Headlines

Horoscope Today 16th​​ March​: ಇಂದು ಈ ರಾಶಿಯವರ ಅಡೆತಡೆಗಳು ನಿವಾರಣೆ

ಟಿವಿ9​​ ಡಿಜಿಟಲ್ ವಾಹಿನಿಯಲ್ಲಿ ಪ್ರಸಾರವಾದ ದಿನಭವಿಷ್ಯ ಕಾರ್ಯಕ್ರಮದಲ್ಲಿ ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು ಮಾರ್ಚ್​ 1​​​​6, ಸೋಮವಾರದ ದ್ವಾದಶ ರಾಶಿಗಳ ಫಲಾಫಲಗಳನ್ನು ವಿವರಿಸಿದ್ದಾರೆ. ಈ ದಿನ ವಿಶ್ವಾವಸುನಾಮ ಸಂವತ್ಸರ, ಉತ್ತರಾಯಣ, ಪಾಲ್ಗುಣ ಮಾಸ, ಶಿಶಿರ ಋತು, ಕೃಷ್ಣ ಪಕ್ಷ ದ್ವಾದಶಿ, ಧನಿಷ್ಠ ನಕ್ಷತ್ರ, ಶಿವಯೋಗ ಮತ್ತು ತೈತಲ ಕರಣವನ್ನು ಒಳಗೊಂಡಿದೆ. ಬೆಳಿಗ್ಗೆ 7 ಗಂಟೆ 56 ನಿಮಿಷದಿಂದ 9 ಗಂಟೆ 27 ನಿಮಿಷದವರೆಗೆ ರಾಹುಕಾಲ ಇರುತ್ತದೆ. ಹಾಗೆಯೇ 9 ಗಂಟೆ 27 ನಿಮಿಷದಿಂದ 10…

Read More

IPL 2026: ಈ ಐಪಿಎಲ್‌ನಲ್ಲಿ ರೋಹಿತ್ ‘ಇಂಪ್ಯಾಕ್ಟ್’ ಹೇಗಿರಲಿದೆ? ಸ್ಪಷ್ಟನೆ ನೀಡಿದ ಹೆಡ್​ ಕೋಚ್

2026 ರ ಐಪಿಎಲ್ ಸಮೀಪಿಸುತ್ತಿದ್ದು, ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿಯ ಅಭಿಮಾನಿಗಳು ಈ ಚುಟುಕು ಮಾದರಿಯಲ್ಲಿ ಇವರಿಬ್ಬರ ಆಟವನ್ನು ಕಣ್ತುಂಬಿಕೊಳ್ಳಲು ಕಾಯುತ್ತಿದ್ದಾರೆ. ಇದಕ್ಕೆ ಕಾರಣ, ಇವರಿಬ್ಬರು ಈ ಮಾದರಿಯಲ್ಲಿ ಆಡುವುದು ಐಪಿಎಲ್‌ನಲ್ಲಿ ಮಾತ್ರ. ಹೀಗಾಗಿ ಈ ಇಬ್ಬರು ದಿಗ್ಗಜರು ವರ್ಷದ ನಂತರ ಟಿ20 ಪಂದ್ಯವನ್ನಾಡಲು ಸಜ್ಜಾಗಿದ್ದಾರೆ. ಅದರಲ್ಲೂ ಹಿಟ್​ಮ್ಯಾನ್ ರೋಹಿತ್ ಶರ್ಮಾ ಈ ಲೀಗ್​ಗಾಗಿ ಸಾಕಷ್ಟು ಬೆವರು ಹರಿಸುತ್ತಿದ್ದು, ಅದರ ವಿಡಿಯೋಗಳು ಸಹ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಆದರೆ ಇದೆಲ್ಲದರ ನಡುವೆ ಈ ಬಾರಿಯ…

Read More

ಇಸ್ರೇಲ್ ಮೇಲೆ ಇರಾನ್ ಕ್ಷಿಪಣಿ ದಾಳಿ ಬೆನ್ನಲ್ಲೇ ಶಾಂತಿ ಮಾತುಕತೆಗೆ ಮುಂದಾದ ಟ್ರಂಪ್ – Kannada News

ಟೆಲ್ ಅವಿವ್, ಜೂನ್ 08: ಮಧ್ಯಪ್ರಾಚ್ಯದಲ್ಲಿ ಇತ್ತೀಚೆಗೆ ಉಂಟಾಗಿರುವ ಪ್ರಾದೇಶಿಕ ಉದ್ವಿಗ್ನತೆಯ ನಡುವೆಯೂ ಜಾಗತಿಕ ರಾಜತಾಂತ್ರಿಕ ರಂಗದಲ್ಲಿ ಶಾಂತಿ ಮತ್ತು ಕದನವಿರಾಮವನ್ನು ಮರಳಿ ಸ್ಥಾಪಿಸಲು ಅತ್ಯಂತ ಬಲವಾದ ಪ್ರಯತ್ನಗಳು ಆರಂಭಗೊಂಡಿವೆ. ಏಪ್ರಿಲ್ ಕದನ ವಿರಾಮದ ಬಳಿಕ ಇರಾನ್ ಸೇನೆಯು ಇಸ್ರೇಲ್(Israel) ಮೇಲೆ ಕ್ಷಿಪಣಿಗಳನ್ನು ಹಾರಿಸಿದ ಬೆನ್ನಲ್ಲೇ ವಿಶ್ವಸಂಸ್ಥೆ ಹಾಗೂ ಪ್ರಮುಖ ಜಾಗತಿಕ ಶಕ್ತಿಗಳು ಪರಿಸ್ಥಿತಿಯನ್ನು ತಿಳಿಗೊಳಿಸಲು ತಕ್ಷಣವೇ ಪ್ರಯತ್ನಗಳನ್ನು ಆರಂಭಿಸಿವೆ. ಏಪ್ರಿಲ್ ಆರಂಭದಲ್ಲಿ ದುರ್ಬಲ ಕದನ ವಿರಾಮ ಜಾರಿಗೆ ಬಂದ ನಂತರ ಇರಾನ್ ಸೇನೆಯು ಇಸ್ರೇಲ್ ಅನ್ನು…

Read More

ದೀರ್ಘಾವಧಿ ಸಿಎಂ: ದೇವರಾಜ ಅರಸು ದಾಖಲೆ ಮುರಿಯುತ್ತಿರುವ ಬಗ್ಗೆ ಸಿದ್ದರಾಮಯ್ಯ ಹೇಳಿದ್ದಿಷ್ಟು – Kannada News | Siddaramaiah Reacts about Breaks Devaraj urs record of karnatakas long term chief minister

ಮೈಸೂರು, (ಜನವರಿ 05): ಕರ್ನಾಟಕದ ದೀರ್ಘಾವಧಿ ಸಿಎಂ ಎಂಬ ಹೆಗ್ಗಳಿಕೆಗೆ ಸಿದ್ದರಾಮಯ್ಯ (Siddaramaiah) ಅವರು ಪಾತ್ರರಾಗಲು ಕೇವಲ ಒಂದೇ ದಿನ ಬಾಕಿ ಇದ್ದು, ದೇವರಾಜ ಅರಸು ಅವರ ದಾಖಲೆಯನ್ನು ನಾಳೆ (ಜನವರಿ 06) ಮುರಿಯಲಿದ್ದಾರೆ. 7 ವರ್ಷ 239 ದಿನಗಳ ಕಾಲ ಡಿ. ದೇವರಾಜ ಅರಸು (D Devaraj urs )ಕರ್ನಾಟಕದ ಸಿಎಂ‌ ಆಗಿದ್ದ‌ರು. ಇದೀಗ ಈ ದಾಖಲೆಯನ್ನು ನಾಳೆ ಸಿದ್ದರಾಮಯ್ಯ ಮುರಿಯಲಿದ್ದಾರೆ. ಇನ್ನು ಈ ಬಗ್ಗೆ ಸ್ವತಃ ಸಿಎಂ ಸಿದ್ದರಾಮಯ್ಯ ಇಂದು (ಜನವರಿ 05) ಮಾಧ್ಯಮಗಳಿಗೆ…

Read More

ಫ್ಲ್ಯಾಟ್, ಚಿನ್ನದ ವ್ಯವಹಾರದಲ್ಲಿ ಉದ್ಯಮಿಗೆ ಕೋಟಿ ಕೋಟಿ ದೋಖಾ! ಶೆಟ್ಟಿ ದಂಪತಿ ಮೇಲೆ ಕೇಸ್ – Kannada News | Udupi Flat Gold Fraud Case Against Couple

ಸುಹಾಸಿನಿ ಶೆಟ್ಟಿ ಹಾಗೂ ಅವರ ಪತಿ ಪುನೀತ್ ಶೆಟ್ಟಿ ಉಡುಪಿ, ಫೆಬ್ರವರಿ 11: ಹರಾಜಿನಲ್ಲಿ ಫ್ಲ್ಯಾಟ್ ಮತ್ತು ಚಿನ್ನದ ಖರೀದಿಸಿ ಕೊಡುವುದಾಗಿ ನಂಬಿಸಿ ಮುಂಬೈ ಮೂಲದ ಉದ್ಯಮಿ ಮಮತಾ ಶೆಟ್ಟಿಗೆ ಸುಮಾರು 4.78 ಕೋಟಿ ರೂ. ವಂಚನೆ ನಡೆಸಿರುವ ಆರೋಪ ಉಡುಪಿಯ (Udupi) ದಂಪತಿ ವಿರುದ್ಧ ಕೇಳಿಬಂದಿದೆ. ಈ ಸಂಬಂಧ ಸುಹಾಸಿನಿ ಶೆಟ್ಟಿ ಹಾಗೂ ಅವರ ಪತಿ ಪುನೀತ್ ಶೆಟ್ಟಿ ವಿರುದ್ಧ ಪ್ರಕರಣ ದಾಖಲಾಗಿದೆ. ಎರಡು ವರ್ಷಗಳಲ್ಲಿ ಹಂತ ಹಂತವಾಗಿ ವಂಚನೆ ಮಮತಾ ಶೆಟ್ಟಿಗೆ ದೂರದ ಸಂಬಂಧಿಯಾಗಿರುವ…

Read More

ಧರ್ಮಸ್ಥಳ ಪ್ರಕರಣ: ಸಿಕ್ಕ 7 ಬುರುಡೆಗಳ ರಹಸ್ಯ ಪತ್ತೆಯೇ ಎಸ್​​ಐಟಿ ಅಧಿಕಾರಿಗಳಿಗೀಗ ಸವಾಲು – Kannada News | Dharmasthala Skull Case: Decoding Banglegudde Skull Mystery Remains Biggest Challenge for SIT; Probe Team to Use Isotope Analysis

ಧರ್ಮಸ್ಥಳದಲ್ಲಿ ನಡೆದಿದ್ದ ಉತ್ಖನನ ಕಾರ್ಯ (ಫೈಲ್​​ ಚಿತ್ರ)Image Credit source: PTI ಮಂಗಳೂರು, ಜೂನ್​​ 21: ಧರ್ಮಸ್ಥಳ ಬುರುಡೆ ಪ್ರಕರಣ ಮತ್ತೆ ಮುನ್ನೆಲೆಗೆ ಬಂದಿದ್ದು, ನಟ ಪ್ರಕಾಶ್​​ ರಾಜ್​​ ಹೆಸರು ಕೂಡ ಇದರಲ್ಲಿ ತಳುಕಿಹಾಕಿಕೊಂಡಿರುವ ವಿಚಾರ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಈ ನಡುವೆ ಬಂಗ್ಲೆಗುಡ್ಡೆ ಬುರುಡೆ ರಹಸ್ಯ ಪತ್ತೆಗೆ ಎಸ್ಐಟಿ ಹರಸಾಹಸ ಪಡುತ್ತಿದ್ದು, ಫೈನಲ್ ರಿಪೋರ್ಟ್ ಸಲ್ಲಿಸಲು ಏಳು ಬುರುಡೆಗಳ ಮೂಲ ಪತ್ತೆಯೇ ಸವಾಲಾಗಿ ಮಾರ್ಪಟ್ಟಿದೆ. ಹೀಗಾಗಿ ಐಸೋಟೋಪ್‌ ಎನಾಲಿಸಿಸ್​​ ತಂತ್ರಜ್ಞಾನ ಬಳಸಿ ಬುರುಡೆಗಳ ಬಗ್ಗೆ ಮಾಹಿತಿ…

Read More

ಬಿಡುಗಡೆ ಆಯ್ತು ‘ಸ್ಪೈಡರ್ ಮ್ಯಾನ್’ ಟ್ರೈಲರ್, ಗೆಳೆಯರೇ ಈಗ ಶತ್ರುಗಳು – Kannada News | Spiderman Brand new day movie trailer released

ಹೊಸ ‘ಸ್ಪೈಡರ್​ಮ್ಯಾನ್’ (Spiderman) ಸಿನಿಮಾ ಬಿಡುಗಡೆಗೆ ರೆಡಿಯಾಗಿದೆ. ಸಿನಿಮಾಕ್ಕೆ ‘ಸ್ಪೈಡರ್ ಮ್ಯಾನ್: ಬ್ರ್ಯಾಂಡ್ ನ್ಯೂ ಡೇ’ ಎಂದು ಹೆಸರಿಡಲಾಗಿದ್ದು, ಸಿನಿಮಾದ ಎರಡನೇ ಟ್ರೈಲರ್ ಇದೀಗ ಬಿಡುಗಡೆಯಾಗಿದೆ. ಈ ಹಿಂದಿನ ‘ಸ್ಪೈಡರ್​​ಮ್ಯಾನ್: ನೋ ವೇ ಹೋಮ್​’ ಸಿನಿಮಾನಲ್ಲಿ ಸ್ಪೈಡರ್​​ಮ್ಯಾನ್ ಅನ್ನು ಇಡೀ ಜಗತ್ತೇ ಮರೆತು ಹೋಗುತ್ತದೆ. ಅವನ ಗೆಳೆಯರು, ಕುಟುಂಬದವರು ಎಲ್ಲರೂ ಸ್ಪೈಡರ್​​ಮ್ಯಾನ್ ಇದ್ದನೆಂಬುದನ್ನೇ ಮರೆತಿದ್ದಾರೆ. ಹಾಗಾಗಿ ಇದೀಗ ‘ಸ್ಪೈಡರ್​​ಮ್ಯಾನ್​’ ಒಂಟಿಯಾಗಿದ್ದಾನೆ. ಅವನಿಗೆ ಗೆಳೆಯರಿಲ್ಲ, ಅವನ ಗರ್ಲ್​​ಫ್ರೆಂಡ್ ಸಹ ಬೇರೊಬ್ಬನ ಜೊತೆಗಿದ್ದಾಳೆ. ಇದೀಗ ಬಿಡುಗಡೆ ಆಗಿರುವ ಟ್ರೈಲರ್ ನೋಡಿದರೆ…

Read More

ನವೆಂಬರ್​ನಲ್ಲಿ 0.7 ಪ್ರತಿಶತ ಇದ್ದ ಹಣದುಬ್ಬರ ಡಿಸೆಂಬರ್​ನಲ್ಲಿ ಶೇ. 1.3ಕ್ಕೆ ಏರಿಕೆ – Kannada News | Retail Inflation in India rises to 1.33pc in 2025 December

ನವದೆಹಲಿ, ಜನವರಿ 12: ಭಾರತದ ರೀಟೇಲ್ ಹಣದುಬ್ಬರ (Inflation) ಡಿಸೆಂಬರ್ ತಿಂಗಳಲ್ಲಿ ಬಹುತೇಕ ಎರಡು ಪಟ್ಟು ಹೆಚ್ಚಿದೆ. ನವೆಂಬರ್​ನಲ್ಲಿ ಶೇ. 0.71 ಇದ್ದ ಬೆಲೆ ಏರಿಕೆ ಮಟ್ಟ ಡಿಸೆಂಬರ್​ನಲ್ಲಿ 1.33 ಪ್ರತಿಶತ ಆಗಿದೆ. ಕಳೆದ ಮೂರು ತಿಂಗಳಲ್ಲೇ ಡಿಸೆಂಬರ್​ನ ಹಣದುಬ್ಬರ ಗರಿಷ್ಠ ಮಟ್ಟ ಎನಿಸಿದೆ. ಆದರೂ ಕೂಡ ಈ ದರವು ಆರ್​ಬಿಐ ತಾಳಿಕೆ ಮಿತಿಗಿಂತ ಕಡಿಮೆ ಇದೆ. ಮುಂಬರುವ ತಿಂಗಳುಗಳಲ್ಲಿ ಹಣದುಬ್ಬರವು ಮತ್ತಷ್ಟು ಮೇಲೇರುವ ಸಾಧ್ಯತೆ ಇದೆ. ಡಿಸೆಂಬರ್ ತಿಂಗಳಲ್ಲಿ ಅಧಿಕ ಹಣದುಬ್ಬರಕ್ಕೆ ಕಾರಣವಾಗಿದ್ದು ತರಕಾರಿ, ಮಾಂಸ,…

Read More

‘ತ್ರಿಷಾ ಮನೆಯಲ್ಲಿ ಬಾಂಬ್ ಇಟ್ಟಿದ್ದೇವೆ, ಇನ್ನೇನು ಸ್ಫೋಟ ಗೊಳ್ಳುತ್ತೆ’ – Kannada News | Trisha’s Chennai Home Bomb Threat: Police Probe Fake Call, Fans Relieved

ನಾಯಕಿ ತ್ರಿಷಾ (Trisha) ಮನೆಗೆ ಬಂದಿರುವ ಬಾಂಬ್ ಬೆದರಿಕೆ ಸಂಚಲನ ಸೃಷ್ಟಿಸಿದೆ. ಸಿನಿಮಾ ಸೆಲೆಬ್ರಿಟಿಗಳನ್ನು ಗುರಿಯಾಗಿಸಿಕೊಂಡು ಬಾಂಬ್ ಬೆದರಿಕೆ ಹಾಕಿದ್ದ ಅಪರಿಚಿತ ವ್ಯಕ್ತಿಯನ್ನು ಬಂಧಿಸಲು ಪೊಲೀಸರು ಹುಡುಕಾಟ ನಡೆಸಿದ್ದಾರೆ. ತ್ರಿಷಾ ಮನೆಗೆ ಇಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿದೆ ಎನ್ನಲಾಗಿದೆ. ಇದು ಕೆಲವು ಕಾಲ ಅಭಿಮಾನಿಗಳಲ್ಲಿ ಸಾಕಷ್ಟು ಆತಂಕ ಸೃಷ್ಟಿ ಮಾಡಿತ್ತು. ಚೆನ್ನೈನ ಅಲ್ವಾರ್‌ಪೇಟೆಯಲ್ಲಿರುವ ತ್ರಿಷಾ ಅವರ ನಿವಾಸದಲ್ಲಿ ಬಾಂಬ್ ಇಡಲಾಗಿದೆ ಎಂದು ಪೊಲೀಸ್ ನಿಯಂತ್ರಣ ಕೊಠಡಿಗೆ ಅಪರಿಚಿತ ವ್ಯಕ್ತಿಯಿಂದ ಫೋನ್ ಕರೆ ಬಂದಿತ್ತು. ಆ ವ್ಯಕ್ತಿ…

Read More

ತುಂಬಾನೇ ಕೆಳಮಟ್ಟದಲ್ಲಿ ಯೋಚಿಸಿದ್ರಾ ರಕ್ಷಿತಾ ಶೆಟ್ಟಿ? ನೆಟ್ಟಿಗರ ಕ್ಲಾಸ್ – Kannada News | Rakshitha Shetty’s Low Level Big Boss Act: Netizens Slam Makeup Brush Incident

ರಕ್ಷಿತಾ ಶೆಟ್ಟಿ (Rakshita Shetty) ಅವರ ಆಟದಲ್ಲಿ ಸಂಪೂರ್ಣ ಬದಲಾವಣೆ ಕಾಣುತ್ತಿದೆ. ಮೊದಲಿನ ರಕ್ಷಿತಾ ಶೆಟ್ಟಿಗೂ ಈಗಿನ ರಕ್ಷಿತಾ ಶೆಟ್ಟಿಗೂ ತುಂಬಾನೇ ವ್ಯತ್ಯಾಸ ಇದೆ. ಇದನ್ನು ಅನೇಕರು ಗಮನಿಸಿದ್ದಾರೆ. ಈಗ ಅವರು ನಡೆದುಕೊಂಡ ರೀತಿ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಹುಟ್ಟುಹಾಕಿದೆ. ಅನೇಕರು ರಕ್ಷಿತಾಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಅವರು ತುಂಬಾನೇ ಕೆಳಮಟ್ಟದಲ್ಲಿ ಯೋಚಿಸುತ್ತಿದ್ದಾರೆ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ. ರಕ್ಷಿತಾ ಶೆಟ್ಟಿ ಅವರು ಸದ್ಯ ಸೀಕ್ರೆಟ್ ರೂಂನಲ್ಲಿ ಇದ್ದಾರೆ. ಈ ವಾರ ಅವರು ಮತ್ತೆ ಬಿಗ್ ಬಾಸ್ ಮನೆ…

Read More