ಮೋದಿ ಟ್ರಂಪ್​ಗೆ ಕರೆ ಮಾಡ್ಲಿಲ್ಲ, ಭಾರತ-ಅಮೆರಿಕದ ವ್ಯಾಪಾರ ಒಪ್ಪಂದ ಮುಂದುವರೀಲಿಲ್ಲ: ವಾಣಿಜ್ಯ ಕಾರ್ಯದರ್ಶಿ – Kannada News | Commerce Secretary’s Remark Adds New Angle to India US Trade Negotiations

ವಾಷಿಂಗ್ಟನ್, ಜನವರಿ 09: ಭಾರತದೊಂದಿಗಿನ ವ್ಯಾಪಾರ ಒಪ್ಪಂದದ ಕುರಿತು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೂವಾರ್ಡ್​ ಲುಟ್ನಿಕ್ ಅಚ್ಚರಿಯ ಹೇಳಿಕೆಯೊಂದನ್ನು ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಡೊನಾಲ್ಡ್​ ಟ್ರಂಪ್​ಗೆ ಕರೆ ಮಾಡದ ಕಾರಣ ಅಮೆರಿಕ-ಭಾರತದ ನಡುವಿನ ವ್ಯಾಪಾರ ಒಪ್ಪಂದ ಸ್ಥಗಿತಗೊಂಡಿದೆ ಎಂದು ಹೇಳಿದ್ದಾರೆ.

ಭಾರತ-ಯುಎಸ್ ವ್ಯಾಪಾರ ಒಪ್ಪಂದದ ಕುರಿತು, ಹೊವಾರ್ಡ್ ಲುಟ್ನಿಕ್ ಮಾತನಾಡಿ, ತಾವು ಸ್ವತಃ ಸಿದ್ಧಪಡಿಸಿದ್ದಾಗಿ ಹೇಳಿಕೊಂಡಿರುವ ಅವರು, ಒಂದು ತೀರ್ಮಾನಕ್ಕೆ ಬರಲು, ಮೋದಿ ಟ್ರಂಪ್‌ಗೆ ಕರೆ ಮಾಡುವುದು ಅಗತ್ಯವಾಗಿತ್ತು , ಭಾರತ ಈ ಒಪ್ಪಂದದಿಂದ ತೃಪ್ತರಾಗಿರಲಿಲ್ಲ ಮತ್ತು ಮೋದಿ ಕರೆ ಮಾಡಲಿಲ್ಲ.

ಈ ಕಾರಣದಿಂದಾಗಿ, ಈ ಒಪ್ಪಂದವು ದೀರ್ಘಕಾಲದವರೆಗೆ ಸ್ಥಗಿತಗೊಂಡಿದೆ ಎಂದಿದ್ದಾರೆ. ಭಾರತದೊಂದಿಗೆ ಮಾಡಿಕೊಂಡಿದ್ದ ವ್ಯಾಪಾರ ಒಪ್ಪಂದದಿಂದ ಅಮೆರಿಕ ಹಿಂದೆ ಸರಿದಿದೆ ಎಂದು ಅವರು ಹೇಳಿದ್ದಾರೆ.ನಾವು ಇನ್ನು ಮುಂದೆ ಅದನ್ನು ಪರಿಗಣಿಸುವುದಿಲ್ಲ ಎಂದು ಹೇಳಿದರು.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಕಿರುತೆರೆಯಲ್ಲಿ ಪ್ರಸಾರ ಕಾಣಲು ರೆಡಿ ಆಯ್ತು ‘ಕಾಂತಾರ: ಚಾಪ್ಟರ್ 1’ – Kannada News | Kantara Chapter 1 Movie To premier on Zee Kannada

‘ಕಾಂತಾರ: ಚಾಪ್ಟರ್ 1’ ಚಿತ್ರ ಅಕ್ಟೋಬರ್​ನಲ್ಲಿ ರಿಲೀಸ್ ಆಗಿ ಹಿಟ್ ಆಯಿತು. ಈ ಚಿತ್ರ ಬಳಿಕ ಒಟಿಟಿಗೆ ಕಾಲಿಟ್ಟಿತು. ಈಗ ಸಿನಿಮಾ ಟಿವಿಯಲ್ಲಿ ಪ್ರಸಾರ ಕಾಣಲು ರೆಡಿ ಆಗಿದೆ. ಜೀ ಕನ್ನಡ ವಾಹಿನಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿದೆ. ಆದರೆ, ಅವರು ದಿನಾಂಕ ರಿವೀಲ್ ಮಾಡಿಲ್ಲ. ಸಾಮಾನ್ಯವಾಗಿ ವಿಶೇಷ ಸಂದರ್ಭದಗಳಲ್ಲಿ ಈ ಸಿನಿಮಾಗಳನ್ನು ಪ್ರಸಾರ ಮಾಡಲಾಗುತ್ತದೆ. ಹೀಗಾಗಿ, ‘ಕಾಂತಾರ: ಚಾಪ್ಟರ್ 1’ ಸಂಕ್ರಾಂತಿಗೆ ಪ್ರಸಾರ ಕಾಣಬಹುದು ಎಂದು ಅಂದಾಜಿಸಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಇದು ಮಧ್ಯಮ ವರ್ಗದ ಹುಡುಗರ ಜೀವನ: ಬೆಂಗಳೂರಿನಲ್ಲಿ 17 ಗಂಟೆ ರ‍್ಯಾಪಿಡೋ ಓಡಿಸಿ 1,820 ರೂ. ಗಳಿಸಿದ ವ್ಯಕ್ತಿ – Kannada News | Rapido Driver’s Bangalore Side Hustle: Earning Extra Income Amidst High Costs

ಬೆಂಗಳೂರು, ಜ.9: ಬೆಂಗಳೂರು ಎಂಬ ಮಹಾನಗರದಲ್ಲಿ ಜೀವನ ಕಟ್ಟಿಕೊಳ್ಳಲು ತುಂಬಾ ಉತ್ತಮ ಸ್ಥಳ, ಶ್ರಮಕ್ಕೆ ತಕ್ಕ ಇಲ್ಲಿ ಸರಿಯಾದ ಫಲ ಸಿಗುತ್ತದೆ. ಅದೆಷ್ಟೋ ಯುವಕರು ಬೆಂಗಳೂರಿಗೆ ಬಂದು ಕಡಿಮೆ ಆದಾಯ ಗಳಿಸುತ್ತಿದ್ದಾರೆ. ಇದಕ್ಕೆ ರ‍್ಯಾಪಿಡೋ ಬೈಕ್-ಟ್ಯಾಕ್ಸಿಯನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಇದೀಗ ರೆಡ್ಡಿಟ್​​​ನಲ್ಲಿ ವ್ಯಕ್ತಿಯೊಬ್ಬರು ಹಂಚಿಕೊಂಡಿರುವ ಪೋಸ್ಟ್​​ ಭಾರೀ ವೈರಲ್​​ ಆಗುತ್ತಿದೆ. ರ‍್ಯಾಪಿಡೋ (Rapido) ಬೈಕ್-ಟ್ಯಾಕ್ಸಿ ಚಾಲಕರಾಗಿ ನಾಲ್ಕು ದಿನಗಳ ಕಾಲ ನಡೆಸಿದ ಪ್ರಯೋಗದ ಬಗ್ಗೆ ಸೋಶಿಯಲ್ಲ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ. ಅವರು ರಾತ್ರಿ 10ರ ನಂತರ ಈ ಕೆಲಸ ಮಾಡಲು ಶುರು ಮಾಡಿದ್ದಾರೆ. ರ‍್ಯಾಪಿಡೋ ರಾತ್ರಿ ಸಮಯದಲ್ಲಿ ಶೇ. 20ರಷ್ಟು ಹೆಚ್ಚುವರಿ ಹಣವನ್ನು (Night Bonus) ನೀಡುತ್ತದೆ. ಅಲ್ಲದೆ, ರಾತ್ರಿ ಸಂಚಾರ ದಟ್ಟಣೆ ಕಡಿಮೆ ಇರುವುದರಿಂದ ಬೇಗನೆ ಟ್ರಿಪ್‌ಗಳನ್ನು ಮುಗಿಸಬಹುದು.

ಈ ಇದರಲ್ಲಿ ಯಾವುದೇ ಕಮಿಷನ್ ಕಡಿತವಾಗುವುದಿಲ್ಲ. ಈ ವ್ಯಕ್ತಿ ದಿನಕ್ಕೆ ಒಟ್ಟು 16 ಗಂಟೆಗಳ ಕಾಲ ಕೆಲಸ ಮಾಡುತ್ತಾರೆ (8 ಗಂಟೆ ಆಫೀಸ್ + 8 ಗಂಟೆ ರ‍್ಯಾಪಿಡೋ). ಇದು ಆರ್ಥಿಕವಾಗಿ ಲಾಭದಾಯಕವಾಗಿ ಕಂಡರೂ, ದೀರ್ಘಕಾಲದ ಆರೋಗ್ಯದ ದೃಷ್ಟಿಯಿಂದ ಅತ್ಯಂತ ಅಪಾಯಕಾರಿ.ರಾತ್ರಿ 10 ರಿಂದ ಬೆಳಿಗ್ಗೆ 6 ರವರೆಗೆ ರ‍್ಯಾಪಿಡೋಗೆ ಇರುವ ಬೇಡಿಕೆ ಮತ್ತು ಸಿಗುವ ಬೋನಸ್, ಸಾಮಾನ್ಯ ಸಂಬಳಕ್ಕಿಂತ ಹೆಚ್ಚಿನ ಆದಾಯ ತಂದುಕೊಡುತ್ತಿದೆ ಎಂದು ಹೇಳಿದ್ದಾರೆ. ಬೆಂಗಳೂರಿನಲ್ಲಿ ಜೀವನ ವೆಚ್ಚ ಹೆಚ್ಚಿರುವುದರಿಂದ, ಕೇವಲ ಒಂದು ಸಂಬಳದಿಂದ ಜೀವನ ನಿರ್ವಹಣೆ ಕಷ್ಟ ಎಂದು ಈ ವೃತ್ತಿಯನ್ನು ಕೂಡ ಮಾಡುತ್ತಾರೆ.

ಈ ದುಡಿಮೆಯಲ್ಲಿ ವ್ಯತ್ಯಾಸಗಳು ಕಂಡು ಬರುತ್ತದೆ. ಮೊದಲ ದಿನ, ಐದು ಗಂಟೆಗಳ ಕಾಲ ಸಂಜೆ ಮತ್ತು ತಡರಾತ್ರಿಯವರೆಗೆ ರೈಡ್​​ ಮಾಡಿದ್ರೆ 630 ರೂ. ಗಳಿಸಬಹುದು. ಎರಡನೇ ದಿನವೂ ಇದೇ ಅವಧಿಯಲ್ಲಿ 750 ಗಳಿಸಿದೆ. ಕೊನೆಯ ಎರಡು ದಿನಗಳಲ್ಲಿ, ಪ್ರತಿ ರಾತ್ರಿ ಸುಮಾರು ಮೂರರಿಂದ ನಾಲ್ಕು ಗಂಟೆಗಳ ಕಾಲ ಸವಾರಿ ಮಾಡಿ 420 ಗಳಿಸಿದ್ದಾರೆ. ಪ್ರತಿದಿನ ಒಂದೇ ರೀತಿಯ ದುಡಿಮೆ ಇದರಲ್ಲಿ ಇರುವುದಿಲ್ಲ ಎಂದು ಹೇಳಿದ್ದಾರೆ. ಈ ನಾಲ್ಕು ದಿನ ಕೆಲಸ ಮಾಡಿದ ನಂತರ ಒಟ್ಟು ಆದಾಯ 2,220 ರೂ. ಆಗಿತ್ತು. ಪೆಟ್ರೋಲ್​​​ಗೆ 400 ಹೋದ್ರೆ ಉಳಿಯುವುದು 1,820 ರೂ.

ಇದನ್ನೂ ಓದಿ: ಹೆಣ್ಣು ತಾಯಿಯಾಗುವುದು ದುರ್ಬಲತೆಯೇ? 30 ಲಕ್ಷ ರೂ. ಸಂಬಳದ ಉದ್ಯೋಗ ನಿರಾಕರಿಸಿದ ಬೆಂಗಳೂರಿನ ಮಹಿಳೆ

“ಪದವೀಧರರಿಗೆ ಸಿಗುವ ಆರಂಭಿಕ ಸಂಬಳಕ್ಕಿಂತಲೂ ರಸ್ತೆಯಲ್ಲಿ ಕಷ್ಟಪಟ್ಟು ಮಾಡುವ ಕೆಲಸಕ್ಕೆ ಹೆಚ್ಚು ಹಣ ಸಿಗುತ್ತಿದೆ. ಈ ಕೆಲಸ ನನಗೆ ಅನಿವಾರ್ಯ ಅಲ್ಲದೆ ಇರುಬಹುದು. ಇದು ದೊಡ್ಡ ಸಂಪಾದನೆಯೂ ಅಲ್ಲ, ಆದರೆ ಇದು ನನ್ನ ಚಿಕ್ಕಪುಟ್ಟ ಖರ್ಚಿಗೆ ಸಹಾಯವಾಗುತ್ತದೆ” ಎಂದು ಹೇಳಿದ್ದಾರೆ. ಇನ್ನು ಈ ಪೋಸ್ಟ್​​ ಬಗ್ಗೆ ಸೋಶಿಯಲ್​​ ಮೀಡಿಯಾದಲ್ಲಿ ನೆಟ್ಟಿಗರು ಕೂಡ ಕಮೆಂಟ್​​ ಮಾಡಿದ್ದಾರೆ. ನನ್ನ ರೂಮ್‌ಮೇಟ್ ಕೂಡ ಅದೇ ರೀತಿ ಮಾಡುತ್ತಾನೆ. ಮಧ್ಯಾಹ್ನ 2-10 ಕಚೇರಿ ಕೆಲಸ. ಬೆಳಿಗ್ಗೆ 10-6 ರವರೆಗೆ ಕೆಲಸ ಮಾಡುತ್ತಾನೆ. ದಿನಕ್ಕೆ 1000 ರೂ. ದುಡಿಯುತ್ತಾನೆ ಎಂದು ಒಬ್ಬರು ಕಮೆಂಟ್​ ಮಾಡಿದ್ದಾರೆ. ಇನ್ನೊಬ್ಬರು ನಿಜವಾದ ಐಟಿ ಕೆಲಸಕ್ಕಿಂತ ಗಿಗ್ ಕೆಲಸದಿಂದ ಹೆಚ್ಚು ಹಣ ಸಂಪಾದಿಸುತ್ತಿದ್ದಾನೆ ಎಂದು ಕಮೆಂಟ್​​ ಮಾಡಿದ್ದಾರೆ.

ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

22 ಲಕ್ಷ ರೂ. ಮೌಲ್ಯದ ಲೋಡ್​ಗಟ್ಟಲೆ ಬಿಯರ್, ವೈನ್ ಚರಂಡಿ ಪಾಲು! ಯಾಕೆ ಗೊತ್ತೇ? – Kannada News | Expired Beer, Wine Worth Rs 22 Lakh Destroyed by Excise Department in Chamarajanagar

ಚಾಮರಾಜನಗರ, ಜನವರಿ 9: ಚಾಮರಾಜನಗರದಲ್ಲಿ ಅವಧಿ ಮೀರಿದ ಮದ್ಯವನ್ನು ಅಬಕಾರಿ ಇಲಾಖೆ ನಾಶಪಡಿಸಿದೆ. ಚಾಮರಾಜನಗರದ ಕೈಗಾರಿಕಾ ಪ್ರದೇಶದಲ್ಲಿ ಅಬಕಾರಿ ಇಲಾಖೆ ಅಧಿಕಾರಿಗಳು ಭಾರಿ ಪ್ರಮಾಣದಲ್ಲಿ ಅವಧಿ ಮೀರಿದ ಬಿಯರ್ ಮತ್ತು ವೈನ್ ಅನ್ನು ನಾಶಪಡಿಸಿದ್ದಾರೆ. ಬಿಯರ್ ಬೆಲೆ ದಿಢೀರ್ ಹೆಚ್ಚಳವಾದ ಹಿನ್ನೆಲೆ ಮದ್ಯ ಮಾರಾಟದಲ್ಲಿ ಗಣನೀಯ ಕುಂಠಿತ ಉಂಟಾಗಿದ್ದು, ಬಾರ್‌ಗಳು, ರೆಸ್ಟೋರೆಂಟ್‌ಗಳು ಹಾಗೂ ಎಂಆರ್‌ಪಿ ವೈನ್ ಸ್ಟೋರ್‌ಗಳತ್ತ ಜನರು ಸುಳಿಯದ ಸ್ಥಿತಿ ನಿರ್ಮಾಣವಾಗಿತ್ತು. ಇದರ ಪರಿಣಾಮವಾಗಿ ಲೋಡ್​ಗಟ್ಟಲೆ ಬಿಯರ್ ಮತ್ತು ವೈನ್ ಮಾರಾಟವಾಗದೆ ಉಳಿದು, ಅವುಗಳ ಅವಧಿ ಮೀರಿತ್ತು.

ಈ ಹಿನ್ನೆಲೆಯಲ್ಲಿ ಅಬಕಾರಿ ಇಲಾಖೆ ಕ್ರಮಕ್ಕೆ ಮುಂದಾಗಿದ್ದು, ಡಿಸಿ ಚಂದ್ರ ಅವರ ನೇತೃತ್ವದ ತಂಡ ಕೈಗಾರಿಕಾ ಪ್ರದೇಶದಲ್ಲಿ ದಾಳಿ ನಡೆಸಿ, ಸುಮಾರು 22 ಲಕ್ಷ ರೂ. ಮೌಲ್ಯದ ಅವಧಿ ಮೀರಿದ ಬಿಯರ್ ಮತ್ತು ವೈನ್ ಅನ್ನು ಸಂಪೂರ್ಣವಾಗಿ ನಾಶಪಡಿಸಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮತ್ತೊಂದು ‘ರಾಧೆ ಶ್ಯಾಮ್’; ‘ರಾಜಾ ಸಾಬ್’ ನೋಡಿ ತಲೆಕೆಡಿಸಿಕೊಂಡ ಪ್ರೇಕ್ಷಕ – Kannada News | Prabhas’s ‘Raja Saab’ Faces ‘Radhe Shyam’ Fate? Negative Reviews and Box Office Worries

‘ರಾಧೆ ಶ್ಯಾಮ್’ ಸಿನಿಮಾ ಹೆಸರು ಹೇಳಿದಾಗಲೆಲ್ಲ, ಅದು ಕಂಡ ದುರಂತ ಅಂತ್ಯ ನೆನಪಾಗುತ್ತದೆ. ದೊಡ್ಡ ಬಜೆಟ್​ನಲ್ಲಿ ನಿರ್ಮಾಣದವಾದ ಈ ಚಿತ್ರ ನಿರ್ಮಾಪಕರಿಗೆ ಸಾಕಷ್ಟು ನಷ್ಟವನ್ನು ಉಂಟು ಮಾಡಿತ್ತು. ಈಗ ‘ರಾಧೆ ಶ್ಯಾಮ್’ ಸಿನಿಮಾ ಬಳಿಕ ‘ರಾಜಾ ಸಾಬ್’ ಕೂಡ ಇದೇ ಹಾದಿಯಲ್ಲಿ ಸಾಗುವ ಸೂಚನೆ ಸಿಕ್ಕಿದೆ. ಈ ಸಿನಿಮಾನೋಡಿದ ಅನೇಕರು ನೆಗೆಟಿವ್ ವಿಮರ್ಶೆ ಕೊಡುತ್ತಿದ್ದಾರೆ. ಅವರ ಅಭಿಮಾನಿಗಳಿಗೆ ಸಿನಿಮಾ ಇಷ್ಟ ಆಗಿದೆ.

‘ರಾಜಾ ಸಾಬ್’ ಚಿತ್ರವನ್ನು ಮಾರುತಿ ನಿರ್ದೇಶನ ಮಾಡಿದ್ದಾರೆ. ಥಮನ್ ಅವರು ಮ್ಯೂಸಿಕ್ ಮಾಡಿದ್ದಾರೆ. ಈ ಚಿತ್ರದಲ್ಲಿ ಪ್ರಭಾಸ್ ಜೊತೆ ಸಂಜಯ್ ದತ್, ಬೋಮನ್ ಇರಾನಿ, ಮಾಳವಿಕಾ ಮೋಹನ್ ಸೇರಿದಂತೆ ಅನೇಕರು ನಟಿಸಿದ್ದಾರೆ. ಈ ಚಿತ್ರ ಹಾರರ್ ಕಾಮಿಡಿ ಶೈಲಿಯಲ್ಲಿ ಮೂಡಿ ಬಂದಿದೆ. ಸಿನಿಮಾ ನೋಡಿದ ಅನೇಕರು ನೆಗೆಟಿವ್ ವಿಮರ್ಶೆ ಕೊಟ್ಟಿದ್ದಾರೆ.

ಇದನ್ನೂ ಓದಿ: ‘ಜನ ನಾಯಗನ್’ ಬಳಿಕ ನ್ಯಾಯಾಲಯದ ಮೆಟ್ಟಿಲೇರಿದ ‘ರಾಜಾ ಸಾಬ್’ ಮತ್ತು ‘ಶಂಕರ ವರ ಪ್ರಸಾದ್’

‘ದಿ ರಾಜಾ ಸಾಬ್’ ನೋಡಿದ ಅನೇಕರು ಅಸಮಾಧಾನ ಹೊರಹಾಕಿದ್ದಾರೆ. ‘ರಾಧೆ ಶ್ಯಾಮ್’ ಬಳಿಕ ‘ಹರಿ ಹರ ವೀರ ಮಲ್ಲು’, ಈಗ ರಾಜಾ ಸಾಬ್ ಎಂದು ಅನೇಕರು ಹೇಳಿದ್ದಾರೆ. ‘ಅದೇನು ಗ್ರಾಫಿಕ್ಸ್, ಅದೇನು ವಿಶ್ಯುವಲ್ಸ್, ನಿದ್ದೆ ಬಂದೋಯ್ತು’ ಎಂದು ಕೆಲವರು ಹೇಳಿದ್ದಾರೆ. ಇನ್ನು, ಸಿನಿಮಾದ ಅವಧಿ ಮೂರು ಗಂಟೆಗೂ ಅಧಿಕವಾಗಿದೆ. ಇದು ಸಿನಿಮಾಗೆ ಹಿನ್ನಡೆ ಆಗುತ್ತಿದೆ. ⁠ಹಳೆಯ ಕಾಲದ ಬರವಣಿಗೆ, ⁠ಗುರಿರಹಿತ ನಿರ್ದೇಶನ, ⁠ಕಳಪೆ ಸಂಗೀತ, ⁠ಅನಗತ್ಯವಾದ ಅತಿರಂಜಿತ ಭವ್ಯತೆ ಸಿನಿಮಾಗೆ ಹಿನ್ನಡೆ ತಂದಿದೆ ಎನ್ನಲಾಗಿದೆ.

ಪ್ರಭಾಸ್ ನಟನೆಯ ‘ಕಲ್ಕಿ 2898 ಎಡಿ’ ಸಿನಿಮಾ 2024ರಲ್ಲಿ ರಿಲೀಸ್ ಆಯಿತು. ಈ ಚಿತ್ರ ಸೂಪರ್ ಹಿಟ್ ಆಯಿತು. ಈ ಸಿನಿಮಾ ಸಾವಿರ ಕೋಟಿ ಕ್ಲಬ್ ಸೇರಿತು. ಇದಾದ ಬಳಿಕ ಅವರು ಹೀರೋ ಆಗಿ ಕಾಣಿಸಿಕೊಂಡಿರಲಿಲ್ಲ. ಈಗ ‘ರಾಜಾ ಸಾಬ್’ ಮೂಲಕ ದೊಡ್ಡ ಸೋಲು ಕಾಣುವ ಸೂಚನೆ ಕೊಟ್ಟಿದೆ. ಮೊದಲ ದಿನ ಸಿನಿಮಾ ಎಷ್ಟು ಕೋಟಿ ರೂಪಾಯಿ ಗಳಿಸುತ್ತದೆ ಎಂಬ ಕುತೂಹಲ ಮೂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಅಹಂಕಾರ ಹೆಚ್ಚಿದರೆ ವಿಚ್ಛೇದನ, ಸಂಯಮವಿದ್ದರೆ ಸಂಬಂಧ ಸ್ಥಿರ, ಧನುವಿನಲ್ಲಿ ಶುಕ್ರಾಂಗಾರಕರ ಸಂಯೋಗದಿಂದ ಹನ್ನೆರಡು ರಾಶಿಯವರಿಗೆ ಏನು ಫಲ? – Kannada News | Venus Mars Conjunction in Sagittarius: Impact on Love and Relationships on 12 Zodiac Signs

ಶುಕ್ರ ಹಾಗೂ ಕುಜರು ಪ್ರೀತಿ, ಪ್ರೇಮ, ದಾಂಪತ್ಯ ವಿಚಾರಕ್ಕೆ ಹೆಚ್ಚು ಸಮೀಪದಲ್ಲಿ ಇರುವವರು. ವಂಶಾಭಿವೃದ್ಧಿ ಮೊದಲಾದವುಗಳಿಗೆ ಈ ಗ್ರಹಗಳ ಪ್ರಭಾವವನ್ನೂ ನೋಡುವುದುಂಟು. ಈ ಎರಡೂ ಗ್ರಹಗಳು ಧನುವಿನಲ್ಲಿ ಅಂದರೆ ಗುರವಿನ ರಾಶಿಯಲ್ಲಿ ಗುರುದೃಷ್ಟಿಯಿಂದ ಇರುವವರು. ಹಾಗಾಗಿ ಒಬ್ಬರಿಗೆ ಶತ್ರುವಿನ ರಾಶಿ ಇನ್ನೊಬ್ಬರಿಗೆ ಮಿತ್ರನ ರಾಶಿ. ಡಿಸೆಂಬರ್ 20ರಿಂದ ಜನವರಿಯ 13ರವರೆಗೆ ಧನುರಾಶಿಯಲ್ಲಿ ಈ ಯೋಗವಿರಲಿದೆ. ಯೋಗ್ಯ ಮಾರ್ಗದರ್ಶನ ಸಿಕ್ಕರೆ ಎಲ್ಲವೂ ಸರಿಯಾಗುವುದು. ಸಿಗುತ್ತದೆ ಕೂಡ. ಅದನ್ನು ಸರಿಯಾಗಿ ಬಳಲಿಕೊಳ್ಳುವುದು ಅವರಿಗೆ ಬಿಟ್ಟಿದ್ದು. ಎಲ್ಲರಿಗೂ ಶುಭವಾಗಲಿ.

ಮೇಷ ರಾಶಿ:

ಧಾರ್ಮಿಕ ಅಥವಾ ವಿದೇಶಿ ಸಂಗಾತಿ ಯೋಗ, ಪ್ರೀತಿಯಲ್ಲಿ ಆದರ್ಶಭಾವ, ದಾಂಪತ್ಯದಲ್ಲಿ ಮೌಲ್ಯಭೇದ ಸಾಧ್ಯ, ಸಂಯಮ ಇದ್ದರೆ ಸಂಬಂಧ ಸ್ಥಿರ, ವಿಚ್ಛೇದನ ಅಪರೂಪ.

ವೃಷಭ ರಾಶಿ:

ಗುಪ್ತ ಪ್ರೀತಿ, ತೀವ್ರ ಆಕರ್ಷಣೆ, ದಾಂಪತ್ಯದಲ್ಲಿ ಅನುಮಾನ ಮತ್ತು ಭಯ, ಲೈಂಗಿಕ ಅಸಮತೋಲನ ಇದ್ದು ಕಲಹವಾಗಲಿದೆ. ನಿಯಂತ್ರಣ ಇಲ್ಲದೇ ವಿಚ್ಛೇದನ ಸಂಭವಿಸುವುದು.

ಮಿಥುನ ರಾಶಿ:

ಬಲವಾದ ಪ್ರೇಮವಿವಾಹ ಯೋಗ, ಆಕರ್ಷಕ ಸಂಗಾತಿ ಪ್ರಾಪ್ತಿ, ದಾಂಪತ್ಯದಲ್ಲಿ ಉತ್ಸಾಹ, ಆದರೆ ಅಧಿಪತ್ಯಭಾವ ಮತ್ತು ಅಹಂಕಾರ ಹೆಚ್ಚಿದರೆ ವಿಚ್ಛೇದನ ಸಾಧ್ಯ.

ಕರ್ಕಾಟಕ ರಾಶಿ:

ಪ್ರೀತಿಗೆ ಕುಟುಂಬ ಅಥವಾ ಸಮಾಜ ವಿರೋಧ, ದಾಂಪತ್ಯದಲ್ಲಿ ನಿರಂತರ ವಾದ, ಕಾನೂನು ಹಸ್ತಕ್ಷೇಪ ಸಾಧ್ಯ, ಸಹನೆ ಕಡಿಮೆಯಾದರೆ ದೂರಾಗುವ ಯೋಗ ಉಂಟಾಗುತ್ತದೆ.

ಸಿಂಹ ರಾಶಿ:

ಗಾಢ ಪ್ರೀತಿ, ಪ್ರೇಮವಿವಾಹ ಸಾಧ್ಯತೆ, ಉತ್ಸಾಹಿ ದಾಂಪತ್ಯ, ಅಹಂಕಾರ ಮತ್ತು ಸ್ವಾಭಿಮಾನ ನಿಯಂತ್ರಿಸದಿದ್ದರೆ ಕಲಹ ಬೆಳೆಯುತ್ತದೆ, ವಿಚ್ಛೇದನ ಬೀಜ ಬಿತ್ತಬಹುದು.

ಕನ್ಯಾ ರಾಶಿ:

ಪ್ರೀತಿಯಲ್ಲಿ ಗೊಂದಲ, ದಾಂಪತ್ಯದಲ್ಲಿ ಮನಶ್ಶಾಂತಿ ಕೊರತೆ, ಕುಟುಂಬ ಒತ್ತಡ, ಭಾವನಾತ್ಮಕ ತಣ್ಣನೆ ಇದ್ದರೆ ಸಂಬಂಧ ದುರ್ಬಲವಾಗಿ ದೂರವಾಗುವ ಸಾಧ್ಯತೆ.

ತುಲಾ ರಾಶಿ:

ಧೈರ್ಯವಾಗಿ ಪ್ರೀತಿ ವ್ಯಕ್ತ, ಸ್ನೇಹದಿಂದ ಸಂಬಂಧ, ದಾಂಪತ್ಯದಲ್ಲಿ ಮಾತಿನ ಘರ್ಷಣೆ, ಅಹಂ‌ ಮತ್ತು ಆಸೆ ಸಂಘರ್ಷ ಅಧಿಕ. ವಿಚ್ಛೇದನಕ್ಕಿಂತ ಮನಸ್ತಾಪ ಹೆಚ್ಚು.

ವೃಶ್ಚಿಕ ರಾಶಿ:

ಕುಟುಂಬ ವಿರೋಧದ ಪ್ರೀತಿ, ಮಾತಿನ ಕಠೋರತೆ, ದಾಂಪತ್ಯದಲ್ಲಿ ಹಣ ಮತ್ತು ಆಸ್ತಿಯ ವಿಚಾರಕ್ಕೆ ಕಲಹ, ಸಂಯಮ ಇಲ್ಲದಿದ್ದರೆ ಬೇರ್ಪಡುವ ಯೋಗ ಉಂಟಾಗಬಹುದು.

ಧನು ರಾಶಿ:

ತೀವ್ರ ಆಕರ್ಷಣೆ, ಬಹುಸಂಬಂಧ ಪ್ರೇರಣೆ, ಪ್ರೇಮವಿವಾಹ ಯೋಗ, ದಾಂಪತ್ಯದಲ್ಲಿ ಅಧಿಪತ್ಯದ ಭಾವ ಬರಲಿದೆ. ಮಿತಿ ಮೀರಿದರೆ ವಿಚ್ಛೇದನ ಸಂಭವಿಸುವ ಸಾಧ್ಯತೆ.

ಮಕರ ರಾಶಿ:

ಗುಪ್ತ ಅಥವಾ ದೂರದ ಪ್ರೀತಿ, ವಿದೇಶಿ ಸಂಗಾತಿ ಯೋಗ, ದಾಂಪತ್ಯದಲ್ಲಿ ಭಾವನಾತ್ಮಕ ಅಂತರ, ನಿರ್ಲಕ್ಷ್ಯ ಹೆಚ್ಚಿದರೆ ವಿಚ್ಛೇದನ ಸೂಚನೆ ಕಾಣಿಸುತ್ತದೆ.

ಕುಂಭ ರಾಶಿ :

ಸ್ನೇಹದಿಂದ ಪ್ರೀತಿ, ಸಮಾಜದ ಮೂಲಕ ಸಂಗಾತಿ ಪ್ರಾಪ್ತಿ, ದಾಂಪತ್ಯ ಲಾಭದಾಯಕ ಮತ್ತು ಸಹಕಾರಿ, ಪರಸ್ಪರ ಗೌರವ ಇದ್ದರೆ ವಿಚ್ಛೇದನ ಯೋಗ ಕಡಿಮೆ.

ಮೀನ ರಾಶಿ:

ಉದ್ಯೋಗ ಅಥವಾ ಸಾರ್ವಜನಿಕ ವಲಯದಲ್ಲಿ ಪ್ರೀತಿ, ಪ್ರಭಾವಿ ಸಂಗಾತಿ, ದಾಂಪತ್ಯದಲ್ಲಿ ಒಬ್ಬರದೇ ಕೆಲಸ. ಅಹಂ ಒಂದಿಗೆ ಘರ್ಷಣೆ. ಸಮಯ ಕೊರತೆಯಿಂದ ದೂರವಾಗುವ ಸಾಧ್ಯತೆ.

ಲೋಹಿತ ಹೆಬ್ಬಾರ್

ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ತುಮಕೂರು ರಸ್ತೆ ಅಪಘಾತ ಭೀಕರತೆ ಬಿಚ್ಚಿಟ್ಟ ಗಾಯಾಳು: ಹೇಳಿದ್ದೇನು ನೋಡಿ – Kannada News | Tumakuru Road Accident Survivor Breaks Down, Reveals Horror After Losing Daughter on Sabarimala Return

ತುಮಕೂರು, ಜನವರಿ 9: ಶಬರಿಮಲೆ ಅಯ್ಯಪ್ಪನ ದರ್ಶನ ಮಾಡಿ ಬರುತ್ತಿದ್ದ ಕೊಪ್ಪಳ ಜಿಲ್ಲೆ ಯಲಬುರ್ಗಾ ಮೂಲದ ನಾಲ್ವರು ನಿವಾಸಿಗಳು ತುಮಕೂರಿನ ಕೋರಾ ಸಮೀಪದ ವಸಂತನರಸಾಪುರ ಕೈಗಾರಿಕಾ ಪ್ರದೇಶದ ಬಳಿ ರಸ್ತೆ ಅಪಘಾತದಲ್ಲಿ ದಾರುಣವಾಗಿ ಮೃತಪಟ್ಟಿದ್ದಾರೆ. ಏಳು ಮಂದಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ. ನಿಂತಿದ್ದ ಲಾರಿಗೆ ಕ್ರೂಸರ್ ವಾಹನ ಡಿಕ್ಕಿ ಹೊಡೆದ ಕಾರಣ ಅವಘಡ ಸಂಭವಿಸಿದ್ದು, ಸಾಕ್ಷಿ (7), ವೆಂಕಟೇಶಪ್ಪ (30), ಮಾರತಪ್ಪ (35) ಹಾಗೂ ಗವಿಸಿದ್ದಪ್ಪ (40) ಮೃತಪಟ್ಟಿದ್ದಾರೆ. ಸಾಕ್ಷಿ ತಂದೆ ಉಲಗಪ್ಪ ಅಪಘಾತದಲ್ಲಿ ಗಾಯಗೊಂಡಿದ್ದು, ಇದೀಗ ಮಗಳನ್ನು ಕಳೆದುಕೊಂಡು ಕಣ್ಣೀರಿಡುತ್ತಿದ್ದಾರೆ. ಅಪಘಾತದ ಭೀಕರತೆ ಬಗ್ಗೆ ಅವರು ನೀಡಿದ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ತುಮಕೂರು: ಭೀಕರ ಅಪಘಾತ, ಶಬರಿಮಲೆಗೆ ಹೋಗಿ ಬರುತ್ತಿದ್ದ ಯಲಬುರ್ಗಾ ಮೂಲದ ನಾಲ್ವರು ಸ್ಥಳದಲ್ಲೇ ಸಾವು

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Hindu Tradition: ಮೃತ ವ್ಯಕ್ತಿ ನಿಮ್ಮ ಶತ್ರುವೇ ಆಗಿದ್ದರೂ ಅವರ ಬಗ್ಗೆ ಯಾಕೆ ಕೆಟ್ಟದಾಗಿ ಮಾತನಾಡಬಾರದು? – Kannada News | The Spiritual Impact of Speaking Ill of the Deceased: Insights from Hindu Tradition

ಹಿರಿಯರು ಯಾವಾಗಲೂ ಹೇಳುವ ಒಂದು ಪ್ರಮುಖ ಮಾತು ಮರಣಿಸಿದವರ ಬಗ್ಗೆ ಕೆಟ್ಟದಾಗಿ ಮಾತನಾಡಬಾರದು ಎಂಬುದು. ಈ ವಿಷಯದ ಕುರಿತು ಹಿಂದೂ ಧರ್ಮ ಮತ್ತು ಸನಾತನ ಸಂಸ್ಕೃತಿಯು ನೀಡುವ ಮಹತ್ವದ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ವಿವರಿಸಿದ್ದಾರೆ.

ಗುರೂಜಿಯವರು ಹೇಳುವಂತೆ, ಮರಣಿಸಿದವರ ಕುರಿತು ಮಾತನಾಡುವಾಗ, ಅವರ ಸದ್ಗುಣಗಳು, ಒಳ್ಳೆಯ ಕಾರ್ಯಗಳು ಮತ್ತು ಅವರು ನಮಗೆ ನೀಡಿದ ನೆರವುಗಳ ಬಗ್ಗೆ ಸ್ಮರಿಸುವುದು ತಪ್ಪಲ್ಲ. ವಾಸ್ತವವಾಗಿ, ಇದು ಶುಭಕರ ಎಂದು ಪರಿಗಣಿಸಲಾಗುತ್ತದೆ. ಆದರೆ, ಅವರ ಬಗ್ಗೆ ಟೀಕೆಗಳು, ನಿಂದನೆ ಅಥವಾ ನಕಾರಾತ್ಮಕ ಮಾತುಗಳನ್ನು ಆಡುವುದು ಶಾಸ್ತ್ರೋಕ್ತವಾಗಿ ಅಶುಭ ಎಂದು ಹೇಳಲಾಗುತ್ತದೆ. ಇದು ನಮ್ಮ ಸಂಬಂಧಿಕರಾಗಲಿ, ನೆರೆಹೊರೆಯವರಾಗಲಿ, ದೇಶದ ಅಥವಾ ಪ್ರಪಂಚದ ಯಾವುದೇ ವ್ಯಕ್ತಿಯಾಗಲಿ, ಯಾರ ಬಗ್ಗೆಯೂ ಮರಣಾನಂತರ ಕೆಟ್ಟದಾಗಿ ಮಾತನಾಡಬಾರದು.

ಮೃತ ವ್ಯಕ್ತಿಗಳ ಬಗ್ಗೆ ನಕಾರಾತ್ಮಕವಾಗಿ ಮಾತನಾಡುವುದರಿಂದ, ನಮ್ಮ ಮೇಲೆ, ನಮ್ಮ ಮನಸ್ಸಿನ ಮೇಲೆ, ನಮ್ಮ ನಡವಳಿಕೆಗಳ ಮೇಲೆ, ನಮ್ಮ ಗ್ರಹಗತಿಗಳ ಮೇಲೆ ಹಾಗೂ ನಮ್ಮ ಶುಭ ಸಂದರ್ಭಗಳ ಮೇಲೆ ಋಣಾತ್ಮಕ ಪರಿಣಾಮ ಬೀರುವ ಸಾಧ್ಯತೆ ಹೆಚ್ಚು. ಇದನ್ನು ಮನುಸ್ಮೃತಿಯಲ್ಲಿ ಸ್ಪಷ್ಟವಾಗಿ ವಿವರಿಸಲಾಗಿದೆ. ಮೃತರು ಭೌತಿಕವಾಗಿ ಇಲ್ಲದಿದ್ದರೂ ಸಹ, ನೀವು ಅವರ ಹೆಸರು ಹೇಳಿದಾಗ ಅಥವಾ ಅವರ ಚಿತ್ರವನ್ನು ನೆನಪಿಸಿಕೊಂಡಾಗ, ನಮ್ಮ ಮನಸ್ಸಿನಲ್ಲಿ ಒಂದು ರೀತಿಯ ‘ವೈ-ಫೈ’ ಸಂಪರ್ಕ ಏರ್ಪಡುತ್ತದೆ. ನಾವು ಅವರ ಬಗ್ಗೆ ಟೀಕಿಸಿದಾಗ, ಈಗಾಗಲೇ ನಮ್ಮನ್ನು ಕಾಡುತ್ತಿರುವ ಪಾಪಗಳು ಮತ್ತು ಕರ್ಮಗಳು ಇನ್ನಷ್ಟು ಹೆಚ್ಚಾಗುತ್ತವೆ. ಇದರಿಂದ ನಮ್ಮ ದೈವಬಲವು ಸ್ವಯಂಚಾಲಿತವಾಗಿ ಕಡಿಮೆಯಾಗಿ, ಪುಣ್ಯ ಕಡಿಮೆಯಾಗಿ ಪಾಪ ಹೆಚ್ಚಾದಾಗ ನಾವು ಜೀವನದಲ್ಲಿ ಅನೇಕ ಕಷ್ಟಗಳನ್ನು ಎದುರಿಸಬೇಕಾಗುತ್ತದೆ.

ಯುಧಿಷ್ಠಿರರು ಭೀಷ್ಮರಿಂದ ಕಲಿತ ಒಂದು ಪ್ರಮುಖ ಪಾಠವೆಂದರೆ, ಸತ್ತವರ ಬಗ್ಗೆ ಕೆಟ್ಟ ಮಾತುಗಳನ್ನಾಡಬಾರದು ಅಥವಾ ಅವರನ್ನು ಅವಮಾನಿಸಬಾರದು ಎಂಬುದು. ಹೀಗೆ ಮಾಡುವುದರಿಂದ ನಮ್ಮ ವಂಶಕ್ಕೆ ಮತ್ತು ಕುಟುಂಬಕ್ಕೆ ಕಷ್ಟಗಳು ಬರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತದೆ. ಹಿಂದೂ ಧರ್ಮಗ್ರಂಥಗಳಲ್ಲಿಯೂ ಇದರ ಬಗ್ಗೆ ಸ್ಪಷ್ಟ ಉಲ್ಲೇಖಗಳಿವೆ. ವಿಶೇಷವಾಗಿ ಸೂರ್ಯೋದಯ, ಸೂರ್ಯಾಸ್ತ, ಮಧ್ಯಾಹ್ನದಂತಹ ನಿರ್ದಿಷ್ಟ ಸಮಯಗಳಲ್ಲಿ ಅಥವಾ ಮನೆಯಲ್ಲಿ, ದೇವಸ್ಥಾನದಲ್ಲಿ ಅಥವಾ ಪ್ರಯಾಣದ ಸಮಯದಲ್ಲಿ ಸತ್ತವರ ಬಗ್ಗೆ ಧನಾತ್ಮಕವಾಗಿ ಮಾತನಾಡುವುದು ಶುಭಕರ ಎಂದು ಪರಿಗಣಿಸಲಾಗುತ್ತದೆ.

ಇದನ್ನೂ ಓದಿ: ಮನೆಯಲ್ಲಿ ತಪ್ಪಿಯೂ ಈ ಜಾಗದಲ್ಲಿ ಹಣ ಇಡಬೇಡಿ, ಸಾಲ ಹೆಚ್ಚಾಗಬಹುದು

ಮೃತ ವ್ಯಕ್ತಿಗಳು ಪಂಚಭೂತಗಳಲ್ಲಿ ಲೀನವಾಗಿರುತ್ತಾರೆ. ಪಂಚಭೂತಗಳು ವಿಶ್ವದ ಎಲ್ಲೆಡೆಯೂ ಇರುವುದರಿಂದ, ನಾವು ಯಾರನ್ನೂ ಸಹ ಮರಣಾನಂತರ ಟೀಕಿಸಬಾರದು. ಇಂತಹ ನಕಾರಾತ್ಮಕ ಮಾತುಗಳು ತಕ್ಷಣವೇ ನಮ್ಮ ಮೇಲೆ ಕೆಟ್ಟ ಪರಿಣಾಮಗಳನ್ನು ಬೀರಬಹುದು. ಇವು ಆರೋಗ್ಯ ಸಮಸ್ಯೆಗಳು, ಆರ್ಥಿಕ ತೊಂದರೆಗಳು, ಅವಮಾನಗಳು, ಆಕಸ್ಮಿಕ ಬದಲಾವಣೆಗಳು ಅಥವಾ ಅಪಘಾತಗಳ ರೂಪದಲ್ಲಿ ವ್ಯಕ್ತವಾಗಬಹುದು. ಎಷ್ಟೋ ಸಾರಿ, ನಾವು ಮೃತಪಟ್ಟವರ ಬಗ್ಗೆ ಕೆಟ್ಟದ್ದನ್ನು ಮಾತನಾಡಿದಾಗ ಇಂತಹ ಅಪಘಾತಗಳು ಸಂಭವಿಸುತ್ತವೆ ಎಂದು ನಂಬಲಾಗಿದೆ.

ಅವರು ನಮಗೆ ತೊಂದರೆ ಕೊಟ್ಟಿದ್ದರೂ ಸಹ, ಮರಣಾನಂತರ ಅವರ ಬಗ್ಗೆ ಕೆಟ್ಟದಾಗಿ ಮಾತನಾಡುವ ಪ್ರವೃತ್ತಿಯನ್ನು ತ್ಯಜಿಸುವುದು ಉತ್ತಮ ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Video: ಫಿಲಿಪೈನ್ಸ್​ನಲ್ಲಿ ಭೂಕುಸಿತ, ಬೃಹತ್ ಕಸದ ರಾಶಿ ಮೈಮೇಲೆ ಬಿದ್ದು ಓರ್ವ ಸಾವು, 27 ಮಂದಿ ನಾಪತ್ತೆ – Kannada News | Garbage Mound Collapse in Philippines Leaves One Dead, Dozens Unaccounted For

ಫಿಲಿಪೈನ್ಸ್​, ಜನವರಿ 09: ಫಿಲಿಪೈನ್ಸ್​ನ ಸೆಬು ನಗರದಲ್ಲಿ ಭೂಕುಸಿತ ಸಂಭವಿಸಿ, ಬೃಹತ್ ಕಸದ ರಾಶಿ ಬಿದ್ದು ಓರ್ವ ಸಾವನ್ನಪ್ಪಿ, 27 ಮಂದಿ ನಾಪತ್ತೆಯಾಗಿರುವ ಘಟನೆ ವರದಿಯಾಗಿದೆ. ಜನರು ಕಸದರಾಶಿಯ ಒಳಗೆ ಹುಗಿದು ಹೋಗಿದ್ದಾರೆ. ಅವರ ರಕ್ಷಣಾ ಕಾರ್ಯ ಮುಂದುವರೆದಿದೆ. ಬಿನಾಲಿವ್ ಗ್ರಾಮದ ತ್ಯಾಜ್ಯ ವಿಂಗಡಣಾ ಕೇಂದ್ರದಲ್ಲಿ ಈ ಅಪಘಾತ ಸಂಭವಿಸಿದೆ. ಕಾರ್ಮಿಕರು ತ್ಯಾಜ್ಯ ವಿಂಗಡಣೆಯಲ್ಲಿ ನಿರತರಾಗಿದ್ದರು.

ಕಸದ ರಾಶಿ ಹಠಾತ್ತನೆ ಕುಸಿದಿದ್ದರಿಂದ ಹಲವು ಜನರು ಗಾಯಗೊಂಡಿದ್ದಾರೆ. ಇಲ್ಲಿಯವರೆಗೆ 8 ಜನರನ್ನು ಕಸದ ರಾಶಿಯಿಂದ ಜೀವಂತವಾಗಿ ಹೊರಕ್ಕೆ ಎಳೆಯಲಾಗಿದೆ. ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯದಲ್ಲಿ ಓರ್ವ ಕಾರ್ಮಿಕ ಸಾವನ್ನಪ್ಪಿದ್ದಾರೆ. ಉಳಿದ ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿದ್ದಾರೆ.

ಕಾರ್ಯಾಚರಣೆ ಮುಂದುವರೆದಿದ್ದು, ಕಾಣೆಯಾದ ಜನರು ಅವಶೇಷಗಳ ಅಡಿಯಲ್ಲಿ ಸಿಲುಕಿರುವ ಸಾಧ್ಯತೆ ಇದೆ ಎಂದು ಪ್ರಾದೇಶಿಕ ಪೊಲೀಸ್ ನಿರ್ದೇಶಕ ಬ್ರಿಗೇಡಿಯರ್ ಜನರಲ್ ರೊಡೆರಿಕ್ ಮಾರನನ್ ಹೇಳಿದ್ದಾರೆ. ಘಟನಾ ಸ್ಥಳದಲ್ಲಿ ಕಾರ್ಮಿಕರು ಮಾತ್ರ ಇದ್ದಾರೆಯೇ ಅಥವಾ ಹತ್ತಿರದ ನಿವಾಸಿಗಳ ಮೇಲೂ ಸಹ ಪರಿಣಾಮ ಬೀರಿದೆಯೇ ಎಂಬುದಿನ್ನೂ ಸ್ಪಷ್ಟವಾಗಿಲ್ಲ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಹುಲಿಗೆಮ್ಮ ದೇವಿ ಹುಂಡಿಯಲ್ಲಿ ಅಪಾರ ಆಭರಣ! 44 ದಿನಗಳಲ್ಲಿ 1.09 ಕೋಟಿ ರೂ. ಹಣ ಸಂಗ್ರಹ! – Kannada News | Huligemma Temple Records Over Rs 1 Crore Hundi Collection, Devotees Offer Gold and Silver Ornaments in Koppal

ಕೊಪ್ಪಳ, ಜನವರಿ 9: ಕೊಪ್ಪಳ ತಾಲೂಕಿನ ಹುಲಿಗಿಯಲ್ಲಿರುವ ಪ್ರಸಿದ್ಧ ದೇವತೆ ಶ್ರೀ ಹುಲಿಗೆಮ್ಮ ದೇವಸ್ಥಾನದ ಹುಂಡಿಯಲ್ಲಿ ಅಪಾರ ಪ್ರಮಾಣದ ಹಣ ಹಾಗೂ ಆಭರಣ ಸಂಗ್ರಹವಾಗಿದೆ. ಕಳೆದ 44 ದಿನಗಳಲ್ಲಿ ದೇವಸ್ಥಾನದಲ್ಲಿ ಒಟ್ಟು 1.09 ಕೋಟಿ ರೂಪಾಯಿ ಸಂಗ್ರಹವಾಗಿದ್ದು, ಭಕ್ತರಿಂದ 90 ಗ್ರಾಂ ಬಂಗಾರ ಹಾಗೂ 4.70 ಕೆಜಿ ಬೆಳ್ಳಿ ಆಭರಣಗಳು ಸಮರ್ಪಣೆಯಾಗಿವೆ.

ಕಳೆದ ನವೆಂಬರ್ 24ರಂದು ನಡೆದ ಹಿಂದಿನ ಹುಂಡಿ ಎಣಿಕೆಯಲ್ಲಿ 87.26 ಲಕ್ಷ ರೂಪಾಯಿ ಸಂಗ್ರಹ ದಾಖಲಾಗಿತ್ತು. ಇದೀಗ ಹುಂಡಿ ಹಣ ಒಂದು ಕೋಟಿ ರೂಪಾಯಿ ಗಡಿ ದಾಟಿರುವುದು ವಿಶೇಷವಾಗಿದೆ. ಹುಲಿಗೆಮ್ಮ ದೇವಸ್ಥಾನದಲ್ಲಿ ಹುಂಡಿ ಎಣಿಕೆ ಪ್ರಕ್ರಿಯೆಯನ್ನು ಬಿಗಿ ಪೊಲೀಸ್ ಭದ್ರತೆ ಮತ್ತು ನಿಗಾದಲ್ಲಿ ನಡೆಸಲಾಗಿದ್ದು, ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ಉಪಸ್ಥಿತಿಯಲ್ಲಿ ಪಾರದರ್ಶಕವಾಗಿ ಎಣಿಕೆ ಕಾರ್ಯ ಪೂರ್ಣಗೊಳಿಸಲಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version