ಶಾಸಕ ಯತ್ನಾಳ್​​ ಪುತ್ರನ ಆರತಕ್ಷತೆಯಲ್ಲಿ ಜನವೋ ಜನ!: ವಿವಿಧ ಗಣ್ಯರು, ಮಠಾಧೀಶರು ಭಾಗಿ

ವಿಜಯಪುರ, ಮಾರ್ಚ್​​ 15: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪುತ್ರ ರಾಮನಗೌಡ ಅವರ ಅದ್ದೂರಿ ವಿವಾಹ ಆರತಕ್ಷತೆ ಕಾರ್ಯಕ್ರಮವು ವಿಜಯಪುರದ ಬಿಎಲ್‌ಡಿಇ ಸಂಸ್ಥೆಯ ಆವರಣದಲ್ಲಿ ವಿಜೃಂಭಣೆಯಿಂದ ಜರುಗಿತು. ರಾಮನಗೌಡ ಹಾಗೂ ಅಬೋಲಿ ಅವರ ವಿವಾಹೋತ್ಸವದ ಆರತಕ್ಷತೆಯಲ್ಲಿ ಅಪಾರ ಸಂಖ್ಯೆಯ ಜನರು ಪಾಲ್ಗೊಂಡಿದ್ದರು. ನಾಡಿನ ವಿವಿಧ ಮಠಾಧೀಶರು, ರಾಜಕಾರಣಿಗಳು ಹಾಗೂ ಅನೇಕ ಗಣ್ಯ ವ್ಯಕ್ತಿಗಳು ಆಗಮಿಸಿ ನೂತನ ದಂಪತಿಗಳನ್ನು ಶುಭ ಹಾರೈಸಿದ್ದಾರೆ. ಮಂತ್ರ-ಘೋಷಗಳ ಮಧ್ಯೆ ವಧು-ವರರು ಪರಸ್ಪರ ಹಾರ ಬದಲಾಯಿಸಿಕೊಂಡಿದ್ದು, ಕಾರ್ಯಕ್ರಮದಲ್ಲಿ ಶಾಸಕ ಯತ್ನಾಳ್ ಅವರ ನೃತ್ಯ ವಿಶೇಷವಾಗಿತ್ತು….

Read More

Video: ನಡುರಸ್ತೆಯಲ್ಲೇ ಕೋಪಿಸಿಕೊಂಡ ಮಗಳನ್ನು ರಮಿಸಿ ಸಮಾಧಾನ ಪಡಿಸಿದ ತಂದೆ

ತಂದೆ ಮಗಳ ಬಾಂಧವ್ಯಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಮಗಳ ಪಾಲಿಗೆ ಅಪ್ಪ (father) ಎಲ್ಲವೂ ಆಗಿರುತ್ತಾನೆ. ಇತ್ತ ಕಷ್ಟಪಟ್ಟು ದುಡಿದು ಮಗಳ ಇಷ್ಟಗಳನ್ನು ಈಡೇರಿಸುವ ಅಪ್ಪನಿಗೆ ಆಕೆಗಿಂತ ದೊಡ್ಡ ಪ್ರಪಂಚ ಬೇರೆ ಇಲ್ಲ. ಮಗಳ ಖುಷಿಯಲ್ಲೇ ತನ್ನ ಖುಷಿ ಕಾಣುವ ತಂದೆಯ ಹೃದಯ ಸ್ಪರ್ಶಿ ವಿಡಿಯೋಗಳನ್ನು ನೀವು ನೋಡಿರುತ್ತೀರಿ. ಆದರೆ  ಪುಟಾಣಿಯೊಂದು ನಡುರಸ್ತೆಯಲ್ಲೇ ತಂದೆಯ ಮೇಲೆ ಕೋಪಿಸಿಕೊಂಡಿದೆ. ತಂದೆ ಎಷ್ಟೇ ರಮಿಸಿದ್ರೂ ಈ ಪುಟಾಣಿಯ ಕೋಪ ಮಾತ್ರ ಕಡಿಮೆಯಾಗಿಲ್ಲ. ಈ ಮುದ್ದಾದ ವಿಡಿಯೋ ನೆಟ್ಟಿಗರ ಮೊಗದಲ್ಲಿ ನಗುತರಿಸಿದೆ….

Read More

ಕಾರನ್ನು ಕಾಪಾಡಲು ತನ್ನ ಜೀವವನ್ನೂ ಲೆಕ್ಕಿಸದ ಮಹಿಳೆ!

ನವದೆಹಲಿ, ಏಪ್ರಿಲ್ 9: ಅಲ್ಲಿ ಸಾಲಾಗಿ ಕಾರುಗಳನ್ನು ನಿಲ್ಲಿಸಲಾಗಿತ್ತು. ಅವುಗಳ ಹಿಂದೆ ಎತ್ತರವಾದ ಕಾಂಪೌಂಡ್ ಇತ್ತು. ಶಿಥಿಲವಾಗಿದ್ದ ಆ ಕಾಂಪೌಂಡ್​ ಗೋಡೆ ಇನ್ನೇನು ಬೀಳುವುದರಲ್ಲಿತ್ತು. ಇದರ ಸುಳಿವು ಸಿಕ್ಕೊಡನೆ ಮಹಿಳೆ ಓಡಿಹೋಗಿ ತನ್ನ ಕಾರನ್ನು ಆ ಸ್ಥಳದಿಂದ ತೆಗೆದಿದ್ದಾರೆ. ಆಕೆ ಕಾರನ್ನು ತೆಗೆದ ಕೆಲವೇ ಸೆಕೆಂಡುಗಳಲ್ಲಿ ಆ ಗೋಡೆ ಮಗುಚಿಬಿದ್ದಿದೆ. ಅಲ್ಲಿದ್ದ ಕಾರುಗಳೆಲ್ಲ ಆ ಗೋಡೆಯಡಿ ಹೂತುಹೋಗಿವೆ. ಆ ಮಹಿಳೆ ತನ್ನ ಪ್ರಾಣವನ್ನೂ ಲೆಕ್ಕಿಸದೆ ಕಾರನ್ನು ತೆಗೆಯಲು ಓಡಿರುವ ವಿಡಿಯೋ ವೈರಲ್ ಆಗಿದೆ. ಈ ಘಟನೆ ನಡೆದಿದ್ದು…

Read More

ಯಾರ ಬದಲಿಗೆ ಆಯ್ಕೆಯಾಗಲಿದ್ದಾರೆ ವೈಭವ್ ಸೂರ್ಯವಂಶಿ? – Kannada News | Coach Backs Vaibhav to Replace ‘Inconsistent’ Abhishek Sharma

ಭಾರತೀಯ ಕ್ರಿಕೆಟ್​ನ ಹೊಸ ಸೆನ್ಸೇಷನ್​ ವೈಭವ್ ಸೂರ್ಯವಂಶಿ (Vaibhav Sooryavanshi) ಆರ್ಭಟಕ್ಕೆ ಟೀಮ್ ಇಂಡಿಯಾದ ಸ್ಟಾರ್ ಓಪನರ್ ಸ್ಥಾನಕ್ಕೆ ಕುತ್ತು ಬಂದಿದೆಯೇ? ಸಚಿನ್ ತೆಂಡೂಲ್ಕರ್ ಅವರ ದಾಖಲೆ ಮುರಿಯಲು ಸಜ್ಜಾಗಿರುವ ಈ ‘ವಂಡರ್ ಕಿಡ್’ ಎಂಟ್ರಿಯಿಂದ ಅಭಿಷೇಕ್ ಶರ್ಮಾ ಹೊರಬೀಳುತ್ತಾರಾ? ಇಂತಹ ಪ್ರಶ್ನೆಗಳು ಹುಟ್ಟಿಕೊಳ್ಳಲು ಮುಖ್ಯ ಕಾರಣ ಇತ್ತೀಚೆಗೆ ವೈಭವ್ ಸೂರ್ಯವಂಶಿ ಅವರ ಬಾಲ್ಯದ ಕೋಚ್ ಮನೀಶ್ ಓಜಾ ನೀಡಿದ ಹೇಳಿಕೆಗಳು. ಐಪಿಎಲ್ 2026ರಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಅಬ್ಬರಿಸುತ್ತಿರುವ ಈ ಯುವ ಆಟಗಾರ, ಶೀಘ್ರದಲ್ಲೇ ಟೀಮ್…

Read More

ತುಂಬ ತಡವಾಗಿದೆ, ಇರಾನ್ ಜೊತೆ ಮಾತುಕತೆ ಸಾಧ್ಯವಿಲ್ಲ; ಟ್ರಂಪ್ ಘೋಷಣೆ – Kannada News | Donald Trump declares too late for talks with Iran as US Israel strikes escalate conflict

ವಾಷಿಂಗ್ಟನ್, ಮಾರ್ಚ್ 3: ಇಂದು ಸಂಜೆ ಡೊನಾಲ್ಡ್ ಟ್ರಂಪ್ (Donald Trump) ಯುದ್ಧದ ಅಂತ್ಯದ ಬಗ್ಗೆ ಮಾತನಾಡಿದ್ದಾರೆ. ಇರಾನ್‌ನ ವಾಯುಪಡೆ ಮತ್ತು ನೌಕಾಪಡೆ ನಾಶವಾಯಿತು. ಇರಾನ್​ನ ಸುಪ್ರೀಂ ಲೀಡರ್ ಅಯತೊಲ್ಲಾ ಅಲಿ ಖಮೇನಿಯಿಂದ ಪ್ರಾರಂಭಿಸಿ ಇರಾನ್​ನ ಎಲ್ಲ ನಾಯಕರನ್ನೂ ಹತ್ಯೆ ಮಾಡಲಾಗಿದೆ. ಹೀಗಾಗಿ ತನ್ನಿಂದ ತಾನಾಗೇ ಯುದ್ಧ ನಿಲ್ಲುತ್ತದೆ. ಈಗಾಗಲೇ ತಡವಾಗಿರುವುದರಿಂದ ಮಾತುಕತೆ ಸಾಧ್ಯವಿಲ್ಲ ಎಂದಿದ್ದಾರೆ. ಸುಪ್ರೀಂ ನ್ಯಾಷನಲ್ ಸೆಕ್ಯುರಿಟಿ ಕೌನ್ಸಿಲ್‌ನ ಪ್ರಭಾವಿ ಮುಖ್ಯಸ್ಥ ಅಲಿ ಲಾರಿಜಾನಿ, ಇರಾನ್ ಅಮೆರಿಕದ ಜೊತೆ ಮಾತುಕತೆ ನಡೆಸುವುದಿಲ್ಲ ಎಂದು ಹೇಳಿದ…

Read More

ಸಂಧಾನ ಮುರಿದುಬಿದ್ದ ಬೆನ್ನಲ್ಲೇ ರಾಕೆಟ್​ನಂತೆ ಮೇಲೇರಿದ ತೈಲ ಬೆಲೆ

ನವದೆಹಲಿ, ಏಪ್ರಿಲ್ 13: ಅಮೆರಿಕ ಮತ್ತು ಇರಾನ್ ನಡುವೆ ರಾಜಿ ಸಂಧಾನಕ್ಕಾಗಿ ನಡೆದ ಮಾತುಕತೆ ಮುರಿದುಬಿದ್ದ ಬೆನ್ನಲ್ಲೇ ನಿರೀಕ್ಷೆಯಂತೆ ತೈಲ ಬೆಲೆಗಳು (crude oil prices) ಜಿಗಿತ ಕಂಡಿವೆ. ಕಚ್ಚಾ ತೈಲ ಬೆಲೆಗಳು ಮತ್ತೆ 100 ಡಾಲರ್ ಗಡಿ ದಾಟಿವೆ. ತೈಲ ಬೆಲೆ ಸೋಮವಾರ ಶೇ. 11ರಷ್ಟು ಹೆಚ್ಚಾಗಿ ಬ್ಯಾರಲ್​ಗೆ 105 ಡಾಲರ್ ಆಸುಪಾಸಿನಷ್ಟಿದೆ. ಡಬ್ಲ್ಯುಟಿಐ ಫ್ಯೂಚರ್ಸ್​ನಲ್ಲಿ ಒಂದು ಬ್ಯಾರಲ್ ಕಚ್ಚಾ ತೈಲದ ಬೆಲೆ 104.25 ಡಾಲರ್​ಗೆ ಏರಿದೆ. ಬ್ರೆಂಟ್ ಕ್ರ್ಯೂಡ್​ನಲ್ಲಿ 101 ಡಾಲರ್ ಬೆಲೆ ಇದೆ….

Read More

ಹಿಂದೂ ದೇವಾಲಯಗಳಲ್ಲಿರುವ ಚಿನ್ನವನ್ನು ಸಾರ್ವಜನಿಕ ಉದ್ದೇಶಕ್ಕೆ ಬಳಸಿ: ಫಾದರ್ ಪೌಲ್ – Kannada News | Church vs Temple Assets: FCRA Bill Fuels Religious Controversy Over Foreign Funds

ಕೊಚ್ಚಿ, ಏ.20: ವಿದೇಶಿ ದೇಣಿಗೆ (ನಿಯಂತ್ರಣ) ತಿದ್ದುಪಡಿ (FCRA) ಮಸೂದೆಗೆ ಸಂಬಂಧಿಸಿದಂತೆ ಸಿರೋ-ಮಲಬಾರ್ ಚರ್ಚಿನ ಧರ್ಮಗುರು ಫಾದರ್ ಪಾಲ್ ತೇಲಕ್ಕಾಟ್ ನೀಡಿರುವ ಹೇಳಿಕೆ ಈಗ ಹೊಸ ವಿವಾದಕ್ಕೆ ನಾಂದಿ ಹಾಡಿದೆ. “ಕ್ರೈಸ್ತ ಚರ್ಚ್‌ಗಳು ದೇವಸ್ಥಾನಗಳಂತೆ ಹಣ ಅಥವಾ ಆಸ್ತಿಯನ್ನು ಕೂಡಿಡುವುದಿಲ್ಲ” ಎಂಬ ಅವರ ಹೇಳಿಕೆ ಹಿಂದೂ ಸಂಘಟನೆಗಳ ತೀವ್ರ ಆಕ್ರೋಶಕ್ಕೆ ಗುರಿಯಾಗಿದೆ. ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಫಾದರ್ ಪಾಲ್ ತೇಲಕ್ಕಾಟ್ ವಿವಾದತ್ಮಕ ಹೇಳಿಕೆ ನೀಡಿದ್ದಾರೆ. ಚರ್ಚ್‌ಗಳು ತಮ್ಮಲ್ಲಿರುವ ಹಣವನ್ನು ಶಿಕ್ಷಣ, ಆರೋಗ್ಯ ಮತ್ತು ಸಾರ್ವಜನಿಕ ಸೇವೆಗೆ ಬಳಸುತ್ತವೆ….

Read More

ಹೆಚ್ಚು ಬೆವರುತ್ತೀರಾ? ಈ ರೀತಿಯಾಗುವುದಕ್ಕೆ ಕಾರಣ ಏನ್ ಗೊತ್ತಾ? – Kannada News

ಬೆವರುವುದು (Excessive Sweating) ದೇಹದ ಸಹಜ ಪ್ರಕ್ರಿಯೆಯಾಗಿದೆ. ದೇಹದ ಉಷ್ಣತೆಯನ್ನು ನಿಯಂತ್ರಿಸಲು ಬೆವರು ಸಹಾಯ ಮಾಡುತ್ತದೆ. ಬಿಸಿಲು, ವ್ಯಾಯಾಮ ಅಥವಾ ಒತ್ತಡದ ಸಂದರ್ಭಗಳಲ್ಲಿ ಬೆವರು ಬರುವುದು ಸಾಮಾನ್ಯ. ಆದರೆ ಕೆಲವರಿಗೆ ಯಾವುದೇ ಹೆಚ್ಚು ಶಾರೀರಿಕ ಕೆಲಸವಿಲ್ಲದೇ ಹೆಚ್ಚು ಬೆವರು ಬರುವ ಸಮಸ್ಯೆ ಕಾಣಿಸಬಹುದು. ಇದನ್ನು ಸಾಮಾನ್ಯವೆಂದು ನಿರ್ಲಕ್ಷ್ಯ ಮಾಡಬಾರದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಹೆಚ್ಚು ಬೆವರುವುದು ಕೆಲವೊಮ್ಮೆ ದೈನಂದಿನ ಜೀವನ, ಕೆಲಸದ ಸಾಮರ್ಥ್ಯ ಮತ್ತು ಆತ್ಮವಿಶ್ವಾಸದ ಮೇಲೂ ಪರಿಣಾಮ ಬೀರುತ್ತದೆ. ಕೆಲವು ಮಂದಿಗೆ ಕೈಗಳ ತಳಭಾಗ,…

Read More

Love Mocktail 3 Review: ನಗಿಸುತ್ತಾ ಅಳಿಸುವ ತಂದೆ-ಮಗಳ ಎಮೋಷನಲ್ ಕಹಾನಿ

ಡಾರ್ಲಿಂಗ್ ಕೃಷ್ಣ ಅವರು ನಟಿಸಿ, ನಿರ್ದೇಶನ ಮಾಡಿದ ‘ಲವ್ ಮಾಕ್ಟೇಲ್’ ಚಿತ್ರಕ್ಕೆ ಪ್ರತ್ಯೇಕ ಫ್ಯಾನ್ ಬೇಸ್ ಇದೆ. ಇದರ ಮೂರನೇ ಇನ್​ಸ್ಟಾಲ್​ಮೆಂಟ್ ಈಗ ಬಿಡುಗಡೆ ಆಗಿದೆ. ಹೌದು, ಮಾರ್ಚ್ 19ರಂದು ‘ಲವ್ ಮಾಕ್ಟೇಲ್ 3’ (Love Mocktail 3) ತೆರೆಕಂಡಿದೆ. ಟ್ರೇಲರ್​​ನಲ್ಲಿ ಕಥೆಯ ಬಗ್ಗೆ ಹೆಚ್ಚೇನೂ ಬಿಟ್ಟುಕೊಟ್ಟಿರಲಿಲ್ಲ. ಚಿತ್ರಮಂದಿರಕ್ಕೆ ಬಂದ ಪ್ರೇಕ್ಷಕರಿಗೆ ಅಪ್ಪ-ಮಗಳ ಎಮೋಷನಲ್ ಕಹಾನಿ ಕಾಣಿಸುತ್ತದೆ. ಎಮೋಷನಲ್ ದೃಶ್ಯಗಳ ಜೊತೆಗೆ ಕಾಮಿಡಿಗೂ ಕೊರತೆ ಮಾಡಿಲ್ಲ. ‘ಲವ್ ಮಾಕ್ಟೇಲ್ 3’ ವಿಮರ್ಶೆ (Love Mocktail 3 Movie…

Read More

ಶೇರುಗಳಂತೆ ರಿಯಲ್ ಎಸ್ಟೇಟ್ ಆಸ್ತಿಯಲ್ಲಿ ಪಾಲು ಖರೀದಿಸಿ… ಇದು REITs ಮತ್ತು InvITs ಕೊಡುವ ಅವಕಾಶ

ಅಸ್ತಿಯಲ್ಲಿ ಹೂಡಿಕೆImage Credit source: Getty Images ದೊಡ್ಡ ದೊಡ್ಡ ರಿಯಲ್ ಎಸ್ಟೇಟ್ ಪ್ರಾಜೆಕ್ಟ್​ಗಳನ್ನು ನೋಡಿದಾಗ, ‘ವ್ಹಾ, ನಮಗೂ ಇಲ್ಲೆಲ್ಲಿಯಾದರೂ ಒಂದು ಅಡಿ ಜಾಗವಾದರೂ ಬರಬಾರದಾ’ ಎಂದು ಜನಸಾಮಾನ್ಯರು ಅಂದುಕೊಳ್ಳಬಹುದು. ಆದರೆ, ಅಲ್ಲೆಲ್ಲಾ ಚದರಡಿಗೆ ಹಲವು ಸಾವಿರ ರೂಗಳೇ ಆಗುತ್ತವೆ. ಒಂದು ಮನೆ ಖರೀದಿಸಲು ಕೋಟಿ ರೂ ಕೊಟ್ಟರೂ ಸಾಲದು. ಅಷ್ಟೆಲ್ಲಾ ಇನ್ವೆಸ್ಟ್ ಮಾಡಲು ಸಾಮಾನ್ಯರ ಇಡೀ ಜೀವಮಾನದ ಸಂಪಾದನೆ ಬೇಕಾಗುತ್ತದೆ. ಆದರೆ, ಕೆಲ ಹೂಡಿಕೆ ಯಂತ್ರಗಳು ಬಹಳ ಸುಲಭವಾಗಿ ರಿಯಲ್ ಎಸ್ಟೇಟ್ ಮತ್ತು ಇನ್​ಫ್ರಾಸ್ಟ್ರಕ್ಚರ್ ಪ್ರಾಜೆಕ್ಟ್​ಗಳಲ್ಲಿ…

Read More