IND vs SA: ಸಂಜು ತೋಳ್ಬಲಕ್ಕೆ ಸಿಲುಕಿ ಮೈದಾನದಲ್ಲೇ ಬಿದ್ದು ಒದ್ದಾಡಿದ ಅಂಪೈರ್; ವಿಡಿಯೋ ನೋಡಿ – Kannada News | IND vs SA: Umpire Rohan Pandit Injured by Sanju Samson’s Fierce Shot
ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ಅಹಮದಾಬಾದ್‌ನ ನರೇಂದ್ರ ಮೋದಿ ಮೈದಾನದಲ್ಲಿ ನಡೆಯುತ್ತಿರುವ ಐದನೇ ಮತ್ತು ಕೊನೆಯ ಟಿ20 ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಬಾರಿಸಿದ ಚೆಂಡು ಅಂಪೈರ್ ಕಾಲಿಗೆ ರಬಸವಾಗಿ ಬಡಿಯಿತು. ಇದರಿಂದಾಗಿ ಅಂಪೈರ್ ಕೆಲಕಾಲ ಮೈದಾನದಲ್ಲಿ ನೋವಿನಿಂದ ನರಳುವಂತ್ತಾಯಿತು. ಭಾರತದ ಇನ್ನಿಂಗ್ಸ್ನ 9ನೇ ಓವರ್ನಲ್ಲಿ ಈ ಘಟನೆ ನಡೆಯಿತು. ಆಫ್ರಿಕಾ ಸ್ಪಿನ್ನರ್ ಫರ್ನಾಂಡಿಸ್ ಬೌಲ್ ಮಾಡಿದ ನಾಲ್ಕನೇ ಎಸೆತವನ್ನು ಸ್ಯಾಮ್ಸನ್ ನೇರವಾಗಿ ಹೊಡೆದರು. ಇತ್ತ ಆ ಹೊಡೆತ ಸೀದ ಬೌಲರ್ ಕೈಗೆ ಹೋಯಿತು. ಆದರೆ ಫರ್ನಾಂಡಿಸ್ಗೆ…