Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 1, 2, 3ರ ಜನವರಿ 9ರ ದಿನಭವಿಷ್ಯ

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1):

ನೀವು ಕೇವಲ ಆದೇಶ ನೀಡುವುದಕ್ಕೆ ಸೀಮಿತವಾಗಬೇಡಿ. ಕಚೇರಿಯಲ್ಲಿ ಅಥವಾ ಮನೆಯಲ್ಲಿ ಕೆಲಸಗಾರರ ಜೊತೆ ಸ್ವತಃ ನೀವೇ ಮೈದಾನಕ್ಕಿಳಿದು ಕೆಲಸ ಮಾಡಿದರೆ ಮಾತ್ರ ಅಂದುಕೊಂಡ ಗುರಿ ತಲುಪಲು ಸಾಧ್ಯ. ಆರ್ಥಿಕವಾಗಿ ಇಂದು “ಹೂಡಿಕೆಗಿಂತ ಉಳಿತಾಯ”ಕ್ಕೆ ಒತ್ತು ನೀಡಿ. ಯಾರೋ ಹೇಳಿದ ಮಾತು ಕೇಳಿ ಷೇರು ಮಾರುಕಟ್ಟೆಯಲ್ಲಿ ಹಣ ಹಾಕಬೇಡಿ. ಸಂಜೆಯ ವೇಳೆ ಸಂಗಾತಿಯೊಂದಿಗೆ ಸಣ್ಣ ವಿಷಯಕ್ಕೆ ವಾದವಾಗಬಹುದು, ಅಲ್ಲಿ ನಿಮ್ಮ ಅಹಂ ಬಿಟ್ಟು ಮೌನ ತಾಳುವುದು ಪ್ರಾಯೋಗಿಕವಾಗಿ ನಿಮಗೆ ಲಾಭದಾಯಕ.

ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2):

ಭಾವನಾತ್ಮಕವಾಗಿ ನಿರ್ಧಾರ ತೆಗೆದುಕೊಳ್ಳುವ ಬದಲು ಇಂದು ಅಂಕಿ-ಅಂಶಗಳ ಮೇಲೆ ಗಮನಹರಿಸಿ. ಹಣಕಾಸಿನ ವ್ಯವಹಾರದಲ್ಲಿ ಸಹಿ ಮಾಡುವ ಮುನ್ನ ದಾಖಲೆಗಳನ್ನು ಎರಡು ಬಾರಿ ಓದಿ. ಇಂದು ಹಾಲಿನ ಉತ್ಪನ್ನಗಳು ಅಥವಾ ಬಿಳಿ ಬಣ್ಣದ ವಸ್ತುಗಳ ವ್ಯಾಪಾರಸ್ಥರಿಗೆ ಉತ್ತಮ ಲಾಭ ಇದೆ. ಪ್ರಯಾಣದ ಸಂದರ್ಭದಲ್ಲಿ ಅಮೂಲ್ಯ ವಸ್ತುಗಳ ಬಗ್ಗೆ ಎಚ್ಚರವಿರಲಿ. ಕುಟುಂಬದಲ್ಲಿ ಹಿರಿಯರ ಆರೋಗ್ಯಕ್ಕಾಗಿ ಸ್ವಲ್ಪ ಹಣ ಖರ್ಚಾಗಬಹುದು, ಅದಕ್ಕಾಗಿ ಮಾನಸಿಕವಾಗಿ ಸಿದ್ಧರಾಗಿರಿ.

ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3):

ನಿಮ್ಮ ಜ್ಞಾನವನ್ನು ಪ್ರದರ್ಶಿಸಲು ಇಂದು ಸರಿಯಾದ ವೇದಿಕೆ ಸಿಗಲಿದೆ. ಆದರೆ, “ನನಗೆಲ್ಲಾ ಗೊತ್ತು” ಎಂಬ ಧೋರಣೆ ಬೇಡ. ಕೆಲಸದ ಸ್ಥಳದಲ್ಲಿ ಹೊಸ ತಂತ್ರಜ್ಞಾನ ಅಥವಾ ಹೊಸ ಸಾಫ್ಟ್‌ವೇರ್ ಕಲಿಯಲು ಇಂದು ಹಣ ಹೂಡಿಕೆ ಮಾಡಿ, ಇದು ಭವಿಷ್ಯದಲ್ಲಿ ದೊಡ್ಡ ಲಾಭ ನೀಡಲಿದೆ. ಮಕ್ಕಳ ಶಿಕ್ಷಣಕ್ಕೆ ಸಂಬಂಧಿಸಿದಂತೆ ಮಹತ್ವದ ನಿರ್ಧಾರ ತೆಗೆದುಕೊಳ್ಳುವಿರಿ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಇರುವವರಿಗೆ ಕೆಲಸದ ಒತ್ತಡ ಹೆಚ್ಚಿದ್ದರೂ, ದಿನದ ಅಂತ್ಯಕ್ಕೆ ಸಮಾಧಾನ ಸಿಗಲಿದೆ.

ಲೇಖನ- ಎನ್‌.ಕೆ.ಸ್ವಾತಿ

Source link

Horoscope Today 09 January: ಇಂದು ಈ ರಾಶಿಯವರನ್ನು ಯಾವ ವಿಚಾರಕ್ಕೂ ನಿಯಂತ್ರಿಸಲಾಗದು – Kannada News | Horoscope Today: January 9, 2026 Daily Zodiac Predictions and Lucky Signs

ಮೇಷ ರಾಶಿ:

ಕಾನೂನಿನ ಕ್ರಮದಲ್ಲಿ ನಿಮ್ಮ ಯೋಜನೆ ಇರಲಿ. ಹೂಡಿಕೆಯನ್ನು ಮಾಡಲು ಒತ್ತಡ ಬರಬಹುದು. ದುರಾಸೆ ಪಡದೆ ಬಂದಿದ್ದನ್ನು ಸುಮ್ಮನೇ ಸ್ವೀಕರಿಸಿ. ಜೀವನಕ್ಕೆ ಹೊಸ ತಿರುವು ಸಿಗುವ ಸಾಧ್ಯತೆ ಇದೆ. ನಿಮಗೆ ತಿಳಿದ ವಿಚಾರವನ್ನು ಬೇರೆಯವರಿಗೆ ಯಾವುದೇ ನಿರೀಕ್ಷೆಯಿಲ್ಲದೆ ಹೇಳಿಕೊಡುವಿರಿ. ದಾಂಪತ್ಯದ ಸುಖವು ನಿಮಗೆ ಹೆಚ್ಚು ಇಷ್ಟವಾದೀತು. ಮನಸ್ಸಿನಲ್ಲಿ ಸಂಯಮವಿರಲಿ. ವಾತಾವಣವು ನಿಮ್ಮನ್ನು ಮಾನಸಿಕವಾಗಿ ಕುಗ್ಗಿಸಬಹುದು. ಹಣವನ್ನು ಕೊಟ್ಟು ಕಳೆದುಕೊಳ್ಳುವಿರಿ. ಸಂಗಾತಿ ಮತ್ತು ಮಕ್ಕಳ ಜೊತೆ ಅನವಶ್ಯಕ ವಾದ ವಿವಾದವು ಆಗಬಹುದು. ನಿಮ್ಮ ತಪ್ಪಿಗೆ ಬೇರೆಯವರನ್ನು ಬೆರಳು ಮಾಡುವಿರಿ. ತಪ್ಪನ್ನು ಒಪ್ಪಿಕೊಂಡು ಮೆಚ್ಚುಗೆ ಪಡೆಯುವಿರಿ.

ವೃಷಭ ರಾಶಿ:

ಸುಂದರವಾದ ಸ್ಥಳಕ್ಕೆ ಹೋಗಬೇಕು ಎನಿಸುವುದು. ಅನಾರೋಗ್ಯವನ್ನು ನಿರ್ಲಕ್ಷಿಸುವುದು ಬೇಡ. ಭೂಮಿಗೆ ಸಂಬಂಧಿತ ಕೆಲಸವನ್ನು ಪೂರ್ಣಮಾಡಿಕೊಳ್ಳುವಿರಿ. ನೀವು ಹಾಳುಮಾಡಿಕೊಳ್ಳುವಿರಿ. ಇಂದಿನ ನಿಮ್ಮ ನಿರೀಕ್ಷೆಗಳು ಹುಸಿಯಾಗಬಹುದು. ನಿಮಗೆ ಬೇಕಾದುದನ್ನು ಪಡೆಯಲು ನಿಮಗೆ ಇಚ್ಛೆ ಇರುವುದು. ನೀವು ಇಂದು ಅಸಹಜವಾಗಿ ನಡೆದುಕೊಳ್ಳುವಿರಿ. ಆಲಸ್ಯವು ಅಧಿಕವಾಗಬಹುದು. ಬಹಳ ದಿನದಿಂದ ಅಂದುಕೊಂಡ ಸ್ಥಳಕ್ಕೆ ಹೋಗುವಿರಿ. ಸಾಧಿಸಲಾಗದ ಕೆಲಸಕ್ಕೆ ಹೆಚ್ಚು ಶ್ರಮವನ್ನು ಹಾಕುವಿರಿ.‌ ಸ್ನೇಹ ಸಂಬಂಧಗಳನ್ನು ದೂರ ಮಾಡಿಕೊಳ್ಳುವಿರಿ. ಸುಮ್ಮನೆ ಕಾಲಹರಣವಾಗುವುದು ನಿಮಗೆ ಗೊತ್ತಾಗದು.

ಮಿಥುನ ರಾಶಿ:

ನಿಮ್ಮ ಬಗ್ಗೆ ಸ್ಪಷ್ಟತೆ ಇರಲಿ. ಉಸಿರಿಗೆ ಸಂಬಂಧಿಸಿದ ತೊಂದರೆ ಕಾಣಿಸಿಕೊಳ್ಳಬಹುದು. ವಿದ್ಯಾಭ್ಯಾಸದಲ್ಲಿ ಅತಂತ್ರ ಸ್ಥಿತಿಯನ್ನು ನೀವಾಗಿಯೇ ತಂದುಕೊಳ್ಳುವಿರಿ. ಅವಶ್ಯಕತೆ ಇರುವಷ್ಟು ಮಾತ್ರ ಮಾತನಾಡಿ. ನಿಮಗೆ ಅತಿಥಿ ಸತ್ಕಾರವು ನಡೆಯಬಹುದು. ಒಂದೇ ವಿಚಾರಕ್ಕೆ ಮತ್ತೆ ಮತ್ತೆ ಬೇಸರಿಸುವ ಅವಶ್ಯಕತೆ ಇಲ್ಲ. ರಾಜಕೀಯದಿಂದ ಹೊರಬರಲು ಮನಸ್ಸಾಗುವುದು. ಅನಿರೀಕ್ಷಿತ ಅಮೂಲ್ಯ ವಸ್ತುಗಳು ಪ್ರಾಪ್ತವಾಗುವುದು. ಹಠದ ಸ್ವಭಾವವು ವ್ಯವಸ್ಥೆಯನ್ನು ಹಾಳುಮಾಡೀತು. ಇಂದಿನ ಅಧಿಕ ಸಮಯದಲ್ಲಿ ಮೌನವಾಗಿಯೇ ಇರುವಿರಿ. ಯಾವುದೋ ಹತ್ತಾರು ವಿಚಾರದಲ್ಲಿ ನೀವು ಒತ್ತಡಕ್ಕೆ ಒಳಗಾಗುವಿರಿ. ವಾಹನ ಸವಾರರು ಜಾಗರೂಕತೆ ಅವಶ್ಯಕ.

ಕಟರ್ಕಾಟ ರಾಶಿ:

ಸಂತೋಷಕ್ಕಾಗಿ ನೀವು ಕೆಲವನ್ನು ತ್ಯಾಗಮಾಡಬೇಕಾದೀತು. ಮಕ್ಕಳ ವಿಚಾರದಲ್ಲಿ ಅಧಿಕ ಬದಲಾವಣೆ ಇರಲಿದೆ. ಪ್ರೀತಿಯು ಸುಖಾಂತ್ಯ ಕಾಣಬಹುದು. ವ್ಯಾಪಾರಸ್ಥರು ಶ್ರಮದಾಯಕ ಲಾಭವನ್ನು ಮಾಡಿಕೊಳ್ಳುವರು. ಹೊಸ ಯಂತ್ರಗಳನ್ನು ಸ್ವೀಕರಿಸುವಿರಿ. ನಿರ್ಲಕ್ಷ್ಯವು ನಿಮ್ಮ ಸ್ವಭಾವವಾದರೂ ಕೆಲವು ಸಂದರ್ಭಗಳಲ್ಲಿ ಅದನ್ನ ಬದಲಿಸಿಕೊಳ್ಳುವುದು ಉತ್ತಮ. ವೃತ್ತಿಯಲ್ಲಿ ಸಹೋದ್ಯೋಗಿಗಳಿಂದ ಕಿರಿಕಿರಿ ಆಗಬಹುದು. ಪ್ರಭಾವಿ ವ್ಯಕ್ತಿಗಳ ಭೇಟಿಯು ಸಂತೋಷವನ್ನು ಕೊಡುವುದು. ಉದ್ವೇಗದಿಂದ ಏನನ್ನಾದರೂ ಹೇಳಲು ಹೋಗಿ ನಗೆಪಾಟಲಿಗೆ ಸಿಕ್ಕಿಕೊಳ್ಳುವಿರಿ. ಸಂಗಾತಿಯಿಂದ ಉಡುಗೊರೆಯು ಅನಿರೀಕ್ಷಿತವಾಗಿ ಸಿಗಬಹುದು.

ಸಿಂಹ ರಾಶಿ:

ಕೊರತೆಯನ್ನು ನೆನೆದು ದುಃಖಿಸುವುದು ಬೇಡ. ಕಾಲಕ್ಕೆ ಸಿಗಬೇಕಾದುದು ಸಿಗಲಿದೆ. ಎಂದಿಗಿಂತ ವ್ಯಾಪಾರದಲ್ಲಿ ಹಿನ್ನಡೆ ಇರಲಿದೆ. ಚಿಂತೆಯು ಕಾಡಬಹುದು. ಪಾಲುದಾರಿಕೆಯಲ್ಲಿ ನಿಮಗೆ ಹೊಂದಾಣಿಕೆಯ ಕೊರತೆ ಆಗಬಹುದು. ಅನಿರೀಕ್ಷಿತ ವೆಚ್ಚವನ್ನು ಮಾಡಬೇಕಾಗಬಹುದು. ನ್ಯಾಯಾಲಯದಲ್ಲಿ ನಿಮ್ಮ ಪರವಾಗಿ ಸಾಕ್ಷಿಯು ಸಿಗದೇಹೋಗಬಹುದು. ಪ್ರಯಾಣದಲ್ಲಿ ತೊಂದರೆಗಳು ಬಂದರೂ ತಲುಪಬೇಕಾದ ಸ್ಥಳಕ್ಕೆ ಹೋಗುವಿರಿ. ಸರ್ಕಾರಿ ನೌಕರರು ಅಧಿಕಾರಿಗಳಿಂದ ಸಮಸ್ಯೆಯನ್ನು ಎದುರಿಸಬೇಕಾದೀತು. ಮಾನಸಿಕ ಒತ್ತಡಗಳು ನಿಮ್ಮ ಕೆಲಸವನ್ನು ಹಾಳುಮಾಡುವುದು. ಕಛೇರಿಯ ಕೆಲಸವನ್ನು ಹಂಚಿಕೊಂಡು ಮಾಡುವಿರಿ.

ಕನ್ಯಾ ರಾಶಿ:

ವಿದ್ಯಾರ್ಥಿಗಳ ಶ್ರಮವು ವ್ಯರ್ಥವಾಗುವುದು. ಅತಿಯಾದ ಚಿಂತೆಯು ನಿಮ್ಮ ಜೊತೆಗಿರುವವರ ಮನಸ್ಸನ್ನೂ ಕೆಡಿಸೀತು. ಉದ್ಯೋಗದ ಬದಲಾವಣೆ ಆಗಲಿದ್ದು ಸರಿಯಾದ ಪ್ರತ್ಯುತ್ತರ ಸಿಗದೇ ಬೇಸರವಾಗುವುದು. ನಿಮ್ಮ ವಸ್ತುಗಳು ಕಳ್ಳತನವಾಗಬಹುದು. ನಿಮ್ಮ ನಿಯಮಗಳನ್ನು ನೀವೇ ಭಂಗ ಮಾಡಿಕೊಳ್ಳುವಿರಿ. ಎಚ್ಚರಿಕೆಯಿಂದ ನಿಮ್ಮ ಹೆಜ್ಜೆಯನ್ನು ಇಡಿ. ಅಳುಕಿನಿಂದ ಇರುವಿರಿ. ಇಂದು ಕೈಗೊಂಡ ಪ್ರವಾಸದಲ್ಲಿ ನಿಮಗೆ ತೃಪ್ತಿ ಸಿಗದು. ನಿಮ್ಮ ಉತ್ಸಾಹಕ್ಕೆ ಯಾರಾದರೂ ಭಂಗಮಾಡಬಹುದು. ಯಾರದ್ದೋ ಮೂಲಕ ನೀವು ಶತ್ರುಗಳ ಯೋಜನೆಯನ್ನು ತಿಳಿಯುವಿರಿ. ಸಹನೆಯಿಂದ ಆಗುವ ಲಾಭವು ಅನುಭವಕ್ಕೆ ಬರಬಹುದು.

ತುಲಾ ರಾಶಿ:

ಸಾಮಾಜಿಕ ಕೆಲಸಗಳು ನಿಮ್ಮನ್ನು ಹುಡುಕಿಕೊಂಡು ಬರಬಹುದು. ವ್ಯವಹಾರದಲ್ಲಿ ಊಹಿಸಿದ್ದಕ್ಕಿಂತ ಹೆಚ್ಚಿನ ಲಾಭವು ಸಿಗುವುದು. ಉದರಬಾಧೆಯಿಂದ ಕಷ್ಟಪಡುವಿರಿ. ದುಡುಕಿ ಮಾತನಾಡಿ ಸತ್ಯವನ್ನು ಹೇಳುವಿರಿ. ಆಸ್ತಿಯ ಕಲಹವನ್ನು ನ್ಯಾಯಾಲಯಕ್ಕೆ ತಡಗೆದುಕೊಂಡು ಹೋಗುವಿರಿ. ವಿನಾಕಾರಣ ಯಾರ ಮೇಲಾದರೂ ಅಧಿಕಾರವನ್ನು ಚಲಾಯಿಸುವಿರಿ. ಅಲ್ಪರ ಸಹವಾಸದಿಂದ ಅಭಿಮಾನಕ್ಕೆ ತೊಂದರೆಯಾಗುವುದು. ಹಣಕಾಸಿನ ವ್ಯವಹಾರವು ಪಾರದರ್ಶಕವಾಗಿ ಇರಲಿ. ಸಂಗಾತಿಯಿಂದ ನಿಮಗೆ ನೂತನ ವಸ್ತ್ರಗಳು ಬರಬಹುದು. ನಿಮ್ಮ ಆದಾಯದ ಮೂಲವನ್ನು ಹೆಚ್ಚುಮಾಡಿಕೊಳ್ಳುವಿರಿ. ಕೆಲಸದಲ್ಲಿ ಪ್ರಾಮಾಣಿಕತೆ ಕಡಿಮೆ ಆದಂತೆ ತೋರಬಹುದು.

ವೃಶ್ಚಿಕ ರಾಶಿ:

ಬಂಧುಗಳು ನಿಮ್ಮ ಸಮಸ್ಯೆಗೆ ಸ್ಪಂದಿಸುವರು. ವ್ಯಾಪಾರವು ಲಾಭಾಂಶವನ್ನು ಹೆಚ್ಚು ಪಡೆಯುವುದು. ನಿಮ್ಮ ಕೆಲಸಗಳಿಗೆ ಆತ್ಮಸಾಕ್ಷಿಯೇ ಮುಖ್ಯವಾಗಿರುವುದು. ಹುಡುಗಾಟದ ಬುದ್ಧಿಯಿಂದ ಕೆಲವು ವಿಚಾರಗಳು ನಿಮಗೆ ಗೊತ್ತಾಗದೇ ಹೋಗಬಹುದು. ಸಂಗಾತಿಯ ಬೆಂಬಲವು ಸಿಗದೇಹೋಗಬಹುದು. ನಿಮ್ಮ ಹಿತೈಷಿಗಳಾದರೂ ಅವರ ಜೊತೆಗಿನ ಒಡನಾಟವು ಮಿತಿಯಲ್ಲಿ ಇರಲಿ. ಇಂದಿನ ಕಾರ್ಯದಲ್ಲಿ ಮುನ್ನಡೆಯಿರಲಿದ್ದು ನಿಮ್ಮ ಬಗ್ಗೆ ಸದಭಿಪ್ರಾಯವು ಇರುವುದು. ಆಪ್ತರ ಜೊತೆ ಮಾಡಿದ‌ ಸಮಾಲೋಚನೆಯಿಂದ ಮನಸ್ಸಿಗೆ ಸಂತೋಷ ಸಿಗುವುದು. ವಾಸಸ್ಥಳದ ಬದಲಾವಣೆಯಿಂದ ಹೊಂದಿಕೊಳ್ಳುವುದು ಕಷ್ಟವಾದೀತು.

ಧನು ರಾಶಿ:

ಇಂದು ಎಲ್ಲರಿಂದ ವಿಶ್ವಾಸವನ್ನು ಕಳೆದುಕೊಳ್ಳಬಹುದು. ಮಂಗಲ ಕಾರ್ಯಗಳಿಂದ ನೆಮ್ಮದಿ ಇರುವುದು. ಮಿತ್ರನ ನಂಬಿಕೆಯನ್ನು ಕಳೆದುಕೊಂಡು, ಆದ ನಷ್ಟಕ್ಕೆ ದುಃಖಿಸುವಿರಿ. ಸ್ಥಿರಾಸ್ತಿಯನ್ನು ವ್ಯವಹಾರ‌ ಜ್ಞಾನದ ಕೊರತೆಯಿಂದ ಕಳೆದುಕೊಳ್ಳಬಹುದು. ಮಿತ್ರರ ಮನಸ್ತಾಪವನ್ನು ನೀವು ಬಗೆಹರಿಸಿಕೊಳ್ಳುವಿರಿ. ಬಂಧುಗಳ ನಡುವೆ ಪರಸ್ಪರ ಸೌಹಾರ್ದವು ಬೆಳೆಯಬಹುದು. ಸಹೋದರರ ನಡುವೆ ಆರ್ಥಿಕ ಸಂಬಂಧವು ಉತ್ತಮವಾಗಿ ಇರುವುದಿಲ್ಲ. ವಯಸ್ಸಿಗೆ ಬಂದ ಮಕ್ಕಳ ವಿವಾಹದ ಚಿಂತೆ‌ ಇರುಬುದು. ಸಾಹಿತ್ಯದಲ್ಲಿ ಆಸಕ್ತಿ ಮೂಡುವ ಸಾಧ್ಯತೆ ಇದೆ. ಪ್ರೀತಿಯಿಂದ ಕೊಟ್ಟ ವಸ್ತುವನ್ನು ಮತ್ತೆ ಕೊಡುವುದು ಬೇಡ. ಸಂಗಾತಿಯ ಜೊತೆ ಸಣ್ಣ ವಿಚಾರಗಳಿಗೂ ಜಗಳವಾಡುಬಿರಿ.

ಮಕರ ರಾಶಿ:

ಉದ್ಯೋಗಕ್ಕೆ ಸಂಬಂಧಿಸಿದಂತೆ ಕಿರಿಕಿರಿಯನ್ನು ಅನುಭವಿಸಿದರೂ ಅದನ್ನು ವ್ಯಕ್ತ ಮಾಡುವುದು ಬೇಡ. ಸ್ನೇಹಿತರು ನಿಮ್ಮನ್ನು ಅಪಮಾನ ಮಾಡಬಹುದು. ನ್ಯಾಯಾಲಯದ ವಿಷಯದಲ್ಲಿ ನಿಮ್ಮ ಊಹೆಯು ಸರಿಯಾಗದು. ಮನೆಯಲ್ಲಿ ಮಕ್ಕಳು ನಿಮ್ಮನ್ನು ಲೆಕ್ಕಕ್ಕೆ ತೆಗದುಕೊಳ್ಳದೇ ಹೋಗಬಹುದು. ಹಳೆಯ ಮನೆಯ ದುರಸ್ತಿ ಕಾರ್ಯವು ಜರುಗಲಿದೆ. ವಿದ್ಯಾರ್ಥಿಗಳ ಕಲಿಕೆಯಲ್ಲಿ ಹಿನ್ನಡೆಯಾಗಲಿದೆ. ಇಂದಿನ‌ ಹೆಚ್ಚಿನ ವಿಚಾರಗಳನ್ನು ನಕರಾತ್ಮಕವಾಗಿಯೇ ಚಿಂತಿಸುವಿರಿ. ದೂರ ಪ್ರಯಾಣವು ನಿಮಗೆ ಇಂದು ಅನಿವಾರ್ಯವಾದೀತು. ಬೇಕಾದ ವಸ್ತುವು ಕಣ್ಮರೆಯಾಗಬಹುದು. ಸ್ವಂತ ವಾಹನದಿಂದ ನೀವು ಲಾಭವನ್ನು ಗಳಿಸುವಿರಿ.

ಕುಂಭ ರಾಶಿ:

ನೆಯ ಬಗ್ಗೆಯೇ ಹೆಚ್ಚು ಯೋಚಿಸುವಿರಿ. ಅನಾರೋಗ್ಯವು ಉತ್ಸಾಹವನ್ನು ಕಡಿಮೆ ಮಾಡುವುದು. ಗೌಪ್ಯವಾಗಿ ನಿಮ್ಮ ಅಂತರಂಗವನ್ನು ತಿಳಿದುಕೊಳ್ಳಲು ಶತ್ರುಗಳು ಪ್ರಯತ್ನಿಸಬಹುದು. ಮಾತಿನ ಮೇಲೆ ನೀವು ಹಿಡಿತವನ್ನು ಸಾಧಿಸಬೇಕಾದೀತು. ಕಛೇರಿಯಲ್ಲಿ ಅನಗತ್ಯವಾಗಿ ಮಾತನಾಡಿ ಸುಮ್ಮನೇ ವ್ಯಕ್ತಿತ್ವವನ್ನು ಹಾಳುಮಾಡಿಕೊಳ್ಳುವುದು ಬೇಡ. ಕಲಾವಿದರು ಸಿಕ್ಕ ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳುವರು. ವೃತ್ತಿಯಲ್ಲಿ ಬಡ್ತಿಯನ್ನು ಅಪೇಕ್ಷಿಸುವಿರಿ. ಮೇಲಧಿಕಾರಿಗಳ ಮಾತುಗಳು ನಿಮ್ಮನ್ನು ಕಾಡಬಹುದು. ಆಪ್ತರ ಮಾತಿನ ಮೇಲೆ ಭರವಸೆ ಇಡಿ. ಅತಿಯಾದ ಒತ್ತಡದಿಂದ ಮಾಡುವ ಕೆಲಸದಿಂದ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು.

ಮೀನ ರಾಶಿ:

ಸಾಲದ ಚಿಂತೆಯಲ್ಲಿ ನೀವು ಎಲ್ಲವನ್ನೂ ಮರೆಯುವಿರಿ. ಇಂದು ನಿಮಗೆ ಮಾತಿನಿಂದಾಗಿ ತೊಂದರೆಗಳು ಬರಬಹುದು. ಎಲ್ಲರ ಜೊತೆಗೂ ವಾಗ್ವಾದಕ್ಕೆ ಹೋಗುವುದು ಬೇಡ. ಕುಟುಂಬದ ಸಮಸ್ಯೆಗೆ ಧಾರ್ಮಿಕ ಕಾರ್ಯವನ್ನು ಮಾಡಿ ಪರಿಹಾರವನ್ನು ಮಾಡಿಕೊಳ್ಳಲು ಇಚ್ಛಿಸುವಿರಿ. ಇಂದು ನೀವು ಅಂದುಕೊಂಡಂತೆ ಆಗಿದ್ದು ಖುಷಿಯಿಂದ ಇರುವಿರಿ. ವಾಹನ ಖರೀದಿಯ ಆಲೋಚನೆಯನ್ನು ಸದ್ಯ ಕೈ ಬಿಡುವಿರಿ. ವಿದ್ಯಾಭ್ಯಾಸದ ಬಗ್ಗೆ ಅನಾದರ ಬರಬಹುದು. ಯಾರಿಂದಲಾದರೂ ಹಿತವಚನದ ಅವಶ್ಯಕತೆ ಇರುವುದು. ಸ್ತ್ರೀಯರಿಂದ ಇಂದು ಸಹಾಯವನ್ನು ಪಡೆಯುವಿರಿ. ಹಣದ ವಿಚಾರದಲ್ಲಿ ನಿಮಗೆ ಸರಿಯಾದ ಮಾರ್ಗದರ್ಶನ ಬೇಕಾಗುವುದು.

ಜನವರಿ 09,​​ 2026ರ ಪಂಚಾಂಗ:

ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ದಕ್ಷಿಣಾಯನ, ಋತು : ಹೇಮಂತ, ಚಾಂದ್ರ ಮಾಸ : ಪೌಷ, ಸೌರ ಮಾಸ : ಧನು, ಮಹಾನಕ್ಷತ್ರ : ಶ್ರವಣಾ, ವಾರ : ಶುಕ್ರ, ಪಕ್ಷ : ಕೃಷ್ಣ, ತಿಥಿ : ಸಪ್ತಮೀ ನಿತ್ಯನಕ್ಷತ್ರ : ಉತ್ತರಾಫಲ್ಗುಣೀ ಯೋಗ : ಶೋಭನ, ಕರಣ : ವಣಿಜ, ಸೂರ್ಯೋದಯ – 06 – 52 am, ಸೂರ್ಯಾಸ್ತ – 06 – 09 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 13-56 – 15:21, ಯಮಗಂಡ ಕಾಲ 06:52 – 08:17, ಗುಳಿಕ ಕಾಲ 09:42 – 11:06

-ಲೋಹಿತ ಹೆಬ್ಬಾರ್ – 8762924271 (what’s app only)

Source link

ಕೇಂದ್ರದ ವಿರುದ್ಧ ಸಿಡಿದೆದ್ದ ಸಿದ್ದರಾಮಯ್ಯ ಸರ್ಕಾರ: ವಿಶೇಷ ಅಧಿವೇಶನ ಕರೆಯಲು ತೀರ್ಮಾನ – Kannada News | MGNREGA to PBGRY: CM Siddaramaiah Lead Congress MLAs Meeting decides to special session

ಬೆಂಗಳೂರು, (ಜನವರಿ 08): ಮನರೇಗಾ (ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ) ರದ್ದುಗೊಳಿಸಿ ಜಿ ರಾಮ್‌ ಜಿ ಎಂದು ಪುನರ್‌ನಾಮಕರಣ ಮಾಡಿರುವ ಕೇಂದ್ರ ಸರ್ಕಾರದ ನಡೆಯ ವಿರುದ್ಧ ಕರ್ನಾಟಕದಲ್ಲಿ ಹೋರಾಟ ಮಾಡಲು ಕಾಂಗ್ರೆಸ್ ಮುಂದಾಗಿದೆ. ಇದಕ್ಕೆ ಪೂರಕವೆಂಬಂತೆ ಇಂದಿನ ಸಚಿವ ಸಂಪುಟದಲ್ಲೂ ಸಹ ಚರ್ಚೆ ಮಾಡಿದ್ದು, ವಿಬಿ ಜಿ ರಾಮ್‌ ಜಿ ಕಾಯಿದೆಯ ಸಿಂಧುತ್ವವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲು ನಿರ್ಧಾರ ಮಾಡಿದೆ. ಅಲ್ಲದೇ ಸಿಎಂ ಸಿದ್ದರಾಮಯ್ಯ (Siddaramaiah_ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಅವರು ಕಾಂಗ್ರೆಸ್ ಶಾಸಕರು ಜತೆ ಸಭೆ ಮಾಡಿದ್ದು, ಮನ್ರೇಗಾ ಹೆಸರು ಬದಲಾವಣೆ ವಿರುದ್ಧ ಹೋರಾಟ ನಡೆಸಲು ತೀರ್ಮಾನಿಸಿದೆ. ಹಾಗೇ ಮಹಾತ್ಮ‌ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಮತ್ತೆ ಜಾರಿಗೆ ತರುವಂತೆ ಒತ್ತಾಯಿಸಿ ನಿರ್ಣಯ ಅಂಗೀಕರಿಸಲು ಶೀಘ್ರವೇ ವಿಧಾನ ಮಂಡಲದ ವಿಶೇಷ ಅಧಿವೇಶನ ಕರೆಯಲು ನಿರ್ಧರಿಸಲಾಗಿದೆ.

2 ದಿನ ವಿಶೇಷ ಅಧಿವೇಶನ ಕರೆಯಲು ತೀರ್ಮಾನ

ಮನರೇಗಾ ರದ್ದುಗೊಳಿಸಿ ಜಿ ರಾಮ್‌ ಜಿ ಎಂದು ಪುನರ್‌ನಾಮಕರಣ ಮಾಡಿರುವ ಕೇಂದ್ರ ಸರ್ಕಾರದ ಹೋರಾಟ ನಡೆಸುವ ಸಂಬಂಧ ಇಂದು (ಜನವರಿ 08) ಬೆಂಗಳೂರಿನಲ್ಲಿ ಕಾಂಗ್ರೆಸ್ ಶಾಸಕ ಸಭೆ ನಡೆಸಿದ್ದು, ಕೇಂದ್ರದ ವಿರುದ್ಧ ಪ್ರಬಲವಾಗಿ ಹೋರಾಟ ಮಾಡಲು ನಿರ್ಧರಿಸಲಾಗಿದೆ.ಅಲ್ಲದೇ ಮಹಾತ್ಮ‌ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಮತ್ತೆ ಜಾರಿಗೆ ತರುವಂತೆ ಒತ್ತಾಯಿಸಿ ನಿರ್ಣಯ ಅಂಗೀಕರಿಸಲು ಎರಡು ದಿನ ವಿಧಾನ ಮಂಡಲದ ವಿಶೇಷ ಅಧಿವೇಶನ ಕರೆಯಲು ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಸಭೆಯಲ್ಲಿ ಮಾತನಾಡಿರುವ ಸಿಎಂ ಸಿದ್ದರಾಮಯ್ಯ, ಇದು ಬಿಜೆಪಿಯವರ ಹುನ್ನಾರ. ಮನಮೋಹನ ಸಿಂಗ್ ಅವರು ಪ್ರಧಾನಿ ಆಗಿದ್ದಾಗ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಜಾರಿಗೆ ಬಂತು. ಇದು ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗ ಸೃಷ್ಟಿಸುವ ಯೋಜನೆ. ದಲಿತರು, ಮಹಿಳೆಯರು, ರೈತರಿಗೆ ಉದ್ಯೋಗ ಒದಗಿಸುವುದು ಯೋಜನೆ ಉದ್ದೇಶ. ವರ್ಷದಲ್ಲಿ ನೂರು ದಿನ ಉದ್ಯೋಗ ಅವಕಾಶ ಈ ಯೋಜನೆಯಲ್ಲಿ ಸಿಗುತ್ತಿತ್ತು. ಈ ಉದ್ಯೋಗವನ್ನೇ ಕಸಿಯುವ ಕೆಲಸಕ್ಕೆ ಕೇಂದ್ರ ಸರ್ಕಾರ ಕೈ ಹಾಕಿದೆ. ಉದ್ಯೋಗದ ಹಕ್ಕು ಇಲ್ಲವಾಗಿಸಿದೆ ಎಂದು ಕಿಡಿಕಾರಿದರು.

ಇದನ್ನೂ ಓದಿ: ʼವಿಬಿಜಿ ರಾಮ್ ಜಿ ಕಾಯ್ದೆʼ ಭ್ರಷ್ಟಾಚಾರಿ ಕಾಂಗ್ರೆಸ್‌ ಮಧ್ಯವರ್ತಿಗಳಿಗೆ ತೊಡಕು: ಜೋಶಿ ತಿರುಗೇಟು

ಗೊಂದಲ ಸೃಷ್ಟಿ ಮಾಡುವ ಹುನ್ನಾರ ಎಂದ ಸಿಎಂ

ಮಹಾತ್ಮ ಗಾಂಧಿಯವರ ಹೆಸರು ತೆಗೆದು ಗೊಂದಲ ಸೃಷ್ಟಿ ಮಾಡುವ ಹುನ್ನಾರ ಇದಾಗಿದೆ. ಈ ಮೂಲಕ ಮತ್ತೆ ಗಾಂಧಿಯವರನ್ನು ಕೊಲೆ ಮಾಡಲಾಗಿದೆ. ಇದು ಸಂಘ ಪರಿವಾರದವರು ಹೇಳಿ ಕೊಟ್ಟಿರುವ ಪಾಠ. 28 ಕೋಟಿ ದಲಿತರಿಗೆ ಇದರಿಂದ ಅನ್ಯಾಯವಾಗಿದೆ. ನಮ್ಮ ಹೋರಾಟ ತೀವ್ರವಾಗಿ ಇರಬೇಕು. ಬಡವರ ಉದ್ಯೋಗದ ಹಕ್ಕು ಕಸಿದುಕೊಂಡವರಿಗೆ ಪಾಠ ಕಲಿಸಬೇಕು. ಬಡವರು ಆರ್ಥಿಕವಾಗಿ ಸಬಲರಾಗುವುದನ್ನು ಸಂಘ ಪರಿವಾರ ಸಹಿಸುವುದಿಲ್ಲ ಎಂದಿದ್ದಾರೆ.

ಶಾಸಕರಿಗೆ ಮಹತ್ವದ ಸೂಚನೆ

ಕಾಂಗ್ರೆಸ್ ಜಾರಿಗೆ ತಂದ ಕಾರ್ಯಕ್ರಮವನ್ನು ರದ್ಧು ಮಾಡಿ ಉದ್ಯೋಗದ ಹಕ್ಕು ಕಸಿದುಕೊಂಡಿರುವುದು ಸಂವಿಧಾನ ಬಾಹಿರ ಕೆಲಸ. ಮನರೇಗಾ ಕಾಯಿದೆ ಮತ್ತೆ ಜಾರಿ ಅಗುವ ರೀತಿ ಜನಾಂದೋಲನ ನಡೆಯಬೇಕು. ಪ್ರತಿ ಗ್ರಾಮ ಪಂಚಾಯಿತಿ ಸದಸ್ಯ ನರೇಗಾದಲ್ಲಿ ಕೆಲಸ ಮಾಡುತ್ತಿರುವವರನ್ನ ತಲುಪಬೇಕು. ಈ ವಿಷಯದ ಬಗ್ಗೆ ಜನರನ್ನೂ ಜಾಗೃತಗೊಳಿಸುವ ಕೆಲಸವನ್ನು ಶಾಸಕರು ಮಾಡಬೇಕು. ನಮ್ಮ ಹೋರಾಟ ಜನಾಂದೋಲನವಾಗಿ ರೂಪುಗೊಳ್ಳುವಂತಹ ವಾತಾವರಣ ನಿರ್ಮಾಣ ಆಗಬೇಕಿದೆ ಎಂದು ಸಿದ್ದರಾಮಯ್ಯ ತಮ್ಮ ಶಾಸಕರಿಗೆ ಕರೆ ನೀಡಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 10:54 pm, Thu, 8 January 26

Source link

ದಾರಿ ತಪ್ಪಿ ಊರೊಳಗೆ ಬಂದ ಜಿಂಕೆಯ ಬೆನ್ನಟ್ಟಿದ ನಾಯಿಗಳು; ಆಮೇಲೇನಾಯ್ತು? – Kannada News | Sambhar Deer entered into residential colony in jalandhar watch viral video

ಜಲಂಧರ್, ಜನವರಿ 8: ಪಂಜಾಬ್​​ನ ಜಲಂಧರ್​​ನ ಜನವಸತಿ ಪ್ರದೇಶಕ್ಕೆ ನುಗ್ಗಿದ ಜಿಂಕೆಯನ್ನು ಅರಣ್ಯ ಇಲಾಖೆಯಿಂದ ಬಹಳ ಕಷ್ಟಪಟ್ಟು ಹಿಡಿದು, ವಾಪಾಸ್ ಕಾಡಿಗೆ ಬಿಟ್ಟಿದ್ದಾರೆ. ಜಲಂಧರ್‌ನ ಆದಂಪುರ್‌ನ ಜನವಸತಿ ಪ್ರದೇಶಕ್ಕೆ ಜಿಂಕೆ (Deer) ಇದ್ದಕ್ಕಿದ್ದಂತೆ ಬಂದಾಗ ಜನರು ಭಯಭೀತರಾದರು. ಈ ಬಗ್ಗೆ ಮಾಹಿತಿ ಪಡೆದ ಅರಣ್ಯ ಇಲಾಖೆ ಸಿಬ್ಬಂದಿ, ಪೊಲೀಸರು ಮತ್ತು ಸ್ಥಳೀಯ ನಿವಾಸಿಗಳ ಸಹಾಯದಿಂದ ಆ ಜಿಂಕೆಯನ್ನು ಸುರಕ್ಷಿತವಾಗಿ ಸೆರೆಹಿಡಿಯಲಾಯಿತು.

ಈ ಘಟನೆ ಆದಂಪುರ ಬಳಿಯ ವಸತಿ ಪ್ರದೇಶದಲ್ಲಿ ನಡೆದಿದ್ದು, ರಸ್ತೆಯಲ್ಲಿ ಜಿಂಕೆ ಓಡುತ್ತಿರುವುದನ್ನು ಜನರು ನೋಡಿದ್ದಾರೆ. ಪ್ರತ್ಯಕ್ಷದರ್ಶಿಗಳ ಪ್ರಕಾರ, ಆ ಜಿಂಕೆಯನ್ನು ಬೀದಿ ನಾಯಿಗಳು ಬೆನ್ನಟ್ಟುತ್ತಿದ್ದವು. ಇದರಿಂದಾಗಿ ಅದು ತುಂಬಾ ಭಯಭೀತವಾಗಿ ಕಂಡಲ್ಲೆಲ್ಲ ಓಡುತ್ತಿತ್ತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಹುಬ್ಬಳ್ಳಿಯಲ್ಲಿ ಬಿಜೆಪಿ ಕಾರ್ಯಕರ್ತೆ ಅರೆಬೆತ್ತಲೆ ಕೇಸ್​​: ಕೇಶ್ವಾಪುರ ಠಾಣೆ ಪಿಐ ಕಾರ್ಯಸ್ಥಳ ಬದಲಾವಣೆ – Kannada News | Hubballi BJP Worker Assault Case: Keshwapur PI Hatti’s Work Location Changed

ಹುಬ್ಬಳ್ಳಿ, ಜನವರಿ 08: ನರದಲ್ಲಿ ಪೊಲೀಸರ ಕಸ್ಟಡಿಯಲ್ಲಿದ್ದಾಗಲೇ ಬಿಜೆಪಿ ಕಾರ್ಯಕರ್ತೆ ಅರೆಬೆತ್ತಲಾದ ಪ್ರಕರಣ (BJP Worker Assault Case) ದೊಡ್ಡ ಸಂಚಲನ ಸೃಷ್ಟಿಸಿದೆ. ಕಾಂಗ್ರೆಸ್ ಬಿಜೆಪಿ ನಾಯಕರ ಮಧ್ಯೆ ಮಾತಿನ ಜಟಾಪಟಿಗೂ ಕಾರಣವಾಗಿದೆ. ಕಾಂಗ್ರೆಸ್ (congress) ಕಾರ್ಪೊರೇಟರ್​ಅನ್ನ ಪೊಲೀಸರು ಬಂಧಿಸಿದ್ದಾರೆ. ಈ ಮಧ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಧಿಕಾರಿಯೊಬ್ಬರ ಕಾರ್ಯಸ್ಥಳ ಬದಲಾವಣೆ ಮಾಡಲಾಗಿದೆ. ಕೇಶ್ವಾಪುರ ಪೊಲೀಸ್​​​ ಠಾಣೆಯ ಪಿಐ ಕೆ.ಎಸ್.ಹಟ್ಟಿ ಅವರ ಕಾರ್ಯಸ್ಥಳ ಬದಲಾವಣೆ ಮಾಡಿದ ಆದೇಶಿಸಲಾಗಿದೆ.

ಪಿಐ ಕೆ.ಎಸ್.ಹಟ್ಟಿ ತಲೆದಂಡ

ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಶ್ವಾಪುರ ಪೊಲೀಸ್​​​ ಠಾಣೆಯ ಪಿಐ ಕೆ.ಎಸ್.ಹಟ್ಟಿ ತಲೆದಂಡ ಆಗಿದೆ. ತನಿಖೆ ಮುಗಿಯೋವರಗೂ ಕಮಿಷನರ್ ಕಚೇರಿಯಲ್ಲಿ ಕೆಲಸ ಮಾಡುವಂತೆ ಸೂಚಿಸಿ ಹುಬ್ಬಳ್ಳಿ-ಧಾರವಾಡ ಪೊಲೀಸ್​ ಆಯುಕ್ತ ಎನ್.ಶಶಿಕುಮಾರ್​​ ​ಆದೇಶ ಹೊರಡಿಸಿದ್ದಾರೆ. ಇನ್ನು ಗಂಟಿಕೇರಿ ಠಾಣೆಯ ಪಿಐ ಜಾಧವ್​ರಿಗೆ ಕೇಶ್ವಾಪುರ ಠಾಣೆ ಪ್ರಭಾರ ವಹಿಸಿಕೊಳ್ಳಲು ಕಮಿಷನರ್ ಸೂಚಿಸಿದ್ದಾರೆ.

ಪ್ರಕರಣದ ತನಿಖೆ ಎಸಿಪಿ ಹೆಗಲಿಗೆ

ಇನ್ನು ಈ ಪ್ರಕರಣದ ತನಿಖೆಯನ್ನು ಎಸಿಪಿ ಹೆಗಲಿಗೆ ನೀಡಲಾಗಿದೆ. ತನಿಖಾಧಿಕಾರಿಯಾಗಿ ಎಸಿಪಿ ಶಿವರಾಜ್ ಕಟಕಬಾವಿ ಅನ್ನ ಪೊಲೀಸ್​ ಆಯುಕ್ತ ಎನ್.ಶಶಿಕುಮಾರ್ ನೇಮಕ ಮಾಡಿದ್ದಾರೆ. ಕೆ.ಎಸ್ ಹಟ್ಟಿ ವಿರುದ್ಧ ಬಿಜೆಪಿ ಆಕ್ರೋಶ ಹೊರಹಾಕಿತ್ತು. ತನಿಖಾಧಿಕಾರಿ ಬದಲಾವಣೆ ಮಾಡಬೇಕು ಎಂದು ಆಗ್ರಹಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಎಸಿಪಿ ಶಿವರಾಜ್ ಕಟಕಬಾವಿ ನೇತೃತ್ವದಲ್ಲಿ ತನಿಖೆಗೆ ಆದೇಶಿಸಲಾಗಿದೆ.

ನಾಳೆ ಹುಬ್ಬಳ್ಳಿಯಲ್ಲಿ ಪ್ರತಿಭಟನೆಗೆ ಮುಂದಾದ ಬಿಜೆಪಿ

ದೌರ್ಜನ್ಯ ಖಂಡಿಸಿ ಬೃಹತ್‌ ಪ್ರತಿಭಟನೆಗೆ ಬಿಜೆಪಿ ಮುಂದಾಗಿದೆ. ನಾಳೆ ಮಧ್ಯಾಹ್ನ 1.30 ಗಂಟೆಗೆ ಪ್ರತಿಭಟನೆ ನಡೆಯಲಿದ್ದು, ಹುಬ್ಬಳ್ಳಿ ಅಂಬೇಡ್ಕರ ಸರ್ಕಲ್​ನಿಂದ ತಹಶೀಲ್ದಾರ ಕಚೇರಿವರೆಗೆ ಮೆರವಣಿಗೆ ನಡೆಯಲಿದೆ.  ಈ ಪ್ರತಿಭಟನಾ ಮೆರವಣಿಗೆಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್​, ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಚಲುವಾದಿ ನಾರಾಯಣಸ್ವಾಮಿ, ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ, ಶಾಸಕ ಮಹೇಶ ಟೆಂಗಿನಕಾಯಿ, ವಿಧಾನ ಪರಿಷತ್‌ ಸದಸ್ಯ ಪ್ರದೀಪ ಶೆಟ್ಟರ, ವಿಧಾನ ಪರಿಷತ್‌ ಸದಸ್ಯ ಭಾರತಿ ಶೆಟ್ಟಿ ಸೇರಿ ಬಿಜೆಪಿಯ ಅನೇಕ ನಾಯಕರು ಭಾಗಿಯಾಗಲಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Year of Reforms: 2025ರಲ್ಲಿ ಸರ್ಕಾರ ತೆಗೆದುಕೊಂಡ ಪ್ರಮುಖ ಸುಧಾರಣೆಗಳಿವು… – Kannada News | Look at reforms India seen in the year 2025, a turning point towards Viksit Bharat

2025ರ ವರ್ಷ ಬಹಳ ಗುರುತರ ಎನಿಸುವ ಅವಧಿ. ಇದನ್ನು ಸುಧಾರಣೆಗಳ ವರ್ಷ ಎಂದೂ ಪರಿಗಣಿಸಬಹುದು. ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ದೂರದೃಷ್ಟಿಯಲ್ಲಿ ವಿವಿಧ ರೀತಿಯ ರಚನಾತ್ಮಕ ಬದಲಾವಣೆಗಳನ್ನು 2025ರಲ್ಲಿ ಮಾಡಲಾಗಿದೆ. ಭಾರತದ ಆರ್ಥಿಕತೆ, ಆಡಳಿತ ಮತ್ತು ಸಾಮಾಜಿಕ ಭದ್ರತೆಯ ಚೌಕಟನ್ನು ಬಲಪಡಿಸುವ ಕೆಲಸ ಮಾಡಲಾಗಿದೆ. ಕಳೆದ ವರ್ಷ ಸರ್ಕಾರ ಕೈಗೊಂಡ ಕೆಲ ಪ್ರಮುಖ ಸುಧಾರಣೆಗಳು ಯಾವುವು ಎಂದು ನೋಡುವುದಾದರೆ, ಇಲ್ಲಿದೆ ಮಾಹಿತಿ:

2025-26ರ ಬಜೆಟ್​ನಲ್ಲಿ ಸರ್ಕಾರ ಆದಾಯ ತೆರಿಗೆ ರಿಲೀಫ್ ಕೊಟ್ಟಿತು. ಮಧ್ಯಮ ವರ್ಗದವರು ನಿರಾಳಗೊಳ್ಳುವಂತೆ ಮಾಡಿತು. 12 ಲಕ್ಷ ರೂವರೆಗಿನ ಆದಾಯಕ್ಕೆ ತೆರಿಗೆ ವಿನಾಯಿತಿ ಘೋಷಿಸಿತು. 75,000 ರೂಗಳ ಸ್ಟ್ಯಾಂಡರ್ಡ್ ಡಿಡಕ್ಷನ್ ಒಳಗೊಂಡರೆ 12.75 ಲಕ್ಷ ರೂವರೆಗಿನ ಆದಾಯ ಹೊಂದಿದವರು ಒಂದೂ ಪೈಸೆ ಟ್ಯಾಕ್ಸ್ ಕಟ್ಟಬೇಕಿಲ್ಲ. ಅಂಥ ಮಹತ್ವದ ಕ್ರಮ ತೆಗೆದುಕೊಳ್ಳಲಾಗಿದೆ.

ಹಳೆಯ 1961ರ ಆದಾಯ ತೆರಿಗೆ ಕಾನೂನು ಹೋಗಿ, 2025ರಿಂದ ಹೊಸದು ಬಂದಿದೆ. ಇದರಿಂದ ತೆರಿಗೆ ಪಾವತಿ ಸುಲಭ, ಪಾರದರ್ಶಕತೆ ಹೆಚ್ಚು, ತಂತ್ರಜ್ಞಾನ ಬೆಂಬಲದ ಆಡಳಿತಕ್ಕೆ ದಾರಿ. ಜಿಎಸ್‌ಟಿ ಸುಧಾರಣೆಗಳು ನಿತ್ಯ ಬಳಕೆ ವಸ್ತುಗಳ ಬೆಲೆ ಇಳಿಕೆ, ಮನೆ, ಎಂಎಸ್‌ಎಮ್‌ಇ, ರೈತ, ಕಾರ್ಮಿಕರ ಮೇಲೆ ಇರುವ ಒತ್ತಡ ಕಡಿಮೆಯಾಗಿದೆ. ಹಣಕಾಸು ವರ್ಷ 2026ರಲ್ಲಿ ಜಿಎಸ್‌ಟಿ ಸಂಗ್ರಹ ನಿರೀಕ್ಷೆ ಮೀರಲಿದೆ ಎಂದು ಎಸ್‌ಬಿಐ ಸಂಶೋಧನೆ ಹೇಳ್ತಿದೆ.

ಎಂಎಸ್‌ಎಮ್‌ಇಗಳಿಗೆ ಹೊಸ ಅವಕಾಶಗಳು, ವಹಿವಾಟು ಮಿತಿಗಳು ಹೆಚ್ಚಾಗಿ, ಜಾಸ್ತಿ ಉದ್ಯಮಗಳು ಸರ್ಕಾರಿ ಸೌಲಭ್ಯ ದೊರೆಯಲಿವೆ. ಪ್ರತಿ ವರ್ಷ ಕೇಂದ್ರ ಸಚಿವಾಲಯ, ಪಿಎಸ್‌ಯುಗಳು ತಮ್ಮ ಖರೀದಿಯಲ್ಲಿ ಕನಿಷ್ಠ ಶೇ.25ರಷ್ಟನ್ನು ಎಂಎಸ್‌ಎಮ್‌ಇಗಳಿಗೆ ಕೊಡಬೇಕು ಅನ್ನೋ ನಿರ್ಬಂಧ ಎಂಎಸ್‌ಎಮ್‌ಇಗಳನ್ನು ಮತ್ತಷ್ಟು ಬಲಿಷ್ಠವಾಗಿಸಲಿದೆ. ಇದರಿಂದ ದೇಶದ ಆರ್ಥಿಕತೆ ಮತ್ತಷ್ಟು ಗಟ್ಟಿಯಾಗಲಿದೆ.

ಕಾರ್ಮಿಕರ ಹಿತಾಸಕ್ತಿಗಾಗಿ 29 ಹಳೆಯ ಕಾರ್ಮಿಕ ಕಾನೂನುಗಳನ್ನು ಒಂದುಗೂಡಿಸಿ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಪರಿಚಯಿಸಿದರು. ಇವುಗಳಿಂದ ಗಿಗ್ ಮತ್ತು ಅಸಂಘಟಿತ ಕಾರ್ಮಿಕರಿಗೆ ಹೆಚ್ಚಿನ ಭದ್ರತೆ ಸಿಗುತ್ತಿದೆ. ವ್ಯಾಪಾರ ಮೊದಲಿಗಿಂತ ಸುಲಭವಾಗಿದೆ.

ಇದನ್ನೂ ಓದಿ: ಜಲಶಕ್ತಿ ಸುಜಲಾಂ ಭಾರತ್: ನೀರಿನ ಸಮಸ್ಯೆ, ಸಂರಕ್ಷಣೆ ಮತ್ತು ಸಮುದಾಯ ಸಹಭಾಗಿತ್ವ

ನರೇಗಾ ಬದಲು ಜಿ ರಾಮ್ ಜಿ ಕಾಯ್ದೆ (Viksit Bharat G RAM G Act) ಬಂದಿದೆ. ಖಾತರಿ ಉದ್ಯೋಗದ ದಿನಗಳ ಸಂಖ್ಯೆ 125ಕ್ಕೆ ಏರಿದೆ. ಬಯೋಮೆಟ್ರಿಕ್ ಹಾಜರಾತಿ, ಏಐ ಮೇಲ್ವಿಚಾರಣೆ ಪರಿಚಯಿಸಲಾಗಿದೆ.

ಹೊಸ ಗ್ರಾಮೀಣ ಉದ್ಯೋಗ ನೀತಿಯಲ್ಲಿ ಕೇಂದ್ರ-ರಾಜ್ಯ ನಡುವೆ ಅನುದಾನ ಬಾಧ್ಯತೆಯನ್ನು 60:40 ಯಂತೆ (ವಿಶೇಷ ರಾಜ್ಯಗಳಿಗೆ 90:10) ಹಂಚಲಾಗಿದೆ. ಇದರಿಂದ ಹಣಕಾಸು ಪಾರದರ್ಶಕತೆ ಹಾಗೂ ರಾಜ್ಯಗಳಿಗೆ ಹೊಣೆಗಾರಿಕೆ ಹೆಚ್ಚುತ್ತದೆ.

‘ಸಬ್ಕಾ ಬಿಮಾ ಸಬ್ಕಿ ರಕ್ಷಾ’ ಕಾಯ್ದೆ ಮೂಲಕ ವಿಮಾ ವಲಯದಲ್ಲಿ ವಿದೇಶೀ ಹೂಡಿಕೆ (ಎಫ್​ಡಿಐ) ಮಿತಿಯನ್ನು 74%ದಿಂದ 100%ಗೆ ಏರಿಸಲಾಗಿದೆ. ಇದರಿಂದ ಇನ್ಷೂರೆನ್ಸ್ ಸೆಕ್ಟರ್​ಗೆ ಬಂಡವಾಳ ಹೆಚ್ಚು ಹರಿದುಬರುತ್ತದೆ. ಸ್ಪರ್ಧಾತ್ಮಕತೆ ಮತ್ತು ಸೇವಾ ಗುಣಮಟ್ಟ ಉತ್ತಮಗೊಳ್ಳುತ್ತದೆ.

ಬ್ರಿಟಿಷರ ಕಾಲದಿಂದ ಇದ್ದ ಹಳೆಯ ಕಡಲು ಕಾಯ್ದೆಗಳಿಗೆ ವಿದಾಯ ಹೇಳಿ, ಹೊಸ ಕಾಯ್ದೆಗಳನ್ನು ತರಲಾಗಿದೆ. ಹಡಗು ಸಾಗಣೆ, ಬಂದರು ವ್ಯವಸ್ಥೆಯನ್ನು ಆಧುನೀಕರಿಸಲು, ಕರಾವಳಿ ವ್ಯಾಪಾರ, ನಾವಿಕರ ಹಿತಾಸಕ್ತಿ ಕಾಯ್ದುಕೊಳ್ಳಲು ಈ ಕಾಯ್ದೆ ನೆರವಾಗುತ್ತದೆ. ಸಾಗರ ಆರ್ಥಿಕತೆ ಇದರಿಂದ ಬಲಗೊಳ್ಳುತ್ತದೆ.

ಕರಾವಳಿ ಸಾಗಣೆ ಕಾಯ್ದೆ (ಕೋಸ್ಟಲ್ ಶಿಪ್ಪಿಂಗ್ ಆ್ಯಕ್ಟ್) ಕರಾವಳಿ ವ್ಯಾಪಾರದ 6% ಹಂಚಿಕೆ ಮಾದರಿಯನ್ನು ಮರಳಿ ತರುವ ಗುರಿ ಹೊಂದಿದೆ. ಇದರಿಂದ ಸಾಗಣೆ ಅಥವಾ ಲಾಜಿಸ್ಟಿಕ್ಸ್ ವೆಚ್ಚವನ್ನು ವರ್ಷಕ್ಕೆ 10,000 ಕೋಟಿ ರೂ ಉಳಿಸಲು ನೆರವಾಗಬಲ್ಲುದು.

ವ್ಯಾಪಾರ ಕ್ರಮ ಸುಧಾರಿಸಲು 22 ಕ್ವಾಲಿಟಿ ಕಂಟ್ರೋಲ್ ಆರ್ಡರ್​ಗಳನ್ನು ರದ್ದುಗೊಳಿಸಲಾಗಿದೆ. 53 ಕ್ವಾಲಿಟಿ ಕಂಟ್ರೋಲ್ ಆರ್ಡರ್​ಗಳನ್ನು ಅಮಾನತಿನಲ್ಲಿಡಲಾಗಿದೆ. ಇದರಿಂದ ಕಾನೂನು ಹೊಂದಾಣಿಕೆಯ ಬಾಧ್ಯತೆ ಕಡಿಮೆ ಆಗುತ್ತದೆ. ಉತ್ಪಾದಕರು ಮತ್ತು ಎಂಎಸ್​ಎಂಇಗಳಿಗೆ ಬಂಡವಾಳ ವೆಚ್ಚ ಅಥವಾ ಇನ್ಪುಟ್ ಕಾಸ್ಟ್ ಕಡಿಮೆಗೊಳ್ಳಲು ಸಾಧ್ಯವಾಗುತ್ತದೆ.

ಇದನ್ನೂ ಓದಿ: ನೈಸರ್ಗಿಕ ಕೃಷಿಗಾರಿಕೆ ಭಾರತದ ಕೃಷಿ ಕ್ಷೇತ್ರದ ಭವಿಷ್ಯದ ಹಾದಿ: ನರೇಂದ್ರ ಮೋದಿ

ಇನ್ನು, 2025ರ ಸೆಕ್ಯೂರಿಟಿ ಮಾರ್ಕೆಟ್ಸ್ ಕೋಡ್ ಅಥವಾ ಸೆಕ್ಯೂರಿಟಿ ಮಾರುಕಟ್ಟೆ ಸಂಹಿತೆಯು ಮೂರು ಹಣಕಾಸು ಕಾನೂನುಗಳನ್ನು ಒಟ್ಟುಗೂಡಿಸಿದೆ. ಇದರಿಂದ ಸೆಬಿ ಆಡಳಿತ ಬಲಗೊಳ್ಳುತ್ತದೆ, ಹೂಡಿಕೆದಾರರ ಹಿತ ರಕ್ಷಣೆ ಸಾಧ್ಯವಾಗುತ್ತದೆ, ಮತ್ತು ಸಣ್ಣ ವೈಧಾನಿಕ ದೋಷಗಳನ್ನು ಅಪರಾಧವೆಂದು ವರ್ಗೀರಿಸುವುದು ತಪ್ಪುತ್ತದೆ.

2025ರಲ್ಲಿ ಭಾರತವು ಮೂರು ವ್ಯಾಪಾರ ಒಪ್ಪಂದಗಳಿಗೆ ಸಹಿ ಹಾಕಿದೆ. ಓಮನ್, ಬ್ರಿಟನ್ ಮತ್ತು ನ್ಯೂಜಿಲೆಂಡ್ ಜೊತೆ ಎಫ್​ಟಿಎ ಆಗಿದೆ. ಐರೋಪ್ಯ ಮುಕ್ತ ವ್ಯಾಪಾರ ಕೂಟವಾದ ಇಎಫ್​ಟಿಎ ಜೊತೆಗಿನ ವ್ಯಾಪಾರ ಒಪ್ಪಂದವನ್ನು ಅಕ್ಟೋಬರ್ 1ರಿಂದ ಜಾರಿಗೊಳಿಸಲಾಗಿದೆ. ಈ ಒಪ್ಪಂದಗಳಿಂದಾಗಿ ಭಾರತಕ್ಕೆ ಸುಂಕರಹಿತವಾಗಿ ರಫ್ತು ಮಾಡಲು ಅವಕಾಶ ಹೆಚ್ಚುತ್ತದೆ. ಬಂಡವಾಳದ ಒಳಹರಿವು ಹೆಚ್ಚಬಹುದು.

ಪರಮಾಣು ಶಕ್ತಿ ಮತ್ತು ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಬಹಳ ದಿನಗಳಿಂದ ನಿರೀಕ್ಷೆಯಲ್ಲಿದ್ದ ಸುಧಾರಣೆಗಳನ್ನು 2025ರಲ್ಲಿ ಕೈಗೊಳ್ಳಲಾಗಿದೆ. ಶಾಂತಿ ಕಾಯ್ದೆಯು ಪರಮಾಣು ವಿದ್ಯುತ್ ಉತ್ಪಾದನೆಯಲ್ಲಿ ಖಾಸಗಿ ಸೆಕ್ಟರ್ ಪಾಲ್ಗೊಳ್ಳಲು ಅವಕಾಶ ಕೊಡುತ್ತದೆ. ಇನ್ನು, ವಿಕಸಿತ್ ಭಾರತ ಶಿಕ್ಷಾ ಅಧಿಷ್ಠಾನ್ ಮಸೂದೆ ಮೂಲಕ ಒಂದೇ ಉನ್ನತ ಶಿಕ್ಷಣ ನಿಯಂತ್ರಕ ಸಂಸ್ಥೆ ಜಾರಿಯಲ್ಲಿರುತ್ತದೆ. ಇವೆಲ್ಲವೂ ಕೂಡ 2047ರ ವಿಕಸಿತ ಭಾರತ ಗುರಿಗೆ ಪೂರಕವಾಗುವ ಅಂಶಗಳಾಗಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಅಶ್ವಿನಿ ಗೌಡ ಮೇಲೆ ಬೆಟ್ಟದಷ್ಟು ಅಸಮಾಧಾನ: ಎಲ್ಲವನ್ನೂ ಬಹಿರಂಗವಾಗಿ ಹೇಳಿದ ಧ್ರುವಂತ್ – Kannada News | Dhruvanth and Ashwini Gowda exchange heated words in Bigg Boss Kannada Season 12

ಅಶ್ವಿನಿ ಗೌಡ ಅವರು ಬಿಗ್ ಬಾಸ್ (BBK 12) ಆಟದಲ್ಲಿ ಸ್ಟ್ರಾಂಗ್ ಸ್ಪರ್ಧಿ ಎನಿಸಿಕೊಂಡಿದ್ದಾರೆ. ಅವರಿಗೆ ಇನ್ನುಳಿದವರು ಪೈಪೋಟಿ ನೀಡುತ್ತಿದ್ದಾರೆ. ಆರಂಭದಿಂದಲೂ ಅಶ್ವಿನಿ ಗೌಡ (Ashwini Gowda) ಅವರು ಅಗ್ರೆಷನ್ ತೋರಿಸುತ್ತಾ ಬಂದಿದ್ದಾರೆ. ಆ ಗುಣ ಕೆಲವರಿಗೆ ಇಷ್ಟ ಆಗಿಲ್ಲ. ಕೆಲವು ವಾರಗಳ ಕಾಲ ಅವರು ಸೈಲೆಂಟ್ ಆಗಿದ್ದರು. ಇತ್ತೀಚಿನ ದಿನಗಳಲ್ಲಿ ಧ್ರುವಂತ್ ಜೊತೆ ಅಶ್ವಿನಿ ಗೌಡ ಅವರು ಕ್ಲೋಸ್ ಆಗಿದ್ದರು. ಟಾಸ್ಕ್ ವೇಳೆ ಪರಸ್ಪರ ಬೆಂಬಲವಾಗಿ ಇದ್ದರು. ಆದರೆ 102ನೇ ದಿನದಲ್ಲಿ ಅಶ್ವಿನಿ ಗೌಡ ಮತ್ತು ಧ್ರುವಂತ್ (Dhruvanth) ನಡುವೆ ಕಿರಿಕ್ ಆಗಿದೆ. ಸಣ್ಣ ವಿಚಾರಕ್ಕೆ ಶುರುವಾದ ಜಗಳ ದೊಡ್ಡದಾಗಿದೆ.

ಧ್ರುವಂತ್ ಅವರಿಗೆ ಅಶ್ವಿನಿ ಗೌಡ ಮೇಲೆ ಬೆಟ್ಟದಷ್ಟು ಅಸಮಾಧಾನ ಇದೆ. ಆದರೂ ಕೂಡ ಅವರು ಅಶ್ವಿನಿಗೆ ಸಪೋರ್ಟ್ ಮಾಡುತ್ತಿದ್ದರು. ಆದರೆ ಅಶ್ವಿನಿಯ ಕೆಲವು ವರ್ತನೆಗಳಿಂದ ಧ್ರುವಂತ್ ಬೇಸತ್ತಿದ್ದಾರೆ. ಧ್ರುವಂತ್ ಪೂಜೆ ಮಾಡಿ ಇಟ್ಟ ಹೂವುಗಳನ್ನು ಅಶ್ವಿನಿ ಗೌಡ ತೆಗೆದುಕೊಂಡರು. ಅದರಿಂದ ಧ್ರುವಂತ್​​ಗೆ ಸಿಕ್ಕಾಪಟ್ಟೆ ಕೋಪ ಬಂತು. ಆಗ ಇಬ್ಬರ ನಡುವೆ ಮಾತಿಗೆ ಮಾತು ಬೆಳೆಯಿತು.

ಅಶ್ವಿನಿ ಗೌಡ ಅವರು ಧ್ರುವಂತ್ ಜೊತೆ ಜಗಳ ಆಡಿದ್ದನ್ನು ಕಂಡು ಗಿಲ್ಲಿ ನಟ ಗೇಲಿ ಮಾಡಿದರು. ಜಗಳದ ಬಳಿಕ ಗಿಲ್ಲಿ ಜೊತೆ ಕುಳಿತು ಧ್ರುವಂತ್ ಮಾತನಾಡಿದರು. ಆಗ ಅವರು ಅಶ್ವಿನಿ ಮೇಲೆ ತಮಗೆ ಇರುವ ಅಸಮಾಧಾನವನ್ನು ಹೊರಹಾಕಿದರು. ‘ಬೆಳಗ್ಗೆ ಬಿಸಿ ನೀರು ಬರುವಾಗ ಬೇರೆಯವರ ಸ್ನಾನ ಆಗುವುದಕ್ಕೂ ಮುನ್ನ ಅಶ್ವಿನಿ ಗೌಡ ಬಟ್ಟೆ ಒಗೆಯುತ್ತಾರೆ. ಟಾಸ್ಕ್ ವೇಳೆ ತುಪ್ಪ ಹಾಳು ಮಾಡಿದ್ದಾರೆ’ ಎಂದು ಧ್ರುವಂತ್ ಅವರು ದೂರುಗಳ ಪಟ್ಟಿ ಸಲ್ಲಿಸಿದರು.

ಒಂಟಿಯಾಗಿ ಇರಲು ಅಶ್ವಿನಿ ಗೌಡ ಅವರಿಗೆ ಸಾಧ್ಯವಿಲ್ಲ. ಒಬ್ಬರಲ್ಲ ಒಬ್ಬರ ಬೆಂಬಲ ಅವರಿಗೆ ಬೇಕಾಗುತ್ತದೆ. ಒಬ್ಬರ ಜೊತೆ ಜಗಳ ಆದರೆ ಇನ್ನೊಬ್ಬರ ಜೊತೆ ಕ್ಲೋಸ್ ಆಗುತ್ತಾರೆ. ಈಗಲೂ ಅದು ಮುಂದುವರಿದಿದೆ. ಧ್ರುವಂತ್ ಜೊತೆ ಜಗಳ ಆಗುತ್ತಿದ್ದಂತೆಯೇ ರಕ್ಷಿತಾ ಶೆಟ್ಟಿ ಜೊತೆ ಅಶ್ವಿನಿ ಗೌಡ ಅವರು ಸ್ನೇಹ ಬೆಳೆಸಲು ಮುಂದಾಗಿದ್ದಾರೆ. ಇದನ್ನು ಕಂಡು ಗಿಲ್ಲಿ, ರಘು ನಕ್ಕಿದ್ದಾರೆ.

ಇದನ್ನೂ ಓದಿ: ಅಶ್ವಿನಿ ಆಟಕ್ಕೆ ದಂಗಾದ ಇಡೀ ಮನೆ; ಭೇಷ್ ಎಂದ ಎದುರಾಳಿ ರಘು, ರಕ್ಷಿತಾ

ಎಷ್ಟೇ ಜಗಳ ಆದರೂ ಧ್ರುವಂತ್ ಮತ್ತು ಅಶ್ವಿನಿ ಗೌಡ ಅವರು ಮತ್ತೆ ಮತ್ತೆ ಒಂದಾಗುತ್ತಾರೆ. ಅದಕ್ಕೆ ಕಾರಣ ಏನು ಎಂಬುದನ್ನು ಧ್ರುವಂತ್ ಅವರು ಹೇಳಿದ್ದಾರೆ. ‘ಅಶ್ವಿನಿ ಅವರು ಈ ಮನೆಯಲ್ಲಿ ಹಿರಿಯರು. ತಾಯಿ ಸ್ಥಾನದಲ್ಲಿ ಇದ್ದಾರೆ. ಆ ಕಾರಣಕ್ಕಾಗಿ ಸುಮ್ಮನೆ ಇದ್ದೇನೆ’ ಎಂದಿದ್ದಾರೆ ಧ್ರುವಂತ್. ಇನ್ನು ಕೆಲವೇ ದಿನಗಳಲ್ಲಿ ‘ಬಿಗ್ ಬಾಸ್ ಕನ್ನಡ ಸೀಸನ್ 12’ರ ಫಿನಾಲೆ ಬರಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

WPL 2026: ಮೊದಲ ಪಂದ್ಯದಲ್ಲಿ ಆರ್​ಸಿಬಿ- ಮುಂಬೈ ಕಣಕ್ಕೆ; ಪಂದ್ಯ ಎಷ್ಟು ಗಂಟೆಗೆ ಆರಂಭ? – Kannada News | WPL 2026: MI vs RCB Opener – Match Preview, Squads and Pitch Report

ಮಹಿಳಾ ಪ್ರೀಮಿಯರ್ ಲೀಗ್​ನ (Women’s Premier League) ನಾಲ್ಕನೇ ಆವೃತ್ತಿಯ ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (MI vs RCB) ತಂಡಗಳು ಪರಸ್ಪರ ಮುಖಾಮುಖಿಯಾಗಲಿವೆ. ಈ ಲೀಗ್​ನಲ್ಲಿ ಹಾಲಿ ಚಾಂಪಿಯನ್ ಆಗಿರುವ ಮುಂಬೈ ಇಂಡಿಯನ್ಸ್ ಎರಡು ಬಾರಿ ಟೂರ್ನಿಯನ್ನು ಗೆದ್ದಿದ್ದರೆ, ಆರ್‌ಸಿಬಿ ಒಮ್ಮೆ ಪ್ರಶಸ್ತಿ ಗೆದ್ದಿದೆ. ಆದ್ದರಿಂದ, ಎರಡೂ ತಂಡಗಳ ನಡುವೆ ಜಿದ್ದಾಜಿದ್ದಿನ ಹೋರಾಟ ನಿರೀಕ್ಷಿಸಲಾಗಿದೆ. ಮುಂಬೈ ಇಂಡಿಯನ್ಸ್ ತಂಡವನ್ನು ಹರ್ಮನ್​ಪ್ರೀತ್ ಕೌರ್ ಮುನ್ನಡೆಸುತ್ತಿದ್ದರೆ, ಆರ್‌ಸಿಬಿ ತಂಡಚನ್ನು ಸ್ಮೃತಿ ಮಂಧಾನ ಮುನ್ನಡೆಸುತ್ತಿದ್ದಾರೆ. ಮೊದಲ ಪಂದ್ಯ ನವಿ ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆಯಲಿದ್ದು, ರಾತ್ರಿ 7:30 ಕ್ಕೆ ಆರಂಭವಾಗಲಿದೆ.

ಉಭಯ ತಂಡಗಳ ಬಲಾಬಲ

ಮುಂಬೈ ಇಂಡಿಯನ್ಸ್ ಆರ್‌ಸಿಬಿಗಿಂತ ಕಾಗದದ ಮೇಲೆ ಬಲಿಷ್ಠವಾಗಿ ಕಾಣುತ್ತದೆ. ಈ ತಂಡದಲ್ಲಿ ಹರ್ಮನ್‌ಪ್ರೀತ್ ಕೌರ್, ಇಂಗ್ಲೆಂಡ್ ನಾಯಕಿ ನ್ಯಾಟ್ ಸಿವರ್ ಬ್ರಂಟ್ ಮತ್ತು ವೆಸ್ಟ್ ಇಂಡೀಸ್ ನಾಯಕಿ ಹೀಲಿ ಮ್ಯಾಥ್ಯೂಸ್ ಇದ್ದಾರೆ. ಇವರ ಜೊತೆಗೆ ನ್ಯೂಜಿಲೆಂಡ್‌ನ ಅಮೆಲಿಯಾ ಕೆರ್, ಆಸ್ಟ್ರೇಲಿಯಾದ ಮಿಲ್ಲಿ ಇಲಿಂಗ್‌ವರ್ತ್ ಮತ್ತು ಭಾರತದ ಅಮನ್‌ಜೋತ್ ಕೌರ್ ಕೂಡ ಸೇರಿದ್ದಾರೆ.

ಮತ್ತೊಂದೆಡೆ, ಆರ್‌ಸಿಬಿ ತಂಡದಲ್ಲಿ ಸ್ಮೃತಿ ಮಂಧಾನ ಜೊತೆಗೆ, ಆಸ್ಟ್ರೇಲಿಯಾದ ಜಾರ್ಜಿಯಾ ವೋಲ್, ಆಲ್‌ರೌಂಡರ್ ಗ್ರೇಸ್ ಹ್ಯಾರಿಸ್ ಮತ್ತು ದಕ್ಷಿಣ ಆಫ್ರಿಕಾದ ಆಲ್‌ರೌಂಡರ್ ನಾಡಿನ್ ಡಿ ಕ್ಲಾರ್ಕ್ ಇದ್ದಾರೆ. ಅಷ್ಟೇ ಅಲ್ಲ, ಆಕ್ರಮಣಕಾರಿ ಬ್ಯಾಟ್ಸ್‌ಮನ್ ಮತ್ತು ವಿಕೆಟ್ ಕೀಪರ್ ರಿಚಾ ಘೋಷ್ ಕೂಡ ಇದ್ದಾರೆ.

ಪಿಚ್ ವರದಿ

ಟೂರ್ನಿಯ ಮೊದಲ 11 ಪಂದ್ಯಗಳು ನವಿ ಮುಂಬೈನ ಡಾ. ಡಿ.ವೈ. ಪಾಟೀಲ್ ಸ್ಪೋರ್ಟ್ಸ್ ಅಕಾಡೆಮಿಯಲ್ಲಿ ನಡೆಯಲಿವೆ. ಮೊದಲ ಪಂದ್ಯವೂ ಇದೇ ಮೈದಾನದಲ್ಲಿ ನಡೆಯಲಿದೆ. ಡಾ. ಡಿ.ವೈ. ಪಾಟೀಲ್ ಪಿಚ್ ಬ್ಯಾಟ್ಸ್​ಮನ್​ಗಳಿಗೆ ಅನುಕೂಲಕರವಾಗಿದೆ. ಆದ್ದರಿಂದ, ಈ ಪಂದ್ಯದಲ್ಲಿ ರನ್ ಮಳೆ ಹರಿಯಲಿದೆ.

WPL 2026: ಡಬ್ಲ್ಯುಪಿಎಲ್​​ಗೆ ವೇದಿಕೆ ಸಜ್ಜು; ಎಲ್ಲಾ 5 ತಂಡಗಳು, ವೇಳಾಪಟ್ಟಿ, ನಿಯಮಗಳ ಪೂರ್ಣ ವಿವರ ಇಲ್ಲಿದೆ

ಸಂಭಾವ್ಯ ಪ್ಲೇಯಿಂಗ್ 11

ಮುಂಬೈ ಇಂಡಿಯನ್ಸ್: ಹಿಲ್ಲಿ ಮ್ಯಾಥ್ಯೂಸ್, ನ್ಯಾಟ್ ಸೈವರ್-ಬ್ರಂಟ್, ಹರ್ಮನ್‌ಪ್ರೀತ್ ಕೌರ್ (ನಾಯಕಿ), ಅಮೆಲಿಯಾ ಕೆರ್, ಸಜೀವನ್ ಸಜ್ನಾ, ಅಮನ್ಜೋತ್ ಕೌರ್, ಜಿ ಕಮಲಿನಿ, ಶಬ್ನೀಮ್ ಇಸ್ಮಾಯಿಲ್, ಸೈಕಾ ಇಶಾಕ್, ನಿಕೋಲಾ ಕ್ಯಾರಿ, ಪೂನಮ್ ಖೇಮ್ನಾರ್

ರಾಯಲ್ ಚಾಲೆಂಜರ್ಸ್ ಬೆಂಗಳೂರು: ಸ್ಮೃತಿ ಮಂಧಾನ (ನಾಯಕಿ), ರಿಚಾ ಘೋಷ್, ಶ್ರೇಯಾಂಕ ಪಾಟೀಲ್, ನಡಿನ್ ಡಿ ಕ್ಲಾರ್ಕ್, ಗ್ರೇಸ್ ಹ್ಯಾರಿಸ್, ಜಾರ್ಜಿಯಾ ವಾಲ್, ರಾಧಾ ಯಾದವ್, ಲಾರೆನ್ ಬೆಲ್, ಅರುಂಧತಿ ರೆಡ್ಡಿ, ಪೂಜಾ ವಸ್ತ್ರಾಕರ್, ದಯಾಲನ್ ಹೇಮಲತಾ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ತಿರುಪತಿ ತಿಮ್ಮಪ್ಪನ ದರ್ಶನದ ಬುಕಿಂಗ್​ನಲ್ಲಿ ನಾಳೆಯಿಂದಲೇ ಹೊಸ ಬದಲಾವಣೆ – Kannada News | TTD Tirupati Srivani Darshan tickets to be sell online from January 9th

ತಿರುಮಲ, ಜನವರಿ 8: ಆಂಧ್ರಪ್ರದೇಶದ ತಿರುಪತಿಯಲ್ಲಿರುವ ತಿರುಮಲ ದೇವಸ್ಥಾನಕ್ಕೆ (TTD) ಪ್ರತಿದಿನ ಹೆಚ್ಚಿನ ಸಂಖ್ಯೆಯ ಭಕ್ತರು ದರ್ಶನಕ್ಕಾಗಿ ಭೇಟಿ ನೀಡುತ್ತಾರೆ. ಈ ಪ್ರಸಿದ್ಧ ದೇವಾಲಯದ ದರ್ಶನಕ್ಕಾಗಿ ಟಿಕೆಟ್‌ಗಳನ್ನು ಆನ್‌ಲೈನ್‌ನಲ್ಲಿ ಮತ್ತು ನೇರವಾಗಿ ಕೌಂಟರ್‌ಗಳಲ್ಲಿ ನೀಡಲಾಗುತ್ತಿದೆ. ಆದರೆ, ಈಗ ಈ ಟಿಕೆಟ್ ವ್ಯವಸ್ಥೆಯಲ್ಲಿ ಬಹಳ ಮುಖ್ಯವಾದ ಬದಲಾವಣೆಯನ್ನು ಮಾಡಲಾಗಿದೆ. ತಿರುಮಲ ತಿರುಪತಿಯಲ್ಲಿ ಸ್ವಾಮಿ ದರ್ಶನಕ್ಕಾಗಿ ಶ್ರೀ ವಾಣಿ ದರ್ಶನದ ಟಿಕೆಟ್‌ಗಳನ್ನು ಆಫ್‌ಲೈನ್‌ನಲ್ಲಿ ನೀಡಲಾಗುತ್ತಿತ್ತು. ಈಗ ಈ ಟಿಕೆಟ್‌ಗಳನ್ನು ಆನ್‌ಲೈನ್‌ನಲ್ಲಿ ಮಾತ್ರ ನೀಡಲಾಗುತ್ತಿದೆ. ಈ ವ್ಯವಸ್ಥೆಯು 1 ತಿಂಗಳ ಪ್ರಾಯೋಗಿಕ ಅವಧಿಗೆ ಜಾರಿಯಲ್ಲಿರುತ್ತದೆ ಎಂದು ದೇವಾಲಯದ ಮೂಲಗಳು ತಿಳಿಸಿವೆ. ಈ ವ್ಯವಸ್ಥೆಯು ನಾಳೆ (ಜನವರಿ 9)ಯಿಂದ ಜಾರಿಗೆ ಬರಲಿದೆ ಎಂದು ವರದಿಯಾಗಿದೆ.

ಈ ಹಿಂದೆ, ಲೈವ್ ಕೌಂಟರ್‌ಗಳ ಮೂಲಕ ಪ್ರತಿದಿನ 800 ಟಿಕೆಟ್‌ಗಳನ್ನು ನೀಡಲಾಗುತ್ತಿತ್ತು. ಈಗ, ಶ್ರೀವಾಣಿ ದರ್ಶನಕ್ಕಾಗಿ ಬುಕಿಂಗ್ ಅನ್ನು ಆನ್‌ಲೈನ್‌ನಲ್ಲಿ ಲಿಂಕ್ ಮಾಡಲಾಗಿದೆ. ಆದರೆ, ತಿರುಪತಿ ವಿಮಾನ ನಿಲ್ದಾಣದ ಕೇಂದ್ರದಲ್ಲಿ ಪ್ರತಿದಿನ ನೀಡಲಾಗುವ 200 ಟಿಕೆಟ್‌ಗಳನ್ನು ನೀಡುವುದನ್ನು ಮುಂದುವರಿಸಲಾಗುವುದು ಎಂದು ಹೇಳಲಾಗಿದೆ. ತಿರುಮಲದಲ್ಲಿ ಕಾರ್ಯನಿರ್ವಹಿಸುತ್ತಿರುವ ಗೋಕುಲಂ ಇನ್ ಬಳಿಯ ಶ್ರೀವಾಣಿ ಟಿಕೆಟ್ ಕೌಂಟರ್‌ಗಳಲ್ಲಿ ಆಫ್‌ಲೈನ್‌ನಲ್ಲಿ ನೀಡಲಾಗುತ್ತಿದ್ದ 800 ಟಿಕೆಟ್‌ಗಳನ್ನು ನಾಳೆ ಅಂದರೆ ಜನವರಿ 9ರಿಂದ ಆನ್‌ಲೈನ್‌ನಲ್ಲಿ ನೀಡಲಾಗುವುದು.

ಇದನ್ನೂ ಓದಿ: Bhu Varaha Swamy: ತಿರುಪತಿ ದೇವಸ್ಥಾನಕ್ಕೆ ಹೋಗುವ ಮುನ್ನ ಭೂ ವರಾಹ ಸ್ವಾಮಿ ದರ್ಶನ ಮಾಡಲೇಬೇಕು ಯಾಕೆ ಗೊತ್ತಾ?

ಈ ಕಾರಣದಿಂದಾಗಿ ದರ್ಶನಕ್ಕಾಗಿ ದೇವಸ್ಥಾನಕ್ಕೆ ಬರುವ ಭಕ್ತರು ನೇರವಾಗಿ ಆನ್‌ಲೈನ್‌ನಲ್ಲಿ ದರ್ಶನದ ಟಿಕೆಟ್‌ಗಳನ್ನು ಖರೀದಿಸಬಹುದು. ಈ ಕೌಂಟರ್‌ನಲ್ಲಿ ದರ್ಶನದ ಟಿಕೆಟ್‌ಗಳನ್ನು ಪಡೆಯಲು ಭಕ್ತರು ದೀರ್ಘ ಸರತಿ ಸಾಲಿನಲ್ಲಿ ಕಾಯಬೇಕಾದ ಪರಿಸ್ಥಿತಿ ಇತ್ತು. ಇದರಲ್ಲಿ ವಿವಿಧ ಕಾರ್ಯವಿಧಾನದ ಸಮಸ್ಯೆಗಳಿಂದಾಗಿ ಪ್ರಾಯೋಗಿಕ ಪ್ರಯತ್ನವಾಗಿ ಶ್ರೀವಾಣಿ ದರ್ಶನದ ಟಿಕೆಟ್‌ಗಳನ್ನು ಆನ್‌ಲೈನ್‌ನಲ್ಲಿ ಪಡೆಯುವ ಸೌಲಭ್ಯವನ್ನು ಒದಗಿಸಲಾಗಿದೆ.

ಇದನ್ನೂ ಓದಿ: ಪಾಟ್ನಾದಲ್ಲಿ ತಿರುಪತಿ ತಿರುಮಲ ದೇವಸ್ಥಾನ ನಿರ್ಮಾಣ; ಬಿಹಾರ ಸರ್ಕಾರದಿಂದ 10.11 ಎಕರೆ ಭೂಮಿ ಮಂಜೂರು

ಭಕ್ತರ ಪ್ರತಿಕ್ರಿಯೆಯ ಆಧಾರದ ಮೇಲೆ, ಈ ಪದ್ಧತಿ ಮುಂದುವರಿಯುತ್ತದೆಯೇ ಅಥವಾ ಹಳೆಯ ವ್ಯವಸ್ಥೆಯ ಪ್ರಕಾರ ಆನ್‌ಲೈನ್‌ನಲ್ಲಿ ಟಿಕೆಟ್‌ಗಳನ್ನು ನೀಡಲಾಗುತ್ತದೆಯೇ ಎಂದು ನಿರ್ಧರಿಸಲಾಗುತ್ತದೆ. ಈ ಬುಕಿಂಗ್ ಪ್ರತಿದಿನ ಬೆಳಿಗ್ಗೆ 9ರಿಂದ ಮಧ್ಯಾಹ್ನ 2ರವರೆಗೆ ಕಾರ್ಯನಿರ್ವಹಿಸುತ್ತದೆ.

ಅದೇ ರೀತಿ, ತಿರುಮಲ ದೇವಸ್ಥಾನಕ್ಕೆ ನೇರವಾಗಿ ದೇಣಿಗೆ ನೀಡುವ ಅವಕಾಶವನ್ನು ದೇವಸ್ಥಾನವು ಪರಿಚಯಿಸಿದೆ. ಅಂತಹ ದೇಣಿಗೆ ನೀಡುವ ವ್ಯಕ್ತಿಗೆ ಶ್ರೀವಾಣಿ ದರ್ಶನ ವ್ಯವಸ್ಥೆಯಡಿಯಲ್ಲಿ ವಿಐಪಿ ದರ್ಶನದ ಟಿಕೆಟ್ ಸಿಗುತ್ತದೆ ಮತ್ತು ಭಗವಂತನ ದರ್ಶನವಾಗುತ್ತದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಶಕ್ತಿ ಯೋಜನೆಯಲ್ಲಿ ತಪ್ಪದ ಆಧಾರ್ ಕಾರ್ಡ್ ದುರ್ಬಳಕೆ: ನಿರ್ವಾಹಕರಿಗೆ ತಲೆನೋವಾದ ಫೇಕ್ ಆಧಾರ್ ಕಾರ್ಡ್​​​​ – Kannada News | Shakti Yojana Aadhaar Misuse: Fake Cards Trouble Karnataka Staff

ಬೆಂಗಳೂರು, ಜನವರಿ 08: ಶಕ್ತಿ ಯೋಜನೆ (Shakti Yojana) ದುರ್ಬಳಕೆ ಇನ್ನೂ ತಪ್ಪಿಲ್ಲ. ಆಧಾರ್ ಕಾರ್ಡ್​​ಗಳನ್ನ ಫೇಕ್ (Fake Aadhaar cards) ಮಾಡಿ ಕೆಲ ಮಹಿಳೆಯರು ಸಂಚರಿಸುತ್ತಿದ್ದು, ಇದರಿಂದ ನಿರ್ವಾಹಕರಿಗೆ ತಲೆ ನೋವು ತಪ್ಪಿಲ್ಲ. ಬೇರೆ ರಾಜ್ಯದ ಮಹಿಳೆಯರಿಗೆ ಕನ್ನಡದಲ್ಲಿ ಯಾರು ಆಧಾರ್ ಕಾರ್ಡ್ ಮಾಡಿಕೊಡುತ್ತಿದ್ದಾರೋ ಗೊತ್ತಿಲ್ಲ, ಆದರೆ ಇದರಿಂದ ಇತ್ತ ಸರ್ಕಾರಕ್ಕೂ ತಲೆ ನೋವಾಗಿದೆ.

ಶಕ್ತಿ ಯೋಜನೆಯಿಂದ ಸರ್ಕಾರಕ್ಕೆ ಒಳ್ಳೆಯ ಹೆಸರು ಬಂದಿದೆ. ನೌಕರರು ಕೂಡ ಅಷ್ಟೇ ಕಷ್ಟ ಪಟ್ಟು ಕೆಲಸ ಮಾಡ್ತಿದ್ದಾರೆ. ಅದರ ಭಾಗವಾಗಿ ಪ್ರಯಾಣಿಕರು ನೌಕರರ ಮೇಲೆ ಹಲ್ಲೆ ಮಾಡಿರುವ ಘಟನೆಗಳು ನಡೆದಿವೆ. ಇನ್ನು ಹೊರ ರಾಜ್ಯದಿಂದ ಬಂದ ಮಹಿಳೆಯರಿಂದ ಶಕ್ತಿ ಯೋಜನೆ ದುರ್ಬಳಕೆಯಾಗುತ್ತಿರುವ ಆರೋಪ ಕೇಳಿ ಬಂದಿದೆ. ಆಧಾರ್ ಕಾರ್ಡ್​​ನ ಒಂದು ಬದಿ ಒಂದು ನಂಬರ್ ಇದ್ದರೆ, ಇನ್ನೊಂದು‌ ಕಡೆ ಬೇರೆ ನಂಬರ್ ಇದೆ. ರಾಜ್ಯದ ಮಹಿಳೆಯರು ಕನ್ನಡದಲ್ಲಿ ಆಧಾರ್ ಪ್ರಿಂಟ್ ಮಾಡಿಸಿಕೊಂಡು ಫೇಕ್ ಆಧಾರ್ ಕಾರ್ಡ್ ಬಳಸಿ ಮೋಸದಿಂದ ಸಂಚರಿಸುತ್ತಿದ್ದಾರೆ. ಈ ಬಗ್ಗೆ ಮಾತನಾಡಿದ ಸಾರಿಗೆ ನೌಕರರ ಮುಖಂಡ ಆನಂದ್​​ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಇದೆ ಎಂಬುದನ್ನು ಒಪ್ಪಿಕೊಂಡ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ: ಪಾವತಿ ಬಗ್ಗೆ ಹೇಳಿದ್ದೇನು?

ಇನ್ನೂ ನಿರ್ವಾಹಕರಿಗೆ ಆಧಾರ್ ಕಾರ್ಡ್ ಸಂಪೂರ್ಣ ಪರಿಶೀಲನೆ ಕಷ್ಟವಾಗುತ್ತಿದೆ ಅಂತೆ. ಇದಕ್ಕೆ ಕಾರಣ ಒಂದು ನಿಲ್ದಾಣದಲ್ಲಿ 10 ರಿಂದ 15 ಪ್ರಯಾಣಿಕರು ಹತ್ತಿದಾಗ ಕಷ್ಟವಾಗುತ್ತೆ. ಇದನ್ನೆ ಬಂಡವಾಳ ಮಾಡಿಕೊಳ್ಳುವ ಕೆಲ ಕಿಲಾಡಿ ಮಹಿಳೆಯರು ಫೇಕ್ ಆಧಾರ್ ಕಾರ್ಡ್ ಬಳಕೆ‌ ಮಾಡುತ್ತಿದ್ದಾರಂತೆ.

ತನಿಖಾಧಿಕಾರಿಗಳು ತನಿಖೆ ಮಾಡಿದಾಗ ಹೊರರಾಜ್ಯದ ಮಹಿಳೆಯರು ಅನ್ನೋದು ಹಲವು ಸಂದರ್ಭಗಳಲ್ಲಿ ಗೊತ್ತಾಗಿದೆ. ಇಂತಹ ಸನ್ನಿವೇಶದಲ್ಲಿ ನಿರ್ವಾಹಕರು ಸರಿಯಾಗಿ ಪರಿಶೀಲನೆ ಮಾಡಿಲ್ಲ ಎಂದು ನಿರ್ವಾಹಕರಿಗೆ ಮೆಮೊ ಕೊಟ್ಟು ಕ್ರಮ ಕೂಡ ಜರುಗಿಸಲಾಗುತ್ತಿದೆ.

ಮಹಿಳಾ ಪ್ರಯಾಣಿಕರು ಹೇಳುವುದೇನು?

ಈ ಬಗ್ಗೆ ಮಾತನಾಡಿದ ಲಕ್ಷ್ಮೀ ಎಂಬ ಪ್ರಯಾಣಿಕರು, ಶಕ್ತಿ ಯೋಜನೆಯಿಂದ ನಮಗೆ ತುಂಬಾ ಉಪಯೋಗ ಆಗಿದೆ. ಆದರೆ ಬೇರೆ ರಾಜ್ಯದ ಮಹಿಳೆಯರು ನಕಲಿ ಆಧಾರ್ ಕಾರ್ಡ್ ಬಳಕೆ ಮಾಡಿಕೊಂಡು ಇದನ್ನು ದುರುಪಯೋಗ ಮಾಡಿಕೊಳ್ಳುತ್ತಿರುವುದು ತಪ್ಪು ಎಂದಿದ್ದಾರೆ.

ಇದನ್ನೂ ಓದಿ: ಸದನದಲ್ಲಿ ಚರ್ಚೆ ಬೆನ್ನಲ್ಲೇ ಶಕ್ತಿ ಯೋಜನೆ ಹಣ ಬಾಕಿ ರಿಲೀಸ್: ಯಾವ ನಿಗಮಕ್ಕೆ ಎಷ್ಟು?

ಸಾರಿಗೆ ಇಲಾಖೆ ಈ‌ ರೀತಿ ಫೇಕ್ ಆಧಾರ್ ಕಾರ್ಡ್ ಬಳಕೆ ಮಾಡುವ ಮಹಿಳೆಯರ ವಿರುದ್ಧ ಕ್ರಮ ಜರುಗಿಸಿ, ನೌಕರರ ವಿರುದ್ಧ ಕ್ರಮ ಜರುಗಿಸುವುದನ್ನ ತಡೆಯಬೇಕಿದೆ ಅನ್ನೋದು ನೌಕರರ ಮನವಿ. ಆದರೆ ಸಾರಿಗೆ ಇಲಾಖೆ ಯಾವ ಕ್ರಮಕೈಗೊಳ್ಳಲಿದೆ ಎಂದು ಕಾದು ನೋಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Exit mobile version