IND vs NZ: ನ್ಯೂಜಿಲೆಂಡ್ ತಂಡದಲ್ಲಿ ತಮಿಳುನಾಡು ಮೂಲದ ಆಟಗಾರ; ರಜನಿಯ ಬಿಗ್ ಫ್ಯಾನ್

Source link

ಸೋಮನಾಥಪುರದಲ್ಲಿ ಪ್ರಧಾನಿ ಮೋದಿ ಶೌರ್ಯಯಾತ್ರೆ; 13ನೇ ಶತಮಾನದ ಹುತಾತ್ಮಕರಿಗೆ ಗೌರವ; ಡೋಲು ಡಮರುಗ ಸದ್ದು

Source link

ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?, ಗಂಡ-ಹೆಂಡ್ತಿ ಜಗಳ ಕೇಸ್​ಗೆ ಟ್ವಿಸ್ಟ್ ಮೇಲೆ ಟ್ವಿಸ್ಟ್ – Kannada News | Big Twist To Chikkaballapur Husband And Wife Harassment Case: Manjunath Released Meghashree Photos

ಚಿಕ್ಕಬಳ್ಳಾಪುರ, (ಜನವರಿ 11): ಗಂಡ ಹೆಂಡ್ತಿ ಜಗಳ ಉಂಡು ಮಲಗೋ ತನಕ ಅಂತಾರೆ. ಆದ್ರೆ, ಇವರ ಜಗಳ ಮಾತ್ರ ಬೀದಿಗೆ ಬಂದಿದೆ. ತನ್ನ ಗಂಡ ಸೈಕೋ, ಸಾಕಷ್ಟು ಟಾರ್ಚರ್ ಕೊಡುತ್ತಾನೆ ಎಂದು ಮಹಿಳೆ ಪೊಲೀಸ್ ಮೆಟ್ಟಿಲೇರಿದ್ದಾಳೆ. ಅತ್ತೆ ಮಾನವ ಮುಂದೆ ಬೆತ್ತಲಾಗಿ ಓಡಾಡುತ್ತಾನೆ. ಅಶ್ಲೀಲ ವಿಡಿಯೋ ತೋರಿಸಿ ಕಾಟ ಕೊಡುತ್ತಾನೆಂದು ದೂರಿದ್ದಾಳೆ. ಆದರೆ, ಈ ಕೇಸಿಗೆ ಗಂಡ ಟ್ವಿಸ್ಟ್ ಮೇಲೆ ಟ್ವಿಸ್ಟ್ ಕೊಟ್ಟಿದ್ದಾರೆ. ನಮ್ಮಿಬ್ಬರಿಗೂ ಅಧಿಕೃತವಾಗಿ ಮದುವೆಯಾಗಿಲ್ಲ. ಮದುವೆ ನೊಂದಣಿಗೆ ಮೇಘಾಶ್ರೀ ದಾಖಲೆಗಳನ್ನು ಕೋಡಲಿಲ್ಲ. ಇದರಿಂದ ಅನುಮಾನ ಬಂದು ಪ್ರಶ್ನಿಸಿದಾಗ ಮೇಘಾಶ್ರೀ ಬಂಡವಾಳ ಬಯಲಾಗಿದೆ ಎಂದು ಸ್ಫೋಟಕ ಮಾಹಿತಿ ಬಿಚ್ಚಿಟ್ಟಿದ್ದಾರೆ.

ಮೇಘಾಶ್ರೀ ಪತಿ ಮಂಜುನಾಥ್ ಟಿವಿ9ಗೆ ಪ್ರತಿಕ್ರಿಯಿಸಿ, ನಾನು ಕೆಲಸ ಮಾಡ್ತಿದ್ದ ಕಂಪನಿಯಲ್ಲಿ ನನ್ನ ಬಳಿ ರಿಪೋರ್ಟ್ ಮಾಡಲು ಬಂದಿದ್ದಳು. ಬೆತ್ತಲೆಯಾಗಿ ವಿಡಿಯೊ ಕಾಲ್ ಮಾಡುವುದು, ಅರೆಬೆತ್ತಲು ವಿಡಿಯೊ ಕಳುಹಿಸುವುದು, ಹನಿಟ್ರ್ಯಾಪ್ ಮಾಡುವ ರೀತಿಯಲ್ಲಿ ವರ್ತಿಸುತ್ತಿದ್ದಳು. ನಾನು ಆಕೆಯ ಜೊತೆ ವಿಚಿತ್ರವಾಗಿ ವರ್ತಿಸಿಲ್ಲ. ಆಕೆ ಮೊದಲೆ ಎರಡು ಮದುವೆ ಮಾಡಿಕೊಂಡಿದ್ದಳು. ಮದುವೆ ಮಾಡಿಕೊಂಡಿರುವ ವಿಚಾರ ನನಗೆ ತಿಳಿಸಿರಲಿಲ್ಲ. ಆಕೆ ಶೋಕಿ ಮಾಡುವ ಗೀಳು ಹೊಂದಿದ್ದಾಳೆ. ಕುಡಿದು ಬೇಕಾಬಿಟ್ಟಿ ವರ್ತಿಸುತ್ತಿದ್ದಳು ಎಂದು ಆರೋಪಿಸಿದ್ದಾರೆ.

ಇದನ್ನೂ ನೋಡಿ; ಎರಡು ಮದುವೆ ವಿಚಾರ ಗೊದ್ದಿದ್ದೇ ವಿವಾಹ: ಪತಿ ಆರೋಪಕ್ಕೆ ಮೇಘಶ್ರೀ ಕೌಂಟರ್​​

ರೌಡಿ ಶೀಟರ್ ನೊರ್ವನನ್ನು ಅಣ್ಣ ಅಂತಾ ಆತನಿಂದ ಬೆದರಿಕೆ ಹಾಕಿಸುತ್ತಿದ್ದಳು. ಸುಮಾರು 25 ಲಕ್ಷ ರೂಪಾಯಿ ನಷ್ಟು ಹಣ ಪಡೆದುಕೊಂಡಿದ್ದಾಳೆ. ಮೊದಲನೆ ಗಂಡ, ಎರಡನೇ ಗಂಡ, ಶಾಪಿಂಗ್ ಮಾಡುವ , ಸ್ನೇಹಿತರ ಜೊತೆ ಶೋಕಿ ಮಾಡುವ ಫೋಟೋಗಳನ್ನು ರಿಲೀಸ್ ಮಾಡಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

IND vs NZ: ಪಂದ್ಯದ ವೇಳೆ ಗಾಯಗೊಂಡು ಮೈದಾನದಿಂದ ಹೊರನಡೆದ ಟೀಂ ಇಂಡಿಯಾ ಆಲ್‌ರೌಂಡರ್

Source link

ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ: ವಾಹನ ಸವಾರರ ಪರದಾಟ – Kannada News | Rajajinagar Drainage Blocked: Unscientific Asphalt Laying Over Drain Covers Causes Safety Concerns

ಬೆಂಗಳೂರು, ಜ.11:  ರಾಜಾಜಿನಗರದ ಸುಜಾತಾ ಅಂಡರ್‌ಪಾಸ್‌ನಲ್ಲಿ ಜಿಬಿಎ ನಡೆಸಿದ ಅವೈಜ್ಞಾನಿಕ ರಸ್ತೆ ಡಾಂಬರೀಕರಣವು ವಾಹನ ಸವಾರರಿಗೆ ತೀವ್ರ ತೊಂದರೆ ಉಂಟುಮಾಡಿದೆ. ರಸ್ತೆ ಗುಂಡಿಗಳನ್ನು ಮುಚ್ಚುವ ಗಡಿಬಿಡಿಯಲ್ಲಿ ಡ್ರೈನ್ ಕವರ್‌ಗಳ ಮೇಲೆಯೇ ಡಾಂಬರ್ ಹಾಕಲಾಗಿದೆ. ಇದರಿಂದ ಡ್ರೈನ್ ಕವರ್‌ಗಳ ಬಳಿ ವಾಹನಗಳು ಕುಸಿಯುತ್ತಿದ್ದು, ಸವಾರರು ಪರದಾಡುತ್ತಿದ್ದಾರೆ. ದ್ವಿಚಕ್ರ ವಾಹನ ಸವಾರರು ಜಿಗಿದು ಬೀಳುವ ಅಪಾಯವನ್ನು ಎದುರಿಸುತ್ತಿದ್ದಾರೆ. ಇದಲ್ಲದೆ, ಅಂಡರ್‌ಪಾಸ್‌ನಲ್ಲಿ ನೀರು ಸರಾಗವಾಗಿ ಹರಿಯಲು ನಿರ್ಮಿಸಲಾಗಿದ್ದ ಗ್ಯಾಲರಿಗಳನ್ನು ಸಂಪೂರ್ಣವಾಗಿ ಟಾರ್ ಹಾಕಿ ಮುಚ್ಚಲಾಗಿದೆ. ಮುಂಬರುವ ಮಳೆಗಾಲದಲ್ಲಿ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಮಳೆ ಹೆಚ್ಚಾಗುವ ಸಾಧ್ಯತೆ ಇದೆ. ಈ ಪರಿಸ್ಥಿತಿಯಲ್ಲಿ ನೀರು ಹರಿಯಲು ಅಡ್ಡಿಯಾಗಿ ಅಂಡರ್‌ಪಾಸ್‌ನಲ್ಲಿ ನೀರು ತುಂಬಿ ದ್ವಿಚಕ್ರ ವಾಹನ ಸವಾರರಿಗೆ ಗಂಭೀರ ಸಮಸ್ಯೆ ಉಂಟಾಗಲಿದೆ. ಇದರಿಂದ ವಾಹನಗಳು ಸ್ಕಿಡ್ ಆಗಿ ಅಪಘಾತಗಳಾಗುವ ಸಾಧ್ಯತೆಯಿದೆ. ಕೂಡಲೇ ಈ ಸಮಸ್ಯೆಯನ್ನು ಬಗೆಹರಿಸಿ, ಮುಚ್ಚಿರುವ ಗ್ಯಾಲರಿಗಳನ್ನು ಸರಿಪಡಿಸಿ, ಡ್ರೈನ್ ಕವರ್‌ಗಳಿಂದ ಟಾರ್ ತೆಗೆಯಬೇಕೆಂದು ವಾಹನ ಸವಾರರು ಆಗ್ರಹಿಸಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Chitradurga Jobs: ಗ್ರಾಮ ಪಂಚಾಯತ್ನಲ್ಲಿ ಬಿಲ್ ಕಲೆಕ್ಟರ್ ಹುದ್ದೆಗೆ ಅರ್ಜಿ ಆಹ್ವಾನ; ಪಿಯುಸಿ ಆಗಿದ್ರೆ ಸಾಕು – Kannada News | Chitradurga Bill Collector Jobs: GP Recruitment, Apply Online by Feb 8

ಚಿತ್ರದುರ್ಗ ಗ್ರಾಮ ಪಂಚಾಯತ್ ಅಧಿಕೃತ ಅಧಿಸೂಚನೆಯ ಮೂಲಕ ಬಿಲ್ ಕಲೆಕ್ಟರ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಚಿತ್ರದುರ್ಗದಲ್ಲಿ ವೃತ್ತಿಯನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಆಸಕ್ತ ಅಭ್ಯರ್ಥಿಗಳು ಫೆಬ್ರವರಿ 08ರ ಅಥವಾ ಮೊದಲು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸತಕ್ಕದ್ದು.

ಶೈಕ್ಷಣಿಕ ಅರ್ಹತೆ:

ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿಯಿಂದ ಪಿಯುಸಿ ಪೂರ್ಣಗೊಳಿಸಬೇಕು.

ವಯಸ್ಸಿನ ಮಿತಿ:

ಫೆಬ್ರವರಿ 08 , 2026 ರಂತೆ ಕನಿಷ್ಠ 18 ವರ್ಷಗಳು ಮತ್ತು ಗರಿಷ್ಠ 35 ವರ್ಷಗಳು ಎಂದು ನಿಗದಿಪಡಿಸಲಾಗಿದೆ. ಇದಲ್ಲದೇ 2A, 2B, 3A, 3B ಅಭ್ಯರ್ಥಿಗಳಿಗೆ 03 ವರ್ಷಗಳು, SC/ST ಅಭ್ಯರ್ಥಿಗಳಿಗೆ 05 ವರ್ಷಗಳ ವಯೋಮಿತಿ ಸಡಿಲಿಕೆ ನೀಡಲಾಗಿದೆ.

ಇದನ್ನೂ ಓದಿ: ಬ್ಯಾಂಕ್ ಆಫ್ ಇಂಡಿಯಾದಲ್ಲಿ ಕ್ರೆಡಿಟ್ ಆಫೀಸರ್ ನೇಮಕಾತಿ; ಕೂಡಲೇ ಅರ್ಜಿ ಸಲ್ಲಿಸಿ

ಅರ್ಜಿ ಸಲ್ಲಿಸುವುದು ಹೇಗೆ?

  • ಮೊದಲನೆಯದಾಗಿ ನೇಮಕಾತಿ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ.(Chitradurga-Gram-Panchayat-Recruitment)
  • ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ.
  • ಆನ್‌ಲೈನ್ ಅರ್ಜಿ ನಮೂನೆಯಲ್ಲಿ ಅಗತ್ಯವಿರುವ ಎಲ್ಲಾ ವಿವರಗಳನ್ನು ನವೀಕರಿಸಿ. ಅಗತ್ಯ ಪ್ರಮಾಣಪತ್ರಗಳು/ದಾಖಲೆಗಳ ಸ್ಕ್ಯಾನ್ ಮಾಡಿದ ಪ್ರತಿಗಳನ್ನು ನಿಮ್ಮ ಇತ್ತೀಚಿನ ಛಾಯಾಚಿತ್ರದೊಂದಿಗೆ (ಅನ್ವಯಿಸಿದರೆ) ಅಪ್‌ಲೋಡ್ ಮಾಡಿ.
  • ಕೊನೆಗೆ ನೇಮಕಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಸಲ್ಲಿಸು ಬಟನ್ ಕ್ಲಿಕ್ ಮಾಡಿ. ಬಹು ಮುಖ್ಯವಾಗಿ ಅರ್ಜಿಯ ಪ್ರಿಂಟ್​ ಕಾಪಿ ತೆಗೆದಿಟ್ಟುಕೊಳ್ಳಿ.

ಮತ್ತಷ್ಟು ಉದ್ಯೋಗಕ್ಕೆ ಸಂಬಂಧಿಸಿದ  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಯಶ್ ಜೊತೆ ಕಾರಿನಲ್ಲಿದ್ದ ಯುವತಿ ಯಾರು? ಖಾತ್ರಿ ಪಡಿಸಿದ ನಿರ್ದೇಶಕಿ – Kannada News | Not Natalie Burn its Beatriz Taufenbach is with Yash in Toxic teaser

ಯಶ್ (Yash) ನಟಿಸಿರುವ ‘ಟಾಕ್ಸಿಕ್’ ಸಿನಿಮಾದ ಟೀಸರ್ ಕೆಲವೇ ದಿನಗಳ ಹಿಂದಷ್ಟೆ ಬಿಡುಗಡೆ ಆಗಿದ್ದು, ಟೀಸರ್ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ, ಸುದ್ದಿ ವಾಹಿನಿಗಳಲ್ಲಿಯೂ ಸಹ ಚರ್ಚೆ ನಡೆಯುತ್ತಿದೆ. ಇದೀಗ ಬಿಡುಗಡೆ ಆಗಿರುವ ‘ಟಾಕ್ಸಿಕ್’ ಸಿನಿಮಾದ ಟೀಸರ್ ಹಾಲಿವುಡ್ ಮಾದರಿಯಲ್ಲಿದೆ. ಮೂರು ನಿಮಿಷವೂ ಇಲ್ಲದ ಈ ಟೀಸರ್ ಅನ್ನು ವಿಶ್ವದಾದ್ಯಂತ 30 ಕೋಟಿಗೂ ಹೆಚ್ಚು ಮಂದಿ ಈಗಾಗಲೇ ವೀಕ್ಷಿಸಿದ್ದಾರೆ. ಟೀಸರ್​​ನಲ್ಲಿರುವ ಹಾಟ್ ದೃಶ್ಯದ ಬಗ್ಗೆ ಪರ ವಿರೋಧ ಚರ್ಚೆಗಳು ನಡೆಯುತ್ತಲೇ ಇದೆ.

ಇದು ಹೀಗಿರುವಾಗ, ಟೀಸರ್​​ನಲ್ಲಿ ಯಶ್​​ ಜೊತೆ ಕಾರಿನಲ್ಲಿರುವ ಯುವತಿ ಯಾರೆಂಬುದನ್ನು ಪತ್ತೆ ಹಚ್ಚುವ ಕಾರ್ಯವನ್ನು ನೆಟ್ಟಿಗರು ಮಾಡಿದ್ದಾರೆ. ಬಹುತೇಕರು, ‘ಟಾಕ್ಸಿಕ್’ ಟೀಸರ್​​ನಲ್ಲಿ ಯಶ್ ಜೊತೆಗಿರುವ ಯುವತಿ ನಟಿ ನಟೇಲಾ ಬರ್ನ್ ಎನ್ನಲಾಗಿತ್ತು. ಹಲವು ಹಾಲಿವುಡ್ ಸಿನಿಮಾಗಳಲ್ಲಿ ನಟಿಸಿರುವ ನಟೇಲಿ ಬರ್ನ್, ‘ಟಾಕ್ಸಿಕ್’ ಸಿನಿಮಾದ ಟೀಸರ್ ಹಂಚಿಕೊಂಡಿದ್ದರು. ಅಲ್ಲದೆ, ಅವರ ವಿಕಿಪೀಡಿಯಾ ಪೇಜ್​​ನಲ್ಲಿಯೂ ನಟೇಲಿ ಬರ್ನ್, ‘ಟಾಕ್ಸಿಕ್’ ಸಿನಿಮಾನಲ್ಲಿ ನಟಿಸುತ್ತಿರುವುದಾಗಿ ಮಾಹಿತಿ ಇತ್ತು. ಇದೇ ಕಾರಣಕ್ಕೆ ಎಲ್ಲರೂ ‘ಟಾಕ್ಸಿಕ್’ ಸಿನಿಮಾದ ಟೀಸರ್​​ನಲ್ಲಿ ಯಶ್ ಜೊತೆಗೆ ಹಾಟ್ ದೃಶ್ಯದಲ್ಲಿ ಕಾಣಿಸಿಕೊಂಡಿರುವ ವಿದೇಶಿ ನಟಿ ನಟೇಲಿ ಬರ್ನ್ ಎಂದುಕೊಂಡಿದ್ದರು.

ಆದರೆ ಇದನ್ನು ಗಮನಿಸಿದ ‘ಟಾಕ್ಸಿಕ್’ ಸಿನಿಮಾದ ನಿರ್ದೇಶಕಿ ಗೀತು ಮೋಹನ್​​ದಾಸ್, ‘ಟಾಕ್ಸಿಕ್’ ಸಿನಿಮಾ ಟೀಸರ್​​ನಲ್ಲಿ ಇದ್ದ ನಟಿಯನ್ನು ಸಾಮಾಜಿಕ ಜಾಲತಾಣದ ಮೂಲಕ ಪರಿಚಯಿಸಿದ್ದಾರೆ. ಟೀಸರ್​​ನಲ್ಲಿರುವುದು ನಟೇಲಿ ಬರ್ನ್ ಅಲ್ಲ ಬದಲಿಗೆ ನಟಿ ಬಿಯಾತ್ರೀಜ್ ಟಾಫೆಬಾಕ್. ನಟಿಯ ಚಿತ್ರ ಹಂಚಿಕೊಂಡಿರುವ ಗೀತು ಮೋಹನ್​​ದಾಸ್, ‘ಈಕೆಯೇ ನನ್ನ ಸಿಮೆಟ್ರಿ (ಸ್ಮಶಾನ)ದ ಹುಡುಗಿ’ ಎಂದಿದ್ದಾರೆ. ಅವರ ಇನ್​​ಸ್ಟಾಗ್ರಾಂ ಖಾತೆಯನ್ನು ಸಹ ಗೀತು ಮೋಹನ್​​ದಾಸ್ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ:ಯಶ್ ಮುಂದಿನ ಸಿನಿಮಾ ನಿರ್ದೇಶಕರಿಗೆ ಸಲಹೆ ಕೊಟ್ಟ ‘ಟಾಕ್ಸಿಕ್’ ನಿರ್ದೇಶಕಿ

ನಟಿ ಬಿಯಾತ್ರೀಜ್ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಿಲ್ಲ. ನಟಿಯ ಇನ್​​ಸ್ಟಾಗ್ರಾಂ ಖಾತೆ ಸಹ ಲಾಕ್ ಆಗಿದೆ. ಆದರೆ ‘ಟೀಸರ್’ ಬಿಡುಗಡೆ ಆಗುವ ಮುಂಚೆ ಬಿಯಾತ್ರೀಜ್ ಅವರ ಇನ್​​ಸ್ಟಾಗ್ರಾಂನಲ್ಲಿ ಕೇವಲ 1800 ಮಂದಿ ಫಾಲೋವರ್​​ಗಳು ಇದ್ದರು. ಆದರೆ ಟೀಸರ್ ಬಿಡುಗಡೆ ಆದ ಬಳಿಕ ಇದು ಲಕ್ಷಗಳಲ್ಲಿ ಹೆಚ್ಚಾಗಿರುವುದಂತೂ ಖಾತ್ರಿ. ಆದರೆ ಅವರ ಇನ್​​ಸ್ಟಾಗ್ರಾಂ ಪ್ರೈವೇಟ್ ಆಗಿರುವ ಕಾರಣ ಆಯ್ದ ಕೆಲವರಿಗಷ್ಟೆ ಅವರ ಫೋಟೊಗಳು, ಫಾಲೋವರ್​​ಗಳ ಸಂಖ್ಯೆ ತಿಳಿಯಲಿದೆ.

‘ಟಾಕ್ಸಿಕ್’ ಸಿನಿಮಾನಲ್ಲಿ ಯಶ್ ನಾಯಕರಾದರೂ ನಾಯಕಿಯ ಪಾತ್ರಗಳಿಗೆ ಹೆಚ್ಚಿನ ಪ್ರಾಧಾನ್ಯತೆ ಇದ್ದಂತಿದೆ. ಸಿನಿಮಾನಲ್ಲಿ ನಯನತಾರಾ, ಕಿಯಾರಾ ಅಡ್ವಾಣಿ, ಹುಮಾ ಖುರೇಷಿ, ತಾರಾ ಸುತಾರಿಯಾ ಮತ್ತು ರುಕ್ಮಿಣಿ ವಸಂತ್ ಅವರುಗಳು ನಾಯಕಿಯರಾಗಿ ನಟಿಸಿದ್ದಾರೆ. ಸಿನಿಮಾ ಮಾರ್ಚ್ 19ರಂದು ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ವಿಧಾನಸಭೆ ಚುನಾವಣೆಯ ಟಿಕೆಟ್ ಆಕಾಂಕ್ಷಿಯಾಗಿದ್ದ ಬಿಜೆಪಿ ಮುಖಂಡ ಆತ್ಮಹತ್ಯೆಗೆ ಶರಣು – Kannada News | Davanagere BJP Leader Chandrasekhar Sunkol Commits Suicide

ಚಂದ್ರಶೇಖರ್ ಸಂಕೋಳ್ ಶಾಮನೂರು ಗ್ರಾಮದಲ್ಲಿ ಸಿಮೆಂಟ್, ಕಬ್ಬಿಣದ ಅಂಗಡಿಯನ್ನು ನಡೆಸುತ್ತ ಇಡೀ ಜಿಲ್ಲೆಗೆ ಹೆಸರುವಾಸಿಯಾಗಿದ್ದರು. ಅಲ್ಲದೇ ಬಿಜೆಪಿಯ ಪ್ರಮುಖ ಮುಂಖಂಡನಾಗಿ ಪಕ್ಷ ಸಂಘಟನೆಯಲ್ಲಿ ಕೂಡ ಹೆಚ್ಚು ತೊಡಗಿಸಿಕೊಂಡಿದ್ದರು. ಅಲ್ಲದೆ ಅಡಿಕೆ ತೋಟ, ಕಾಂಪ್ಲೆಕ್ಸ್ ಗಳನ್ನು ಕೂಡ ಹೊಂದಿದ್ದ ಚಂದ್ರಶೇಖರ್, ಸಾಲ ಮಾಡಿಕೊಂಡಿದ್ದರು ಎನ್ನಲಾಗಿದೆ.

Source link

ಬೇಡ್ತಿ-ವರದಾ ನದಿ ಜೋಡಣೆಗೆ ಸಿಡಿದೆದ್ದ ಮಠಾಧೀಶರು, ಜನಪ್ರತಿನಿಧಿಗಳು: ತಮ್ಮ ನಿಲುವು ಸ್ಪಷ್ಟಪಡಿಸಿದ ರಾಜಕಾರಣಿಗಳು – Kannada News | Uttara Kannada: Bedthi Varada River Linking Protest; Sirsi Rallies Against Project

ನದಿ ಜೋಡಣೆ ವಿರೋಧಿಸಿ ಬೃಹತ್ ಸಮಾವೇಶ

ಕಾರವಾರ, ಜನವರಿ 11: ಬೇಡ್ತಿ-ವರದಾ ಮತ್ತು ಅಘನಾಶಿನಿ-ವೇದಾವತಿ ನದಿ ಜೋಡಣೆ ಯೋಜನೆಯಿಂದ (River Diversion Project) ಅನಕೂಲಕ್ಕಿಂತ ಅನಾನುಕೂಲ ಹೆಚ್ಚು. ಹಾಗಾಗಿ ಇಂತಹ ಯೋಜನೆ ಆದಷ್ಟು ಬೇಗ ಕೈಬಿಡಬೇಕು. ಈ ಯೋಜನೆ ಜಿಲ್ಲೆಗೆ ಮಾರಕ ಆಗುತ್ತೆ ಎಂಬುವುದು ಖಚಿತವಾಗಿದೆ ಎಂದು ಜಿಲ್ಲಾ ಉಸ್ತುವರಿ ಸಚಿವ ಮಂಕಾಳು ವೈದ್ಯ (Mankal Vaidya) ಹೇಳಿದ್ದಾರೆ.

ನದಿ ಜೋಡಣೆ ವಿರೋಧಿಸಿ ಶಿರಸಿಯಲ್ಲಿ ಬೃಹತ್ ಸಮಾವೇಶ

ಬೇಡ್ತಿ-ವರದಾ ಮತ್ತು ಅಘನಾಶಿನಿ-ವೇದಾವತಿ ನದಿ ಜೋಡಣೆ ವಿರೋಧಿಸಿ ಉತ್ತರ ಕನ್ನಡ ಜಿಲ್ಲೆಯ ಶಿರಸಿ ಪಟ್ಟಣದಲ್ಲಿ ಸ್ವರ್ಣವಲ್ಲಿ ಗಂಗಾಧರೇಂದ್ರ ಸರಸ್ವತಿ ಶ್ರೀಗಳ ನೇತೃತ್ವದಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಸಚಿವ ಮಂಕಾಳು ವೈದ್ಯ, ಈ ಯೋಜನೆಯ ವಿರುದ್ದವಾಗಿ ನಾವೆಲ್ಲಾ ಒಗ್ಗಟ್ಟಾಗಿದ್ದೇವೆ. ನಮ್ಮನ್ಮ ಜನ ಪ್ರತಿನಿಧಿಯಾಗಿ ನೀವು ಆಯ್ಕೆ ಮಾಡಿದ್ದೀರಿ. ನಿಮಗೆ ಮಾರಕಾವಾಗುವ ಯೋಜನೆಗಳಿಗೆ ನಾವು ಬೆಂಬಲಿಸುವುದಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ: ನದಿ ತಿರುವು ಯೋಜನೆಗಳಿಗೆ ವಿರೋಧ: ಜ. 11ರಂದು ಶಿರಸಿಯಲ್ಲಿ ಬೃಹತ್ ಸಮಾವೇಶ

ಈ ಹಿಂದೆ ಬಿಎಸ್​ ಯಡಿಯೂರಪ್ಪ ಸಿಎಂ ಆಗಿದ್ದಾಗ ಬೇಡ್ತಿ-ವರದಾ ನದಿ ಜೋಡಣೆ ಯೋಜನೆಗೆ ರಾಜ್ಯ ಸರ್ಕಾರ ಒಪ್ಪಿಗೆ ನೀಡಿತ್ತು. ಅಂದು ವಿಶ್ವೇಶ್ವರ ಹೆಗಡೆ ಕಾಗೇರಿ ಸಾಹೇಬ್ರು ಸ್ಪೀಕರ್ ಆಗಿದ್ದರು. ಆಗ ರಾಜ್ಯ ಸರ್ಕಾರ ಈ ಯೋಜನೆಗೆ ಒಪ್ಪಿಗೆ ಕೊಡದೆ ಇದ್ದಿದ್ದರೆ ಇಂದು ಸ್ವಾಮಿಜಿಯವರು ಹಾಗೂ ನಾವು, ನೀವು ಈ ಬಿಸಿಲಲ್ಲಿ ಬರುವ ಅವಶ್ಯಕತೆ ಇರಲಿಲ್ಲ ಎಂದಿದ್ದಾರೆ.

ರಾಜಕೀಯ ಏನೇ ಇರಲಿ, ಇಂದು ಜಿಲ್ಲೆಗಾಗಿ ಇಲ್ಲಿ ಸೇರಿದ್ದೇವೆ. ಈ ವೇದಿಕೆಯಲ್ಲಿ ಸ್ವಾಮಿಜಿಯವರ ನೆತೃತ್ವದಲ್ಲಿ ಆಗುವ ನಿರ್ಣಯಕ್ಕೆ ಬದ್ಧರಾಗಿರಬೇಕು. ಇಲ್ಲೊಂದು ಹೇಳುವುದು ಹೊರಗೆ ಹೋಗಿ ಇನ್ನೊಂದು ಹೇಳುವುದು ಸರಿ ಅಲ್ಲ. ಜಿಲ್ಲೆಗಾಗಿ ನಾವು ಇಲ್ಲಿ ತೆಗೆದುಕೊಳ್ಳುವ ನಿರ್ಣಯಕ್ಕೆ ಬದ್ಧರಾಗಿರಬೇಕು. ಈ ಯೋಜನೆ ಇಡಿ ಜಿಲ್ಲೆಗೆ ಹಾನಿ ಆಗುವ ಯೋಜನೆ ಆಗಿದೆ ಎಂದು ಸಚಿವ ಮಂಕಾಳು ವೈದ್ಯ ಹೇಳಿದ್ದಾರೆ.

ಈಗಲೂ ನಮ್ಮ ಮಾತಿಗೆ ಬದ್ಧ: ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ

ಸಮಾವೇಶದಲ್ಲಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿಕೆ ನೀಡಿದ್ದು, ನಾನು ಈ ಹಿಂದೆ ಕೊಟ್ಟ ಮಾತಿಗೆ ಈಗಲೂ ಕೂಡ ಬದ್ಧನಿದ್ದೇನೆ. ಈ ವೇದಿಕೆಯಲ್ಲಿ ನನ್ನ ಬಗ್ಗೆ ಕೆಲವು ಮಾತುಗಳು ಬಂದಿವೆ, ಆದರೆ ಈ ಯೋಜನೆ ವಿರುದ್ಧವಾಗಿ ನಾನು ಯಾವಾಗಲೂ ಇದ್ದೇನೆ. ಕೆಲವರ ಮಾತಿಗೆ ಉತ್ತರ ಕೊಡಲು ಬರಲ್ಲ ಅಂತ ಅಲ್ಲ, ಸೂಕ್ತ ಉತ್ತರ ಕೊಡುವುದು ನನಗೂ ಗೊತ್ತಿದೆ. ಆದರೆ ಈ ಸುಂದರ ವೇದಿಕೆಯಲ್ಲಿ ಉತ್ತರ ಕೊಡುವುದು ಸರಿ ಅಲ್ಲ ಎಂದಿದ್ದಾರೆ.

ಶಿರೂರು ಗುಡ್ಡ ಕುಸಿತ ಸೇರಿದಂತೆ ಹತ್ತಾರು ಕಷ್ಟ ನೋಡಿದ್ದೇವೆ. ನಾವು ಅನೇಕ ತೊಂದರೆ ತೊಡಕುಗಳನ್ನ ಅನುಭವಿಸಿ ಹೇಳುತ್ತಿದ್ದೇವೆ. ಈ ಜಿಲ್ಲೆಯ ಧಾರಣಾ ಸಾಮರ್ಥ್ಯದ ಬಗ್ಗೆ ಅಧ್ಯಯನ‌ ಆಗಬೇಕು. ಧಾರಣಾ ಸಾಮರ್ಥ್ಯ ಬಗ್ಗೆ ಈ ಹಿಂದೆಯೇ ರಾಜ್ಯ ಸರ್ಕಾರಕ್ಕೆ ಹೇಳಿದ್ದೆ. ನಾನು ಹೇಳಿಲ್ಲ ಅಂತಾ ಯಾರಾದ್ರೂ ಹೇಳಿದ್ರೆ ಪ್ರೂವ್ ಮಾಡೋಕೆ ಸಿದ್ಧ ಎಂದರು.

ಹೋರಾಟ ಅವಶ್ಯಕ ಎಂದ ಶಾಸಕ ಶಿವರಾಂ ಹೆಬ್ಬಾರ್

ಯಲ್ಲಾಪುರ ಶಾಸಕ ಶಿವರಾಂ ಹೆಬ್ಬಾರ್ ಮಾತನಾಡಿದ್ದು, ಈ ವೇದಿಕೆಯಲ್ಲಿ ನಾನು ಯಾವುದೇ ರಾಜಕೀಯ ಮಾತು ಹೇಳಲ್ಲ. ಇಂದು ನಮ್ಮ ಜಿಲ್ಲೆಗಾಗಿ ನಾವೆಲ್ಲಾ ಒಂದಾಗುವ ಅವಶ್ಯಕತೆ ಇದೆ. ನಮ್ಮ ಒಗ್ಗಟ್ಟಿನಲ್ಲಿ ಯಾವುದೇ ಭಿನ್ನಾಭಿಪ್ರಾಯ ಬರಬಾರದು. ಈ ಯೋಜನೆ ಕೈ ಬಿಡುವಂತೆ ಒತ್ತಾಯಿಸಿ ಹೋರಾಟ ಅವಶ್ಯಕ. ಸ್ವಾಮಿಜಿಗಳ ನಿರ್ಧಾರಕ್ಕೆ ನಾವೆಲ್ಲಾ ಬದ್ಧರಾಗಿರೋಣ ಎಂದಿದ್ದಾರೆ.

ಯೋಜನೆ ಜಾರಿಯಾದರೆ ನಮ್ಮ ಪರಿಸ್ಥಿತಿ ಏನು? ಶಾಸಕ ಭಿಮಣ್ಣಾ ನಾಯ್ಕ್ ಪ್ರಶ್ನೆ

ಶಿರಸಿ ಶಾಸಕ ಭಿಮಣ್ಣಾ ನಾಯ್ಕ್ ಮಾತನಾಡಿದ್ದು, ಇಡಿ ರಾಜ್ಯಕ್ಕೆ ಜಲ ಶಕ್ತಿ, ವಿದ್ಯುತ್ ಶಕ್ತಿ ನೀಡುವ ಜಿಲ್ಲೆ ನಮ್ಮದು. ನಮ್ಮ ಜಿಲ್ಲೆಯ ಸುಂದರ ಪರಿಸರ ತ್ಯಾಗ ಮಾಡಿದ್ದೇವೆ. ನೌಕಾನೆಲೆ ಹಾಗೂ ಕೈಗಾ ಯೋಜನೆಗೆ ಅನೇಕ ಹಳ್ಳಿಗಳ ಜನ ಮನೆ ಜಮೀನು ಕಳೆದುಕೊಂಡಿದ್ದಾರೆ. ನಿರಂತರವಾಗಿ ಯೋಜನೆ ಹೆಸರಿನಲ್ಲಿ ನಮ್ಮ ಮೇಲೆ ಅನ್ಯಾಯ ಆಗುತ್ತಿದೆ. ತಜ್ಞರು ಮತ್ತು ಪರಿಸರವಾದಿಗಳು ನೀಡಿರುವ ಸಲಹೆ ಮೇರೆಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರ ಯೋಜನೆ ರೂಪಿಸಿದೆ. ಆದರೆ ಈ ಯೋಜನೆ ಜಾರಿಗೆ ಬಂದರೆ ನಮ್ಮ ಪರಿಸ್ಥಿತಿ ಏನು ಎಂದು ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ: ಉತ್ತರ ಕನ್ನಡದ ನದಿ ತಿರುವು ಯೋಜನೆಗಳಿಗೆ ವಿರೋಧ ಯಾಕೆ?: ಪ್ರಮುಖ 11 ಕಾರಣ ಇಲ್ಲಿವೆ

ಕೇಂದ್ರ ಇರಬಹುದು, ರಾಜ್ಯ ಇರಬಹುದು ಸ್ಥಳಿಯರ ಕೂಗು ಕೇಳಬೇಕು. ಸ್ಥಳಿಯರ ಅನುಭವಿಸುತ್ತಿರುವ ಸಮಸ್ಯೆಗಳನ್ನ ಕೇಳಬೇಕು. ಪ್ರಕೃತಿ ವಿಕೋಪದಿಂದ ಜಿಲ್ಲೆಯ ಅನ್ನದಾತ ಸಂಕಷ್ಟದಲ್ಲಿದ್ದಾನೆ. ಸಾಲ ಮನ್ನಾ ಮಾಡುವಂತೆ ನಾವು ಮನವಿ ಕೊಡುತ್ತಿದ್ದೇವೆ. ಇಂತಹ ಪರಿಸ್ಥಿತಿಯಲ್ಲಿ ನಾವು ಈ ಯೋಜನೆ ಬೇಕಾ? ಯಾವುದೇ ಕಾರಣಕ್ಕೂ ಈ ಯೋಜನೆ ಜಾರಿಗೆ ತರಬಾರದು. ಸ್ವಾಮೀಜಿಯವರ ನೆತೃತ್ವದಲ್ಲಿ ನಾವು ಒಗ್ಗಟ್ಟಾಗಿ ಈ ಯೋಜನೆ ಖಂಡಿಸೋಣ, ಜಿಲ್ಲೆಯ ಜನಪ್ರತಿನಿಧಿಗಳು ಸ್ವಾಮೀಜಿಯವರ ಜೊತೆಗೆ ಇದ್ದೇವೆ ಎಂದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಭಾರತ ಅತಿವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ: ಗುಜರಾತ್ ಸಮಿಟ್​ನಲ್ಲಿ ಪ್ರಧಾನಿ ಮೋದಿ ಹೇಳಿಕೆ – Kannada News | India is the fastest growing economy, says PM Narendra Modi at Vibrant Gujarat

ರಾಜಕೋಟ್, ಜನವರಿ 11: ದೊಡ್ಡ ದೊಡ್ಡ ಸುಧಾರಣೆಗಳನ್ನು ತರುವ ಮೂಲಕ ವಿಕಸಿತ ಭಾರತದ ಗುರಿಯತ್ತ ದೇಶ ಸಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ವೈಬ್ರೆಂಟ್ ಗುಜರಾತ್ (Vibrant Gujarat) ಸಮಾವೇಶದ ಭಾಗವಾಗಿ ರಾಜಕೋಟ್​ನಲ್ಲಿ ಟ್ರೇಡ್ ಶೋ ಉದ್ಘಾಟಿಸಿ ಮಾತನಾಡುತ್ತಿದ್ದ ನರೇಂದ್ರ ಮೋದಿ (Narendra Modi), ಭಾರತ ಬಹಳ ವೇಗವಾಗಿ ಮುಂದುವರಿದ ದೇಶವಾಗಿ ಬೆಳೆಯುತ್ತಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

‘ಕಳೆದ 11 ವರ್ಷದಲ್ಲಿ ಭಾರತವು ವಿಶ್ವದ ಅತಿದೊಡ್ಡ ಮೊಬೈಲ್ ಡಾಟಾ ಬಳಕೆದಾರ ದೇಶವಾಗಿತ್ತು. ಈಗ ಎರಡನೇ ಅತಿದೊಡ್ಡ ಮೊಬೈಲ್ ತಯಾರಕ ದೇಶವೆನಿಸಿದೆ’ ಎಂದು ನರೇಂದ್ರ ಮೋದಿ ಹೇಳಿದ್ದಾರೆ.

ಇದನ್ನೂ ಓದಿ: ಶೇ 4.4ರ ವಿತ್ತೀಯ ಕೊರತೆ ಗುರಿ ಮುಟ್ಟುವುದು ಸರ್ಕಾರಕ್ಕೆ ಸಲೀಸು: ಏಜೆನ್ಸಿ ವರದಿ

‘ಭಾರತ ವಿಶ್ವದ ಮೂರನೇ ಅತಿದೊಡ್ಡ ಸ್ಟಾರ್ಟಪ್ ಇಕೋಸಿಸ್ಟಂ ಹೊಂದಿದೆ. ಮೂರನೇ ಅತಿದೊಡ್ಡ ವೈಮಾನಿಕ ಮಾರುಕಟ್ಟೆ ಹೊಂದಿದೆ. ವಿಶ್ವದ ಮೂರು ಅತಿದೊಡ್ಡ ಮೆಟ್​ರೋ ರೈಲು ನೆಟ್ವರ್ಕ್​ಗಳಲ್ಲಿ ಒಂದೆನಿಸಿದೆ’ ಎಂದು ಪ್ರಧಾನಿಗಳು ಅಭಿಪ್ರಾಯಪಟ್ಟಿದ್ದಾರೆ.

ಗುಜರಾತ್​ನ ಮಾಜಿ ಮುಖ್ಯಮಂತ್ರಿಯೂ ಆದ ನರೇಂದ್ರ ಮೋದಿ ಅವರು ಭಾರತದ ಬೆಳವಣಿಗೆಯಲ್ಲಿ ಗುಜರಾತ್ ಕೊಡುಗೆ ಹೆಚ್ಚುತ್ತಿರುವುದನ್ನು ಗುರುತಿಸಿದ್ದಾರೆ.

‘ಭಾರತ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗುವತ್ತ ಧಾವಿಸುತ್ತಿದೆ. ಈ ಪ್ರಯಾಣದಲ್ಲಿ ಗುಜರಾತ್ ಪ್ರಮುಖ ಪಾತ್ರ ವಹಿಸಿದೆ. ದೇಶ ವಿದೇಶಗಳ ಹೂಡಿಕೆದಾರರಿಗೆ ಪ್ರಮುಖ ಬೆಳವಣಿಗೆ ಎಂಜಿನ್ ಆಗಿ ಗುಜರಾತ್ ಹೊಮ್ಮಿದೆ. ಎಂಎಸ್​ಎಂಇಗಳಿಂದ ಹಿಡಿದು ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಗಳವರೆಗೆ ಎಲ್ಲರೂ ಗುಜರಾತ್ ಜೊತೆ ಬೆಳೆಯುತ್ತಿದ್ದಾರೆ’ ಎಂದು ಪಿಎಂ ಮೋದಿ ತಿಳಿಸಿದ್ದಾರೆ.

ಇದನ್ನೂ ಓದಿ: ಅಮೆರಿಕದೊಂದಿಗೆ ಟ್ರೇಡ್ ಡೀಲ್, ಮುಗಿಯದ ತೊಡಕು; ದಕ್ಷಿಣ ಅಮೆರಿಕ ಸೇರಿದಂತೆ ಬೇರೆ ಬೇರೆ ಮಾರುಕಟ್ಟೆಗಳ ಮೇಲೆ ಭಾರತದ ಕಣ್ಣು

ಈ ಸಂದರ್ಭದಲ್ಲಿ ಮುಕೇಶ್ ಅಂಬಾನಿ ಮೊದಲಾದ ವಿವಿಧ ಉದ್ಯಮಿಗಳು ಉಪಸ್ಥಿತರಿದ್ದರು. ಪ್ರಧಾನಿ ಮೋದಿ ಅವರ ದೂರದೃಷ್ಟಿಯು ಮುಂದಿನ 50 ವರ್ಷಗಳಿಗೆ ಭಾರತಕ್ಕೆ ದಾರಿ ಹಾಕಿದೆ. ದೇಶದ ಸ್ವಾಭಿಮಾನ ಮರಳಿ ಪಡೆಯುವಂತೆ ಮಾಡಿದೆ. ಭಾರತದ ಇತಿಹಾಸದಲ್ಲಿ ಯಾವತ್ತೂ ಇಷ್ಟು ಆತ್ಮವಿಶ್ವಾಸ, ಭರವಸೆ ಇದ್ದಿದ್ದನ್ನು ನಾವು ಕಂಡಿಲ್ಲ’ ಎಂದು ರಿಲಾಯನ್ಸ್ ಇಂಡಸ್ಟ್ರೀಸ್​ನ ಛೇರ್ಮನ್ ಆದ ಅಂಬಾನಿ ಹೇಳಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Exit mobile version