ಕಾಂಗ್ರೆಸ್ ಒಂದು ಊಸರವಳ್ಳಿ; ಸ್ಟಾನ್ಫೋರ್ಡ್ ಯೂನಿವರ್ಸಿಟಿಯಲ್ಲಿ ಕೈ ಪಕ್ಷವನ್ನು ಕುಟುಕಿದ ಅಣ್ಣಾಮಲೈ – Kannada News | Annamalai Presents Critical Analysis of Congresss Political Stance and Southern State Dynamics
ಚೆನ್ನೈ, ಮೇ 11: ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದಲ್ಲಿ (Stanford University) ನಡೆದ ಸಂವಾದ ಕಾರ್ಯಕ್ರಮವೊಂದರಲ್ಲಿ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ (K Annamalai) ಅವರು ಕಾಂಗ್ರೆಸ್ ಪಕ್ಷವನ್ನು ‘ಊಸರವಳ್ಳಿ’ಗೆ (Chameleon) ಹೋಲಿಸಿ ವಾಗ್ದಾಳಿ ನಡೆಸಿದ್ದಾರೆ. ವಿಶೇಷವೆಂದರೆ, ಕಾಂಗ್ರೆಸ್ ಸಂಸದ ಶಶಿ ತರೂರ್ (Shashi Tharoor) ಅವರ ಸಮ್ಮುಖದಲ್ಲೇ ಅಣ್ಣಾಮಲೈ ಈ ಟೀಕೆ ಮಾಡಿದ್ದಾರೆ. ತಮಿಳುನಾಡಿನಲ್ಲಿ ಕಾಂಗ್ರೆಸ್ ಪಕ್ಷವು ಡಿಎಂಕೆ ಭಾಷೆಯನ್ನೇ ಇಷ್ಟು ವರ್ಷ ಬಳಸುತ್ತಿತ್ತು, ಆದರೆ ಈಗ ರಾತ್ರೋರಾತ್ರಿ ನಟ ವಿಜಯ್ ಅವರ ಪಕ್ಷದತ್ತ ಒಲವು ತೋರುತ್ತಿದೆ….