ಬೆಂಗಳೂರು: ಕಾಣೆಯಾಗಿದ್ದ ಅಸ್ಸಾಂ ಮೂಲದ ಬಾಲಕಿ ಶವವಾಗಿ ಪತ್ತೆ; ಅತ್ಯಾಚಾರವೆಸಗಿ ಮುಖ ಜಜ್ಜಿ ಕೊಲೆ ಮಾಡಿದ ಕಿರಾತಕರು!
ಬೆಂಗಳೂರು , ಮಾ.28 : ರಾಜಧಾನಿಯ ಹೊರವಲಯದ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಮನುಷ್ಯಕುಲವೇ ತಲೆತಗ್ಗಿಸುವಂತಹ ಘಟನೆಯೊಂದು ನಡೆದಿದೆ. ಗುರುವಾರ ಸಂಜೆ ಕಾಣೆಯಾಗಿದ್ದ ಅಸ್ಸಾಂ ಮೂಲದ ಅಪ್ರಾಪ್ತ ಬಾಲಕಿಯ ಶವ ಶನಿವಾರ (ಮಾ.28) ಬೋಳುಗುಟ್ಟದ ನೀಲಗಿರಿ ತೋಪಿನಲ್ಲಿ ನಗ್ನ ಸ್ಥಿತಿಯಲ್ಲಿ ಪತ್ತೆಯಾಗಿದೆ. ಅಸ್ಸಾಂ ಮೂಲದ ಈ ಬಾಲಕಿ ವಿಟ್ಟಸಂದ್ರ ಸಮೀಪದ ಶೆಡ್ ಒಂದರಲ್ಲಿ ತನ್ನ ಪೋಷಕರ ಜೊತೆ ವಾಸವಿದ್ದಳು. ಗುರುವಾರ ಸಂಜೆ ಮನೆ ಬಳಿ ಆಟವಾಡುತ್ತಿದ್ದ ಬಾಲಕಿ ದಿಢೀರ್ ಕಾಣೆಯಾಗಿದ್ದಳು. ಪೋಷಕರು ಸುತ್ತಮುತ್ತ ಎಲ್ಲಾ ಕಡೆ ಹುಡುಕಾಡಿದರೂ ಮಗು ಪತ್ತೆಯಾಗಿರಲಿಲ್ಲ….