ಬೇರೆ ಜಾತಿ, ಧರ್ಮದವನನ್ನು ಮದುವೆಯಾದರೆ ಮಗಳಿಗೆ ಅಪ್ಪನ ಆಸ್ತಿಯಲ್ಲಿ ಪಾಲಿಲ್ಲ; ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು – Kannada News | Supreme Court Upholds fathers Will expelling Daughter for Marrying Outside the community

ನವದೆಹಲಿ, ಡಿಸೆಂಬರ್ 19: ಒಂದುವೇಳೆ ಮಗಳು ಅಪ್ಪನ ಇಚ್ಛೆಗೆ ವಿರುದ್ಧವಾಗಿ ಪ್ರೀತಿಸಿ ಮದುವೆಯಾದರೆ ಅಥವಾ ಬೇರೆ ಧರ್ಮದವನನ್ನು ಮದುವೆಯಾದರೆ ಆಕೆಗೆ ಅಪ್ಪನ ಆಸ್ತಿಯಲ್ಲಿ ಪಾಲು ಸಿಗುವುದಿಲ್ಲ. ಸಮುದಾಯದ ಹೊರಗೆ ಮದುವೆಯಾದರೆ ಅಥವಾ ಮಗಳು ಅಪ್ಪನಿಗೆ ನೋವುಂಟಾಗುವಂತೆ ವರ್ತಿಸಿದರೆ ಆ ತಂದೆ ತನ್ನ ಮಗಳನ್ನು ಆಸ್ತಿಯ ವಿಲ್‌ನಿಂದ ಹೊರಗಿಡಬಹುದು. ಇದರಲ್ಲಿ ಸುಪ್ರೀಂ ಕೋರ್ಟ್ (Supreme Court) ಹಸ್ತಕ್ಷೇಪ ಮಾಡುವುದಿಲ್ಲ ಎಂದು ಹೇಳುವ ಮೂಲಕ ಮಹತ್ವದ ಆದೇಶ ನೀಡಿದೆ.

ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಅಶಾನುದ್ದೀನ್ ಅಮಾನುಲ್ಲಾ ಮತ್ತು ಕೆ. ವಿನೋದ್ ಚಂದ್ರನ್ ನೇತೃತ್ವದ ನ್ಯಾಯ ಪೀಠವು ಹೈಕೋರ್ಟ್ ಮತ್ತು ವಿಚಾರಣಾ ನ್ಯಾಯಾಲಯವು ಶೈಲಾ ಜೋಸೆಫ್‌ಗೆ ಅವರ ತಂದೆ ಎನ್.ಎಸ್. ಶ್ರೀಧರನ್ ಅವರ ಆಸ್ತಿಯಲ್ಲಿ ಪಾಲು ನೀಡಬೇಕು ಎಂಬ ತೀರ್ಪನ್ನು ರದ್ದುಗೊಳಿಸಿದೆ. ಆ ಮಹಿಳೆ ಬೇರೆ ಧರ್ಮದ ಯುವಕನನ್ನು ವಿವಾಹವಾಗಿದ್ದರು. ಹೀಗಾಗಿ, ಶ್ರೀಧರನ್ ತನ್ನ ಮಗಳನ್ನು ದೂರವೇ ಇಟ್ಟಿದ್ದರು. ತಮ್ಮ ವಿಲ್​ನಲ್ಲಿ ಕೂಡ ಆಕೆಗೆ ಪಾಲು ಬರೆದಿರಲಿಲ್ಲ.

ಇದನ್ನೂ ಓದಿ: Supreme Court: ಮಕ್ಕಳಿಗೆ ಸಣ್ಣ ವಯಸ್ಸಿನಿಂದಲೇ ಲೈಂಗಿಕ ಶಿಕ್ಷಣ ನೀಡಬೇಕು; ಸುಪ್ರೀಂ ಕೋರ್ಟ್‌ ಆದೇಶ

ಇದನ್ನು ವಿರೋಧಿಸಿ, ತನ್ನ ತಂದೆಯ ಆಸ್ತಿಯಲ್ಲಿ ತನಗೂ ಪಾಲು ಬೇಕೆಂದು ಆಕೆ ಕಾನೂನು ಮೊರೆಹೋಗಿದ್ದರು. ಕೆಳ ನ್ಯಾಯಾಲಯಗಳು ಆ ವಿಲ್ ಬಗ್ಗೆ ಅನುಮಾನಗಳನ್ನು ವ್ಯಕ್ತಪಡಿಸಿದ್ದವು. ಶೈಲಾ ಅವರಿಗೆ ಅವರ ತಂದೆಯ ಆಸ್ತಿಯಲ್ಲಿ ಅವರ ಇತರ 8 ಸಹೋದರರೊಂದಿಗೆ ಸಮಾನ ಪಾಲು ನೀಡಬೇಕೆಂದು ತೀರ್ಪು ನೀಡಿತ್ತು. ಆದರೆ, ಸುಪ್ರೀಂ ಕೋರ್ಟ್ ಕೆಳ ನ್ಯಾಯಾಲಯದ ಈ ತೀರ್ಪನ್ನು ರದ್ದುಗೊಳಿಸಿದೆ. ವಿಲ್ ಪ್ರಕಾರ ಶೈಲಾ ಅವರಿಗೆ ಅವರ ತಂದೆಯ ಆಸ್ತಿಯಲ್ಲಿ ಯಾವುದೇ ಹಕ್ಕಿಲ್ಲ ಎಂದು ತೀರ್ಪು ನೀಡಿದೆ.

“ಇದು ಆಕೆಯ ತಂದೆ ಸ್ವಇಚ್ಛೆಯಿಂದ ಬರೆದಿರುವ ವಿಲ್. ಇದರಲ್ಲಿ ಯಾವುದೇ ಹಸ್ತಕ್ಷೇಪ ಸಾಧ್ಯವಿಲ್ಲ. ಹೈಕೋರ್ಟ್ ಮತ್ತು ವಿಚಾರಣಾ ನ್ಯಾಯಾಲಯದ ತೀರ್ಪನ್ನು ರದ್ದುಗೊಳಿಸಲಾಗಿದೆ. ಶೈಲಾ ತನ್ನ ತಂದೆಯ ಆಸ್ತಿಗಳ ಮೇಲೆ ಯಾವುದೇ ಹಕ್ಕನ್ನು ಹೊಂದಿರುವುದಿಲ್ಲ. ಎಲ್ಲ ಆಸ್ತಿಯನ್ನೂ ಆಕೆಯ ತಂದೆಯ ಇಚ್ಛೆಯ ಪ್ರಕಾರವೇ ಆಕೆಯ ಇತರ ಸಹೋದರರಿಗೆ ಉಯಿಲು (ವಿಲ್) ಮೂಲಕ ನೀಡಲಾಗಿದೆ” ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಇದನ್ನೂ ಓದಿ: ಏರ್ ಇಂಡಿಯಾ ಅಪಘಾತದ ಬಗ್ಗೆ ನ್ಯಾಯಾಂಗ ತನಿಖೆಗೆ ಕೋರಿ ಸುಪ್ರೀಂ ಕೋರ್ಟ್ ಮೊರೆಹೋದ ಮೃತ ಪೈಲಟ್​ನ ತಂದೆ

ಲಿಂಗ ಸಮಾನತೆಗೂ ಈ ಪ್ರಕರಣಕ್ಕೂ ಸಂಬಂಧವಿಲ್ಲ. ಆ ಪ್ರಕಾರ ಹೇಳುವುದಾದರೆ ಮಹಿಳೆಗೂ ಆಸ್ತಿಯಲ್ಲಿ ಸಮಾನ ಹಕ್ಕಿದೆ. ಆದರೆ, ಈ ಪ್ರಕರಣದಲ್ಲಿ ವಿಲ್ ಬರೆದ ವ್ಯಕ್ತಿಯ ಇಚ್ಛೆ ಮುಖ್ಯವಾಗಿದೆ. ಅವರೇನಾದರೂ ವಿಲ್ ಬರೆಯದೇ ಇದ್ದಿದ್ದರೆ ಪಿತ್ರಾರ್ಜಿತ ಆಸ್ತಿಯಲ್ಲಿ ಮಗಳಿಗೂ ಪಾಲು ಇರುತ್ತಿತ್ತು. ಆದರೆ, ಅವರು ಮಗಳಿಗೆ ಆಸ್ತಿ ಸಿಗಬಾರದು ಎಂಬ ಕಾರಣಕ್ಕೆ ಉದ್ದೇಶಪೂರ್ವಕವಾಗಿ ವಿಲ್ ಬರೆದಿರುವುದರಿಂದ ಮತ್ತು ಇದು ಅವರ ಕೊನೆಯ ವಿಲ್ ಆಗಿರುವುದರಿಂದ ಅವರ ನಿರ್ಧಾರವೇ ಅಂತಿಮವಾಗಿರುತ್ತದೆ. ಕಾನೂನು ಇದರಲ್ಲಿ ಮಧ್ಯಪ್ರವೇಶಿಸುವುದಿಲ್ಲ” ಎಂದು ನ್ಯಾಯಪೀಠವು ಸ್ಪಷ್ಟಪಡಿಸಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On – 7:27 pm, Fri, 19 December 25

Source link

ಅಪ್ಪನ ಸಿನಿಮಾ ಮೂಲಕ ವಿತರಕಿ ಆದ ಸುದೀಪ್ ಪುತ್ರಿ – Kannada News | Sudeep’s daughter Saanvi co distributing her father’s movie Mark in Karnataka

ಸುದೀಪ್ (Sudeep) ನಟನೆಯ ‘ಮಾರ್ಕ್’ ಸಿನಿಮಾ ಬಿಡುಗಡೆಗೆ ಕೆಲವೇ ದಿನಗಳಷ್ಟೆ ಬಾಕಿ ಇದೆ. ಸಿನಿಮಾನಲ್ಲಿ ನಟಿಸುವ ಜೊತೆಗೆ ಸಿನಿಮಾದ ಸಹ ನಿರ್ಮಾಪಕರೂ ಆಗಿದ್ದಾರೆ ನಟ ಸುದೀಪ್. ಅಂದಹಾಗೆ ಈ ಸಿನಿಮಾ ಮೂಲಕ ಸುದೀಪ್ ಅವರ ಪುತ್ರಿ ಸಾನ್ವಿ ಮತ್ತು ಸುದೀಪ್ ಅವರ ಪತ್ನಿ ಪ್ರಿಯಾ ಅವರು ವಿತರಕಿಯರಾಗುತ್ತಿದ್ದಾರೆ. ಸುದೀಪ್ ಅವರ ಪುತ್ರಿ ಹಾಡುಗಾರ್ತಿಯಾಗಿದ್ದು, ಒಂದೆರಡು ಸಿನಿಮಾ ಹಾಡುಗಳಿಗೆ ಧ್ವನಿಯಾಗಿದ್ದಾರೆ. ಆದರೆ ಇದೀಗ ತಂದೆಯ ಸಿನಿಮಾ ಮೂಲಕ ವಿತರಣೆ ಜವಾಬ್ದಾರಿಯನ್ನೂ ಸಹ ಹೆಗಲಿಗೆತ್ತಿಕೊಳ್ಳುತ್ತಿದ್ದಾರೆ.

ಡಿಸೆಂಬರ್ 25 ರಂದು ಬಿಡುಗಡೆ ಆಗುತ್ತಿರುವ ‘ಮಾರ್ಕ್’ ಸಿನಿಮಾವನ್ನು ಕರ್ನಾಟಕದಲ್ಲಿ ಕೆಆರ್​​ಜಿ ವಿತರಣೆ ಮಾಡುತ್ತಿದೆ. ಆದರೆ ಅದರ ಜೊತೆಗೆ ಸಾನ್ವಿ ಅವರು ಸಹ ಸಿನಿಮಾದ ವಿತರಣೆ ಜವಾಬ್ದಾರಿ ಹೊತ್ತಿದ್ದಾರೆ. ಸುಪ್ರಿಯಾನ್ವಿ ಪಿಕ್ಚರ್ ಸ್ಟುಡಿಯೋ (ಪ್ರಿಯಾ ಮತ್ತು ಸಾನ್ವಿ) ಹೆಸರಿನ ಸಂಸ್ಥೆ ಮೂಲಕ ವಿತರಣೆ ಮಾಡಲಿದ್ದಾರೆ. ಸುದೀಪ್ ಅವರು ಸಹ ನಿರ್ಮಾಪಕ ಆಗಿರುವ ಕಾರಣ, ಸಾನ್ವಿ ಅವರಿಗೆ ವಿತರಣೆ ಸುಲಭವಾಗುವ ಸಾಧ್ಯತೆ ಇದೆ. ಸಾನ್ವಿ ಅವರು ಮುಂದಿನ ದಿನಗಳಲ್ಲಿ ಸಿನಿಮಾ ನಿರ್ಮಾಣಕ್ಕೆ ಇಳಿದರೂ ಆಶ್ಚರ್ಯ ಇಲ್ಲ.

ಇದನ್ನೂ ಓದಿ:ಬಿಗ್ ಬಾಸ್: ಸುದೀಪ್ ನಿರೂಪಣೆ ಟೀಕಿಸಿದವರಿಗೆ ವಿನಯ್ ಗೌಡ ಖಡಕ್ ತಿರುಗೇಟು

ಸಾನ್ವಿ ಅವರು ತೆಲುಗಿನಲ್ಲಿ ನಟ ನಾನಿ ನಟಿಸಿರುವ ‘ಹಿಟ್ 3’ ಸಿನಿಮಾಕ್ಕೆ ಹಾಡೊಂದಕ್ಕೆ ದನಿ ನೀಡಿದ್ದರು. ಇದೀಗ ಸುದೀಪ್ ನಟನೆಯ ‘ಮಾರ್ಕ್’ ಸಿನಿಮಾದ ಮಲೈಕಾ ಹಾಡನ್ನು ಸಹ ಹಾಡಿದ್ದಾರೆ. ಇನ್ನೂ ಸುದೀಪ್ ಅವರ ಸಹೋದರಿಯ ಪುತ್ರನ ‘ಮ್ಯಾಂಗೊ ಪಚ್ಚ’ ಸಿನಿಮಾ ಬಿಡುಗಡೆಗೆ ರೆಡಿಯಾಗುತ್ತಿದೆ. ಆ ಸಿನಿಮಾನಲ್ಲೂ ಸಾನ್ವಿ ಹಾಡಿದ್ದಾರೆ ಎನ್ನಲಾಗುತ್ತಿದೆ. ಮಾತ್ರವಲ್ಲದೆ, ‘ಮ್ಯಾಂಗೊ ಪಚ್ಚ’ ಸಿನಿಮಾವನ್ನೂ ಸಹ ಸಾನ್ವಿ ಅವರು ಸುಪ್ರಿಯಾನ್ವಿ ಸ್ಟುಡಿಯೋಸ್ ಮೂಲಕ ವಿತರಣೆ ಮಾಡುವ ಸಾಧ್ಯತೆ ಇದೆ. ಒಟ್ಟಾರೆ ಚಿತ್ರರಂಗದಲ್ಲಿಯೇ ನೆಲೆ ನಿಲ್ಲುವ ಸುಳಿವನ್ನು ಸಾನ್ವಿ ಸುದೀಪ್ ಅವರು ನೀಡಿದ್ದಾರೆ. ಅವರಿಗೆ ತಂದೆಯ ಮಾರ್ಗದರ್ಶನವೂ ಇದೆ.

ಇನ್ನು ಸುದೀಪ್ ನಟಿಸಿರುವ ‘ಮಾರ್ಕ್’ ಸಿನಿಮಾ ಡಿಸೆಂಬರ್ 25 ರಂದು ಬಿಡುಗಡೆ ಆಗಲಿದೆ. ಕನ್ನಡ ಮಾತ್ರವಲ್ಲದೆ ಬೇರೆ ಕೆಲ ಭಾಷೆಗಳಲ್ಲಿಯೂ ಸಿನಿಮಾ ಬಿಡುಗಡೆ ಆಗಲಿದೆ. ಈ ಸಿನಿಮಾ ಅನ್ನು ವಿಜಯ್ ಕಾರ್ತಿಕೇಯ ನಿರ್ದೇಶನ ಮಾಡಿದ್ದಾರೆ. ಈ ಹಿಂದೆ ‘ಮ್ಯಾಕ್ಸ್’ ಸಿನಿಮಾವನ್ನೂ ಸಹ ಅವರೇ ನಿರ್ದೇಶನ ಮಾಡಿದ್ದರು. ‘ಮಾರ್ಕ್’ ಸಿನಿಮಾಕ್ಕೆ ಸುದೀಪ್ ಮತ್ತು ಸತ್ಯಜ್ಯೋತಿ ಫಿಲಮ್ಸ್ ಬಂಡವಾಳ ಹೂಡಿದೆ. ಸಿನಿಮಾಕ್ಕೆ ಅಜನೀಶ್ ಲೋಕನಾಥ್ ಬಂಡವಾಳ ಹೂಡಿದ್ದಾರೆ. ಈ ಸಿನಿಮಾನಲ್ಲಿ ಯೋಗಿ ಬಾಬು, ಶೈನ್ ಟಾಮ್ ಚಾಕೊ, ನವೀನ್ ಚಂದ್ರ ಅಂಥಹ ಪ್ರತಿಭಾವಂತ ಕಲಾವಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಡೇಂಜರ್ ಮಾಲಿನ್ಯ, ಎಲ್ಲೆಲ್ಲೂ ಶೀತ, ಉಸಿರಾಟದ ತೊಂದರೆ; ಇಗೋ ಇಲ್ಲಿದೆ ಆಯುರ್ವೇದ ಪರಿಹಾರ – Kannada News | Patanjali founder Baba Ramdev recommends Ayurvedic solution for cold and cough

ಪತಂಜಲಿ ಸಂಸ್ಥಾಪಕ ಮತ್ತು ಯೋಗ ಗುರು ಬಾಬಾ ರಾಮದೇವ್ (Baba Ramdev) ಅವರು ತಮ್ಮ ಆಯುರ್ವೇದ ಮತ್ತು ಪರಿಣಾಮಕಾರಿ ದೇಶೀಯ ಆರೋಗ್ಯ ಪರಿಹಾರಗಳಿಗೆ ಜನಪ್ರಿಯರಾಗಿದ್ದಾರೆ. ಇತ್ತೀಚೆಗೆ ಯೂಟ್ಯೂಬ್​ಗೆ ಅಪ್​ಲೋಡ್ ಮಾಡಿದ ವೀಡಿಯೊವೊಂದರಲ್ಲಿ ಅವರು ಶೀತ ಮತ್ತು ಕೆಮ್ಮಿಗೆ ಚಿಕಿತ್ಸೆಗಳನ್ನು ವಿವರಿಸಿದ್ದಾರೆ. ವಿಶೇಷವಾಗಿ ಮಕ್ಕಳು ಕೆಮ್ಮು ಮತ್ತು ಶೀತಕ್ಕಿಂತ ಹೆಚ್ಚಾಗಿ ಉಸಿರಾಟದ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಯೋಗ ಗುರುಗಳ ಪ್ರಕಾರ, ಬಾಲ್ಯದಿಂದಲೂ ಯಾರಿಗಾದರೂ ಶೀತವಿದ್ದರೆ, ಅದು ಯಾವಾಗಲೂ ಕಣ್ಣು, ಮೂಗು, ಕಿವಿ ಮತ್ತು ಗಂಟಲಿನ ಮೇಲೆ ಪರಿಣಾಮ ಬೀರುತ್ತದೆ. ವಾಸ್ತವವಾಗಿ, ದೆಹಲಿ-ಎನ್‌ಸಿಆರ್‌ನಲ್ಲಿ ಹೆಚ್ಚಿದ ಮಾಲಿನ್ಯ (pollution) ಮತ್ತು ಶೀತದಿಂದಾಗಿ, ಉಸಿರಾಟದ ಸಮಸ್ಯೆಗಳ ಅಪಾಯ ಹೆಚ್ಚಾಗಿದೆ. ಬೆಂಗಳೂರಿನಂತಹ ನಗರಗಳಲ್ಲಿ ವಿಪರೀತ ಟ್ರಾಫಿಕ್ ಇರುವುದರಿಂದ ವಾಹನದಿಂದ ಹೊರಬರುವ ಹೊಗೆ ಸಾಕಷ್ಟು ವಾಯುಮಾಲಿನ್ಯ ಸೃಷ್ಟಿಸಿದೆ. ಚಿಕ್ಕವರು ಅಥವಾ ದೊಡ್ಡವರು, ಬಹುತೇಕ ಎಲ್ಲರೂ ಕೆಮ್ಮು ಅಥವಾ ಉಸಿರಾಟದ ತೊಂದರೆ ಅನುಭವಿಸುತ್ತಿದ್ದಾರೆ. ದೆಹಲಿ-ಎನ್‌ಸಿಆರ್‌ನಲ್ಲಿ GRAP-4 ಅನ್ನು ಜಾರಿಗೆ ತರಲಾಗಿದೆ ಮತ್ತು ಶಾಲೆಗಳಿಗೆ ಆನ್‌ಲೈನ್ ತರಗತಿಗಳನ್ನು ನಡೆಸಲು ಸೂಚಿಸಲಾಗಿದೆ.

ಮಕ್ಕಳಲ್ಲಿ ಕಣ್ಣಿನ ಕಿರಿಕಿರಿ ಅಥವಾ ಸೋಂಕಿನ ಪ್ರಕರಣಗಳು ಹೆಚ್ಚುತ್ತಿವೆ. ದೀರ್ಘಕಾಲದ ಶೀತ ಇರುವವರು ಮಾಲಿನ್ಯ ಮತ್ತು ಶೀತದಿಂದಾಗಿ ಹೆಚ್ಚಿನ ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ. ದೀರ್ಘಕಾಲದ ಶೀತಗಳನ್ನು ಗುಣಪಡಿಸಬಲ್ಲ ಬಾಬಾ ರಾಮದೇವ್ ಅವರ ಮನೆಮದ್ದುಗಳನ್ನು ಬಗ್ಗೆ ಮಾಹಿತಿಯನ್ನು ಈ ಲೇಖನದಲ್ಲಿ ಹಂಚಿಕೊಳ್ಳಲಾಗಿದೆ.

ಇದನ್ನೂ ಓದಿ: ಬಾಬಾ ರಾಮದೇವ್ ಅವರ ದೇಸೀ ಬಾಜ್ರಾ ಪಿಜ್ಜಾ; ಈ ಚಳಿಗಾಲದ ಸೂಪರ್​ಫುಡ್ ತಯಾರಿಸುವ ಕ್ರಮ

ಶೀತಕ್ಕೆ ಪರಿಹಾರ ಸೂಚಿಸುವ ಬಾಬಾ ರಾಮದೇವ್

ಬಾಬಾ ರಾಮದೇವ್ ಅವರ ಪ್ರಕಾರ, ಆಯುರ್ವೇದ ವಿಧಾನಗಳು ದೀರ್ಘಕಾಲದ ಶೀತ, ಕೆಮ್ಮು, ಬ್ರಾಂಕೈಟಿಸ್, ಸೈನುಟಿಸ್ ಮತ್ತು ಅಲರ್ಜಿಗಳನ್ನು ನಿವಾರಿಸುವಲ್ಲಿ ಅಥವಾ ಕಡಿಮೆ ಮಾಡುವಲ್ಲಿ ಅತ್ಯಂತ ಪರಿಣಾಮಕಾರಿ ಎನಿಸುತ್ತವೆ. ಈ ಚಿಕಿತ್ಸೆಗಳಿಗೆ ಔಷಧೀಯ ತೈಲಗಳನ್ನು ಬಳಸಲಾಗುತ್ತದೆ. ಕಾಕರಸಿಂಘಿ, ಲೈಕೋರೈಸ್, ಸಾಸಿವೆ, ಅರಿಶಿನ ಮತ್ತು ಹಸುವಿನ ತುಪ್ಪದ ಮಿಶ್ರಣವನ್ನು ಬಳಸಿಕೊಂಡು ನಶ್ಯ ತಯಾರು ಮಾಡಿ ನೀಡಲು ಬಾಬಾ ರಾಮದೇವ್ ಶಿಫಾರಸು ಮಾಡುತ್ತಾರೆ. ಪತಂಜಲಿಯ ಜ್ಯೋತಿಷ್ಮತಿ ಎಣ್ಣೆಯನ್ನು ಮಿಶ್ರಣಕ್ಕೆ ಸೇರಿಸುವುದರಿಂದ ಎರಡು ಪಟ್ಟು ಪ್ರಯೋಜನಗಳನ್ನು ಪಡೆಯಬಹುದು. ಇದನ್ನು ಉಸಿರಾಡುವ ವಿಧಾನವು ಹುಕ್ಕಾವನ್ನು ಹೋಲಬಹುದಾದರೂ, ಅದು ಅಲ್ಲ. ನೀವು ಒಂದು ಮೂಗಿನ ಹೊಳ್ಳೆಯ ಮೂಲಕ ಹೊಗೆಯನ್ನು ಒಳಗೆ ಎಳೆದುಕೊಳ್ಳುತ್ತೀರಿ, ಮತ್ತು ಇನ್ನೊಂದು ಮೂಗಿನ ಹೊಳ್ಳೆಯ ಮೂಲಕ ಹೊಗೆಯನ್ನು ಹೊರಬಿಡುತ್ತೀರಿ. ಇದು ದೀರ್ಘಕಾಲದ ಶೀತ, ಕಫ, ಬ್ಯಾಕ್ಟೀರಿಯಾ ಮತ್ತು ಫಂಗಸ್ ಅನ್ನು ನಿರ್ಮೂಲನೆ ಮಾಡಬಹುದು.

ಬಾಹ್ಯ ಚಿಕಿತ್ಸೆಗಳನ್ನು ಬಳಸಲು ನೀವು ಬಯಸಿದರೆ, ಅದಕ್ಕೂ ಪರಿಣಾಮಕಾರಿ ಆಯುರ್ವೇದ ವಿಧಾನವಿದೆ ಎಂದು ಅವರು ವಿವರಿಸುತ್ತಾರೆ. ಅರಿಶಿನ, ಶುಂಠಿ, ಬೆಳ್ಳುಳ್ಳಿ ಮತ್ತು ಈರುಳ್ಳಿಯ ಪೇಸ್ಟ್ ಅನ್ನು ಎದೆಗೆ ಹಚ್ಚುವ ಆಯುರ್ವೇದ ಪಾಕವಿಧಾನವನ್ನು ಅವರು ಹಂಚಿಕೊಂಡಿದ್ದಾರೆ. ಅಥವಾ, ನೀವು ಮಗುವಿನ ಎದೆಗೆ ಸೆಲರಿ, ಪುದೀನ, ಕರ್ಪೂರ, ಲವಂಗ ಮತ್ತು ನೀಲಗಿರಿ ಎಣ್ಣೆಯ ಮಿಶ್ರಣವನ್ನು ಸಹ ಹಚ್ಚಬಹುದು. ಈ ಪೇಸ್ಟ್ ಅನ್ನು ಎದೆಗೆ ಹಚ್ಚಿದ ನಂತರ, ಅದನ್ನು ಬೆಚ್ಚಗಿನ ಬಟ್ಟೆಯಿಂದ ಮುಚ್ಚಿ. ಎದೆಯ ಮೇಲೆ ಉದ್ದಿನ ಹಿಟ್ಟಿನಿಂದ ಗಡಿಯನ್ನು ಮಾಡಿ ಅದರ ಮೇಲೆ ಬೆಚ್ಚಗಿನ ಎಣ್ಣೆಯನ್ನು ಸುರಿಯಬೇಕು. ಈ ವಿಧಾನವನ್ನೂ ಬಾಬಾ ರಾಮದೇವ್ ತಮ್ಮ ವಿಡಿಯೋದಲ್ಲಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಜ್ಞಾನ ಭಾರತಂ ಮಿಷನ್​ನ ಕ್ಲಸ್ಟರ್ ಸೆಂಟರ್ ಆಗಿ ಪತಂಜಲಿ ವಿವಿಗೆ ಮಾನ್ಯತೆ

ಹಾಲಿನಲ್ಲಿ ಇವುಗಳನ್ನು ಬೆರೆಸಿ ತಿನ್ನಿರಿ

ಬಾಬಾ ರಾಮದೇವ್ ಅವರ ಪ್ರಕಾರ, ಹಾಲು ಕಫವನ್ನು ಉಂಟುಮಾಡಬಹುದಾದರೂ ಅದನ್ನು ಚಿಕಿತ್ಸೆಗಾಗಿ ಬಳಸಬಹುದು. ಅರಿಶಿನ, ಶಿಲಾಜಿತ್, ಮುಲೇಥಿ, ಅಶ್ವಗಂಧ ಮತ್ತು ಒಣ ಶುಂಠಿಯನ್ನು ತಲಾ ಒಂದು ಗ್ರಾಂ ಬಿಸಿ ಮಾಡಿ ಹಾಲಿಗೆ ಹಾಕಿ ಕುಡಿಯಲು ಕೊಡಬಹುದು. ಕೆಮ್ಮು ಹೆಚ್ಚಾದಾಗ, ತುಪ್ಪ, ಎಣ್ಣೆ, ಬೇಳೆ, ಅನ್ನ ಮತ್ತು ರೊಟ್ಟಿಯನ್ನು ತಪ್ಪಿಸಿ. ಬದಲಾಗಿ, ಕಡಲೆ, ಖರ್ಜೂರ ಮತ್ತು ಬೇಯಿಸಿದ ಸೇಬುಗಳನ್ನು ತಿನ್ನಿರಿ. ನಿಮಗೆ ಹಸಿವಾಗಿದ್ದರೆ, ಚಳಿಗಾಲದಲ್ಲಿ ಬಾಜ್ರಾ ಮತ್ತು ಕಡಲೆ ರೊಟ್ಟಿಗಳನ್ನು ತಿನ್ನಿರಿ. ಹಾಲಿಗೆ ಚ್ಯವನಪ್ರಾಶವನ್ನು ಹಚ್ಚಿ ತಿನ್ನುವುದರಿಂದ ಮತ್ತಷ್ಟು ಪರಿಣಾಮಕಾರಿ ಎನಿಸುತ್ತದೆ.

ಬಾಬಾ ರಾಮದೇವ್ ನೈಸರ್ಗಿಕವಾಗಿ ಮೂಗು ಸ್ವಚ್ಛಗೊಳಿಸಲು ಜಲ ನೇತಿ ಮತ್ತು ಸೂತ್ರ ನೇತಿಯನ್ನು ಶಿಫಾರಸು ಮಾಡುತ್ತಾರೆ. ಜಲ ನೇತಿ ಎಂದರೆ ಒಂದು ಮಡಕೆಯಿಂದ ನೀರನ್ನು ಒಂದು ಮೂಗಿನ ಹೊಳ್ಳೆಗೆ ಸುರಿಯುವುದು ಮತ್ತು ಇನ್ನೊಂದು ಮೂಗಿನ ಹೊಳ್ಳೆಯಿಂದ ನೀರನ್ನು ಹೊರಹಾಕುವುದು. ಇನ್ನು, ಸೂತ್ರ ನೇತಿ ಎಂದರೆ ಮೂಗಿನ ಹೊಳ್ಳೆಯ ಮೂಲಕ ದಾರವನ್ನು ಸೇರಿಸಿ ಬಾಯಿಯ ಮೂಲಕ ಹೊರತೆಗೆಯುವುದು. ಇದು ಮೂಗನ್ನು ಸ್ವಚ್ಛಗೊಳಿಸುತ್ತದೆ ಎಂದು ಸಹ ಹೇಳಲಾಗುತ್ತದೆ.

ಬಾಬಾ ರಾಮದೇವ್ ಅವರ ವಿಡಿಯೋ

ಇನ್ನಷ್ಟು ಆರೋಗ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

40 ವರ್ಷ ದಾಟಿದ ಮಹಿಳೆಯರಲ್ಲಿ ಕೂದಲು ಉದುರುವಿಕೆಯ ಸಮಸ್ಯೆ ಕಾಣಿಸಿಕೊಳ್ಳಲು ಕಾರಣವೇ ಇದು! – Kannada News | Hair Loss in Women Over 40: Common Causes & Solutions

ಮಹಿಳೆಯರಾಗಲಿ ಅಥವಾ ಪುರುಷರಾಗಲಿ, ಕೂದಲು ಉದುರುವ ಸಮಸ್ಯೆ (Hair Fall) ಕಂಡುಬರುವುದು ಸಾಮಾನ್ಯ. ಆದರೆ ಮಹಿಳೆಯರಿಗೆ 40 ವರ್ಷದ ನಂತರ ಕೂದಲು ಉದುರುವ ಸಮಸ್ಯೆ ಹೆಚ್ಚಾಗುತ್ತದೆ. ಅನೇಕರಲ್ಲಿ ಈ ಸಮಸ್ಯೆಯನ್ನು ನಿಯಂತ್ರಿಸಲು ಸಾಧ್ಯವೇ ಇಲ್ಲ ಎಂಬುವಷ್ಟರ ಮಟ್ಟಿಗೆ ಕೂದಲು ಉದುರುತ್ತದೆ. ನಿಮ್ಮ ಮನೆಯಲ್ಲಿಯೂ ಯಾರಿಗಾದರೂ ಈ ರೀತಿ ಸಮಸ್ಯೆ ಕಂಡು ಬಂದಿದ್ಯಾ, 40 ವರ್ಷದ ನಂತರ ಕೂದಲು ಉದುರುವ ಸಮಸ್ಯೆ ಹೆಚ್ಚಾಗಲು ಕಾರಣವೇನು ಎಂದು ಯೋಚಿಸಿದ್ದೀರಾ… ಅನಾರೋಗ್ಯದಿಂದ ಈ ರೀತಿಯಾಗುತ್ತದೆಯೇ ಇದನ್ನು ನಿಯಂತ್ರಿಸಲು ಏನು ಮಾಡಬೇಕು ಎಂಬುದನ್ನು ತಿಳಿದುಕೊಳ್ಳಿ. ಈ ವಿಷಯವಾಗಿ ತಜ್ಞರು ನೀಡಿರುವ ಸಲಹೆ ಸ್ಟೋರಿಯಲ್ಲಿದೆ.

ಮ್ಯಾಕ್ಸ್ ಆಸ್ಪತ್ರೆಯ ಚರ್ಮರೋಗ ವಿಭಾಗದ ಡಾ. ಸೌಮ್ಯ ಸಚ್‌ದೇವ ಅವರು ಹೇಳುವ ಪ್ರಕಾರ, 40 ವರ್ಷದ ನಂತರ ಕೂದಲು ಉದುರುವ ಸಮಸ್ಯೆ ಕಂಡುಬರುವುದಕ್ಕೆ ಹಲವು ಕಾರಣಗಳಿವೆ. ಕೆಲವು ಮಹಿಳೆಯರು ಈ ವಯಸ್ಸಿನಲ್ಲಿ ಋತುಬಂಧಕ್ಕೆ ಒಳಗಾಗುತ್ತಾರೆ ಇದು ಕೂಡ ಒಂದು ಕಾರಣವಾಗಿದೆ. ಅಷ್ಟೇಅಲ್ಲ, ಹಲವಾರು ಹಾರ್ಮೋನುಗಳ ಕೊರತೆ ಕೂಡ ಈ ರೀತಿಯಾಗುವುದಕ್ಕೆ ಕಾರಣವಾಗಿರಬಹುದು. ಜೊತೆಗೆ ಮಹಿಳೆಯರಲ್ಲಿ ಕಂಡುಬರುವ ಕಬ್ಬಿಣದ ಅಂಶ, ವಿಟಮಿನ್ ಡಿ ಮತ್ತು ಬಯೋಟಿನ್ ಕೊರತೆಯಿದ್ದರೆ, ಕೂದಲು ಉದುರುವ ಸಮಸ್ಯೆ ಕಂಡುಬರಬಹುದು.

ಕೂದಲು ಉದುರುವುದಕ್ಕೆ ಮಾನಸಿಕ ಒತ್ತಡವೂ ಕಾರಣವಾಗಿರಬಹುದು;

ಮಹಿಳೆಯರಲ್ಲಿ ಕೂದಲು ಉದುರುವಿಕೆಗೆ ಮಾನಸಿಕ ಒತ್ತಡವೂ ಒಂದು ಪ್ರಮುಖ ಕಾರಣ ಎಂದು ಡಾ. ಸೌಮ್ಯಾ ಹೇಳುತ್ತಾರೆ. ಇತ್ತೀಚಿನ ವರ್ಷಗಳಲ್ಲಿ, ಮಾನಸಿಕ ಒತ್ತಡದಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳು ಹೆಚ್ಚುತ್ತಿದ್ದು ಇವು ಕೂದಲಿನ ಮೇಲೂ ಪರಿಣಾಮ ಬೀರುವ ಮೂಲಕ ಕೂದಲಿನ ಬೆಳವಣಿಗೆಗೆ ಅಡ್ಡಿಯಾಗುತ್ತದೆ, ಜೊತೆಗೆ ಉದುರುವಿಕೆಗೆ ಕಾರಣವಾಗುತ್ತದೆ. ಕೆಲವು ಸಂದರ್ಭಗಳಲ್ಲಿ, ಆಟೋಇಮ್ಯೂನ್ ಕಾಯಿಲೆಗಳು ಸಹ ಕೂದಲು ಉದುರುವಿಕೆಗೆ ಕಾರಣವಾಗಬಹುದು. ಈ ಕಾಯಿಲೆಗಳಿಗೆ ಯಾವುದೇ ರೀತಿಯ ಚಿಕಿತ್ಸೆ ಇಲ್ಲ. ಕೆಲವು ಮಹಿಳೆಯರಲ್ಲಿ, ಕೂದಲು ಉದುರುವಿಕೆ ಥೈರಾಯ್ಡ್ ಅಥವಾ ಮಧುಮೇಹದಿಂದಲೂ ಉಂಟಾಗಬಹುದು. ಅಂತಹ ಸಂದರ್ಭಗಳಲ್ಲಿ, ಥೈರಾಯ್ಡ್ ಮತ್ತು ಮಧುಮೇಹವನ್ನು ನಿಯಂತ್ರಿಸಿದರೆ, ಕೂದಲು ಉದುರುವಿಕೆಯನ್ನು ಕೂಡ ನಿಯಂತ್ರಿಸಬಹುದು.

ಇದನ್ನೂ ಓದಿ: ಈ ಆಹಾರಗಳ ಸೇವನೆ ಮಾಡುವುದನ್ನು ಬಿಟ್ಟರೆ ಕೂದಲು ಉದುರುವುದು ಕಡಿಮೆಯಾಗುತ್ತೆ!

ಕೂದಲು ಉದುರುವಿಕೆಯನ್ನು ತಡೆಯಬಹುದೇ?

ಮಹಿಳೆಗೆ ಸ್ವಯಂ ನಿರೋಧಕ ಕಾಯಿಲೆ ಅಥವಾ ಆನುವಂಶಿಕ ಕಾರಣಗಳಿಂದ ಕೂದಲು ಉದುರುವಿಕೆ ಇದ್ದರೆ, ಅದನ್ನು ಸಂಪೂರ್ಣವಾಗಿ ನಿಯಂತ್ರಿಸುವುದು ಕಷ್ಟ. ಇತರ ಸಂದರ್ಭಗಳಲ್ಲಿ, ಕೂದಲು ಉದುರುವಿಕೆಯನ್ನು ಈ ಸಲಹೆಗಳನ್ನು ಅನುಸರಿಸುವ ಮೂಲಕ ತಡೆಯಬಹುದು.

  • ಪ್ರೋಟೀನ್, ಕಬ್ಬಿಣ ಮತ್ತು ವಿಟಮಿನ್‌ ಸಮೃದ್ಧವಾಗಿರುವ ಆಹಾರಗಳನ್ನು ಸೇವನೆ ಮಾಡಿ.
  • ಕೂದಲು ಬೆಳವಣಿಗೆಗೆ ವಿಟಮಿನ್ ಡಿ ಹೊಂದಿರುವ ಆಹಾರವನ್ನು ಸೇವಿಸಿ, ಉದಾಹರಣೆಗೆ ಅಣಬೆಗಳು.
  • ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯಿರಿ.
  • ಮಾನಸಿಕ ಒತ್ತಡವನ್ನು ತಪ್ಪಿಸಿ, ಅದನ್ನು ತಡೆಗಟ್ಟಲು ಪ್ರತಿದಿನ ಯೋಗಾಭ್ಯಾಸ ಮಾಡಿ.
  • ನಿಯಮಿತವಾಗಿ ನೆತ್ತಿಯನ್ನು ಮಸಾಜ್ ಮಾಡಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

40 ವರ್ಷದ ಅಂಕಲ್, 19ರ ಯುವತಿಯ ಪ್ರೀತಿ ಪ್ರೇಮ: ಪ್ರೇಮಲೋಕದಲ್ಲಿ ತೇಲಾಡುವಾಗಲೇ ನಡೆಯಿತು ಘನಘೋರ! – Kannada News | 40 Year Old Kunigal Man Killed Who Loves 19 Year old Young Woman at Ramanagar

ರಾಮನಗರ, (ಡಿಸೆಂಬರ್ 19): ಆತನಿಗೆ 40 ವರ್ಷ. ಆ ಯುವತಿಗೆ 19 ವರ್ಷ. ಇಬ್ಬರ ನಡುವೆ ಪ್ರೀತಿ (Love) ಮೂಡಿತ್ತು. ಹದಿನೈದು ದಿನಗಳ ಕೆಳಗೆ ಇಬ್ಬರು ಓಡಿಹೋಗಿದ್ರು. ಈ ವಿಚಾರ ಯುವತಿಯ ತಂದೆಯನ್ನ ಕೆರಳುವಂತೆ ಮಾಡಿದ್ದು, ತನ್ನ ಮಗಳನ್ನ ಪ್ರೀತಿಸಿದವನನ್ನ ಕಿಡ್ಯಾಪ್ ಮಾಡಿ, ಬಳಿಕ ಕತ್ತು ಕೊಯ್ದು ಭೀಕರವಾಗಿ ಹತ್ಯೆ ಮಾಡಿದ್ದಾರೆ. ಹೌದು.. ಬಣ್ಣ ಬಣ್ಣದ ಮಾತುಗಳನ್ನ ಆಡಿ ಮಗಳನ್ನ ಬಲೆಗೆ ಬೀಳಿಸಿಕೊಂಡಿದ್ದ ಪ್ರೀಯಕರನೊಬ್ಬನನ್ನ ಯುವತಿಯ ತಂದೆ, ತನ್ನ ಬಾಮೈದರ ಜೊತೆ ಸೇರಿ ಭೀಕರವಾಗಿ ಹತ್ಯೆ ಮಾಡಿರೋ ಘಟನೆ ಬೆಂಗಳೂರು ದಕ್ಷಿಣ (Bengaluru South) ಜಿಲ್ಲೆ ಮಾಗಡಿ ತಾಲೂಕಿನ ಗಟ್ಟಿಪುರ ಗ್ರಾಮದ ‌ಬಳಿ ನಡೆದಿದೆ. ಮೂಲತಃ ಮಾಗಡಿ (Magadi) ತಾಲೂಕಿನ ದೋಣಕುಪ್ಪೆ ಗ್ರಾಮದ ಹಾಲಿ ತುಮಕೂರು ಜಿಲ್ಲೆ ಕುಣಿಗಲ್ ತಾಲ್ಲೂಕಿನ ಕೊತ್ತಗೆರೆ ಗ್ರಾಮದಲ್ಲಿ ವಾಸವಾಗಿರುವ ಚಲುವ (40) ಹತ್ಯೆಯಾದ ವ್ಯಕ್ತಿ.

ಓಡಿ ಹೋಗಿದ್ದ ಜೋಡಿ

ಅಂದಹಾಗೆ ಕೊತ್ತಗೆರೆ ಗ್ರಾಮದಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಚಲುವ, ಮಾಗಡಿ ತಾಲೂಕಿನ ದೋಣಕುಪ್ಪೆ ಗ್ರಾಮದ ತನ್ನ ಸಂಬಂಧಿಯೇ ಆದ ಕೆಂಪಣ್ಣ ಎಂಬುವವರ 19 ವರ್ಷದ ಮಗಳನ್ನ ಪ್ರೀತಿಸುತ್ತಿದ್ದ. ಕಳೆದ ಹದಿನೈದು ದಿನಗಳ ಕೆಳಗೆ ಯುವತಿಯನ್ನ ಕರೆದುಕೊಂಡು ಮಂಡ್ಯದ ಕೆಎಂ ದೊಡ್ಡಿಯ ಸಂಬಂಧಿಕರ ಮನೆಯಲ್ಲಿ ಇಟ್ಟಿದ್ದ. ಆನಂತರ ರಾಜೀಪಂಚಾಯತಿ ನಡೆದು ಯುವತಿಯನ್ನ ವಾಪಾಸ್ ಕೆಂಪಣ್ಣ ಮನೆಗೆ ಕರೆತಂದಿದ್ದ.

ಇದನ್ನೂ ಓದಿ: ಪ್ರೀತಿ ಹೆಸರಲ್ಲಿ ಕಾಮದ ತೀಟೆ ತೀರಿಸಿಕೊಂಡ ಪ್ರಿಯಕರ: ಸಾಲದಕ್ಕೆ ಸ್ನೇಹಿತರೊಂದಿಗೆ ಸಾಮೂಹಿಕ ಅತ್ಯಾಚಾರ

ಮಗಳ ಪ್ರಿಯಕರನ ಕತ್ತು ಕೊಯ್ದು ಹತ್ಯೆ

ಇದಾಗಿ ಮೂರು ದಿನಗಳ ಕೆಳಗೆ ಆಕೆಯನ್ನ ಮನೆಯಲ್ಲಿ ಕೂಡಿ ಹಾಕಿದ್ದಾರೆ‌ ಎಂದು ಚಲುವ ಫೇಸ್ ಬುಕ್ ನಲ್ಲಿ ವಿಡಿಯೋ ಮಾಡಿ ಹಾಕಿದ್ದ. ಇದರಿಂದ ಕುಪಿತಗೊಂಡ ಕೆಂಪಣ್ಣ, ತನ್ನ ಬಾಮೈದರಾದ ರಾಮಕೃಷ್ಣ, ಮಂಜು ಎಂಬುವರೊಂದಿಗೆ ಸೇರಿ ನಿನ್ನೆ(ಡಿಸೆಂಬರ್ 18) ತುಮಕೂರು ಜಿಲ್ಲೆ ಕುಣಿಗಲ್ ಪಟ್ಟಣದಲ್ಲಿ ಚಲುವನನ್ನು ಕಿಡ್ಯಾಪ್ ಮಾಡಿದ್ದು, ಆನಂತರ ಸಾಕಷ್ಟು ‌ಕಡೆ ಸುತ್ತಾಡಿಸಿ ಕೊನೆಗೆ ಕಾರಿನಲ್ಲಿಯೇ ಚಲುವನ ಕತ್ತು ಕೊಯ್ದು ಮಾಗಡಿ ತಾಲೂಕಿನ ಗಟ್ಟಿಪುರ ಗ್ರಾಮದ ಹೊರವಲಯದ ಹಳ್ಳದ ಬಳಿ ಎಸೆದು ಪರಾರಿಯಾಗಿದ್ದಾರೆ.

ಅಂದಹಾಗೆ ಬೆಳಗ್ಗೆ ಹಳ್ಳದ ಬಳಿ ಮೃತದೇಹವನ್ನು ಕಂಡು ಗ್ರಾಮಸ್ಥರು ನೀಡಿದ ಮಾಹಿತಿ ಮೇರೆಗೆ ಸ್ಥಳಕ್ಕೆ ಮಾಗಡಿ ಠಾಣೆ ಪೊಲೀಸರು ದೌಡಾಯಿಸಿ ಪರಿಶೀಲನೆ ಮಾಡಿದ್ದಾರೆ. ಬಳಿಕ ಪ್ರಕರಣ ದಾಖಲಿಸಿಕೊಂಡು ತನಿಖೆಗೆ ನಡೆಸಿದಾಗ ಮೃತ ವ್ಯಕ್ತಿಯ ಗುರುತು ಪತ್ತೆಯಾಗಿತ್ತು. ಅಲ್ಲದೇ ಆತನನ್ನ ಕಾರಿನಲ್ಲಿ ಕಿಡ್ಯಾಪ್ ಮಾಡಿ ಹತ್ಯೆ ಮಾಡಲಾಗಿದೆ ಎಂಬ ಅಂಶವೂ ಬೆಳಕಿಗೆ ಬಂದಿದೆ. ಆದ್ರೆ, ಇನ್ನು ಚಲುವನನ್ನ ಕುಣಿಗಲ್ ಕಿಡ್ಯಾಪ್ ಮಾಡಿರುವುದರಿಂದ ಮಾಗಡಿ ಪೊಲೀಸರು ಈ ಪ್ರಕರಣವನ್ನ ಕುಣಿಗಲ್ ಠಾಣೆ ವರ್ಗಾವಣೆ ಮಾಡಿದ್ದಾರೆ. ಬಳಿಕ ಕುಣಿಗಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು, ಚಲುವನನ್ನ ಹತ್ಯೆ ಮಾಡಿದ ಮೂವರನ್ನು ವಶಕ್ಕೆ ಪಡೆದು ತೀವ್ರ ‌ವಿಚಾರಣೆ‌ ನಡೆಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

U19 ಏಷ್ಯಾಕಪ್ ಫೈನಲ್​ಗೇರಿದ ಟೀಂ ಇಂಡಿಯಾ; ಫೈನಲ್ ಎದುರಾಳಿ ಯಾರು ಗೊತ್ತಾ?

ಭಾರತ ಮತ್ತು ಶ್ರೀಲಂಕಾ ನಡುವೆ ನಡೆದ ಅಂಡರ್-19 ಏಷ್ಯಾಕಪ್‌ನ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಯುವ ಪಡೆ 8 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಅಜೇಯ ತಂಡವಾಗಿ ಫೈನಲ್​ ಪ್ರವೇಶಿಸಿದೆ. ಈ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದರಿಂದ ಪಂದ್ಯವನ್ನು ತಲಾ 20 ಓವರ್‌ಗಳಿಗೆ ಇಳಿಸಲಾಯಿತು. ಟಾಸ್ ಗೆದ್ದ ಟೀಂ ಇಂಡಿಯಾ ಮೊದಲು ಬೌಲಿಂಗ್ ಆಯ್ಕೆ ಮಾಡಿತು. ಹೀಗಾಗಿ ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ 20 ಓವರ್‌ಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 138 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಭಾರತ 18 ಓವರ್‌ಗಳಲ್ಲಿ 2 ವಿಕೆಟ್ ಕಳೆದುಕೊಳ್ಳುವ ಮೂಲಕ ಈ ಸವಾಲನ್ನು ಪೂರ್ಣಗೊಳಿಸಿತು. ಈ ಗೆಲುವಿನೊಂದಿಗೆ ಭಾರತ ಫೈನಲ್ ಪ್ರವೇಶಿಸಿದರೆ, ಇತ್ತ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಎದುರಿಸಲಿದೆ. ಇಂದೇ ನಡೆದ ಎರಡನೇ ಸೆಮಿಫೈನಲ್‌ನಲ್ಲಿ ಪಾಕಿಸ್ತಾನ, ಬಾಂಗ್ಲಾದೇಶವನ್ನು 8 ವಿಕೆಟ್‌ಗಳಿಂದ ಸೋಲಿಸಿ ಫೈನಲ್​ಪ್ರವೇಶಿಸಿದೆ.

Source link

ಭೂತಾಯಿಗೆ ಚರಗ, ಹೊಲದಲ್ಲೇ ವೆರೈಟಿ ಊಟ: ಎಳ್ಳಮಾವಾಸ್ಯೆ ಬಗ್ಗೆ ನೀವು ತಿದುಕೊಳ್ಳಲೇಬೇಕು – Kannada News | Ella Amavasya: North Karnataka farmers celebrate festival with Bhoomi Puja rituals; see photos

ವರ್ಷಕ್ಕೊಮ್ಮೆ ಬರುವ ಎಳ್ಳಮಾವಾಸ್ಯೆಯಂದು ಮಹಿಳೆಯರು ನಸುಕಿನ ಜಾವ ಎದ್ದು ನೈವೇದ್ಯಕ್ಕೆ ಬೇಕಾದ ಎಲ್ಲಾ ಸಿದ್ದತೆಗಳನ್ನ ಮಾಡಿಕೊಳ್ಳುತ್ತಾರೆ. ವಿವಿಧ ಖಾದ್ಯಗಳನ್ನ ತಯಾರಿಸುತ್ತಾರೆ. ವಿಶೇಷವಾಗಿ ಹೊಳಿಗೆ, ಕಡಬು, ಭರ್ತಿ, ಬಜ್ಜಿ, ಪುಂಡೆ ಪಲ್ಲೆ, ಹಸಿ ಇರುಳ್ಳಿ ಚಟ್ನಿ ಸೇರಿದಂತೆ ನಾನಾ ರೀತಿಯ ತಿಂಡಿತಿನಿಸುಗಳನ್ನ ಸಿದ್ದಪಡಿಸುತ್ತಾರೆ. ಇತ್ತ ಮನೆಯ ಗಂಡು ಮಕ್ಕಳು ತಮ್ಮ ಎತ್ತು ಹಾಗೂ ಎತ್ತಿನ ಬಂಡಿಯನ್ನು ಸಿಂಗರಿಸುತ್ತಾರೆ.

Source link

IND vs SA: ಟಾಸ್ ಸೋತ ಟೀಂ ಇಂಡಿಯಾದಲ್ಲಿ 3 ಬದಲಾವಣೆ; ಸಂಜುಗೆ ಕೊನೆಗೂ ಅವಕಾಶ – Kannada News | IND vs SA T20 Final: Series Decider in Ahmedabad toss and playing 11

ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಐದು ಪಂದ್ಯಗಳ ಟಿ20 ಸರಣಿ ಅಂತಿಮ ಹಂತವನ್ನು ತಲುಪಿದೆ. ಉಭಯ ತಂಡಗಳ ನಡುವಿನ ಅಂತಿಮ ಟಿ20 ಪಂದ್ಯ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಟೀಂ ಇಂಡಿಯಾ ಪ್ರಸ್ತುತ ಸರಣಿಯಲ್ಲಿ 2-1 ಮುನ್ನಡೆಯಲ್ಲಿದ್ದು, ಸರಣಿ ಸೋಲುವ ಆತಂಕವಿಲ್ಲ. ಆದರೆ ದಕ್ಷಿಣ ಆಫ್ರಿಕಾ ತಂಡ ಮಾತ್ರ ಸರಣಿ ಸೋಲಿನಿಂದ ಪಾರಾಗಲು ಇಂದಿನ ಪಂದ್ಯವನ್ನು ಶತಾಯಗತಾಯ ಗೆಲ್ಲಲೇಬೇಕು. ಟೆಸ್ಟ್ ಸರಣಿ ಗೆಲುವಿನೊಂದಿಗೆ ಪ್ರವಾಸ ಆರಂಭಿಸಿದ್ದ ದಕ್ಷಿಣ ಆಫ್ರಿಕಾ ಇದೀಗ ಮತ್ತದೇ ಗೆಲುವಿನೊಂದಿಗೆ ಪ್ರವಾಸ ಅಂತ್ಯಗೊಳಿಸಲು ನೋಡುತ್ತಿದೆ. ಇತ್ತ ಟೀಂ ಇಂಡಿಯಾ ಏಕದಿನ ಸರಣಿ ಜೊತೆಗೆ ಟಿ20 ಸರಣಿಯನ್ನು ವಶಪಡಿಸಿಕೊಳ್ಳಲು ಸಜ್ಜಾಗಿದೆ.

ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಈ ಸರಣಿ ನಿರ್ಧಾರಕ ಪಂದ್ಯದಲ್ಲಿ ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ನಾಯಕ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ. ಹೀಗಾಗಿ ಟೀಂ ಇಂಡಿಯಾ ಮೊದಲು ಬ್ಯಾಟಿಂಗ್ ಮಾಡಲಿದೆ. ಇತ್ತ ಟಾಸ್ ಸೋತ ನಾಯಕ ಸೂರ್ಯಕುಮಾರ್ ಯಾದವ್ ಕೂಡ ಟಾಸ್ ಗೆದ್ದಿದ್ದರೆ ಮೊದಲು ಬ್ಯಾಟಿಂಗ್ ಆಯ್ದುಕೊಳ್ಳುವುದಾಗಿ ಹೇಳಿದರು. ಅಂದರೆ ಟಾಸ್ ಸೋತರೂ ಟೀಂ ಇಂಡಿಯಾಗೆ ಬೇಕಿದ್ದು, ಸಿಕ್ಕಿದೆ. ಇನ್ನು ಟೀಂ ಇಂಡಿಯಾದಲ್ಲಿ ಬರೋಬ್ಬರಿ 3 ಬದಲಾವಣೆಗಳನ್ನು ಮಾಡಲಾಗಿದ್ದರೆ, ಆಫ್ರಿಕಾ ತಂಡದಲ್ಲಿ 1 ಬದಲಾವಣೆಯಾಗಿದೆ.

ಭಾರತ ತಂಡ: ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್, ಸೂರ್ಯಕುಮಾರ್ ಯಾದವ್ (ನಾಯಕ), ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಜಸ್ಪ್ರೀತ್ ಬುಮ್ರಾ, ಅರ್ಷದೀಪ್ ಸಿಂಗ್, ವಾಷಿಂಗ್ಟನ್ ಸುಂದರ್, ವರುಣ್ ಚಕ್ರವರ್ತಿ.

Source link

2010ರಿಂದ ತಿಂಗಳಿಗೆ 15,000 ರೂ ಹೂಡಿಕೆ; ಇವತ್ತು ನೀವು ಕೋಟ್ಯಾಧಿಪತಿ; ಸಿಂಪಲ್ 15x15x15 ಫಾರ್ಮುಲಾದಿಂದ ಸಾಧ್ಯ – Kannada News | Simple 15x15x15 formula to become crorepati in 15 years

ಕೋಟ್ಯಾಧಿಪತಿ ಆಗಬೇಕು ಎನ್ನುವುದು ಹಿಂದೆ ಹಲವರ ಕನಸಾಗಿತ್ತು. ಈಗ ಕೋಟಿ ರೂ ಹಣಕ್ಕೆ ಹಿಂದಿನಷ್ಟು ಮೌಲ್ಯ ಉಳಿದಿಲ್ಲ. ಹಣದುಬ್ಬರದ ಪರಿಣಾಮ ಅದು. ಅದೇನೇ ಇರಲಿ, ಇವತ್ತೂ ಕೂಡ ಕೋಟಿ ಹಣ ಹೊಂದುವುದು ಅಷ್ಟು ಸುಲಭದ ಮಾತಲ್ಲ. ಲಕ್ಷಕ್ಕೂ ಹೆಚ್ಚು ಸಂಬಳ ಪಡೆಯುತ್ತಿರುವವರ ಬಳಿಯೂ ಕೂಡ ನಿವ್ವಳ ಆಸ್ತಿ ಮೌಲ್ಯ ಕೋಟಿ ರೂ ಇರುವುದಿಲ್ಲ. ಅಷ್ಟಕ್ಕೂ ಕೋಟಿ ರೂ ಹಣ ಹೊಂದಲು 15x15x15 ಎನ್ನುವ ಸೂತ್ರ ಇದೆ.

ಈ 15x15x15 ಸೂತ್ರ ಬಹಳ ಸರಳ. ನೀವು ತಿಂಗಳಿಗೆ 15 ಸಾವಿರ ರೂ ಉಳಿಸಬೇಕು. ಈ ಹಣವನ್ನು ಪ್ರತೀ ತಿಂಗಳಂತೆ 15 ವರ್ಷದವರೆಗೆ ಹೂಡಿಕೆ ಮಾಡಬೇಕು. ಅಂದರೆ ಎಸ್​ಐಪಿ ಮಾಡಬೇಕು. ಹೀಗೆ ನೀವು ಎಸ್​ಐಪಿ ಮಾಡಿದ ಹಣವು ವರ್ಷಕ್ಕೆ ಶೇ. 15ರಂತೆ ಬೆಳೆಯಬೇಕು. ಈ ಮೂರೂ 15 ಸೇರಿದರೆ ನೀವು ಮುಂದಿನ 15 ವರ್ಷದಲ್ಲಿ ಒಂದು ಕೋಟಿ ರೂ ಹೊಂದಬಹುದು.

ಇದನ್ನೂ ಓದಿ: ಷೇರು, ಚಿನ್ನ, ಎಫ್​ಡಿ- ಕಳೆದ 40 ವರ್ಷದಲ್ಲಿ ಅತಿಹೆಚ್ಚು ರಿಟರ್ನ್ ಕೊಟ್ಟ ಹೂಡಿಕೆಗಳ್ಯಾವುವು?

ಒಂದು ವೇಳೆ, ನೀವು 2010ರಲ್ಲಿ ಈ ರೀತಿ 15,000 ರೂಗಳ ಎಸ್​ಐಪಿ ಮಾಡಿದ್ದರೆ ಈ ವರ್ಷ ನೀವು ಕೋಟ್ಯಾಧಿಪತಿಯಾಗಬಹುದಿತ್ತು. 2010ರ ನಂತರ ಬಹಳಷ್ಟು ಮ್ಯೂಚುವಲ್ ಫಂಡ್​ಗಳು ಶೇ. 12ರಿಂದ 18ರಷ್ಟು ರಿಟರ್ನ್ ಕೊಟ್ಟಿವೆ.

ಇಲ್ಲಿ ಅನಿಶ್ಚಿತತೆ ಇರುವುದು ಹೂಡಿಕೆಯಿಂದ ಎಷ್ಟು ರಿಟರ್ನ್ ಸಿಗುತ್ತೆ ಎನ್ನುವುದು. ಷೇರುಬಜಾರು ದೀರ್ಘಾವಧಿಯಲ್ಲಿ ದೊಡ್ಡ ಲಾಭವನ್ನೇ ಕೊಟ್ಟಿದೆ. ಆದರೆ, ಒಂದೆರಡು ವರ್ಷಕ್ಕೆ ಹೂಡಿಕೆ ಮಾಡಿ ರಿಟರ್ನ್ ಪಡೆಯುತ್ತೇನೆ ಎಂದುಕೊಂಡರೆ ಅದು ಗ್ಯಾರಂಟಿ ಇಲ್ಲ. ಕಳೆದ ಒಂದು ವರ್ಷದಲ್ಲಿ ಷೇರುಗಳಾಗಲೀ, ಮ್ಯೂಚುವಲ್ ಫಂಡ್​ಗಳಾಗಲೀ ಪಾಸಿಟಿವ್ ಆಗಿದ್ದೇ ಹೆಚ್ಚು.

15 ವರ್ಷದ ಅವಧಿಯಲ್ಲಿ ಫಂಡ್​ಗಳು ಶೇ. 15 ಸಿಎಜಿಆರ್​ನಲ್ಲಿ ಲಾಭ ತರುತ್ತವೆ ಎಂದು ಖಾತ್ರಿಯಾಗಿ ಹೇಳಲು ಸಾಧ್ಯವಿಲ್ಲ. ಸಾಮಾನ್ಯವಾಗಿ ಶೇ. 10ರಿಂದ 15ರಷ್ಟು ರಿಟರ್ನ್ ಅನ್ನು ನಿರೀಕ್ಷಿಸಬಹುದು.

ಇದನ್ನೂ ಓದಿ: ಶೇ. 80 ವಿತ್​ಡ್ರಾಯಲ್; 15 ವರ್ಷ ಹೂಡಿಕೆ, 5 ವರ್ಷ ಲಾಕಿನ್; ಹೊಸ ಆಕರ್ಷಣೆ ಪಡೆದ ಎನ್​ಪಿಎಸ್

ಒಂದು ವೇಳೆ, ನೀವು ಹೂಡಿಕೆ ಮಾಡಿದ ಫಂಡ್ ಶೇ. 15ರಷ್ಟು ರಿಟರ್ನ್ ಕೊಟ್ಟಲ್ಲಿ ನಿಮ್ಮ 15,000 ರು ಎಸ್​ಐಪಿ 15 ವರ್ಷದಲ್ಲಿ 1.01 ಕೋಟಿ ರೂ ಆಗುತ್ತದೆ. ಅಕಸ್ಮಾತ್, ಫಂಡ್ ಶೇ. 12 ಸಿಎಜಿಆರ್​ನಲ್ಲಿ ಬೆಳೆದಲ್ಲಿ ನಿಮಗೆ 15 ವರ್ಷದಲ್ಲಿ ಸಿಗುವುದು ಸುಮಾರು 75 ಲಕ್ಷ ರೂ. ಹೀಗಾಗಿ, ನೀವು ಹೂಡಿಕೆಗೆ ಗುರಿ ನಿಗದಿ ಮಾಡಿಕೊಳ್ಳುವಾಗ ಎರಡು ಮೂರು ಸಾಧ್ಯತೆಗಳನ್ನು ಗಮನದಲ್ಲಿಟ್ಟುಕೊಳ್ಳಬೇಕಾಗಬಹುದು. ನಿಮ್ಮ ಫಂಡ್ ಶೇ. 10, ಶೇ 12 ಮತ್ತು ಶೇ. 15 ಸಿಎಜಿಆರ್​ನಲ್ಲಿ ಬೆಳೆದರೆ ಎಷ್ಟೆಷ್ಟು ಸಿಗಬಹುದು ಎನ್ನುವ ಅಂದಾಜು ಮೊದಲೇ ಮಾಡಿಕೊಳ್ಳಬೇಕು. ಆಗ ಕಡಿಮೆ ಮೊತ್ತವನ್ನೇ ಗುರಿಯಾಗಿಟ್ಟುಕೊಂಡಾಗ ಅಂತ್ಯದಲ್ಲಿ ನಿರಾಸೆಯಾಗುವುದಿಲ್ಲ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಬಾಂಗ್ಲಾದೇಶದಲ್ಲಿ ಹಿಂದೂ ಯುವಕನ ಬರ್ಬರ ಹತ್ಯೆ; ಯೂನಸ್ ಸರ್ಕಾರದಿಂದ ಖಡಕ್ ಎಚ್ಚರಿಕೆ – Kannada News | No place for violence in New Bangladesh Yunus government condemns Hindu mans lynching

ಢಾಕಾ, ಡಿಸೆಂಬರ್ 19: ವಿದ್ಯಾರ್ಥಿ ನಾಯಕ ಉಸ್ಮಾನ್ ಹಾದಿ ಅವರ ಸಾವಿನ ನಂತರ ಉಂಟಾದ ಪ್ರತಿಭಟನೆಗಳ ನಡುವೆ, ಧರ್ಮನಿಂದನೆಯ ಆರೋಪದ ಮೇಲೆ ಹಿಂದೂ ವ್ಯಕ್ತಿಯನ್ನು ಕಟ್ಟಿಹಾಕಿ, ಹೊಡೆದು, ಸಜೀವದಹನ ಮಾಡಲಾಗಿದೆ. ಈ ಹತ್ಯೆಯನ್ನು ಮುಖ್ಯ ಸಲಹೆಗಾರ ಮುಹಮ್ಮದ್ ಯೂನಸ್ ನೇತೃತ್ವದ ಬಾಂಗ್ಲಾದೇಶದ (Bangladesh) ಮಧ್ಯಂತರ ಸರ್ಕಾರ ಬಲವಾಗಿ ಖಂಡಿಸಿದೆ. “ನವ ಬಾಂಗ್ಲಾದೇಶದಲ್ಲಿ ಯಾವುದೇ ರೀತಿಯ ಹಿಂಸಾಚಾರಕ್ಕೆ ಅವಕಾಶವಿಲ್ಲ” ಎಂದು ಯೂನಸ್ ಸರ್ಕಾರ ಎಚ್ಚರಿಕೆ ನೀಡಿದೆ. ಹತ್ಯೆಗಳಲ್ಲಿ ಭಾಗಿಯಾಗಿರುವ ಯಾರನ್ನೂ ಬಿಡಲಾಗುವುದಿಲ್ಲ ಎಂದು ಎಚ್ಚರಿಸಿದೆ.

“ಮೈಮೆನ್ಸಿಂಗ್‌ನಲ್ಲಿ ಹಿಂದೂ ವ್ಯಕ್ತಿಯ ಹತ್ಯೆಯನ್ನು ನಾವು ಸಂಪೂರ್ಣವಾಗಿ ಖಂಡಿಸುತ್ತೇವೆ. ಹೊಸ ಬಾಂಗ್ಲಾದೇಶದಲ್ಲಿ ಅಂತಹ ಹಿಂಸಾಚಾರಕ್ಕೆ ಸ್ಥಳವಿಲ್ಲ. ಈ ಘೋರ ಅಪರಾಧ ಮಾಡಿದವರನ್ನು ಬಿಡುವುದಿಲ್ಲ” ಎಂದು ಬಾಂಗ್ಲಾದೇಶದ ಮಧ್ಯಂತರ ಸರ್ಕಾರ ತಿಳಿಸಿದೆ.

ಇದನ್ನೂ ಓದಿ: ಬಾಂಗ್ಲಾದೇಶದಲ್ಲಿ ಹಿಂದೂ ಯುವಕನನ್ನು ಥಳಿಸಿ, ಮರಕ್ಕೆ ಕಟ್ಟಿಹಾಕಿ, ಸುಟ್ಟು ಹಾಕಿದ ಪಾಪಿಗಳು

ಬಾಂಗ್ಲಾದೇಶಿಗರು ಎಲ್ಲಾ ರೀತಿಯ ಗುಂಪು ಹಿಂಸಾಚಾರವನ್ನು ವಿರೋಧಿಸಬೇಕು ಎಂದು ಸರ್ಕಾರ ಹೇಳಿದೆ. ಇದು ಕೆಲವು ಸೂಕ್ಷ್ಮ ಅಂಶ. ಎಲ್ಲಾ ಹಿಂಸಾಚಾರ, ಬೆದರಿಕೆ, ಬೆಂಕಿ ಹಚ್ಚುವಿಕೆ ಮತ್ತು ಆಸ್ತಿಗಳ ನಾಶದ ಕೃತ್ಯಗಳನ್ನು ನಾವು ಬಲವಾಗಿ ಖಂಡಿಸುತ್ತೇವೆ ಎಂದು ಯೂನಸ್ ಸರ್ಕಾರ ಹೇಳಿದೆ.

ಮೃತ ಯುವಕ ದೀಪು ಚಂದ್ರ ದಾಸ್ ಭಾಲುಕಾ ಉಪಜಿಲಾದ ದುಬಾಲಿಯಾ ಪ್ಯಾರಾ ಪ್ರದೇಶದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ. ಆತ ಯುವ ಗಾರ್ಮೆಂಟ್ ಫ್ಯಾಕ್ಟರಿ ಕೆಲಸಗಾರನಾಗಿದ್ದ. ಸ್ಥಳೀಯ ನಿವಾಸಿಗಳ ಗುಂಪೊಂದು ಆತ ಪ್ರವಾದಿ ಮುಹಮ್ಮದ್ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದಾನೆ ಎಂದು ಆರೋಪಿಸಿ ಗುರುವಾರ ರಾತ್ರಿ 9 ಗಂಟೆ ಸುಮಾರಿಗೆ ಮೇಲೆ ಹಲ್ಲೆ ನಡೆಸಿತು. ಬಳಿಕ ಆತನನ್ನು ಕಟ್ಟಿಹಾಕಿ ಬೆಂಕಿ ಹಚ್ಚಿತು.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

Exit mobile version