ವಿದೇಶಗಳಿಗೆ ಪರಾರಿಯಾಗಿದ್ದ 274 ಆರ್ಥಿಕ ಅಪರಾಧಿಗಳು ಭಾರತಕ್ಕೆ ಹಸ್ತಾಂತರ: 2019-26ರಲ್ಲಾದ ಸಾಧನೆ ಇದು – Kannada News | India brings back 274 fugitive criminals from 36 countries in last 5 years

ಪೊಲೀಸರ ಸಾಂದರ್ಭಿಕ ಚಿತ್ರImage Credit source: PTI

ನವದೆಹಲಿ, ಆಗಸ್ಟ್ 4: ವಿವಿಧ ಅಪರಾಧಗಳನ್ನು ಎಸಗಿ ದೇಶದಿಂದ ಪರಾರಿಯಾಗಿ ತಲೆಮರೆಸಿಕೊಂಡಿರುವ ಅಪರಾಧಿಗಳ (Fugitive criminals) ಪೈಕಿ 274 ಮಂದಿಯನ್ನು ಕಳೆದ ಐದು ವರ್ಷದ ಅವಧಿಯಲ್ಲಿ ಭಾರತಕ್ಕೆ ಹಸ್ತಾಂತರಿಸಲಾಗಿದೆ (Extradition). 2019 ರಿಂದ 2026 ರ ನಡುವಿನ ಅವಧಿಯಲ್ಲಿ 36 ದೇಶಗಳಿಂದ 274 ಅಪರಾಧಿಗಳನ್ನು ಭಾರತಕ್ಕೆ ತರಲಾಗಿದೆ ಎನ್ನುವ ಮಾಹಿತಿಯನ್ನು ಸರ್ಕಾರ ನೀಡಿದೆ. ಪ್ರಸಕ್ತ ಕೇಂದ್ರ ಸರ್ಕಾರವು ಅಪರಾಧಿಗಳ ಹಸ್ತಾಂತರವನ್ನು ‘ರಾಷ್ಟ್ರೀಯ ಆದ್ಯತೆ’ಯನ್ನಾಗಿ (National Priority) ಮಾಡಿಕೊಂಡಿದೆ.

ತ್ರಿಮುಖ ಕಾರ್ಯತಂತ್ರ ಮತ್ತು ಜಾಗತಿಕ ಸಹಕಾರ

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ನೇತೃತ್ವದಲ್ಲಿ, ಅಪರಾಧಿಗಳನ್ನು ಹಸ್ತಾಂತರಿಸುವ ಪ್ರಕ್ರಿಯೆಯನ್ನು ‘ಮಿಷನ್ ಮೋಡ್’ನಲ್ಲಿ ಜಾರಿಗೆ ತರಲಾಗಿದೆ. ಇದಕ್ಕಾಗಿ ಮೋದಿ ಸರ್ಕಾರವು ಮೂರು ಮುಖ್ಯ ತತ್ವಗಳ ಮೇಲೆ ಕಾರ್ಯತಂತ್ರ ರೂಪಿಸಿದೆ:

  • ಜಾಗತಿಕ ಕಾರ್ಯಾಚರಣೆಗಳು (Global Operations)
  • ಸದೃಢ ಸಮನ್ವಯತೆ (Robust Coordination)
  • ಚಾಣಾಕ್ಷ ರಾಜತಾಂತ್ರಿಕತೆ (Smart Diplomacy)

ಇದನ್ನೂ ಓದಿ: ಕಂಪನಿ ಎಂಡಿ ಮತ್ತು ನಿರ್ದೇಶಕರಾಗಲು 21 ಅಲ್ಲ, 18 ವರ್ಷ ವಯಸ್ಸಾಗಿದ್ದರೂ ಸಾಕು; ಸರ್ಕಾರದ ಮುಂದಿದೆ ಪ್ರಸ್ತಾಪ

ತಂತ್ರಜ್ಞಾನ ಮತ್ತು ಗುಪ್ತಚರ ಆಧಾರಿತ ಮಾದರಿಯನ್ನು ಬಳಸಿ, ಹೆಸರು ಹಾಗೂ ಗುರುತು ಬದಲಾಯಿಸಿಕೊಂಡು ವಿದೇಶಗಳಲ್ಲಿ ಅಡಗಿರುವ ಅಪರಾಧಿಗಳನ್ನು ಪತ್ತೆಹಚ್ಚಲು ‘ಆಪರೇಷನ್ ತ್ರಿಶೂಲ್’ (Operation Trishul) ಅಡಿಯಲ್ಲಿ ಉಪಗ್ರಹ ತಂತ್ರಜ್ಞಾನ ಹಾಗೂ ಡಿಜಿಟಲ್ ಹೆಜ್ಜೆಗುರುತುಗಳನ್ನು (Digital Footprints) ಪರಿಣಾಮಕಾರಿಯಾಗಿ ಬಳಸಿಕೊಳ್ಳಲಾಗಿದೆ.

ಭಾರತ್‌ಪೋಲ್ ಮತ್ತು ಇಂಟರ್‌ಪೋಲ್ ಬಳಕೆ

ಕಳೆದ ಮೂರು ವರ್ಷಗಳಲ್ಲಿ ಇಂಟರ್‌ಪೋಲ್ ಮೂಲಕ ಕನಿಷ್ಠ 401 ಅಪರಾಧಿಗಳ ವಿರುದ್ಧ ರೆಡ್ ಕಾರ್ನರ್ ನೋಟಿಸ್ (Red Corner Notice) ಹೊರಡಿಸಲಾಗಿದೆ.

ಇದರ ಜೊತೆಗೆ, ಭಾರತ ಸರ್ಕಾರವು ‘ಭಾರತ್‌ಪೋಲ್’ (BHARATPOL) ಎಂಬ ನೂತನ ತಂತ್ರಜ್ಞಾನ ವ್ಯವಸ್ಥೆಯನ್ನು ಪ್ರಾರಂಭಿಸಿದ್ದು, ಇದು ದೇಶದ 1,400ಕ್ಕೂ ಹೆಚ್ಚು ತನಿಖಾ ಸಂಸ್ಥೆಗಳನ್ನು ನೇರವಾಗಿ ಇಂಟರ್‌ಪೋಲ್‌ನೊಂದಿಗೆ ಜೋಡಿಸುತ್ತದೆ. ಇದರಿಂದಾಗಿ ಅಪರಾಧಿಗಳ ಮಾಹಿತಿ ವಿನಿಮಯದ ಸಮಯವು ಕೇವಲ 3 ರಿಂದ 10 ದಿನಗಳಿಗೆ ಕಡಿಮೆಯಾಗಿದೆ.

ಇದನ್ನೂ ಓದಿ: ಆರ್​ಬಿಐ ಹೊಸ ಮಾರ್ಗಸೂಚಿ; ಅ. 1ರಿಂದ ಬದಲಾಗಲಿವೆ ಬ್ಯಾಂಕ್ ಡೆಪಾಸಿಟ್ ನಿಯಮಗಳು

ಕಠಿಣ ಕಾನೂನುಗಳು ಮತ್ತು ಆಸ್ತಿ ಜಪ್ತಿ

ಅಪರಾಧಿಗಳನ್ನು ಮಟ್ಟಹಾಕಲು ಸರ್ಕಾರವು ಎನ್‍ಐಎ (NIA) ತಿದ್ದುಪಡಿ ಕಾಯ್ದೆ ಹಾಗೂ ಯುಎಪಿಎ (UAPA) ಕಾಯ್ದೆಗಳನ್ನು ಬಲಪಡಿಸಿದೆ. ನೂತನ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ (BNSS) ಸೆಕ್ಷನ್ 355 ಮತ್ತು 356 ಅಡಿಯಲ್ಲಿ, ದೇಶದಿಂದ ಓಡಿಹೋದ ಅಪರಾಧಿಗಳ ಗೈರುಹಾಜರಿಯಲ್ಲೂ ವಿಚಾರಣೆ ನಡೆಸುವ (Trials in absentia) ಐತಿಹಾಸಿಕ ಕಾನೂನು ತರಲಾಗಿದೆ.

ಆಸ್ತಿ ಮುಟ್ಟುಗೋಲು: ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (PMLA) ಅಡಿಯಲ್ಲಿ, 2019 ರಿಂದ 2026 ರವರೆಗೆ ವಿದೇಶಕ್ಕೆ ಓಡಿಹೋದ ಅಪರಾಧಿಗಳಿಗೆ ಸೇರಿದ ₹17,874 ಕೋಟಿ ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಲಾಗಿದೆ.

ಹಣ ಮರುವಸೂಲಿ: ಆರ್ಥಿಕ ಅಪರಾಧಿಗಳಿಂದ ವಶಪಡಿಸಿಕೊಂಡ ಹಣ ಸೇರಿದಂತೆ ಒಟ್ಟು ₹18,762 ಕೋಟಿಗಳನ್ನು ಬಾಧಿತರಿಗೆ/ಬ್ಯಾಂಕ್‌ಗಳಿಗೆ ಯಶಸ್ವಿಯಾಗಿ ಹಿಂತಿರುಗಿಸಲಾಗಿದೆ.

ದೇಶದ ಸಾರ್ವಭೌಮತ್ವ, ಆರ್ಥಿಕ ಸ್ಥಿರತೆ ಮತ್ತು ರಾಷ್ಟ್ರೀಯ ಭದ್ರತೆಗೆ ಧಕ್ಕೆ ತರುವ ಯಾವುದೇ ಅಪರಾಧಿಯನ್ನು ಬಿಡುವುದಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ಕೇಂದ್ರ ಸರ್ಕಾರ ಈ ಮೂಲಕ ರವಾನಿಸಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಮಹಿಳೆಯರಿಗಾಗಿ ‘ಋತುತಾರೆ’ ಯೋಜನೆ: ಆರೋಗ್ಯ ಸಚಿವ ಯು.ಟಿ.ಖಾದರ್ ಘೋಷಣೆ – Kannada News | ‘Rututare’ Scheme Announced for Women’s Health: Actress Ramya Named Brand Ambassador for Menopause Awareness

ಮಹಿಳೆಯರಿಗಾಗಿ ‘ಋತುತಾರೆ’ ಯೋಜನೆImage Credit source: Getty Images

ಬೆಂಗಳೂರು, ಆಗಸ್ಟ್​​ 04: ಮಹಿಳೆಯರಿಗಾಗಿ ‘ಋತುತಾರೆ’ ಎಂಬ ಹೊಸ ಯೋಜನೆಯೊಂದನ್ನು ರಾಜ್ಯ ಸರ್ಕಾರ ಜಾರಿಗೆ ತರುತ್ತಿದ್ದು, ಈ ಬಗ್ಗೆ ಸ್ವತಃ ಆರೋಗ್ಯ ಸಚಿವ ಯು.ಟಿ. ಖಾದರ್​ ಘೋಷಣೆ ಮಾಡಿದ್ದಾರೆ. ಮಹಿಳೆಯರು ಮಾನಸಿಕ ಒತ್ತಡ, ಸಮಸ್ಯೆ ಅನಭವಿಸುತ್ತಿದ್ದಾರೆ. ಹೀಗಾಗಿ ಮೆನೋಪಾಸ್ ಸಂಬಂಧ ಮಹಿಳಾ ತಜ್ಞೆ ಜೋಸ್ನಾ ಅಧ್ಯಕ್ಷೆತೆಯಲ್ಲಿ ಸಮಿತಿ ರಚಿಸಿದ್ದೇವೆ. ನಟಿ ರಮ್ಯಾ ಈ ಕಾರ್ಯಕ್ರಮದ ಬ್ರ್ಯಾಂಡ್ ಅಂಬಾಸಿಡರ್ ಆಗಿರಲಿದ್ದಾರೆ. ಆಶಾ ಕಾರ್ಯಕರ್ತೆಯರು ಮನೆಮನೆಗೆ ಹೋಗಿ ಮಹಿಳೆಯರ ಡೇಟಾ ತೆಗೆದುಕೊಳ್ಳಲಿದ್ದು, ಪ್ರೀ ಮೆನೋಪಾಸ್ ಹಾಗೂ ಪೋಸ್ಟ್ ಮೆನೋಪಾಸ್ ಕುರಿತು ಯಾವೆಲ್ಲಾ ಕ್ರಮ ತೆಗೆದುಕೊಳ್ಳಬೇಕು ಎನ್ನುವುದನ್ನು ತಿಳಿಸಲಿದ್ದಾರೆ ಎಂದವರು ತಿಳಿಸಿದ್ದಾರೆ.

ಮಹಿಳೆಯರನ್ನು ಕಾಡುತ್ತಿರುವ ಮೆನೋಪಾಸ್ ಸಮಸ್ಯೆ ಕುರಿತು ಸೂಕ್ತ ಕ್ರಮಕ್ಕೆ ನಟಿ ರಮ್ಯಾ ಒತ್ತಾಯಿಸಿದ್ದರು. ಈ ಹಿನ್ನಲೆ ಆರೋಗ್ಯ ಸಚಿವ ಯು.ಟಿ. ಖಾದರ್ ಜೊತೆ ನಟಿ ರಮ್ಯ ಹಾಗೂ ಇತರೆ ಪರಿಣಿತರೊಂದಿಗೆ ಬೆಂಗಳೂರಿನ ಆರೋಗ್ಯ ಸೌಧದಲ್ಲಿ ಮಹತ್ವದ ಸಂವಾದ ನಡೆಸಲಾಗಿದ್ದು, ಎಲ್ಲರ ಸಲಹೆ ಮತ್ತು ಸೂಚನೆಗಳನ್ನು ಆಲಿಸಿದ ಬಳಿಕ ಸರ್ಕಾರ ಈ ತೀರ್ಮಾನ ಮಾಡಿರೋದಾಗಿ ಸಚಿವರು ತಿಳಿಸಿದ್ದಾರೆ.

ಇದನ್ನೂ ಓದಿ: ಪದೇಪದೇ ಹುಳಿ ತೇಗು ಬರುತ್ತಿದ್ದರೆ ಈ ಆಹಾರಗಳ ಸೇವನೆಯನ್ನು ಕಡಿಮೆ ಮಾಡಿ

ಮಹಿಳಾ ತಜ್ಞರು ಹೇಳಿದ್ದೇನು?

ಮಹಿಳೆಯರಿಗೆ ಋತುಬಂಧ ಯಾವ ಸಮಯದಲ್ಲಿ ಬಂದಿದೆ? ಯಾವ ರೀತಿ ಬಂದಿದೆ? ಅನ್ನೋದನ್ನ ತಿಳಿದುಕೊಳ್ಳಬೇಕು. ನಾರ್ಮಲ್ ಹಾಗೂ ಸರ್ಜಿಕಲ್ ಮೆನೋಪಾಸ್ ಎಂಬ ಎರಡು ವಿಭಾಗಗಳಿವೆ. ಮೆನೋ ಪಾಸ್ ಸಮಯದಲ್ಲಿ ಹೃದಯ ಸಂಬಂಧಿ, ಮೂಳೆ ಸಂಬಂಧಿ ಕಾಯಿಲೆಗಳು ಬರುವ ಸಾಧ್ಯತೆ ಇದೆ. ಹೀಗಾಗಿ ಸರ್ಜಿಕಲ್ ಆಪರೇಷನ್ ಆದವರು ಹೆಚ್ಚಿನ ಗಮನ ಹರಿಸಬೇಕು. ನಾರ್ಮಲ್ ಮೆನೋಪಾಸ್ ಸಮಯದಲ್ಲಿ ತೊಂದರೆಯಾಗೋರಿಗೆ ಆಹಾರದಲ್ಲೇ ಸರಿಮಾಡಬಹುದು ಎಂದು ಮಹಿಳಾ ತಜ್ಞೆ ಜೋಸ್ನಾ ತಿಳಿಸಿದ್ದಾರೆ.

‘ಬ್ರ್ಯಾಂಡ್​​ ಅಂಬಾಸಿಡರ್​​ ಮಾಡಿರುವುದು ಖುಷಿ ಇದೆ’

ಇನ್ನು ಸರ್ಕಾರದ ನಿರ್ಧಾರದ ಬಗ್ಗೆ ಪ್ರತಿಕ್ರಿಯಿಸಿರುವ ನಟಿ ರಮ್ಯಾ, ಬೇರೆ ದೇಶಗಳಿಗೆ ಹೋಲಿಸಿದ್ರೆ ಭಾರತದಲ್ಲಿ ಮೆನೋಪಾಸ್ ಬೇಗ ಕಾಣಿಸಿಕೊಳ್ಳುತ್ತೆ. ಸಿಟಿಯಲ್ಲಿ ಅತಿ ಹೆಚ್ಚಿನ ಮಹಿಳೆಯರು ಮೆನೋಪಾಸ್‌ ಸಮಯದಲ್ಲಿ ಸಮಸ್ಯೆಯಿಂದ ಬಳಲುತ್ತಾರೆ. ಯಾವೆಲ್ಲಾ ಸಮಸ್ಯೆಗಳು ಕಾಣಿಸಿಕೊಳ್ಳುತ್ತೆ? ಮತ್ತು ಟ್ರೀಟ್‌ಮೆಂಟ್‌ ಏನೆಂಬ ಬಗ್ಗೆ ಸಿಟಿ ಭಾಗದವರಿಗೂ ಹೆಚ್ಚಾಗಿ ಗೊತ್ತಿಲ್ಲ. ಗ್ರಾಮೀಣ ಭಾಗದವರಿಗಂತೂ ಇದರ ಬಗ್ಗೆ ಮಾಹಿತಿ ಅತಿ ಕಡಿಮೆ ಇದೆ. ಹೀಗಾಗಿ ಇದರ ಬಗ್ಗೆ ಗೃಹಾರೋಗ್ಯ ಪುಸ್ತಕದಲ್ಲಿ ಸೇರಿಸಿ ಅಂತ ಮನವಿ ಇಟ್ಟುಕೊಂಡು ಬಂದಿದ್ದೆವು. ಆದರೆ ಘೋಷಿಸಿರುವ ಯೋಜನೆಗೆ ಸರ್ಕಾರ ತನ್ನನ್ನೇ ಬ್ರ್ಯಾಂಡ್​​ ಅಂಬಾಸಿಡರ್​​ ಮಾಡಿರುವುದು ಖುಷಿ ಇದೆ ಎಂದವರು ತಿಳಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಭರ್ತಿಯಾದ ಚಿಕ್ಲಿಹೊಳೆ ಕಿರು ಜಲಾಶಯ: ಅರ್ಧ ಚಂದ್ರಾಕೃತಿಯ ಜಲಪಾತ ಕಣ್ತುಂಬಿಕೊಳ್ಳಲು ಪ್ರವಾಸಿಗರ ಲಗ್ಗೆ – Kannada News | Kodagu’s Chiklihole Falls Becomes a Top Monsoon Tourist Attraction

ಕೊಡಗು, ಆಗಸ್ಟ್​​ 04: ಜಿಲ್ಲೆಯಾದ್ಯಂತ ಕಳೆದ ಒಂದು ವಾರದಿಂದ ಉತ್ತಮ ಮಳೆಯಾಗುತ್ತಿದ್ದು, ಜಿಲ್ಲೆಯ ನದಿ-ತೊರೆಗಳು ಉಕ್ಕಿ ಹರಿಯುತ್ತಿವೆ. ಪರಿಣಾಮವಾಗಿ ಜಲಾಶಯಗಳು ಭರ್ತಿಯಾಗುತ್ತಿದ್ದು, ಕುಶಾಲನಗರ ತಾಲೂಕಿನ ಸುಂಟಿಕೊಪ್ಪ ಸಮೀಪವಿರುವ ಚಿಕ್ಲಿಹೊಳೆ ಕಿರು ಜಲಾಶಯ ಸಂಪೂರ್ಣವಾಗಿ ಭರ್ತಿ ಆಗಿದ್ದು, ಪ್ರವಾಸಿಗರನ್ನು ತನ್ನತ್ತ ಕೈಬೀಸಿ ಕರೆಯುತ್ತಿದೆ. ಕೇವಲ 15 ದಿನಗಳ ಹಿಂದಷ್ಟೇ ನೀರಿಲ್ಲದೆ ಬಿಕೋ ಎನ್ನುತ್ತಿದ್ದ ಜಲಾಶಯ ಕಳೆದ ಒಂದು ವಾರದ ಸತತ ಮಳೆಯಿಂದಾಗಿ ಮೈದುಂಬಿಕೊಂಡಿದೆ. ಜಲಾಶಯ ತುಂಬಿದಾಗ ಈ ಅರ್ಧ ಚಂದ್ರಾಕೃತಿಯ ಕಟ್ಟೆಯ ಮೇಲಿಂದ ನೀರು ಧುಮ್ಮಿಕುವುದನ್ನು ನೋಡುವುದೇ ಚಂದ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

ಮಳೆನೀರಲ್ಲಿ ಮೊಬೈಲ್‌ ಫೋನ್‌ ನೆನೆದರೆ ಯಾವುದೇ ಚಿಂತೆ ಬೇಡ, ತಕ್ಷಣವೇ ಈ ಸುರಕ್ಷತಾ ಕ್ರಮಗಳನ್ನು ಪಾಲಿಸಿ – Kannada News | If your smartphone gets wet in the rain, follow these safety measures immediately

ಮಳೆಗಾಲದಲ್ಲಿ ವಾತಾವರಣ ತುಂಬಾನೇ ಆಹ್ಲಾದಕರವಾಗಿದ್ದರೂ, ಜೋರು ಮಳೆಗೆ ನೆರೆ, ಪ್ರವಾಹದಂತಹ ಸಮಸ್ಯೆಗಳು ಸಂಭವಿಸುತ್ತದೆ. ಇನ್ನೊಂದು ಕಡೆ ಭಾರೀ ಮಳೆಗೆ ನಾವೇನಾದರೂ ಮನೆಯಿಂದ ಹೊರಗೆ ಹೋದರೆ ಕೈಯಲ್ಲಿ ಹಿಡಿದುಕೊಂಡ, ಪಾಕೆಟ್‌ನಲ್ಲಿದ್ದ ಮೊಬೈಲ್‌ ಫೋನ್‌ (smartphone) ಒದ್ದೆಯಾಗುವ ಸಾಧ್ಯತೆ ಇರುತ್ತವೆ. ಕೆಲವೊಮ್ಮೆ ಫೋನ್‌ ಕೈಯಿಂದ ಜಾರಿ ನೀರಿಗೆ ಬೀಳುವ ಸಾಧ್ಯತೆಯೂ ಇರುತ್ತದೆ. ಇಂತಹ ಸಂದರ್ಭದಲ್ಲಿ ಫೋನ್‌ ಸರಿಯಾಗಿ ಕಾರ್ಯನಿರ್ವಹಿಸದಿದ್ದರೆ ಏನು ಮಾಡೋದೆಂಬ ಟೆನ್ಷನ್‌ ಇರುತ್ತದೆ. ಹೀಗೆ ಮಳೆನೀರಲ್ಲಿ ಮೊಬೈಲ್‌ ಫೋನ್‌ ಒದ್ದೆಯಾದರೆ ಆತಂಕಪಡುವ ಅಗತ್ಯವಿಲ್ಲ, ತಕ್ಷಣಕ್ಕೆ ಈ ಕೆಲವೊಂದು ಕೆಲಸಗಳನ್ನು ಮಾಡುವ ಮೂಲಕ ಮೊಬೈಲ್‌ ರಿಪೇರಿಗೆ ಸಾವಿರಾರು ರೂಪಾಯಿ ಖರ್ಚಾಗೋದನ್ನು ತಪ್ಪಿಸಬಹುದು.

ಮೊಬೈನ್‌ ಫೋನ್‌ ಮಳೆನೀರಿನಲ್ಲಿ ಒದ್ದೆಯಾದ್ರೆ ತಕ್ಷಣಕ್ಕೆ ಏನು ಮಾಡ್ಬೇಕು?

ಫೋನ್ ಅನ್ನು ತಕ್ಷಣ ಸ್ವಿಚ್ ಆಫ್ ಮಾಡಿ: ಮಳೆಯಿಂದಾಗಿ ನಿಮ್ಮ ಫೋನ್ ಒದ್ದೆಯಾದರೆ, ತಕ್ಷಣ ಅದನ್ನು ಆಫ್ ಮಾಡಿ. ಒದ್ದೆಯಾದ ಫೋನ್ ಅನ್ನು ಆನ್‌ನಲ್ಲಿ ಇಡುವುದರಿಂದ ಶಾರ್ಟ್ ಸರ್ಕ್ಯೂಟ್ ಮತ್ತು ಮದರ್‌ಬೋರ್ಡ್‌ಗೆ ಹಾನಿಯಾಗುವ ಅಪಾಯ ಹೆಚ್ಚಾಗುತ್ತದೆ. ಆದ್ದರಿಂದ, ಮೊಬೈಲ್‌ ಒದ್ದೆಯಾದರೆ ಫೋನ್‌  ಅನ್ನು ಆಫ್ ಮಾಡುವುದು.

ಸಿಮ್ ಟ್ರೇ, ಸಿಮ್ ಮತ್ತು ಮೆಮೊರಿ ಕಾರ್ಡ್‌ಗಳನ್ನು ತೆಗೆದುಹಾಕಿ: ಫೋನ್ ಆಫ್ ಮಾಡಿದ ನಂತರ, ಮೊದಲು ಸಿಮ್ ಟ್ರೇ ತೆಗೆದುಹಾಕಿ. ಅಲ್ಲದೆ, ಸಿಮ್ ಕಾರ್ಡ್ ಮತ್ತು ಮೆಮೊರಿ ಕಾರ್ಡ್ ತೆಗೆಯಿರಿ. ಇದು ಫೋನ್ ಒಳಗೆ ಗಾಳಿಯನ್ನು ಪರಿಚಲನೆ ಮಾಡಲು ಮತ್ತು ತೇವಾಂಶವನ್ನು ಬೇಗನೆ ಒಣಗಿಸಲು ಅನುವು ಮಾಡಿಕೊಡುತ್ತದೆ.

ಒಣ ಬಟ್ಟೆಯಿಂದ ಒರೆಸಿ: ಹೆಚ್ಚುವರಿ ನೀರನ್ನು ತೆಗೆದುಹಾಕಲು ಸ್ವಚ್ಛವಾದ ಮತ್ತು ಒಣಗಿದ ಹತ್ತಿ ಬಟ್ಟೆ ಅಥವಾ ಟಿಶ್ಯೂ ಪೇಪರ್‌ನಿಂದ ಫೋನ್ ಅನ್ನು ಚೆನ್ನಾಗಿ ಒರೆಸಿ. ಇದು ಹೊರಗಿನ ಮೇಲ್ಮೈಯಿಂದ ಯಾವುದೇ ತೇವಾಂಶವನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಆದರೆ ಎಂದಿಗೂ ನೀರನ್ನು ಒಣಗಿಸಲು ಹೇರ್‌ ಡ್ರೈಯರ್‌ ಅನ್ನು ಬಳಸಬಾರದು. ಏಕೆಂದರೆ ಡ್ರೈಯರ್‌ನ ಬಲವಾದ, ಬಿಸಿ ಗಾಳಿಯು ಫೋನಿನ ಸೂಕ್ಷ್ಮವಾದ ವೈರಿಂಗ್ ಅನ್ನು ಸುಟ್ಟುಹಾಕಬಹುದು ಮತ್ತು ನೀರನ್ನು ಒಳಭಾಗಕ್ಕೆ ಆಳವಾಗಿ ತಳ್ಳಬಹುದು.

ಅಕ್ಕಿಯಲ್ಲಿ ಒಣಗಿಸಿ:  ಫೋನ್‌ನ ಮೇಲ್ಭಾಗವನ್ನು ಒರೆಸಿದ ನಂತರ ಮೊಬೈಲ್‌ ಅನ್ನು ಅಕ್ಕಿಯ ಮಧ್ಯೆ ಇಟ್ಟುಬಿಡಿ. ಅಕ್ಕಿಯು ತೇವಾಂಶವನ್ನು ಬೇಗನೆ ಹೀರಿಕೊಳ್ಳುವ ನೈಸರ್ಗಿಕ ಸಾಮರ್ಥ್ಯವನ್ನು ಹೊಂದಿದೆ. ಕನಿಷ್ಠ 24 ರಿಂದ 48 ಗಂಟೆಗಳ ಕಾಲ ಫೋನ್ ಅನ್ನು ಅಕ್ಕಿಯೊಳಗೆ ಬಿಡಿ ಮತ್ತು ಅದನ್ನು ಹೊರತೆಗೆದು ಮತ್ತೆ ಮತ್ತೆ ಪರಿಶೀಲಿಸುವ ತಪ್ಪನ್ನು ಮಾಡಬೇಡಿ.

ಇದನ್ನೂ ಓದಿ: ಮಳೆಗಾಲದಲ್ಲಿ ಒಗೆದ ಬಟ್ಟೆಗಳನ್ನು ಒಣಗಿಸಲು ಜಸ್ಟ್‌ ಸರಳ ಮಾರ್ಗಗಳನ್ನು ಅನುಸರಿಸಿ

ಚಾರ್ಜ್ ಮಾಡುವ ತಪ್ಪು ಮಾಡಬೇಡಿ: ಫೋನ್‌ ನೀರನ್ನು ತುಂಬಾನೇ ನೆನೆದರೆ  ಅದನ್ನು ಕನಿಷ್ಠ ಎರಡು ದಿನಗಳವರೆಗೆ ಚಾರ್ಜ್‌ ಮಾಡಬೇಡಿ. ಅನೇಕ ಜನರು ತಮ್ಮ ಫೋನ್ ಇನ್ನೂ ಕಾರ್ಯನಿರ್ವಹಿಸುತ್ತಿದೆಯೇ ಎಂದು ಪರಿಶೀಲಿಸಲು ಚಾರ್ಜ್‌ ಮಾಡುತ್ತಾರೆ. ಹೀಗೆ ಒದ್ದೆಯಾದ ಫೋನ್ ಅನ್ನು ಚಾರ್ಜ್ ಮಾಡುವುದು ಅತ್ಯಂತ ಅಪಾಯಕಾರಿ. ಇದು ಶಾರ್ಟ್ ಸರ್ಕ್ಯೂಟ್ ಅಥವಾ ಇತರ ಹಾರ್ಡ್‌ವೇರ್ ಹಾನಿಯ ಅಪಾಯವನ್ನು ಹೆಚ್ಚಿಸುತ್ತದೆ.

ಫೋನ್ ಅನ್ನು 48 ರಿಂದ 72 ಗಂಟೆಗಳ ಕಾಲ ಆಫ್ ಮಾಡಿಡಿ:  ಕನಿಷ್ಠ 72 ಗಂಟೆಗಳ ಕಾಲ ನಿಮ್ಮ ಫೋನ್ ಅನ್ನು ಆನ್ ಮಾಡಬೇಡಿ. ಅದನ್ನು ಆನ್ ಮಾಡಿ ಪದೇ ಪದೇ ಪರಿಶೀಲಿಸಬೇಡಿ. ಹಾಗೆ ಮಾಡುವುದರಿಂದ ಫೋನ್‌ಗೆ ಹಾನಿಯಾಗುವ ಅಪಾಯ ಹೆಚ್ಚಾಗಬಹುದು. 48 ರಿಂದ 72 ಗಂಟೆಗಳ ನಂತರವೇ ಫೋನ್‌ ಆನ್‌ ಮಾಡಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ನಾಗೇಂದ್ರರನ್ನು ಪುನಃ ಮಂತ್ರಿ ಮಾಡಿದ್ದು ಇದೇ ಕಾರಣಕ್ಕೆ’: ಸ್ಫೋಟಕ ಆರೋಪ ಮಾಡಿದ ಜನಾರ್ದನ ರೆಡ್ಡಿ – Kannada News | ‘Inducted Out of Fear He Would Turn Approver’: Janardhana Reddy’s Explosive Charge Over B Nagendra’s Cabinet Return

ಸ್ಫೋಟಕ ಆರೋಪ ಮಾಡಿದ ಜನಾರ್ದನ ರೆಡ್ಡಿ
Image Credit source: PTI

ಬಳ್ಳಾರಿ, ಆಗಸ್ಟ್​​ 04: ಸಿಎಂ ಡಿಕೆ ಶಿವಕುಮಾರ್​​ ಅವರ ಸಚಿವ ಸಂಪುಟ ವಿಸ್ತರಣೆ ನಿನ್ನೆಯಷ್ಟೇ (ಆ.03) ನಡೆದಿದ್ದು, 19 ಮಂದಿ ಶಾಸಕರು ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಆ ಪೈಕಿ ಈ ಹಿಂದೆ ವಾಲ್ಮೀಕಿ ನಿಗಮದ ಹಗರಣ ಸಂಬಂಧ ತಲೆದಂಡವಾಗಿದ್ದ ಬಳ್ಳಾರಿ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಶಾಸಕ ಬಿ. ನಾಗೇಂದ್ರ ಕೂಡ ಮಂತ್ರಿಯಾಗಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಶಾಸಕ ಗಾಲಿ ಜನಾರ್ದನ ರೆಡ್ಡಿ, ವಾಲ್ಮೀಕಿ ನಿಗಮದ ಹಗರಣದಲ್ಲಿ ನಾಗೇಂದ್ರ ಮಾತ್ರವಲ್ಲದೇ ಬಹುತೇಕ ಪಾಲುದಾರ ಇದ್ದಾರೆ ಎಂದು ತಾನು ಹೇಳಿದ್ದು ಈಗ ನಿಜವಾಗಿದೆ. ನಾಗೇಂದ್ರ ಮುಖಕ್ಕೆ ಬೆಣ್ಣೆ ಹಚ್ಚಿರೋದು ತೋರಿಸಿ, ಉಳಿದವರು ಹಿಂದೆ ಲೂಟಿ ಹೊಡೆದಿದ್ದಾರೆ. ನಾಗೇಂದ್ರರಿಗೆ 10-20 ಪರ್ಸೆಂಟ್ ಕೊಟ್ಟು, ಉಳಿದ ಹಣವನ್ನು ಬಳ್ಳಾರಿ, ತೆಲಂಗಾಣ ಮತ್ತು ಗೋವಾ ಚುನಾವಣೆಗಳಿಗೆ ಬಳಸಿದ್ದಾರೆ. ಒಂದೊಮ್ಮೆ ನಾಗೇಂದ್ರರಿಗೆ ಮಂತ್ರಿ ಸ್ಥಾನ ನೀಡದಿದ್ದರೆ ಅವರು ಅಪ್ರೂವಲ್ ಆಗಿ ಬಿಡುತ್ತಿದ್ದರು ಎಂಬ ಕಾರಣಕ್ಕೆ ಹುದ್ದೆ ನೀಡಲಾಗಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

‘ಸತ್ಯ ಹೇಳಬಹುದೆಂಬ ಭಯಕ್ಕೆ ಮಂತ್ರಿಗಿರಿ ನೀಡಿದ್ದಾರೆ’

ಹಗರಣದ ದುಡ್ಡು ಕಾಂಗ್ರೆಸ್ ಪಕ್ಷದವರು ತಿಂದು ತನ್ನ ಜೈಲಿಗೆ ಹಾಕಿಸಿದ್ರು ಎಂದು ಕೋರ್ಟ್ ಮುಂದೆ ನಾಗೇಂದ್ರ ಹೇಳುತ್ತಿದ್ದರು. ಇದೇ ಭಯಕ್ಕೆ ಅವರನ್ನು ಮಂತ್ರಿ ಮಾಡಿದ್ದಾರೆ. ನಾಗೇಂದ್ರ ಬಗ್ಗೆ ತನಗೂ ಅನುಕಂಪ ಇದೆ. ಪಾಪ 10-20 ಪರ್ಸೆಂಟ್ ದುಡ್ಡು ತಿಂದು ಜೈಲಿಗೆ ಹೋದರು. ಆದರೆ ಅವರು ಬುದ್ಧಿವಂತರಾಗಿದ್ದು, ಯಾರ್ಯಾರು ಹಣ ತಿಂದಿದ್ದಾರೆ ಎಂಬ ಬಗ್ಗೆ ಪಟ್ಟಿ ಮಾಡಿ ಕೋರ್ಟ್​​ಗೆ ಕೊಡುತ್ತೇನೆ ಎಂದಿದ್ದಾರೆ. ಹೀಗಾಗಿಯೇ ಕಾಂಗ್ರೆಸ್​​ ಅವರಿಗೆ ಮತ್ತೆ ಮಣೆ ಹಾಕಿದೆ ಎಂದು ಜನಾರ್ದನ ರೆಡ್ಡಿ ಸ್ಫೋಟಕ ಆರೋಪ ಮಾಡಿದ್ದಾರೆ.

ಇದನ್ನೂ ಓದಿ: ನಮ್ಮಲ್ಲಿ ಯಾರಿಗೂ ಅಸಮಾಧಾನವಿಲ್ಲ, ಯಾರೂ ರಾಜೀನಾಮೆ ನೀಡಿಲ್ಲ ಎಂದ ಬಿ‌ಕೆ ಹರಿಪ್ರಸಾದ್

ಬಿಜೆಪಿಯಿಂದ ಪ್ರತಿಭಟನೆ

ಮತ್ತೊಂದೆಡೆ ಇದೇ ವಿಚಾರವಾಗಿ ವಿಧಾನಸಭೆ ವಿಪಕ್ಷ ನಾಯಕ ಆರ್​​. ಅಶೋಕ್​​ ಕೂಡ ಕಿಡಿ ಕಾರಿದ್ದಾರೆ. ವಾಲ್ಮೀಕಿ ನಿಗಮದಲ್ಲಿನ ಹಗರಣ ಸಂಬಂಧ ಹೋರಾಟ ಮಾಡಿ ನಾವು ನಾಗೇಂದ್ರ ಅವರ ರಾಜೀನಾಮೆ ಕೊಡಿಸಿದ್ದೆವು. ಆದರೆ ಈಗ ಅವರನ್ನು ವಾಷಿಂಗ್​​ ಮಷಿನ್​​ಗೆ ಹಾಕಿ ಕ್ಲೀನ್​​ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದರೆ. ಇನ್ನು ನೂತನ ಸಚಿವ ನಾಗೇಂದ್ರರನ್ನು ವಜಾ ಮಾಡುವಂತೆ ಆಗ್ರಹಿಸಿ ಪರಿಷತ್ ಸದಸ್ಯ ಲಿಂಗರಾಜ್ ಪಾಟೀಲ್ ನೇತೃತ್ವದಲ್ಲಿ ಬೆಳಗಾವಿ ನಗರದ ಚನ್ನಮ್ಮ ವೃತ್ತದಲ್ಲಿ ಬಿಜೆಪಿಗರು ಪ್ರತಿಭಟನೆ ಕೂಡ ನಡೆಸಿದ್ದಾರೆ. ವಾಲ್ಮೀಕಿ ನಿಗಮದ 187ಕೋಟಿ ನುಂಗಿದವರನ್ನು ಮತ್ತೆ ಸಂಪುಟಕ್ಕೆ ಸೇರಿಸಿಕೊಂಡಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್​​ ವಿರುದ್ಧ ಧಿಕ್ಕಾರ ಕೂಗಿ ಪ್ರತಿಭಟನಾಕಾರರು ಆಕ್ರೋಶ ಹೊರಹಾಕಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 3:38 pm, Tue, 4 August 26

Source link

ಎಂಡಿಆರ್ ಶುಲ್ಕ ಜಾರಿಯಾದರೆ 3,000 ರೂಗಿಂತ ಹೆಚ್ಚಿನ ಪಾವತಿಗೆ ಶೇ. 53 ಮಂದಿ ಹಿಂದೇಟು; ಸಮೀಕ್ಷೆ ಅಭಿಪ್ರಾಯ – Kannada News | MDR on UPI payments, will people stop using large UPI transactions, know what survey says

ನವದೆಹಲಿ, ಆಗಸ್ಟ್ 4: ಯುಪಿಐ (UPI) ವಹಿವಾಟುಗಳ ಮೇಲೆ ಮೆರ್ಚೆಂಟ್ ಡಿಸ್ಕೌಂಟ್ ರೇಟ್ (MDR – Merchant Discount Rate) ಶುಲ್ಕವನ್ನು ಸರ್ಕಾರ ಅಥವಾ ಆರ್‌ಬಿಐ ಮತ್ತೆ ಜಾರಿಗೆ ತಂದರೆ, ಶೇ. 53 ರಷ್ಟು ಗ್ರಾಹಕರು ₹3,000 ಕ್ಕಿಂತ ಹೆಚ್ಚಿನ ಮೊತ್ತದ ಯುಪಿಐ ಪಾವತಿಗಳನ್ನು ಮಾಡುವುದನ್ನೇ ನಿಲ್ಲಿಸಲಿದ್ದಾರೆ ಎಂದು ಹೊಸ ಸಮೀಕ್ಷೆಯೊಂದು ಬಹಿರಂಗಪಡಿಸಿದೆ. ಸ್ಥಳೀಯ ಸಮೀಕ್ಷಾ ಸಂಸ್ಥೆಯಾದ ‘ಲೋಕಲ್ ಸರ್ಕಲ್ಸ್’ (LocalCircles) ನಡೆಸಿದ ಈ ಸಮೀಕ್ಷೆಯಲ್ಲಿ ಸಾವಿರಾರು ಡಿಜಿಟಲ್ ಪಾವತಿ ಬಳಕೆದಾರರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಏನಿದು ಎಂಡಿಆರ್ (MDR) ಶುಲ್ಕ?

ವ್ಯಾಪಾರಿಗಳು (Merchants) ಡಿಜಿಟಲ್ ಪಾವತಿಗಳನ್ನು (ಡೆಬಿಟ್/ಕ್ರೆಡಿಟ್ ಕಾರ್ಡ್, ಯುಪಿಐ ಇತ್ಯಾದಿ) ಸ್ವೀಕರಿಸಲು ಬ್ಯಾಂಕ್ ಹಾಗೂ ಪಾವತಿ ಸೇವಾ ಪೂರೈಕೆದಾರರಿಗೆ (Payment Service Providers) ಪಾವತಿಸುವ ಸೇವಾ ಶುಲ್ಕವನ್ನು MDR ಎನ್ನಲಾಗುತ್ತದೆ. ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಮೂಲಕ ಮಾಡಲಾಗುವ ಪಾವತಿಗಳಿಗೆ ಸದ್ಯಕ್ಕೆ ಎಂಡಿಆರ್ ಶುಲ್ಕ ವಸೂಲಿ ಜಾರಿಯಲ್ಲಿದೆ. ಹಿಂದೆ ದೊಡ್ಡ ಮೊತ್ತದ ಯುಪಿಐ ಪಾವತಿಗೆ ವರ್ತಕರಿಂದ ಎಂಡಿಆರ್ ವಸೂಲಿ ಮಾಡಲಾಗುತ್ತಿತ್ತು. ಗ್ರಾಹಕರಿಗೆ ಇದರ ನೇರ ಹೊರೆ ಇರುವುದಿಲ್ಲ.

ಇದನ್ನೂ ಓದಿ: ಕಂಪನಿ ಎಂಡಿ ಮತ್ತು ನಿರ್ದೇಶಕರಾಗಲು 21 ಅಲ್ಲ, 18 ವರ್ಷ ವಯಸ್ಸಾಗಿದ್ದರೂ ಸಾಕು; ಸರ್ಕಾರದ ಮುಂದಿದೆ ಪ್ರಸ್ತಾಪ

2020 ರ ಜನವರಿಯಿಂದ ಸಾಮಾನ್ಯ ಯುಪಿಐ ಮತ್ತು ರುಪೇ (RuPay) ಡೆಬಿಟ್ ಕಾರ್ಡ್ ವಹಿವಾಟುಗಳ ಮೇಲಿನ ಎಂಡಿಆರ್ ಶುಲ್ಕವನ್ನು ಕೇಂದ್ರ ಸರ್ಕಾರ ಶೂನ್ಯ (Zero-MDR) ಮಾಡಿತ್ತು. ಆದರೆ, ಯುಪಿಐ ನೆಟ್‌ವರ್ಕ್ ನಿರ್ವಹಣಾ ವೆಚ್ಚ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ದೊಡ್ಡ ವರ್ತಕರು ಮತ್ತು ಸಂಸ್ಥೆಗಳಿಗೆ ₹3,000 ಕ್ಕಿಂತ ಹೆಚ್ಚಿನ ಯುಪಿಐ ಪಾವತಿಗೆ ಅಲ್ಪ ಪ್ರಮಾಣದ ಎಂಡಿಆರ್ ಶುಲ್ಕ ಮರುಜಾರಿಗೊಳಿಸುವ ಕುರಿತು ಚರ್ಚೆಗಳು ನಡೆಯುತ್ತಿವೆ.

ಸಮೀಕ್ಷೆಯಲ್ಲಿ ಜನರ ಅಭಿಪ್ರಾಯ ಏನು?

  • ₹3,000 ಕ್ಕಿಂತ ಹೆಚ್ಚಿನ ಯುಪಿಐ ಪಾವತಿ ಬಂದ್‌ ಮಾಡುವುದು: 53%
  • ಕ್ರೆಡಿಟ್/ಡೆಬಿಟ್ ಕಾರ್ಡ್ ಅಥವಾ ನೆಟ್ ಬ್ಯಾಂಕಿಂಗ್‌ಗೆ ಬದಲಾಗುವುದು: 22%
  • ನಗದು (Cash) ಪಾವತಿಗೆ ಮರಳುವುದು: 20%
  • ಶುಲ್ಕ ಬಿದ್ದರೂ ಯುಪಿಐ ಮುಂದುವರಿಸುವುದು: 5%

ಗ್ರಾಹಕರು ಮತ್ತು ವ್ಯಾಪಾರಿಗಳ ಮೇಲಾಗುವ ಪರಿಣಾಮ

  • ನಗದು ವಹಿವಾಟು ಹೆಚ್ಚಳ: ಯುಪಿಐ ಉಚಿತ ಎನ್ನುವ ಕಾರಣಕ್ಕೆ ಸಣ್ಣ ಹಾಗೂ ದೊಡ್ಡ ವಹಿವಾಟುಗಳಿಗೆ ಜನರು ಆನ್‌ಲೈನ್ ಪಾವತಿ ಮಾಡುತ್ತಿದ್ದರು. ಒಮ್ಮೆ ಶುಲ್ಕ ಅಥವಾ ಹೆಚ್ಚುವರಿ ಹೊರೆ ಬಿದ್ದರೆ, ಜನರು ಮತ್ತೆ ನಗದು (Cash) ಬಳಕೆಗೆ ಮರಳುವ ಸಾಧ್ಯತೆಯಿದೆ.
  • ವ್ಯಾಪಾರಿಗಳ ಆತಂಕ: ಒಂದು ವೇಳೆ ಎಂಡಿಆರ್ ಶುಲ್ಕವನ್ನು ವ್ಯಾಪಾರಿಗಳೇ ಭರಿಸಬೇಕಾಗಿ ಬಂದರೂ, ಅವರು ಆ ವೆಚ್ಚವನ್ನು ಪರೋಕ್ಷವಾಗಿ ಗ್ರಾಹಕರ ಮೇಲೆಯೇ (ವಸ್ತುಗಳ ಬೆಲೆ ಏರಿಕೆ ಮೂಲಕ) ವರ್ಗಾಯಿಸುವ ಸಾಧ್ಯತೆಯಿರುತ್ತದೆ.
  • ಡಿಜಿಟಲ್ ಪಾವತಿಗಳ ಬೆಳವಣಿಗೆಗೆ ಹಿನ್ನಡೆ: ಕಳೆದ ಕೆಲವು ವರ್ಷಗಳಲ್ಲಿ ಭಾರತದಲ್ಲಿ ಡಿಜಿಟಲ್ ಪಾವತಿ ಕ್ರಾಂತಿಗೆ ‘ಉಚಿತ ಯುಪಿಐ’ ಪ್ರಮುಖ ಕಾರಣವಾಗಿತ್ತು. ಹೊಸ ಶುಲ್ಕಗಳು ಈ ವೇಗಕ್ಕೆ ತಡೆ ಒಡ್ಡಬಹುದು ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಆರ್​ಬಿಐ ಹೊಸ ಮಾರ್ಗಸೂಚಿ; ಅ. 1ರಿಂದ ಬದಲಾಗಲಿವೆ ಬ್ಯಾಂಕ್ ಡೆಪಾಸಿಟ್ ನಿಯಮಗಳು

ಭಿನ್ನ ಯೋಚನೆ

ಕ್ರೆಡಿಟ್ ಕಾರ್ಡ್ ಪಾವತಿಗಳಿಗೆ ಎಂಡಿಆರ್ ಶುಲ್ಕ ಇದ್ದರೂ ಜನರು ಅಂಥ ಪೇಮೆಂಟ್​ಗಳನ್ನು ಬಳಸಲು ಹಿಂದೆ ಮುಂದೆ ನೋಡುವುದಿಲ್ಲ. ಹೀಗಾಗಿ, ಯುಪಿಐನಲ್ಲೂ ಎಂಡಿಆರ್ ಬಂದರೆ ಜನರು ಹಣ ಪಾವತಿಗೆ ಹಿಂದೇಟು ಹಾಕುವ ಸಾಧ್ಯತೆ ಕಡಿಮೆ ಎನ್ನುವ ಅಭಿಪ್ರಾಯ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಬೀದಿ ದೀಪ ಅಳವಡಿಸದ ಹಿನ್ನೆಲೆ ಜಿಬಿಎ ಸಭೆಯಲ್ಲಿ ಅಧಿಕಾರಿಗಳಿಗೆ ಸಚಿವ ಕೃಷ್ಣ ಭೈರೇಗೌಡ ಕ್ಲಾಸ್​​ – Kannada News | Minister Krishnabyregowda Slams Officials Over LED Street Light Data at GBA Meeting

ಬೆಂಗಳೂರು, ಆಗಸ್ಟ್​​ 04: ಜಿಬಿಎ ಮುಖ್ಯ ಕಚೇರಿಯಲ್ಲಿ ಅಧಿಕಾರಿಗಳ ಜತೆ ಕೃಷ್ಣ ಭೈರೇಗೌಡ ಸಭೆ ನಡೆಸಿದ್ದು, ನಗರದಲ್ಲಿ ಬೀದಿ ದೀಪ ಅಳವಡಿಸದ ಹಿನ್ನೆಲೆ ಬೆಂಗಳೂರು ನಗರಾಭಿವೃದ್ಧಿ ಸಚಿವರು ಗರಂ ಆದ ಪ್ರಸಂಗ ನಡೆದಿದೆ. ಸಭೆಗೆ ಸಿದ್ಧತೆ ಇಲ್ಲದೆ ಬಂದಿದ್ದೀರೆಂದು ಅಧಿಕಾರಿಗಳಿಗೆ ಸಚಿವರು ತರಾಟೆಗೆ ಪಡೆದಿದ್ದು, ಬೇಸಿಕ್ ಡೇಟಾ ಇಲ್ಲ, ಪ್ರಶ್ನೆಗೆ ಉತ್ತರ ಇಲ್ಲ, ಸಿದ್ಧತೆಯೊಂದಿಗೆ ಬರಲಾಗಲ್ವಾ? ಡೇಟಾ ಇಲ್ಲದೆ ಬಂದಿದ್ದೀರಿ, ಸರ್ಕಾರಿ ಕೆಲಸ ಅಂದ್ರೆ ಕೈಬೀಸಿ ಬಂದು ಹೋಗೋದಲ್ಲ ಎಂದು ಇಂಜಿನಿಯರ್‌ಗಳ ನಿರ್ಲಕ್ಷ್ಯಕ್ಕೆ ಸಚಿವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬೀದಿ ದೀಪ ಸಮಸ್ಯೆ ಬಗೆಹರಿಸುವಂತೆ ಇದೇ ವೇಳೆ ಅಧಿಕಾರಿಗಳಿಗೆ ಅವರು ಖಡಕ್ ಸೂಚನೆ ನೀಡಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಬೆಂಗಳೂರು ಪೊಲೀಸ್‌ ವ್ಯವಸ್ಥೆಯಲ್ಲಿ ಭಾರೀ ಬದಲಾವಣೆ: 5 ಹೊಸ ಕಮಿಷನರೇಟ್‌, 6,633 ಹೊಸ ಹುದ್ದೆ ಸೃಷ್ಟಿಗೆ ಪ್ರಸ್ತಾವನೆ – Kannada News | Bengaluru Police Restructuring: 5 New Commissionerates, 6,633 Posts Proposed

ಬೆಂಗಳೂರು, ಆಗಸ್ಟ್​​ 04: ಬೆಂಗಳೂರು ಪೊಲೀಸ್‌ ವ್ಯವಸ್ಥೆಯಲ್ಲಿ ಭಾರೀ ಬದಲಾವಣೆ ಕುರಿತಾಗಿ ಸರ್ಕಾರಕ್ಕೆ ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್​​ ಪ್ರಸ್ತಾವನೆ ಸಲ್ಲಿಸಿದ್ದಾರೆ. ಬೆಂಗಳೂರು‌ ಕಮಿಷನರೇಟ್‌ (Bengaluru Police Commissionerate) ಅನ್ನು 5 ಹೊಸ ಕಮಿಷನರೇಟ್‌ ವಲಯಗಳಾಗಿ ವಿಭಜಿಸಲು ಮತ್ತು 6,633 ಹೊಸ ಹುದ್ದೆ ಸೃಷ್ಟಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ.

ಐದು ಪ್ರತ್ಯೇಕ ಕಮಿಷನರೇಟ್​ಗಳಾಗಿ ವಿಭಜಿಸಲು ಸರ್ಕಾರಕ್ಕೆ ಪ್ರಸ್ತಾವನೆ 

ಬೆಂಗಳೂರು ಪೊಲೀಸ್ ಕಮಿಷನರೇಟ್‌ ಅನ್ನು ಐದು ಪ್ರತ್ಯೇಕ ಕಮಿಷನರೇಟ್​ಗಳಾಗಿ ವಿಭಜಿಸಲು ನಗರ ಪೊಲೀಸ್ ಆಯುಕ್ತರು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ಈ ಯೋಜನೆಯಡಿ, ಪ್ರಸ್ತುತ ಬೆಂಗಳೂರು ಪೊಲೀಸ್​ ಆಯುಕ್ತರು, ಮುಖ್ಯ ಆಯುಕ್ತರ ಹುದ್ದೆ ಸೃಜನೆಯಾಗಲಿದ್ದು, ಕೇಂದ್ರ, ಪೂರ್ವ, ಪಶ್ಚಿಮ, ಉತ್ತರ ಹಾಗೂ ದಕ್ಷಿಣ ಎಂಬ ಐದು ಘಟಕಗಳು ಸೃಷ್ಟಿಯಾಗಲಿವೆ. ಈ ಬದಲಾವಣೆಗೆ ಸುಮಾರು 7,648 ಕೋಟಿ ರೂ. ವೆಚ್ಚವಾಗಲಿದ್ದು, 6,633 ಹೊಸ ಹುದ್ದೆಗಳ ಸೃಷ್ಟಿಗೆ ಮನವಿ ಮಾಡಲಾಗಿದೆ.

ಇದನ್ನೂ ಓದಿ: ಬೆಂಗಳೂರಿನ ಪ್ರೆಸಿಡೆನ್ಸಿ ವಿಶ್ವವಿದ್ಯಾಲಯಕ್ಕೆ ಮಿಜೋರಾಂನ ಆರೋಗ್ಯ ಸಚಿವೆ ಶ್ರೀಮತಿ ಲಾಲ್ರಿನ್‌ಪುಯಿ ಭೇಟಿ

ಬೆಂಗಳೂರು ಕಮಿಷನರೇಟ್‌ ಐದು ವಿಭಾಗಗಳ ವಿಂಗಡಣೆ ಸಂಬಂಧ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಹಿರಿಯ ಅಧಿಕಾರಿಗಳ ಜತೆ ಸಾಧಕ-ಬಾಧಕಗಳ ಸಮಾಲೋಚನೆ ಬಳಿಕ ಸಿಎಂ ಡಿಕೆ ಶಿವಕುಮಾರ್​ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ. ಕೇಂದ್ರ ಕಮಿಷನರೇಟ್​ನಲ್ಲಿ ಓರ್ವ ಸಂಚಾರ ಡಿಸಿಪಿ, ಕೇಂದ್ರ ಕಚೇರಿ ಡಿಸಿಪಿ, ಸಶಸ್ತ್ರ ಮೀಸಲು ಪಡೆ ಕೇಂದ್ರ ಸೇರಿ ಐವರು ಡಿಸಿಪಿ ಗಳಿದ್ದು, ಪ್ರಸುತ್ತ ಕೇಂದ್ರ ವಿಭಾಗದ ಡಿಸಿಪಿ ಜತೆಗೆ, ಗಾಂಧೀನಗರ, ಇಂದಿರಾನಗರ ಹೆಸರಿನ ಹೊಸದಾಗಿ ಕಾನೂನು ಸುವ್ಯವಸ್ಥೆ ವಿಭಾಗ ರಚನೆಯಾಗಲಿದೆ.

ಕೇಂದ್ರ ಕಮಿಷನರೇಟ್‌

ಕೇಂದ್ರ ಸಂಚಾರ ವಿಭಾಗ ಅಸ್ತಿತ್ವಕ್ಕೆ ಬರಲಿದೆ. ಈ ಆಯುಕ್ತರ ವ್ಯಾಪ್ತಿಗೆ ವಿಧಾನಸೌಧ ಮತ್ತು ವಿಕಾಸಸೌಧ, ಲೋಕಭವನ, ಹೈಕೋರ್ಟ್‌, ನ್ಯಾಯಾಂಗ ಸಮುಚ್ಚಯಗಳು, ಚಿನ್ನಸ್ವಾಮಿ ಹಾಗೂ ಕಂಠೀರವ ಕ್ರೀಡಾಂಗಣಗಳು, ಫ್ರೀಡಂ ಪಾರ್ಕ್‌, ಮೆಟ್ರೋ ನಿಲ್ದಾಣಗಳು, ಬೈಯಪ್ಪನಹಳ್ಳಿ ಮೆಟ್ರೋ ಡಿಪೋ, ಕೆಎಸ್‌ಆರ್‌ಟಿಸಿ ರೈಲ್ವೆ ನಿಲ್ದಾಣ, ವಲಯ ಕಚೇರಿ ಮತ್ತು ಮೆಜೆಸ್ಟಿಕ್‌ ಬಸ್‌ ನಿಲ್ದಾಣ ಸೇರಿ ಇತರೆ ಸ್ಥಳಗಳು ಬರಲಿವೆ.

ಉತ್ತರ ಕಮಿಷನರೇಟ್‌

ಉತ್ತರ ವಿಭಾಗದ ಕಮಿಷನರೇಟ್​ನಲ್ಲಿ ಹಾಲಿ ಉತ್ತರ ವಿಭಾಗ, ಈಶಾನ್ಯ ವಿಭಾಗಗಳ ಜತೆ ಹೊಸದಾಗಿ ಯಶವಂತಪುರ ರಚನೆಯಾಗಲಿದೆ. ಉತ್ತರ ವಿಭಾಗ (ಸಂಚಾರ) ಹಾಗೂ ಸಿಎಎಆರ್‌ ಉತ್ತರ ಡಿಸಿಪಿ ವಿಭಾಗಗಳು ಸೇರಲಿವೆ. ಅದೇ ರೀತಿ ಅಮೃತಹಳ್ಳಿ ಉಪ ವಿಭಾಗ ನೂತನವಾಗಿ ಸ್ಥಾಪನೆಯಾಗಲಿದೆ. ಯಲಹಂಕ ಹಾಗೂ ಕೆ.ಜಿ.ಹಳ್ಳಿ ಉಪ ವಿಭಾಗ ಸಹ ಉತ್ತರಕ್ಕೆ ಸೇರ್ಪಡೆಯಾಗಲಿವೆ.

ಪೂರ್ವ, ದಕ್ಷಿಣ ಕಮಿಷನರೇಟ್‌

ವೈಟ್‌ಫೀಲ್ಡ್‌ ಹಾಗೂ ಪೂರ್ವ ವಿಭಾಗಗಳಲ್ಲಿ ಒಂದು ಸಂಚಾರ ಡಿಸಿಪಿ ವಿಭಾಗ ಹಾಗೂ ಸಶಸ್ತ್ರ ಮೀಸಲು ಪಡೆಯ ವಿಭಾಗದ ಡಿಸಿಪಿಗಳು ಇರಲಿದ್ದಾರೆ. ಈ ವಿಭಾಗಕ್ಕೆ ಹೊಸದಾಗಿ ಪೊಲೀಸ್ ಠಾಣೆಗಳು ಸಹ ರಚನೆಯಾಗಲಿವೆ. ದಕ್ಷಿಣ ಕಮಿಷನರೇಟ್​ನಲ್ಲಿ ದಕ್ಷಿಣ, ಆಗ್ನೇಯ, ಎಲೆಕ್ಟ್ರಾನಿಕ್‌ ಸಿಟಿ, ದಕ್ಷಿಣ ಸಂಚಾರ ಹಾಗೂ ಸಿಎಆರ್​ಡಿಸಿಪಿ ವಿಭಾಗಗಳು ಸೇರಲಿವೆ. ಹೊಸದಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್‌ ಉಪವಿಭಾಗ, ಠಾಣೆಗಳಾದ ಸರ್ಜಾಪುರ, ಸೂರ್ಯನಗರ, ಅತ್ತಿಬೆಲೆ, ಬನ್ನೇರುಘಟ್ಟ, ಆನೇಕಲ್‌, ಜಿಗಣಿ ಹಾಗೂ ಬೆಂಗಳೂರು ದಕ್ಷಿಣ ಜಿಲ್ಲೆಯ ಕಗ್ಗಲಿಪುರ ಠಾಣೆಗಳು ಸೇರ್ಪಡೆಯಾಗಲಿವೆ.

7.5 ಸಾವಿರ ಕೋಟಿ ರೂ ಅಂದಾಜು ವೆಚ್ಚ

ಪಶ್ಚಿಮ ವಿಭಾಗದಲ್ಲಿ ಕೆಂಗೇರಿ, ಪೀಣ್ಯಾ ಹಾಗೂ ಸಂಚಾರ, ಸಿಎಆರ್​ಡಿಸಿಪಿಗಳ ಹುದ್ದೆಗಳು ಒಳಪಟ್ಟಿದ್ದು, ಈ ವಿಭಾಗಕ್ಕೆ ಹೊಸದಾಗಿ ಬೆಂಗಳೂರು ದಕ್ಷಿಣ ಜಿಲ್ಲೆಯ ತಾವರೆಕೆರೆ, ನೂತನವಾಗಿ ಆಂಧ್ರಹಳ್ಳಿ, ಕಡಬಗೆರೆ ಠಾಣೆಗಳು ರಚನೆಯಾಗಲಿವೆ. ಸಿಸಿಬಿ ಯಾವುದೇ ವಿಘಟನೆ ಇಲ್ಲದೆ ಯಥಾಸ್ಥಿತಿಯಲ್ಲಿ ಮುಂದುವರೆಯಲಿದ್ದು ಮುಖ್ಯ ಆಯುಕ್ತರ ಅಧೀನದಲ್ಲಿ ಸಿಸಿಬಿ ಕಾರ್ಯನಿರ್ವಹಿಸಲಿದೆ. ಅದೇ ರೀತಿ ಸಂಚಾರ ವಿಭಾಗವು ಸಹ ಮುಖ್ಯ ಆಯುಕ್ತರ ಅಧೀನದಲ್ಲೇ ಕಾರ್ಯನಿರ್ವಹಿಸಲಿದೆ ಎಂದು ಪ್ರಸ್ತಾಪನೆಯಲ್ಲಿ ಉಲ್ಲೇಖವಾಗಿದೆದ್ದು, ವಿಭಜನೆಗೆ 7.5 ಸಾವಿರ ಕೋಟಿ ರೂ ಅಂದಾಜು ವೆಚ್ಚವಾಗಲಿದೆ.

ಇದನ್ನೂ ಓದಿ: ಭಾರೀ ಮಳೆ ಹಿನ್ನೆಲೆ ಕುದುರೆಮುಖದಲ್ಲಿ ಟ್ರೆಕ್ಕಿಂಗ್‌ಗೆ ತಾತ್ಕಾಲಿಕ ಬ್ರೇಕ್: ಚಾರಣಿಗರಿಗೆ ನಿರಾಸೆ

ಜಿಬಿಎ ವಲಯಗಳಿಗೆ ಅನುಗುಣವಾಗಿ‌ ಪೊಲೀಸ್ ಕಮಿಷನರೇಟ್ ರಚನೆಯಾದಲ್ಲಿ ಕಾನೂನು ಸುವ್ಯವಸ್ಥೆ ಮತ್ತು ಸಂಚಾರ ನಿಯಂತ್ರಣಕ್ಕೆ ಅನುಕೂಲವಾಗಕಿದೆ. ಭೌಗೋಳಿಕವಾಗಿ, ಪ್ರಾದೇಶಿಕವಾಗಿ, ಆಡಳಿತಾತ್ಮಕ ಸಹಕಾರಿಯಾಗಲಿದ್ದು, ಸಾರ್ವಜನಿಕರಿಗೆ ಪರಿಣಾಮಕಾರಿಯಾಗಿ ಸೇವೆ ನೀಡಲು ಅನುವಾಗಲಿದೆ ಎನ್ನಲಾಗುತ್ತಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

‘ಅಯೋಗ್ಯ 2’ ತಂಡದ ಭರ್ಜರಿ ಭೋಜನ, ವಿಡಿಯೋ ನೋಡಿ – Kannada News | Satish Neenasam shared video of Ayogya 2 movie behind the camera video

ಸತೀಶ್ ನೀನಾಸಂ (Satish Neenasam) ನಟನೆಯ ‘ಅಯೋಗ್ಯ’ ಸಿನಿಮಾ ಸೂಪರ್ ಹಿಟ್ ಆಗಿತ್ತು. ಇದೀಗ ಬಹುತೇಕ ಅದೇ ತಂಡ ‘ಅಯೋಗ್ಯ 2’ ಮೂಲಕ ಮತ್ತೆ ಪ್ರೇಕ್ಷಕರ ಮುಂದೆ ರಂಜಿಸಲು ಬರುತ್ತಿದೆ. ‘ಅಯೋಗ್ಯ 2’ ಸಿನಿಮಾ ಇದೇ ಆಗಸ್ಟ್ 7ಕ್ಕೆ ರಿಲೀಸ್ ಆಗಲಿದೆ. ಚಿತ್ರತಂಡ ಒಟ್ಟಿಗೆ ಭರ್ಜರಿ ಭೋಜನ ಮಾಡಿರುವ ವಿಡಿಯೋವನ್ನು ಸತೀಶ್ ನೀನಾಸಂ ಹಂಚಿಕೊಂಡಿದ್ದಾರೆ. ಸತೀಶ್ ನೀನಾಸಂ, ನಟರಾದ ಶಿವರಾಜ್ ಕೆಆರ್ ಪೇಟೆ, ನಿರ್ದೇಶಕ ಮಹೇಶ್ ಇನ್ನೂ ಹಲವು ಕಲಾವಿದರು ಮತ್ತು ತಂತ್ರಜ್ಞರು ಇದ್ದಾರೆ. ವಿಡಿಯೋ ನೋಡಿ. ಸಿನಿಮಾ ಆಗಸ್ಟ್ 7ಕ್ಕೆ ರಿಲೀಸ್ ಆಗಲಿದೆ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Source link

ಶಾಲೆಗೆ ಹೋಗಲು ಪ್ರಾಣ ಪಣಕ್ಕಿಡುತ್ತಿರುವ ಮಧ್ಯಪ್ರದೇಶದ ಮಕ್ಕಳು; ವೈರಲ್ ವಿಡಿಯೋಗೆ ಭಾರೀ ಆಕ್ರೋಶ – Kannada News | Madhya Pradesh children risking lives to reach school in Rain Video goes Viral

ನವದೆಹಲಿ, ಆಗಸ್ಟ್ 4: ಮಧ್ಯಪ್ರದೇಶದ ಶಾಲಾ ವಿದ್ಯಾರ್ಥಿಗಳ ಗುಂಪೊಂದು ಶಾಲೆಗೆ ಹೋಗಲು ಬೆಟ್ವಾ ನದಿಯ ಡ್ಯಾಂನ ಸಣ್ಣ ತಡೆಗೋಡೆ ಮೇಲೆ ಅತ್ಯಂತ ಅಪಾಯಕಾರಿ ರೀತಿಯಲ್ಲಿ ನದಿ ದಾಟುತ್ತಿರುವ ವಿಡಿಯೋ (Viral Video) ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವಿಡಿಯೋ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ನದಿಯಲ್ಲಿ ನೀರು ರಭಸವಾಗಿ ಹರಿಯುತ್ತಿದ್ದರೂ ಮಕ್ಕಳು ಜಾಗರೂಕತೆಯಿಂದ ನದಿ ದಾಟುತ್ತಿರುವುದನ್ನು ಈ ವಿಡಿಯೋದಲ್ಲಿ ಕಾಣಬಹುದು. ಈ ಘಟನೆಯು ವಿದಿಶಾ ಜಿಲ್ಲೆಯ ಪಾಲೋಹ್ ಗ್ರಾಮದಲ್ಲಿ ನಡೆದಿದ್ದು, ಕರುವಾ ಗ್ರಾಮದ ಪಾಲೋಹ್‌ನಲ್ಲಿರುವ ಶಾಲೆಗೆ ತಲುಪಲು ಈ ಮಕ್ಕಳು ಪ್ರತಿದಿನವೂ ಈ ತಡೆಗೋಡೆಯನ್ನೇ ಹಾರಿ ಹೋಗುತ್ತಿದ್ದಾರೆ.

ಕಳೆದ ನಾಲ್ಕೈದು ವರ್ಷಗಳಿಂದ ಬೇರೆ ಸೂಕ್ತ ದಾರಿಯಿಲ್ಲದೆ ಇದೇ ರೀತಿ ಪ್ರಯಾಣಿಸುತ್ತಿರುವುದಾಗಿ ವಿದ್ಯಾರ್ಥಿಗಳು ಅಳಲು ತೋಡಿಕೊಂಡಿದ್ದಾರೆ. ಈ ವಿಡಿಯೋ ಶಾಲಾ ಮಕ್ಕಳ ಸುರಕ್ಷತೆ ಮತ್ತು ಗ್ರಾಮೀಣ ಪ್ರದೇಶದಲ್ಲಿ ಸೂಕ್ತ ಮೂಲಸೌಕರ್ಯಗಳ ಕೊರತೆಯ ಕುರಿತು ಗಂಭೀರ ಪ್ರಶ್ನೆಗಳನ್ನು ಎತ್ತಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version