆ ಇಬ್ಬರು ಒಟ್ಟಿಗೆ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಈ ವಿಚಾರ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಮಲೆ ಮಹದೇಶ್ವರಬೆಟ್ಟ ಠಾಣೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು,ಸದ್ಯ ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ಶವಗಳ ಸ್ಥಳಾಂತರ ಮಾಡಲಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version