Headlines

ಐಎಎಸ್ ಅಧಿಕಾರಿ ಎಂದು ನಂಬಿಸಿ ಕೋಟ್ಯಾಂತರ ರೂ. ವಂಚನೆ: ಚಿಕ್ಕಮಗಳೂರು ಮೂಲದ ಕಿಲಾಡಿ ಮಿಥುನ್ ಬೆಂಗಳೂರಿನಲ್ಲಿ ಅರೆಸ್ಟ್! – Kannada News | Fake IAS Officer Arrested in Bengaluru: Chikkamagaluru Man Conned Doctors and Businessmen of Crores

ಆಸ್ಪತ್ರೆಯಲ್ಲೇ ವೈದ್ಯರು ಮತ್ತು ನರ್ಸ್‌ಗಳ ಸಭೆ ನಡೆಸಿದ್ದ ಆರೋಪಿ ಮಿಥುನ್Image Credit source: tv9 ಬೆಂಗಳೂರು, ಏಪ್ರಿಲ್ 16: ತಾನು 2023ನೇ ಬ್ಯಾಚ್‌ನ ಐಎಎಸ್ ಅಧಿಕಾರಿ ಎಂದು ನಂಬಿಸಿ, ಸರ್ಕಾರಿ ಅಧಿಕಾರಿಗಳು ಮತ್ತು ಉದ್ಯಮಿಗಳಿಗೆ ಕೋಟ್ಯಂತರ ರೂಪಾಯಿ ವಂಚಿಸಿದ್ದ ಕಿಲಾಡಿ ಮಿಥುನ್ ಎಂಬಾತನನ್ನು ಬೆಂಗಳೂರಿನ (Bangalore) ಅಮೃತಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಬಂಧಿತ ವಂಚಕ ಚಿಕ್ಕಮಗಳೂರು (Chikkamagaluru) ಜಿಲ್ಲೆಯ ಕಡೂರು ಮೂಲದವನಾಗಿದ್ದು, ಈತನ ಬಲೆಗೆ ಸರ್ಕಾರಿ ಆಸ್ಪತ್ರೆಯ ಜಿಲ್ಲಾ ಸರ್ಜನ್ ಕೂಡ ಬಿದ್ದಿರುವುದು ಬೆಳಕಿಗೆ ಬಂದಿದೆ. ವಂಚನೆಯ ಜಾಲ…

Read More

ಟ್ರಂಪ್ ಹತ್ಯೆ ಯತ್ನ: ಶ್ವೇತಭವನದಲ್ಲಿ ಗುಂಡು ಹಾರಿಸಿದ ಶೂಟರ್ ವಿರುದ್ಧ ಅಧಿಕೃತ ದೂರು ದಾಖಲು, ದೋಷಿ ಸಾಬೀತಾದರೆ ಜೀವಾವಧಿ ಶಿಕ್ಷೆ – Kannada News | Trump Assassination Attempt: Cole Allen Charged, Faces Life for White House Dinner Attack

ವಾಷಿಂಗ್ಟನ್,ಏಪ್ರಿಲ್ 28: ಶ್ವೇತಭವನದ ಪತ್ರಿಕಾ ಭೋಜನಕೂಟದ ವೇಳೆ ಗುಂಡಿನ ದಾಳಿ(Firing) ನಡೆಸಿ ಸಂಚಲನ ಮೂಡಿಸಿದ್ದ ಕ್ಯಾಲಿಫೋರ್ನಿಯಾದ 31 ವರ್ಷದ ಕೋಲ್ ತೋಮಸ್ ಅಲೆನ್ ವಿರುದ್ಧ ಅಮೆರಿಕದ ಫೆಡರಲ್ ನ್ಯಾಯಾಲಯವು ‘ಅಧ್ಯಕ್ಷರ ಹತ್ಯೆ ಯತ್ನ’ ಸೇರಿದಂತೆ ಹಲವು ಗಂಭೀರ ಆರೋಪಗಳನ್ನು ಹೊರಿಸಿದೆ. ಈ ಅಪರಾಧಗಳು ಸಾಬೀತಾದಲ್ಲಿ ಆತನಿಗೆ ಜೀವಾವಧಿ ಶಿಕ್ಷೆ ವಿಧಿಸುವ ಸಾಧ್ಯತೆಯಿದೆ ಎಂದು ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ. ಸೋಮವಾರ ವಾಷಿಂಗ್ಟನ್‌ನ ಫೆಡರಲ್ ನ್ಯಾಯಾಲಯಕ್ಕೆ ಅಲೆನ್‌ನನ್ನು ಹಾಜರುಪಡಿಸಲಾಯಿತು. ಹಂಗಾಮಿ ಅಟಾರ್ನಿ ಜನರಲ್ ಟಾಡ್ ಬ್ಲಾಂಚೆ ಅವರ ಪ್ರಕಾರ,…

Read More

‘10 ಆನೆ ದಂತ, 13 ದಂತದ ಮೂರ್ತಿ ನನ್ನ ಬಳಿ ಇವೆ’: ಒಪ್ಪಿಕೊಂಡ ನಟ ಮೋಹನ್​ಲಾಲ್ – Kannada News | Mohanlal Declares Elephant Tusks Ivory Idols to Kerala Forest Department Amnesty

ಮಲಯಾಳಂ ಚಿತ್ರರಂಗದ ಸೂಪರ್ ಸ್ಟಾರ್ ಮೋಹನ್‌ಲಾಲ್ (Mohanlal) ಅವರು ತಮ್ಮ ಬಳಿಯಿರುವ 10 ಆನೆ ದಂತಗಳು ಮತ್ತು ಆನೆದಂತದಿಂದ ಮಾಡಿದ 13 ಮೂರ್ತಿಗಳನ್ನು ಕೇರಳ ಅರಣ್ಯ ಇಲಾಖೆಗೆ ಅಧಿಕೃತವಾಗಿ ಘೋಷಿಸಿದ್ದಾರೆ. ಕೇರಳ ಹೈಕೋರ್ಟ್ 2025ರಲ್ಲಿ ಮೋಹನ್‌ಲಾಲ್ ಅವರ ಬಳಿಯಿದ್ದ ಆನೆ ದಂತಗಳ (Elephant Tusks) ಮಾಲೀಕತ್ವದ ಪ್ರಮಾಣಪತ್ರಗಳನ್ನು ರದ್ದುಗೊಳಿಸಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ಈ ಇಡೀ ಪ್ರಕರಣವು 2011ರ ಆದಾಯ ತೆರಿಗೆ ಇಲಾಖೆಯ ದಾಳಿಯ ಸಂದರ್ಭದಲ್ಲಿ ಬೆಳಕಿಗೆ ಬಂದಿತ್ತು. 2011ರಲ್ಲಿ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು…

Read More

ಎಲುಬುಗಳಲ್ಲಿ ನೋವು ಕಂಡುಬರುವುದಕ್ಕೆ ಈ ವಿಟಮಿನ್ ಕೊರತೆಯೇ ಕಾರಣ? ಇದನ್ನು ತಡೆಗಟ್ಟಲು ಸಿಂಪಲ್ ಟ್ರಿಕ್ ಇಲ್ಲಿದೆ – Kannada News | Vitamin Deficiencies That Cause Bone Pain: What You Need to Know

ಇತ್ತೀಚಿನ ದಿನಗಳಲ್ಲಿ ಎಲುಬು ನೋವು ಮತ್ತು ದೇಹದ ದುರ್ಬಲತೆ ಸಮಸ್ಯೆಗಳು ಅನೇಕರಲ್ಲಿ ಹೆಚ್ಚಾಗಿ ಕಾಣಿಸುತ್ತಿವೆ. ಹಲವರು ಇದನ್ನು ಸಾಮಾನ್ಯ ದಣಿವು ಅಥವಾ ವಯಸ್ಸಿನ ಪರಿಣಾಮ ಎಂದು ನಿರ್ಲಕ್ಷಿಸುತ್ತಾರೆ. ಆದರೆ ವೈದ್ಯರ ಪ್ರಕಾರ, ದೇಹದಲ್ಲಿ ಅಗತ್ಯ ವಿಟಮಿನ್ (Vitamin Deficiencies) ಮತ್ತು ಖನಿಜಗಳ ಕೊರತೆ ಕೂಡ ಎಲುಬು ನೋವಿಗೆ ಪ್ರಮುಖ ಕಾರಣವಾಗಬಹುದು. ತಜ್ಞರ ಪ್ರಕಾರ, ವಿಶೇಷವಾಗಿ ವಿಟಮಿನ್ ಡಿ ಕೊರತೆಯು ಎಲುಬು ನೋವಿಗೆ ಪ್ರಮುಖ ಕಾರಣವಾಗಿದೆ. ವಿಟಮಿನ್ ಡಿ ದೇಹದಲ್ಲಿ ಕ್ಯಾಲ್ಸಿಯಂ ಪೋಷಣೆಗೆ ಸಹಾಯ ಮಾಡುತ್ತದೆ. ಇದು ಎಲುಬುಗಳನ್ನು…

Read More

ಐಪಿಎಲ್​​ನಲ್ಲಿ ಹಿಂದೆಂದೂ ಕಾಣದ ಭರ್ಜರಿ ದಾಖಲೆ ಬರೆದ ವಿರಾಟ್ ಕೊಹ್ಲಿ

ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ವಿರಾಟ್ ಕೊಹ್ಲಿ (Virat Kohli) ಹೊಸ ದಾಖಲೆ ಬರೆದಿದ್ದಾರೆ. ಅದು ಕೂಡ ಸತತವಾಗಿ ರನ್​ ರಾಶಿ ಪೇರಿಸುವ ಮೂಲಕ. ಇದರೊಂದಿಗೆ ಇಂತಹದೊಂದು ದಾಖಲೆ ಬರೆದ ಮೊದಲ ದಾಂಡಿಗ ಎಂಬ ಹೆಗ್ಗಳಿಕೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. (PC: IPL) ಧರ್ಮಶಾಲಾದ ಹೆಚ್​ಪಿಸಿಎ ಮೈದಾನದಲ್ಲಿ ನಡೆದ ಗುಜರಾತ್ ಟೈಟಾನ್ಸ್​ ವಿರುದ್ಧ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಆರಂಭಿಕನಾಗಿ ಕಣಕ್ಕಿಳಿದ ವಿರಾಟ್ ಕೊಹ್ಲಿ 25 ಎಸೆತಗಳಲ್ಲಿ 43 ರನ್​ ಬಾರಿಸಿದ್ದರು. ಈ ಇಪ್ಪತ್ತೈದು ರನ್​ಗಳೊಂದಿಗೆ ಕಿಂಗ್ ಕೊಹ್ಲಿ ಈ ಬಾರಿಯ ಐಪಿಎಲ್​ನಲ್ಲೂ…

Read More

Karnataka Weather: ನಾಲ್ಕು ಜಿಲ್ಲೆಗಳಲ್ಲಿ ನಾಳೆ ಚಳಿ ಅಬ್ಬರ, ಹೇಗಿರಲಿದೆ ಕರಾವಳಿ ವಾತಾವರಣ? – Kannada News | Tomorrow Weather: Severe cold wave expected in Four Districts

ಬೆಂಗಳೂರು, ಡಿಸೆಂಬರ್​​ 18: ಉತ್ತರ ಮತ್ತು ಕಲ್ಯಾಣ ಕರ್ನಾಟಕ ಭಾಗದ ಬಹುತೇಕ ಜಿಲ್ಲೆಗಳಲ್ಲಿ ನಾಳೆಯೂ ಚಳಿ ಹೆಚ್ಚಿರುವ ಸಾಧ್ಯತೆ ಇದೆ. ಆ ಪೈಕಿ ಬೀದರ್​​, ಕಲಬುರಗಿ, ರಾಯಚೂರು ಮತ್ತು ಯಾದಗಿರಿಯಲ್ಲಿ ಹೆಚ್ಚಿನ ಪ್ರಮಾಣದ ಶೀತಗಾಳಿ ಇರಲಿದೆ. ಉಳಿದಂತೆ ದಕ್ಷಿಣ ಒಳನಾಡು ಮತ್ತು ಕರಾವಳಿಯ ಬಹುತೇಕ ಜಿಲ್ಲೆಗಳಲ್ಲಿ ಒಣಹವೆ ಅಥವಾ ಸಾಧಾರಣ ಚಳಿಯ ವಾತಾವರಣ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ದಕ್ಷಿಣ ಒಳನಾಡು ಜಿಲ್ಲೆಗಳಾದ ಮೈಸೂರು, ಮಂಡ್ಯ ಮತ್ತು ಹಾಸನದಲ್ಲಿ ನಾಳೆ ಒಣ ಹಾಗೂ ಚಳಿಯ ವಾತಾವರಣ…

Read More

National Girl Child Day 2026: ರಾಷ್ಟ್ರೀಯ ಹೆಣ್ಣು ಮಕ್ಕಳ ದಿನವನ್ನು ಆಚರಿಸವುದರ ಹಿಂದಿನ ಉದ್ದೇಶವೇನು? – Kannada News | National Girl Child Day 2026: What is the purpose behind celebrating National Girl Child Day?

ಇಂದಿಗೂ ಈ ಪುರುಷ ಪ್ರಧಾನ ಸಮಾಜದಲ್ಲಿಹೆಣ್ಣಿನ ಬಗ್ಗೆ ದ್ವಂದ್ವ ಮನೋಭಾವನೆಯಿದೆ. ಸಮಾಜದಲ್ಲಿ ಹೆಣ್ಣಿಗೆ ಪರುಷರಿಗೆ ಸಿಕ್ಕಷ್ಟು ಪ್ರಾಧಾನ್ಯತೆ ಸಿಗುತ್ತಿಲ್ಲ, ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ, ತಾತ್ಸಾರ ನಿಂತಿಲ್ಲ. ಒಂದಲ್ಲಾ ಒಂದು ರೀತಿಯಲ್ಲಿ ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ ನಿಂತಿಲ್ಲ, ಅವರಿಗೆ ಸಮಾನ ಅವಕಾಶಗಳು ಸಿಗುತ್ತಿಲ್ಲ. ಈ ನಿಟ್ಟಿನಲ್ಲಿ ಹೆಣ್ಣು ಮಕ್ಕಳು (Girl Child) ಎದುರಿಸುತ್ತಿರುವ ಅಸಮಾನತೆಯ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು, ಹೆಣ್ಣು ಮಕ್ಕಳ ಹಕ್ಕುಗಳು, ಶಿಕ್ಷಣ, ಆರೋಗ್ಯದ ಪ್ರಾಮುಖ್ಯತೆಯನ್ನು ಉತ್ತೇಜಿಸಲು ಪ್ರತಿವರ್ಷ ಜನವರಿ 24 ರಂದು…

Read More

ತುಪ್ಪದ ಟ್ಯಾಂಕರ್ ಪಲ್ಟಿ, ತಿರುಪತಿ ಲಡ್ಡು ತಯಾರಿಕೆಗೆ ಅಡಚಣೆಯಾಗುತ್ತಾ? ಆಡಳಿತ ಹೇಳಿದ್ದೇನು?

ತಿರುಮಲ, ಮಾರ್ಚ್​ 10: ಕಡಪ ಜಿಲ್ಲೆಯಲ್ಲಿ ತಿರುಮಲ ತಿರುಪತಿ(Tirupati) ದೇವಸ್ಥಾನಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿಯಾಗಿತ್ತು. ಇದರಿಂದಾಗಿ ತಿರುಪತಿ ತಿಮ್ಮಪ್ಪನ ದೇವಸ್ಥಾನದಲ್ಲಿ ಲಡ್ಡು ತಯಾರಿಕೆಗೆ ಅಡಣೆಯುಂಟಾಗಿದೆ ಎನ್ನುವ ಸುದ್ದಿ ಹರಡಿತ್ತು. ಇದೀಗ ದೇವಸ್ಥಾನದ ಆಡಳಿತ ಮಂಡಳಿ ಸ್ಪಷ್ಟನೆ ನೀಡಿದೆ. ಸುಳ್ಳು ಸುದ್ದಿಯನ್ನು ನಂಬಬೇಡಿ, ಶ್ರೀವಾರಿ ಲಡ್ಡು ಪ್ರಸಾದ ತಯಾರಿಸಲು ಹಸುವಿನ ತುಪ್ಪದ ಕೊರತೆ ಇಲ್ಲ ಎಂದು ಹೇಳಿದೆ. ಟ್ಯಾಂಕರ್ ದೇವಾಲಯಕ್ಕೆ ಮೀಸಲಾದ ತುಪ್ಪವನ್ನು ಸಾಗಿಸುತ್ತಿತ್ತು ಮತ್ತು ಅದರ ಸೋರಿಕೆಯಿಂದಾಗಿ ಪ್ರಸಿದ್ಧ ಪ್ರಸಾದ ತಯಾರಿಕೆಯ ಮೇಲೆ ಪರಿಣಾಮ ಬೀರಿದೆ…

Read More

ಜಮೀನಿನ ಕಾಗದಗಳು ಮಿಸ್ಸಿಂಗ್, ನಿಮ್ಮ ಮೆಮೊರಿ ಸುಧಾರಿಸಿಕೊಳ್ಳಿ ಎಂದು ಅಧಿಕಾರಿಯ ಟೇಬಲ್ ಮೇಲೆ ಬಾದಾಮಿ ಎಸೆದ ವ್ಯಕ್ತಿ – Kannada News | Almond Protest: Man Targets Officer Over Missing File in Unusual Way

ಛತ್ತೀಸ್​ಗಢ, ಏಪ್ರಿಲ್ 19: ಸರ್ಕಾರಿ ಕಚೇರಿಗಳಲ್ಲಿ ಫೈಲ್ ಕಳೆದುಹೋಗಿದೆ ಅಥವಾ ನಾಳೆ ಬನ್ನಿ ಎಂಬ ಮಾತುಗಳು ಅದೆಷ್ಟು ಜನಸಾಮಾನ್ಯರ ನಿದ್ದೆ ಗೆಡಿಸಿವೆಯೋ ಗೊತ್ತಿಲ್ಲ. ಆದರೆ ಬಿಲಾಸ್‌ಪುರದ ಟಿಫ್ರಾ ಹೌಸಿಂಗ್ ಬೋರ್ಡ್ ಕಚೇರಿಯಲ್ಲಿ ತರುಣ್ ಸಾಹು ಎಂಬ ಯುವಕ ಈ ನಿರ್ಲಕ್ಷ್ಯಕ್ಕೆ ನೀಡಿದ ಉತ್ತರ ಮಾತ್ರ ಅತ್ಯಂತ ಸೃಜನಶೀಲ ಮತ್ತು ಖಾರವಾಗಿತ್ತು. ತರುಣ್ ಸಾಹು ಒಂದು ವರ್ಷದ ಹಿಂದೆ ಮ ಒಂದು ಫ್ಲಾಟ್ ಖರೀದಿಸಿದ್ದರು. ಆಸ್ತಿಯ ಮಾಲೀಕತ್ವ ಅವರ ಹೆಸರಿಗೆ ಬದಲಾಗಬೇಕಾದರೆ (Mutation) ಹೌಸಿಂಗ್ ಬೋರ್ಡ್‌ನ ಫೈಲ್ ಅತ್ಯಗತ್ಯ….

Read More

ತಮಿಳುನಾಡಿನಲ್ಲಿ ಅಧಿಕಾರ ಹಸ್ತಾಂತರದ ಪರ್ವ: ಸಚಿವರ ಕೊಠಡಿಗಳು ಖಾಲಿ ಖಾಲಿ, ಬಿರುಸಿನ ಚಟುವಟಿಕೆ – Kannada News | Tamil Nadu Power Transition: Stalin Resigns, Secretariat Buzzes for New Govt

ಚೆನ್ನೈ, ಮೇ 05: ತಮಿಳುನಾಡು(Tamil Nadu) ರಾಜಕೀಯದಲ್ಲಿ ಒಂದು ಯುಗಾಂತ್ಯವಾಗಿದ್ದು, ಡಿಎಂಕೆ ನಾಯಕ ಎಂ.ಕೆ. ಸ್ಟಾಲಿನ್  ಮುಖ್ಯಮಂತ್ರಿ ಸ್ಥಾನಕ್ಕೆ ಅಧಿಕೃತವಾಗಿ ರಾಜೀನಾಮೆ ನೀಡಿದ್ದಾರೆ. ಈ ಬೆಳವಣಿಗೆಯ ಬೆನ್ನಲ್ಲೇ ಚೆನ್ನೈನ ಐತಿಹಾಸಿಕ ಫೋರ್ಟ್ ಸೇಂಟ್ ಜಾರ್ಜ್ ಸಚಿವಾಲಯದಲ್ಲಿ ಹೊಸ ಬದಲಾವಣೆಯ ಗಾಳಿ ಬೀಸುತ್ತಿದೆ. ಸ್ಟಾಲಿನ್ ಅವರ ರಾಜೀನಾಮೆ ಅಂಗೀಕಾರವಾಗುತ್ತಿದ್ದಂತೆ, ಸಚಿವಾಲಯದ ಸಿಬ್ಬಂದಿಗಳು ಸಚಿವರ ಕೊಠಡಿಗಳನ್ನು ಖಾಲಿ ಮಾಡುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಕಳೆದ ಐದು ವರ್ಷಗಳಿಂದ ಸಚಿವರ ಕಚೇರಿಗಳನ್ನು ಅಲಂಕರಿಸಿದ್ದ ಸ್ಟಾಲಿನ್ ಹಾಗೂ ಇತರ ನಾಯಕರ ಭಾವಚಿತ್ರಗಳನ್ನು ಅಧಿಕಾರಿಗಳು ಗೌರವಪೂರ್ವಕವಾಗಿ…

Read More