Headlines

SA vs NZ: ಅವರ ಮೇಲೆ ಇವರು ಗೆದ್ದಿಲ್ಲ, ಇವರ ಮೇಲೆ ಅವರು ಸೋತಿಲ್ಲ..! – Kannada News | South Africa vs New Zealand semi final: Head To Head

T20 World Cup 2026: ಟಿ20 ವಿಶ್ವಕಪ್​ನ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ನ್ಯೂಝಿಲೆಂಡ್ ಮತ್ತು ಸೌತ್ ಆಫ್ರಿಕಾ ತಂಡಗಳು ಮುಖಾಮುಖಿಯಾಗಲಿದೆ. ಇಂದು (ಮಾ.4) ನಡೆಯಲಿರುವ ಈ ಪಂದ್ಯದಲ್ಲಿ ಗೆಲ್ಲುವ ತಂಡ ಫೈನಲ್​ಗೇರಲಿದೆ. ಹೀಗಾಗಿಯೇ ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ರಣರೋಚಕ ಪೈಪೋಟಿಯನ್ನು ನಿರೀಕ್ಷಿಸಬಹುದು. ಏಕೆಂದರೆ ಉಭಯ ತಂಡಗಳ ಈ ಹಿಂದಿನ ಮುಖಾಮುಖಿಯೇ ರೋಚಕತೆಯಿಂದೆ ಕೂಡಿದೆ. ಟಿ20 ವಿಶ್ವಕಪ್​ನಲ್ಲಿ ಉಭಯ ತಂಡಗಳು ಒಟ್ಟು 5 ಬಾರಿ ಮುಖಾಮುಖಿಯಾಗಿವೆ. ಈ ವೇಳೆ ಎಲ್ಲಾ ಪಂದ್ಯಗಳಲ್ಲೂ ಸೌತ್ ಆಫ್ರಿಕಾ ತಂಡವೇ ಜಯ…

Read More

Bengaluru Air Quality: ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಕುಸಿದ ವಾಯು ಮಾಲಿನ್ಯ, ಅತ್ಯಂತ ಶುದ್ಧ ಗಾಳಿ! – Kannada News | Karnataka AQI Update: Bengaluru and Other Cities Record Clean Air Quality

ಬೆಂಗಳೂರು, ಜೂನ್ 18: ಇಂದಿನ ಕರ್ನಾಟಕದ ಹವಾಮಾನ ಮತ್ತು ಗಾಳಿಯ ಗುಣಮಟ್ಟ ಸೂಚ್ಯಂಕ (AQI) ವಿವರಗಳು ಇಲ್ಲಿವೆ. ಇತ್ತೀಚಿನ ಮಳೆ ಮತ್ತು ಗಾಳಿಯ ಪ್ರಭಾವದಿಂದಾಗಿ ರಾಜ್ಯದ ಬಹುತೇಕ ನಗರಗಳಲ್ಲಿ ವಾಯು ಮಾಲಿನ್ಯದ ಮಟ್ಟ ಗಣನೀಯವಾಗಿ ಕಡಿಮೆಯಾಗಿದ್ದು, ಜನಸಾಮಾನ್ಯರು ನಿರಾಳವಾಗಿ ಉಸಿರಾಡುವಂತಾಗಿದೆ. ಮುಖ್ಯಾಂಶಗಳು ಬೆಂಗಳೂರಿನ ವಾಯು ಗುಣಮಟ್ಟ ಸೂಚ್ಯಂಕವು ಇಂದು ಅತ್ಯಂತ ಉತ್ತಮ ಮಟ್ಟದಲ್ಲಿದೆ. ವಿಜಯಪುರ ಮತ್ತು ಚನ್ನರಾಯಪಟ್ಟಣದಲ್ಲಿ ದೇಶದಲ್ಲೇ ಅತ್ಯಂತ ಕಡಿಮೆ ಮಾಲಿನ್ಯ ದಾಖಲಾಗಿದೆ. ರಾಜ್ಯದ ಇತರೆ ಪ್ರಮುಖ ನಗರಗಳಲ್ಲಿ ಶುದ್ಧವಾದ ಆರೋಗ್ಯಕರ ಗಾಳಿ ಇದೆ. ಬೆಂಗಳೂರಿನ…

Read More

IND vs ZIM: ನಿರ್ಣಾಯಕ ಪಂದ್ಯಕ್ಕೆ ಟೀಂ ಇಂಡಿಯಾದಲ್ಲಿ 2 ಬದಲಾವಣೆ – Kannada News | India vs Zimbabwe T20 WC Super 8: Chennai Showdown! Toss, Squads and Semifinal Quest

ಚೆನ್ನೈನ ಎಂಎ ಚಿದಂಬರಂ ಮೈದಾನದಲ್ಲಿ ನಡೆಯುತ್ತಿರುವ 2026 ರ ಟಿ20 ವಿಶ್ವಕಪ್​ನ ಸೂಪರ್ 8 ಸುತ್ತಿನಲ್ಲಿ ಆತಿಥೇಯ ಟೀಂ ಇಂಡಿಯಾ ಹಾಗೂ ಜಿಂಬಾಬ್ವೆ ತಂಡಗಳು ಮುಖಾಮುಖಿಯಾಗಿವೆ. ಇದು ಭಾರತದಲ್ಲಿ ಟೀಂ ಇಂಡಿಯಾ ವಿರುದ್ಧ ಜಿಂಬಾಬ್ವೆಯ ಮೊದಲ ಟಿ20 ಪಂದ್ಯವಾಗಿದೆ. ಸೂಪರ್ 8 ಸುತ್ತಿನಲ್ಲಿ ಎರಡೂ ತಂಡಗಳಿಗೆ ಇದು ಎರಡನೇ ಪಂದ್ಯವಾಗಿದ್ದು, ಉಭಯ ತಂಡಗಳು ಆಡಿರುವ ಮೊದಲ ಪಂದ್ಯದಲ್ಲಿ ಸೋತಿವೆ. ಹೀಗಾಗಿ ಸೆಮಿಫೈನಲ್ ಕನಸು ಜೀವಂತವಾಗಿರಬೇಕೆಂದರೆ, ಈ ಪಂದ್ಯದ ಗೆಲುವು ಎರಡೂ ತಂಡಗಳಿಗೆ ಅವಶ್ಯಕವಾಗಿದೆ. ಅದರಲ್ಲೂ ಹಾಲಿ ಚಾಂಪಿಯನ್…

Read More

Video: ಲಿಫ್ಟ್​ ಒಳಗೆ ಹೈಡ್ರೋಜನ್ ಬಲೂನ್​ಗಳು ಸ್ಫೋಟ – Kannada News | Hydrogen Balloons Spark Fire Inside Lift at Mumbai Building

ಮುಂಬೈ, ಫೆಬ್ರವರಿ 05: ಮುಂಬೈನಲ್ಲಿರುವ ವಸತಿ ಕಟ್ಟಡದ ಲಿಫ್ಟ್​ ಒಳಗೆ ಹೈಡ್ರೋಜನ್ ತುಂಬಿದ ಬಲೂನ್​ಗಳು ಸ್ಫೋಟಗೊಂಡಿರುವ ವಿಡಿಯೋ ವೈರಲ್ ಆಗಿದೆ. ಬಲೂನ್‌ಗಳಿಂದ ತುಂಬಿದ ಪ್ಲಾಸ್ಟಿಕ್ ಚೀಲವನ್ನು ಹೊತ್ತುಕೊಂಡು ಒಬ್ಬ ವ್ಯಕ್ತಿ ಒಳಗೆ ಬರುವುದನ್ನು ಸಿಸಿ ಕ್ಯಾಮರಾದಲ್ಲಿ ಕಾಣಬಹುದು. ಮತ್ತೊಬ್ಬರು ಟ್ರಾಲಿ ಬ್ಯಾಗ್ ಹೊತ್ತು ಬಂದಿದ್ದರು. ಲಿಫ್ಟ್​ ಬಾಗಿಲು ಹಾಕುತ್ತಿದ್ದಂತೆಯೇ ಬಲೂನ್​ಗಳು ಸ್ಫೋಟಗೊಂಡಿವೆ. ಬೆಂಕಿ ಇಡೀ ಲಿಫ್​ ಒಳಗೆ ಹರಡಿತ್ತು. ಎಲ್ಲರೂ ಲಿಫ್ಟ್​ನಿಂದ ಹೊರಹೋಗುವಲ್ಲಿ ಯಶಸ್ವಿಯಾಗಿದ್ದಾರೆ. ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿವೆ.   ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ …

Read More

TV9 Kannada News Live: ಕಳ್ಳತನದ ಆರೋಪಿ 34 ವರ್ಷಗಳ ಬಳಿಕ ಅರೆಸ್ಟ್! ಮೆಡಿಕಲ್ ಬಂದ್ ಸೇರಿ ಈ ಹೊತ್ತಿನ ಪ್ರಮುಖ ಸುದ್ದಿಗಳು – Kannada News | TV9 Kannada News Live: Countrywide Medical Shop Strike Today; 34 Year Old Theft Case Absconder Arrested In Kolar

ಮೆಡಿಕಲ್ ಶಾಪ್ ಬಂದ್ (ಎಐ ಚಿತ್ರ)Image Credit source: MediaForge AI ಬೆಂಗಳೂರು, ಮೇ 20: ಆನ್ಲೈನ್ ಔಷಧ ಮಾರಾಟ, ಆನ್​ಲೈನ್ ಮೂಲಕ ಔಷಧಗಳಿಗೆ ಭಾರಿ ರಿಯಾಯಿತಿ ನೀಡುವುದದನ್ನು ವಿರೋಧಿಸಿ ಮತ್ತು ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ದೇಶಾದ್ಯಂತ ಇಂದು (ಮೇ 20) ಮೆಡಿಕಲ್ ಬಂದ್ (Medical Bandh) ಮಾಡಲಾಗುತ್ತಿದೆ. ಕರ್ನಾಟಕದಲ್ಲಿಯೂ ಔಷಧ ವ್ಯಾಪಾರಿಗಳು ಮೆಡಿಕಲ್ ಬಂದ್ ಮಾಡಿ ಪ್ರತಿಭಟನೆ ಮಾಡುತ್ತಿದ್ದಾರೆ. ಶಿವಮೊಗ್ಗದಲ್ಲಿ ಬೆಳಗ್ಗೆ 11:00 ಗಂಟೆಗೆ ಡಿ ಸಿ ಕಚೇರಿ ಎದುರು ಪ್ರತಿಭಟನೆಗೆ ಪಕ್ಷದ ವ್ಯಾಪಾರಿಗಳು ಮುಂದಾಗಿದ್ದಾರೆ….

Read More

SA vs NZ: ಆಲೆನ್ ಅಬ್ಬರ..! ಸೆಮೀಸ್​ನಲ್ಲಿ ದಿಕ್ಕು ತಪ್ಪಿದ ದಕ್ಷಿಣ ಆಫ್ರಿಕಾ; ಕಿವೀಸ್​ಗೆ ಫೈನಲ್ ಟಿಕೆಟ್ – Kannada News | Finn Allen’s World Record Century Propels New Zealand to T20 World Cup 2026 Final

ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ 2026 ರ ಟಿ20 ವಿಶ್ವಕಪ್​ನ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಮುಖಾಮುಖಿಯಾಗಿದ್ದವು. ಈ ಟೂರ್ನಿಯಲ್ಲಿ ಅಜೇಯ ತಂಡವಾಗಿದ್ದ ದಕ್ಷಿಣ ಆಫ್ರಿಕಾ ಈ ಪಂದ್ಯದಲ್ಲೂ ಗೆದ್ದು ಸತತ ಎರಡನೇ ಬಾರಿಗೆ ಫೈನಲ್​ಗೇರುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಈ ಪಂದ್ಯದಲ್ಲಿ ಅಮೋಘ ಪ್ರದರ್ಶನ ನೀಡಿದ ನ್ಯೂಜಿಲೆಂಡ್ ಆರಂಭಿಕ ಫಿನ್ ಆಲೆನ್ ಅವರ ವಿಶ್ವದಾಖಲೆಯ ಶತಕದ ನೆರವಿನಿಂದ ಏಕಪಕ್ಷೀಯವಾಗಿ ಗೆದ್ದು ಫೈನಲ್​ಗೆ ಅರ್ಹತೆ ಪಡೆದುಕೊಂಡಿದೆ. ಇತ್ತ ಟೂರ್ನಿಯಲ್ಲಿ ಮೊದಲ…

Read More

ಗ್ಯಾಸ್​​​ ಅಭಾವದ ಮಧ್ಯೆ ಮಂಗಳೂರಿನ ಹೋಟೆಲ್​​​ವೊಂದರಿಂದ ಭರ್ಜರಿ ಆಫರ್​​: ಷರತ್ತು ಅನ್ವಯ

ಮಂಗಳೂರು, ಮಾರ್ಚ್​​ 14: ಗಲ್ಫ್ ರಾಷ್ಟ್ರದಲ್ಲಿ ನಡೆಯುತ್ತಿರುವ ಯುದ್ಧ ಭಾರತದಲ್ಲಿ ಹೋಟೆಲ್ ಉದ್ಯಮಕ್ಕೆ ಭಾರೀ ಹೊಡೆತ ನೀಡಿದೆ. ಗ್ಯಾಸ್ (Gas) ಎಮರ್ಜೆನ್ಸಿ ಗ್ರಾಹಕರ ಉಸಿರುಗಟ್ಟಿಸಿದೆ. ಇತ್ತ ಕರ್ನಾಟಕದ ಜಿಲ್ಲೆ ಜಿಲ್ಲೆಗಳಲ್ಲೂ ಸಿಲಿಂಡರ್ ಕೊರತೆ ಉಂಟಾಗಿದ್ದು, ಸೌದೆ ಒಲೆಯತ್ತ ಮುಖ ಮಾಡುತ್ತಿದ್ದರೆ, ಮತ್ತೆ ಕೆಲ ಹೋಟೆಲ್‌ಗಳು ಬಂದ್​ ಮಾಡಲಾಗುತ್ತಿದೆ. ಈ ಮಧ್ಯೆ ಮಂಗಳೂರಿನ ಹೋಟೆಲ್ ಉದ್ಯಮ ಸಂಸ್ಥೆಯೊಂದು ಸ್ಪೆಷಲ್ ಆಫರ್​​ ನೀಡಿದೆ. ಅದೆನೇಂದರೆ ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ಕೊಟ್ಟವರಿಗೆ ಸುಮಾರು ‌5,500 ರೂ ಮೌಲ್ಯದ ಫುಡ್ ಉಚಿತವಾಗಿ ನೀಡಲಾಗುತ್ತಿದೆ….

Read More

ತೆಲುಗಿನಲ್ಲಿ ಅದ್ದೂರಿಯಾಗಿ ರಿಲೀಸ್ ಆಗೋಕೆ ರೆಡಿ ಆಯ್ತು ‘ರಾಕ್ಷಸಪುರದೊಳ್’

ಕನ್ನಡದ ಚಿರಪರಿಚಿತ ನಟ ರಾಜ್ ಬಿ. ಶೆಟ್ಟಿ ಅವರ ಅಭಿನಯದ ‘ರಾಕ್ಷಸಪುರದೊಳ್’ ಚಿತ್ರವು ಈಗ ತೆಲುಗು ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗಿದೆ. ತೆಲುಗಿನಲ್ಲಿ ಈ ಚಿತ್ರಕ್ಕೆ ‘ರಾಕ್ಷಸಪುರಂ’ ಎಂದು ಹೆಸರಿಡಲಾಗಿದ್ದು, ಖ್ಯಾತ ನಿರ್ಮಾಪಕ ಕೆ.ಎಸ್. ರಾಮರಾವ್ ಅವರು ಇದನ್ನು ಪ್ರಸ್ತುತಪಡಿಸುತ್ತಿದ್ದಾರೆ. ತೆಲುಗು ಸೆನ್ಸಾರ್ ಪೂರ್ಣಗೊಂಡಿದೆ ಎಂದು ಚಿತ್ರದ ವಿತರಕ ಕೆ.ಎಸ್. ರಾಮರಾವ್ ಇತ್ತೀಚೆಗೆ ಘೋಷಿಸಿದರು. ಸೆನ್ಸಾರ್ ಮಂಡಳಿಯಿಂದ ಯು/ಎ ಪ್ರಮಾಣಪತ್ರವನ್ನು ಪಡೆಯಲಾಗಿದೆ ಎಂದಿದ್ದಾರೆ ಅವರು. ಮೇ 15 ರಂದು ತೆಲುಗು ಚಿತ್ರಮಂದಿರಗಳಲ್ಲಿ ಈ ಚಿತ್ರವು ಅದ್ದೂರಿಯಾಗಿ ಬಿಡುಗಡೆಯಾಗಲಿದೆ ಎಂದು…

Read More

ಪವಿತ್ರಾ ಮನೆ ಊಟಕ್ಕೆ ಬ್ರೇಕ್: ಕಾನೂನಿಗಿಂತ ಯಾರೂ ದೊಡ್ಡವರಲ್ಲ ಎಂದ ಹೈಕೋರ್ಟ್ – Kannada News | Pavithra Gowda’s Jail Home Food Halted: HC Stresses Equality, Ends Special Privilege

ರೇಣುಕಾ ಸ್ವಾಮಿ (Renuka Swamy) ಕೊಲೆ ಆರೋಪಿ ಪವಿತ್ರಾ ಗೌಡ, ನಾಗರಾಜು ಮತ್ತು ಲಕ್ಷ್ಮಣ್ ಅವರುಗಳು ನ್ಯಾಯಾಂಗ ಬಂಧನದಲ್ಲಿದ್ದು ಅವರಿಗೆ ವಾರಕ್ಕೊಮ್ಮೆ ಮನೆ ಊಟ ಲಭಿಸುತ್ತಿತ್ತು. ಟ್ರಯಲ್ ಕೋರ್ಟ್​​ಗೆ ಅರ್ಜಿ ಸಲ್ಲಿಸಿ ಈ ಮೂವರು ಜೈಲಿನಲ್ಲೇ ಮನೆ ಊಟ ಸಿಗುವಂತೆ ವ್ಯವಸ್ಥೆ ಮಾಡಿಕೊಂಡಿದ್ದರು. ಪೊಲೀಸರ ಮೇಲ್ಮನವಿಯ ಬಳಿಕ ಪ್ರತಿದಿನ ಅಲ್ಲ ಬದಲಿಗೆ ವಾರಕ್ಕೆ ಒಮ್ಮೆ ಮನೆ ಊಟ ಕೊಡಬಹುದು, ವೈದ್ಯರು ಸಲಹೆ ಕೊಟ್ಟರೆ ದರ್ಶನ್ ಸೇರಿದಂತೆ ಪ್ರಕರಣದ ಎಲ್ಲ ಆರೋಪಿಗಳಿಗೂ ಮನೆ ಊಟ ಕೊಡಬಹುದು ಎಂದಿದ್ದರು. ಆದರೆ…

Read More

ಹೊಸ ವರ್ಷದ ದಿನ ಭಾರತಕ್ಕೆ ಬೆದರಿಕೆ ಹಾಕಿದ ಪಾಕಿಸ್ತಾನ – Kannada News | New Year Message Sparks Tension as Pakistan Army Chief Warns of Strong Retaliation

ಇಸ್ಲಾಮಾಬಾದ್, ಜನವರಿ 01: ಹೊಸ ವರ್ಷ(New Year)ಕ್ಕೆ ಪಾಕಿಸ್ತಾನವು ಶುಭಾಶಯ ತಿಳಿಸುವುದಕ್ಕಿಂತ ಬೆದರಿಕೆಯನ್ನೇ ಆರಿಸಿಕೊಂಡಿದೆ. ಭಾರತದ ಬಗೆಗಿನ ದ್ವೇಷ ಕಿಂಚಿತ್ತೂ ಕಡಿಮೆಯಾದಂತೆ ಗೋಚರಿಸುತ್ತಿಲ್ಲ. ಪಾಕಿಸ್ತಾನದ ಸೇನಾ ಮುಖ್ಯಸ್ಥ ಆಸಿಮ್ ಮುನೀರ್ ಪಾಕಿಸ್ತಾನವು ಹೊಸ ವರ್ಷವನ್ನು ಹೊಸ ಆಕ್ರಮಣಕಾರಿ ನಿಲುವಿನೊಂದಿಗೆ ಪ್ರಾರಂಭಿಸಿದೆ. ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್ ಅವರು ಭಾರತವನ್ನು ನೇರವಾಗಿ ಹೆಸರಿಸದೆ, ಪಾಕಿಸ್ತಾನದ ಪ್ರಾದೇಶಿಕ ಸಮಗ್ರತೆಯ ಧಕ್ಕೆ ತಂದರೆ ತೀಕ್ಷ್ಣ ಪ್ರತಿಕ್ರಿಯೆ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಪಾಕಿಸ್ತಾನ ತನ್ನ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯನ್ನು…

Read More