ಹಾಸನ, ಮಾರ್ಚ್ 30: ಸಿಲಿಂಡರ್ ಬದಲಿಸುವ ವೇಳೆ ಅನಿಲ ಸೋರಿಕೆಯಾಗಿ ಸ್ಫೋಟಗೊಂಡಿದ್ದು, ನಾಲ್ವರಿಗೆ ಗಾಯವಾಗಿರುವಂತಹ ಘಟನೆ ಜಿಲ್ಲೆಯ ಅರಕಲಗೂಡು ತಾಲೂಕಿನ ಕೆ.ಅಬ್ಬೂರು ಗ್ರಾಮದಲ್ಲಿ ನಡೆದಿದೆ. ಸಿಲಿಂಡರ್ನಲ್ಲಿದ್ದ ಗ್ಯಾಸ್ ಖಾಲಿಯಾದ ಹಿನ್ನೆಲೆಯಲ್ಲಿ ಬದಲಾವಣೆ ಮುಂದಾಗಿದ್ದಾರೆ. ಗ್ಯಾಸ್ ತುಂಬಿದ್ದ ಸಿಲಿಂಡರ್ಗೆ ರೆಗ್ಯುಲೇಟರ್ ಅಳವಡಿಸುವಾಗ ಅಡುಗೆ ಅನಿಲ ಸೋರಿಕೆಯಾಗಿ ಏಕಾಏಕಿ ಸ್ಫೋಟವಾಗಿದೆ. ಮಹಿಳೆ, ಪುತ್ರ ಸೇರಿದಂತೆ ಮನೆಯಲ್ಲಿದ್ದ ನಾಲ್ವರಿಗೆ ಗಂಭೀರ ಗಾಯಗಳಾಗಿದ್ದು, ಕೊಣನೂರು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗಿದೆ. ಸುಂದರೇಶ್ ಮನೆಯಲ್ಲಿ ಘಟನೆ ನಡೆದಿದ್ದು, ಲಕ್ಷಾಂತರ ಮೌಲ್ಯದ ವಸ್ತುಗಳು ಹಾನಿಯಾಗಿದೆ. ಕೊಣನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಇತ್ತೀಚಿನ ದಿನಗಳಲ್ಲಿ ಹೈ ಬಿಪಿ (High Blood Pressure) ಸಮಸ್ಯೆ ಹೆಚ್ಚಾಗಿ ಕಂಡುಬರುತ್ತಿರುವುದನ್ನು ನೀವು ಕಾಣಬಹುದಾಗಿದೆ. ಇದಕ್ಕೆ ಜೀವನಶೈಲಿಯಲ್ಲಿ ಆಗಿರುವಂತಹ ಬದಲಾವಣೆ, ಆಹಾರ ಪದ್ಧತಿ ಸರಿಯಾಗಿ ಇಲ್ಲದಿರುವುದು ಜೊತೆಗೆ ಒತ್ತಡ (ಸ್ಟ್ರೆಸ್) ಪ್ರಮುಖ ಕಾರಣಗಳಾಗಿವೆ. ಅದರಲ್ಲಿಯೂ ಈ ಸಮಯದಲ್ಲಿ ಅಂದರೆ ಬೇಸಿಗೆಯಲ್ಲಿ ಬಿಸಿಲು ವಿಪರೀತವಾಗಿರುವುದರಿಂದ ದೇಹದಲ್ಲಿ ನೀರಿನ ಕೊರತೆ ಉಂಟಾಗಬಹುದು, ಇದು ರಕ್ತದ ಒತ್ತಡದ ಮೇಲೆ ಪರಿಣಾಮ ಬೀರಬಹುದು. ಹೆಚ್ಚು ಬೆವರು ಬರುವುದರಿಂದ ದೇಹದಲ್ಲಿನ ಇಲೆಕ್ಟ್ರೋಲೈಟ್‌ಗಳ ಸಮತೋಲನ ಹಾಳಾಗಬಹುದು, ಇದು ಹೃದಯ ಮತ್ತು ಬಿಪಿ ಮೇಲೆ ಪರಿಣಾಮ ಬೀರಬಹುದು. ಇದಲ್ಲದೆ, ದೇಹದ ತಾಪಮಾನವನ್ನು ನಿಯಂತ್ರಿಸಲು ಹೃದಯ ಹೆಚ್ಚು ಕೆಲಸ ಮಾಡಬೇಕಾಗುತ್ತದೆ. ಬೇಸಿಗೆಯಲ್ಲಿ ಕೆಲವರಿಗೆ ಹಸಿವು ಕಡಿಮೆಯಾಗುತ್ತದೆ, ಇದರಿಂದ ಸರಿಯಾದ ಆಹಾರ ಸೇವನೆ ಆಗದೆ, ಅಗತ್ಯ ಪೋಷಕಾಂಶಗಳ ಕೊರತೆ ಉಂಟಾಗುತ್ತದೆ. ಇದರಿಂದ ದುರ್ಬಲತೆ ಮತ್ತು ಬಿಪಿಯಲ್ಲಿ ಏರುಪೇರಿನ ಸಮಸ್ಯೆಗಳು ಹೆಚ್ಚಾಗಬಹುದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಹಾಗಾಗಿ ಬಿಪಿ ಇರುವವರು ಈ ಸಮಯದಲ್ಲಿ ಕಂಡುಬರುವ ಕೆಲವು ಲಕ್ಷಣಗಳನ್ನು ನಿರ್ಲಕ್ಷ್ಯ ಮಾಡಬಾರದು ಜೊತೆಗೆ ಕೆಲವು ಸರಳ ಕ್ರಮಗಳನ್ನು ಅನುಸರಿಸುವ ಮೂಲಕ ಈ ರೀತಿ ಸಮಸ್ಯೆಯನ್ನು ತಡೆಯಬಹುದು.
ಹೈ ಬಿಪಿ ಇರುವವರು ಈ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ:
ತೀವ್ರ ತಲೆನೋವು
ತಲೆ ಸುತ್ತುವುದು
ಕಣ್ಣು ಮಸುಕಾಗುವುದು
ಎದೆ ನೋವು
ಉಸಿರಾಟದ ತೊಂದರೆ
ಹೃದಯ ಬಡಿತದಲ್ಲಿ ಏರಿಳಿತ
ಹೆಚ್ಚು ಬೆವರುವುದು
ದುರ್ಬಲತೆ ಮತ್ತು ದಣಿವು
ಈ ಲಕ್ಷಣಗಳು ಪದೇಪದೇ ಕಾಣಿಸಿಕೊಂಡರೆ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಅಗತ್ಯ.
ಬೇಸಿಗೆಯಲ್ಲಿ ಪಾಲಿಸಬೇಕಾದ ಸರಳ ಕ್ರಮಗಳು:
ಹೈ ಬಿಪಿ ಇರುವವರು ತಮ್ಮ ದಿನಚರಿ ಮತ್ತು ಆಹಾರದ ಬಗ್ಗೆ ವಿಶೇಷ ಗಮನ ಕೊಡಬೇಕು
ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯಬೇಕು
ಹೆಚ್ಚು ಉಪ್ಪು ಮತ್ತು ಎಣ್ಣೆ ಅಂಶವಿರುವ ಆಹಾರ ಸೇವನೆ ಮಾಡುವುದನ್ನು ಬಿಡಬೇಕು
ಸಮತೋಲಿತ ಆಹಾರವನ್ನು ಸೇವನೆ ಮಾಡಬೇಕು
ತೀವ್ರ ಬಿಸಿಲಿರುವಾಗ ಹೊರಗೆ ಹೋಗುವುದನ್ನು ತಪ್ಪಿಸಬೇಕು
ಹೊರಗೆ ಹೋಗಲೇಬೇಕಾದಾಗ ತಲೆ ಮತ್ತು ದೇಹವನ್ನು ಮುಚ್ಚಿಕೊಳ್ಳಬೇಕು
ನಟಿ ಅನುಷ್ಕಾ ಶೆಟ್ಟಿ (Anushka Shetty) ಅವರು ಸಿನಿಮಾಗಳ ಆಯ್ಕೆಯಲ್ಲಿ ಈಗ ಬಹಳ ಚ್ಯೂಸಿ ಆಗಿದ್ದಾರೆ. ಅದರ ನಡುವೆ ಅವರ ಮದುವೆ ಬಗ್ಗೆ ಆಗಾಗ ಗಾಸಿಪ್ ಕೇಳಿಬರುತ್ತಲೇ ಇರುತ್ತದೆ. ಅವರು ಹಸೆಮಣೆ ಏರಲು ಸಜ್ಜಾಗಿದ್ದಾರೆ ಎಂದು ಇತ್ತೀಚೆಗೆ ವದಂತಿ ಹಬ್ಬಿತ್ತು. ಅದಕ್ಕೆ ಅನುಷ್ಕಾ ಶೆಟ್ಟಿ ಕಡೆಯಿಂದ ಸ್ಪಷ್ಟನೆ ಸಿಗಬಹುದು ಎಂದು ಫ್ಯಾನ್ಸ್ ಕಾದಿದ್ದಾರೆ. ಆದರೆ ಮದುವೆ ಬಿಟ್ಟು ಬೇರೊಂದು ಗುಡ್ ನ್ಯೂಸ್ ಸಿಕ್ಕಿದೆ. ಇದು ಅವರ ‘ಕಥನಾರ್’ (Kathanar) ಸಿನಿಮಾಗೆ ಸಂಬಂಧಿಸಿದ ಸಿಹಿ ಸುದ್ದಿ.
ಅನುಷ್ಕಾ ಶೆಟ್ಟಿ ಈಗ ಮತ್ತೊಂದು ಬಿಗ್ ಪ್ರಾಜೆಕ್ಟ್ ಮೂಲಕ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ. ‘ಘಾಟಿ’ ಚಿತ್ರದ ನಂತರ ಅನುಷ್ಕಾ ನಟಿಸುತ್ತಿರುವ ಬಹುನಿರೀಕ್ಷಿತ ಸಿನಿಮಾ ‘ಕಥನಾರ್’ ಈಗ ಟ್ರೇಲರ್ ಬಿಡುಗಡೆಗೆ ಸಜ್ಜಾಗಿದೆ. ವಿಶೇಷವೆಂದರೆ, ಈ ಚಿತ್ರದ ಮೂಲಕ ಅನುಷ್ಕಾ ಅವರು ಮೊದಲ ಬಾರಿಗೆ ಮಲಯಾಳಂ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ.
‘ಕಥನಾರ್’ ಚಿತ್ರತಂಡವು ಟ್ರೇಲರ್ ಬಿಡುಗಡೆಗೆ ಆರಿಸಿಕೊಂಡಿರುವ ಸಮಯ ಈಗ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ. ಸಾಮಾನ್ಯವಾಗಿ ಬೆಳಗ್ಗೆ ಅಥವಾ ಸಂಜೆ ಟ್ರೇಲರ್ ಬಿಡುಗಡೆ ಮಾಡುವುದು ವಾಡಿಕೆ. ಆದರೆ, ‘ಕಥನಾರ್’ ಟ್ರೇಲರ್ ಮಾರ್ಚ್ 31ರ ಮಧ್ಯಾಹ್ನ ಸರಿಯಾಗಿ 1.31ಕ್ಕೆ ಅನಾವರಣಗೊಳ್ಳಲಿದೆ. ಈ ಸಮಯವನ್ನೇ ಆಯ್ಕೆ ಮಾಡಿಕೊಂಡಿದ್ದರ ಹಿಂದೆ ಯಾವುದಾದರೂ ವಿಶೇಷ ಕಾರಣ ಇದೆಯೇ ಎಂದು ಸಿನಿಪ್ರಿಯರು ಚರ್ಚಿಸುತ್ತಿದ್ದಾರೆ.
ರೋಜಿನ್ ಥಾಮಸ್ ನಿರ್ದೇಶನದ ಈ ಡಾರ್ಕ್ ಫ್ಯಾಂಟಸಿ ಡ್ರಾಮಾ ಕಥೆಯುಳ್ಳ ಈ ಸಿನಿಮಾದಲ್ಲಿ ಅನುಷ್ಕಾ ಶೆಟ್ಟಿ ಅವರು ನೀಲಿ ಎಂಬ ನಿಗೂಢ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರದ ಶೂಟಿಂಗ್ ಬಹಳ ಹಿಂದೆಯೇ ಮುಗಿದಿದ್ದರೂ, ಪೋಸ್ಟ್ ಪ್ರೊಡಕ್ಷನ್ ಕೆಲಸಗಳಿಗೆ ಹೆಚ್ಚು ಸಮಯ ಹಿಡಿಯುತ್ತಿದೆ. ಈ ಟ್ರೇಲರ್ ಜೊತೆಗೆ ಸಿನಿಮಾ ಬಿಡುಗಡೆಯ ದಿನಾಂಕವೂ ಘೋಷಣೆಯಾಗುವ ಸಾಧ್ಯತೆಯಿದೆ.
ಸುಮಾರು 90 ಕೋಟಿ ರೂಪಾಯಿ ವೆಚ್ಚದಲ್ಲಿ ‘ಶ್ರೀ ಗೋಕುಲಂ ಮೂವೀಸ್’ ಈ ಚಿತ್ರವನ್ನು ನಿರ್ಮಿಸಿದೆ. ಚಿತ್ರದಲ್ಲಿ ಮಲಯಾಳಂ ನಟ ಜಯಸೂರ್ಯ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದು, ವಿಶೇಷವೆಂದರೆ ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್ ಮತ್ತು ಇಂಡಿಯನ್ ಮೈಕಲ್ ಜಾಕ್ಸನ್ ಪ್ರಭುದೇವ ಅತಿಥಿ ಪಾತ್ರಗಳಲ್ಲಿ ಮಿಂಚಲಿದ್ದಾರೆ. ವಿನೀತ್, ಸ್ಯಾಂಡಿ ಮತ್ತು ನಿತೀಶ್ ಭಾರದ್ವಾಜ್ ಅವರಂತಹ ಪ್ರತಿಭಾವಂತ ನಟರು ಈ ಚಿತ್ರದ ಭಾಗವಾಗಿದ್ದಾರೆ.
ಕೇವಲ ಮಲಯಾಳಂ ಮಾತ್ರವಲ್ಲದೆ ಕನ್ನಡ, ತೆಲುಗು, ತಮಿಳು, ಹಿಂದಿ ಸೇರಿದಂತೆ ಹಲವು ಅಂತರಾಷ್ಟ್ರೀಯ ಭಾಷೆಗಳಲ್ಲಿ ‘ಕಥನಾರ್’ ಬಿಡುಗಡೆಯಾಗಲಿದೆ. ರಾಹುಲ್ ಸುಬ್ರಮಣಿಯನ್ ಅವರು ಈ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ.
ಬೆಂಗಳೂರು, (ಮಾರ್ಚ್ 30): ಈಗಾಗಲೇ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಐಪಿಎಲ್ ಟೂರ್ನಿ 2026ಕ್ಕೆ ಚಾಲನೆ ಸಿಕ್ಕಿದೆ. ಆರ್‌ಸಿಬಿ ಹಾಗೂ ಸನ್ ರೈಸರ್ಸ್ ಉದ್ಘಾಟನಾ ಪಂದ್ಯವಾಡಿದ್ದು, ತವರಿನ ಅಂಗಳದಲ್ಲಿ ಆರ್‌ಸಿಬಿ ಶುಭಾರಂಭ ಮಾಡಿದೆ. ಇನ್ನು ಕಾಲ್ತುಳಿತ ದುರಂತ ಸಂಬಂಧ ಪೊಲೀಸರು ಹಾಗೂ ಕೆಎಸ್ಸಿಯಿಂದ ಯಾವುದೇ ಗೊಂದಲಗಳು ಆಗದಂತೆ ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಲಾಗಿತ್ತು. ಹೀಗಾಗಿ ಪ್ರೇಕ್ಷಕರಿಗೆ ಆಗಮನ ಮತ್ತು ನಿರ್ಗಮನದಲ್ಲಿ ಯಾವುದೇ ನೂಕುನುಗ್ಗಲು ಆಗಿಲ್ಲ. ಆದ್ರೆ, ಕಳ್ಳರು ಮಾತ್ರ ತಮ್ಮ ಕೈಚಳ ತೋರಿಸಿದ್ದಾರೆ.
ಹೌದು…ಮಾರ್ಚ್ 28ರಂದು ಬೆಂಗಳೂರಿನಲ್ಲಿ ನಡೆದ ಆರ್‌ಸಿಬಿ ಮತ್ತು ಹೈದರಾಬಾದ್ ನಡುವಿನ ಉದ್ಘಾಟನಾ ಪಂದ್ಯದ ವೇಳೆ ಕ್ರಿಕೆಟ್ ಪ್ರೇಮಿಗಳ ಜೇಬಿಗೆ ಕಳ್ಳರು ಕನ್ನ ಹಾಕಿದ್ದಾರೆ. ಪಂದ್ಯ ನೋಡಲು ಹೋಗಿದ್ದ ಮಹಿಳೆಯೊಬ್ಬರು ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಹಂಚಿಕೊಂಡಿದ್ದು, ತಮ್ಮ ಪತಿಯ ಮೊಬೈಲ್ ಫೋನ್ ಕೂಡ ಕಳ್ಳತನವಾಗಿರುವುದಾಗಿ ನೋವು ಹೇಳಿಕೊಂಡಿದ್ದಾರೆ. ಕ್ರಿಕೆಟ್ ನೋಡಲು ಬರುವವರು ಹುಷಾರಾಗಿರಿ, ಇಲ್ಲಿ ಸಂಭ್ರಮದ ನಡುವೆಯೇ ಮೊಬೈಲ್ ಕಳ್ಳತನ ಮಾಡುವ ದೊಡ್ಡ ಜಾಲವೇ ಇದೆ ಎಂದು ಮಹಿಳೆ ಐಪಿಎಲ್ ಅಭಿಮಾನಿಗಳಿಗೆ ಹುಷಾರಾಗಿರಲು ಕರೆ ನೀಡಿದ್ದಾರೆ.
ಐಪಿಎಲ್ 2026 ರ ಮೂರನೇ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಇಂದು ಮುಖಾಮುಖಿಯಾಗಿವೆ. ಗುವಾಹಟಿಯ ಬರ್ಸಪರ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಈ ಪಂದ್ಯದೊಂದಿಗೆ, ಮಾಜಿ ಐಪಿಎಲ್ ಚಾಂಪಿಯನ್‌ಗಳೆರಡೂ ಲೀಗ್‌ನ 19 ನೇ ಸೀಸನ್‌ನಲ್ಲಿ ತಮ್ಮ ಅಭಿಯಾನವನ್ನು ಪ್ರಾರಂಭಿಸಿವೆ. ಹೊಸ ನಾಯಕ ರಿಯಾನ್ ಪರಾಗ್ ನೇತೃತ್ವದಲ್ಲಿ ತಂಡವು ಮೈದಾನಕ್ಕೆ ಇಳಿಯುವುದರಿಂದ ರಾಜಸ್ಥಾನ ರಾಯಲ್ಸ್‌ಗೆ ಇದು ಹೊಸ ಯುಗದ ಆರಂಭವಾಗಿದೆ. ಗಾಯದ ಕಾರಣದಿಂದಾಗಿ ಮೊದಲ ಕೆಲವು ಪಂದ್ಯಗಳಿಂದ ಹೊರಗುಳಿದಿರುವ ಮಾಜಿ ನಾಯಕ ಎಂಎಸ್ ಧೋನಿ ಇಲ್ಲದೆ ಚೆನ್ನೈ ಕೂಡ ಈ ಸೀಸನ್ ಪ್ರಾರಂಭಿಸಲಿದೆ.
ಐಪಿಎಲ್ 2026 ರ ಮೂರನೇ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಇಂದು ಮುಖಾಮುಖಿಯಾಗಿವೆ. ಗುವಾಹಟಿಯ ಬರ್ಸಪರ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಈ ಪಂದ್ಯದೊಂದಿಗೆ, ಮಾಜಿ ಐಪಿಎಲ್ ಚಾಂಪಿಯನ್‌ಗಳೆರಡೂ ಲೀಗ್‌ನ 19 ನೇ ಸೀಸನ್‌ನಲ್ಲಿ ತಮ್ಮ ಅಭಿಯಾನವನ್ನು ಪ್ರಾರಂಭಿಸಿವೆ. ಹೊಸ ನಾಯಕ ರಿಯಾನ್ ಪರಾಗ್ ನೇತೃತ್ವದಲ್ಲಿ ತಂಡವು ಮೈದಾನಕ್ಕೆ ಇಳಿಯುವುದರಿಂದ ರಾಜಸ್ಥಾನ ರಾಯಲ್ಸ್‌ಗೆ ಇದು ಹೊಸ ಯುಗದ ಆರಂಭವಾಗಿದೆ. ಗಾಯದ ಕಾರಣದಿಂದಾಗಿ ಮೊದಲ ಕೆಲವು ಪಂದ್ಯಗಳಿಂದ ಹೊರಗುಳಿದಿರುವ ಮಾಜಿ ನಾಯಕ ಎಂಎಸ್ ಧೋನಿ ಇಲ್ಲದೆ ಚೆನ್ನೈ ಕೂಡ ಈ ಸೀಸನ್ ಪ್ರಾರಂಭಿಸಲಿದೆ.
ಬೆಂಗಳೂರು, ಮಾರ್ಚ್ 30: ಉತ್ತರ ಪ್ರದೇಶ ಮೂಲದ ಕುಟುಂಬವೊಂದು ಬದುಕು ಕಟ್ಟಿಕೊಳ್ಳುವುದಕ್ಕೆ ಅಂತಾ ಬೆಂಗಳೂರಿಗೆ ಆಗಮಿಸಿದ್ದರು. ಸಿಲಿಕಾನ್ ಸಿಟಿಯ ಗಲ್ಲಿಗಲ್ಲಿ ವಾಸಿಸಲು ಮನೆಗಾಗಿ ಹುಡುಕಾಡಿದ್ದಾರೆ. ಸಿಕ್ಕ ಮನೆಯಲ್ಲಿ ಒಂದು ವಾರವಿದ್ದರೂ ಅಷ್ಟೇ, ಅಷ್ಟರಲ್ಲೇ ಮನೆ ಮಾಲೀಕ ಕ್ಯಾತೆ ತೆಗೆದಿದ್ದಾರೆ. ಬಾಡಿಗೆ ಜಾಸ್ತಿ ಕೊಡಿ ಎಂದು ದುಂಬಾಲು ಬಿದ್ದಿದ್ದಾರೆ. ಇದೇ ವಿಚಾರ ಪರಸ್ಪರ ಹೊಡೆದಾಡಿಕೊಳ್ಳುವ(Clash) ಮಟ್ಟಕ್ಕೆ ಹೋಗಿದೆ. ಈ ಘಟನೆ ಜೀವನಭೀಮಾ ನಗರದ ಕೋಡಿಹಳ್ಳಿಯಲ್ಲಿ ಮಾರ್ಚ್ 29ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ನಡೆದದ್ದೇನು?
ಉತ್ತರ ಪ್ರದೇಶ ಮೂಲದ ಸಹೋದರರಾದ ನರೇಶ್, ಸಚಿನ್ ಮತ್ತು ಹೋದರಿ ರೇಖಾ. ಬೆಂಗಳೂರಿಗೆ ಬಂದು ಸಣ್ಣಪುಟ್ಟ ಕೆಲಸ ಮಾಡ್ಕೊಂಡು ಬದುಕು ನಡೆಸುತ್ತಿದ್ದರು. ಹಾಗೆ ಬೆಂಗಳೂರಿನಲ್ಲಿರಲು ಒಂದು ಬಾಡಿಗೆ ಮನೆಯನ್ನ ಹುಡಕ್ತಿದ್ದ ಇವರಿಗೆ ಶೋಭಾ ಮತ್ತು ದೇವರಾಜ್ ಎಂಬುವವರ ಬಿಲ್ಡಿಂಗ್ನಲ್ಲಿ 1RK ಮನೆ ಸಿಕ್ಕಿತ್ತು. ಬಾಡಿಗೆ 8 ಸಾವಿರ ರೂ ಒಪ್ಪಂದವಾಗಿತ್ತು. ಮಾರ್ಚ್ 24ರಂದು ಬಂದ ಇವರಿಗೆ ಮನೆ ಮಾಲೀಕರಿಂದ ಕಿರುಕುಳು ಶುರುವಾಗಿತ್ತಂತೆ. ಗ್ಯಾಸ್ ರೇಟ್ ಜಾಸ್ತಿ ಆಗಿದೆ. ವಾಟರ್ ಬಿಲ್ ಜಾಸ್ತಿ ಆಗಿದೆ, ಹಾಗಾಗಿ 10 ಸಾವಿರ ರೂ ಬಾಡಿಗೆ ನೀಡುವಂತೆ ಒತ್ತಾಯಿಸಲು ಶುರು ಮಾಡಿದ್ದರಂತೆ. ಇಲ್ಲದಿದ್ದರೆ ಮನೆ ಖಾಲು ಮಾಡಲು ಹೇಳಿದ್ದರಂತೆ.
ಇದಕ್ಕೆ ಬಾಡಿಗೆದಾರರು 15 ದಿನ ಸಮಯವಾದರೂ ನೀಡುವಂತೆ ಕೇಳಿಕೊಂಡಿದ್ದಾರೆ. ಮಾಲೀಕರು ಒಪ್ಪದೇ ಬಾಡಿಗೆದಾರರು ಮತ್ತು ಮಾಲೀಕರ ಮಧ್ಯೆ ಪರಸ್ಪರ ಮಾತುಕತೆ ಬೆಳೆದು ಗಲಾಟೆ ಆಗಿದ್ದು, ಪರಸ್ಪರ ಹಲ್ಲೆ ಕೂಡ ನಡೆದಿದೆ. ಶೋಭಾ ಹಾಗೂ ರೇಖಾ ಜುಟ್ಟು ಹಿಡಿದುಕೊಂಡು ಗುದ್ದಾಡಿ ಕೊಂಡಿದ್ದಾರೆ. ಮನೆ ಮಾಲೀಕರು ತಮ್ಮ ಆಪ್ತರನ್ನು ಕರೆಸಿ ಬಾಡಿದಾರರ ಮೇಲೆ ಹಲ್ಲೆ ಮಾಡಿಸಿರುವ ಆರೋಪ ಕೂಡ ಕೇಳಿ ಬಂದಿದೆ.
ಮನೆ ಮಾಲೀಕರ ವಾದವೇನು?
ಇತ್ತ ಮನೆ ಮಾಲೀಕರು ಹೇಳುವುದೇ ಬೇರೆ. ಬಾಡಿಗೆಗೆ ಅಂತಾ ಬಂದವರು ಆಧಾರ್ ಕಾರ್ಡ್ ಕೊಟ್ಟಿರಲಿಲ್ಲ. ಐದು ದಿನ ಕಳೆದರೂ ಅಗ್ರಿಮೆಂಟ್ ಮಾಡಿಸಿರಲಿಲ್ಲ. ಹಾಗಾಗಿ ನಮಗೆ ಅನುಮಾನ ಬಂದು ಮನೆ ಖಾಲಿ ಮಾಡಲು ಹೇಳಿದ್ದೆವು. ಅಷ್ಟಕ್ಕೆ ಇಷ್ಟು ದೊಡ್ಡ ರಾದ್ಧಾಂತ ಮಾಡಿ ನಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಅಂತಾ ಪ್ರತ್ಯಾರೋಪ ಮಾಡಿದ್ದಾರೆ.
ಘಟನೆಯಲ್ಲಿ ಚಮಚ, ಸೌಟು ಮತ್ತು ಚಾಕುವಿನಿಂದ ಬಡಿದಾಡಿಕೊಂಡಿದ್ದು, ಬಾಡಿಗೆದಾರರ ಮುಖ, ಕೈ ಸೇರಿದಂತೆ ದೇಹದ ಹಲವೆಡೆ ಗಾಯಗಳಾಗಿವೆ. ಸದ್ಯ ಘಟನೆ ಸಂಬಂಧ ಜೀವನಭೀಮಾನಗರ ಪೊಲೀಸ್ ಠಾಣೆಯಲ್ಲಿ ದೂರು, ಪ್ರತಿದೂರು ದಾಖಲಾಗಿದ್ದು ಪೊಲೀಸರು ತನಿಖೆ ನಡೆಸಿದ್ದಾರೆ.
ಬೆಂಗಳೂರು, (ಮಾರ್ಚ್ 30):IPL ಟಿಕೆಟ್ ನೀಡುವಂತೆ ಸದನದಲ್ಲಿ ಶಾಸಕರು ಬೇಡಿಕೆ ಇಟ್ಟಿರುವ ಸಂಬಂಧ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಅವರು ಕರಾಜ್ಯ ಕ್ರಿಕೆಟ್ ಅಸೋಸಿಯೇಷನ್ (KSCA), DNA ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮ್ಯಾನೇಜ್ಮೆಂಟ್ ಪದಾಧಿಕಾರಿಗಳ ಜೊತೆ ಮಹತ್ವದ ಸಭೆ ನಡೆಸಿದ್ದು, ಸಭೆಯಲ್ಲಿ ಓರ್ವ ಶಾಸಕನಿಗೆ ಮೂರು ಐಪಿಎಲ್ ಟಿಕೆಟ್ ನೀಡಲು ತೀರ್ಮಾನವಾಗಿದೆ. ಈ ಮೊದಲು 1 ಪ್ಲಸ್ 1 ಒಟ್ಟು ಎರಡು ಉಚಿತ ಟಿಕೆಟ್ ನೀಡಲು ತೀರ್ಮಾನಿಸಲಾಗಿತ್ತು. ಆದ್ರೆ, ಇಂದಿನ ಸಭೆಯಲ್ಲಿ ಇನ್ನೊಂದು ಟಿಕೆಟ್ ಹೆಚ್ಚಳ ಮಾಡಲಾಗಿದ್ದು, ಅಂತಿಮವಾಗಿ ಒಬ್ಬ ಎಂಎಲ್ಎಗೆ ಒಟ್ಟು 3 ಟಿಕೆಟ್ಗಳನ್ನು ನೀಡಲು ಒಪ್ಪಂದವಾಗಿದೆ.
ಪ್ರತಿ ಮ್ಯಾಚ್ಗೆ 3 ಟಿಕೆಟ್ ನೀಡಲು ತೀರ್ಮಾನ
IPL ಟಿಕೆಟ್ ನೀಡುವಂತೆ ಸದನದಲ್ಲಿ ಶಾಸಕರು ಬೇಡಿಕೆ ಇಟ್ಟಿರುವ ಸಂಬಂಧ ಇಂದು (ಮಾರ್ಚ್ 30) ಬೆಂಗಳೂರಿನ ಸದಾಶಿವನಗರದ ಡಿಸಿಎಂ ಡಿಕೆ ಶಿವಕುಮಾರ್ ನಿವಾಸದಲ್ಲಿ ಮಹತ್ವದ ಸಭೆ ನಡೆದಿದ್ದು, ಸಭೆಯಲ್ಲಿ ಕೆಎಸ್ಸಿಎ ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಮತ್ತು ಆರ್‌ಸಿಬಿ ಪದಾಧಿಕಾರಿಗಳು ಭಾಗಿಯಾಗಿದ್ದು, ಐಪಿಎಲ್ ಟಿಕೆಟ್ ಹಾಗೂ ಸ್ಟೇಡಿಯಂ ಬಗ್ಗೆ ಮಹತ್ವದ ಚರ್ಚೆಯಾಗಿದ್ದು, ಚಿನ್ನಸ್ವಾಮಿ ಸ್ಡೇಡಿಯಂನಲ್ಲಿ ನಡೆಯುವ ಪ್ರತಿ ಐಪಿಎಲ್ ಪಂದ್ಯದ ಮುರು ಟಿಕೆಟ್ ಹಾಗೂ ಇಂಟರ್ ನ್ಯಾಷಲ್ ಮ್ಯಾಚ್ಗೆ ಎರಡು ಟಿಕೆಟ್ ನೀಡುವ ತೀರ್ಮಾನವಾಗಿದೆ. ಈ ಹಿಂದಿನ ಸಭೆಯಲ್ಲಿ ಎರಡು ಟಿಕೆಟ್ ನೀಡುವ ಬಗ್ಗೆ ತೀರ್ಮಾನವಾಗಿತ್ತು. ಆದ್ರೆ, ಇದೀಗ ಎರಡರ ಜೊತೆಗೆ ಮತ್ತೊಂದು ಎಕ್ಸ್ಟ್ರಾ ಟಿಕಟ್ ನೀಡಲು ನಿರ್ಧರಿಸಲಾಗಿದೆ.
ಇನ್ನು ಸಭೆ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್, ಶಾಸಕರಿಗೆ ಐಪಿಎಲ್ ಟಿಕೆಟ್ ನೀಡುವ ಸಂಬಂಧ ನಮ್ಮ ಸ್ಪೀಕರ್ ಬಳಿ ಮಾತಾಡಿದ್ದೆ. ಇಂದಿನ ಸಭೆಯಲ್ಲಿ ಬೆಂಗಳೂರಿನಲ್ಲಿ ನಡೆಯಲಿರುವ ಪ್ರತಿ ಐಪಿಎಲ್ ಮ್ಯಾಚ್ ಗೆ ಶಾಸಕರೊಬ್ಬರಿಗೆ 3 ಟಿಕೆಟ್ ಕೊಡಲು ಒಪ್ಪಿಕೊಂಡಿದ್ದಾರೆ. ಅಂತಾರಾಷ್ಟ್ರೀಯ ಟೂರ್ನಿ ಇದ್ದಾಗ ಎರಡು ಟಿಕೆಟ್ ಕೊಡುತ್ತಾರೆ. ಇನ್ನೂ ಹೆಚ್ಚು ಬೇಕಾದರೇ ಬೇರೆ ಮನವಿ ಮಾಡಬೇಕು. ಇಲ್ಲಂದ್ರೆ ಖರೀದಿ ಮಾಡಿ ಎಂದು ಹೇಳಿದ್ದಾರೆ ಎಂದು ಸ್ಪಷ್ಟಪಡಿಸಿದರು.
ಇನ್ನು ಸ್ಟೇಡಿಯಂ ವಿಚಾರಕ್ಕೆ ಸಂಬಂಧಿಸಿ ಚರ್ಚೆ ಮಾಡಿದ್ದೇವೆ. ಹೆಚ್ಚುವರಿ ಸ್ಟೇಡಿಯಂ ವಿಚಾರಕ್ಕೆ ಚರ್ಚೆ ಆಗಿದೆ. ಅದಕ್ಕೆ ಕೆಎಸ್ಸಿಎ ಅವರು ಇವತ್ತು ಬಂದಿದ್ರು. ಕ್ರೀಡಾಂಗಣದಲ್ಲಿ ಆಸನ ಹೆಚ್ಚಿಸೋ ಚಿಂತನೆ ಇದ್ದು, ಕೆಎಸ್ ಸಿ ಎ ಅವರು ಯೋಚನೆ ಮಾಡಿದ್ದಾರೆ. ಅದಕ್ಕೆ ಸರ್ಕಾರಕ್ಕೆ ವರದಿ ನೀಡಿ ಎಂದಿದ್ದೇನೆ ಎಂದು ಹೇಳಿದರು.
ನವದೆಹಲಿ, ಮಾರ್ಚ್ 30: ಭಾರತದ ಕರೆನ್ಸಿಯಾದ ರುಪಾಯಿ ಅಮೆರಿಕದ ಡಾಲರ್ (US dollar vs Indian Rupee) ಎದುರು ಕುಸಿತ ಕಾಣುವುದು ಮುಂದುವರಿದಿದೆ. ಇತಿಹಾಸದಲ್ಲೇ ಮೊದಲ ಬಾರಿಗೆ ರುಪಾಯಿ ಮೌಲ್ಯವು 95ರ ಗಡಿದಾಟಿ ಕುಸಿತ ಕಂಡಿದೆ. ವಿದೇಶೀ ವಿನಿಮಯ ಮಾರುಕಟ್ಟೆಯಲ್ಲಿ ಸೋಮವಾರ ಡಾಲರ್ ಎದುರು ರುಪಾಯಿ 95.21 ಮಟ್ಟಕ್ಕೆ ಕುಸಿಯಿತು. ಭಾರತದ ಕರೆನ್ಸಿ ಮೌಲ್ಯದ ಕುಸಿತವನ್ನು ತಪ್ಪಿಸಲು ರಿಸರ್ವ್ ಬ್ಯಾಂಕ್ ಕೈಗೊಂಡ ಕೆಲ ಕ್ರಮಗಳು ನಿರೀಕ್ಷಿತ ಫಲ ಕೊಡಲಿಲ್ಲ.
ವಿದೇಶೀ ಹೂಡಿಕೆಗಳ ಹೊರಹರಿವು ಸತತವಾಗಿ ನಡೆಯುತ್ತಿರುವುದು ರುಪಾಯಿ ಮೇಲೆ ಒತ್ತಡ ಹಾಕಿದೆ. ಬ್ಯಾಂಕುಗಳ ವಿದೇಶೀ ವಿನಿಮಯ ಸ್ಥಾನಗಳಿಗೆ ಆರ್ಬಿಐ ಮಿತಿ ಹಾಕಿದರೂ ಅದರಿಂದ ರುಪಾಯಿ ಮೌಲ್ಯ ಕುಸಿತ ತಡೆಯಲು ಆಗಲಿಲ್ಲ.
ಹಿಂದಿನ ಪ್ಯಾರಾದಲ್ಲೇ ಹೇಳಿದಂತೆ, ವಿದೇಶೀ ಪೋರ್ಟ್ಫೋಲಿಯೋ ಹೂಡಿಕೆಗಳ ಹೊರಹರಿವು ಮುಂದುವರಿದಿರುವುದು ರುಪಾಯಿ ಕುಸಿತಕ್ಕೆ ಕಾರಣಗಳಲ್ಲಿ ಒಂದು. ಹಾಗೆಯೇ, ತೈಲ ಬೆಲೆ ಹೆಚ್ಚಿರುವುದರಿಂದ ಭಾರತದ ಆಮದು ವೆಚ್ಚ ಹೆಚ್ಚಾಗಿದೆ. ಕರೆನ್ಸಿ ಮೌಲ್ಯ ಕುಸಿತ, ಆಮದು ವೆಚ್ಚದ ಏರಿಕೆ, ಇವೆರಡು ಕೂಡ ರುಪಾಯಿ ಮೇಲೆ ಡಬಲ್ ಎಫೆಕ್ಟ್ ಕೊಟ್ಟಿದೆ.
ಕಚ್ಛಾ ತೈಲ ಬೆಲೆ ಅಧಿಕ ಮಟ್ಟದಲ್ಲಿರುವುದು ಭಾರತದ ಆರ್ಥಿಕತೆಗೂ ಹಿನ್ನಡೆ ತರುವ ಸಾಧ್ಯತೆ ಹೊಂದಿದೆ. ಇವೆಲ್ಲವೂ ಕೂಡ ಈಕ್ವಿಟಿ ಮಾರುಕಟ್ಟೆಯನ್ನೂ ಕೆಳಗೆ ನೂಕುತ್ತಿವೆ.
ಡಾಲರ್ ಎದುರು ರುಪಾಯಿ ಕಂಡಿರುವ ಕುಸಿತವು 10 ವರ್ಷದ ಬಾಂಡ್ ಯೀಲ್ಡ್ (Bond Yield) ಅನ್ನು ಹೆಚ್ಚಿಸಿದೆ. ಬಾಂಡ್ ಯೀಲ್ಡ್ ಶೇ. 7ರ ಮಟ್ಟ ದಾಟಿದೆ. 2024ರ ಜುಲೈ ನಂತರ, ಅಂದರೆ ಎರಡು ವರ್ಷದಲ್ಲಿ ಇದು ಅತಿಹೆಚ್ಚಿನ ಬಾಂಡ್ ಯೀಲ್ಡ್ ಮಟ್ಟವಾಗಿದೆ. ಆರ್ಬಿಐ ತನ್ನ ಮುಂದಿನ ಎಂಪಿಸಿ ಸಭೆಯಲ್ಲಿ ರಿಪೋ ದರವನ್ನು ಹೆಚ್ಚಿಸುವ ಒತ್ತಡಕ್ಕೆ ಸಿಲುಕಬಹುದು.
ಚಾಮರಾಜನಗರ, ಮಾರ್ಚ್ 30: ಮಾನವ ಕಾಡು ಪ್ರಾಣಿ ಸಂಘರ್ಷಕ್ಕೆ ಕುಖ್ಯಾತು ಪಡೆದ ಜಿಲ್ಲೆಗಳ ಪೈಕಿ ಚಾಮರಾಜನಗರದಲ್ಲಿ ಕಾಡಾನೆಗಳ ಉಪಟಳ ಮತ್ತೆ ಹೆಚ್ಚಾಗಿದೆ. ತಡರಾತ್ರಿ ಹನೂರು ತಾಲೂಕಿನ ಚಿಕ್ಕರಂಗಶೆಟ್ಟಿ ದೊಡ್ಡಿಗೆ ನುಗ್ಗಿ ಒಂಟಿ ಸಲಗ ದಾಂಧಲೆ ನಡೆಸಿದ್ದರೆ, ಮಂಚಹಳ್ಳಿ ಬಳಿ ಕಾಡಾನೆ ಹಿಂಡು ರೈತರು ಕಷ್ಟಪಟ್ಟು ಬೆಳೆದಿದ್ದ ಟೊಮ್ಯಾಟೋ ಬೆಳೆಯನ್ನು ಸರ್ವನಾಶ ಮಾಡಿವೆ. ಮಂಜುನಾಥ್ ಎಂಬುವವರ ಜಮೀನಿನಲ್ಲಿ ಕಟಾವು ಮಾಡಿ ಇಟ್ಟಿದ್ದ ಕ್ವಿಂಟಾಲ್ಗಟ್ಟಲೆ ಟೊಮ್ಯಾಟೋವನ್ನ ತಿಂದು ತೇಗಿ ಪರಾರಿಯಾಗಿವೆ. ಹೀಗಾಗಿ ಕತ್ತಲಾದರೆ ಸಾಕು ಮನೆಯಿಂದ ಹೊರಬರಲೂ ಈ ಭಾಗದ ಜನರು ಭಯಪಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಬಿಳಿಗಿರಿರಂಗನಬೆಟ್ಟ ಹುಲಿ ಸಂರಕ್ಷಿತಾರಣ್ಯ ಸಿಬ್ಬಂದಿಗೆ ತಿಳಿಸಿದರೂ ಈ ಬಗ್ಗೆ ಕ್ರಮ ಕೈಗೊಂಡಿಲ್ಲ. ಕಾಡಾನೆ ಉಪಟಳದಿಂದ ನಮಗೆ ಮುಕ್ತಿ ಕೊಡಿಸಿ ಎಂದು ಗ್ರಾಮಸ್ಥರ ಮನವಿ ಮಾಡಿದ್ದಾರೆ.
ಮತ್ತೊಂದೆಡೆ ದಿನ ನಿತ್ಯ ಕತ್ತಲಾದ್ರೆ ಸಾಕು ಹನೂರು ತಾಲೂಕಿನ ಚಿಕ್ಕರಂಗಶೆಟ್ಟಿ ದೊಡ್ಡಿ ಗ್ರಾಮಕ್ಕೆ ನುಗ್ಗುವ ಒಂಟಿ ಸಲಗ ಪುಂಡಾಟ ಮೆರೆಯುತ್ತದೆ. ಸಿಕ್ಕ ಸಿಕ್ಕ ಕಡೆ ದಾಂಗುಡಿ ಇಡುವುದು ಸಾಲದು ಎಂದು ಜಮೀನಿನಲ್ಲಿ ಬೆಳೆದಿದ್ದ ಜೋಳ, ಕಬ್ಬುಗಳನ್ನ ತಿಂದು ನಾಶ ಪಡಿಸುತ್ತಿದೆ. ದೂರು ನೀಡಿದರೂ ಅರಣ್ಯ ಇಲಾಖೆ ಅಧಿಕಾರಿಗಳ ಸ್ಪಂದಿಸದೇ ಇರೋದು ಒಂದೆಡೆಯಾದರೆ, ಬ್ಯಾರಿಕೇಡ್ಗಳನ್ನ ಹಾಕಿದರೂ ಅವು ಪ್ರಯೋಜನಕ್ಕೆ ಬರುತ್ತಿಲ್ಲ. ಪರಿಸ್ಥಿತಿ ಹೀಗಿರುವಾಗ ಕೃಷಿಯನ್ನೇ ನಂಬಿ ಬದುಕುತ್ತಿರುವ ಸ್ಥಳೀಯರು, ಕನಿಷ್ಠ ಜಮೀನಿಗೆ ಹೋಗೋದಾದರೂ ಹೇಗೆ? ಬೆಳೆದ ಬೆಳೆಗೆ ನೀರುಣಿಸೋದು ಸಾಧ್ಯವಾ? ಎಂದು ರೈತರು ಅರಣ್ಯ ಇಲಾಖೆಯ ಸಿಬ್ಬಂದಿ ವಿರುದ್ದ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾಡಾನೆಗಳೂ ಸೇರಿ ಕಾಡು ಪ್ರಾಣಿಗಳ ಉಪಟಳ ದಿನದಿಂದ ದಿನಕ್ಕೆ ಈ ಭಾಗದಲ್ಲಿ ಹೆಚ್ಚಾಗುತ್ತಿರುವ ಕಾರಣ ತುರ್ತಾಗಿ ಸಮಸ್ಯೆ ಬಗೆಹರಿಸದೇ ಇದ್ದಲ್ಲಿ ಉಗ್ರ ಹೋರಾಟ ನಡೆಸುವ ಎಚ್ಚರಿಕೆಯನ್ನೂ ರೈತರು ನೀಡಿದ್ದಾರೆ. ಸಾಲ ಮಾಡಿ ಬೆಳೆದ ಬೆಳೆ ತಮ್ಮ ಕೈಸೇರುವ ಮುನ್ನವೇ ಕಾಡು ಪ್ರಾಣಿಗಳ ಹಾವಳಿಯಿಂದ ನಷ್ಟವಾಗುತ್ತಿರುವ ಕಾರಣ ಅರಣ್ಯ ಇಳಾಖೆ ಶೀಘ್ರ ಈ ಬಗ್ಗೆ ಕ್ರಮ ಕೈಗೊಳ್ಳಲೇ ಬೇಕು ಎಂಬ ಒತ್ತಾಯವೂ ಸ್ಥಳೀಯರಿಂದ ಕೇಳಿಬಂದಿದೆ.