ಕಡಲೆ ಕಳ್ಳನಿಗೆ ಕಂಬಕ್ಕೆ ಕಟ್ಟಿ ಹಾಕಿ ಹಿಗ್ಗಾಮುಗ್ಗಾ ಥಳಿತ!

ಗದಗ, ಜನವರಿ 10: ನಗರದ ಹೊಂಬಳ ರಸ್ತೆಯ ಸರ್ವಜ್ಞ ಸರ್ಕಲ್ ಬಳಿ ಕಡಲೆ ಕಳ್ಳತನ ಪ್ರಕರಣದಲ್ಲಿ ರೈತರು ಕಳ್ಳನನ್ನು ಹಿಡಿದು ಕಂಬಕ್ಕೆ ಕಟ್ಟಿ ಥಳಿಸಿದ ಘಟನೆ ನಡೆದಿದೆ. ಬೆಳಗಿನ ಜಾವ ಜಮೀನಿನಲ್ಲಿ ಕಡಲೆ ಕಳ್ಳತನ ಮಾಡಿ ಪರಾರಿಯಾಗಲು ಯತ್ನಿಸುತ್ತಿದ್ದ ವೇಳೆ ವಾಯುವಿಹಾರಕ್ಕೆ ಬಂದ ಜನರ ಕಣ್ಣಿಗೆ ಕಳ್ಳ ಬಿದ್ದಿದ್ದು, ತಕ್ಷಣ ರೈತರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ರೈತರು ಕಳ್ಳನನ್ನು ರೆಡ್ ಹ್ಯಾಂಡ್ ಆಗಿ ಹಿಡಿದು ಧರ್ಮದೇಟು ನೀಡಿದ್ದಾರೆ. ಕಳೆದ ಹಲವು ದಿನಗಳಿಂದ ರೈತರ ಜಮೀನುಗಳಲ್ಲಿ ಕಡಲೆ ಕಳ್ಳತನ ನಡೆಯುತ್ತಿದ್ದು, ಇದರಿಂದ ರೈತರು ಕಂಗಾಲಾಗಿದ್ದರು ಎನ್ನಲಾಗಿದೆ. ಆಕ್ರೋಶಗೊಂಡ ರೈತರು ಕಳ್ಳನ ತಲೆ ಹಾಗೂ ಕೊರಳಿಗೆ ಕಡಲೆ ಗಿಡಗಳ ಮಾಲೆ ಹಾಕಿ ಪಾಠ ಕಲಿಸಿದ್ದಾರೆ. ಮಾಹಿತಿ ಪಡೆದ ಗದಗ ಗ್ರಾಮೀಣ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

 

 

Source link

‘ಜನ ನಾಯಗನ್’ ವಿವಾದ: ಸಿಬಿಎಫ್​ಸಿ ಮಾಡಿದ್ದೇನು? ವಿವರಿಸಿದ ನಿರ್ಮಾಪಕ – Kannada News | Jana Nayagan controversy Producer Venkat K Narayan shared detailed information

ದಳಪತಿ ವಿಜಯ್ (Thalapathy Vijay) ಅವರ ಕೊನೆಯ ಸಿನಿಮಾ ಎನ್ನಲಾಗುತ್ತಿರುವ ‘ಜನ ನಾಯಗನ್’ಗೆ ಸಂಕಷ್ಟಗಳ ಮೇಲೆ ಸಂಕಷ್ಟ ಎದುರಾಗುತ್ತಿದೆ. ಜನವರಿ 09ಕ್ಕೆ ಸಿನಿಮಾ ಬಿಡುಗಡೆ ಆಗಬೇಕಿತ್ತು. ಆದರೆ ಸಿಬಿಎಫ್​​ಸಿಯು ಪ್ರಮಾಣ ಪತ್ರ ನೀಡಲು ಹಿಂಜರಿದ ಕಾರಣ ಚಿತ್ರತಂಡ ನ್ಯಾಯಾಲಯದ ಮೆಟ್ಟಿಲೇರಿತು, ಜನವರಿ 09ರಂದು ಮದ್ರಾಸ್ ಹೈಕೋರ್ಟ್, ಸಿನಿಮಾಕ್ಕೆ ‘ಯು/ಎ’ ಪ್ರಮಾಣ ಪತ್ರ ನೀಡಬೇಕೆಂದು ಆದೇಶಿಸಿತ್ತು. ಆದರೆ ಆದೇಶ ಹೊರಬಿದ್ದ ಕೆಲವೇ ಗಂಟೆಗಳಲ್ಲಿ ಮದ್ರಾಸ್ ಹೈಕೋರ್ಟ್​ನ ಮತ್ತೊಂದು ಪೀಠ ಆದೇಶಕ್ಕೆ ತಡೆ ನೀಡಿತು. ಹೀಗಾಗಿ ಸಿನಿಮಾ ಬಿಡುಗಡೆ ಮತ್ತಷ್ಟು ಮುಂದೆ ಹೋಗಿದೆ. ಸಿನಿಮಾದ ಬಿಡುಗಡೆಯೇ ಅನಿಶ್ಚತತೆಗೆ ಒಳಗಾಗಿದೆ. ಇದೀಗ ಸಿನಿಮಾದ ನಿರ್ಮಾಪಕ ವೆಂಕಟ್ ಕೆ ನಾರಾಯಣ್ ಅವರು ವಿಡಿಯೋ ಒಂದನ್ನು ಬಿಡುಗಡೆ ಮಾಡಿದ್ದು, ಸಿನಿಮಾ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

‘ಜನ ನಾಯಗನ್’ ಸಿನಿಮಾದ ನಿರ್ಮಾಣ ಸಂಸ್ಥೆಯಾದ ಕೆವಿಎನ್ ಪ್ರೊಡಕ್ಷನ್ಸ್​ನ ಮಾಲೀಕರಾದ ವೆಂಕಟ್ ನಾರಾಯಣ್ ವಿಡಿಯೋನಲ್ಲಿ ಹಂಚಿಕೊಂಡಿರುವ ಮಾಹಿತಿಯಂತೆ ‘ಜನ ನಾಯಗನ್’ ಸಿನಿಮಾವನ್ನು 18 ಡಿಸೆಂಬರ್ 2025 ರಂದು ಸಿಬಿಎಫ್​​ಸಿಗೆ ಸಲ್ಲಿಕೆ ಮಾಡಲಾಗಿತ್ತು. 22ರ ಡಿಸೆಂಬರ್ ತಿಂಗಳಲ್ಲಿ ಸಿಬಿಎಫ್​​ಸಿಯು ಇಮೇಲ್ ಮಾಡಿ, ಸಿನಿಮಾಕ್ಕೆ ‘ಯು/ಎ’ ಪ್ರಮಾಣ ಪತ್ರ ನೀಡುವುದಾಗಿ ತಿಳಿಸಿದ್ದು, ಸಿನಿಮಾಕ್ಕೆ ಕೆಲವು ಕಟ್​​ಗಳನ್ನು ಸಹ ಸೂಚಿಸಿತ್ತು. ಅದರಂತೆ ಚಿತ್ರತಂಡವು ಸೆನ್ಸಾರ್ ಮಂಡಳಿ ಸೂಚಿಸಿದ ಬದಲಾವಣೆಗಳನ್ನು ಮಾಡಿ ಡಿಸೆಂಬರ್ 22ಕ್ಕೆ ಮತ್ತೆ ಸಿನಿಮಾವನ್ನು ಸಿಬಿಎಫ್​​ಸಿಗೆ ಸಲ್ಲಿಕೆ ಮಾಡಿತ್ತು.

ವೆಂಕಟ್ ಅವರು ಹೇಳಿರುವಂತೆ, ‘ಸಿಬಿಎಫ್​​ಸಿಯು, ‘ಜನ ನಾಯಗನ್’ ಬಗ್ಗೆ ಬಂದ ಒಂದು ದೂರನ್ನು ಪರಿಗಣಿಸಿ ಸಿನಿಮಾವನ್ನು ರಿವ್ಯೂ ಕಮಿಟಿಗೆ ಕಳಿಸಲು ನಿರ್ಧಾರ ಮಾಡಿತು. ಆದರೆ ನಮಗೆ ಬಿಡುಗಡೆ ದಿನಾಂಕ ಹತ್ತಿರ ಇದ್ದಿದ್ದರಿಂದ ಹಾಗೂ ದೂರುದಾರರು ಯಾರು ಎಂಬ ಮಾಹಿತಿಯೂ ಸಹ ಇಲ್ಲವಾದ ಕಾರಣ, ನಾವು ಮದ್ರಾಸ್ ಹೈಕೋರ್ಟ್​​ನ ಮೆಟ್ಟಿಲೇರಿದೆವು. ಜನವರಿ 06 ಮತ್ತು 7 ರಂದು ವಿಚಾರಣೆ ನಡೆಸಿದ ನ್ಯಾಯಾಲಯವು. ಜನವರಿ 09ರಂದು ‘ಜನ ನಾಯಗನ್’ ಸಿನಿಮಾಕ್ಕೆ ‘ಯು/ಎ’ ಪ್ರಮಾಣ ಪತ್ರ ನೀಡಬೇಕೆಂದು ಆದೇಶ ಹೊರಡಿಸಿತು’ ಎಂದು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:ತಾವು ಸ್ಪರ್ಧಿಸೋ ಕ್ಷೇತ್ರದ ಹೆಸರು ಘೋಷಿಸಿದ ದಳಪತಿ ವಿಜಯ್; ಮೈತ್ರಿ ವಿಚಾರವಾಗಿ ಅಚ್ಚರಿಯ ಹೇಳಿಕೆ

‘ಆದರೆ ಸಿಬಿಎಫ್​​ಸಿಯು ಅದೇ ದಿನ ಆದೇಶದ ವಿರುದ್ಧ ಮದ್ರಾಸ್ ಹೈಕೋರ್ಟ್​​ನಲ್ಲಿಯೇ ಮೇಲ್ಮನವಿ ಸಲ್ಲಿಸಿತು. ಈ ಕಾರಣದಿಂದಾಗಿ ಸಿನಿಮಾಕ್ಕೆ ಪ್ರಮಾಣ ಪತ್ರ ನೀಡಬೇಕು ಎಂದು ಹೊರಡಿಸಲಾಗಿದ್ದ ಆದೇಶದ ಮೇಲೆ ತಡೆ ನೀಡಲಾಯ್ತು. ವಿಚಾರಣೆಯನ್ನು ಜನವರಿ 27ಕ್ಕೆ ಮುಂದೂಡಲಾಗಿದೆ. ನಮಗೆ ನ್ಯಾಯ ವ್ಯವಸ್ಥೆಯ ಮೇಲೆ ಸಂಪೂರ್ಣ ನಂಬಿಕೆ ಇದ್ದು, ಆದಷ್ಟು ಶೀಘ್ರ ನಾವು ಸಿನಿಮಾವನ್ನು ಜನರ ಎದುರು ತರಲಿದ್ದೇವೆ’ ಎಂದಿದ್ದಾರೆ ವೆಂಕಟ್.

‘ದಳಪತಿ ವಿಜಯ್ ಅವರು ದಶಕಗಳ ಕಾಲ ಚಿತ್ರರಂಗಕ್ಕೆ ನೀಡಿದ ಸೇವೆ, ಮನೊರಂಜನೆಗೆ ಒಂದು ಅದ್ಭುತವಾದ ವಿದಾಯವನ್ನು ಸಿನಿಮಾ ಮೂಲಕ ನೀಡುವುದು ನಮ್ಮ ಉದ್ದೇಶವಾಗಿತ್ತು. ಆದರೆ ಅನಿವಾರ್ಯ ಕಾರಣಗಳಿಂದ ಅದಕ್ಕೆ ಅಡ್ಡಿಗಳು ಎದುರಾಗಿದೆ. ಇದು ನಮಗೆ ಕಠಿಣವಾದ ಮತ್ತು ಭಾವುಕವಾದ ಸಮಯ. ಇಂಥಹಾ ಸಮಯದಲ್ಲಿ ನಾವು ಸಿನಿಮಾವನ್ನು ಜನರ ಮುಂದೆ ತರಲು ಶಕ್ತಿ ಮೀರಿ ಯತ್ನಿಸುತ್ತಿದ್ದೇವೆ. ಇಂಥಹಾ ಸಮಯದಲ್ಲಿ ಪ್ರೇಕ್ಷಕರು, ಸಿನಿಮಾ ವಿತರಕರು, ಪ್ರದರ್ಶಕರು ಮತ್ತು ನಮ್ಮ ಸಹ ಬಂಡವಾಳದಾರರು ನಮಗೆ ಸಹಕರಿಸಬೇಕು ಎಂದು ಮನವಿ ಮಾಡುತ್ತೇನೆ’ ಎಂದಿದ್ದಾರೆ ವೆಂಕಟ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 12:27 pm, Sat, 10 January 26

Source link

ಟೀಸರ್​ನಲ್ಲಿ ಅಸಹ್ಯ ದೃಶ್ಯ! ಯಶ್ ಸಿನಿಮಾ ಟಾಕ್ಸಿಕ್ ವಿರುದ್ಧ ಕಂಪ್ಲೇಂಟ್ ನೀಡಿದ ವಕೀಲರು ಹೇಳಿದ್ದೇನು ನೋಡಿ

ಬೆಂಗಳೂರು, ಜನವರಿ 10: ರಾಕಿಂಗ್ ಸ್ಟಾರ್ ಯಶ್ ಅವರ ಬಹುನಿರೀಕ್ಷಿತ ಚಿತ್ರ ಟಾಕ್ಸಿಕ್ ಟೀಸರ್ ಬಿಡುಗಡೆಯಾದ ನಂತರ ಭಾರಿ ಚರ್ಚೆಗೆ ಗ್ರಾಸವಾಗಿದೆ. ಟೀಸರ್‌ನಲ್ಲಿನ ಅಸಭ್ಯ ದೃಶ್ಯಗಳು ಮಕ್ಕಳ ಮೇಲೆ ಪರಿಣಾಮ ಬೀರಬಹುದು ಎಂಬ ಆತಂಕ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ವಕೀಲ ಲೋಹಿತ್ ಕುಮಾರ್ ಅವರು ಕೇಂದ್ರ ಸೆನ್ಸಾರ್ ಮಂಡಳಿಗೆ ದೂರು ಸಲ್ಲಿಸಿದ್ದಾರೆ. ಈ ಬಗ್ಗೆ ‘ಟಿವಿ9’ ಜೊತೆ ಮಾತನಾಡಿದ ಲೋಹಿತ್ ಕುಮಾರ್, ಟೀಸರ್‌ನಲ್ಲಿ ಕಂಡುಬಂದ ದೃಶ್ಯಗಳನ್ನು ಗಮನಿಸಿದರೆ ಈ ಚಿತ್ರವು ಕುಟುಂಬ ಸದಸ್ಯರೊಂದಿಗೆ ನೋಡಲು ಸೂಕ್ತವಲ್ಲ. ಚಿತ್ರಮಂದಿರಗಳಲ್ಲಿ ಎ ಸರ್ಟಿಫಿಕೇಟ್ ಇದ್ದರೆ ಮಕ್ಕಳನ್ನು ಪ್ರವೇಶಿಸದಂತೆ ತಡೆಯಲಾಗುತ್ತದೆ. ಆದರೆ ಯೂಟ್ಯೂಬ್‌ನಂತಹ ಸಾಮಾಜಿಕ ಜಾಲತಾಣಗಳಲ್ಲಿ ಟೀಸರ್‌ಗಳಿಗೆ ಯಾವುದೇ ಮಾರ್ಗಸೂಚಿಗಳಿಲ್ಲದಿರುವುದು ಸಮಸ್ಯೆಯಾಗಿದೆ ಎಂದು ತಿಳಿಸಿದರು. ಸೆನ್ಸಾರ್ ಮಂಡಳಿ ಟೀಸರ್‌ಗಳಿಗೂ ಸ್ಪಷ್ಟ ಮಾರ್ಗಸೂಚಿಗಳನ್ನು ರೂಪಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Source link

ಕೊಡಗು: ಗ್ರಾಮ ಸಮಿತಿಯ ಮಾತು ಕೇಳದಿದ್ದಕ್ಕೆ ಎರಡು ಕುಟುಂಬಗಳಿಗೆ ಸಾಮಾಜಿಕ ಬಹಿಷ್ಕಾರ? – Kannada News | Kodagu Social Boycott: Two Families Face exclusion in Koothi Village

ಸಮಿತಿಯ ಮಾತು ಕೇಳದಿದ್ದಕ್ಕೆ ಸಾಮಾಜಿಕ ಬಹಿಷ್ಕಾರ!

ಕೊಡಗು, ಜನವರಿ 10: ಜಿಲ್ಲೆಯಲ್ಲಿ ಸಾಮಾಜಿಕ ಬಹಿಷ್ಕಾರ ಎಂಬ ಅನಿಷ್ಟ ಪದ್ಧತಿ ಇನ್ನೂ ಜೀವಂತವಾಗಿರುವುದು ಆತಂಕಕಾರಿ ವಿಷಯವಾಗಿ ಹೊರಹೊಮ್ಮಿದೆ. ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಕೂತಿ ಗ್ರಾಮದಲ್ಲಿ ಗ್ರಾಮ ಸಮಿತಿಯ ತೀರ್ಮಾನದ ಹೆಸರಿನಲ್ಲಿ ಎರಡು ಕುಟುಂಬಗಳಿಗೆ ಸಾಮಾಜಿಕ ಬಹಿಷ್ಕಾರದ ಶಿಕ್ಷೆ ವಿಧಿಸಲಾಗಿದೆ ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ.

ಸಾವು-ಸಮಾರಂಭಕ್ಕೂ ಬಾರದಂತೆ ಆದೇಶ

ಗ್ರಾಮದ ಅಜಂತ ಮತ್ತು ನವೀನ್ ಎಂಬುವವರ ಎರಡು ಕುಟುಂಬಗಳನ್ನು ಸಮಿತಿಯ ಮಾತು ಕೇಳಲಿಲ್ಲ ಎಂಬ ಕಾರಣಕ್ಕೆ ಬಹಿಷ್ಕಾರಕ್ಕೆ ಒಳಪಡಿಸಲಾಗಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಈ ಬಹಿಷ್ಕಾರದ ಪರಿಣಾಮವಾಗಿ ಗ್ರಾಮಸ್ಥರು ಆ ಕುಟುಂಬಗಳೊಂದಿಗೆ ಮಾತನಾಡುವಂತಿಲ್ಲ, ಸಾವು–ಸಮಾರಂಭ, ಸಭೆ, ಮದುವೆ ಸೇರಿದಂತೆ ಯಾವುದೇ ಸಾಮಾಜಿಕ ಕಾರ್ಯಕ್ರಮಗಳಿಗೆ ಅವರು ಹಾಜರಾಗುವಂತಿಲ್ಲ ಎಂದು ಆದೇಶಿಸಲಾಗಿದೆ. ಅಲ್ಲದೆ, ಈ ಕುಟುಂಬಗಳ ತೋಟದ ಕೆಲಸಗಳಿಗೆ ಕಾರ್ಮಿಕರು ತೆರಳದಂತೆ ಸೂಚಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ.

ಇದನ್ನೋ ಓದಿ ‘ಕೊರಗಜ್ಜ’ ಸಿನಿಮಾ ತಂಡದ ವಿರುದ್ಧ ಕೊಡಗಿನ ದೈವಾರಾಧಕರು ಮತ್ತು ನರ್ತಕರು ರೊಚ್ಚಿಗೆದ್ದಿದ್ದೇಕೆ?

ಆರೋಪ ತಳ್ಳಿಹಾಕಿದ ಸಮಿತಿ

ಬಹಿಷ್ಕಾರದ ವಿರುದ್ಧ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ಸಲ್ಲಿಸಿದರೂ ಯಾವುದೇ ಸ್ಪಷ್ಟ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಕುಟುಂಬಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಸಂಪರ್ಕ ಕಡಿತಗೊಂಡ ಪರಿಣಾಮ ಈ ಎರಡು ಕುಟುಂಬಗಳು ಮಾನಸಿಕ ಹಾಗೂ ಆರ್ಥಿಕವಾಗಿ ತೀವ್ರ ಸಂಕಷ್ಟ ಅನುಭವಿಸುತ್ತಿವೆ ಎಂದು ತಿಳಿದುಬಂದಿದೆ. ಇನ್ನೊಂದೆಡೆ, ಕೂತಿ ಗ್ರಾಮ ಸಮಿತಿಯು ಈ ಆರೋಪಗಳನ್ನು ಸಂಪೂರ್ಣವಾಗಿ ತಿರಸ್ಕರಿಸಿದೆ. ಗ್ರಾಮ ಕಟ್ಟುಪಾಡುಗಳನ್ನು ಮೀರಿ ನಡೆದುಕೊಂಡ ಹಿನ್ನೆಲೆಯಲ್ಲಿ ದಂಡ ವಿಧಿಸಲಾಗಿತ್ತು. ಆದರೆ ದಂಡವನ್ನು ಕಟ್ಟದೆ ಇರುವುದರಿಂದ ಗ್ರಾಮಸ್ಥರು ಸ್ವಯಂಸ್ಪೂರ್ತಿಯಾಗಿ ಸಹಕಾರ ನೀಡುತ್ತಿಲ್ಲ ಎಂದು ಸಮಿತಿ ಸ್ಪಷ್ಟನೆ ನೀಡಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Shankh Significance: ಮನೆಯಲ್ಲಿ ಶಂಖವಿದ್ದರೆ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ? ಆಧ್ಯಾತ್ಮಿಕ ಮಹತ್ವ ತಿಳಿಯಿರಿ – Kannada News | Shankha Significance: Sanatana Dharma, Puja Benefits and Spiritual Power

ಸನಾತನ ಧರ್ಮದಲ್ಲಿ ಶಂಖವನ್ನು ಅತ್ಯಂತ ಪವಿತ್ರ ಪೂಜಾ ವಸ್ತುಗಳಲ್ಲಿ ಒಂದೆಂದು ಗೌರವದಿಂದ ಪರಿಗಣಿಸಲಾಗುತ್ತದೆ. ಪೂಜಾ ವಿಧಿಗಳಲ್ಲಿ ಶಂಖವನ್ನು ಬಳಸುವುದು ಕೇವಲ ಆಧ್ಯಾತ್ಮಿಕ ಆಚರಣೆಯಷ್ಟೇ ಅಲ್ಲ, ಮನೆ ಮತ್ತು ಮನಸ್ಸಿನಲ್ಲಿ ಶುಭ ಶಕ್ತಿಗಳ ಹರಿವನ್ನು ಹೆಚ್ಚಿಸುವುದಕ್ಕೂ ಸಹಾಯಕವಾಗಿದೆ. ಪುರಾಣಗಳ ಪ್ರಕಾರ ಸಮುದ್ರ ಮಂಥನದ ಸಂದರ್ಭದಲ್ಲಿ ಶಂಖವು ಉದ್ಭವಿಸಿದ್ದು, ಇದು ಶ್ರೀ ವಿಷ್ಣುವಿಗೆ ಅತ್ಯಂತ ಪ್ರಿಯವಾದ ದಿವ್ಯ ವಸ್ತುವೆಂದು ಹೇಳಲಾಗುತ್ತದೆ. ಆದ್ದರಿಂದ ಶಂಖವು ವೈಷ್ಣವ ಪರಂಪರೆಯಲ್ಲಿ ವಿಶೇಷ ಮಹತ್ವವನ್ನು ಹೊಂದಿದೆ.

ಪೂಜೆಯ ಸಮಯದಲ್ಲಿ ಶಂಖವನ್ನು ಊದುವುದನ್ನು ಶುಭೋದಯದ ಸಂಕೇತವಾಗಿ ಹಾಗೂ ಸಕಾರಾತ್ಮಕ ಶಕ್ತಿಗಳಿಗೆ ಆಹ್ವಾನವೆಂದು ಪರಿಗಣಿಸಲಾಗುತ್ತದೆ. ಶಂಖದಿಂದ ಹೊರಹೊಮ್ಮುವ ದಿವ್ಯ ಶಬ್ದವು ಮನೆಯಿಂದ ನಕಾರಾತ್ಮಕ ಶಕ್ತಿಗಳನ್ನು ದೂರ ಮಾಡಿ, ಶಾಂತಿ, ನೆಮ್ಮದಿ ಮತ್ತು ಶುದ್ಧೀಕರಣದ ಸಾತ್ವಿಕ ವಾತಾವರಣವನ್ನು ನಿರ್ಮಿಸುತ್ತದೆ ಎಂಬ ನಂಬಿಕೆ ಜನಮಾನಸದಲ್ಲಿದೆ. ದೇವಾರಾಧನೆ ಆರಂಭಿಸುವಾಗ ಅಥವಾ ಆರತಿಯ ಸಮಯದಲ್ಲಿ ಶಂಖನಾದ ಕೇಳಿಸುವುದು ಪೂಜೆಯ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ಶಾಸ್ತ್ರಗಳು ವಿವರಿಸುತ್ತವೆ.

ಪೂಜೆಗೆ ಮುನ್ನ ಶಂಖವನ್ನು ಶುದ್ಧ ನೀರಿನಿಂದ ಸ್ವಚ್ಛಗೊಳಿಸಿ ಪವಿತ್ರವಾಗಿ ಇಡುವುದು ಶ್ರೇಷ್ಠವೆಂದು ಹೇಳಲಾಗುತ್ತದೆ. ಪೂಜಾ ಕೋಣೆಯಲ್ಲಿ ಅಥವಾ ದೇವರ ಮಂಟಪದಲ್ಲಿ ಶಂಖವನ್ನು ಸ್ಥಾಪಿಸಿದರೆ ಅದು ಶುಭ ಕಾರ್ಯಗಳಿಗೆ ದೈವಿಕ ಶಕ್ತಿಯನ್ನು ಒದಗಿಸುತ್ತದೆ ಎಂಬ ನಂಬಿಕೆ ಇದೆ. ಶಂಖದ ನಿಯಮಿತ ಪೂಜೆಯಿಂದ ಗ್ರಹ ದೋಷಗಳು ಕಡಿಮೆಯಾಗುತ್ತವೆ ಮತ್ತು ಜೀವನದಲ್ಲಿ ಸ್ಥಿರತೆ ಹಾಗೂ ಶಾಂತಿ ದೊರೆಯುತ್ತದೆ. ಶಂಖವನ್ನು ಊದುವಾಗ ಮನಸ್ಸನ್ನು ಸ್ಥಿರಗೊಳಿಸಿ, ದೀರ್ಘ ಉಸಿರಾಟದೊಂದಿಗೆ ನಿಧಾನವಾಗಿ ಶಬ್ದ ಮಾಡುವುದರಿಂದ ಅದರ ಪೂರ್ಣ ಫಲವನ್ನು ಅನುಭವಿಸಬಹುದು.

ಇದನ್ನೂ ಓದಿ: ಮೃತ ವ್ಯಕ್ತಿ ನಿಮ್ಮ ಶತ್ರುವೇ ಆಗಿದ್ದರೂ ಅವರ ಬಗ್ಗೆ ಯಾಕೆ ಕೆಟ್ಟದಾಗಿ ಮಾತನಾಡಬಾರದು?

ಶಂಖ ಪೂಜೆಯು ಕೇವಲ ಆಧ್ಯಾತ್ಮಿಕ ಲಾಭಗಳನ್ನು ಮಾತ್ರವಲ್ಲದೆ ದೈಹಿಕ ಮತ್ತು ಮಾನಸಿಕ ಪ್ರಯೋಜನಗಳನ್ನೂ ನೀಡುತ್ತದೆ ಎಂದು ಹೇಳಲಾಗುತ್ತದೆ. ಶಂಖ ಊದುವುದರಿಂದ ಉಸಿರಾಟದ ವ್ಯವಸ್ಥೆ ಬಲಗೊಳ್ಳುತ್ತದೆ ಮತ್ತು ಶ್ವಾಸಕೋಶಗಳ ಕಾರ್ಯಕ್ಷಮತೆ ಸುಧಾರಿಸುತ್ತದೆ ಎಂಬ ನಂಬಿಕೆ ಇದೆ. ಅದರ ಮೃದುವಾದ ದಿವ್ಯ ಶಬ್ದವು ಮನಸ್ಸನ್ನು ಶಾಂತಗೊಳಿಸಿ, ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡುತ್ತದೆ ಎಂದು ಭಾವಿಸಲಾಗುತ್ತದೆ. ಈ ಕಾರಣದಿಂದ ಶಂಖವನ್ನು ಶುದ್ಧ ಶಕ್ತಿ, ಯಶಸ್ಸು ಮತ್ತು ಸಾತ್ವಿಕತೆಯ ಸಂಕೇತವೆಂದು ಪರಿಗಣಿಸಲಾಗುತ್ತದೆ.

ಪೂಜಾ ಮಂಟಪದಲ್ಲಿ ಶಂಖವನ್ನು ಇಡುವುದರಿಂದ  ಲಕ್ಷ್ಮೀ ದೇವಿಯ ಅನುಗ್ರಹ ದೊರೆಯುತ್ತದೆ ಎಂದು ವಿದ್ವಾಂಸರು ಹೇಳುತ್ತಾರೆ. ವಿಶೇಷವಾಗಿ ಬಲಭಾಗಕ್ಕೆ ತೆರೆದಿರುವ ಶಂಖವನ್ನು ಲಕ್ಷ್ಮೀ ದೇವಿಯ ವಾಸಸ್ಥಾನವೆಂದು ಶಾಸ್ತ್ರಗಳಲ್ಲಿ ವಿವರಿಸಲಾಗಿದೆ. ಇಂತಹ ಶಂಖ ಇರುವ ಸ್ಥಳದಲ್ಲಿ ಶ್ರೀ ಮಹಾಲಕ್ಷ್ಮಿ ನೆಲೆಸಿದ್ದಾಳೆ ಎಂಬ ನಂಬಿಕೆ ಇದ್ದು, ಅದನ್ನು ನಿಯಮಿತವಾಗಿ ಪೂಜಿಸಿದರೆ ಮನೆಗೆ ಸಂಪತ್ತು, ಸಮೃದ್ಧಿ ಮತ್ತು ಐಶ್ವರ್ಯ ಬರುತ್ತದೆ ಎಂದು ಹೇಳಲಾಗುತ್ತದೆ. ಹೀಗಾಗಿ ಶಂಖವು ಧಾರ್ಮಿಕವಾಗಿ ಮಾತ್ರವಲ್ಲ, ಜೀವನದಲ್ಲಿ ಶುಭಫಲಗಳನ್ನು ತರುವ ದಿವ್ಯ ಸಂಕೇತವಾಗಿಯೂ ಮಹತ್ವ ಹೊಂದಿದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಜನ ನಾಯಗನ್ ಬಜೆಟ್ ಎಷ್ಟು? ವಿಜಯ್ ಸಂಭಾವನೆಯೇ ಸಿಂಹಪಾಲು – Kannada News | Thalapathy Vijay’s Jananaayagan: 380 Cr Budget and 220 Cr Salary Shock

ದಳಪತಿ ವಿಜಯ್ ನಟನೆಯ ‘ಜನ ನಾಯಗನ್’ (Jana Nayagan) ಸಿನಿಮಾ ಗಮನ ಸೆಳೆಯುವ ನಿರೀಕ್ಷೆ ಇದೆ. ಈ ಚಿತ್ರವು ತೆಲುಗಿನ ಬಾಲಯ್ಯ ನಟನೆಯ ‘ಭಗವಂತ ಕೇಸರಿ’ ಚಿತ್ರದ ತಮಿಳು ರಿಮೇಕ್ ಆಗಿದೆ. ಈಗ ಸಿನಿಮಾ ರಿಲೀಸ್ ಹಂತದಲ್ಲಿ ತೊಂದರೆ ಅನುಭವಿಸಿದ್ದು ಗೊತ್ತೇ ಇದೆ. ಹೀಗಿರುವಾಗಲೇ ಚಿತ್ರದ ಬಜೆಟ್ ಬಗ್ಗೆ ಹಾಗೂ ಕಲಾವಿದರ ಸಂಭಾವನೆಯ ಬಗ್ಗೆ ಚರ್ಚೆಗಳು ನಡೆದಿವೆ. ಆ ಬಗ್ಗೆ ಇಲ್ಲಿದೆ ಮಾಹಿತಿ.

‘ಜನ ನಾಯಗನ್’ ಚಿತ್ರವು ದಳಪತಿ ವಿಜಯ್ ವೃತ್ತಿ ಜೀವನದ ಕೊನೆಯ ಸಿನಿಮಾ ಆಗಲಿದೆ ಎಂದು ಹೇಳಲಾಗುತ್ತಾ ಇದೆ. ಆ ಬಳಿಕ ಅವರು ರಾಜಕೀಯದಲ್ಲಿ ತೊಡಗಿಕೊಳ್ಳಲಿದ್ದಾರೆ. ಈಗಾಗಲೇ ಟಿವಿಕೆ ಪಕ್ಷ ಕಟ್ಟಿ ಅವರು 2026ರ ಚುನಾವಣೆಯಲ್ಲಿ ಸ್ಪರ್ಧಿಸಲು ರೆಡಿ ಆಗಿದ್ದಾರೆ. ಹೀಗಾಗಿ ‘ಜನ ನಾಯಗನ್’ ಚಿತ್ರಕ್ಕೆ ದೊಡ್ಡ ಸಂಭಾವನೆ ಪಡೆಯುತ್ತಿದ್ದಾರೆ.

‘ಜನ ನಾಯಗನ್’ ಚಿತ್ರವನ್ನು ಕನ್ನಡದ ಕೆವಿಎನ್ ಪ್ರೊಡಕ್ಷನ್ ನಿರ್ಮಾಣ ಮಾಡುತ್ತಿರುವುದು ಗೊತ್ತೇ ಇದೆ. ಈ ಸಿನಿಮಾದ ಬಜೆಟ್ 380 ಕೋಟಿ ರೂಪಾಯಿ ಎಂದು ಹೇಳಲಾಗುತ್ತಾ ಇದೆ. ಈ ಚಿತ್ರದಲ್ಲಿ ವಿಜಯ್ ಅವರು 220 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರಂತೆ. ಇದು ಅವರ ವೃತ್ತಿ ಜೀವನದ ಅತಿ ದೊಡ್ಡ ಸಂಭಾವನೆ ಆಗಿದೆ. ಈ ಮೊದಲು ಅವರು 100 ಕೋಟಿ ರೂಪಾಯಿಗೂ ಹೆಚ್ಚಿನ ಸಂಭಾವನೆ ಪಡೆಯುತ್ತಿದ್ದರು.

ಇನ್ನು, ನಿರ್ದೇಶಕ ವಿನೋದ್ ಅವರು 25 ಕೋಟಿ ರೂಪಾಯಿ ಪಡೆದಿದ್ದಾರೆ. ರಿಮೇಕ್ ಸಿನಿಮಾ ಮಾಡಲು ಅವರು ಇಷ್ಟು ಹಣ ಪಡೆದಿದ್ದಾರೆ. ಸಂಗೀತ ಸಂಯೋಜಕ ಅನಿರುದ್ಧ್ ಅವರು 13 ಕೋಟಿ ರೂಪಾಯಿ ಹಣ ಪಡೆದುಕೊಂಡಿದ್ದಾರೆ. ಬಾಬಿ ಡಿಯೋಲ್ ಚಿತ್ರದ ವಿಲನ್. ಅವರಿಗೆ 3 ಕೋಟಿ ರೂಪಾಯಿ ಸಿಕ್ಕಿದೆ. ಮಲಯಾಳಂ ನಟಿ ಮಮಿತಾ ಬೈಜು ಅವರ ಸಂಭಾವನೆ 60 ಲಕ್ಷ ರೂಪಾಯಿ. ಉಳಿದ ಎಲ್ಲಾ ಕಲಾವಿದರ ಸಂಭಾವನೆ ಸೇರಿದರೆ 9 ಕೋಟಿ ರೂಪಾಯಿ ಆಗಲಿದೆ. ಈ ಸಿನಿಮಾನ 148 ದಿನ ಶೂಟ್ ಮಾಡಲಾಗಿತ್ತು ಎನ್ನಲಾಗಿದೆ.

ಇದನ್ನೂ ಓದಿ: ‘ಜನ ನಾಯಗನ್’ ಚಿತ್ರಕ್ಕೆ ದೊಡ್ಡ ಜಯ; ಯುಎ ಪ್ರಮಾಣಪತ್ರ ನೀಡಲು ಕೋರ್ಟ್ ಆದೇಶ

‘ಜನ ನಾಯಗನ್’ ಸಿನಿಮಾದ ಸೆಟ್ ಕೆಲಸಕ್ಕೆ 15 ಕೋಟಿ ರೂಪಾಯಿ ಖರ್ಚಾಗಿದೆ. ಶೂಟಿಂಗ್​​ಗೆ 48 ಕೋಟಿ ರೂಪಾಯಿ ವ್ಯಯಿಸಲಾಗಿದೆ. ಸಿಜಿ ಕೆಲಸಕ್ಕೆ 5 ಕೋಟಿ ರೂಪಾಯಿ ಖರ್ಚಾಗಿದೆ ಎಂದು ವರದಿ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಕೊಲೆ ಪ್ರಕರಣಗಳನ್ನು ಭೇದಿಸುವಲ್ಲಿ ಕಿಂಗ್ ಈ ಡಿಟೆಕ್ಟಿವ್ ಡಾಗ್ ಜಿನ್ನಿ! ಬೆಂಗಳೂರು ಪೊಲೀಸರ ಹೆಮ್ಮೆಯ ಶ್ವಾನವಿದು – Kannada News | Detective Dog ‘Ginny’ Becomes King of Murder Case Detection, Pride of Bengaluru Police

ಕೊಲೆ ಪ್ರಕರಣಗಳನ್ನು ಭೇದಿಸುವಲ್ಲಿ ಕಿಂಗ್ ಈ ಡಿಟೆಕ್ಟಿವ್ ಡಾಗ್ ಜಿನ್ನಿ!

ಬೆಂಗಳೂರು, ಜನವರಿ 10: ಬೆಂಗಳೂರು (Bangalore) ಪೊಲೀಸ್ ವಿಭಾಗದ ಡಿಟೆಕ್ಟಿವ್ ಡಾಗ್ ‘ಜಿನ್ನಿ’ ಇದೀಗ ತನ್ನ ಅಸಾಧಾರಣ ಪತ್ತೇದಾರಿ ಸಾಮರ್ಥ್ಯದಿಂದ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಬರೋಬ್ಬರಿ 15ಕ್ಕೂ ಹೆಚ್ಚು ಪ್ರಕರಣಗಳನ್ನು ಯಶಸ್ವಿಯಾಗಿ ಪತ್ತೆಹಚ್ಚಿರುವ ಜಿನ್ನಿ, ವಿಶೇಷವಾಗಿ ಕೊಲೆ ಪ್ರಕರಣಗಳನ್ನು ಭೇದಿಸುವಲ್ಲಿ ಪೊಲೀಸ್ ಇಲಾಖೆಯ ‘ಕಿಂಗ್’ ಆಗಿ ಗುರುತಿಸಿಕೊಂಡಿದೆ. ಕಳೆದ ಐದು ವರ್ಷಗಳಿಂದ ಬೆಂಗಳೂರು ಪೊಲೀಸ್ ಪಡೆಯಲ್ಲಿ ಸೇವೆ ಸಲ್ಲಿಸುತ್ತಿರುವ ಜಿನ್ನಿ, ಕಳೆದ ಸುಮಾರು ಒಂದು ವರ್ಷದಿಂದ ಪತ್ತೇದಾರಿ ಕಾರ್ಯಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದೆ. ಸಂಕೀರ್ಣ ಪ್ರಕರಣಗಳನ್ನೂ ಸುಲಭವಾಗಿ ಬಗೆಹರಿಸುವ ಜಿನ್ನಿಯ ಚುರುಕು ಕಾರ್ಯಕ್ಷಮತೆ ಪೊಲೀಸ್ ಅಧಿಕಾರಿಗಳನ್ನೂ ಅಚ್ಚರಿಗೊಳಿಸಿದೆ.

ಪೊಲೀಸರನ್ನು ನೇರವಾಗಿ ಕೊಲೆ ಆರೋಪಿ ಬಳಿ ಕರೆದೊಯ್ದಿದ್ದ ಜಿನ್ನಿ!

ಇತ್ತೀಚೆಗೆ ಕೋಣನಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಕೊಲೆ ಪ್ರಕರಣದಲ್ಲಿ ಜಿನ್ನಿಯ ಪಾತ್ರ ನಿರ್ಣಾಯಕವಾಗಿತ್ತು. ಕನಕಪುರ ರಸ್ತೆಯ ಮೆಟ್ರೋ ಪಿಲ್ಲರ್ ಸಂಖ್ಯೆ 113ರ ಪಕ್ಕದಲ್ಲಿ ಸುಮಾರು 50 ವರ್ಷದ ವ್ಯಕ್ತಿಯ ಶವ ಪತ್ತೆಯಾಗಿತ್ತು. ಯಾರೋ ಕಲ್ಲಿನಿಂದ ಹೊಡೆದು ವ್ಯಕ್ತಿಯನ್ನು ಕೊಲೆ ಮಾಡಿದ್ದರಿಂದ, ಆರೋಪಿಯನ್ನು ಪತ್ತೆಹಚ್ಚುವುದು ಪೊಲೀಸರಿಗೆ ದೊಡ್ಡ ಸವಾಲಾಗಿತ್ತು.

ಈ ವೇಳೆ ಪತ್ತೇದಾರಿ ಕಾರ್ಯಕ್ಕೆ ಇಳಿದ ಜಿನ್ನಿ, ನೇರವಾಗಿ ಆರೋಪಿಯು ಮಲಗಿದ್ದ ಸ್ಥಳಕ್ಕೆ ಪೊಲೀಸರನ್ನು ಕರೆದೊಯ್ದಿತ್ತು. ಜಿನ್ನಿಯ ಸುಳಿವುಗಳ ಆಧಾರದಲ್ಲಿ ಕೊನೆಗೆ ಆರೋಪಿಯನ್ನು ಬಂಧಿಸಲು ಪೊಲೀಸರು ಯಶಸ್ವಿಯಾದರು. ಈ ಸಾಧನೆಗೆ ಬೆಂಗಳೂರು ಪೊಲೀಸ್ ಆಯುಕ್ತರು ಜಿನ್ನಿಗೆ ವಿಶೇಷ ಅಭಿನಂದನೆ ಸಲ್ಲಿಸಿದ್ದಾರೆ.

ಮಗು ಕಳ್ಳತನ ಪ್ರಕರಣ ಬಯಲಿಗೆಳೆದಿದ್ದ ಜಿನ್ನಿ

ಇದಲ್ಲದೆ, ಕೆಲ ತಿಂಗಳ ಹಿಂದೆ ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನವಾಗಿದ್ದ ಮಗು ಪ್ರಕರಣದಲ್ಲಿಯೂ ಜಿನ್ನಿ ಮಹತ್ವದ ಪಾತ್ರ ವಹಿಸಿತ್ತು. ಪತ್ತೇದಾರಿ ಶ್ವಾನ ಜಿನ್ನಿಯ ನೆರವಿನಿಂದ ಮಗು ಸುರಕ್ಷಿತವಾಗಿ ಪತ್ತೆಯಾಗಿದ್ದು, ಸಾರ್ವಜನಿಕರಲ್ಲಿ ಪೊಲೀಸ್ ಇಲಾಖೆಯ ಮೇಲಿನ ನಂಬಿಕೆ ಮತ್ತಷ್ಟು ಹೆಚ್ಚಾಗುವಂತೆ ಮಾಡಿತ್ತು.

ಇದನ್ನೂ ಓದಿ: ವಿಚ್ಛೇದಿತ ಮಹಿಳೆಗೆ ಬಾಳು ಕೊಡುವುದಾಗಿ ಮಗು ಮಾಡಿ, 36 ಲಕ್ಷ ರೂ. ತೆಗೆದುಕೊಂಡು ವ್ಯಕ್ತಿ ಪರಾರಿ!

ಸತತ ಯಶಸ್ಸುಗಳಿಂದ ಬೆಂಗಳೂರು ಪೊಲೀಸರಿಂದ ಜಿನ್ನಿಯ ಕಾರ್ಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದ್ದು, ಪತ್ತೇದಾರಿ ಶ್ವಾನಗಳು ಅಪರಾಧ ತನಿಖೆಯಲ್ಲಿ ಎಷ್ಟು ಪ್ರಮುಖ ಪಾತ್ರ ವಹಿಸುತ್ತವೆ ಎಂಬುದಕ್ಕೆ ಜಿನ್ನಿಯೇ ಜೀವಂತ ಉದಾಹರಣೆ ಆಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ತೆಲುಗು ಖಾಕಿ ಸಿನೆಮಾ ಸ್ಟೈಲ್​ನಲ್ಲಿ ರಾಯಚೂರು ಪೊಲೀಸರ ಆಪರೇಷನ್: ನಕಲಿ ಡಿಸಿ ಫೇಸ್‌ಬುಕ್ ಖಾತೆ ಪ್ರಕರಣದಲ್ಲಿ ಸೈಬರ್ ವಂಚಕ ಅರೆಸ್ಟ್! – Kannada News | Raichur Cyber Police Arrest Notorious Fake Profile Fraudster in Rajasthan

ರಾಯಚೂರು, ಜನವರಿ 10: ತೆಲುಗು ಖಾಕಿ ಸಿನೆಮಾ ಶೈಲಿಯನ್ನು ನೆನಪಿಸುವಂತೆ ರಾಯಚೂರು ಸೈಬರ್ ಪೊಲೀಸರು ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ ಕುಖ್ಯಾತ ಸೈಬರ್ ವಂಚಕನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸತತ ಎರಡು ತಿಂಗಳ ಕಾಲ ರಾಜಸ್ಥಾನದಲ್ಲಿ ಗುಪ್ತ ಕಾರ್ಯಾಚರಣೆ ನಡೆಸಿದ ಪೊಲೀಸರು, ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳ ಹೆಸರಿನಲ್ಲಿ ನಕಲಿ ಫೇಸ್‌ಬುಕ್ ಖಾತೆಗಳನ್ನು ಸೃಷ್ಟಿಸಿ ಜನರನ್ನು ವಂಚಿಸುತ್ತಿದ್ದ ಆರೋಪಿಯನ್ನು ಅರೆಸ್ಟ್ ಮಾಡಿದ್ದಾರೆ.

ರಾಜಸ್ಥಾನ ಮೂಲದ ಆರೋಪಿ ಅಂದರ್

ಬಂಧಿತನನ್ನು ಶಕೀಲ್ (19) ಎಂದು ಗುರುತಿಸಲಾಗಿದ್ದು, ಆತ ರಾಜಸ್ಥಾನದ ಆಳ್ವಾರ್ ಜಿಲ್ಲೆಯ ಚಂದ್ ಬಾಸ್ ಚಿರ್ ಖಾನಾ ಗ್ರಾಮದ ನಿವಾಸಿ ಎನ್ನಲಾಗಿದೆ. ಆಳ್ವಾರ್ ಹಾಗೂ ಭರತಪುರ ಜಿಲ್ಲೆಗಳು ಸೈಬರ್ ವಂಚಕರ ಕೇಂದ್ರಗಳಾಗಿದ್ದು, ಅಲ್ಲಲ್ಲಿ ಗುಂಪುಗಳಾಗಿ ಕೂತು ಆನ್‌ಲೈನ್ ವಂಚನೆ ನಡೆಸುತ್ತಿರುವ ಮಾಹಿತಿ ತನಿಖೆಯಲ್ಲಿ ಬಹಿರಂಗವಾಗಿದೆ.

ಪೊಲೀಸ್ ಅಧಿಕಾರಿ ಹೆಸರು ಬಳಸಿ ವಂಚನೆ

ಆರೋಪಿ ರಾಯಚೂರು ಜಿಲ್ಲಾಧಿಕಾರಿ ನಿತೀಶ್ ಕೆ ಅವರ ಹೆಸರಿನಲ್ಲಿ ನಕಲಿ ಫೇಸ್‌ಬುಕ್ ಖಾತೆ ಸೃಷ್ಟಿಸಿ, ನನ್ನ ಪರಿಚಯದ ಸಬ್ ಇನ್‌ಸ್ಪೆಕ್ಟರ್ ವರ್ಗಾವಣೆ ಆಗಿದೆ. ಅವರ ಏಸಿ, ಮಂಚ, ಫ್ರಿಡ್ಜ್ ಕಡಿಮೆ ದರಕ್ಕೆ ಮಾರಾಟ ಮಾಡಲಾಗುತ್ತಿದೆ ಎಂದು ಮೆಸೇಜ್ ಕಳುಹಿಸಿ ಜನರಿಂದ ಹಣ ಪಡೆದು ವಂಚನೆ ಮಾಡುತ್ತಿದ್ದ. ಈ ವಂಚನೆಯನ್ನು ನಂಬಿ ರಾಯಚೂರಿನ ನಿವಾಸಿ ರಮೇಶ್ ಹಣ ಕಳೆದುಕೊಂಡಿದ್ದರು. ಈ ಸಂಬಂಧ ಜೂನ್ ತಿಂಗಳಲ್ಲೇ ಪ್ರಕರಣ ದಾಖಲಾಗಿತ್ತು.

ಆರೋಪಿಯನ್ನು ಪತ್ತೆ ಹಚ್ಚುವ ವೇಳೆ ಪೊಲೀಸರು ಸಿನೆಮಾ ಶೈಲಿಯಲ್ಲಿ ಅಪರಿಚಿತರಂತೆ ಓಡಾಡಿ ಚಾಣಾಕ್ಷತನದಿಂದ ಆತನನ್ನು ಲಾಕ್ ಮಾಡಿದ್ದಾರೆ. ಆರೋಪಿ ನೀಡಿದ ಮಾಹಿತಿಯ ಆಧಾರದಲ್ಲಿ, ಇತರ ಸಹಚರರನ್ನು ಬಂಧಿಸಲು ಮತ್ತೊಮ್ಮೆ ರಾಜಸ್ಥಾನಕ್ಕೆ ತೆರಳಲು ವಿಶೇಷ ತಂಡವನ್ನು ರಚಿಸಲಾಗಿದೆ ಎಂದು ರಾಯಚೂರು ಸೈಬರ್ ಪೊಲೀಸರು ತಿಳಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Gold Ring Astrology: ಈ ಬೆರಳಿಗೆ ಚಿನ್ನದ ಉಂಗುರ ಧರಿಸುವುದು ಶನಿದೋಷಕ್ಕೆ ಕಾರಣವಾಗಬಹುದು! – Kannada News | Gold Ring Astrology: Which Finger Brings Luck? Rules and Benefits

ಚಿನ್ನವು ಸೂರ್ಯ ಮತ್ತು ಗುರುವಿನ ಸಂಕೇತ. ಅದಕ್ಕಾಗಿಯೇ ಹಿರಿಯರು ಅದನ್ನು ಧರಿಸುವಾಗ ಕೆಲವು ನಿಯಮಗಳನ್ನು ಪಾಲಿಸಬೇಕು ಎಂದು ಹೇಳುತ್ತಾರೆ. ತೋರು ಬೆರಳಿನಲ್ಲಿ ಧರಿಸುವುದರಿಂದ ಏಕಾಗ್ರತೆ ಹೆಚ್ಚಾಗುತ್ತದೆ, ಆದರೆ ಮಧ್ಯದ ಬೆರಳಿಗೆ ಧರಿಸುವುದು ಅಶುಭ ಎಂದು ಜ್ಯೋತಿಷಿಗಳು ಎಚ್ಚರಿಸುತ್ತಾರೆ. ನಿಮ್ಮ ರಾಶಿಚಕ್ರದ ಪ್ರಕಾರ ಯಾವ ಬೆರಳು ನಿಮಗೆ ಅದೃಷ್ಟವನ್ನು ತರುತ್ತದೆ? ಚಿನ್ನವನ್ನು ಧರಿಸಲು ಸರಿಯಾದ ಮಾರ್ಗ ಯಾವುದು ಎಂದು ಇಲ್ಲಿ ತಿಳಿದುಕೊಳ್ಳಿ.

ಜ್ಯೋತಿಷ್ಯದ ಪ್ರಕಾರ, ಚಿನ್ನವನ್ನು ಧರಿಸುವುದರಿಂದ ನಮ್ಮ ಮೇಲೆ ಸಕಾರಾತ್ಮಕ ಗ್ರಹಗಳ ಪ್ರಭಾವ ಉಂಟಾಗುತ್ತದೆ. ಪ್ರತಿ ಬೆರಳಿಗೆ ಚಿನ್ನವನ್ನು ಧರಿಸುವುದರಿಂದಾಗುವ ಫಲಿತಾಂಶಗಳನ್ನು ಇಲ್ಲಿ ತಿಳಿಯಿರಿ.

ತೋರುಬೆರಳು:

ಈ ಬೆರಳು ‘ಗುರು’ ಗ್ರಹದ ಚಿಹ್ನೆ. ನೀವು ಶಿಕ್ಷಣ, ವೃತ್ತಿ ಅಥವಾ ಆತ್ಮವಿಶ್ವಾಸದಲ್ಲಿ ಶ್ರೇಷ್ಠರಾಗಲು ಬಯಸಿದರೆ, ಈ ಬೆರಳಿಗೆ ಚಿನ್ನದ ಉಂಗುರವನ್ನು ಧರಿಸುವುದು ಉತ್ತಮ. ಇದು ಏಕಾಗ್ರತೆಯನ್ನು ಹೆಚ್ಚಿಸುತ್ತದೆ.

ಉಂಗುರ ಬೆರಳು:

ಇದು ಸೂರ್ಯ ಮತ್ತು ಶುಕ್ರನ ಸ್ಥಾನ. ಈ ಬೆರಳಿಗೆ ಚಿನ್ನ ಧರಿಸುವುದರಿಂದ ಸಮಾಜದಲ್ಲಿ ಗೌರವ ಹೆಚ್ಚಾಗುತ್ತದೆ. ವಿವಾಹಿತ ಮಹಿಳೆಯರಿಗೆ, ಇದು ಕುಟುಂಬದಲ್ಲಿ ಸಂತೋಷ ಮತ್ತು ಶಾಂತಿಯನ್ನು ತರುತ್ತದೆ.

ಇದನ್ನೂ ಓದಿ: ಮನೆಯಲ್ಲಿ ತಪ್ಪಿಯೂ ಈ ಜಾಗದಲ್ಲಿ ಹಣ ಇಡಬೇಡಿ, ಸಾಲ ಹೆಚ್ಚಾಗಬಹುದು

ಮಧ್ಯದ ಬೆರಳು:

ಮಧ್ಯದ ಬೆರಳು ಶನಿ ಗ್ರಹಕ್ಕೆ ಸೇರಿದೆ. ಚಿನ್ನವು ಸೂರ್ಯನಿಗೆ ಸಂಬಂಧಿಸಿದ ಲೋಹವಾಗಿರುವುದರಿಂದ, ಈ ಬೆರಳಿನಲ್ಲಿ ಚಿನ್ನವನ್ನು ಧರಿಸುವುದರಿಂದ ಸೂರ್ಯ ಮತ್ತು ಶನಿಯ ನಡುವಿನ ದ್ವೇಷದಿಂದಾಗಿ ಜೀವನದಲ್ಲಿ ಅಡೆತಡೆಗಳು ಮತ್ತು ಸಂಘರ್ಷಗಳಿಗೆ ಕಾರಣವಾಗಬಹುದು. ಆದ್ದರಿಂದ ತಪ್ಪಿಯೂ ಈ ಬೆರಳಿಗೆ ಚಿನ್ನದ ಉಂಗುರು ಧರಿಸಬೇಡಿ.

ಯಾವಾಗ ಧರಿಸಬೇಕು?

ಅಧಿಪತಿ ಗುರುವಾಗಿರುವುದರಿಂದ, ಗುರುವಾರದಂದು ಚಿನ್ನ ಧರಿಸುವುದು ಅತ್ಯಂತ ಶುಭ. ಧರಿಸುವ ಮೊದಲು, ಹಸಿ ಹಾಲು ಅಥವಾ ಗಂಗಾ ಜಲದಿಂದ ಶುದ್ಧೀಕರಿಸಿ ಮತ್ತು ತ್ವರಿತ ಶುಭ ಫಲಿತಾಂಶಗಳನ್ನು ಪಡೆಯಲು ‘ಓಂ ಬೃಹಸ್ಪತಯೇ ನಮಃ’ ಎಂಬ ಮಂತ್ರವನ್ನು ಪಠಿಸಿ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಒಂದೇ ಒಂದು ಎಸೆತದಿಂದ ಭರ್ಜರಿ ದಾಖಲೆ ತಪ್ಪಿಸಿಕೊಂಡ ಲಾರೆನ್ ಬೆಲ್

Source link

Exit mobile version