ಚಪ್ಪಲಿ ಹೊರಗಡೆ ಬಿಡಿ ಅಂದಿದಷ್ಟೇ: ತಂದೆ-ಮಗನಿಂದ ವೈದ್ಯನ ಮೇಲೆ ಮನಸೋ ಇಚ್ಛೆ ಹಲ್ಲೆ – Kannada News | Mysuru Doctor Attacked by Father and Son for Asking to Remove Footwear
ಮೈಸೂರು, ಡಿಸೆಂಬರ್ 19: ಕ್ಷುಲ್ಲಕ ಕಾರಣಕ್ಕೆ ವೈದ್ಯನ ಮೇಲೆ ಅಪ್ಪ, ಮಗ ಹಲ್ಲೆ ನಡೆಸಿರುವ ಘಟನೆ ಮೈಸೂರಿನ ಸಾತಗಳ್ಳಿ ಬಡಾವಣೆಯಲ್ಲಿ ನಡೆದಿದೆ. ಕ್ಲಿನಿಕ್ ಹೊರಭಾಗ ಚಪ್ಪಲಿ ಬಿಟ್ಟು ಬನ್ನಿ ಅಂತಾ ಹೇಳಿದಕ್ಕೆ ಶಿಶು ಆಸ್ಪತ್ರೆಯ ವೈದ್ಯ ಡಾ.ಅನೂಪ್ ಮೇಲೆ ಹಲ್ಲೆ ನಡೆಸಲಾಗಿದೆ. ರುಬಿಯಾಜ್ ಷರೀಫ್, ಆತನ ತಂದೆ ಹಲ್ಲೆ ನಡೆಸಿದ ಆರೋಪಿಗಳಾಗಿದ್ದಾರೆ. ರುಬಿಯಾಜ್ ಷರೀಫ್ರ 3 ವರ್ಷದ ಮಗು ಆಸ್ಪತ್ರೆಗೆ ದಾಖಲಾಗಿದ್ದ ಕಾರಣ ಆಸ್ಪತ್ರೆಗೆ ಆತ ಬಂದಿದ್ದ. ಈ ವೇಳೆ ಚಪ್ಪಲಿ ಧರಿಸಿಯೇ ಒಳಬಂದ ಹಿನ್ನೆಲೆ ಅದನ್ನು…