ನನ್ನ ಹೊಟ್ಟೆಯಲ್ಲಿ ಬೆಳೆಯುತ್ತಿರುವ ಮಗುವಿನ ತಂದೆ ವಿರಾಟ್ ಕೊಹ್ಲಿ..! ಯುವತಿಯ ಸ್ಫೋಟಕ ವಿಡಿಯೋ ವೈರಲ್

ನನ್ನ ಹೊಟ್ಟೆಯಲ್ಲಿ ಬೆಳೆಯುತ್ತಿರುವ ಮಗುವಿನ ತಂದೆ ವಿರಾಟ್ ಕೊಹ್ಲಿ..! ಯುವತಿಯ ಸ್ಫೋಟಕ ವಿಡಿಯೋ ವೈರಲ್

2026 ರ ಐಪಿಎಲ್ ಆರಂಭಕ್ಕೆ ಕೆಲವೇ ಗಂಟೆಗಳು ಬಾಕಿ ಉಳಿದಿವೆ. ಲೀಗ್​ನ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ಸನ್​ರೈಸರ್ಸ್​ ಹೈದರಾಬಾದ್ ತಂಡವನ್ನು ಬೆಂಗಳೂರಿನಲ್ಲಿ ಎದುರಿಸುತ್ತಿದೆ. ತವರಿನ ಅಭಿಮಾನಿಗಳ ಮುಂದೆ ಅಬ್ಬರಿಸಲು ಆರ್​ಸಿಬಿಯ ಜೀವಾಳ ಎನಿಸಿಕೊಂಡಿರುವ ವಿರಾಟ್ ಕೊಹ್ಲಿ ಕೂಡ ಸರ್ವ ಸನ್ನದ್ಧರಾಗಿದ್ದಾರೆ. ಅಭಿಮಾನಿಗಳು ಕೂಡ ಅವರ ಆಟವನ್ನು ಕಣ್ತುಂಬಿಕೊಳ್ಳಲು ಕಾಯುತ್ತಿದ್ದಾರೆ. ಇದೆಲ್ಲದರ ನಡುವೆ ತೆಲುಗು ಮೂಲದ ಯುವತಿಯೊಬ್ಬಳು ವಿರಾಟ್ ಕೊಹ್ಲಿಗೆ ಸಂಬಂಧಿಸಿದಂತೆ ಸ್ಫೋಟಕ ಹೇಳಿಕೆಯೊಂದನ್ನು ನೀಡಿದ್ದಾಳೆ.

ಇನ್​ಸ್ಟಾಗ್ರಾಮ್​ನಲ್ಲಿ ‘cricminaati’ ಎಂಬ ಹೆಸರಿನ ಖಾತೆ ಹೊಂದಿರುವ ಮಹಿಳೆಯೊಬ್ಬರು ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದಾರೆ. ಅದರಲ್ಲಿ ಅವರು, ‘ವಿರಾಟ್ ಕೊಹ್ಲಿ ನನಗೆ ಲವ್ ಬೈಟ್ ನೀಡಿದ್ದರು ಎಂದು ಹೇಳಿದನ್ನು ನಿವ್ಯಾರು ನಂಬಿರಲಿಲ್ಲ. ಎಲ್ಲರೂ ನನ್ನನ್ನು ಟ್ರೋಲ್ ಮಾಡಿದ್ದರು. ಆದರೀಗ ನೀವು ನಂಬುವಂತಹ ಸಾಕ್ಷಿಯೊಂದನ್ನು ತಂದಿದ್ದೇನೆ. ನನ್ನ ಹೊಟ್ಟೆಯಲ್ಲಿ ಬೆಳೆಯುತ್ತಿರುವ ಮಗುವಿಗೆ ವಿರಾಟ್ ಕೊಹ್ಲಿಯೇ ತಂದೆ.ಇದನ್ನು ಫೇಕ್ ಮಾಡಲು ಸಾಧ್ಯ ಇಲ್ಲ ಅಲ್ವ? ನಾನು ವಿರಾಟ್ ಕೊಹ್ಲಿ ಬಗ್ಗೆ ಮಾಡಲಿರುವ ಎಲ್ಲಾ ವಿಡಿಯೋಗಳನ್ನು ನೀವು ನೋಡಬೇಕು. ಎಂದಿದ್ದಾರೆ. ಪ್ರಸ್ತುತ ಈ ಯುವತಿಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದ್ದು, ಸಾಕಷ್ಟು ವೈರಲ್ ಆಗುತ್ತಿದೆ.

ಆದರೆ ಈ ಯುವತಿ ಹಂಚಿಕೊಂಡಿರುವ ವಿಡಿಯೋದಲ್ಲಿ ಎಷ್ಟು ಸತ್ಯಾಂಶವಿದೆ ಎಂಬುದನ್ನು ಹೇಳಲು ಅಸಾಧ್ಯ. ಏಕೆಂದರೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುವ ಸಲುವಾಗಿ ಕೆಲವರು ಈ ರೀತಿಯ ಮಾರ್ಗಗಳನ್ನು ಬಳಸುತ್ತಾರೆ. ಪ್ರಸಿದ್ಧ ವ್ಯಕ್ತಿಗಳ ಜೊತೆ ನನಗೆ ನಂಟಿದೆ ಎಂದು ಹೇಳಿಕೊಳ್ಳುವ ಮೂಲಕ ಅವರು ವೈರಲ್ ಆಗಲು ಬಯುತ್ತಾರೆ. ಅಂತಹವರ ಸಾಲಿಗೆ ಈ ಯುವತಿಯೂ ಸೇರಿರಬಹುದು ಎಂಬುದು ನೆಟ್ಟಿಗರ ಅಭಿಪ್ರಾಯವಾಗಿದೆ. ಈ ವಿಡಿಯೋ ವೈರಲ್ ಆದ ಬಳಿಕ ಕೊಹ್ಲಿ ಅಭಿಮಾನಿಗಳು ಈ ಯುವತಿಯ ವಿರುದ್ಧ ಕೆಂಡಕಾರಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸಕಲೇಶಪುರದಲ್ಲಿ ಪ್ರೀ-ವೆಡ್ಡಿಂಗ್ ಶೂಟ್ ವೇಳೆ ಫೋಟೋಗ್ರಾಫರ್‌ಗಳ ಮೇಲೆ ಹಲ್ಲೆ: ಕೈಮುಗಿದರೂ ಬಿಡದ ಕಿಡಿಗೇಡಿಗಳು

ಸಕಲೇಶಪುರ, ಮಾ.28: ಸಿನೆಮಾಗಳ ಚಿತ್ರೀಕರಣಕ್ಕೆ ಹೆಸರಾದ ಹಾಸನದ ಸಕಲೇಶಪುರ ತಾಲೂಕಿನ ಪ್ರಸಿದ್ಧ ಬೆಟ್ಟದ ಭೈರವೇಶ್ವರ ದೇವಸ್ಥಾನದ ಆವರಣದಲ್ಲಿ ಪ್ರೀ-ವೆಡ್ಡಿಂಗ್ ಫೋಟೋಶೂಟ್ ನಡೆಸುತ್ತಿದ್ದ ತಂಡದ ಮೇಲೆ ಕಿಡಿಗೇಡಿಗಳು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಈ ಘಟನೆ ತಾರಕಕ್ಕೇರಿ ಪೊಲೀಸ್ ಠಾಣೆಯ ಮುಂದೆಯೇ ಎರಡು ಗುಂಪುಗಳ ನಡುವೆ ಹೊಡೆದಾಟ ನಡೆದಿದೆ. ಬೆಟ್ಟದ ಭೈರವೇಶ್ವರ ದೇಗುಲದ ಸುಂದರ ಪರಿಸರದಲ್ಲಿ ಇಂದು ಮುಂಜಾನೆ ಬೆಂಗಳೂರು ಮತ್ತು ಹಾಸನದಿಂದ ಬಂದಿದ್ದ ನಾಲ್ಕು ಫೋಟೋಗ್ರಫಿ ತಂಡಗಳು ಶೂಟಿಂಗ್‌ನಲ್ಲಿ ನಿರತವಾಗಿದ್ದವು. ಈ ವೇಳೆ ಅಲ್ಲಿಗೆ ಬಂದ ಸ್ಥಳೀಯ ಕೆಲ ಕಿಡಿಗೇಡಿಗಳು, “ದೇವಸ್ಥಾನದ ಪಾವಿತ್ರತೆಗೆ ಧಕ್ಕೆ ತರುತ್ತಿದ್ದೀರಿ” ಎಂದು ಆರೋಪಿಸಿ ವಿನಾಕಾರಣ ಗಲಾಟೆ ಆರಂಭಿಸಿದ್ದಾರೆ. ಫೋಟೋಗ್ರಾಫರ್‌ಗಳು ಕೈಮುಗಿದು ಬೇಡಿಕೊಂಡರೂ ಕೇಳದ ಪುಂಡರು ಚೇತನ್, ಯಶು ಮತ್ತು ಸೋಮಶೇಖರ್ ಎಂಬುವವರ ಮೇಲೆ ತೀವ್ರ ಹಲ್ಲೆ ನಡೆಸಿದ್ದಾರೆ.

ಹಲ್ಲೆಕೋರರು ಲಕ್ಷಾಂತರ ರೂಪಾಯಿ ಬೆಲೆಯ ಕ್ಯಾಮೆರಾ, ಮೊಬೈಲ್‌ಗಳನ್ನು ಜಖಂಗೊಳಿಸಿದ್ದಾರೆ. ಮೇಕಪ್ ಆರ್ಟಿಸ್ಟ್‌ಗಳ ಮೇಲೂ ಹಲ್ಲೆ ನಡೆದಿದೆ ಎನ್ನಲಾಗಿದೆ. ಘಟನೆ ಸಂಬಂಧ ದೂರು ನೀಡಲು ಸಕಲೇಶಪುರ ಗ್ರಾಮಾಂತರ ಠಾಣೆಗೆ ಬಂದಾಗ, ಪೊಲೀಸರ ಸಮ್ಮುಖದಲ್ಲೇ ಎರಡೂ ಗುಂಪುಗಳ ನಡುವೆ ಮತ್ತೆ ವಾಗ್ವಾದ ನಡೆದು ಮಾರಾಮಾರಿ ಸಂಭವಿಸಿದೆ. ಹಲ್ಲೆಗೊಳಗಾದ ಫೋಟೋಗ್ರಾಫರ್ ಒಬ್ಬರು ಹಾಸನ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇನ್ನೊಂದೆಡೆ ಸ್ಥಳೀಯರು, “ಇದು ಪ್ರವಾಸಿ ತಾಣವಲ್ಲ, ನಮ್ಮ ಶ್ರದ್ಧಾ ಕೇಂದ್ರ. ಇಲ್ಲಿಗೆ ಬರುವವರು ಅಸಭ್ಯ ಉಡುಗೆ ತೊಟ್ಟು ಪಾವಿತ್ರತೆ ಹಾಳು ಮಾಡುತ್ತಿದ್ದಾರೆ” ಎಂದು ಆರೋಪಿಸಿದ್ದಾರೆ. ಸುತ್ತಲೂ ಬೇಲಿ ಹಾಕಿ ಧಾರ್ಮಿಕ ಕೇಂದ್ರವನ್ನು ರಕ್ಷಿಸುವಂತೆ ಅವರು ಒತ್ತಾಯಿಸಿದ್ದಾರೆ. ಸದ್ಯ ಸಕಲೇಶಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ.

ಇದನ್ನೂ ಓದಿ: ತನ್ನ ಕಾಮದಾಟಕ್ಕೆ ಅಡ್ಡಿಯಾಗುತ್ತಿದ್ದ ಪತಿಯನ್ನೇ ಸುಪಾರಿ ನೀಡಿ ಕೊಲೆ ಮಾಡಿಸಿದ ಪತ್ನಿ!

ಇನ್ನು ದೇವಾಲಯದಲ್ಲಿ ಫೋಟೋಶೂಟ್​​ ಮಾಡುವಾಗ ಕೆಲವೊಂದು ಕ್ರಮಗಳನ್ನು ಹಾಗೂ ನಿಯಮಗಳನ್ನು ಪಾಲಿಸಲೇಬೇಕು. ದೇವಸ್ಥಾನಗಳು ಕೇವಲ ಪ್ರವಾಸಿ ತಾಣಗಳಲ್ಲ, ಅವು ನಂಬಿಕೆಯ ಕೇಂದ್ರಗಳು. ಅಲ್ಲಿ ಶೂಟಿಂಗ್ ಮಾಡುವಾಗ ಈ ಕೆಳಗಿನ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳುವುದು ಫೋಟೋಗ್ರಾಫರ್‌ಗಳು ಮತ್ತು ಜೋಡಿಗಳ ಕರ್ತವ್ಯ. ದೇವಸ್ಥಾನದ ಆಡಳಿತ ಮಂಡಳಿ ಅಥವಾ ಮುಜರಾಯಿ ಇಲಾಖೆಯಿಂದ ಲಿಖಿತ ಅನುಮತಿ ಪಡೆಯುವುದು ಒಳಿತು. ಖಾಸಗಿ ದೇವಸ್ಥಾನವಾಗಿದ್ದರೆ ಅಲ್ಲಿನ ಅರ್ಚಕರು ಅಥವಾ ಧರ್ಮದರ್ಶಿಗಳ ಗಮನಕ್ಕೆ ತರಬೇಕು. ಒಂದು ವೇಳೆ ಈ ಕೆಲಸ ಮಾಡದಿದ್ದರೆ ಇಂತಹ ಘಟನೆಗಳು ನಡೆಯುತ್ತದೆ. ಗರ್ಭಗುಡಿಯ ಒಳಗೆ ಅಥವಾ ದೇವಸ್ಥಾನದ ಆವರಣದಲ್ಲಿ ಪಾದರಕ್ಷೆ ಧರಿಸಿ ಶೂಟಿಂಗ್ ಮಾಡಬಾರದು. ಧಾರ್ಮಿಕ ಭಾವನೆಗೆ ಧಕ್ಕೆ ತರುವಂತಹ ಭಂಗಿಗಳಲ್ಲಿ ಫೋಟೋ ತೆಗೆಯಬಾರದು ಎಂಬ ಬಗ್ಗೆ ಮೊದಲೇ ಆಲೋಚನೆ ಇರಬೇಕು. ದೇವಸ್ಥಾನದ ಮರ್ಯಾದೆಗೆ ತಕ್ಕಂತೆ ಸಾಂಪ್ರದಾಯಿಕ ಅಥವಾ ಸಭ್ಯ ಉಡುಗೆಗಳನ್ನು ತೊಡುವುದು ಉತ್ತಮ. ಅತಿಯಾದ ಮಾಡರ್ನ್ ಅಥವಾ ಅಸಭ್ಯ ಉಡುಗೆಗಳು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಬಹುದು.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Pourakarmika Recruitment 2026: ತುಮಕೂರು ಮಹಾನಗರ ಪಾಲಿಕೆಯಲ್ಲಿ 238 ಪೌರಕಾರ್ಮಿಕ ಹುದ್ದೆಗಳಿಗೆ ನೇಮಕಾತಿ

ತುಮಕೂರು: ಕರ್ನಾಟಕ ಸರ್ಕಾರದಲ್ಲಿ ಉದ್ಯೋಗ ಬಯಸುವವರಿಗೆ ತುಮಕೂರು ಮಹಾನಗರ ಪಾಲಿಕೆಯು ಸಿಹಿ ಸುದ್ದಿ ನೀಡಿದೆ. ನಗರದ ಸ್ವಚ್ಛತೆ ಮತ್ತು ನಾಗರಿಕ ಸೇವೆಗಳನ್ನು ಬಲಪಡಿಸುವ ನಿಟ್ಟಿನಲ್ಲಿ ಖಾಲಿ ಇರುವ 238 ಪೌರಕಾರ್ಮಿಕ (ನಾಗರಿಕ ಸೇವಕ) ಹುದ್ದೆಗಳನ್ನು ಭರ್ತಿ ಮಾಡಲು ಅಧಿಕೃತ ಅಧಿಸೂಚನೆ ಹೊರಡಿಸಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಈ ಸುವರ್ಣ ಅವಕಾಶವನ್ನು ಬಳಸಿಕೊಳ್ಳಬಹುದಾಗಿದೆ.

ಹುದ್ದೆಗಳ ವಿವರ ಮತ್ತು ಸ್ಥಳ:

ತುಮಕೂರು ಮಹಾನಗರ ಪಾಲಿಕೆಯಲ್ಲಿ ಒಟ್ಟು 238 ಪೌರಕಾರ್ಮಿಕ ಹುದ್ದೆಗಳು ಲಭ್ಯವಿದ್ದು, ಆಯ್ಕೆಯಾದ ಅಭ್ಯರ್ಥಿಗಳು ತುಮಕೂರು ಜಿಲ್ಲೆಯ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸಬೇಕಾಗುತ್ತದೆ. ಸರ್ಕಾರದ ಮಾನದಂಡಗಳ ಪ್ರಕಾರ ಈ ಹುದ್ದೆಗಳಿಗೆ ಆಕರ್ಷಕ ವೇತನ ಶ್ರೇಣಿಯನ್ನು ನಿಗದಿಪಡಿಸಲಾಗಿದೆ.

ಅರ್ಹತಾ ಮಾನದಂಡಗಳು ಮತ್ತು ವಯೋಮಿತಿ:

ಈ ನೇಮಕಾತಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ 18 ವರ್ಷ ಪೂರೈಸಿರಬೇಕು ಮತ್ತು ಗರಿಷ್ಠ 50 ವರ್ಷ ವಯೋಮಿತಿಯ ಒಳಗಿರಬೇಕು. ಸರ್ಕಾರದ ನಿಯಮಗಳ ಪ್ರಕಾರ ಮೀಸಲಾತಿ ವರ್ಗದ ಅಭ್ಯರ್ಥಿಗಳಿಗೆ ವಯೋಮಿತಿಯಲ್ಲಿ ಸಡಿಲಿಕೆ ಇರಲಿದೆ. ಶೈಕ್ಷಣಿಕ ಅರ್ಹತೆಗೆ ಸಂಬಂಧಿಸಿದಂತೆ ಅಭ್ಯರ್ಥಿಗಳು ಅಧಿಕೃತ ಅಧಿಸೂಚನೆಯಲ್ಲಿ ತಿಳಿಸಿರುವ ಮಾನದಂಡಗಳನ್ನು ಪೂರೈಸಿರಬೇಕು.

ಅರ್ಜಿ ಸಲ್ಲಿಸುವ ವಿಧಾನ:

ಈ ನೇಮಕಾತಿಯು ಆಫ್‌ಲೈನ್ (Offline) ಪ್ರಕ್ರಿಯೆಯ ಮೂಲಕ ನಡೆಯಲಿದೆ. ಆಸಕ್ತರು ಈ ಕೆಳಗಿನ ಹಂತಗಳನ್ನು ಅನುಸರಿಸಿ ಅರ್ಜಿ ಸಲ್ಲಿಸಬಹುದು:

  • ಮೊದಲು ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ ನಿಮ್ಮ ಅರ್ಹತೆಯನ್ನು ಖಚಿತಪಡಿಸಿಕೊಳ್ಳಿ.
  • ನಿಗದಿತ ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಿಕೊಂಡು, ಸರಿಯಾದ ಮಾಹಿತಿಗಳನ್ನು ಭರ್ತಿ ಮಾಡಿ.
  • ಅರ್ಜಿಯೊಂದಿಗೆ ನಿಮ್ಮ ಐಡಿ ಪ್ರೂಫ್, ವಯಸ್ಸಿನ ದಾಖಲೆ, ಶೈಕ್ಷಣಿಕ ಪ್ರಮಾಣಪತ್ರಗಳು ಮತ್ತು ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ಫೋಟೋಗಳನ್ನು ಲಗತ್ತಿಸಿ.
  • ಭರ್ತಿ ಮಾಡಿದ ಅರ್ಜಿಯನ್ನು ತುಮಕೂರು ಮಹಾನಗರ ಪಾಲಿಕೆ/ಪುರಸಭೆ, ತಿಪಟೂರು/ಶಿರಾ ಕಚೇರಿಗೆ ಖುದ್ದಾಗಿ ಅಥವಾ ಅಂಚೆ ಮೂಲಕ ಸಲ್ಲಿಸಬೇಕು.

ಇದನ್ನೂ ಓದಿ: ಕರ್ನಾಟಕ ಹೈಕೋರ್ಟ್ ನೇಮಕಾತಿ; 70 ಸಹಾಯಕ ನ್ಯಾಯಾಲಯ ಕಾರ್ಯದರ್ಶಿ ಹುದ್ದೆಗಳಿಗೆ ಅರ್ಜಿ ಆಹ್ವಾನ

ಅಧಿಕೃತ ಅರ್ಜಿ ನಮೂನೆ ಪಡೆಯುವುದು ಹೇಗೆ?

ಪೌರಕಾರ್ಮಿಕ ಹುದ್ದೆಗಳ ನೇಮಕಾತಿಯು ಸಾಮಾನ್ಯವಾಗಿ ಸ್ಥಳೀಯವಾಗಿ ನಡೆಯುವುದರಿಂದ, ಅರ್ಜಿ ನಮೂನೆಯನ್ನು ಪಡೆಯಲು ಈ ಕೆಳಗಿನ ಮಾರ್ಗಗಳನ್ನು ಬಳಸಬಹುದು:

  • ನೇರ ಭೇಟಿ: ತುಮಕೂರು ಮಹಾನಗರ ಪಾಲಿಕೆಯ ಕೇಂದ್ರ ಕಚೇರಿ ಅಥವಾ ನಿಮ್ಮ ಹತ್ತಿರದ ಪುರಸಭೆ ಕಚೇರಿಯ (ತಿಪಟೂರು/ಶಿರಾ) ‘ಆಡಳಿತ ವಿಭಾಗ’ ಅಥವಾ **’ನೇಮಕಾತಿ ಶಾಖೆ’**ಗೆ ಭೇಟಿ ನೀಡಿ ಅಧಿಕೃತ ಅರ್ಜಿ ನಮೂನೆಯನ್ನು ಪಡೆಯಬಹುದು.
  • ವೆಬ್‌ಸೈಟ್: ತುಮಕೂರು ಮಹಾನಗರ ಪಾಲಿಕೆಯ ಅಧಿಕೃತ ವೆಬ್‌ಸೈಟ್ www.tumkurucity.mrc.gov.in ನಲ್ಲಿ ‘Recruitments’ ಅಥವಾ ‘Notifications’ ವಿಭಾಗವನ್ನು ಪರಿಶೀಲಿಸಿ ಅಲ್ಲಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು.

ಉದ್ಯೋಗಕ್ಕೆ ಸಂಬಂಧಿಸಿದ ಮತ್ತಷ್ಟು  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಜನ ನಾಯಗನ್’ ಮೇಲಿನ ಆಸೆ ಬಿಟ್ಟ ಕೆವಿಎನ್, ಗಮನವೆಲ್ಲ ‘ಟಾಕ್ಸಿಕ್’ ಮೇಲೆ

ಜನ ನಾಯಗನ್’ (Jana Nayagan) ಸಿನಿಮಾಕ್ಕೆ ಬಂದಿರುವ ಪರಿಸ್ಥಿತಿ ಬಲು ಶೋಚನೀಯ ಮಾತ್ರವಲ್ಲದೆ, ರಾಜಕೀಯ ಹೇಗೆ ಸಿನಿಮಾರಂಗವನ್ನು, ಸಿನಿಮಾವನ್ನು ನಿಯಂತ್ರಿಸುತ್ತದೆ ಎಂಬುದಕ್ಕೆ ಸ್ಪಷ್ಟ ಉದಾಹರಣೆ. ಒಂದೆಡೆ ಘೋರಾತಿ ಘೋರ ಹಿಂಸೆ ಇರುವ ಸಿನಿಮಾಗಳಿಗೆ ಸುಲಭವಾಗಿ ಸೆನ್ಸಾರ್ ಸಿಕ್ಕು ಬಿಡುಗಡೆ ಆಗುತ್ತಿದ್ದರೆ, ‘ಜನ ನಾಯಗನ್’ ಸಿನಿಮಾ ಅನ್ನು ತಿಂಗಳುಗಳ ಕಾಲ ಕ್ಷುಲ್ಲಕ ಕಾರಣಗಳನ್ನು ನೀಡಿ ತಡೆ ಹಿಡಿಯಲಾಗಿದೆ. ‘ಜನ ನಾಯಗನ್’ ದಳಪತಿ ವಿಜಯ್ ಅವರ ಕೊನೆಯ ಸಿನಿಮಾ ಎನ್ನಲಾಗಿದ್ದು, ಈ ಸಿನಿಮಾ ಬಿಡುಗಡೆ ಆದರೆ ಅವರಿಗೆ ರಾಜಕೀಯವಾಗಿ ಸಹಾಯ ಆಗುತ್ತದೆ ಎಂಬ ಕಾರಣಕ್ಕೆ ಸಿನಿಮಾವನ್ನು ರಾಜಕೀಯ ಪ್ರಭಾವ ಬಳಸಿ ತಡೆ ಹಿಡಿದಿರುವುದು ಸ್ಪಷ್ಟ. ಆದರೆ ಇದರಿಂದ ಬೇಸತ್ತಿರುವ ನಿರ್ಮಾಣ ಸಂಸ್ಥೆಯಾದ ಕೆವಿಎನ್, ‘ಜನ ನಾಯಗನ್’ ಮೇಲೆ ಆಸೆಯನ್ನೇ ಬಿಟ್ಟಿದೆಯಂತೆ.

ಇದೀಗ ತಮಿಳುನಾಡಿನಲ್ಲಿ ವಿಧಾನಸಭೆ ಚುನಾವಣೆಗಳು ಘೋಷಣೆ ಆಗಿದ್ದು ಚುನಾವಣೆ ಮುಗಿವ ವರೆಗೆ ಅಂದರೆ ಮೇ 6 ರವರೆಗೆ ಸಿನಿಮಾ ಬಿಡುಗಡೆ ಮಾಡುವಂತಿಲ್ಲ. ಅದಾದ ಬಳಿಕವಷ್ಟೆ ಸಿನಿಮಾವನ್ನು ಬಿಡುಗಡೆ ಮಾಡಬೇಕಿದೆ. ಆದರೆ ‘ಜನ ನಾಯಗನ್’ ಸುತ್ತುವರೆದಿರುವ ರಾಜಕೀಯದಿಂದ ಬೇಸತ್ತಿರುವ ಕೆವಿಎನ್ ನಿರ್ಮಾಣ ಸಂಸ್ಥೆ ಸಿನಿಮಾದ ಮೇಲೆ ಆಸೆಯನ್ನೇ ಕೈಬಿಟ್ಟಿದ್ದು, ಅದರ ಬದಲಿಗೆ ‘ಟಾಕ್ಸಿಕ್’ ಸಿನಿಮಾ ಮೇಲೆ ಗಮನ ಹರಿಸಿದೆ.

ತಮಿಳುನಾಡಿನಲ್ಲಿ ಏಪ್ರಿಲ್ 23 ರಂದು ಮತದಾನ ನಡೆಯಲಿದ್ದು, ಮೇ 4ಕ್ಕೆ ಫಲಿತಾಂಶ ಮತ್ತು ಮೇ 6ಕ್ಕೆ ಚುನಾವಣಾ ನೀತಿ ಸಂಹಿತೆ ಅಂತ್ಯವಾಗಲಿದೆ. ಏಪ್ರಿಲ್ 23 ರಂದು ಮತದಾನ ಮುಗಿದ ಕೂಡಲೇ ಸಿನಿಮಾವನ್ನು ಬಿಡುಗಡೆ ಮಾಡುವ ಆಲೋಚನೆಯೂ ಕೆವಿಎನ್​​ಗೆ ಇದೆ. ಒಂದೊಮ್ಮೆ ಫಲಿತಾಂಶ ಬಂದ ಬಳಿಕ ಸಿನಿಮಾ ಬಿಡುಗಡೆ ಮಾಡಿದರೆ, ಫಲಿತಾಂಶದಲ್ಲಿ ವಿಜಯ್​​ ಪಕ್ಷಕ್ಕೆ ಹಿನ್ನಡೆ ಆಗಿದ್ದರೆ, ಅದರ ಪ್ರಭಾವ ಸಿನಿಮಾದ ಮೇಲೂ ಬೀಳಲಿದೆ. ಹಾಗಾಗಿ ಫಲಿತಾಂಶ ಬರುವ ಮೊದಲೇ ಸಿನಿಮಾವನ್ನು ಬಿಡುಗಡೆ ಮಾಡುವುದು ಕೆವಿಎನ್​​ನ ಯೋಚನೆ. ಅಲ್ಲದೆ, ಇದರಿಂದ ‘ಟಾಕ್ಸಿಕ್’ ಮತ್ತು ‘ಜನ ನಾಯಗನ್’ ಬಿಡುಗಡೆ ಮಧ್ಯೆ ತುಸು ಹೆಚ್ಚು ಗ್ಯಾಪ್ ದೊರೆತಂದೆ ಆಗಲಿದೆ.

ಇದನ್ನೂ ಓದಿ;ಮಾರ್ಚ್ 9ಕ್ಕೆ ನಿರ್ಧಾರವಾಗಲಿದೆ ‘ಜನ ನಾಯಗನ್’ ಭವಿಷ್ಯ: ಆತಂಕದಲ್ಲಿ ಕೆವಿಎನ್

‘ಟಾಕ್ಸಿಕ್’ ಸಿನಿಮಾ ಜೂನ್ 04ರಂದು ಬಿಡುಗಡೆ ಆಗಲಿದೆ. ‘ಜನ ನಾಯಗನ್’ಗೆ ಹೋಲಿಸಿದರೆ ‘ಟಾಕ್ಸಿಕ್​​’ಗೆ ಬ್ಲಾಕ್ ಬಸ್ಟರ್ ಆಗುವ ಸಾಮರ್ಥ್ಯ ಹೆಚ್ಚಿದೆಯಂತೆ. ಹಾಗಾಗಿ ತನ್ನ ಗಮನವನ್ನು ‘ಜನ ನಾಯಗನ್’ ಬದಲಿಗೆ ‘ಟಾಕ್ಸಿಕ್’ ಮೇಲೆ ಹರಿಸಲಿದೆ ಕೆವಿಎನ್. ‘ಟಾಕ್ಸಿಕ್’ ಸಿನಿಮಾಕ್ಕೆ ಭರ್ಜರಿ ಪ್ರಚಾರ ನೀಡಿ, ಭಾರಿ ಅದ್ಧೂರಿಯಾಗಿ ಸಿನಿಮಾವನ್ನು ಬಿಡುಗಡೆ ಮಾಡುವ ಆಲೋಚನೆಯಲ್ಲಿ ಚಿತ್ರತಂಡ ಇದೆ.

ಕೆವಿಎನ್ ನಿರ್ಮಾಣ ಸಂಸ್ಥೆ ಪ್ರಸ್ತುತ ಮೂರು ದೊಡ್ಡ ಸಿನಿಮಾಗಳ ಮೇಲೆ ಬಂಡವಾಳ ಹೂಡಿದ್ದು, ಮೂರೂ ಸಿನಿಮಾಗಳು ಒಂದಲ್ಲ ಒಂದು ರೀತಿಯ ಸಂಕಷ್ಟಕ್ಕೆ ಸಿಲುಕಿವೆ. ‘ಜನ ನಾಯಗನ್’ ಸಿನಿಮಾಕ್ಕೆ ರಾಜಕೀಯ ಸಂಕಷ್ಟ ಎದುರಾಗಿದೆ. ‘ಟಾಕ್ಸಿಕ್’ ಸಿನಿಮಾಕ್ಕೆ ಮಧ್ಯ ಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದಿಂದ ಸಮಸ್ಯೆ ಆಗಿದೆ. ಇನ್ನು ಧ್ರುವ ಸರ್ಜಾ ನಟನೆಯ ‘ಕೆಡಿ’ ಸಿನಿಮಾಕ್ಕೆ ಹಾಡಿನ ಸಂಕಷ್ಟ ಎದುರಾಗಿದೆ. ಅಂದಹಾಗೆ ‘ಕೆಡಿ’ ಸಿನಿಮಾ ಏಪ್ರಿಲ್ 30ಕ್ಕೆ ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

IPL 2026: ಭಾರತದ ಮುಂದೆ ತಲೆಬಾಗಿದ ಬಾಂಗ್ಲಾದೇಶ; ಐಪಿಎಲ್ ಪ್ರಸಾರಕ್ಕೆ ಅಸ್ತು

Source link

ಬಿಜೆಪಿ ಕಚೇರಿ ಮುಂದೆನೇ ಬಂದು ತೊಡೆತಟ್ಟಿದ್ದೇವೆ: ಗುಡುಗಿದ ಶಾಸಕ ಪ್ರದೀಪ್ ಈಶ್ವರ್

ದಾವಣಗೆರೆ, ಮಾರ್ಚ್​ 28: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣಾ ಕಣ ರಂಗೇರಿದೆ. ಬಿಜೆಪಿ ನಾಯಕರ ಅವಹೇಳನಕಾರಿ ಭಾಷಣದ ಆರೋಪ ಹಿನ್ನೆಲೆ ಬಿಜೆಪಿ ಕಾರ್ಯಕರ್ತರು ದಾವಣಗೆರೆಗೆ ಬರುವಂತೆ ಸವಾಲು ಹಾಕಿದ್ದರು. ಈ ಸವಾಲನ್ನು ಸ್ವೀಕರಿಸಿದ ಶಾಸಕ ಪ್ರದೀಪ್ ಈಶ್ವರ್ ಇಂದು ದಾವಣಗೆರೆ ಜಿಲ್ಲಾ ಬಿಜೆಪಿ ಕಚೇರಿ ಇರುವ ಕೆಬಿ ಬಡಾವಣೆಗೆ ರ್ಯಾಲಿ ಮೂಲಕ ಆಗಮಿಸಿ ಶಕ್ತಿ ಪ್ರದರ್ಶಿಸಿದರು. ಈ ವೇಳೆ ಮಾತನಾಡಿದ ಅವರು ಬಿಜೆಪಿ ಕಚೇರಿ ಮುಂದೆನೇ ಬಂದಿದ್ದೆ ಏನು ಮಾಡಿದರು ಎಂದಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

ಭಾರತದ ವಿರುದ್ಧದ ಭಯೋತ್ಪಾದನಾ ಸಂಘಟನೆಗೆ ಪಾಕಿಸ್ತಾನ ಆಶ್ರಯ ನೀಡುತ್ತಲೇ ಇದೆ; ಅಮೆರಿಕದ ಸಂಶೋಧನಾ ವರದಿ

ಇಸ್ಲಮಾಬಾದ್, ಮಾರ್ಚ್ 28: ಪಹಲ್ಗಾಮ್​ನಲ್ಲಿ ನಡೆದ ಭಯೋತ್ಪಾದನಾ ದಾಳಿಯ ಬಳಿಕ ಭಾರತ ಪಾಕಿಸ್ತಾನದ ಉಗ್ರರ ನೆಲೆಗಳ ಮೇಲೆ ಆಪರೇಷನ್ ಸಿಂಧೂರ್ (Operation Sindoor) ಕಾರ್ಯಾಚರಣೆ ನಡೆಸಿತ್ತು. ಆದರೆ, ಪಾಕಿಸ್ತಾನ (Pakistan) ತಮ್ಮ ದೇಶದಲ್ಲಿ ಯಾವುದೇ ಉಗ್ರರಿಗೆ ನೆಲೆ ಕಲ್ಪಿಸಿಲ್ಲ ಎಂದು ಹೇಳಿಕೊಂಡಿತ್ತು. ಅಲ್ಲದೆ, ಭಾರತ ಉಗ್ರರ ಮೇಲೆ ದಾಳಿ ನಡೆಸಿಲ್ಲ, ಪಾಕಿಸ್ತಾನದ ಮಿಲಿಟರಿ ನೆಲೆಗಳ ಮೇಲೆ ದಾಳಿ ನಡೆಸಿದೆ ಎಂದು ಪಾಕ್ ಸುಳ್ಳು ಹೇಳಿಕೆ ನೀಡಿತ್ತು. ಇದಾದ ನಂತರ ಪಾಕಿಸ್ತಾನದ ಮೇಲೆ ಸಮರ ಸಾರಿದ್ದ ಭಾರತದ ಕಾರ್ಯಾಚರಣೆಯಿಂದ ಕಂಗೆಟ್ಟಿದ್ದ ಪಾಕಿಸ್ತಾನ ಕದನವಿರಾಮಕ್ಕೆ ಮನವಿ ಮಾಡಿತ್ತು. ಪಾಕಿಸ್ತಾನದೊಂದಿಗೆ ಮಾತುಕತೆ ನಡೆಸಿದ ಬಳಿಕ ಭಾರತ ಕದನವಿರಾಮಕ್ಕೆ ಒಪ್ಪಿಕೊಂಡರೂ ಇಂದಿಗೂ ಪಾಕಿಸ್ತಾನ ಮಾತ್ರ ಭಾರತದ ವಿರುದ್ಧ ಕತ್ತಿ ಮಸೆಯುವುದು ನಿಲ್ಲಿಸಿಲ್ಲ.

ಯುಎಸ್ ಕಾಂಗ್ರೆಸ್ ಸಂಶೋಧನಾ ಸೇವೆ (CRS)ಯ ಹೊಸ ವರದಿಯು ಪಾಕಿಸ್ತಾನವು ಭಯೋತ್ಪಾದಕ ಗುಂಪುಗಳಿಗೆ ನಿರಂತರವಾಗಿ ಆಶ್ರಯ ನೀಡುತ್ತಿದೆ ಎಂದು ಘೋಷಿಸಿದೆ. ಹಾಗೇ, ಈ ವರದಿಯಲ್ಲಿ ಭಾರತದ ಉಲ್ಲೇಖವನ್ನೂ ಮಾಡಲಾಗಿದ್ದು, ಭಾರತದ ಮೇಲೆ ಅದರಲ್ಲೂ ವಿಶೇಷವಾಗಿ ಜಮ್ಮು ಮತ್ತು ಕಾಶ್ಮೀರದ ಕೇಂದ್ರಾಡಳಿತ ಪ್ರದೇಶದ ಮೇಲೆ ದೀರ್ಘಕಾಲದಿಂದ ಕಣ್ಣು ನೆಟ್ಟಿರುವ ಉಗ್ರರ ಗುಂಪುಗಳು ಪಾಕಿಸ್ತಾನದ ನೆಲದಿಂದ ಕಾರ್ಯನಿರ್ವಹಿಸುವುದನ್ನು ಮುಂದುವರಿಸಿವೆ ಎಂದು ಈ ವರದಿ ಎಚ್ಚರಿಕೆ ನೀಡಿದೆ.

ಇದನ್ನೂ ಓದಿ: ಲಾಕ್​ಡೌನ್ ಪರಿಸ್ಥಿತಿ ಇರುವುದು ಭಾರತದಲ್ಲಲ್ಲ ಪಾಕಿಸ್ತಾನದಲ್ಲಿ; ಸಚಿವೆ ನಿರ್ಮಲಾ ಸೀತಾರಾಮನ್ ಸ್ಪಷ್ಟನೆ

ಮಾರ್ಚ್ 25ರ ಸಿಆರ್​​ಎಸ್​ “ಇನ್ ಫೋಕಸ್” ವರದಿ ಪಾಕಿಸ್ತಾನದಲ್ಲಿರುವ 15 ಉಗ್ರ ಸಂಘಟನೆಗಳ ಹೆಸರುಗಳನ್ನು ಉಲ್ಲೇಖಿಸಿದೆ. ಅವುಗಳಲ್ಲಿ ಹಲವು ಅಮೆರಿಕದಿಂದ ವಿದೇಶಿ ಭಯೋತ್ಪಾದಕ ಸಂಘಟನೆಗಳು (ಎಫ್‌ಟಿಒ) ಎಂದು ಘೋಷಿಸಲ್ಪಟ್ಟಿದೆ. ಅವುಗಳಲ್ಲಿ ಲಷ್ಕರ್-ಎ-ತೈಬಾ (ಎಲ್‌ಇಟಿ), ಜೈಶ್-ಎ-ಮೊಹಮ್ಮದ್ (ಜೆಇಎಂ), ಹರಕತ್-ಉಲ್ ಜಿಹಾದ್ ಇಸ್ಲಾಮಿ (ಎಚ್‌ಯುಜಿ), ಹರಕತ್ ಉಲ್-ಮುಜಾಹಿದೀನ್ (ಎಚ್‌ಎಂ) ಮತ್ತು ಹಿಜ್ಬುಲ್ ಮುಜಾಹಿದ್ದೀನ್ (ಎಚ್‌ಎಂ)ನಂತಹ ಭಯೋತ್ಪಾದಕ ಗುಂಪುಗಳು ಸೇರಿವೆ.

ದಕ್ಷಿಣ ಏಷ್ಯಾ ತಜ್ಞ ಕೆ. ಅಲನ್ ಕ್ರೋನ್‌ಸ್ಟಾಡ್ ಸಿದ್ಧಪಡಿಸಿದ ಸಿಆರ್‌ಎಸ್ ವರದಿಯು ಪಾಕಿಸ್ತಾನವನ್ನು ಬಲಿಪಶು ದೇಶ ಎಂದು ಚಿತ್ರಿಸಿದೆ. ಆದರೂ ಅದು ಭಾರತವನ್ನು ದೀರ್ಘಕಾಲದಿಂದ ಗುರಿಯಾಗಿಸಿಕೊಂಡಿರುವ ಭಯೋತ್ಪಾದಕ ಜಾಲಗಳನ್ನು ಹೊಂದಿದೆ ಎಂದು ಕೂಡ ಉಲ್ಲೇಖಿಸಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ತನ್ನ ಕಾಮದಾಟಕ್ಕೆ ಅಡ್ಡಿಯಾಗುತ್ತಿದ್ದ ಪತಿಯನ್ನೇ ಸುಪಾರಿ ನೀಡಿ ಕೊಲೆ ಮಾಡಿಸಿದ ಪತ್ನಿ!

ಯಾದಗಿರಿ, ಮಾ.28: ಸುಖವಾಗಿದ್ದ ಸಂಸಾರಕ್ಕೆ ‘ಸೈತಾನ’ನಂತೆ ಎಂಟ್ರಿ ಕೊಟ್ಟ ಪರಪುರುಷನ ಮೋಹಕ್ಕೆ ಬಿದ್ದ ಪತ್ನಿಯೊಬ್ಬಳು, ತನ್ನ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗುತ್ತಿದ್ದ ಪತಿಯನ್ನೇ ಸುಪಾರಿ ನೀಡಿ ಕೊಲೆ ಮಾಡಿಸಿದ ಭೀಕರ ಘಟನೆ ಯಾದಗಿರಿ ಜಿಲ್ಲೆಯಲ್ಲಿ (Yadgiri murder case) ಬೆಳಕಿಗೆ ಬಂದಿದೆ. ಅಪಘಾತ ಎಂದು ಬಿಂಬಿಸಲು ಹೋಗಿ ಪೊಲೀಸರ ಕೈಗೆ ಸಿಕ್ಕಿಬಿದ್ದ ಆರೋಪಿಗಳ ಕರಾಳ ಕೃತ್ಯ ಈಗ ಬಯಲಾಗಿದೆ.

ಯಾದಗಿರಿ ತಾಲೂಕಿನ ಚಾಮನಹಳ್ಳಿ ತಾಂಡದ ನಿವಾಸಿ, ಆಟೋ ಚಾಲಕ ಸಾಗರ್ ರಾಠೋಡ್ (35) ಕೊಲೆಯಾದ ದುರ್ದೈವಿ. ಸಾಗರ್ ಪತ್ನಿ ಪೂಜಾ ಹಾಗೂ ಅದೇ ಊರಿನ ರೆಡ್ಡಿ ರಾಠೋಡ್ ನಡುವೆ ಕಳೆದ ಮೂರು ವರ್ಷಗಳಿಂದ ಅಕ್ರಮ ಸಂಬಂಧವಿತ್ತು. ಮೂರು ಬಾರಿ ಪೂಜಾ ತನ್ನ ಪ್ರಿಯತಮನ ಜೊತೆ ಓಡಿ ಹೋಗಿದ್ದಳು. ಪಂಚಾಯತಿ ಮಾಡಿ ಬುದ್ಧಿ ಹೇಳಿದರೂ ಇವರ ಕಾಮದಾಟ ನಿಂತಿರಲಿಲ್ಲ. ಕೊನೆಗೆ ದಾರಿಗೆ ಅಡ್ಡವಾಗಿದ್ದ ಸಾಗರ್‌ನನ್ನು ಮುಗಿಸಲು ಪತ್ನಿ ಮತ್ತು ಪ್ರಿಯತಮ ಸ್ಕೆಚ್ ಹಾಕಿದ್ದರು.

ಪ್ರಿಯತಮ ರೆಡ್ಡಿ ರಾಠೋಡ್, ಸಾಗರ್‌ನನ್ನು ಕೊಲ್ಲಲು ಮಹೇಶ್ ಎಂಬಾತನಿಗೆ 1 ಲಕ್ಷ ರೂ. ಸುಪಾರಿ ನೀಡಿದ್ದನು. ಮಾರ್ಚ್ 22ರ ರಾತ್ರಿ ಬಾಡಿಗೆ ಇದೆ ಎಂದು ಸುಳ್ಳು ಹೇಳಿ ಸಾಗರ್‌ನನ್ನು ಆಟೋ ಸಮೇತ ಕರೆಸಿಕೊಳ್ಳಲಾಯಿತು. ಲಿಂಗೇರಿ ಬಳಿ ನಿರ್ಜನ ಪ್ರದೇಶದಲ್ಲಿ ಸಾಗರ್ ಮೇಲೆ ಸುತ್ತಿಗೆಯಿಂದ ಹಲ್ಲೆ ನಡೆಸಿ ಭೀಕರವಾಗಿ ಕೊಲೆ ಮಾಡಲಾಯಿತು. ಕೊಲೆಯಾದ ನಂತರ ಮೃತದೇಹವನ್ನು ಕಾರಿನಲ್ಲಿ ಹಾಕಿಕೊಂಡು ಹೊಸಹಳ್ಳಿ ಬಳಿ ತಂದು, ಅಲ್ಲಿ ಆಟೋಗೆ ಕಾರಿನಿಂದ ಡಿಕ್ಕಿ ಹೊಡೆಸಲಾಯಿತು. ಸಾಗರ್ ಅಪಘಾತದಿಂದ ಸತ್ತಿದ್ದಾನೆ ಎಂದು ಬಿಂಬಿಸಲು ಈ ಸೀನ್ ಕ್ರಿಯೇಟ್ ಮಾಡಲಾಗಿತ್ತು.

ಇದನ್ನೂ ಓದಿ: ಮೈಸೂರಿನಲ್ಲಿ 12 ಕೋಟಿ ರೂ. ಮೌಲ್ಯದ ಡ್ರಗ್ಸ್ ಜಪ್ತಿ ! ಇಬ್ಬರು ಆರೋಪಿಗಳು ಅಂದರ್

ಸ್ಥಳಕ್ಕೆ ಬಂದ ಪೊಲೀಸರಿಗೆ ಇದು ಅಪಘಾತವಲ್ಲ ಎಂಬ ಸಂಶಯ ಬಂದಿತ್ತು. ಸಾಗರ್ ಫೋನ್ ದಾಖಲೆಗಳನ್ನು ಪರಿಶೀಲಿಸಿದಾಗ ಮಹೇಶ್ ಎಂಬಾತನ ಕರೆ ಪತ್ತೆಯಾಯಿತು. ಮಹೇಶ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಇಡೀ ಕೊಲೆ ರಹಸ್ಯ ಬಯಲಾಯಿತು. ಪ್ರಿಯತಮ ರೆಡ್ಡಿ ರಾಠೋಡ್ ಮತ್ತು ಪತ್ನಿ ಪೂಜಾ ಸೇರಿ ಈ ಕೃತ್ಯ ಎಸಗಿರುವುದು ಸಾಬೀತಾಯಿತು. ಯಾದಗಿರಿ ಗ್ರಾಮಾಂತರ ಪೊಲೀಸರು ಈಗ ಮಹೇಶ್, ರೆಡ್ಡಿ ರಾಠೋಡ್ ಮತ್ತು ಪತ್ನಿ ಪೂಜಾ ಎಂಬ ಮೂವರು ಆರೋಪಿಗಳನ್ನು ಅರೆಸ್ಟ್ ಮಾಡಿ ಜೈಲಿಗಟ್ಟಿದ್ದಾರೆ.

ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Source link

‘ನನ್ನ ಸ್ಕ್ರಿಪ್ಟ್ ಕದ್ದು ಸಿನಿಮಾ ಮಾಡಿದ್ರು, ಅದು 100 ಕೋಟಿ ಕಲೆಕ್ಷ್ ಮಾಡಿತು’; ಆದಿತ್ಯ ಧಾರ್ ಆರೋಪ

ಆದಿತ್ಯ ಧಾರ್ ಅವರು ಇಂದು ಯಶಸ್ವಿ ನಿರ್ದೇಶಕರಲ್ಲಿ ಒಬ್ಬರು. ಅವರನ್ನು ಎಲ್ಲರೂ ಹಾಡಿ ಹೊಗಳುತ್ತಿದ್ದಾರೆ. ಆದರೆ, ಅವರು ಪಟ್ಟ ಕಷ್ಟದ ಬಗ್ಗೆ ಅನೇಕರಿಗೆ ತಿಳಿದಿಲ್ಲ. ಕ್ರಿಕೆಟರ್ ಆಗಬೇಕು ಎಂದು ಆದಿತ್ಯ ಧಾರ್ ಕನಸು ಕಂಡಿದ್ದರು. ಟೀಂ ಇಂಡಿಯಾದ ಅಂಡರ್ 19 ತಂಡವನ್ನು ಪ್ರತಿನಿಧಿಸುವ ಕನಸನ್ನು ಅವರು ಕಂಡಿದ್ದರು. ಆದರೆ, ಕನಸು ಈಡೇರಲಿಲ್ಲ. ಈ ಹಿನ್ನೆಲೆಯಲ್ಲಿ ಆದಿತ್ಯ ಧಾರ್ ಅವರು ನಿರ್ದೇಶನಕ್ಕೆ ಬಂದರು. ಇಲ್ಲಿಯೂ ಅವರ ಜರ್ನಿ ಸುಲಭದಲ್ಲಿ ಇರಲಿಲ್ಲ. ಅವರ ಸ್ಕ್ರಿಪ್ಟ್​​ಗಳನ್ನು ಕದಿಯಲಾಗಿತ್ತಂತೆ. ಈ ಬಗ್ಗೆ ಅವರೇ ಹೇಳಿಕೊಂಡಿದ್ದರು. ಆ ಸಂದರ್ಭದ ವಿಡಿಯೋ ಗಮನ ಸೆಳೆದಿದೆ.

ಆದಿತ್ಯ ಧಾರ್ ಅವರು ಮೊದಲು ನಿರ್ದೇಶನ ಮಾಡಿದ ಸಿನಿಮಾ ಎಂದರೆ ಅದು 2019ರ ‘ಉರಿ’. ಆ ಬಳಿಕ ಅವರು 2024ರ ‘ಆರ್ಟಿಕಲ್ 370’ ಚಿತ್ರಕ್ಕೆ ಬರಹಗಾರನಾಗಿ ಕೆಲಸ ಮಾಡಿದರು. ಈ ಚಿತ್ರದ ನಿರ್ಮಾಣ ಕೂಡ ಅವರದ್ದೇ. 2025ರಲ್ಲಿ ಬಂದ ‘ಬಾರಾಮುಲ್ಲ’ ಚಿತ್ರವನ್ನು ಅವರೇ ನಿರ್ಮಾಣ ಮಾಡಿದರು. 2025ರಲ್ಲಿ ಬಂದ ‘ಧುರಂಧರ್’ ಹಾಗೂ 2026ರ ‘ಧುರಂಧರ್ 2’ ಚಿತ್ರಗಳ ನಿರ್ದೇಶನ ಆದಿತ್ಯ ಧಾರ್ ಮಾಡಿದರು.

ಈ ಮೊದಲು ಆದಿತ್ಯ ಧಾರ್ ಅವರು ತಮ್ಮ ಜರ್ನಿ ಬಗ್ಗೆ ಮಾತನಾಡಿದ್ದರು. ‘ನನ್ನ ಪ್ರಯಾಣದಲ್ಲಿ ಸಾಕಷ್ಟು ಮೋಸಗಳನ್ನು ಎದುರಿಸಿದ್ದೇನೆ. ಸ್ಕ್ರಿಪ್ಟ್ ಕದ್ದು ಸಿನಿಮಾ ಮಾಡಿದರು. ಅದು ನೂರು ಕೋಟಿ ರೂಪಾಯಿ ಕಲೆಕ್ಷನ್ ಮಾಡಿತು. ನನಗೆ ಸಾಕು ಎನಿಸಿತು. ಆಗ ಕೆಲವರು, ನೀವು ಮಾಡ್ತೀರಾ ಎಂದು ಕೆಲವರು ಬೆಂಬಲ ನೀಡುತ್ತಿದ್ದರು’ ಎಂದಿದ್ದರು ಅವರು.

ಇದನ್ನೂ ಓದಿ: ‘ಧುರಂಧರ್ 2’ ಚಿತ್ರದಲ್ಲಿ ಆದಿತ್ಯ ಧಾರ್​ ಮಾಡಿದ್ರು ದೊಡ್ಡ ತಪ್ಪು; ವೈರಲ್ ಆಯ್ತು ಪೋಸ್ಟ್

‘ಸಿನಿಮಾ ಜರ್ನಿಯಲ್ಲಿ ನನ್ನ ಹಲವು ಸಿನಿಮಾಗಳು ಅರ್ಧಕ್ಕೆ ನಿಂತಿವೆ. 15 ದಿನಕ್ಕೆ ಸಿನಿಮಾ ಶೂಟ್ ಆರಂಭ ಆಗಬೇಕಿರುತ್ತದೆ. ಆದರೆ, ಅರ್ಧಕ್ಕೆ ನಿಂತಿತ್ತು. ಜೀವನ ಪೂರ್ತಿ ನೆನಪಿಟ್ಟುಕೊಳ್ಳಯವಂತೆ ಕೊಡ್ತಾನೆ ಅನ್ನೋದು ನನ್ನ ಅಮ್ಮನ ಮಾತಾಗಿತ್ತು. ದೇವರು ಚಾನ್ಸ್ ಕೊಡ್ತಾನೆ. ಆ ಚಾನ್ಸ್ 3 ವರ್ಷದಲ್ಲಿ ಬೇಕಾದರೂ ಬರಬಹುದು, 30 ವರ್ಷದಲ್ಲಿ ಬೇಕಿದ್ದರೂ ಬರಬಹುದು. 30 ವರ್ಷ ಬಿಟ್ಟು ಬಂದರೆ ಅದ ಮೌಲ್ಯ ಕೂಡ ಹೆಚ್ಚಿರುತ್ತದೆ. ನಿನ್ನ ಚಾನ್ಸ್​​​ಗಾಗಿ ಕಾಯಿರಿ’ ಎಂದು ಆದಿತ್ಯ ಧಾರ್ ಹೇಳಿದ್ದರು. ಅವರ ಮಾತು ನಿಜವಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಚಿಕ್ಕೋಡಿ ಕಾಡಸಿದ್ದೇಶ್ವರ ಮಠಕ್ಕೆ ಮೋಹನ್ ಭಾಗವತ್​ ಭೇಟಿ: ಶ್ರೀಗಳ ನೇತೃತ್ವದಲ್ಲಿ ತುಲಾಭಾರ

ಬೆಳಗಾವಿ, ಮಾರ್ಚ್​ 28: ಜಿಲ್ಲೆಯ ಚಿಕ್ಕೋಡಿ ತಾಲೂಕಿನ‌ ಯಡೂರ ಗ್ರಾಮದ ಕಾಡಸಿದ್ದೇಶ್ವರ ಮಠದಲ್ಲಿ ನಡೆದ ವಿದ್ಯಾರ್ಥಿಗಳ ಯುವ ಸಮಾವೇಶದಲ್ಲಿ ಆರ್​​ಎಸ್​ಎಸ್​ ಮುಖ್ಯಸ್ಥ ಮೋಹನ್ ಭಾಗವತ್​​ ಭಾಗವಹಿಸಿದ್ದರು. ಬಳಿಕ ಚಿಕ್ಕೋಡಿ ತಾಲೂಕಿನ ಯಡೂರಿನ ಕಾಡಸಿದ್ದೇಶ್ವರ ಮಠದಿಂದ ಮೋಹನ್ ಭಾಗವತ್​​​ರ ತುಲಾಭಾರ ಮಾಡಲಾಗಿದೆ. ಶ್ರೀಶೈಲ ಜಗದ್ಗುರು ಚನ್ನರಾಮಸಿದ್ಧ ಶ್ರೀಗಳ ನೇತೃತ್ವದಲ್ಲಿ ಗೋವುಗಳಿಗೆ ನೀಡುವ ಆಹಾರ ಪದಾರ್ಥಗಳಿಂದ ತುಲಾಭಾರ ಮಾಡಲಾಗಿದೆ. ಬಳಿಕ ಮೋಹನ್ ಭಾಗವತ್ ಗೋವುಗಳಿಗೆ ಮೇವು ಹಾಕಿ ಗೋ ಪೂಜೆ ನೆರವೇರಿಸಿದರು.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

Exit mobile version