Headlines

ಎಸ್​. ಜಾನಕಿ ನಿಧನ: ಗಾನಕೋಗಿಲೆ ನೆನೆದು ದುಃಖಿತರಾದ ಶಾಸಕ ಜಿ.ಟಿ. ದೇವೇಗೌಡ – Kannada News | Tributes Pour In As Legendary Singer S. Janaki Passes Away; MLA GT Devegowda Remembers Her Legacy

ಮೈಸೂರು, ಜು.11: ಖ್ಯಾತ ಹಿನ್ನೆಲೆ ಗಾಯಕಿ, ಗಾನಕೋಗಿಲೆ ಎಸ್​. ಜಾನಕಿ ಅವರ ನಿಧನಕ್ಕೆ ಶಾಸಕ ಜಿ.ಟಿ. ದೇವೇಗೌಡ ಅವರು ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ. ಇಡೀ ರಾಷ್ಟ್ರದಲ್ಲಿ ಜನಪ್ರಿಯತೆ, ಪ್ರೀತಿ ಮತ್ತು ಗೌರವಕ್ಕೆ ಪಾತ್ರರಾಗಿದ್ದ ಎಸ್​. ಜಾನಕಿ ಅವರ ಅಗಲಿಕೆ ಕಲಾ ಲೋಕಕ್ಕೆ ತುಂಬಲಾರದ ನಷ್ಟ ಎಂದು ಅವರು ಬಣ್ಣಿಸಿದ್ದಾರೆ. ಸುಮಾರು 20ಕ್ಕೂ ಹೆಚ್ಚು ಭಾಷೆಗಳಲ್ಲಿ, 48 ಸಾವಿರಕ್ಕೂ ಅಧಿಕ ಗೀತೆಗಳನ್ನು ಹಾಡಿರುವ ಜಾನಕಿ ಅವರು ನಾಲ್ಕು ರಾಷ್ಟ್ರ ಪ್ರಶಸ್ತಿಗಳು ಸೇರಿದಂತೆ 28-30ಕ್ಕೂ ಹೆಚ್ಚು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಭಾರತ ದೇಶ ಕಂಡ ಅತ್ಯುನ್ನತ ಹಿನ್ನೆಲೆ ಗಾಯಕಿಯರಲ್ಲಿ ಅವರು ಒಬ್ಬರು. ಎಸ್​.ಪಿ. ಬಾಲಸುಬ್ರಹ್ಮಣ್ಯಂ ಅವರಂತೆ, ಎಸ್​. ಜಾನಕಿ ಅವರನ್ನು ಯಾರೂ ಮರೆಯಲು ಸಾಧ್ಯವಿಲ್ಲ ಎಂದು ದೇವೇಗೌಡರು ಹೇಳಿದರು. ಜಾನಕಿ ಅವರ ಆತ್ಮಕ್ಕೆ ದೇವರು ಶಾಂತಿ ನೀಡಲಿ ಎಂದು ಪ್ರಾರ್ಥಿಸಿದ ಶಾಸಕರು, ಅವರ ಕುಟುಂಬ ವರ್ಗ, ಚಲನಚಿತ್ರ ಕಲಾವಿದರು ಹಾಗೂ ಅಭಿಮಾನಿಗಳಿಗೆ ಈ ದುಃಖವನ್ನು ಸಹಿಸುವ ಶಕ್ತಿಯನ್ನು ಕರುಣಿಸಲಿ ಎಂದು ಕೋರಿದರು. ಮೈಸೂರಿನ ಬನ್ನೂರು ರಸ್ತೆಯಲ್ಲಿರುವ ತೋಟದ ಮನೆಯಲ್ಲಿ ಎಸ್​. ಜಾನಕಿ ಅವರನ್ನು ಎರಡು-ಮೂರು ಬಾರಿ ಭೇಟಿಯಾಗಿ ಊಟ-ತಿಂಡಿ ಹಂಚಿಕೊಂಡಿದ್ದನ್ನು ದೇವೇಗೌಡರು ಭಾವುಕರಾಗಿ ಸ್ಮರಿಸಿದರು. ಮೈಸೂರಿನ ಬಗ್ಗೆ ಜಾನಕಿ ಅವರಿಗೆ ಅಪಾರ ಪ್ರೀತಿ ಇತ್ತು ಎಂದು ಅವರು ತಿಳಿಸಿದರು.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *