ಮದುವೆಯಾದರೂ ಡೇಟಿಂಗ್ ಆ್ಯಪ್ ಬಳಸುವವರಲ್ಲಿ ಬೆಂಗಳೂರಿಗೆ ನಂಬರ್ 1 ಸ್ಥಾನ!
ಬೆಂಗಳೂರು, ಏಪ್ರಿಲ್ 1: ಮದುವೆಯಾದರೂ ಡೇಟಿಂಗ್ ಆ್ಯಪ್ (Dating App) ಬಳಸುವವರ ಸಂಖ್ಯೆ ಬೆಂಗಳೂರಿನಲ್ಲಿ ಹೆಚ್ಚಾಗುತ್ತಿದೆ ಎಂಬ ಆತಂಕಕಾರಿ ಸಂಗತಿಯನ್ನು ಸಮೀಕ್ಷೆಯೊಂದು ಬೆಳಕಿಗೆ ತಂದಿದೆ. ಮದುವೆಯಾದರೂ ತಮ್ಮ ಅಕ್ರಮ ಸಂಬಂಧಕ್ಕಾಗಿ ಡೇಟಿಂಗ್ ಆ್ಯಪ್ ಮೂಲಕ ಸಂಗಾತಿಯನ್ನು ಹೊಂದುವವರ ಸಂಖ್ಯೆಯಲ್ಲಿ ಬೆಂಗಳೂರು (Bengaluru) ಭಾರತದಲ್ಲಿ ನಂಬರ್ 1 ಸ್ಥಾನದಲ್ಲಿದೆ. ಇದರಲ್ಲಿ 30-45 ವರ್ಷ ವಯಸ್ಸಿನ ಬಳಕೆದಾರರ ಸಂಖ್ಯೆ ಗಣನೀಯವಾಗಿದೆ. ಗ್ಲೀಡೆನ್ ಎಂಬ ಆ್ಯಪ್ ಮಾಡಿರುವ ಸಮೀಕ್ಷೆ ಈ ವಿಷಯವನ್ನು ಬಹಿರಂಗಪಡಿಸಿದೆ. ತಂತ್ರಜ್ಞಾನ ಮುಂದುವರೆದಂತೆ ಅದರಿಂದಾಗುವ ಅಡ್ಡಪರಿಣಾಮಗಳೂ ಕಡಿಮೆಯೇನಿಲ್ಲ ಎಂಬುದಕ್ಕೆ…