ಮನಿಹಾರಿ, ಏಪ್ರಿಲ್ 1: ಒಮ್ಮೆ ಈ ರೈಲ್ವೆ ಬೋಗಿಯನ್ನು ನೋಡಿದಾಗ ಇದು ನಿಜವಾಗಿಯೂ ಬೋಗಿಯೇ ಅಥವಾ ಖಾಸಗಿ ವಿಮಾನವೇ ಎನ್ನುವ ಅನುಮಾನ ಮೂಡುತ್ತದೆ. ಯಾಕೆಂದರೆ ಬೇರೆ ಬಟ್ಟೆಗಳು ಹಾಗಿರಲಿ ಒಳ ಉಡುಪುಗಳನ್ನು ಕೂಡ ಮಹಿಳೆಯರು ನೇತುಹಾಕಿದ್ದಾರೆ. ಈ ಘಟನೆ ಮನಿಹಾರಿ ರೈಲ್ವೆ ನಿಲ್ದಾಣದ ಬಳಿ ನಡೆದಿದೆ. ಇಡೀ ಬೋಗಿಯ ತುಂಬೆಲ್ಲಾ ಬಟ್ಟೆಗಳನ್ನು ಒಣಹಾಕಿದ್ದಾರೆ. ಇವರಿಗೆ ಕಿಂಚಿತ್ತಾದರೂ ನಾಗರಿಕ ಪ್ರಜ್ಞೆ ಇದೆಯೇ ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ. ರೈಲ್ವೆ ಆಡಳಿತ ಇಂಥವರ ವಿರುದ್ಧ ಯಾಕೆ ಕ್ರಮ ಕೈಗೊಂಡಿಲ್ಲ ಎನ್ನುವ ಪ್ರಶ್ನೆಯೂ ಉದ್ಭವವಾಗಿದೆ.
ಬೆಂಗಳೂರು, ಏಪ್ರಿಲ್ 01: ಬ್ರಾಂಡೆಡ್ ವಾಚ್ (Branded Watch)ಎಂದು ಹೇಳಿಕೊಂಡು ನಕಲಿ ಗಡಿಯಾರಗಳನ್ನು ಮಾರಾಟ ಮಾಡುತ್ತಿದ್ದ ಐವರು ಆರೋಪಿಗಳನ್ನು ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ಪೊಲೀಸರು ಬಂಧಿಸಿದ್ದಾರೆ. ನಗರದ ವಿವಿಧೆಡೆ ನಕಲಿ ಕೈ ಗಡಿಯಾರದ ಅಂಗಡಿಗಳನ್ನು ನಡೆಸುತ್ತಿದ್ದು, ಪೊಲೀಸರು ಅವರಿಂದ ಸುಮಾರು 25 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಪ್ರಸಿದ್ಧ ಭಾರತೀಯ ಬ್ರಾಂಡ್‌ಗಳ ಹೆಸರಿನಲ್ಲಿ ನಕಲಿ ಗಡಿಯಾರಗಳ ಮಾರಾಟ
ಬಂಧಿತ ಆರೋಪಿಗಳನ್ನು ಹರೀಶ್ ಕುಮಾರ್, ಸಯ್ಯದ್ ಜೈಸಾದ್ ಇಕ್ಬಾಲ್, ಮೊಹಮ್ಮದ್ ಹಬೀಬ್ ಹುಸೈನ್, ಖಲೀಮ್ ಉಲ್ಲಾ ಮತ್ತು ಅಬ್ದುಲ್ ರೆಹಮಾನ್ ಎಂದು ಗುರುತಿಸಲಾಗಿದೆ. ಇವರು ನಗರದ ಆರ್‌ಟಿ ನಗರ, ಗಂಗಾನಗರ ಮತ್ತು ಚಿಕ್ಕಪೇಟೆ ಪ್ರದೇಶಗಳಲ್ಲಿ ಅಂಗಡಿಗಳನ್ನು ನಡೆಸುತ್ತಿದ್ದು, ಪ್ರಸಿದ್ಧ ಭಾರತೀಯ ಬ್ರಾಂಡ್‌ಗಳ ಹೆಸರಿನಲ್ಲಿ ನಕಲಿ ಗಡಿಯಾರಗಳನ್ನು ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಖಚಿತ ಮಾಹಿತಿಯ ಮೇರೆಗೆ ಸಿಸಿಬಿ ಆರ್ಥಿಕ ಅಪರಾಧ ವಿಭಾಗದ ಅಧಿಕಾರಿಗಳು ಐದು ಅಂಗಡಿಗಳ ಮೇಲೆ ದಾಳಿ ನಡೆಸಿದರು. ದಾಳಿಯ ವೇಳೆ 670 ನಕಲಿ ಗಡಿಯಾರಗಳನ್ನು ವಶಪಡಿಸಿಕೊಂಡಿದ್ದು, ಅವುಗಳ ಒಟ್ಟು ಮೌಲ್ಯವನ್ನು ಸುಮಾರು 25 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.
ಗ್ರಾಹಕರನ್ನು ಯಾಮಾರಿಸಲು ಆರೋಪಿಗಳು ಕಡಿಮೆ ಬೆಲೆಯಲ್ಲಿ, “ಆಫರ್ ರೇಟ್”ನಲ್ಲಿ ಗಡಿಯಾರಗಳನ್ನು ನೀಡುತ್ತಿದ್ದರು. ಇವು ಮೂಲ ಬ್ರಾಂಡ್ ಉತ್ಪನ್ನಗಳೇ ಎಂದು ನಂಬಿಸಿ ಮಾರಾಟ ಮಾಡುತ್ತಿದ್ದರು ಎಂದು ತನಿಖೆಯಲ್ಲಿ ಬಹಿರಂಗವಾಗಿದೆ. ಪ್ರಸ್ತುತ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ಹೆಚ್ಚಿನ ತನಿಖೆಯನ್ನು ಪೊಲೀಸರು ಮುಂದುವರಿಸಿದ್ದಾರೆ.
ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿರುವ ಪ್ರತಿಯೊಂದು ವಸ್ತುವು ಧನಾತ್ಮಕ ಅಥವಾ ನಕಾರಾತ್ಮಕ ಶಕ್ತಿಯನ್ನು ಹೊರಸೂಸುತ್ತದೆ. ಗಿಡಗಳು ಪ್ರಕೃತಿಯ ಸಂಕೇತವಾಗಿದ್ದರೂ, ಕೆಲವು ನಿರ್ದಿಷ್ಟ ಗಿಡಗಳನ್ನು ಮನೆಯೊಳಗೆ ಅಥವಾ ಆವರಣದಲ್ಲಿ ಬೆಳೆಸುವುದು ವಾಸ್ತು ಪ್ರಕಾರ ಅಶುಭ ಎಂದು ಪರಿಗಣಿಸಲಾಗಿದೆ. ಅಂತಹ ಗಿಡಗಳ ಬಗ್ಗೆ ವಿವರವಾದ ಮಾಹಿತಿ ಇಲ್ಲಿ ತಿಳಿದುಕೊಳ್ಳಿ.
ಮುಳ್ಳಿನ ಗಿಡಗಳು:
ವಾಸ್ತು ಶಾಸ್ತ್ರದ ಪ್ರಕಾರ, ಮುಳ್ಳಿನ ಗಿಡಗಳನ್ನು ಮನೆಯ ಒಳಗೆ ಇಡಬಾರದು. ಕಳ್ಳಿ ಗಿಡ ಅಥವಾ ಕ್ಯಾಕ್ಟಸ್‌ನಂತಹ ಮುಳ್ಳಿನ ಸಸ್ಯಗಳು ಮನೆಯಲ್ಲಿ ನಕಾರಾತ್ಮಕ ಶಕ್ತಿಯನ್ನು ಹರಡುತ್ತವೆ ಎಂದು ನಂಬಲಾಗಿದೆ. ಇವು ಮನೆಯ ಸದಸ್ಯರ ನಡುವೆ ಭಿನ್ನಾಭಿಪ್ರಾಯ, ಜಗಳ ಮತ್ತು ಮಾನಸಿಕ ಒತ್ತಡಕ್ಕೆ ಕಾರಣವಾಗಬಹುದು. ಆದರೆ, ಗುಲಾಬಿ ಗಿಡವನ್ನು ಇದಕ್ಕೆ ಹೊರತಾಗಿ ನೋಡಲಾಗುತ್ತದೆ; ಇದನ್ನು ಮನೆಯ ಹೊರಗಿನ ಅಂಗಳದಲ್ಲಿ ಬೆಳೆಸಬಹುದು.
ಬೋನ್ಸಾಯ್ ಗಿಡಗಳು:
ಇತ್ತೀಚಿನ ದಿನಗಳಲ್ಲಿ ಬೋನ್ಸಾಯ್ ಗಿಡಗಳು ಅಲಂಕಾರಿಕ ವಸ್ತುವಾಗಿ ಜನಪ್ರಿಯವಾಗಿವೆ. ಆದರೆ ವಾಸ್ತುವಿನ ಪ್ರಕಾರ, ಬೋನ್ಸಾಯ್ ಗಿಡಗಳು “ಕುಂಠಿತ ಬೆಳವಣಿಗೆಯನ್ನು” ಪ್ರತಿನಿಧಿಸುತ್ತವೆ. ದೊಡ್ಡದಾಗಿ ಬೆಳೆಯಬೇಕಾದ ಮರವನ್ನು ಕೃತಕವಾಗಿ ಚಿಕ್ಕದಾಗಿಸಿ ಇಡುವುದರಿಂದ, ಅದು ಮನೆಯ ಸದಸ್ಯರ ವೃತ್ತಿಜೀವನ ಮತ್ತು ವೈಯಕ್ತಿಕ ಪ್ರಗತಿಯ ಮೇಲೆ ಅಡ್ಡಪರಿಣಾಮ ಬೀರಬಹುದು. ಹೀಗಾಗಿ, ಪ್ರಗತಿಯನ್ನು ಬಯಸುವವರು ಮನೆಯೊಳಗೆ ಬೋನ್ಸಾಯ್ ಇಡುವುದನ್ನು ತಪ್ಪಿಸಬೇಕು.
ಹಾಲಿನ ದ್ರವ ಸೂಸುವ ಸಸ್ಯಗಳು:
ಯಾವ ಗಿಡಗಳ ಎಲೆ ಅಥವಾ ಕೊಂಬೆಯನ್ನು ಮುರಿದಾಗ ಹಾಲಿನಂತಹ ಬಿಳಿ ದ್ರವ (Milky Sap) ಹೊರಬರುತ್ತದೆಯೋ, ಅಂತಹ ಗಿಡಗಳನ್ನು ಮನೆಯೊಳಗೆ ಇಡಬಾರದು. ಈ ರೀತಿಯ ಸಸ್ಯಗಳು ಮನೆಯ ಶಾಂತಿ ಮತ್ತು ನೆಮ್ಮದಿಯನ್ನು ಹಾಳುಮಾಡುವುದಲ್ಲದೆ, ಆರ್ಥಿಕ ನಷ್ಟಕ್ಕೆ ಕಾರಣವಾಗಬಹುದು ಎಂದು ಹೇಳಲಾಗುತ್ತದೆ. ರಬ್ಬರ್ ಪ್ಲಾಂಟ್‌ನಂತಹ ಗಿಡಗಳನ್ನು ಮನೆಯ ಹೊರಗೆ ಇಡುವುದು ಉತ್ತಮ, ಆದರೆ ಮನೆಯ ಪ್ರವೇಶ ದ್ವಾರದ ಬಳಿ ಅಥವಾ ಬೆಡ್‌ರೂಮ್‌ನಲ್ಲಿ ಇಡುವುದು ವಾಸ್ತು ಸಮ್ಮತವಲ್ಲ.
ಮನೆಯಲ್ಲಿ ಸದಾ ಹಸಿರಾಗಿರುವ ಗಿಡಗಳು ಜೀವಕಳೆಯನ್ನು ನೀಡುತ್ತವೆ. ಆದರೆ, ಸರಿಯಾದ ಆರೈಕೆ ಇಲ್ಲದೆ ಒಣಗಿಹೋದ ಅಥವಾ ಬಾಡಿಹೋದ ಗಿಡಗಳು ತೀವ್ರವಾದ ನಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತವೆ. ಒಣಗಿದ ಎಲೆಗಳು ಮೌಡ್ಯ ಮತ್ತು ದುಃಖದ ಸಂಕೇತವಾಗಿದ್ದು, ಇವು ಮನೆಯಲ್ಲಿದ್ದರೆ ಅನಾರೋಗ್ಯ ಮತ್ತು ಕೆಲಸಗಳಲ್ಲಿ ಅಡೆತಡೆಗಳು ಉಂಟಾಗಬಹುದು. ಆದ್ದರಿಂದ, ಗಿಡಗಳು ಒಣಗಿದ ತಕ್ಷಣ ಅವುಗಳನ್ನು ತೆಗೆದು ಹೊಸ ಗಿಡಗಳನ್ನು ನೆಡುವುದು ಅತ್ಯಗತ್ಯ.
ದೊಡ್ಡ ಮರಗಳು:
ಮನೆಯ ತೀರಾ ಹತ್ತಿರದಲ್ಲಿ ಹುಣಸೆ ಮರ ಅಥವಾ ಖರ್ಜೂರದ ಮರಗಳನ್ನು ಬೆಳೆಸಬಾರದು ಎಂದು ವಾಸ್ತು ತಜ್ಞರು ಸಲಹೆ ನೀಡುತ್ತಾರೆ. ಹುಣಸೆ ಮರವು ನಕಾರಾತ್ಮಕ ಶಕ್ತಿಗಳನ್ನು ಸೆಳೆಯುತ್ತದೆ ಎಂಬ ನಂಬಿಕೆ ಇದೆ, ಇದು ಮನೆಯವರ ಮಾನಸಿಕ ಶಾಂತಿಗೆ ಧಕ್ಕೆ ತರಬಹುದು. ಹಾಗೆಯೇ, ಖರ್ಜೂರದ ಮರವು ಆರ್ಥಿಕ ಅಭಿವೃದ್ಧಿಯನ್ನು ಕುಂಠಿತಗೊಳಿಸುತ್ತದೆ ಎಂದು ಹೇಳಲಾಗುತ್ತದೆ. ಈ ಮರಗಳನ್ನು ಮನೆಯ ಆವರಣದಿಂದ ದೂರದಲ್ಲಿ ಬೆಳೆಸುವುದು ಶ್ರೇಯಸ್ಕರ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಬೆಂಗಳೂರು, ಏ.1: ಸಿಲಿಕಾನ್ ಸಿಟಿಯ ರಸ್ತೆಗಳಲ್ಲಿ ನಾಗರಿಕ ಪ್ರಜ್ಞೆ ಹೇಗೆ ಕಳೆದುಕೊಳ್ಳುತ್ತಿದೆ ಎಂಬುದಕ್ಕೆ ಬಸವನಗುಡಿಯಲ್ಲಿ ನಡೆದ ಪಾರ್ಕಿಂಗ್ ವಿವಾದವೊಂದು ಸಾಕ್ಷಿಯಾಗಿದೆ. ಪುತ್ತಿಗೆ ಮಠದ ಮುಂಭಾಗ ವಾಹನ ನಿಲುಗಡೆ ಮಾಡುವ ವಿಚಾರದಲ್ಲಿ ಕಾಲೇಜು ವಿದ್ಯಾರ್ಥಿ ಮತ್ತು ಮಹಿಳಾ ನಡುವೆ ನಡೆದ ಜಗಳ, ಕೊನೆಗೆ ಪೊಲೀಸರ ಸಮ್ಮುಖದಲ್ಲಿ ‘ರಾಜಿ’ಯೊಂದಿಗೆ ಅಂತ್ಯಗೊಂಡಿದೆ.
ವರದಿಗಳ ಪ್ರಕಾರ, ಕಾಲೇಜು ವಿದ್ಯಾರ್ಥಿಯೊಬ್ಬ ಮಠದ ಮುಂಭಾಗ ನಿರ್ಬಂಧವಿದ್ದರೂ ಆತುರದಲ್ಲಿ ವಾಹನ ಪಾರ್ಕ್ ಮಾಡಿದ್ದ ಎನ್ನಲಾಗಿದೆ. ಇದನ್ನು ಪ್ರಶ್ನಿಸಿದ ಮಠದ ಭಕ್ತನೊಂದಿಗೆ ವಿದ್ಯಾರ್ಥಿ ವಾಗ್ವಾದಕ್ಕಿಳಿದಿದ್ದು, ಇದು ದೈಹಿಕ ಹಲ್ಲೆಯ ಹಂತಕ್ಕೆ ತಲುಪಿದೆ. ಗಲಾಟೆಯ ನಡುವೆ ವಿದ್ಯಾರ್ಥಿಯು ಮಹಿಳೆಯೊಬ್ಬರ ಮೇಲೂ ಹಲ್ಲೆ ನಡೆಸಿದ್ದಾನೆ ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ.
ಇಲ್ಲಿದೆ ನೋಡಿ ವಿಡಿಯೋ:
Parking Dispute Turns Violent, Ends in ‘Compromise’ Instead of Accountability in Bengaluru
A simple parking issue spiralled into violence in Bengaluru’s Basavanagudi area, where a college student and a devotee of the Puttige Mutt got into a physical clash once again exposing… pic.twitter.com/vGTapbQPsj
ಈ ಘಟನೆಯ ನಂತರ ಎರಡೂ ಕಡೆಯವರು ಬಸವನಗುಡಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಆದರೆ, ಪೊಲೀಸರು ಕಠಿಣ ಕ್ರಮ ಕೈಗೊಳ್ಳುವ ಬದಲು, ವಿದ್ಯಾರ್ಥಿಯ ಭವಿಷ್ಯದ ದೃಷ್ಟಿಯಿಂದ ಆತನ ಪೋಷಕರನ್ನು ಕರೆಸಿ ಬುದ್ಧಿವಾದ ಹೇಳಿ ಕಳುಹಿಸಿದ್ದಾರೆ. ಯಾವುದೇ ಎಫ್‌ಐಆರ್ (FIR) ದಾಖಲಿಸದೆ ಪ್ರಕರಣವನ್ನು ಪರಸ್ಪರ ಸಂಧಾನದ ಮೂಲಕ ಇತ್ಯರ್ಥಪಡಿಸಲಾಗಿದೆ.
ಬೆಂಗಳೂರಿನಲ್ಲಿ ಕಾನೂನು ಪಾಲನೆ ಕೇವಲ ಆಯ್ಕೆಯ ವಿಷಯವೇ? ದೈಹಿಕ ಹಲ್ಲೆ ಮತ್ತು ಮಹಿಳೆಯರ ಮೇಲಿನ ದೌರ್ಜನ್ಯದಂತಹ ಪ್ರಕರಣಗಳನ್ನು ಕೇವಲ ‘ರಾಜಿ’ಯ ಮೂಲಕ ಮುಚ್ಚಿ ಹಾಕುವುದು ಎಷ್ಟರ ಮಟ್ಟಿಗೆ ಸರಿ? ಎಂಬ ಪ್ರಶ್ನೆಗಳು ಇದೀಗ ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿವೆ.
ಶಿವಮೊಗ್ಗ, ಏಪ್ರಿಲ್ 01: ನಿನ್ನೆ ಮಧ್ಯರಾತ್ರಿ ಸುರಿದ ಭಾರಿ ಮಳೆಗೆ ಶಿವಮೊಗ್ಗದ ನಗರದ ಶರಾವತಿ ನಗರ ಬಡಾವಣೆಯ ಮನೆಯೊಂದಕ್ಕೆ ಚಾನಲ್ ನೀರು ನುಗ್ಗಿ ಭಾರಿ ಅವಾಂತರ ಸೃಷ್ಟಿಯಾಗಿದೆ. ರಾತ್ರಿ 12 ಗಂಟೆಯ ವೇಳೆಗೆ ಗುಡುಗು ಸಮೇತ ಆರಂಭವಾದ ಮಳೆ, ಬೆಳಗ್ಗಿನ ಜಾವ ಸುಮಾರು 3 ಗಂಟೆಯವರೆಗೂ ಸುರಿದಿದೆ. ಭಾರಿ ಮಳೆ ಹಿನ್ನೆಲೆ ತುಂಗಾ ಚಾನಲ್ನಿಂದ ಉಕ್ಕಿ ಹರಿದ ನೀರು ತಗ್ಗುಪ್ರದೇಶದಲ್ಲಿರುವ ಮನೆಗೆ ನುಗ್ಗಿದೆ. ಮನೆಯಲ್ಲಿದ್ದ ಸಾಮಗ್ರಿಗಳು ನೀರಿನಲ್ಲಿ ನೆಂದು ತೊಪ್ಪೆಯಾಗಿದ್ದು,
ಹಾಸಿಗೆ, ಮಂಚ, ಅಡುಗೆ ಮನೆಯ ಬಹುತೇಕ ವಸ್ತುಗಳು ನೀರು ಪಾಲಾಗಿವೆ.
ಗುಜರಾತ್ ಟೈಟಾನ್ಸ್ (GT) ವಿರುದ್ಧದ ಪಂದ್ಯದ ವೇಳೆ ಪಂಜಾಬ್ ಕಿಂಗ್ಸ್ ತಂಡದ ನಾಯಕ ಶ್ರೇಯಸ್ ಅಯ್ಯರ್ ಗಾಯಗೊಂಡಿದ್ದರು. ಹೀಗೆ ಗಾಯಗೊಂಡಿದ್ದು ಪಂಜಾಬ್ ಕಿಂಗ್ಸ್ ಬ್ಯಾಟರ್ನಿಂದ. ಅಂದರೆ ಕೂಪರ್ ಕೊನೊಲಿ ಬಾರಿಸಿದ ಚೆಂಡು ಶ್ರೇಯಸ್ ಅಯ್ಯರ್ ಅವರ ಕೈಗೆ ಬಲವಾಗಿ ಬಡಿದಿದೆ.
ಇನ್ನಿಂಗ್ಸ್‌ನ 12ನೇ ಓವರ್‌ನಲ್ಲಿ ಬ್ಯಾಟಿಂಗ್ ಮಾಡುತ್ತಿದ್ದ ಕೂಪರ್ ಕೊನೊಲಿ ಹೊಡೆದ ವೇಗದ ‘ಸ್ಟ್ರೈಟ್ ಡ್ರೈವ್’ ಚೆಂಡು ನಾನ್-ಸ್ಟ್ರೈಕರ್ ಎಂಡ್‌ನಲ್ಲಿದ್ದ ಶ್ರೇಯಸ್ ಅಯ್ಯರ್ ಅವರ ಮಣಿಕಟ್ಟಿಗೆ ನೇರವಾಗಿ ಬಡಿಯಿತು. ತೀವ್ರ ನೋವಿನಿಂದ ಅಯ್ಯರ್ ಮೈದಾನದಲ್ಲೇ ಕುಸಿದು ಬಿದ್ದ ಅಯ್ಯರ್ ತಕ್ಷಣವೇ ಫಿಸಿಯೋ ಅವರಿಂದ ಚಿಕಿತ್ಸೆ ಪಡೆದರು. ಇದಾದ ಬಳಿಕ ಎದುರಿಸಿದ ಎಸೆತದಲ್ಲೇ ಔಟಾಗಿ ಹೊರ ನಡೆದರು.
ಇನ್ನು ಪಂದ್ಯ ಮುಗಿದ ನಂತರ ಮೈದಾನದಲ್ಲಿ ಕಾಣಿಸಿಕೊಂಡಿದ್ದ ಶ್ರೇಯಸ್ ಅಯ್ಯರ್ ಅವರ ಕೈಗೆ ದಪ್ಪವಾಗಿ ಪಟ್ಟಿ (Taping) ಕಟ್ಟಲಾಗಿತ್ತು. ಹೀಗಾಗಿಯೇ ಅವರು ಮುಂದಿನ ಪಂದ್ಯಕ್ಕೆ ಲಭ್ಯರಿರಲಿದ್ದಾರೆಯೇ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ.
ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದ ಬಳಿಕ ಮಾತನಾಡಿದ ಶ್ರೇಯಸ್ ಅಯ್ಯರ್, ಗಾಯದ ನೋವು ಕಡಿಮೆಯಾಗಿದ್ದು, ಇದಾಗ್ಯೂ ನಾನು ಯಾವುದನ್ನೂ ಈಗಲೇ ಖಚಿತಪಡಿಸಿ ಹೇಳಲು ಇಷ್ಟಪಡುವುದಿಲ್ಲ ಎಂದಿದ್ದಾರೆ.
ಹೀಗಾಗಿ ಶ್ರೇಯಸ್ ಅಯ್ಯರ್ ಅವರ ಗಾಯದ ಮೇಲೆ ಪಂಜಾಬ್ ಕಿಂಗ್ಸ್ ತಂಡದ ವೈದ್ಯಕೀಯ ಸಿಬ್ಬಂದಿ ನಿಗಾ ಇಟ್ಟಿದ್ದಾರೆ. ಚೆನ್ನೈನಲ್ಲಿ ನಡೆಯುವ ಅಭ್ಯಾಸದ ಅವಧಿಯ ನಂತರವಷ್ಟೇ ಅವರು ಕಣಕ್ಕಿಳಿಯುತ್ತಾರೆಯೇ ಅಥವಾ ಇಲ್ಲವೇ ಎಂಬುದು ನಿರ್ಧಾರವಾಗಲಿದೆ.
ಅಂದಹಾಗೆ ಶ್ರೇಯಸ್ ಅಯ್ಯರ್ ಅವರು ದೀರ್ಘಕಾಲದ ಗಾಯದ ನಂತರ ಇತ್ತೀಚೆಗಷ್ಟೇ ಕಮ್‌ಬ್ಯಾಕ್ ಮಾಡಿದ್ದರು. ಇದೀಗ ಮತ್ತೊಮ್ಮೆ ಗಾಯಗೊಂಡಿರುವುದು ಹೊಸ ಚಿಂತೆಗೆ ಕಾರಣವಾಗಿದೆ.
ನವದೆಹಲಿ, ಏಪ್ರಿಲ್ 1: ಭಾರತದ ಎರಡು ದೊಡ್ಡ ವಿಮಾನಯಾನ ಸಂಸ್ಥೆಗಳಾದ ಏರ್ ಇಂಡಿಯಾ(Air India) ಹಾಗೂ ಇಂಡಿಗೋ ದುಬೈ, ಅಬುಧಾಭಿ ಅಥವಾ ಇತರೆ ಗಲ್ಫ್ ದೇಶಗಳಿಗೆ ಹೋಗುವ ಪ್ರಯಾಣಿಕರಿಗೆ ಕೆಲವು ಸಲಹೆಗಳನ್ನು ನೀಡಿವೆ. ಮಧ್ಯಪ್ರಾಚ್ಯದಲ್ಲಿ ಬದಲಾಗುತ್ತಿರುವ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಇಂಡಿಗೋ ಏರ್‌ಲೈನ್ಸ್ ಪ್ರಯಾಣಿಕರಿಗೆ ಪ್ರಯಾಣ ಸಲಹೆಯನ್ನು ನೀಡಿದೆ.
ಪ್ರದೇಶದಲ್ಲಿನ ಪ್ರಸ್ತುತ ಪರಿಸ್ಥಿತಿಯಿಂದಾಗಿ, ವಿಮಾನ ವೇಳಾಪಟ್ಟಿಗಳು ಆಗಾಗ ಬದಲಾಗುತ್ತಿರುತ್ತವೆ. ಆದ್ದರಿಂದ, ಎಲ್ಲಾ ಪ್ರಯಾಣಿಕರು ವಿಮಾನ ನಿಲ್ದಾಣಕ್ಕೆ ಹೊರಡುವ ಮೊದಲು ಪ್ರಸ್ತುತ ಪರಿಸ್ಥಿತಿ ಬಗ್ಗೆ ಪರಿಶೀಲಿಸಿ ಎಂದು ವಿನಂತಿಸಿದ್ದಾರೆ. ಪ್ರಯಾಣಿಕರ ಸುರಕ್ಷತೆ ಮತ್ತು ಅನುಕೂಲಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದು ಇಂಡಿಗೋ ಸ್ಪಷ್ಟಪಡಿಸಿದೆ.
ಕಂಪನಿಯ ತಂಡಗಳು ನಿರಂತರವಾಗಿ ಮೇಲ್ವಿಚಾರಣೆ ನಡೆಸುತ್ತಿವೆ, ಇರಾನ್-ಇಸ್ರೇಲ್ ಸಂಘರ್ಷ ಮತ್ತು ಮಧ್ಯಪ್ರಾಚ್ಯದಲ್ಲಿ ಅಮೆರಿಕದ ಹಸ್ತಕ್ಷೇಪದಿಂದಾಗಿ ಪ್ರಾದೇಶಿಕ ಉದ್ವಿಗ್ನತೆ ಹೆಚ್ಚಿದೆ. ವಾಯುಪ್ರದೇಶದ ನಿರ್ಬಂಧಗಳು ಮತ್ತು ವಿಮಾನಗಳ ಅಡಚಣೆಗಳಿಗೆ ಕಾರಣವಾಗಿರುವ ಸಮಯದಲ್ಲಿ ಈ ಸಲಹೆ ಬಂದಿದೆ. ಏಪ್ರಿಲ್ 1ರಂದು ಇಂಡಿಗೋ ತನ್ನ ಕಾರ್ಯಾಚರಣೆಯನ್ನು ಯಾವುದೇ ಅಡೆತಡೆಗಳಿಲ್ಲದೆ ನಿರ್ವಹಿಸುವುದಾಗಿ ಹೇಳಿದೆ.
ಪಟ್ಟಿಯಲ್ಲಿ ಬಾಂಬೆ, ದೆಹಲಿ, ಹೈದರಾಬಾದ್, ಕೊಚ್ಚಿ ಮತ್ತು ಬೆಂಗಳೂರಿನಂತಹ ಭಾರತೀಯ ನಗರಗಳಿಂದ ಜೆಡ್ಡಾ, ಮದೀನಾ, ಅಬುಧಾಬಿ, ರಿಯಾದ್ ಮತ್ತು ಮಸ್ಕತ್‌ನಂತಹ ಮಧ್ಯಪ್ರಾಚ್ಯ ತಾಣಗಳಿಗೆ ವಿಮಾನಗಳು ಸೇರಿವೆ.
6E59 ಬಾಂಬೆಯಿಂದ ಮದೀನಾ, 6E61 ಬಾಂಬೆಯಿಂದ ಜೆಡ್ಡಾ, 6E71 ದೆಹಲಿಯಿಂದ ಅಬುಧಾಬಿ ಮತ್ತು 6E1271 ಕೊಚ್ಚಿಯಿಂದ ಮಸ್ಕತ್ಗೆ ವಿಮಾನಗಳನ್ನು ನಿಗದಿಪಡಿಸಲಾಗಿದೆ. ಎರಡೂ ಕಡೆಗಳಲ್ಲಿ 30 ಕ್ಕೂ ಹೆಚ್ಚು ವಿಮಾನಗಳು ಹಾರಾಟ ನಡೆಸಲಿವೆ.ಪ್ರಯಾಣಿಕರು ಬುಕಿಂಗ್ ಮತ್ತು ಚೆಕ್ ಇನ್ ಮಾಡುವ ಮೊದಲು ಇಂಡಿಗೋ ವೆಬ್‌ಸೈಟ್ ಅಥವಾ ಅಪ್ಲಿಕೇಶನ್‌ನಲ್ಲಿ ಸ್ಥಿತಿಯನ್ನು ಪರಿಶೀಲಿಸಬಹುದು.
ಅಮೆರಿಕ-ಇಸ್ರೇಲಿ ದಾಳಿಗಳು ಮತ್ತು ಇರಾನ್‌ನ ಪ್ರತೀಕಾರದ ದಾಳಿಗಳಿಂದಾಗಿ ಗಲ್ಫ್ ಪ್ರದೇಶದ ವಾಯುಪ್ರದೇಶವನ್ನು ಮುಚ್ಚಲಾಗಿದೆ.
ಇದರಿಂದಾಗಿ ಅನೇಕ ವಿಮಾನಯಾನ ಸಂಸ್ಥೆಗಳು ಕತಾರ್, ಕುವೈತ್ ಮತ್ತು ಇತರ ಕೆಲವು ಸ್ಥಳಗಳಿಗೆ ವಿಮಾನಗಳನ್ನು ಸ್ಥಗಿತಗೊಳಿಸಬೇಕಾಯಿತು. ಇಂಡಿಗೋ ಕೆಲವು ಮಾರ್ಗಗಳಲ್ಲಿ ಸೇವೆಗಳನ್ನು ಕಡಿಮೆ ಮಾಡಿದೆ ಆದರೆ ಸೌದಿ ಅರೇಬಿಯಾ ಮತ್ತು ಯುಎಇಯ ಪ್ರಮುಖ ನಗರಗಳಿಗೆ ಕೆಲವು ವಿಮಾನಗಳ ಹಾರಾಟವನ್ನು ಮುಂದುವರೆಸಿದೆ.
ಗಲ್ಫ್ ದೇಶಗಳಲ್ಲಿ 30 ಏರ್ ಇಂಡಿಯಾ, ವಿಮಾನಗಳು ಹಾರಾಟ ನಡೆಸಲಿವೆ. ಉತ್ತರ ಅಮೆರಿಕ, ಯುರೋಪ್, ಆಸ್ಟ್ರೇಲಿಯಾ ಮತ್ತು ಇತರ ಪ್ರದೇಶಗಳಿಗೆ ಹೋಗುವ ಮತ್ತು ಹೋಗುವ ಎಲ್ಲಾ ವಿಮಾನಗಳು ಎಂದಿನಂತೆ ಹಾರಾಟ ನಡೆಸಲಿವೆ.
ಮಲಯಾಳಂ ನಿರ್ದೇಶಕ ಹಾಗೂ ನಿರ್ಮಾಪಕ ರಂಜಿತ್ ಬಾಲಕೃಷ್ಣನ್ ಅವರು ಲೈಂಗಿಕ ಕಿರಕುಳ ನೀಡಿದ ಆರೋಪದ ಮೇಲೆ ಬಂಧನಕ್ಕೆ ಒಳಗಾಗಿದ್ದಾರೆ. ಹೇಮಾ ಕಮಿಟಿ ವರದಿಯಲ್ಲಿ ಇವರ ಬಗ್ಗೆ ಈ ರೀತಿಯ ಸಾಕಷ್ಟು ಆರೋಪಗಳು ಎದುರಾಗಿದ್ದವು. ಈಗ ಎರ್ನಾಕುಲಮ್ ಸೆಂಟ್ರಲ್ ಪೊಲೀಸರು ಅವರನ್ನು ಬಂಧಿಸಿದ್ದಾರೆ. ನಟಿಯರಿಗೆ ಇವರು ಸಾಕಷ್ಟು ಕಿರುಕುಳ ನೀಡಿದ್ದರು ಎನ್ನಲಾಗಿದೆ.
ಯುವ ನಟಿಯೊಬ್ಬರು ರಂಜಿತ್ ಮೇಲೆ ಕೊಚ್ಚಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. ಸೆಟ್ನಲ್ಲಿ ರಂಜಿತ್ ಸರಿಯಾಗಿ ನಡೆದುಕೊಳ್ಳುತ್ತಿರಲಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು ಪ್ರಾಥಮಿಕ ವರದಿ ಆಧರಿಸಿ ಅವರನ್ನು ಇಡುಕ್ಕಿಯಲ್ಲಿ ಬಂಧಿಸಿದ್ದಾರೆ. ಕಾರ್ಯಕ್ರ ಒಂದಕ್ಕೆ ಅವರು ತೆರಳುತ್ತಿದ್ದರು ಎಂದು ವರದಿ ಆಗಿದೆ.
ರಂಜಿತ್ ಅವರು ಶೂಟಿಂಗ್ ವೇಳೆ ನಟಿಯನ್ನು ಕ್ಯಾರವಾನ್ಗೆ ಕರೆದರಂತೆ. ಲೈಂಗಿಕ ಉದ್ದೇಶ ಇಟ್ಟುಕೊಂಡು ಅವರು ತಪ್ಪಾಗಿ ನಡೆದುಕೊಂಡರು ಎಂದು ನಟಿ ದೂರಲ್ಲಿ ತಿಳಿಸಿದ್ದಾರೆ. ತಕ್ಷಣ ಸ್ಥಳದಿಂದ ತೆರಳಿದ ನಟಿ, ದೂರನ್ನು ದಾಖಲು ಮಾಡಿದರು. ಇದನ್ನು ಆಧರಿಸಿ ಪೊಲೀಸರು ಪ್ರಾಥಮಿಕ ತನಿಖೆ ನಡೆಸಿದ್ದು, ನಿರ್ದೇಶಕನ ಬಂಧನ ಆಗಿದೆ.
ಈ ಮೊದಲು ಬೆಂಗಾಳಿ ನಟಿಯೊಬ್ಬರು ರಂಜಿತ್ ಮೇಲೆ ಲೈಂಗಿಕ ಕಿರುಕುಳ ಆರೋಪ ಹೊರಿಸಿದ್ದರು. 31 ವರ್ಷದ ವ್ಯಕ್ತಿಯೋರ್ವ ಬೆಂಗಳೂರಿನಲ್ಲಿ ರಂಜಿತ್ ವಿರುದ್ಧ ಇದೇ ರೀತಿಯ ಆರೋಪ ಮಾಡಿದ್ದ. ಆದರೆ, ಆ ಸಂದರ್ಭದಲ್ಲಿ ಅವರಿಗೆ ಕ್ಲೀನ್ ಚಿಟ್ ಕೊಟ್ಟಿತ್ತು.
ಮಲಯಾಳಂ ಚಿತ್ರರಂಗದಲ್ಲಿ ನಡೆಯುತ್ತಿರುವ ಲೈಂಗಿಕ ಕಿರಕುಳ ವಿಷಯದ ಬಗ್ಗೆ ಜಸ್ಟೀಸ್ ಹೇಮಾ ಕಮಿಟಿ ವರದಿಯಲ್ಲಿ ಹೇಳಲಾಗಿತ್ತು. ಇದು ಸಾಕಷ್ಟು ಚರ್ಚೆ ಹುಟ್ಟುಹಾಕಿತ್ತು. ನಟಿಯರಿಗೆ ಮಲಯಾಳಂ ಚಿತ್ರರಂಗದಲ್ಲಿ ಸುರಕ್ಷತೆ ಇಲ್ಲ ಎಂದು ವರದಿ ಹೇಳಿತ್ತು.
ನವದೆಹಲಿ, ಏಪ್ರಿಲ್ 01: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧವು ಜಾಗತಿಕವಾಗಿ ಹಲವು ವಲಯಗಳ ಮೇಲೆ ಪರಿಣಾಮ ಬೀರಿದ್ದು, ಭಾರತದ ಕಾಂಡೋಮ್ ಉತ್ಪಾದನಾ ಕ್ಷೇತ್ರಕ್ಕೂ ಅದರ ಬಿಸಿ ತಟ್ಟಿದೆ. ಕಚ್ಚಾ ವಸ್ತುಗಳ ಪೂರೈಕೆಯಲ್ಲಿನ ಗಂಭೀರ ಅಡಚಣೆಗಳಿಂದಾಗಿ ಕಾಂಡೋಮ್‌ಗಳ ಉತ್ಪಾದನಾ ವೆಚ್ಚದಲ್ಲಿ ಭಾರಿ ಏರಿಕೆಯಾಗಿದೆ. ಇದು ಮುಂಬರುವ ದಿನಗಳಲ್ಲಿ ಕಾಂಡೋಮ್‌ಗಳ ಬೆಲೆಯನ್ನು ಶೇ. 40 ರಿಂದ 50ರಷ್ಟು ಹೆಚ್ಚಿಸುವ ಸಾಧ್ಯತೆಯಿದೆ. ಭಾರತವು ಕಾಂಡೋಮ್ ತಯಾರಿಕೆಗೆ ಅಗತ್ಯವಾದ ಅಮೋನಿಯಾ ರಾಸಾಯನಿಕಕ್ಕೆ ಶೇ. 86ರಷ್ಟು ಬೇರೆ ದೇಶಗಳ ಮೇಲೆ ಅವಲಂಬಿತವಾಗಿದೆ. ಸೌದಿ ಅರೇಬಿಯಾ, ಕತಾರ್ ಮತ್ತು ಇತರ ಗಲ್ಫ್ ರಾಷ್ಟ್ರಗಳಿಂದ ಅಮೋನಿಯಾ ಆಮದು ಮಾಡಿಕೊಳ್ಳಲಾಗುತ್ತಿತ್ತು. ಯುದ್ಧದಿಂದಾಗಿ ಈ ಆಮದು ಸರಪಳಿ ಅಸ್ತವ್ಯಸ್ತಗೊಂಡಿದೆ. ಕಚ್ಚಾ ರಬ್ಬರ್ (ಲ್ಯಾಟೆಕ್ಸ್) ಅನ್ನು ಘನೀಕರಿಸಲು ಅಮೋನಿಯಾ ಅವಶ್ಯಕ. ಇದಲ್ಲದೆ, ಲುಬ್ರಿಕಂಟ್ ಆಗಿ ಬಳಸುವ ಸಿಲಿಕಾನ್ ಎಣ್ಣೆ ಮತ್ತು ಪ್ಯಾಕೇಜಿಂಗ್‌ಗೆ ಬೇಕಾದ ಪಿ.ವಿ.ಸಿ. ಮತ್ತು ಅಲ್ಯುಮಿನಿಯಂ ಫಾಯಿಲ್‌ಗಳ ಆಮದಿಗೂ ಸಹ ಸಮಸ್ಯೆ ಎದುರಾಗಿದೆ. ಈ ಕಚ್ಚಾ ವಸ್ತುಗಳ ಕೊರತೆಯಿಂದಾಗಿ ಹಲವು ಕಂಪನಿಗಳ ಉತ್ಪಾದನೆ ಕುಂಠಿತಗೊಂಡಿದ್ದು, ಬಾಕಿ ಉಳಿದ ಆರ್ಡರ್‌ಗಳ ಸಂಖ್ಯೆ ಹೆಚ್ಚಾಗಿದೆ. ಭಾರತದ 14,000 ಕೋಟಿ ಮೌಲ್ಯದ ಕಾಂಡೋಮ್ ಮಾರುಕಟ್ಟೆಯ ಮೇಲೆ ಈ ಬಿಕ್ಕಟ್ಟು ತೀವ್ರ ಪರಿಣಾಮ ಬೀರಿದೆ.
IPL 2026: ಇಂಡಿಯನ್ ಪ್ರೀಮಿಯರ್ ಲೀಗ್ನ ನಾಲ್ಕನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವು ರೋಚಕ ಜಯ ಸಾಧಿಸಿದೆ. ಮುಲ್ಲನ್ಪುರ್ನಲ್ಲಿ ನಡೆದ ಗುಜರಾತ್ ಟೈಟಾನ್ಸ್ ವಿರುದ್ಧದ ಈ ಪಂದ್ಯದಲ್ಲಿ ಟಾಸ್ ಗೆದ್ದ ಶ್ರೇಯಸ್ ಅಯ್ಯರ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಶುಭ್ಮನ್ ಗಿಲ್ ನೇತೃತ್ವದ ಗುಜರಾತ್ ಟೈಟಾನ್ಸ್ 20 ಓವರ್‌ಗಳಲ್ಲಿ 162 ರನ್ ಕಲೆಹಾಕಿದ್ದರು. ಈ ಗುರಿಯನ್ನು ಪಂಜಾಬ್ ಕಿಂಗ್ಸ್ 19.1 ಓವರ್‌ಗಳಲ್ಲಿ ಚೇಸ್ ಮಾಡಿ ಮೂರು ವಿಕೆಟ್ಗಳ ರೋಚಕ ಜಯ ಸಾಧಿಸಿತು.
ಈ ರೋಚಕ ಸೋಲಿನ ಬಳಿಕ ಮಾತನಾಡಿದ ಗುಜರಾತ್ ಟೈಟಾನ್ಸ್ ತಂಡದ ನಾಯಕ ಶುಭ್ಮನ್ ಗಿಲ್, ಮೊದಲು ಬ್ಯಾಟ್ ಮಾಡಿದ ಸಂದರ್ಭದಲ್ಲಿ ಕೊನೆಯ 5-6 ಓವರ್‌ಗಳಲ್ಲಿ ನಿರೀಕ್ಷಿತ ವೇಗದಲ್ಲಿ ರನ್ ಗಳಿಸಲು ಸಾಧ್ಯವಾಗಲಿಲ್ಲ. “ಇದು 210-220 ರನ್ ಗಳಿಸುವ ಪಿಚ್ ಆಗಿರಲಿಲ್ಲ. ನಾವು ಕನಿಷ್ಠ 175-180 ರನ್ ಗುರಿ ಹೊಂದಿದ್ದೆವು. ಚೆಂಡು ಹಳೆಯದಾದಂತೆ ಮೈದಾನದ ನೇರ ಹೊಡೆತಗಳನ್ನು ಹೊಡೆಯುವುದು ಕಷ್ಟವಾಯಿತು,” ಎಂದು ಅವರು ವಿವರಿಸಿದರು.
ಇನ್ನು ವೇಗಿ ಪ್ರಸಿದ್ಧ್ ಕೃಷ್ಣ ಅವರನ್ನು ತಡವಾಗಿ ಕಣಕ್ಕಿಳಿಸಿದ ನಿರ್ಧಾರದ ಬಗ್ಗೆ ಮಾತನಾಡಿದ ಗಿಲ್, “ವಿಕೆಟ್ ನಿಧಾನವಾಗಿದ್ದರಿಂದ, ಹೆಚ್ಚು ವೇಗವಿರುವ ಬೌಲರ್ ವಿಕೆಟ್ ತಂದುಕೊಡಬಲ್ಲರು ಎಂದು ನಾವು ಭಾವಿಸಿದ್ದೆವು. ಪ್ರಸಿದ್ಧ್ ಸರಿಯಾದ ಸಮಯಕ್ಕೆ ಬಂದು ವಿಕೆಟ್ ಪಡೆಯುವ ಮೂಲಕ 18ನೇ ಓವರ್‌ವರೆಗೂ ನಮ್ಮನ್ನು ಪಂದ್ಯದಲ್ಲಿ ಜೀವಂತವಾಗಿರಿಸಿದ್ದರು.
ಇದರ ಜೊತೆಗೆ ಯುವ ವೇಗಿ ಅಶೋಕ್ ಶರ್ಮಾ ಕೂಡ ಉತ್ತಮ ದಾಳಿ ಸಂಘಟಿಸಿದ್ದರು. “ಅಶೋಕ್ ಶ್ರಮಜೀವಿ ಮತ್ತು ಉತ್ತಮ ಫೀಲ್ಡರ್. ಹೊಸ ಚೆಂಡಿನಲ್ಲಿ ಅವರ ಬೌಲಿಂಗ್ ಶೈಲಿ ನನಗೆ ಶಿಬಿರದಲ್ಲೇ ಇಷ್ಟವಾಗಿತ್ತು. ಅನುಭವ ಹೆಚ್ಚಾದಂತೆ ಅವರು ತಂಡದ ಅಮೂಲ್ಯ ಆಸ್ತಿಯಾಗಲಿದ್ದಾರೆ,” ಎಂದು ಶುಭ್ಮನ್ ಗಿಲ್ ಹೇಳಿದ್ದಾರೆ.
ಇನ್ನು ಈ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡದ ಸೋಲಿಗೆ ಕಾರಣವಾಗಿದ್ದು ಮಳೆ. ನಾವು ಅಂತಿಮ ಓವರ್ಗಳ ವೇಳೆ ಕಂಬ್ಯಾಕ್ ಮಾಡಿದರೂ ಮಳೆ ಬಂದಿದ್ದರಿಂದ ಚೆಂಡು ಒದ್ದೆಯಾಗಿತ್ತು. ಇದರಿಂದ ಪಂಜಾಬ್ ಕಿಂಗ್ಸ್ ತಂಡಕ್ಕೆ ಬ್ಯಾಟಿಂಗ್ ಸುಲಭವಾಯಿತು ಎಂದು ಶುಭ್ಮನ್ ಗಿಲ್ ಅಭಿಪ್ರಾಯಪಟ್ಟಿದ್ದಾರೆ.
ಈ ಪಂದ್ಯದ ದ್ವಿತೀಯ ಇನಿಂಗ್ಸ್ ವೇಳೆ ತುಂತುರು ಮಳೆಯಾಗಿತ್ತು.
ತುಂತುರು ಮಳೆ ಬಂದರೂ ಪಂದ್ಯವನ್ನು ಮುಂದುವರೆಸಲಾಗಿತ್ತು.
ಚೆಂಡು ಒದ್ದೆಯಾದರೆ ಬೌಲರ್ಗಳಿಗೆ ಬಾಲ್ ಮೇಲೆ ಹೆಚ್ಚಿನ ಗ್ರಿಪ್ ಸಿಗುವುದಿಲ್ಲ.
ಅಂತಿಮವಾಗಿ ಈ ಸೋಲಿನಿಂದ ಕಂಗೆಡದಂತೆ ತಂಡದ ಸದಸ್ಯರಿಗೆ ಕಿವಿಮಾತು ಹೇಳಿದ ಶುಭ್ಮನ್ ಗಿಲ್, “ನಾವು ಉತ್ತಮವಾಗಿಯೇ ಆಡಿದ್ದೇವೆ. ಮುಂದಿನ ಪಂದ್ಯಗಳಲ್ಲಿ ಹೆಚ್ಚಿನ ಇಂಟೆನ್ಸಿಟಿ ಮತ್ತು ಶ್ರಮದೊಂದಿಗೆ ಮರಳೋಣ. ತಪ್ಪುಗಳಿಂದ ಕಲಿತು ಸಾಗುವುದೇ ಮುಖ್ಯ ಎಂದು ತಂಡದ ಹುಮ್ಮಸ್ಸು ಹೆಚ್ಚಿಸುವ ಮಾತುಗಳನ್ನಾಡಿದ್ದಾರೆ.