Headlines

ರಾಮಮಂದಿರದ ಮೇಲೆ ದಾಳಿ ನಡೆಸಲು ಸಂಚು ರೂಪಿಸಿದ್ದ ಅಬ್ದುಲ್​ ರೆಹಮಾನ್ ಜೈಲಿನಲ್ಲಿ ಹತ್ಯೆ – Kannada News | Abdul Rahman Dies in Custody as Fellow Prisoner Faces Murder Charge in Haryana

ಹರಿಯಾಣ, ಫೆಬ್ರವರಿ 10: ಅಯೋಧ್ಯೆಯ ರಾಮ ಮಂದಿರ(Ram Mandir)ದ ಮೇಲೆ ದಾಳಿ ನಡೆಸಲು ಸಂಚು ರೂಪಿಸಿ ಜೈಲು ಪಾಲಾಗಿದ್ದ ಅಬ್ದುಲ್ ರೆಹಮಾನ್​ನನ್ನು ಜೈಲಿನಲ್ಲಿ ಸಹ ಕೈದಿಗಳು ಕೊಲೆ ಮಾಡಿರುವ ಘಟನೆ ಹರಿಯಾಣದ ಫರೀದಾಬಾದ್​ನಲ್ಲಿ ನಡೆದಿದೆ. ಉತ್ತರ ಪ್ರದೇಶದ ಅಯೋಧ್ಯೆಯ ನಿವಾಸಿ ಅಬ್ದುಲ್ ರೆಹಮಾನ್(20)ನನ್ನು ಹರಿಯಾಣದ ಫರೀದಾಬಾದ್ ಜಿಲ್ಲೆಯ ಬಲ್ಲಭಗಢದಲ್ಲಿರುವ ನೀಮ್ಕಾ ಜಿಲ್ಲಾ ಜೈಲಿನಲ್ಲಿ ಬಿಗಿ ಭದ್ರತೆ ಇದ್ದರೂ ಹತ್ಯೆ ಮಾಡಲಾಗಿದೆ. ವರದಿಗಳ ಪ್ರಕಾರ, ಅಬ್ದುಲ್ ರೆಹಮಾನ್​ನನ್ನು ಮಾರ್ಚ್ 2025ರಲ್ಲಿ ಫರೀದಾಬಾದ್ನ ಪಾಲಿ ಪ್ರದೇಶದಿಂದ ಗುಜರಾತ್ ಭಯೋತ್ಪಾದಕ ನಿಗ್ರಹ…

Read More

ರಾಶಿಕಾ ಬಗ್ಗೆ ಅಪರೂಪದ ವಿಷಯಗಳ ಹೇಳಿದ ತಾಯಿ – Kannada News | Bigg Boss Kannada 12: Rashika’s mother talks about her daughter

ಬಿಗ್​​ಬಾಸ್ (Bigg Boss) ಮನೆಯಲ್ಲಿ ಈ ವಾರ ಫ್ಯಾಮಿಲಿ ವಾರ ಆಗಿದೆ. ರಾಶಿಕಾ ಅವರ ಸಹೋದರ ಮತ್ತು ಅವರ ತಾಯಿ ಅವರು ಬಿಗ್​​ಬಾಸ್ ಮನೆಗೆ ಬಂದಿದ್ದಾರೆ. ರಾಶಿಕಾ ಅವರ ಸಹೋದರನ ಎಂಟ್ರಿ ಸಖತ್ ಆಗಿದೆ. ರಾಶಿಕಾ ಅವರ ತಾಯಿಯೂ ಸಹ ಬಿಗ್​​ಬಾಸ್ ಮನೆಗೆ ಬಂದಿದ್ದಾರೆ. ಮನೆ ಮಂದಿಯ ಜೊತೆಗೆಲ್ಲ ಬೆರೆತು ಮಾತನಾಡಿರುವ ರಾಶಿಕಾ ಅವರ ತಾಯಿ, ರಾಶಿಕಾ ಬಗ್ಗೆ ಕೆಲವು ಅಪರೂಪದ ವಿಷಯಗಳನ್ನು ಮನೆ ಮಂದಿಯ ಮುಂದೆ ಹಂಚಿಕೊಂಡಿದ್ದಾರೆ. ವಿಡಿಯೋ ನೋಡಿ… ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್…

Read More

ಸಿಎಂ ಕುರ್ಚಿ ಕದನ: ಹೈಕಮಾಂಡ್​​ ಭೇಟಿ ಬಳಿಕವೂ ಡಿಕೆಶಿಗೆ ಸಿಕ್ಕಿಲ್ವಾ ಸ್ವಷ್ಟ ಚಿತ್ರಣ? – Kannada News | Karnataka Power Tussle: DK Shivakumars Delhi Hopes Dashed, Lack of Clarity Persists

ಬೆಂಗಳೂರು, ಫೆಬ್ರವರಿ 13: ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ದೆಹಲಿ ಪ್ರವಾಸದ ಬಳಿಕವೂ ಅಧಿಕಾರ ಹಸಸ್ತಾಂತರದ ಬಗ್ಗೆ ಯಾವುದೇ ಸ್ಪಷ್ಟ ಚಿತ್ರಣ ಸಿಕ್ಕಿಲ್ಲ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ. ಡಿಕೆಶಿಪಾಳಯವು ಒಂದು ಮಹತ್ವದ ಬೆಳವಣಿಗೆಯ ನಿರೀಕ್ಷೆಯಲ್ಲಿತ್ತು. ಆದರೆ ದೆಹಲಿ ಭೇಟಿಯು ಅಸ್ಸಾಂ ಚುನಾವಣೆ ಚರ್ಚೆಗೆ ಮಾತ್ರ ಸೀಮಿತವಾಗಿದೆ. ಹೀಗಾಗಿ ಈ ಬಾರಿಯಾದರೂ ಗುಡ್ ನ್ಯೂಸ್ ಸಿಗುತ್ತದೆ ಎಂದು ಆಶಿಸಿದ್ದ ಬೆಂಬಲಿತ ಶಾಸಕರು ಮತ್ತೆ ನಿರಾಸೆಗೊಂಡಿದ್ದಾರೆ. ಮತ್ತೊಂದೆಡೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್ ಪೂರ್ವಭಾವಿ ಸಭೆಗಳನ್ನು ನಡೆಸುತ್ತಿರುವುದು, ಅಧಿಕಾರ ಹಂಚಿಕೆ…

Read More

RCB vs DC: ಜನ್ಮ ದಿನದಂದು ಆರ್​ಸಿಬಿ ವಿರುದ್ಧ ಅಬ್ಬರಿಸಿದ ಕೆಎಲ್ ರಾಹುಲ್ – Kannada News | KL Rahul’s Birthday Fifty Powers Delhi Capitals to Dramatic Win Over RCB at Chinnaswamy

ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ರೋಮಾಂಚಕ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು 6 ವಿಕೆಟ್‌ಗಳಿಂದ ಸೋಲಿಸಿತು. ಆರ್​​ಸಿಬಿ ನೀಡದ 175 ರನ್​ಗಳ ಗುರಿ ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ ಪರ ಕನ್ನಡಿಗ ಕೆಎಲ್ ರಾಹುಲ್ ಮತ್ತು ಟ್ರಿಸ್ಟಾನ್ ಸ್ಟಬ್ಸ್ ಅರ್ಧಶತಕಗಳ ಇನ್ನಿಂಗ್ಸ್ ಆಡಿದರೆ, ಕೊನೆಯ ಓವರ್‌ನಲ್ಲಿ ಡೇವಿಡ್ ಮಿಲ್ಲರ್ ಸತತ ಎರಡು ಸಿಕ್ಸರ್‌ಗಳನ್ನು ಬಾರಿಸಿ ಡೆಲ್ಲಿ ತಂಡಕ್ಕೆ ಗೆಲುವು ತಂದುಕೊಟ್ಟರು. ವಾಸ್ತವವಾಗಿ ಆರ್​​ಸಿಬಿ ನೀಡಿದ ಗುರಿ ಬೆನ್ನಟ್ಟಿದ ಡೆಲ್ಲಿ ತಂಡಕ್ಕೆ…

Read More

ಯಾದಗಿರಿ: ಕೃಷ್ಣಾ ನದಿಯಲ್ಲಿ ಅಕ್ರಮ ಮರಳು ದಂಧೆ; ಅಧಿಕಾರಿಗಳು ದಾಳಿ, ಕೋಟ್ಯಂತರ ರೂ ಮೌಲ್ಯದ ಮರಳು ಜಪ್ತಿ – Kannada News | Yadgir: Officials crack down on illegal sand mafia; sand worth crores seized

ಯಾದಗಿರಿ, ಡಿಸೆಂಬರ್​​ 18: ಕೃಷ್ಣಾ ನದಿ ಯಾದಗಿರಿ (Yadgiri) ಜಿಲ್ಲೆಯ ಜನರ ಜೀವನಾಡಿ. ಈ ವರ್ಷ ಅತಿಯಾದ ಮಳೆಯಿಂದಾಗಿ ನದಿ ಮೈದುಂಬಿಕೊಂಡಿದೆ. ಇದರ ಜೊತೆಗೆ ಸಾಕಷ್ಟು ಮರಳು (sand) ಕೂಡ ಸಂಗ್ರಹವಾಗಿದೆ. ಇದನ್ನೇ ಬಂಡವಾಳ ಮಾಡಿಕೊಂಡ ದಂಧೆಕೋರರು ನದಿಯ ಒಡಲು ಬಗೆದು ಕೋಟ್ಯಂತರ ರೂ. ಮೌಲ್ಯದ ಮರಳು ಲೂಟಿ ಮಾಡುತ್ತಿದ್ದಾರೆ. ಕೊನೆಗೂ ಅಧಿಕಾರಿಗಳು ಧೈರ್ಯ ಮಾಡಿ‌ ಮರಳು ದಂಧೆಕೋರರಿಗೆ ಬಿಸಿ ಮುಟ್ಟಿಸಿದ್ದಾರೆ. ಅಷ್ಟೇ ಅಲ್ಲದೆ ಕೋಟ್ಯಂತರ ರೂ. ಮೌಲ್ಯದ ಮರಳು ಜಪ್ತಿ ಮಾಡಿ ವಾಹನಗಳನ್ನು ಸೀಜ್ ಮಾಡಿದ್ದಾರೆ….

Read More

ಶನಿ ಅಮಾವಾಸ್ಯೆ, ವೀಕೆಂಡ್ ಹಿನ್ನೆಲೆ ಮಲೆ ಮಹದೇಶ್ವರನ ದರ್ಶನಕ್ಕೆ ಜನವೋ ಜನ! – Kannada News | Devotee Surge at Male Mahadeshwara Hill for Shani Amavasya and Weekend

ಚಾಮರಾಜನಗರ, ಮೇ 17: ಶನಿ ಅಮಾವಾಸ್ಯೆ ಮತ್ತು ವೀಕೆಂಡ್ ಹಿನ್ನೆಲೆಯಲ್ಲಿ ಮಲೆ ಮಹದೇಶ್ವರ ಬೆಟ್ಟಕ್ಕೆ ಭಕ್ತರ ದಂಡೇ ಹರಿದುಬಂದಿದೆ. ರಾಜ್ಯದ ವಿವಿಧ ಮೂಲೆಗಳಿಂದ ಆಗಮಿಸಿದ ಸಹಸ್ರಾರು ಭಕ್ತರು ಮಾದಪ್ಪನ ದರ್ಶನ ಪಡೆದು ವಿಶೇಷ ಸೇವೆಗಳನ್ನು ಸಲ್ಲಿಸಿದ್ದಾರೆ. ನಿನ್ನೆಯಿಂದಲೂ ಮಾದಪ್ಪನ ಭಕ್ತ ಸಮೂಹವು ಬೆಟ್ಟದ ಕಡೆಗೆ ಬರುತ್ತಿದ್ದು, ದೇವಾಲಯದ ಆವರಣ ಭಕ್ತರಿಂದ ತುಂಬಿಹೋಗಿದೆ. ಭಕ್ತರು ತಮ್ಮ ಭಕ್ತಿ ಸಮರ್ಪಿಸಲು ಚಿನ್ನದ ರಥ, ಬೆಳ್ಳಿ ರಥ, ಹುಲಿ ವಾಹನ, ರುದ್ರಾಕ್ಷಿ ಮಂಟಪ ಹಾಗೂ ಬಸವ ರಥ ಸೇರಿದಂತೆ ಹಲವು ವಿಭಿನ್ನ…

Read More

ಮಳೆಗಾಲದಲ್ಲಿ ಬರದ ಛಾಯೆ: ಕುರಿಗಳಿಗೆ ಮೇವು, ನೀರು ಸಿಗದೇ ಕುರಿಗಾಹಿಗಳು ಕಂಗಾಲು – Kannada News | Drought Crisis: Shepherds Struggle for Fodder, Water; Sheep Farming at Risk

ಬೀದರ್, ಜೂನ್​​ 26: ಮಳೆಗಾಲ (Rain) ಆರಂಭವಾಗಿ ವಾರಗಳೇ ಕಳೆದರೂ ಜಿಲ್ಲೆಯಲ್ಲಿ ಮಾತ್ರ ಸಮರ್ಪಕ ಮಳೆಯಾಗಿಲ್ಲ. ಪರಿಣಾಮ ರೈತರು ಮಾತ್ರವಲ್ಲ, ಕುರಿ-ಮೇಕೆಗಳನ್ನು ಸಾಕುವ ಕುರಿಗಾಹಿಗಳ ಬದುಕೂ ಸಂಕಷ್ಟಕ್ಕೆ ಸಿಲುಕಿದೆ. ಕಾಡು ಮತ್ತು ಬಯಲು ಪ್ರದೇಶಗಳಲ್ಲಿ ಹಸಿರು ಸಂಪೂರ್ಣ ಮಾಯವಾಗಿದ್ದು, ಕುರಿಗಳಿಗೆ ಮೇವು ಮತ್ತು ಕುಡಿಯುವ ನೀರು ಸಿಗದೇ ಕುರಿಗಾಹಿಗಳು (Sheep Farming) ಹತ್ತಾರು ಕಿ.ಮೀ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೈಕೊಟ್ಟ ಮುಂಗಾರು: ಮೇವು ಸಿಗದೆ ಕುರಿಗಾಹಿಗಳು ಕಂಗಾಲು ಬೀದರ್ ಜಿಲ್ಲೆಯಲ್ಲಿ ಈ ಬಾರಿ ಮುಂಗಾರು ಕೈಕೊಟ್ಟಿದೆ. ಮಳೆ…

Read More

ಮಂಗಳೂರಿನಲ್ಲಿ ಮೇಲ್ಛಾವಣಿ ಕುಸಿತ: ಬಚಾವಾದವರು ಹೇಳಿದ್ದೇನು?

ಮಂಗಳೂರು, ಜುಲೈ 01: ನಗರದ ಕಂಕನಾಡಿ ಪ್ರದೇಶದಲ್ಲಿ ಭಾರಿ ಮಳೆಯಿಂದಾಗಿ ಮನೆ ಹಿಂಭಾಗದ ತಡೆಗೋಡೆ ಕುಸಿದು ಮನೆ ಮೇಲೆ ಬಿದ್ದ ಪರಿಣಾಮ ಮೂವರು ಸ್ಥಳದಲ್ಲೇ ಮೃತಪಟ್ಟ ಘಟನೆ ಬುಧವಾರ ಮುಂಜಾನೆ ಸಂಭವಿಸಿದೆ. ಈ ಅವಘಡದಲ್ಲಿ ಒಬ್ಬ ಮಹಿಳೆ ಮತ್ತು ಇಬ್ಬರು ಬಾಲಕಿಯರು ಮೃತಪಟ್ಟಿದ್ದು,ಓರ್ವ ಪುರುಷ ಮತ್ತು ಇಬ್ಬರು ಮಕ್ಕಳನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ನೆರೆಮನೆಯವರು, ಬೆಳಗಿನ ಜಾವ ಸುಮಾರು 4 ಗಂಟೆಗೆ ಈ ದುರಂತ ಸಂಭವಿಸಿದೆ. ಜೋರಾಗಿ ಶಬ್ಧ ಬಂದ ನಂತರ ಸ್ಥಳಕ್ಕೆ…

Read More

ಶಾರುಖ್ ಖಾನ್ ಸಿನಿಮಾವನ್ನು ಹಿಂದಿಕ್ಕಿದ ಯಶ್ ಸಿನಿಮಾಗಳು – Kannada News | Most anticipated movies of 2026, Yash’s movie beats Shah Rukh Khan’s movie

ಯಶ್ (Yash), ಭಾರತದ ಬಲು ಜನಪ್ರಿಯ ಪ್ಯಾನ್ ಇಂಡಿಯಾ ನಟರಲ್ಲಿ ಒಬ್ಬರು. ಅವರ ‘ಕೆಜಿಎಫ್’ ಮತ್ತು ‘ಕೆಜಿಎಫ್ 2’ ಸಿನಿಮಾಗಳು ಯಶ್ ಅವರಿಗೆ ಬಲು ದೊಡ್ಡ ಜನಪ್ರಿಯತೆ ತಂದುಕೊಟ್ಟಿವೆ. ಯಶ್ ಅವರ ಕ್ರೇಜ್ ಅದ್ಯಾವ ಮಟ್ಟಕ್ಕೆ ಇದೆಯೆಂದರೆ ಶಾರುಖ್ ಖಾನ್ ಅವರ ಸಿನಿಮಾ ಅನ್ನು ಸಹ ಯಶ್ ಸಿನಿಮಾಗಳು ಹಿಂದಿಕ್ಕಿವೆ. ಇದೀಗ ಯಶ್ ಎರಡು ಸಿನಿಮಾಗಳಲ್ಲಿ ನಟಿಸಿದ್ದು, ಎರಡೂ ಸಿನಿಮಾಗಳು ಇದೇ ವರ್ಷ, ಕೆಲವೇ ತಿಂಗಳುಗಳ ಅಂತರದಲ್ಲಿ ಬಿಡುಗಡೆ ಆಗಿವೆ. ಯಶ್ ಅವರ ಸಿನಿಮಾಗಳು ಬಲು ನಿರೀಕ್ಷಿತ…

Read More

ಮಂತ್ರಾಲಯದಲ್ಲಿ ಭಾರಿ ಮಳೆಯಿಂದ ಭಕ್ತರಿಗೆ ತೊಂದರೆ: ಭೋಜನಶಾಲೆ, ಕಲ್ಯಾಣ ಮಂಟಪದಲ್ಲಿ ವಸತಿ ವ್ಯವಸ್ಥೆ – Kannada News | Mantralaya Mutt Arranges Shelter for Devotees After Heavy Downpour

ರಾಯಚೂರು, ಮೇ 22: ಮಂತ್ರಾಲಯದಲ್ಲಿ ಭಾರಿ ಮಳೆಯ ಅಬ್ಬರದಿಂದ ಭಕ್ತರು ತೀವ್ರ ತೊಂದರೆಗೊಳಗಾದ ಘಟನೆ ನಡೆದಿದೆ. ರಾತ್ರಿ ಮಠದ ಪ್ರಾಂಗಣದಲ್ಲಿ ಮಲಗಿದ್ದ ಭಕ್ತರು ತಡರಾತ್ರಿ ಸುರಿದ ಅನಿರೀಕ್ಷಿತ ಮಳೆಯಿಂದ ನೆನೆದು ಪರದಾಡಿದರು. ಈ ಪರಿಸ್ಥಿತಿಯಲ್ಲಿ, ರಾಯರ ಭಕ್ತರ ನೆರವಿಗೆ ಮಂತ್ರಾಲಯ ಮಠ ಧಾವಿಸಿತು. ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಶ್ರೀಗಳು ತಕ್ಷಣವೇ ಭಕ್ತರಿಗೆ ಸೂಕ್ತ ವ್ಯವಸ್ಥೆಗಳನ್ನು ಕಲ್ಪಿಸಲು ಮುಂದಾದರು. ಮಳೆಯಿಂದ ತೊಂದರೆಗೊಳಗಾದ ಭಕ್ತರನ್ನು ಅನ್ನಪೂರ್ಣೇಶ್ವರಿ ಭೋಜನಶಾಲೆ ಮತ್ತು ಕಲ್ಯಾಣ ಮಂಟಪಗಳಿಗೆ ತೆರಳುವಂತೆ ಸೂಚಿಸಲಾಯಿತು. ಖುದ್ದು ಸುಭುದೇಂದ್ರ ತೀರ್ಥ ಸ್ವಾಮೀಜಿಯೇ…

Read More