Chanakya Niti: ವೃತ್ತಿ ಜೀವನದಲ್ಲಿ ಯಶಸ್ಸನ್ನು ಸಾಧಿಸಲು ಚಾಣಕ್ಯರ ಈ ಮಾತುಗಳನ್ನು ಪಾಲಿಸಿ
ವೃತ್ತಿ ಜೀವನದಲ್ಲಿ (career) ಯಶಸ್ಸನ್ನು ಸಾಧಿಸಬೇಕೆಂಬ ಆಸೆ ಪ್ರತಿಯೊಬ್ಬರಿಗೂ ಇದ್ದೇ ಇರುತ್ತದೆ. ಇದಕ್ಕಾಗಿ ಹಲವರು ಹಗಲಿರುಳು ಶ್ರಮಿಸುತ್ತಾರೆ. ಹೀಗೆ ಕಠಿಣ ಪರಿಶ್ರಮ ಪಟ್ಟರೂ ಹಲವರಿಗೆ ಯಶಸ್ಸು ಅನ್ನೋದು ಲಭಿಸೋದೇ ಇಲ್ಲ. ವೃತ್ತಿ ಜೀವನದ ಯಶಸ್ಸಿಗೆ ಕಠಿಣ ಪರಿಶ್ರಮವೊಂದೇ ಸಾಲುವುದಿಲ್ಲ, ಇದಕ್ಕಾಗಿ ಕೆಲವೊಂದು ಮೌಲ್ಯ, ತತ್ವಗಳನ್ನೂ ಅಳವಡಿಸಿಕೊಳ್ಳಬೇಕು ಎಂದಿದ್ದಾರೆ ಆಚಾರ್ಯ ಚಾಣಕ್ಯ. ಚಾಣಕ್ಯರು ಹೇಳಿರುವಂತೆ ವೃತ್ತಿ ಜೀವನದಲ್ಲಿ ಯಶಸ್ಸನ್ನು ಗಳಿಸಲು ಏನು ಮಾಡಬೇಕು, ಯಾವ ಸಲಹೆಗಳನ್ನು ಅಳವಡಿಸಿಕೊಳ್ಳಬೇಕು ಎಂಬುದನ್ನು ನೋಡೋಣ ಬನ್ನಿ. ವೃತ್ತಿ ಜೀವನದಲ್ಲಿ ಯಶಸ್ಸು ಗಳಿಸಲು ಏನು…