ವುಮೆನ್ಸ್ ಪ್ರೀಮಿಯರ್ ಲೀಗ್​ನಲ್ಲಿ ಹೊಸ ಇತಿಹಾಸ ಬರೆದ ನಡಿನ್ ಡಿ ಕ್ಲರ್ಕ್​ – Kannada News | Nadine de klerk creates history in WPL 2026

ವುಮೆನ್ಸ್ ಪ್ರೀಮಿಯರ್ ಲೀಗ್‌ನ 4ನೇ ಸೀಸನ್ ಶುರುವಾಗಿದೆ. ಮೊದಲ ಪಂದ್ಯದಲ್ಲೇ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಗೆ ಸೋಲುಣಿಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಶುಭಾರಂಭ ಮಾಡಿದೆ. ಈ ಶಭಾರಂಭದ ಕಾರಣಕರ್ತರು ನಡಿನ್ ಡಿ ಕ್ಲರ್ಕ್ (Nadine de Klerk).

ಈ ಪಂದ್ಯದಲ್ಲಿ 4 ಓವರ್ ಎಸೆದಿದ್ದ ನಡಿನ್ ಡಿ ಕ್ಲರ್ಕ್​ ಕೇವಲ 26 ರನ್ ನೀಡಿ 4 ವಿಕೆಟ್ ಪಡೆದಿದ್ದರು. ಈ ಮೂಲಕ ಮುಂಬೈ ಇಂಡಿಯನ್ಸ್ ತಂಡವನ್ನು ಅಲ್ಪ ಮೊತ್ತಕ್ಕೆ ನಿಯಂತ್ರಿಸಿದರು. ಇದಾದ ಬಳಿಕ ಏಕಾಂಗಿ ಹೋರಾಟದೊಂದಿಗೆ ಆರ್ ಸಿಬಿ ತಂಡಕ್ಕೆ ರೋಚಕ ಗೆಲುವು ತಂದು ಕೊಡುವಲ್ಲಿ ಯಶಸ್ವಿಯಾದರು.

ಸಂಪೂರ್ಣ ಮುಂಬೈ ಇಂಡಿಯನ್ಸ್ ಪರ ವಾಲಿದ್ದ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ ನಡಿನ್ 44 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 7 ಫೋರ್ ಗಳೊಂದಿಗೆ ಅಜೇಯ 63 ರನ್ ಬಾರಿಸಿದರು. ಅದರಲ್ಲೂ ಕೊನೆಯ ಓವರ್‌ನಲ್ಲಿ 2 ಸಿಕ್ಸ್ ಹಾಗೂ 2 ಫೋರ್ ಬಾರಿಸುವ ಮೂಲಕ RCB ತಂಡಕ್ಕೆ 3 ವಿಕೆಟ್‌ಗಳ ರೋಚಕ ಜಯ ತಂದುಕೊಟ್ಟರು.

ಈ ಗೆಲುವಿನೊಂದಿಗೆ ವುಮೆನ್ಸ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲೇ ತಂಡವೊಂದರ ಪರ ಪಾದಾರ್ಪಣೆ ಪಂದ್ಯದಲ್ಲೇ ಅರ್ಧಶತಕ ಹಾಗೂ 4 ವಿಕೆಟ್ ಕಬಳಿಸಿದ ಮೊದಲ ಆಟಗಾರ್ತಿ ಎನಿಸಿಕೊಂಡಿದ್ದಾರೆ. ಈ ಮೂಲಕ ಆರ್ ಸಿಬಿ ಪರ ಕಣಕ್ಕಿಳಿದ ಚೊಚ್ಚಲ ಪಂದ್ಯದಲ್ಲೇ ನಡಿನ್ ಭರ್ಜರಿ ದಾಖಲೆ ಬರೆದಿದ್ದಾರೆ.

ಅಷ್ಟೇ ಅಲ್ಲದೇ ವುಮೆನ್ಸ್ ಪ್ರೀಮಿಯರ್ ಲೀಗ್‌ ಪಂದ್ಯದ ಕೊನೆಯ ಓವರ್‌ನಲ್ಲಿ ಅತ್ಯಧಿಕ ರನ್ ಬಾರಿಸಿ ಪಂದ್ಯ ಗೆಲ್ಲಿಸಿದ 2ನೇ ಬ್ಯಾಟರ್ ಎನಿಸಿಕೊಂಡಿದ್ದಾರೆ. ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವುದು ಗ್ರೇಸ್ ಹ್ಯಾರಿಸ್. 2023ರ ವುಮೆನ್ಸ್ ಪ್ರೀಮಿಯರ್ ಲೀಗ್ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ವಿರುದ್ಧ ಯುಪಿ ವಾರಿಯರ್ಸ್‌ ಪರ ಕಣಕ್ಕಿಳಿದ ಗ್ರೇಸ್ ಹ್ಯಾರಿಸ್ ಕೊನೆಯ ಓವರ್‌ನಲ್ಲಿ 19 ರನ್ ಬಾರಿಸಿ ಪಂದ್ಯ ಗೆಲ್ಲಿಸಿದ್ದರು. ಇದೀಗ ಕೊನೆಯ ಓವರ್‌ನಲ್ಲಿ 18 ರನ್ ಚಚ್ಚುವ ಮೂಲಕ ನಡಿನ್ ಡಿ ಕ್ಲರ್ಕ್ ಈ ಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ.

Published On – 7:40 am, Sat, 10 January 26

Source link

ಮೈಸೂರು: ಅರಣ್ಯ ಇಲಾಖೆ ವಾಹನವ ಅಟ್ಟಾಡಿಸಿಕೊಂಡು ಬೆನ್ನಟ್ಟಿದ ಕಾಡಾನೆ, ವಿಡಿಯೋ ವೈರಲ್ – Kannada News | Wild Elephant Chases Forest Department Vehicle in Mysuru, Viral Video Raises Alarm

ಮೈಸೂರು, ಜನವರಿ 10: ಮೈಸೂರು ಜಿಲ್ಲೆಯ ಸರಗೂರು ತಾಲ್ಲೂಕಿನ ದಡದಳ್ಳಿ ಕಾಲೋನಿಯ ಅರಣ್ಯ ಅಂಚಿನಲ್ಲಿ ಕಾಡಾನೆ ಅರಣ್ಯ ಇಲಾಖೆ ವಾಹನವನ್ನು ಚೇಸ್ ಮಾಡಿದ ಘಟನೆ ಆತಂಕ ಮೂಡಿಸಿದೆ. ಈ ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅರಣ್ಯ ಅಂಚಿನ ಬಳಿ ರೈಲು ಕಂಬಿ ಬ್ಯಾರಿಕೇಡ್ ಹಾಕಲಾಗಿದ್ದ ಪ್ರದೇಶದಲ್ಲಿ ಒಂಟಿ ಸಲಗ ಸಂಚರಿಸುತ್ತಿತ್ತು. ಈ ವೇಳೆ ಅರಣ್ಯ ಇಲಾಖೆ ಸಿಬ್ಬಂದಿಗಳು ಇರುವ ವಾಹನವನ್ನು ಕಂಡ ತಕ್ಷಣ ಕಾಡಾನೆ ಘೀಳಿಟ್ಟು ದೌಡಾಯಿಸಿದೆ. ಬ್ಯಾರಿಕೇಡ್ ಒಳಗಿಂದಲೇ ವಾಹನದತ್ತ ನುಗ್ಗಲು ಯತ್ನಿಸಿದ ಕಾಡಾನೆ, ಅಡ್ಡಿಯಿದ್ದ ಕಾರಣ ದಾಳಿ ನಡೆಸಲು ಸಾಧ್ಯವಾಗಿಲ್ಲ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕರ್ನಾಟಕ ಹವಾಮಾನ ವರದಿ: ರಾಜ್ಯದಲ್ಲಿ ಶೀತದಲೆಯ ಅಬ್ಬರ; 3 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​ – Kannada News | Bengaluru temperature: Yellow alert for 3 district of karnataka

ರಾಜ್ಯದಲ್ಲಿ ಶೀತದಲೆಯ ಅಬ್ಬರ; 3 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​

ಬೆಂಗಳೂರು, ಜನವರಿ 10: ರಾಜ್ಯದಲ್ಲಿ ನಿನ್ನೆಯಿಂದ ಚಳಿಯ ಪ್ರಮಾಣ ಹೆಚ್ಚಾಗಿದ್ದು, ನಿನ್ನೆ ಹಲವು ಜಿಲ್ಲೆಗಳಿಗೆ ಅಲರ್ಟ್​ ನೀಡಲಾಗಿತ್ತು. ಇಂದೂ ಸಹ ತಾಪಮಾನದಲ್ಲಿ ಸುಧಾರಣೆಯಾಗದ ಕಾರಣ ಹಲವೆಡೆ ಮಂಜು ಹಾಗೂ ಒಣ ಹವೆಯ (Weather Forecast) ವಾತಾವರಣ ಜನಜೀವನದ ಮೇಲೆ ಪ್ರಭಾವ ಬೀರುತ್ತಿದೆ. ಪರಿಣಾಮವಾಗಿ ಹವಾಮಾನ ಇಲಾಖೆ ರಾಜ್ಯದ 3 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​ ಸೂಚಿಸಲಾಗಿದೆ.

ಎಲ್ಲೆಲ್ಲಿ ಒಣಹವೆ?

ರಾಜ್ಯದಲ್ಲಿ ಅತಿಯಾದ ಶೀತದಲೆಯ ಕಾರಣದಿಂದಾಗಿ ಬೀದರ್, ಕಲಬುರಗಿ ಹಾಗೂ ವಿಜಯಪುರ ಜಿಲ್ಲೆಗಳಿಗೆ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್​ ಸೂಚಿಸಿದೆ. ದಕ್ಷಿಣ ಒಳನಾಡಿನ ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ, ರಾಮನಗರ, ಚಿಕ್ಕಮಗಳೂರು, ಶಿವಮೊಗ್ಗ, ಹಾಸನ, ಕೊಡಗು, ಚಾಮರಾಜನಗರ, ಮೈಸೂರು, ತುಮಕೂರು ಮತ್ತು ವಿಜಯನಗರ ಜಿಲ್ಲೆಗಳಲ್ಲಿಯೂ ಒಣ ಹವೆಯ ವಾತಾವರಣ ಇರಲಿದೆ.

ಕರಾವಳಿಯ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಒಣ ಹವೆಯಿರಲಿದೆ ಎಂದು ಇಲಾಖೆ ತಿಳಿಸಿದೆ. ಉತ್ತರ ಒಳನಾಡು ಭಾಗದ ಜಿಲ್ಲೆಗಳಾದ ಬೆಳಗಾವಿ, ಬೀದರ್, ವಿಜಯಪುರ, ಬಾಗಲಕೋಟೆ, ಹಾವೇರಿ, ಗದಗ, ಧಾರವಾಡ, ಕಲಬುರಗಿ, ಕೊಪ್ಪಳ, ಬಳ್ಳಾರಿ, ರಾಯಚೂರು, ಯಾದಗಿರಿ ಮತ್ತು ವಿಜಯನಗರದಲ್ಲಿ ಕಳೆದ ಹಲವು ದಿನಗಳಿಂದ ಒಣಹವೆಯ ವಾತಾವರಣವಿದ್ದು, ಇಂದೂ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ರಾಜಧಾನಿಯಲ್ಲಿ ಚಳಿ

ರಾಜಧಾನಿ ಬೆಂಗಳೂರಿನಲ್ಲಿ ಚಳಿಯ ತೀವ್ರತೆ ಹೆಚ್ಚಾಗಿದ್ದು, ಬೆಳಗಿನ ಜಾವ ಮಂಜು ಮುಸುಕಿದ ವಾತಾವರಣ ಕಂಡುಬರುತ್ತಿದೆ. ಇಂದು ನಗರದ ಕನಿಷ್ಠ ತಾಪಮಾನ 15 ಡಿಗ್ರಿ ಸೆಲ್ಸಿಯಸ್ ಹಾಗೂ ಗರಿಷ್ಠ 26 ಡಿಗ್ರಿ ಸೆಲ್ಸಿಯಸ್ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಚಳಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜನರ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ, ಬೆಚ್ಚಗಿನ ಉಡುಪು ಧರಿಸುವುದು ಹಾಗೂ ಬಿಸಿ ಆಹಾರ ಸೇವಿಸುವಂತೆ ವೈದ್ಯರು ಸಲಹೆ ನೀಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಚಾಮರಾಜನಗರ: ನೇನೆಕಟ್ಟೆ ಗ್ರಾಮದಲ್ಲಿ ರಾಜಾರೋಷವಾಗಿ ಸಂಚರಿಸಿದ ಚಿರತೆ, ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಯ್ತು ದೃಶ್ಯ – Kannada News | Leopard Roams Freely in Nenekatte Village of Chamarajanagar, CCTV Footage Sparks Panic

ಚಾಮರಾಜನಗರ, ಜನವರಿ 10: ಗಡಿನಾಡು ಚಾಮರಾಜನಗರ ಜಿಲ್ಲೆಯಲ್ಲಿ ಕಾಡು ಪ್ರಾಣಿಗಳ ಉಪಟಳ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಒಂದೆಡೆ ಹುಲಿ ಉಪಟಳದಿಂದ ಜನತೆ ಆತಂಕದಲ್ಲಿರುವಾಗಲೇ, ಇದೀಗ ಚಿರತೆಯ ಭೀತಿ ಗ್ರಾಮಸ್ಥರನ್ನು ಕಾಡತೊಡಗಿದೆ. ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ನೇನೆಕಟ್ಟೆ ಗ್ರಾಮದಲ್ಲಿ ಚಿರತೆ ರಾಜಾರೋಷವಾಗಿ ಸಂಚರಿಸಿರುವ ದೃಶ್ಯ ಸಿಸಿ ಕ್ಯಾಮರದಲ್ಲಿ ಸೆರೆಯಾಗಿದೆ. ಗ್ರಾಮದ ಒಳಗೇ ನಿರ್ಭಯವಾಗಿ ಓಡಾಡುತ್ತಿರುವ ಚಿರತೆಯನ್ನು ಕಂಡು ಗ್ರಾಮಸ್ಥರು ಅಕ್ಷರಶಃ ಬೆಚ್ಚಿಬಿದ್ದಿದ್ದಾರೆ. ಕಳೆದ ಎರಡು ತಿಂಗಳಿನಿಂದ ಚಿರತೆ ಆಗಾಗ ಗ್ರಾಮಕ್ಕೆ ನುಗ್ಗಿ ಕಾಣಿಸಿಕೊಳ್ಳುತ್ತಿದ್ದು, ಜನರಲ್ಲಿ ತೀವ್ರ ಆತಂಕ ಮೂಡಿಸಿದೆ. ನೇನೆಕಟ್ಟೆ ಗ್ರಾಮ ಬಂಡೀಪುರ ಟೈಗರ್ ರಿಸರ್ವ್ ಅರಣ್ಯಕ್ಕೆ ಅಂಟಿಕೊಂಡಂತಿರುವುದರಿಂದ ಕಾಡು ಪ್ರಾಣಿಗಳ ಓಡಾಟ ಹೆಚ್ಚಾಗಿದೆ ಎನ್ನಲಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕೆಟ್ಟ ವಿಮರ್ಶೆ ಪಡೆದರೂ ‘ರಾಜಾ ಸಾಬ್’ ಚಿತ್ರದಿಂದ ಭರ್ಜರಿ ಕಲೆಕ್ಷನ್ – Kannada News | The Raja Saab First day Collection Movie Bangs on Box office amid bad review

ಪ್ರಭಾಸ್ ಅವರು ಕೊನೆಯದಾಗಿ ಕಾಣಿಸಿಕೊಂಡಿದ್ದು ‘ಕಲ್ಕಿ 2898 ಎಡಿ’ ಸಿನಿಮಾದಲ್ಲಿ. ಇದಾದ ಬಳಿಕ ಹೀರೋ ಆಗಿ ಅವರು ಯಾವ ಸಿನಿಮಾದಲ್ಲೂ ನಟಿಸಿಲ್ಲ. ಅವರು ಕೆಲವು ಚಿತ್ರಗಳಲ್ಲಿ ಅತಿಥಿ ಪಾತ್ರಗಳನ್ನು ಮಾಡಿದರು. ಈಗ ಪ್ರಭಾಸ್ ಅವರು ‘ರಾಜಾ ಸಾಬ್’ ಚಿತ್ರದ ಮೂಲಕ ಪ್ರೇಕ್ಷಕರ ಎದುರು ಬಂದಿದ್ದಾರೆ. ಈ ಸಿನಿಮಾದ ಮೊದಲ ದಿನದ ಕಲೆಕ್ಷನ್ ಹೇಗಿದೆ ಎಂಬುದರ ಲೆಕ್ಕ ಸಿಕ್ಕಿದೆ. ಈ ಚಿತ್ರ ಉತ್ತಮ ವಿಮರ್ಶೆ ಪಡೆದ ಹೊರತಾಗಿಯೂ ಮೊದಲ ದಿನ ಒಳ್ಳೆಯ ಗಳಿಕೆ ಮಾಡಿದೆ ಎಂಬುದು ವಿಶೇಷ.

ಪ್ರಭಾಸ್ ಅವರು ಕಥೆಯನ್ನು ಒಪ್ಪಿಕೊಳ್ಳುವಾಗ ಸಾಕಷ್ಟು ಗಮನ ಹರಿಸುತ್ತಾರೆ. ಅವರು ‘ರಾಜಾ ಸಾಬ್’ ಚಿತ್ರವನ್ನು ಒಪ್ಪಿಕೊಂಡಾಗ ಎಲ್ಲರಿಗೂ ಅಚ್ಚರಿ ಆಗಿದ್ದಂತೂ ಸುಳ್ಳಲ್ಲ. ಈ ಸಿನಿಮಾ ಹಾರರ್ ಕಾಮಿಡಿ ಶೈಲಿಯಲ್ಲಿ ಮೂಡಿ ಬಂದಿದೆ. ಈ ಚಿತ್ರ ನೋಡಿದ ಅನೇಕರು ನೆಗೆಟಿವ್ ಆಗಿ ವಿಮರ್ಶೆ ನೀಡಿದ್ದಾರೆ. ಅಭಿಮಾನಿಗಳಿಗೂ ಸಿನಿಮಾ ಇಷ್ಟ ಆಗಿಲ್ಲ ಎಂದೇ ಹೇಳಬಹುದು. ಈ ಸಿನಿಮಾ ಮೊದಲ ದಿನ ಕೇವಲ 45 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಪ್ರೀಮಿಯರ್ ಶೋಗಳಿಂದ ಚಿತ್ರಕ್ಕೆ 9.15 ಕೋಟಿ ರೂಪಾಯಿ ಹರಿದು ಬಂದಿದೆ. ಎಲ್ಲವೂ ಸೇರಿದರೆ ಸಿನಿಮಾ ಕಲೆಕ್ಷನ್ 54 ಕೋಟಿ ರೂಪಾಯಿ ಅಷ್ಟು ಆಗಿದೆ.

‘ರಾಜಾ ಸಾಬ್’ ಚಿತ್ರವನ್ನು ಏಕೆ ಮಾಡಿದಿರಿ ಎಂದು ಕೇಳಿದಾಗ ಪ್ರಭಾಸ್ ಇದಕ್ಕೆ ಸ್ಪಷ್ಟನೆ ನೀಡಿದ್ದರು. ಕಾಮಿಡಿ ಸಿನಿಮಾಗಳನ್ನು ತಾವು ಮಾಡಬಲ್ಲರು ಎಂಬುದನ್ನು ತೋರಿಸಲು ಅವರು ಈ ಚಿತ್ರವನ್ನು ಒಪ್ಪಿಕೊಂಡಿದ್ದರಂತೆ. ಇದು ಅನೇಕರಿಗೆ ಅಚ್ಚರಿ ಮೂಡಿಸಿತ್ತು. ಈಗ ಅವರು ಈ ವಿಷಯದಲ್ಲಿ ಸೋತಿದ್ದಾರೆ. ಮುಂದಿನ ದಿನಗಳಲ್ಲಿ ಸಿನಿಮಾ ಅಂದುಕೊಂಡ ಮಟ್ಟದಲ್ಲಿ ಪ್ರದರ್ಶನ ಕಾಣದೆ ಇರಬಹುದು ಎಂದು ಹೇಳಲಾಗುತ್ತಾ ಇದೆ.

ಇದನ್ನೂ ಓದಿ: ಮತ್ತೊಂದು ‘ರಾಧೆ ಶ್ಯಾಮ್’; ‘ರಾಜಾ ಸಾಬ್’ ನೋಡಿ ತಲೆಕೆಡಿಸಿಕೊಂಡ ಪ್ರೇಕ್ಷಕ

‘ರಾಜಾ ಸಾಬ್’ ನೋಡಿದ ಮೊದಲ ದಿನವೇ ಜನರು ಹೀನಾಯ ವಿಮರ್ಶೆ ನೀಡಿದರು. ಅನೇಕರು ಈ ಚಿತ್ರವನ್ನು ‘ರಾಧೆ ಶ್ಯಾಮ್’ ಚಿತ್ರದ ದುರಂತಕ್ಕೆ ಹೋಲಿಸಿದರು. ರಾಜಾ ಸಾಬ್ ಚಿತ್ರವನ್ನು ಮಾರುತಿ ನಿರ್ದೇಶನ ಮಾಡಿದ್ದಾರೆ. ಸಿನಿಮಾ ಇಷ್ಟ ಆಗಿಲ್ಲ ಎಂದರೆ ಮನೆಗೆ ಬನ್ನಿ ಎಂದು ಅಡ್ರೆಸ್ ಕೊಟ್ಟಿದ್ದರು. ಫ್ಯಾನ್ಸ್ ಅಲ್ಲಿ ಹೋಗಿ ಗಲಾಟೆ ಮಾಡದಿದ್ದರೆ ಅದುವೇ ಅವರ ಅದೃಷ್ಟ ಎಂದು ಹೇಳಬಹುದು. ಪ್ರಭಾಸ್ ಅವರು ‘ಸ್ಪಿರಿಟ್’ ಸಿನಿಮಾದಲ್ಲಿ ಕಾಣಿಸಿಕೊಳ್ಳಬೇಕಿದೆ. ಈ ಚಿತ್ರದ ಬಗ್ಗೆ ನಿರೀಕ್ಷೆ ಸೃಷ್ಟಿ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Daily Devotional: ಮನೆಯಲ್ಲಿ ಆಲೋವೆರಾ ಇದ್ದರೆ ಏನೆಲ್ಲಾ ಲಾಭ?

ಬೆಂಗಳೂರು, ಜನವರಿ 10: ವಾಸ್ತುಶಾಸ್ತ್ರದ ಪ್ರಕಾರ, ನಮ್ಮ ವಾಸಸ್ಥಳ, ಕಚೇರಿ ಅಥವಾ ವ್ಯಾಪಾರ ಸ್ಥಳದಲ್ಲಿ ಕೆಲವು ಸಸ್ಯಗಳನ್ನು ಇಡುವುದು ಅದೃಷ್ಟ ಮತ್ತು ಸಕಾರಾತ್ಮಕ ಶಕ್ತಿಗಳನ್ನು ಆಕರ್ಷಿಸುತ್ತದೆ. ಇಂತಹ ಸಸ್ಯಗಳನ್ನು ನೋಡಿದಾಗ ನಮ್ಮ ಮನಸ್ಸು ಕೂಡ ಸಕಾರಾತ್ಮಕವಾಗಿ ಪರಿವರ್ತನೆಗೊಳ್ಳುವ ಸಾಧ್ಯತೆ ಇರುತ್ತದೆ. ಲೋಳೆ ರಸ ಅಥವಾ ಅಲೋವೆರಾ ಒಂದು ವಿಶೇಷವಾದ ಗಿಡವಾಗಿದೆ. ಇದನ್ನು ಮನೆಯಲ್ಲಿ ಇಟ್ಟುಕೊಳ್ಳುವುದರಿಂದ ಶುಭವಾಗುತ್ತದೆ ಎಂಬ ನಂಬಿಕೆ ಇದೆ.

ಅಲೋವೆರಾ ಗಿಡವನ್ನು ವಾಸ್ತುಶಾಸ್ತ್ರದ ನಿಯಮಗಳ ಪ್ರಕಾರ ಇರಿಸಿದಾಗ, ಅದು ವೃತ್ತಿ ಜೀವನ, ಆರ್ಥಿಕ ಸ್ಥಿತಿ ಮತ್ತು ಆರೋಗ್ಯದ ಮೇಲೆ ಧನಾತ್ಮಕ ಪ್ರಭಾವ ಬೀರುತ್ತದೆ. ಈ ಗಿಡವು ಸುತ್ತಮುತ್ತಲಿನ ವಾತಾವರಣದಲ್ಲಿ ಸಕಾರಾತ್ಮಕ ಮತ್ತು ಧನಾತ್ಮಕ ಶಕ್ತಿಗಳನ್ನು ಹೆಚ್ಚಿಸುತ್ತದೆ. ಅಲೋವೆರಾವನ್ನು ಬಾಲ್ಕನಿಯಲ್ಲಿ, ಗಾಳಿ ಬರುವ ಜಾಗದಲ್ಲಿ ಮತ್ತು ಸ್ವಲ್ಪ ಸೂರ್ಯನ ಬೆಳಕು ಬೀಳುವ ಸ್ಥಳದಲ್ಲಿ ಇಡುವುದು ಬಹಳ ಶುಭಕರ.

ಆದರೆ, ಅಲೋವೆರಾವನ್ನು ಯಾವುದೇ ಕಾರಣಕ್ಕೂ ವಾಯುವ್ಯ ಮತ್ತು ಆಗ್ನೇಯ ದಿಕ್ಕುಗಳಲ್ಲಿ ಇಡಬಾರದು ಎಂದು ವಾಸ್ತುಶಾಸ್ತ್ರ ಹೇಳುತ್ತದೆ. ಇದು ಋಣಾತ್ಮಕ ಶಕ್ತಿಗಳನ್ನು ನಿವಾರಿಸುವ ಗುಣವನ್ನು ಹೊಂದಿದೆ. ಅಲೋವೆರಾ ಒಂದು ಮಂಗಳಕರ ಮತ್ತು ಪವಿತ್ರ ಗಿಡವೆಂದು ಪರಿಗಣಿಸಲಾಗುತ್ತದೆ, ಇದು ಶಾಂತಿ, ನೆಮ್ಮದಿ ಮತ್ತು ಸೌಖ್ಯವನ್ನು ತರುತ್ತದೆ ಎಂದು ಡಾ. ಬಸವರಾಜ ಗುರೂಜಿ ಹೇಳಿದ್ದಾರೆ.

 

 

 

Source link

ಬೆಂಗಳೂರಿನ ಬಿ ಖಾತಾದಾರರಿಗೆ ಗುಡ್ ನ್ಯೂಸ್: ಲಕ್ಷಾಂತರ ಅಪಾರ್ಟ್‌ಮೆಂಟ್‌ಗಳಿಗೆ ಸಿಗಲಿದೆ ಎ ಖಾತಾ! – Kannada News | Good News for Bengaluru B Khata Holders: A Khata Approval Likely for Lakhs of Apartments

ಬೆಂಗಳೂರು, ಜನವರಿ 10: ಬೆಂಗಳೂರು (Bangalore) ನಗರದ ಬಡಾವಣೆಗಳಲ್ಲಿನ ಬಿ-ಖಾತಾ ನಿವೇಶನ, ಕಟ್ಟಡಗಳಿಗೆ ಮತ್ತು ನಗರ ಪಾಲಿಕೆಗಳ ವ್ಯಾಪ್ತಿಯ ಅಧಿಕೃತ ಅಪಾರ್ಟ್‌ಮೆಂಟ್‌ಗಳಲ್ಲಿನ ಫ್ಲಾಟ್‌ಗಳಿಗೆ ಎ-ಖಾತಾ ಸೌಲಭ್ಯ ಸಿಗಲಿದೆ. ಕಾಯ್ದೆ 1961 ಅನ್ನು ಉಲ್ಲಂಘಿಸಿ ನಿರ್ಮಿಸಿರುವ ಅಧಿಕೃತ ನಿವೇಶನ, ಕಟ್ಟಡ, ಅಪಾರ್ಟ್‌ಮೆಂಟ್‌ಗಳಲ್ಲಿನ ಫ್ಲಾಟ್‌ಗಳಿಗೆ ಮಾತ್ರ ಖಾತಾ ಪರಿವರ್ತನೆಗೆ ಅವಕಾಶ ನೀಡಲಾಗುತ್ತದೆ. ಜೊತೆಗೆ ಸುಮಾರು 10 ಲಕ್ಷ ಬಿ ಖಾತಾ ಆಸ್ತಿಗಳಿವೆ. ಜಿಬಿಎ ವ್ಯಾಪ್ತಿಯಲ್ಲಿ ವಿಧಿಸಲಾಗಿದ್ದ ನಿಯಮಗಳನ್ನೇ ಉಳಿದ ಕಡೆಗಳಿಗೂ ಅನ್ವಯಿಸಲಾಗುವುದು ಎನ್ನಲಾಗಿದೆ. ಒತ್ತುವರಿ ಮತ್ತು ಉಲ್ಲಂಘನೆಯ ಪ್ರಮಾಣಕ್ಕೆ ಅನುಗುಣವಾಗಿ ದಂಡದ ಪ್ರಮಾಣವನ್ನು ನಿಗದಿ ಮಾಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಎ ಖಾತಾ ನೀಡಲು ಮಾನದಂಡವೇನು?

  • ಅಪಾರ್ಟ್‌ಮೆಂಟ್​​ ಈ ವರ್ಷದ ಅಸ್ತಿ ತೆರಿಗೆ ಪಾವತಿ ಮಾಡಿರಬೇಕು.
  • ಅಪಾರ್ಟ್‌ಮೆಂಟ್​ಗೆ ನಕ್ಷೆ ಇರಬೇಕು.
  • ಸರ್ಕಾರ ಸೂಚಿಸಿದ ಮಾರ್ಗಸೂಚಿ ದರದ ಶೇಕಡಾ 5ರಷ್ಟು ಹಣ ಪಾವತಿ ಮಾಡಬೇಕು.
  • ಅಪಾರ್ಟ್‌ಮೆಂಟ್ ಲ್ಯಾಂಡ್​ಗೆ ಬಿ ಖಾತಾ ಇರಬೇಕು.
  • ಅಪಾರ್ಟಮೆಂಟ್ ಮಾಲೀಕರು ವೈಯಕ್ತಿಕವಾಗಿ ಇ ಖಾತಾಗೆ ಅಪ್ಲೈ ಮಾಡಬೇಕು.
  • ನಕ್ಷೆ ಮೀರಿ ಕಟ್ಟಡ ನಿರ್ಮಾಣ ಮಾಡಿದ್ರೆ ಮಾರ್ಗಸೂಚಿ ಬೆಲೆಯ ಶೇಕಡಾ 50 ರಷ್ಟು ಹಣ ಪಾವತಿ ಮಾಡಬೇಕು.
  • ಅನ್​ಲೈನ್ ಮುಖಾಂತರ ಇ ಖಾತಾಗೆ ಅರ್ಜಿ ಸಲ್ಲಿಸಬಹುದು.
  • ಸಲ್ಲಿಕೆ ಮಾಡಿದ ದಾಖಲೆಯನ್ನು ಅಧಿಕಾರಿಗಳು ಪರಿಶೀಲನೆ ನಡೆಸಿ ಖಾತಾ ವಿತರಣೆ ಮಾಡುತ್ತಾರೆ.

ಮತ್ತೊಂದೆಡೆ, ಎ ಖಾತಾಗೆ ಪರಿವರ್ತನೆ ಮಾಡಿಕೊಡುವ ಈ ಪ್ರಕ್ರಿಯೆಯನ್ನು ಕೇವಲ ಸರ್ಕಾರದ ಆದಾಯ ಹೆಚ್ಚಿಸುವ ಉದ್ದೇಶದಿಂದ ಮಾಡುತ್ತಿದ್ದಾರೆ. ಇದು ಕಾನೂನು ಪ್ರಕಾರ ಸರಿಯಾಗುವುದಿಲ್ಲ. ಜನರನ್ನು ದಾರಿ ತಪ್ಪಿಸುವಂತಹ ಕೆಲಸ ಮಾಡುತ್ತಿದಾರೆ ಎಂಬ ಆರೋಪಗಳೂ ಹಲವೆಡೆ ಕೇಳಿಬರುತ್ತಿವೆ.

ಇದನ್ನೂ ಓದಿ:  ಬಿ ಖಾತಾದಿಂದ ಎ ಖಾತಾಗೆ ಬದಲಾವಣೆ: ಜನರ ಪ್ರಶ್ನೆಗಳಿಗೆ ಯಾರಿಗೂ ಉತ್ತರವೇ ಗೊತ್ತಿಲ್ಲ

ಒಟ್ಟಿನಲ್ಲಿ ರಾಜ್ಯದಲ್ಲಿ ಇ ಖಾತಾ ಅಡಿಯಲ್ಲಿ ಇರುವ ಅನೇಕ ಸ್ವತ್ತುಗಳಿಗೆ ಎ ಖಾತಾದ ಭಾಗ್ಯ ಸಿಕಿಲ್ಲ. ಆದರೆ ಅಪಾರ್ಟ್‌ಮೆಂಟ್​ಗಳಿಗೆಮಾತ್ರ ಎ ಖಾತಾ ನೀಡುವ ಭರವಸೆ ನೀಡಿರುವ ಸರ್ಕಾರ ಆ ಮೂಲಕ ಆದಾಯ ಹೆಚ್ಚಳಕ್ಕೆ ಮುಂದಾಗಿದೆ.

ವರದಿ: ಅರುಣ್ ಕುಮಾರ್, ಟಿವಿ9 ಬೆಂಗಳೂರು

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Horoscope Today 10 January: ಇಂದು ಈ ರಾಶಿಯವರಿಗೆ ಮೂರು ಗ್ರಹಗಳ ಶುಭಫಲ

ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ಅವರು 10-01-2026 ರ ಶನಿವಾರದ ದ್ವಾದಶ ರಾಶಿಗಳ ಫಲಾಫಲಗಳನ್ನು ಪ್ರಸ್ತುತಪಡಿಸಿದ್ದಾರೆ. ವಿಶ್ವಾವಸುನಾಮ ಸಂವತ್ಸರ, ಪುಷ್ಯ ಮಾಸದ ಈ ದಿನ ಶನಿವಾರವಾಗಿದ್ದು, ರವಿ ಧನುಸ್ಸು ರಾಶಿಯಲ್ಲಿ, ಚಂದ್ರ ತುಲಾ ರಾಶಿಯಲ್ಲಿ ಸಂಚರಿಸಲಿದ್ದಾನೆ. ಈ ದಿನ ಸ್ವಾಮಿ ವಿವೇಕಾನಂದರ ಜಯಂತೋತ್ಸವ ಮತ್ತು ಕೆಂಗಲ್‌ನಲ್ಲಿ ಆಂಜನೇಯ ಸ್ವಾಮಿಗಳ ರಥೋತ್ಸವ ನಡೆಯಲಿದೆ.

ಈ ದಿನದ ರಾಹುಕಾಲ ಬೆಳಿಗ್ಗೆ 9:34 ರಿಂದ 11:00ರ ತನಕ ಇರಲಿದ್ದು, ಸರ್ವಸಿದ್ದಿ ಕಾಲ ಮಧ್ಯಾಹ್ನ 1:52 ರಿಂದ 3:18ರ ವರೆಗೆ ಇರುತ್ತದೆ. ಚಿತ್ತ ನಕ್ಷತ್ರದಲ್ಲಿ ಚಂದ್ರನ ಸಂಚಾರದ ಪರಿಣಾಮವಾಗಿ, ಪ್ರತಿ ರಾಶಿಯವರು ಆರ್ಥಿಕವಾಗಿ, ಉದ್ಯೋಗದಲ್ಲಿ, ಆರೋಗ್ಯದಲ್ಲಿ ಮತ್ತು ಸಂಬಂಧಗಳಲ್ಲಿ ವಿವಿಧ ರೀತಿಯ ಫಲಗಳನ್ನು ಅನುಭವಿಸುವರು. ಕೆಲವು ರಾಶಿಗಳಿಗೆ ಶುಭಫಲಗಳಿದ್ದರೆ, ಇನ್ನು ಕೆಲವರಿಗೆ ಎಚ್ಚರಿಕೆಯಿಂದ ಇರಲು ಸೂಚಿಸಲಾಗಿದೆ. ಪ್ರತಿಯೊಬ್ಬರಿಗೂ ಅದೃಷ್ಟದ ಬಣ್ಣ, ಸಂಖ್ಯೆ ಮತ್ತು ಜಪಿಸಬೇಕಾದ ಮಂತ್ರವನ್ನು ನೀಡಲಾಗಿದೆ. ಈ ಮುನ್ನೋಟಗಳು ದಿನವನ್ನು ಉತ್ತಮವಾಗಿ ಯೋಜಿಸಲು ಸಹಕಾರಿಯಾಗಲಿವೆ ಎಂದು ಡಾ. ಬಸವರಾಜ ಗುರೂಜಿ ತಿಳಿಸಿದ್ದಾರೆ.

 

Source link

ಡಿಕೆ ಶಿವಕುಮಾರ್ ತಿನಿಸಿದ ಸ್ವೀಟನ್ನು ಬಾಯಿಂದ ತೆಗೆದು ಎಸೆದ ಸಿಎಂ ಸಿದ್ದರಾಮಯ್ಯ! ವಿಡಿಯೋ ನೋಡಿ – Kannada News | Vijayapura: CM Siddaramaiah Throws Away Sweet Offered by DK Shivakumar, Video Goes Viral

ವಿಜಯಪುರ, ಜನವರಿ 10: ವಿಜಯಪುರದಲ್ಲಿ ಶುಕ್ರವಾರ ನಡೆದ ಸನ್ಮಾನ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ತಿನ್ನಿಸಿದ ಲಡ್ಡನ್ನು ಬಾಯಿಯಿಂದ ತೆಗೆದು ಬಿಸಾಡಿದ್ದಾರೆ. ದೀರ್ಘಾವಧಿ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ದಾಖಲೆ ನಿರ್ಮಿಸಿದ ಹಿನ್ನೆಲೆಯಲ್ಲಿ ಈ ಸನ್ಮಾನ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಸಚಿವ ಎಂಬಿ ಪಾಟೀಲ್ ಮನೆಯಲ್ಲಿ ತಯಾರಿಸಿದ ಲಡ್ಡನ್ನು ಸಿದ್ದರಾಮಯ್ಯನವರಿಗೆ ಮೊದಲು ನೀಡಿದರು. ನಂತರ ಎಂ.ಬಿ. ಪಾಟೀಲ್ ಅವರು ಅದೇ ಲಾಡುವನ್ನು ಡಿಕೆ ಶಿವಕುಮಾರ್ ಕೈಗೆ ಕೊಟ್ಟು ಮುಖ್ಯಮಂತ್ರಿಗೆ ತಿನ್ನಿಸುವಂತೆ ಕೇಳಿದರು. ಒತ್ತಾಯಕ್ಕೆ ಮಣಿದು ಡಿಸಿಎಂ ಡಿಕೆ ಶಿವಕುಮಾರ್ ಸಿಎಂಗೆ ಸಿಹಿ ತಿನ್ನಿಸಿದರು. ಆದರೆ, ಆ ಲಡ್ಡನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಬಾಯಿಂದ ತೆಗೆದು ಎಸೆದಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 1, 2, 3ರ ಜನವರಿ 10ರ ದಿನಭವಿಷ್ಯ

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1):

ನಿಮ್ಮ ನಾಯಕತ್ವದ ಗುಣಕ್ಕೆ ಪರೀಕ್ಷೆಗಳು ಎದುರಾದುವ ದಿನ ಇದಾಗಿರಲಿದೆ. ಸಣ್ಣ ಪುಟ್ಟ ವಿಚಾರಗಳಿಗೆ ಸಿಟ್ಟು ಮಾಡಿಕೊಳ್ಳದೆ, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮುಂದಕ್ಕೆ ಹೋದರೆ ಮಾತ್ರ ಹೊಸ ಯೋಜನೆಗಳು ಸಫಲವಾಗುತ್ತವೆ. ಆರ್ಥಿಕವಾಗಿ ಹಳೆಯ ಹೂಡಿಕೆಗಳಿಂದ ಸಣ್ಣ ಮಟ್ಟದ ಲಾಭ ಬರಬಹುದು, ಆದರೆ ಆ ಹಣವನ್ನು ಮತ್ತೆ ಹೊಸ ಸಾಹಸಗಳಿಗೆ ಬಳಸಬೇಡಿ. ಕುಟುಂಬದಲ್ಲಿ ಅಣ್ಣ ಅಥವಾ ತಂದೆಯ ಸಮಾನ ರಾದಂಥ ವ್ಯಕ್ತಿಗಳ ಜೊತೆಗಿನ ಸಂಬಂಧ ಸುಧಾರಿಸಲಿದೆ. ಸೃಜನಶೀಲ ಕೆಲಸಗಳಿಗೆ ಹೆಚ್ಚಿನ ಒತ್ತು ನೀಡಿ.

ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2):

ಇನ್ ಟ್ಯೂಷನ್ ಬಹಳ ಪ್ರಬಲವಾಗಿರುತ್ತದೆ, ಹಾಗಾಗಿ ಮನಸ್ಸಿನ ಮಾತಿಗೆ ಕಿವಿಗೊಡಿ. ಕಚೇರಿಯಲ್ಲಿ ಗುಂಪುಗಾರಿಕೆಯಿಂದ ದೂರವಿರುವುದು ನಿಮ್ಮ ವೃತ್ತಿಜೀವನಕ್ಕೆ ಒಳ್ಳೆಯದು. ಹಣಕಾಸಿನ ವಿಚಾರದಲ್ಲಿ ಮಧ್ಯಸ್ಥಿಕೆ ವಹಿಸುವುದು ಬೇಡ, ಅದು ನಿಮ್ಮನ್ನೇ ಇಕ್ಕಟ್ಟಿಗೆ ಸಿಲುಕಿಸಬಹುದು. ಕಲಾತ್ಮಕ ಹವ್ಯಾಸಗಳಿಗೆ ಸಮಯ ಮೀಸಲಿಡುವುದರಿಂದ ಮಾನಸಿಕ ನೆಮ್ಮದಿ ಸಿಗಲಿದೆ. ಪ್ರೀತಿಪಾತ್ರರೊಂದಿಗೆ ಸಣ್ಣ ಪ್ರವಾಸ ಕೈಗೊಳ್ಳುವ ಸಾಧ್ಯತೆ ಇದೆ, ಆಹಾರದ ವಿಚಾರದಲ್ಲಿ ಸ್ವಲ್ಪ ಜಾಗರೂಕರಾಗಿರಿ.

ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3):

ನೀವು ಮಾತು ಕಡಿಮೆ ಮಾಡಿ ಕೆಲಸಕ್ಕೆ ಹೆಚ್ಚು ಆದ್ಯತೆ ನೀಡಿ. ಅತಿಯಾದ ಉಪದೇಶ ಮಾಡುವುದರಿಂದ ನಿಮ್ಮ ಆಪ್ತರನ್ನು ನಿಮ್ಮಿಂದ ದೂರ ಮಾಡಬಹುದು. ವೃತ್ತಿ ಕ್ಷೇತ್ರದಲ್ಲಿ ಹೊಸ ಒಪ್ಪಂದಗಳಿಗೆ ಸಹಿ ಹಾಕಲು ಅತ್ಯಂತ ಶುಭ ದಿನ. ಕೌಟುಂಬಿಕವಾಗಿ ಮಂಗಳ ಕಾರ್ಯಗಳ ಬಗ್ಗೆ ಚರ್ಚೆಗಳು ನಡೆಯಲಿವೆ. ಸಾಮಾಜಿಕ ಜವಾಬ್ದಾರಿಗಳು ಹೆಚ್ಚಾಗಲಿದ್ದು, ಸಂಘ-ಸಂಸ್ಥೆಗಳಲ್ಲಿ ಸಕ್ರಿಯರಾಗಿ ಕಾರ್ಯ ನಿರ್ವಹಿಸುತ್ತಾ ಇರುವವರಿಗೆ ಹೊಸ ಜವಾಬ್ದಾರಿ ಸಿಗಲಿದೆ. ಆರ್ಥಿಕವಾಗಿ ಇದು ಸ್ಥಿರತೆಯ ದಿನ.

ಲೇಖನ- ಎನ್‌.ಕೆ.ಸ್ವಾತಿ

Source link

Exit mobile version