TV9 Kannada News Live: ಹೈಕಮಾಂಡ್ ನಡೆಗೆ ಕೈ ನಾಯಕರು ಗರಂ! ಈ ಹೊತ್ತಿನ ಪ್ರಮುಖ ಸುದ್ದಿಗಳು ಇಲ್ಲಿವೆ – Kannada News | TV9 Kannada Live Breaking News 05 August 2026 Monsoon, Cabinet expansion, congress MLAs, Politics Cinema Latest Updates Online

Breaking News Today Live Updates in Kannada: ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವ ಸಂಪುಟ ಪುನರಚನೆ ಅಸಮಾಧಾನ ತೀವ್ರಗೊಂಡಿದ್ದು, ಶಾಸಕ ಆರ್. ಬಿ. ತಿಮ್ಮಾಪುರ ಹಾಗೂ ಜಿಲ್ಲಾಧ್ಯಕ್ಷ ಎಸ್. ಜಿ. ನಂಜಯ್ಯನಮಠ ಅವರದ್ದು ಎನ್ನಲಾದ ‘ಪೇಮೆಂಟ್ ಸೀಟ್’ ಕುರಿತ ಆಡಿಯೋ ವೈರಲ್ ಆಗಿದೆ. ಮತ್ತೊಂದೆಡೆ, ಕರಾವಳಿ ಹಾಗೂ ಮಲೆನಾಡಿನಲ್ಲಿ ಮುಂಗಾರು ಮಳೆ ಚುರುಕಾಗಿದ್ದು, ಇಂದು ದಕ್ಷಿಣ ಕನ್ನಡ, ಉಡುಪಿ ಸೇರಿದಂತೆ 6 ಜಿಲ್ಲೆಗಳಿಗೆ ಭಾರಿ ಮಳೆಯ ಮುನ್ಸೂಚನೆ ನೀಡಲಾಗಿದೆ. ಈ ನಡುವೆ, ತಮಿಳುನಾಡಿನಲ್ಲಿ ನಟಿ ತ್ರಿಶಾ ಕುರಿತು ಆಕ್ಷೇಪಾರ್ಹ ಹೇಳಿಕೆ ನೀಡಿಲ್ಲ ಎಂದು ಸ್ಪಷ್ಟಪಡಿಸಿರುವ ಡಿಎಂಕೆ ಮುಖಂಡ ಉದಯನಿಧಿ ಸ್ಟಾಲಿನ್, ಟಿವಿಕೆ ಸರ್ಕಾರ ತಮ್ಮನ್ನು ಬಂಧಿಸಿ ಭಯೋತ್ಪಾದಕನಂತೆ ನಡೆಸಿಕೊಂಡಿದೆ ಎಂದು ಆರೋಪಿಸಿದ್ದಾರೆ. ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜ್ಯ, ರಾಜಕೀಯ, ಸಿನಿಮಾ, ಕ್ರೀಡೆ ಇತ್ಯಾದಿ ಲೇಟೆಸ್ಟ್ ಮಾಹಿತಿ ತಿಳಿಯಲು ಈ ಪುಟವನ್ನು ರಿಫ್ರೆಶ್ ಮಾಡುತ್ತಿರಿ.

Tv9 Kannada Live TV ಇಲ್ಲಿ ವೀಕ್ಷಿಸಿ

Source link

‘ಅವರನ್ನು ಸಿಎಂ ವಿಜಯ್ ಅಂತಲೇ ಕರೆಯಬೇಕು’; ಮಾಧವನ್ ನೇರ ಮಾತು – Kannada News | R Madhavan Calls Thalapathy Vijay CM Vijay, Rules Out His Own Political Entry

ತಮಿಳುನಾಡಿನ ಪ್ರಸ್ತುತ ರಾಜಕೀಯ ಬೆಳವಣಿಗೆಗಳು ಹಾಗೂ ಚಿತ್ರರಂಗದ ಸಹನಟ ದಳಪತಿ ವಿಜಯ್ ಅವರ ರಾಜಕೀಯ ಪ್ರವೇಶದ ಕುರಿತು ನಟ ಆರ್‌. ಮಾಧವನ್ ಅವರು ಸಂದರ್ಶನವೊಂದರಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಅವರು ವಿಜಯ್ ಅವರನ್ನು ಉತ್ತಮ ಗೆಳೆಯ ಎಂದು ಕರೆದಿದ್ದು, ವಿಜಯ್ ಅವರನ್ನು ‘ಸಿಎಂ ವಿಜಯ್’ ಎಂದು ಕರೆಯಬೇಕು ಎಂದಿದ್ದಾರೆ.

ಸಂದರ್ಶನದಲ್ಲಿ ತಮಿಳುನಾಡು ರಾಜಕೀಯದ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಮಾಧವನ್, ‘ಚಿತ್ರರಂಗದಲ್ಲಿ ನಮ್ಮೊಂದಿಗೇ ಬೆಳೆದು ಬಂದ ನಟ ವಿಜಯ್ ರಾಜಕೀಯ ರಂಗಕ್ಕೆ ಬಂದಿರುವುದು ಹೆಮ್ಮೆ ತಂದಿದೆ ಎಂದಿದ್ದಾರೆ. ವಿಜಯ್ ನನಗೆ ಆತ್ಮೀಯ ಗೆಳೆಯ. ಇಷ್ಟೊಂದು ವೇಗವಾಗಿ ರಾಜಕೀಯದಲ್ಲಿ ಬದಲಾವಣೆಗಳು ಆಗುತ್ತಿರುವುದು ಜನರಲ್ಲಿ ಹೊಸ ಭರವಸೆಯನ್ನು ಮೂಡಿಸಿದೆ. ಅವರನ್ನು ಸಿಎಂ ವಿಜಯ್ ಎಂದೇ ಕರೆಯಬೇಕು’ ಎಂದು ಅವರು ಹೇಳಿದ್ದಾರೆ.

ರಾಜಕೀಯವು ‘ಎರಡು ಅಂಚಿನ ಕತ್ತಿ’

ರಾಜಕೀಯದ ಸವಾಲುಗಳ ಬಗ್ಗೆ ಮಾತನಾಡಿದ ಮಾಧವನ್, ‘ರಾಜಕೀಯ ಎಂಬುದು ಎರಡು ಅಂಚಿನ ಕತ್ತಿ ಇದ್ದಂತೆ. ನೀವು ಒಳ್ಳೆಯದನ್ನು ಮಾಡಿದರೂ ಟೀಕೆಗಳು ಬರುತ್ತವೆ, ತಪ್ಪು ಮಾಡಿದರೂ ಟೀಕೆಗಳು ಬರುತ್ತವೆ. ಯಾವುದೇ ನಿರ್ಧಾರ ತೆಗೆದುಕೊಂಡರೂ ವಿರೋಧಿಸುವ ಒಂದು ವರ್ಗ ಇದ್ದೇ ಇರುತ್ತದೆ’ ಎಂದು ವಿಶ್ಲೇಷಿಸಿದ್ದಾರೆ.

ರಾಜಕೀಯಕ್ಕೆ ಬರಲ್ಲ

‘ನಿಮಗೂ ರಾಜಕೀಯಕ್ಕೆ ಬರುವ ಆಸಕ್ತಿ ಇದೆಯೇ?’ ಎಂದು ಸಂದರ್ಶಕರು ಕೇಳಿದಾಗ, ನಟ ಮಾಧವನ್ ನಗುತ್ತಾ ‘ಖಂಡಿತ ಇಲ್ಲ, ನನಗೆ ರಾಜಕೀಯದಲ್ಲಿ ಯಾವುದೇ ಆಸಕ್ತಿ ಇಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ. ಸದ್ಯ ಮಾಧವನ್ ಅವರು ದುಬೈನಲ್ಲಿ ಸೆಟಲ್ ಆಗಿದ್ದಾರೆ. ಸಿನಿಮಾ ಕೆಲಸ ಇದ್ದಾಗ ಅವರು ಭಾರತಕ್ಕೆ ಬರುತ್ತಾರೆ.

ಇದನ್ನೂ ಓದಿ: ‘ಭಾರತದ ಎಡಿಸನ್’ ಜಿ.ಡಿ. ನಾಯ್ಡು ಬಯೋಪಿಕ್; ಟ್ರೇಲರ್​ನಲ್ಲಿ ಗಮನ ಸೆಳೆದ ಆರ್. ಮಾಧವನ್

ಸಿನಿಮಾ ಜರ್ನಿ

ಈ ವರ್ಷ ರಿಲೀಸ್ ಆದ ‘ಧುರಂಧರ್ 2’ ಚಿತ್ರದಲ್ಲಿ ಐಬಿ ಮುಖ್ಯಸ್ಥ ಅಜಯ್ ಸನ್ಯಾಲ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಜಿಡಿಎನ್ ಸಿನಿಮಾದಲ್ಲಿ ಜಿಡಿ ನಾಯ್ಡು ಪಾತ್ರದಲ್ಲಿ ಅವರು ಕಾಣಿಸಿಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Spiritual Tips: ಸೂರ್ಯಗ್ರಹಣದಂದು ಗರ್ಭಿಣಿಯರು ತೆಗೆದುಕೊಳ್ಳಬೇಕಾದ ಆಧ್ಯಾತ್ಮಿಕ ಮುನ್ನೆಚ್ಚರಿಕೆಗಳಿವು – Kannada News | Solar Eclipse Precautions for Pregnant Women: Spiritual Tips and Rules

ಖಗೋಳ ಶಾಸ್ತ್ರದ ಪ್ರಕಾರ ಗ್ರಹಣ ಎಂಬುದು ಒಂದು ನೈಸರ್ಗಿಕ ವಿದ್ಯಮಾನವಾದರೂ, ಸನಾತನ ಧರ್ಮ ಮತ್ತು ಆಧ್ಯಾತ್ಮಿಕ ಪರಂಪರೆಯಲ್ಲಿ ಇದಕ್ಕೆ ಅತ್ಯಂತ ವಿಶೇಷ ಮಹತ್ವವಿದೆ. ಶೀಘ್ರದಲ್ಲೇ ಸಂಭವಿಸಲಿರುವ (ಆ.12) ಸೂರ್ಯಗ್ರಹಣದ ಹಿನ್ನೆಲೆಯಲ್ಲಿ, ಗರ್ಭಿಣಿಯರು ತಮ್ಮ ಹಾಗೂ ಹುಟ್ಟಲಿರುವ ಮಗುವಿನ ಆರೋಗ್ಯ, ಕ್ಷೇಮ ಮತ್ತು ಧನಾತ್ಮಕ ಶಕ್ತಿಗಾಗಿ ಕೆಲವೊಂದು ಸರಳ ಮುನ್ನೆಚ್ಚರಿಕೆಗಳನ್ನು ವಹಿಸುವುದು ಸೂಕ್ತ ಎಂದು ವಿದ್ವಾಂಸರು ಹಾಗೂ ಹಿರಿಯರು ಸಲಹೆ ನೀಡುತ್ತಾರೆ. ಗ್ರಹಣದ ಸಮಯದಲ್ಲಿ ಬ್ರಹ್ಮಾಂಡದಲ್ಲಿ ಉಂಟಾಗುವ ಶಕ್ತಿಯ ವ್ಯತ್ಯಾಸಗಳು ಮನಸ್ಸು ಮತ್ತು ಶರೀರದ ಮೇಲೆ ಪ್ರಭಾವ ಬೀರಬಲ್ಲವು ಎಂಬ ನಂಬಿಕೆ ಇದೆ. ಆದ್ದರಿಂದ, ಯಾವುದೇ ಭಯವಿಲ್ಲದೆ ಆಧ್ಯಾತ್ಮಿಕ ಚಿಂತನೆಯೊಂದಿಗೆ ಈ ಸಮಯವನ್ನು ಕಳೆಯುವುದು ಒಳಿತು.

ಗೃಹ ಬಂಧನ ಮತ್ತು ಮನಸ್ಸಿನ ಪ್ರಶಾಂತತೆ:

ಗ್ರಹಣದ ಸಮಯದಲ್ಲಿ ಸೂರ್ಯನಿಂದ ಹೊರಹೊಮ್ಮುವ ವಿಕಿರಣಗಳು ಮತ್ತು ಸೂಕ್ಷ್ಮ ಶಕ್ತಿಗಳು ಗರ್ಭಿಣಿಯರ ಮೇಲೆ ನೇರ ಪ್ರಭಾವ ಬೀರದಂತೆ ತಡೆಯಲು ಮನೆಯ ಒಳಗಿರುವುದು ಅತ್ಯಂತ ಕ್ಷೇಮಕರ. ಈ ಸಮಯದಲ್ಲಿ ನೇರವಾಗಿ ಸೂರ್ಯನನ್ನು ಬರಿಗಣ್ಣಿನಿಂದ ವೀಕ್ಷಿಸುವುದನ್ನು ಸಂಪೂರ್ಣವಾಗಿ ತಪ್ಪಿಸಬೇಕು, ಏಕೆಂದರೆ ಇದು ಕಣ್ಣಿನ ಆರೋಗ್ಯದ ಮೇಲೆಯೂ ಪರಿಣಾಮ ಬೀರುತ್ತದೆ. ಅಲ್ಲದೆ, ಗ್ರಹಣದ ಬಗ್ಗೆ ಅನಗತ್ಯ ಭಯ ಅಥವಾ ಆತಂಕವನ್ನು ಮನಸ್ಸಿಗೆ ತಂದುಕೊಳ್ಳದೆ, ಪ್ರಶಾಂತ ಹಾಗೂ ಧನಾತ್ಮಕ ವಾತಾವರಣವನ್ನು ಮನೆಯಲ್ಲಿ ನಿರ್ಮಿಸಿಕೊಳ್ಳುವುದು ಗರ್ಭದಲ್ಲಿರುವ ಮಗುವಿನ ಮಾನಸಿಕ ಬೆಳವಣಿಗೆಗೆ ಸಹಕಾರಿಯಾಗುತ್ತದೆ.

ಚೂಪಾದ ವಸ್ತುಗಳಿಂದ ಅಂತರ ಕಾಯ್ದುಕೊಳ್ಳುವುದು:

ಪ್ರಾಚೀನ ಸಾಂಪ್ರದಾಯಿಕ ನಂಬಿಕೆಗಳ ಪ್ರಕಾರ, ಗ್ರಹಣದ ಅವಧಿಯಲ್ಲಿ ಗರ್ಭಿಣಿಯರು ಯಾವುದೇ ಚೂಪಾದ ಅಥವಾ ಕತ್ತರಿಸುವ ವಸ್ತುಗಳನ್ನು ಬಳಸಬಾರದು. ಗ್ರಹಣ ಮುಗಿಯುವವರೆಗೆ ತರಕಾರಿ ಕತ್ತರಿಸುವುದು, ಅಡುಗೆ ಮಾಡುವುದು, ಹೊಲಿಗೆ ಕೆಲಸ ಮಾಡುವುದು ಅಥವಾ ಕತ್ತರಿ, ಚಾಕು, ಸೂಜಿ ಹಾಗೂ ಪಿನ್‌ಗಳಂತಹ ವಸ್ತುಗಳನ್ನು ಮುಟ್ಟುವುದು ಒಳ್ಳೆಯದಲ್ಲ ಎಂದು ಹೇಳಲಾಗುತ್ತದೆ. ಈ ರೀತಿಯ ದೈಹಿಕ ಶ್ರಮದ ಕೆಲಸಗಳಿಂದ ದೂರವಿದ್ದು ವಿಶ್ರಾಂತಿ ಪಡೆಯುವುದರಿಂದ, ದೇಹ ಮತ್ತು ಮನಸ್ಸು ಎರಡೂ ಸ್ಥಿರವಾಗಿರಲು ಸಹಾಯವಾಗುತ್ತದೆ.

ಇದನ್ನೂ ಓದಿ: ತಪ್ಪಿಯೂ ಈ ದಿನ ದೇವರ ಕೋಣೆಯನ್ನು ಸ್ವಚ್ಛಗೊಳಿಸಬೇಡಿ; ಸರಿಯಾದ ನಿಯಮ ಇಲ್ಲಿದೆ

ಸಾತ್ವಿಕ ಆಹಾರ ಮತ್ತು ದರ್ಭೆ ಹುಲ್ಲಿನ ಪವಿತ್ರತೆ:

ಗ್ರಹಣ ಆರಂಭವಾಗುವ ಮೊದಲು ಸುಲಭವಾಗಿ ಜೀರ್ಣವಾಗುವ ಹಗುರವಾದ ಸಾತ್ವಿಕ ಆಹಾರವನ್ನು ಸೇವಿಸುವುದು ಆರೋಗ್ಯದ ದೃಷ್ಟಿಯಿಂದ ಅತ್ಯುತ್ತಮ. ಆಧ್ಯಾತ್ಮಿಕ ಹಾಗೂ ವಿಜ್ಞಾನದ ನೈಸರ್ಗಿಕ ತತ್ವಗಳ ಪ್ರಕಾರ ದರ್ಭೆ ಅತ್ಯಂತ ಪವಿತ್ರ ಹಾಗೂ ಧನಾತ್ಮಕ ಶಕ್ತಿಯನ್ನು ಕಾಯ್ದುಕೊಳ್ಳುವ ಶೋಧಕ ವಸ್ತುವಾಗಿದೆ. ಗ್ರಹಣಕ್ಕೂ ಮೊದಲು ಮನೆಯಲ್ಲಿರುವ ಕುಡಿಯುವ ನೀರು, ಹಾಲು ಮತ್ತು ಸಂಗ್ರಹಿಸಿಟ್ಟ ಆಹಾರ ಧಾನ್ಯಗಳ ಮೇಲೆ ದರ್ಭೆ ಹುಲ್ಲನ್ನು ಹಾಕಿಡುವುದರಿಂದ, ಗ್ರಹಣದ ಅವಧಿಯಲ್ಲಿ ಅವುಗಳ ಸತ್ತ್ವ ಹಾಳಾಗುವುದಿಲ್ಲ ಮತ್ತು ಕಲುಷಿತಗೊಳ್ಳುವುದಿಲ್ಲ ಎಂಬ ಬಲವಾದ ನಂಬಿಕೆ ಇದೆ.

ಸಾಧನೆ, ಜಪ ಮತ್ತು ಆಧ್ಯಾತ್ಮಿಕ ಚಿಂತನೆ:

ಗ್ರಹಣದ ಸಮಯವನ್ನು ಭಯ ಅಥವಾ ಆತಂಕದಿಂದ ಕಳೆಯುವ ಬದಲು, ಅದನ್ನು ಒಂದು ದಿವ್ಯ ‘ಸಾಧನಾ ಸಮಯ’ವನ್ನಾಗಿ ಮಾರ್ಪಡಿಸಿಕೊಳ್ಳುವುದು ಶ್ರೇಷ್ಠ. ಈ ಸಮಯದಲ್ಲಿ ಯಾವುದೇ ಗೊಂದಲಗಳಿಗೆ ಒಳಗಾಗದೆ ವಿಶ್ರಾಂತಿ ಪಡೆಯುತ್ತಾ, ನಿಮ್ಮ ಇಷ್ಟದೇವತೆಯ ನಾಮಸ್ಮರಣೆ, ‘ಓಂ ನಮಃ ಶಿವಾಯ’ ಅಥವಾ ‘ಗಾಯತ್ರಿ ಮಂತ್ರ’ದಂತಹ ಪವಿತ್ರ ಮಂತ್ರಗಳನ್ನು ಜಪಿಸುವುದು ಮಗುವಿಗೆ ಉತ್ತಮ ಸಂಸ್ಕಾರ ನೀಡುತ್ತದೆ. ಪ್ರಶಾಂತ ಮನಸ್ಸಿನಿಂದ ಮಾಡುವ ಪ್ರಾರ್ಥನೆ ಮತ್ತು ಶುಭ ಮಂತ್ರಗಳ ಶ್ರವಣವು ತಾಯಿ ಹಾಗೂ ಮಗುವಿನ ಸುತ್ತ ಒಂದು ದಿವ್ಯ ರಕ್ಷಣಾ ಕವಚವನ್ನು ನಿರ್ಮಿಸುತ್ತದೆ.

ಸೂರ್ಯಗ್ರಹಣವು ಪ್ರಕೃತಿಯ ಒಂದು ಸುಂದರ ನಿಯಮವಾಗಿದ್ದು, ಇದರ ಬಗ್ಗೆ ಆತಂಕ ಪಡುವ ಅಗತ್ಯವೇನೂ ಇಲ್ಲ. ಹಿರಿಯರು ಮತ್ತು ಜ್ಯೋತಿಷ್ಯ ವಿದ್ವಾಂಸರು ತಿಳಿಸಿರುವ ಈ ಸರಳ ಸಾಂಪ್ರದಾಯಿಕ ಮುನ್ನೆಚ್ಚರಿಕೆಗಳನ್ನು ಗೌರವದಿಂದ ಪಾಲಿಸಿ, ಮನಸ್ಸನ್ನು ಭಗವಂತನ ಧ್ಯಾನದಲ್ಲಿ ತೊಡಗಿಸಿದರೆ ನಿಮ್ಮ ಗರ್ಭಾವಸ್ಥೆಯ ಪ್ರಯಾಣವು ಅತ್ಯಂತ ಮಂಗಳಕರವೂ ಮತ್ತು ಸುಖಕರವೂ ಆಗಿರುತ್ತದೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಯಾರಿಂದಲೂ ಸಾಧ್ಯವಾಗದ ಹೊಸ ವಿಶ್ವ ದಾಖಲೆ ಬರೆದ ಬಾಬರ್ ಆಝಂ – Kannada News | Babar Azam Creates New World Record in International Cricket

ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಹೊಸ ವಿಶ್ವ ದಾಖಲೆ ನಿರ್ಮಾಣವಾಗಿದೆ. ಈ ವಿಶ್ವ ದಾಖಲೆ ನಿರ್ಮಿಸಿರುವುದು ಪಾಕಿಸ್ತಾನ್ ಟೆಸ್ಟ್ ತಂಡದ ನಾಯಕ ಬಾಬರ್ ಆಝಂ (Babar Azam). ಅದು ಸಹ ಮೂರು ಸ್ವರೂಪಗಳಲ್ಲೂ ಪ್ರಚಂಡ ಬ್ಯಾಟಿಂಗ್ ಪ್ರದರ್ಶಿಸುವ ಮೂಲಕ ಎಂಬುದು ವಿಶೇಷ. (PC: PCB)

Source link

ಸಚಿವ ಸ್ಥಾನ ವಂಚಿತ ಸುಬ್ಬಾರೆಡ್ಡಿ ಬೆಂಬಲಿಸಿ ಮೂರು ತಾಲೂಕುಗಳು ಬಂದ್: ಬಾಗೇಪಲ್ಲಿ, ಗುಡಿಬಂಡೆ, ಚೇಳೂರು ಸ್ತಬ್ಧ – Kannada News | Bagepalli, Gudibande, Chelur Bandh Over Denial of Ministerial Post to SN Subbareddy

ಚಿಕ್ಕಬಳ್ಳಾಪುರ, ಆಗಸ್ಟ್ 5: ಸಚಿವ ಸ್ಥಾನ ವಂಚಿತ ಶಾಸಕರ ಆಕ್ರೋಶದ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಮೂರು ತಾಲೂಕುಗಳಾದ ಬಾಗೇಪಲ್ಲಿ, ಗುಡಿಬಂಡೆ ಮತ್ತು ಚೇಳೂರಿನಲ್ಲಿ ಇಂದು ಸಂಪೂರ್ಣ ಬಂದ್​ಗೆ ಕರೆ ನೀಡಲಾಗಿದೆ. ಎಸ್.ಎನ್. ಸುಬ್ಬಾರೆಡ್ಡಿ ಅವರಿಗೆ ಸಚಿವ ಸ್ಥಾನ ಸಿಗದ ಕಾರಣ ಅವರ ಬೆಂಬಲಿಗರು ಕಿಚ್ಚು ಹೊರಹಾಕುತ್ತಿದ್ದಾರೆ. ಬೆಳಿಗ್ಗೆ 6 ಗಂಟೆಯಿಂದಲೇ ರಸ್ತೆಗೆ ಇಳಿದಿರುವ ಪ್ರತಿಭಟನಾಕಾರರು ಟೈರ್‌ಗೆ ಬೆಂಕಿ ಹಚ್ಚಿ ರಸ್ತೆ ತಡೆ ನಡೆಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಾಗೇಪಲ್ಲಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿ ಸೇರಿದಂತೆ ಪ್ರಮುಖ ಹೆದ್ದಾರಿಗಳಲ್ಲಿ ಪ್ರತಿಭಟನೆ ತೀವ್ರಗೊಂಡಿದೆ. ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರಕ್ಕೆ ಅನ್ಯಾಯವಾಗಿದೆ ಎಂದು ಕಾಂಗ್ರೆಸ್ ಹೈಕಮಾಂಡ್, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸಾರ್ವಜನಿಕರಿಗೆ ತೊಂದರೆಯಾಗದಂತೆ ಬಂದ್‌ಗೆ ಮೊದಲೇ ಪ್ರಚಾರ ನೀಡಲಾಗಿತ್ತು ಎಂದು ಯೂತ್ ಕಾಂಗ್ರೆಸ್ ಮುಖಂಡ ನರೇಂದ್ರ ತಿಳಿಸಿದ್ದಾರೆ. ಈ ಬಂದ್‌ಗೆ ಸುಬ್ಬಾರೆಡ್ಡಿ ಅವರ ಬೆಂಬಲವಿಲ್ಲ, ಬದಲಾಗಿ ಸಾರ್ವಜನಿಕರ ಆಕ್ರೋಶವೇ ಕಾರಣ ಎಂದು ಬೆಂಬಲಿಗರು ಹೇಳುತ್ತಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಚಿಕ್ಕಮಗಳೂರು: 5 ಮಂದಿ ಅಕ್ರಮ ಬಾಂಗ್ಲಾದೇಶಿ ನಿವಾಸಿಗಳ ಬಂಧನ – Kannada News | Five Illegal Bangladeshi Nationals Arrested in Karnataka’s Chikkamagaluru

5 ಮಂದಿ ಅಕ್ರಮ ಬಾಂಗ್ಲಾದೇಶಿ ನಿವಾಸಿಗಳ ಬಂಧನImage Credit source: tv9

ಚಿಕ್ಕಮಗಳೂರು, ಆಗಸ್ಟ್ 5: ಕಾಫಿನಾಡು ಚಿಕ್ಕಮಗಳೂರು (Chikkamagaluru) ಜಿಲ್ಲೆಯ ಕಾಫಿ ತೋಟಗಳು, ಹೋಂಸ್ಟೇ ಹಾಗೂ ರೆಸಾರ್ಟ್‌ಗಳಲ್ಲಿ ಅಕ್ರಮವಾಗಿ ನೆಲೆಸಿರುವ ಬಾಂಗ್ಲಾದೇಶಿ ಪ್ರಜೆಗಳಿದ್ದಾರೆ ಎಂಬ ಆರೋಪಗಳ ನಡುವೆ ಐವರು ಅಕ್ರಮ ಬಾಂಗ್ಲಾದೇಶಿ ನಿವಾಸಿಗಳನ್ನು ಪೊಲೀಸರು ಬಂದಿಸಿರುವುದು ಚರ್ಚೆಗೆ ಕಾರಣವಾಗಿದೆ. ಕೇಂದ್ರ ಗುಪ್ತಚರ ಇಲಾಖೆಯಿಂದ ಬಂದ ಮಾಹಿತಿಯ ಆಧಾರದಲ್ಲಿ ನಡೆಸಿದ ತಪಾಸಣೆ ವೇಳೆ ಐವರು ಪತ್ತೆಯಾಗಿದ್ದು, ಅವರ ಬಳಿ ಬಾಂಗ್ಲಾದೇಶದ ಗುರುತಿನ ಚೀಟಿಗಳು ಪತ್ತೆಯಾಗಿವೆ.

ಕಳೆದ ಎರಡು ತಿಂಗಳಿಂದ ಜಿಲ್ಲೆಯ ಪೊಲೀಸ್ ಠಾಣೆಗಳ ವ್ಯಾಪ್ತಿಗೆ ಬರುವ ಹೊರ ಜಿಲ್ಲೆ ಹಾಗೂ ಹೊರ ರಾಜ್ಯದ ಕಾರ್ಮಿಕರ ಮಾಹಿತಿಯನ್ನು ಪೊಲೀಸರು ಸಂಗ್ರಹಿಸುತ್ತಿದ್ದರು. ಇದೇ ವೇಳೆ ನಡೆದ ಪರಿಶೀಲನೆಯಲ್ಲಿ ಐವರು ಕಾಫಿ ಎಸ್ಟೇಟ್‌ಗಳು ಸೇರಿದಂತೆ ವಿವಿಧೆಡೆ ದಿನಗೂಲಿ ಕೆಲಸ ಮಾಡುತ್ತಿರುವುದು ಪತ್ತೆಯಾಗಿದೆ.

ಬಂಧಿತರನ್ನು ಜಹಾಂಗೀರ್, ಫೈಸುದ್ದಿನ್, ನುಮನ್ ಬಶೀರ್, ಮಹಮದ್ ಹುಮೈನ್ ಹಾಗೂ ಮಹಮದ್ ಹಸೀಬುಲ್ ಎಂದು ಗುರುತಿಸಲಾಗಿದೆ. ಕೆಲವರು ಒಂಟಿಯಾಗಿ ಚಿಕ್ಕಮಗಳೂರಿಗೆ ಬಂದಿದ್ದರೆ, ಇನ್ನೂ ಕೆಲವರು ಕುಟುಂಬ ಸಮೇತರಾಗಿ ಬಂದಿರುವುದು ಪ್ರಾಥಮಿಕ ವಿಚಾರಣೆಯಲ್ಲಿ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಾರ್ಮಿಕರ ಪರಿಶೀಲನೆ ಕಾರ್ಯದ ವೇಳೆ ಪತ್ತೆ

ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಕಾರ್ಮಿಕರ ದಾಖಲೆ ಹಾಗೂ ಫೋಟೋಗಳನ್ನು ಸಂಗ್ರಹಿಸಲಾಗುತ್ತಿದೆ. ಈ ಐವರು ಕಾಫಿ ಎಸ್ಟೇಟ್‌ಗಳು ಸೇರಿದಂತೆ ಯಾರೇ ದಿನಗೂಲಿ ಕೆಲಸಕ್ಕೆ ಕರೆದರೂ ಕೆಲಸಕ್ಕೆ ತೆರಳುತ್ತಿದ್ದರು ಎನ್ನಲಾಗಿದೆ.

ಯಾರು ಕರೆತಂದರು? ಪೊಲೀಸರಿಂದ ತನಿಖೆ

ಬಂಧಿತರು ಚಿಕ್ಕಮಗಳೂರಿಗೆ ಹೇಗೆ ಬಂದರು, ಅವರನ್ನು ಯಾರು ಕರೆತಂದರು, ಎಲ್ಲಿಂದ ಬಂದರು, ಅವರ ಏಜೆಂಟ್ ಯಾರು ಹಾಗೂ ಸಂಪರ್ಕ ಹೇಗೆ ಬೆಳೆಸಿಕೊಂಡರು ಎಂಬ ಹಲವು ಆಯಾಮಗಳಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಬಂಧಿತರಿಂದ ಹೆಚ್ಚಿನ ಮಾಹಿತಿ ಪಡೆಯಲು ವಿಚಾರಣೆ ಮುಂದುವರಿದಿದೆ.

ಈಗಾಗಲೇ ಬೇರೆ ಜಿಲ್ಲೆಗಳು ಹಾಗೂ ರಾಜ್ಯಗಳಲ್ಲೂ ಅಕ್ರಮ ಬಾಂಗ್ಲಾದೇಶಿ ನಿವಾಸಿಗಳು ಬಂಧನವಾಗಿರುವ ಹಿನ್ನೆಲೆಯಲ್ಲಿ, ಪ್ರಕರಣದಲ್ಲಿ ಕಾನೂನು ಪ್ರಕಾರ ಸೂಕ್ತ ಕ್ರಮ ಕೈಗೊಳ್ಳಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ.

ಬಾಂಗ್ಲಾದ ಅಕ್ರಮ ವಲಸಿಗರಿದ್ದಾರೆ ಎಂದು ಆರೋಪಿಸಿದ್ದ ಬಿಜೆಪಿ

ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ಸಾವಿರಾರು ಅಕ್ರಮ ಬಾಂಗ್ಲಾದೇಶಿ ನಿವಾಸಿಗಳಿದ್ದಾರೆ ಎಂದು ಬಿಜೆಪಿ ಹಾಗೂ ಹಿಂದೂಪರ ಸಂಘಟನೆಗಳು ಹಲವು ವರ್ಷಗಳಿಂದ ಆರೋಪಿಸುತ್ತಿವೆ. ಸದ್ಯ ಐವರು ಪತ್ತೆಯಾಗಿರುವ ಹಿನ್ನೆಲೆಯಲ್ಲಿ, ಇನ್ನಷ್ಟು ಮಂದಿ ಇರಬಹುದೇ ಎಂಬ ಕುತೂಹಲ ಮೂಡಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕೊಪ್ಪಳ ಜಿಲ್ಲಾ ಮಹಿಳಾ ಅಧ್ಯಕ್ಷೆ ಜ್ಯೋತಿ ಗೊಂಡಬಾಳ್ ರಾಜೀನಾಮೆ! – Kannada News | Koppal Congress Revolt: Jyothi Gondabal Resigns After Raghavendra Hitnal Misses Cabinet Berth

ಕೊಪ್ಪಳ, ಆಗಸ್ಟ್ 05: ಕರ್ನಾಟಕದಲ್ಲಿ ನೂತನ ಸಚಿವ ಸಂಪುಟ ವಿಸ್ತರಣೆ ನಂತರ ಅಸಮಾಧಾನ ಸ್ಫೋಟಗೊಂಡಿದೆ. ಕೊಪ್ಪಳ ಜಿಲ್ಲೆಯಲ್ಲಿ ರಾಜೀನಾಮೆ ಪರ್ವ ಮುಂದುವರೆದಿದ್ದು, ಶಾಸಕ ರಾಘವೇಂದ್ರ ಹಿಟ್ನಾಳ್‌ಗೆ ಸಚಿವ ಸ್ಥಾನ ಕೈತಪ್ಪಿದ ಹಿನ್ನೆಲೆಯಲ್ಲಿ ಈ ಬೆಳವಣಿಗೆ ನಡೆದಿದೆ. ಕೊಪ್ಪಳ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜ್ಯೋತಿ ಗೊಂಡಬಾಳ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ರಾಘವೇಂದ್ರ ಹಿಟ್ನಾಳ್ ಅವರ ಬೆಂಬಲಿತರಾದ ಜ್ಯೋತಿ ಗೊಂಡಬಾಳ್, ತಮ್ಮ ರಾಜೀನಾಮೆ ಪತ್ರವನ್ನು ಕೊಪ್ಪಳ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾದ ಅಮರೇಗೌಡ ಬಯ್ಯಪುರಾ ಅವರಿಗೆ ಸಲ್ಲಿಸಿದ್ದಾರೆ. ಕಳೆದ 75 ವರ್ಷಗಳಿಂದಲೂ ಕೊಪ್ಪಳ ಜಿಲ್ಲಾ ಕೇಂದ್ರಕ್ಕೆ ಸಚಿವ ಸ್ಥಾನವೇ ಸಿಕ್ಕಿಲ್ಲ ಎಂಬ ಆಕ್ರೋಶವನ್ನು ಅವರು ವ್ಯಕ್ತಪಡಿಸಿದ್ದಾರೆ. ಮೂರು ಬಾರಿ ಗೆಲುವು ಸಾಧಿಸಿರುವ ರಾಘವೇಂದ್ರ ಹಿಟ್ನಾಳ್ ಅವರಿಗೆ ಸಚಿವ ಸ್ಥಾನ ನೀಡದಿರುವುದು ತೀವ್ರ ಬೇಸರ ತಂದಿದೆ ಎಂದು ರಾಜೀನಾಮೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಶ್ರೀಲಂಕಾಗೆ ತೆರಳದ ಟೀಮ್ ಇಂಡಿಯಾ ಆಟಗಾರ! – Kannada News | Sai Sudharsan Injured; Stays at Bengaluru CoE Ahead of SL Test Series

ಶ್ರೀಲಂಕಾ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಗಾಗಿ ಟೀಮ್ ಇಂಡಿಯಾ ಈಗಾಗಲೇ ಲಂಕಾಗೆ ಪ್ರಯಾಣ ಬೆಳೆಸಿದೆ. ಆದರೆ, ಈ ಪ್ರವಾಸ ಕೈಗೊಂಡಿರುವ ಭಾರತ ತಂಡದಲ್ಲಿ ಯುವ ಬ್ಯಾಟರ್ ಸಾಯಿ ಸುದರ್ಶನ್ ಕಾಣಿಸಿಕೊಂಡಿಲ್ಲ. ಕಾಲಿನ ಹೆಬ್ಬೆರಳಿನ ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಅವರು ಭಾರತ ತಂಡದೊಂದಿಗೆ ಪ್ರಯಾಣಿಸದೆ, ಬೆಂಗಳೂರಿನ ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್​ನಲ್ಲೇ (CoE) ಉಳಿದುಕೊಂಡಿದ್ದಾರೆ.

ಬೆಂಗಳೂರಿನಲ್ಲೇ ಉಳಿದ ಸಾಯಿ!

ಟೆಸ್ಟ್ ತಂಡದ ಉಳಿದ ಆಟಗಾರರು ಮಂಗಳವಾರವೇ (ಆಗಸ್ಟ್ 4) ಕೊಲಂಬೊ ತಲುಪಿದ್ದಾರೆ. ಆದರೆ, ಸಾಯಿ ಸುದರ್ಶನ್ ಮಾತ್ರ ತಂಡದ ಜೊತೆ ಪ್ರಯಾಣಿಸಿಲ್ಲ. ಅವರು ಸದ್ಯ ಬೆಂಗಳೂರಿನ ಸಿಇಒನಲ್ಲಿದ್ದು, ವೈದ್ಯಕೀಯ ಸಿಬ್ಬಂದಿಯ ಉಸ್ತುವಾರಿಯಲ್ಲಿ ರಿಹ್ಯಾಬ್​ ಶಿಬಿರದಲ್ಲಿದ್ದಾರೆ.

ಬ್ಯಾಟಿಂಗ್ ಅಭ್ಯಾಸ ಆರಂಭ:

ಸಾಯಿ ಸುದರ್ಶನ್ ಈಗಾಗಲೇ ನೆಟ್ಸ್‌ನಲ್ಲಿ ಲಘು ಬ್ಯಾಟಿಂಗ್ ಅಭ್ಯಾಸ ಆರಂಭಿಸಿದ್ದಾರೆ. ಇದಾಗ್ಯೂ ಅವರು ಸಂಪೂರ್ಣ ಫಿಟ್​ ಆಗಿರದ ಕಾರಣ ಅವರನ್ನು ಟೀಮ್ ಇಂಡಿಯಾ ಜೊತೆ ಕಳುಹಿಸಿ ಕೊಡಲಾಗಿಲ್ಲ. ಅಂದರೆ ಸಂಪೂರ್ಣ ಫಿಟ್ ಸರ್ಟಿಫಿಕೇಟ್ ಸಿಕ್ಕರೆ ಮಾತ್ರ ಸಾಯಿ ಸುದರ್ಶನ್​ ಭಾರತ ತಂಡವನ್ನು ಕೂಡಿಕೊಳ್ಳಲಿದ್ದಾರೆ.

ಸಾಯಿ ಅಲಭ್ಯರಾದರೆ ಬದಲಿ ಆಟಗಾರ ಯಾರು?

ಶ್ರೀಲಂಕಾ ‘ಎ’ ತಂಡದ ವಿರುದ್ಧದ ಗಾಲೆ ಟೆಸ್ಟ್‌ನಲ್ಲಿ ಸತತ ಎರಡು ಶತಕ ಸಿಡಿಸಿದ್ದ ಸಾಯಿ ಸುದರ್ಶನ್, ಭಾರತದ ರೆಡ್-ಬಾಲ್ ಕ್ರಿಕೆಟ್‌ನ ಪ್ರಮುಖ ಆಟಗಾರನಾಗಿ ಹೊರಹೊಮ್ಮಿದ್ದಾರೆ. ಅದರಲ್ಲೂ ಮೂರನೇ ಕ್ರಮಾಂಕದಲ್ಲಿ ಟೀಮ್ ಇಂಡಿಯಾಗೆ ಹೊಸ ಭರವಸೆ ಮೂಡಿಸಿದ್ದಾರೆ.

ಒಂದು ವೇಳೆ ಆಗಸ್ಟ್ 15 ರಿಂದ ಶುರುವಾಗಲಿರುವ ಮೊದಲ ಟೆಸ್ಟ್ ಪಂದ್ಯಕ್ಕೂ ಮುನ್ನ ಸಾಯಿ ಸುದರ್ಶನ್ ಸಂಪೂರ್ಣ ಫಿಟ್ ಆಗದಿದ್ದರೆ, ಮತ್ತೊಬ್ಬ ಎಡಗೈ ಬ್ಯಾಟರ್ ದೇವದತ್ ಪಡಿಕ್ಕಲ್ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿಯುವ ಸಾಧ್ಯತೆ ಇದೆ.

ಭಾರತ vs ಶ್ರೀಲಂಕಾ ಸರಣಿ ವೇಳಾಪಟ್ಟಿ:

ಪಂದ್ಯ ದಿನಾಂಕ ಮೈದಾನ / ಸ್ಥಳ ಸಮಯ (IST)
ಮೊದಲ ಟೆಸ್ಟ್ ಆಗಸ್ಟ್ 15 – 19, 2026 ಅಂತರರಾಷ್ಟ್ರೀಯ ಕ್ರೀಡಾಂಗಣ, ಗಾಲೆ ಬೆಳಗ್ಗೆ 10:00 ಗಂಟೆಗೆ
ಎರಡನೇ ಟೆಸ್ಟ್ ಆಗಸ್ಟ್ 23 – 27, 2026 ಸಿಂಹಳೀಸ್ ಸ್ಪೋರ್ಟ್ಸ್ ಕ್ಲಬ್ (SSC), ಕೊಲೊಂಬೊ ಬೆಳಗ್ಗೆ 10:00 ಗಂಟೆಗೆ

ಇದನ್ನೂ ಓದಿ: ಕೋಪದಲ್ಲಿ ಒದ್ದ ಚೆಂಡಿನಿಂದ ಪಂದ್ಯವೇ ಟೈ ಆಯ್ತು!

ಭಾರತ ಟೆಸ್ಟ್ ತಂಡ: ಶುಭ್‌ಮನ್ ಗಿಲ್ (ನಾಯಕ), ಕೆ.ಎಲ್. ರಾಹುಲ್ (ಉಪನಾಯಕ), ರಿಷಭ್ ಪಂತ್, ಧ್ರುವ್ ಜುರೆಲ್, ಯಶಸ್ವಿ ಜೈಸ್ವಾಲ್, ದೇವದತ್ ಪಡಿಕ್ಕಲ್, ಸಾಯಿ ಸುದರ್ಶನ್, ರವೀಂದ್ರ ಜಡೇಜಾ, ಕುಲ್ದೀಪ್ ಯಾದವ್, ಮಾನವ್ ಸುತಾರ್, ಸರಂಶ್ ಜೈನ್, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ, ಗುರ್ನೂರ್ ಬ್ರಾರ್, ಆಖಿಬ್ ನಬಿ.

Published On – 8:32 am, Wed, 5 August 26

Source link

ಸಚಿವ ಸ್ಥಾನ ಹಂಚಿಕೆಯಲ್ಲಿ ಪೇಮೆಂಟ್ ಸೀಟ್ ಆರೋಪ; ಕೈ ನಾಯಕರ ಆಡಿಯೋ ವೈರಲ್! – Kannada News | Leaked Audio Controversy: Congress Leaders Express Discontent Over Cabinet Seats

ಆರ್. ಬಿ. ತಿಮ್ಮಾಪುರ ಹಾಗೂ ಬಾಗಲಕೋಟೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಸ್. ಜಿ. ನಂಜಯ್ಯನಮಠ

ಬಾಗಲಕೋಟೆ, ಆಗಸ್ಟ್ 05: ರಾಜ್ಯ ಕಾಂಗ್ರೆಸ್ (Congress) ಸರ್ಕಾರದಲ್ಲಿ ಸಚಿವ ಸಂಪುಟ ಪುನರಚನೆ ಮತ್ತು ಖಾತೆ ಹಂಚಿಕೆ ವಿಚಾರವಾಗಿ ಆಡಳಿತ ಪಕ್ಷದೊಳಗೆ ತೀವ್ರ ಅಸಮಾಧಾನ ಹೊಗೆಯಾಡುತ್ತಿದ್ದು, ಇದೀಗ ಮಾಜಿ ಸಚಿವ, ಮುಧೋಳ ಶಾಸಕ ಆರ್. ಬಿ. ತಿಮ್ಮಾಪುರ ಹಾಗೂ ಬಾಗಲಕೋಟೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಸ್. ಜಿ. ನಂಜಯ್ಯನಮಠ ಅವರದ್ದು ಎನ್ನಲಾದ ಆಡಿಯೋ ಸಂಭಾಷಣೆ ತೀವ್ರ ಸಂಚಲನ ಮೂಡಿಸಿದೆ. ವೈರಲ್ ಆಗಿರುವ ಆಡಿಯೋದಲ್ಲಿ ಕಾಂಗ್ರೆಸ್ ಹೈಕಮಾಂಡ್ ನಡೆ, ಸಚಿವ ಸ್ಥಾನಗಳ ಹಂಚಿಕೆಯಲ್ಲಿ ನಡೆದಿದೆ ಎನ್ನಲಾದ ‘ಪೇಮೆಂಟ್ ಸೀಟ್’ ವ್ಯವಹಾರ ಹಾಗೂ ಹಿರಿಯ ನಾಯಕರನ್ನು ಕಡೆಗಣಿಸಿರುವ ಬಗ್ಗೆ ಇಬ್ಬರೂ ನಾಯಕರು ನಡೆಸಿದ್ದಾರೆ ಎನ್ನಲಾದ ಸಂಭಾಷಣೆ ಇಲ್ಲಿದೆ.

ಆಡಿಯೋ ಸಂಭಾಷಣೆಯಲ್ಲೇನಿದೆ?

ಆರ್. ಬಿ. ತಿಮ್ಮಾಪುರ: ಒಟ್ಟು ಪೇಮೆಂಟ್ ಸೀಟ್ ಅಲ್ಲಿ.

ಎಸ್. ಜಿ. ನಂಜಯ್ಯನಮಠ: 70 ಪರ್ಸೆಂಟ್ ಇಂದ 75 ಪರ್ಸೆಂಟ್ ಅದಾವಂತೆ ನೋಡ್ರಿ. ಹೆಚ್ಚು ಕಡಿಮೆ ನಮ್ಮ ಮಾಹಿತಿ ಪ್ರಕಾರ 80 ಪರ್ಸೆಂಟ್ ಆದರೂ ಆಗಬಹುದು.

ಆರ್. ಬಿ. ತಿಮ್ಮಾಪುರ: 80 ಅಂತ ಹೇಳ್ತಿರಿ… ಪಟ್ಟಣಶೆಟ್ಟಿಗೆ ಕೊಟ್ಟಿದ್ದಾರಂತೆ.

ಎಸ್. ಜಿ. ನಂಜಯ್ಯನಮಠ: ಕೊಟ್ಟಿರಬಹುದು… ಯಾಕಂದ್ರೆ ಇದು ಇತ್ತಲ್ಲ ಅವರ ಮೇಲೆ ವಿಧಾನಸೌಧದಲ್ಲಿ ದುಡ್ಡು ಸಿಕ್ಕಿದ್ದು!

ಆರ್. ಬಿ. ತಿಮ್ಮಾಪುರ: ಅಂತವರು ರಗಡ ಬಂದವರು ಇದಾರೆ.

ಎಸ್. ಜಿ. ನಂಜಯ್ಯನಮಠ: ಆ ಬಿ. ನಾಗೇಂದ್ರ ಅವರಿಗೆ ಕೊಟ್ಟಾರಲ್ಲಾ, ಏನ್ರಿ ಇದು ದುರಂತ! ನಾಗೇಂದ್ರ ಇನ್ನು ಕೇಸ್‌ನಲ್ಲಿ ನಿರ್ದೋಶಿ ಇಲ್ಲ, ಬರೆ ಜಾಮೀನು ಐತಿ. ಅಂತವರಿಗೆ ಕೊಟ್ರೆ ಹೆಂಗ್ರಿ? ನಾಳೆ ಏನಂತ ಪಾರ್ಟಿ ಎದುರಿಸೋದು ಹೇಳ್ರಿ… ಪಾರ್ಟಿ ಏನು ಅಂತ ಎದುರಿಸಬೇಕು ನಾವು?

ಆರ್. ಬಿ. ತಿಮ್ಮಾಪುರ: ಎಚ್. ಕೆ. ಪಾಟೀಲ್ ಏನ್ ತಪ್ಪು ಮಾಡಿದ್ದಾರೆ?

ಎಸ್. ಜಿ. ನಂಜಯ್ಯನಮಠ: ಪಾಪ ಅವರು ಇವರು ಕೇಳಿದಷ್ಟು ರೊಕ್ಕ ಕೊಟ್ಟಿರಲಿಕ್ಕಿಲ್ಲ! ಇಮೇಜ್ ಪಾರ್ಟಿ ಇಮೇಜು… ಯಾವ ಖಾತೆ ಕೊಟ್ರು ಸಮರ್ಥವಾಗಿ ನಿರ್ವಹಣೆ ಮಾಡಿದ್ದಾರೆ. ನೀರಾವರಿ ಇಲಾಖೆ ಇರಲಿ, ಬೇರೆ ಇರಲಿ.

ಆರ್. ಬಿ. ತಿಮ್ಮಾಪುರ: ಅಸೆಂಬ್ಲಿಯಲ್ಲಿ ಉತ್ತರ ಹೇಗೆ ಕೊಡುತ್ತಿದ್ದರು…

ಎಸ್. ಜಿ. ನಂಜಯ್ಯನಮಠ: ಬಹಳ ಸ್ಮೂತ್ ಆಗಿ ಪಾಪ…

ಆರ್. ಬಿ. ತಿಮ್ಮಾಪುರ: ಸುನಿಲ್ ಕಂದಗೋಲ್ ಅಂದ್ರೆ ಯಾರು?

ಎಸ್. ಜಿ. ನಂಜಯ್ಯನಮಠ: ಇವು ಒಂದು ನಮೂನೆ ಹುಚ್ಚರಿದ್ದಂಗೆ ಇದಾವರಿ ಮೇಲೆ (ಹೈಕಮಾಂಡ್)! ಮೇಲೆ ಹುಚ್ಚರು ಅದಾವ್. ನಾನು ಹಿಂದೊಮ್ಮೆ ಪ್ರಾಮಾಣಿಕತೆಯಿಂದ, ದಕ್ಷತೆಯಿಂದ ಕೆಲಸ ಮಾಡ್ತಾರೆ ಅಂತ ಹೇಳಿ ಎಚ್. ಕೆ. ಪಾಟೀಲ್ ಅವರ ಸಂಬಂಧ ವೇಣುಗೋಪಾಲ್ ಅವರ ಮುಂದೆ ಹೇಳಿದ್ರೆ, “ನಾವು ಹೈಕಮಾಂಡ್‌ನವರು ಪ್ರಾಮಾಣಿಕವಾಗಿ ಇರು ಅಂತ ಹೇಳಿದ್ದೇವಾ?” ಅಂತ ನನ್ನ ಕೇಳಿದ ಅವ!

ಎಸ್. ಜಿ. ನಂಜಯ್ಯನಮಠ: ಸಿ. ಆರ್. ಪಾಟೀಲ್, ಹಿಂಡಸಗೇರಿ, ನಾನು, ಜಕ್ಕಪ್ಪನವರ… ಏನ್ರೀ ಐದಾರು ಮಂದಿ ಅದವಿ. ನನ್ನ ಮಾತನಾಡೋಕೆ ಹಚ್ಚಿದರು, ನಾನು ಮಾತನಾಡಿದೆ. ಅವಾಗ ಸಿದ್ದರಾಮಯ್ಯನವರು ಮುಖ್ಯಮಂತ್ರಿ ಆಗೊ ಮುಂಚೆ ಸಮ್ಮಿಶ್ರ ಸರ್ಕಾರ ಇದ್ದಾಗ “ಪ್ರಾಮಾಣಿಕರ ಆಗು ಅಂತ ಯಾರಂದ್ರು?” ಅಂದ ಅವನು. ಇನ್ನು ಇದಕ್ಕೆ ಏನು ಉತ್ತರ ಕೊಡುತ್ತೀರಿ ಹೇಳ್ರಿ… ನಿನಗೆ ಪಟಿಂಗ ಆಗು ಅಂತ ಹೇಳಿದ್ದು ನಾವು, ನೀನ್ಯಾಕೆ ಗೃಹಸ್ಥ ಆದೆ ಅಂದಂಗಾಯ್ತು!

ಎಸ್. ಜಿ. ನಂಜಯ್ಯನಮಠ: ನಿಮ್ಮದೊಂದು (ಆರ್. ಬಿ. ತಿಮ್ಮಾಪುರ) ಆಗಿದ್ರೆ, ನನಗೆ ನಿಮ್ಮದೊಂದು ಅವರ್ದೊಂದು (ಎಚ್. ಕೆ. ಪಾಟಿಲ್) ಇತ್ತು. ನನಗೆ ನಿಮಗೆ ಕೋಟಾ ಇತ್ತಲ್ಲ! ನಾ ಏನು ಮಾಡುತ್ತಿದ್ದೆ, ಫೀಡ್ ಮಾಡ್ತಿದ್ದೆ… ಉತ್ತರ ಕರ್ನಾಟಕದ ಮಾದರ ಎಸ್.ಸಿ. (ಎಡಗೈ) ಸೀಟ್ ಇಲ್ಲ, ಎಕ್ಸ್ಪೀರಿಯನ್ಸು ಇದೆ, ಮತ ಸಂಘಟನೆ ಮಾಡ್ಯಾನ ಅಂತ ಹೇಳತಿದ್ದೆ.

ಆರ್. ಬಿ. ತಿಮ್ಮಾಪುರ: ಮುಂದಿಂದ ಕಷ್ಟ…

ಎಸ್. ಜಿ. ನಂಜಯ್ಯನಮಠ: ಮುಂದೆ ಕಷ್ಟ ಆಗುತ್ತೆ. ಅವರೇ ಏನು ಮಾಡ್ತಾರೆ, ಜಾತ್ರೆ ಮಾಡಿಕೊಂಡು ಹೋಗಿಬಿಡುತ್ತಾರ? ಬೈ ರೋಡ್ ಹೊಂಟೀರಿನ, ನಾಲ್ಕು ದಿವಸ ಇರ್ತೀರಲ್ಲ ಅಲ್ಲೇ?

ಆರ್. ಬಿ. ತಿಮ್ಮಾಪುರ: ಇರ್ತೀನಿ ನಾಲ್ಕೈದು ದಿನ… ಇದು ಏನ್ರೀ ಇದು ಮಿನಿಸ್ಟರ್ ಮಾಡೋದು!

ಎಸ್. ಜಿ. ನಂಜಯ್ಯನಮಠ: ಬೇಜಾರ… ಅದನ್ನು ಇನ್ನು ನೋಡಬೇಕಲ್ಲ ನಾವೆಲ್ಲ ಕಣ್ಣಲೆ!

ಆರ್. ಬಿ. ತಿಮ್ಮಾಪುರ: ನಾವು ನಾಲ್ಕು ಮಂದಿ ಎಮ್‌ಎಲ್‌ಎಗಳು ಬರೆದು ಕೊಡುತ್ತೇವೆ.

ಎಸ್. ಜಿ. ನಂಜಯ್ಯನಮಠ: ಅವರು ಮಾಡಿದ್ರೆ ಇವರು ಏನು ಮಾಡೋಕಾಗುತ್ತೆ… ಶಿವಕುಮಾರ ಒಬ್ರು ಮಾತಾಡೋದು. ನೀವ್ ಬರೆದುಕೊಡೋದು ಮಾಡ್ರಿ ಮೊದಲು.

ಆರ್. ಬಿ. ತಿಮ್ಮಾಪುರ: ಸಹಿ ಮಾಡಿದೆ ನಾನು… ಚಿಮ್ಮನಕಟ್ಟಿ ಒಬ್ಬವ.

ಸಚಿವ ಸ್ಥಾನ ಹಂಚಿಕೆಯಲ್ಲಿ ಶೇ 80 ರಷ್ಟು ಪೇಮೆಂಟ್ ಆಧಾರದಲ್ಲೇ ಸೀಟುಗಳನ್ನು ನೀಡಲಾಗಿದೆ ಎಂದು ನಾಯಕರು ಆರೋಪಿಸಿದ್ದಾರೆ. ಹೈಕಮಾಂಡ್ ನಡವಳಿಕೆ ಹಾಗೂ ಸಚಿವ ಸಂಪುಟ ಆಯ್ಕೆ ಖಂಡಿಸಿ ನಾಲ್ಕಕ್ಕೂ ಹೆಚ್ಚು ಶಾಸಕರು ದೂರು ಪತ್ರ ಬರೆಯಲು ನಿರ್ಧರಿಸಿದ್ದು, ಆರ್. ಬಿ. ತಿಮ್ಮಾಪುರ ಹಾಗೂ ಚಿಮ್ಮನಕಟ್ಟಿ ಈಗಾಗಲೇ ಸಹಿ ಮಾಡಿದ್ದಾರೆ ಎನ್ನಲಾಗಿದೆ. ಈ ವೈರಲ್ ಸಂಭಾಷಣೆ ರಾಜ್ಯ ಕಾಂಗ್ರೆಸ್‌ನಲ್ಲಿ ಆಂತರಿಕ ಭಿನ್ನಮತವನ್ನು ಮತ್ತೆ ಬೀದಿಗೆ ತಂದಿದ್ದು, ಪ್ರತಿಪಕ್ಷಗಳಿಗೆ ಹೊಸ ಪ್ರಹಾರ ಮಾಡಲು ಅಸ್ತ್ರ ಸಿಕ್ಕಂತಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 8:14 am, Wed, 5 August 26

Source link

52 ಲಕ್ಷಕ್ಕೆ ಆಫೀಸ್​ ಖರೀದಿಸಿ 5 ಕೋಟಿ ರೂಪಾಯಿಗೆ ಮಾರಿದ ಮಾಧುರಿ ದೀಕ್ಷಿತ್ – Kannada News | Madhuri Dixit Sells Mumbai Office for Rs 4 Crore 85 lakh, Gains 824 Percent Profit

ಬಾಲಿವುಡ್‌ನ ಧಕ್ ಧಕ್ ಗರ್ಲ್ ಮಾಧುರಿ ದೀಕ್ಷಿತ್ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಭಾರಿ ಲಾಭ ಗಳಿಸಿದ್ದಾರೆ. ಮುಂಬೈನ ಅಂಧೇರಿಯಲ್ಲಿರುವ ತಮ್ಮ ಕಮರ್ಷಿಯಲ್ ಆಫೀಸ್ ಒಂದನ್ನು ಅವರು ಬರೋಬ್ಬರಿ 4.85 ಕೋಟಿ ರೂಪಾಯಿಗೆ ಮಾರಾಟ ಮಾಡಿದ್ದಾರೆ. ಸುಮಾರು 18 ವರ್ಷಗಳ ಹಿಂದೆ ಕಡಿಮೆ ಬೆಲೆಗೆ ಖರೀದಿಸಿದ್ದ ಆಸ್ತಿ ಇದೀಗ ಶೇಕಡಾ 824 ರಷ್ಟು ಭಾರಿ ಪ್ರಮಾಣದ ರಿಟರ್ನ್ಸ್ ತಂದುಕೊಟ್ಟಿದೆ.

18 ವರ್ಷಗಳ ಹಿಂದೆ ಮಾಡಿದ್ದ ಹೂಡಿಕೆ

ಮಾಧುರಿ ದೀಕ್ಷಿತ್ ಅವರು ಈ ಆಫೀಸ್ ಅನ್ನು ಮೇ 2008 ರಲ್ಲಿ ಖರೀದಿಸಿದ್ದರು. ಆಗ ಇದರ ಬೆಲೆ ಕೇವಲ 52.5 ಲಕ್ಷ ರೂಪಾಯಿ ಆಗಿತ್ತು. ಓಶಿವಾರಾದ ಮೊರ್ಯಾ ಲ್ಯಾಂಡ್‌ಮಾರ್ಕ್-II ಕಟ್ಟಡದ ನಾಲ್ಕನೇ ಮಹಡಿಯಲ್ಲಿ ಈ ಆಫೀಸ್ ಇದೆ. ಇದು 1,594 ಚದರ ಅಡಿ ವಿಸ್ತೀರ್ಣ ಹೊಂದಿದ್ದು ಮೂರು ಕಾರ್ ಪಾರ್ಕಿಂಗ್ ವ್ಯವಸ್ಥೆ ಹೊಂದಿದೆ.

ಆಫೀಸ್ ಖರೀದಿಸಿದ ಫ್ರೇಮ್ಸ್ ಪ್ರೊಡಕ್ಷನ್

ಈ ಪ್ರಾಪರ್ಟಿಯನ್ನು ‘ಫ್ರೇಮ್ಸ್ ಪ್ರೊಡಕ್ಷನ್ ಕಂಪನಿ ಪ್ರೈವೇಟ್ ಲಿಮಿಟೆಡ್’ ಖರೀದಿಸಿದೆ. ಈ ವ್ಯವಹಾರಕ್ಕಾಗಿ 29.10 ಲಕ್ಷ ರೂಪಾಯಿ ಸ್ಟಾಂಪ್ ಡ್ಯೂಟಿ ಪಾವತಿಸಲಾಗಿದೆ. ಮುಂಬೈನ ರಿಯಲ್ ಎಸ್ಟೇಟ್ ಮಾರುಕಟ್ಟೆಯಲ್ಲಿ ವಾಣಿಜ್ಯ ಆಸ್ತಿಗಳ ಮೌಲ್ಯ ಎಷ್ಟು ವೇಗವಾಗಿ ಬೆಳೆಯುತ್ತಿದೆ ಎಂಬುದಕ್ಕೆ ಈ ವ್ಯವಹಾರ ಸಾಕ್ಷಿಯಾಗಿದೆ.

ಇದನ್ನೂ ಓದಿ: ಸೀರಿಯಲ್ ಕಿಲ್ಲರ್ ಆದ ಮಾಧುರಿ ದೀಕ್ಷಿತ್; ಹೊಸ ಅವತಾರದಲ್ಲಿ ಧಕ್ ಧಕ್ ಗರ್ಲ್ 

ಮಾಸಿಕ ಲಕ್ಷ ಲಕ್ಷ ಬಾಡಿಗೆ ಗಳಿಕೆ

ಕೆಲವು ತಿಂಗಳುಗಳ ಹಿಂದಷ್ಟೇ ಮಾಧುರಿ ಮತ್ತೊಂದು ಆಸ್ತಿಯನ್ನು ಬಾಡಿಗೆಗೆ ನೀಡಿದ್ದರು. ಮಾರ್ಚ್ 2026 ರಲ್ಲಿ ಮುಂಬೈನ ಲೋವರ್ ಪರೇಲ್‌ನಲ್ಲಿರುವ ಆಫೀಸ್ ಅನ್ನು ಐದು ವರ್ಷಗಳ ಅವಧಿಗೆ ಲೀಸ್‌ಗೆ ಕೊಟ್ಟಿದ್ದಾರೆ. ಇದರಿಂದ ಅವರಿಗೆ ಪ್ರತಿ ತಿಂಗಳು 4.25 ಲಕ್ಷ ರೂಪಾಯಿ ಬಾಡಿಗೆ ಸಿಗಲಿದ್ದು, ಐದು ವರ್ಷಗಳಲ್ಲಿ ಒಟ್ಟು 2.81 ಕೋಟಿ ರೂಪಾಯಿ ಆದಾಯ ಬರಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Exit mobile version