Headlines

IPL 2026: CSK ಅಭಿಮಾನಿಗಳಿಗೆ ಬಿಗ್ ಶಾಕ್: ಎಂಎಸ್​ ಧೋನಿ ಅಲಭ್ಯ..!

IPL 2026:  ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭಕ್ಕೂ ಮುನ್ನವೇ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಆಘಾತ ಎದುರಾಗಿದೆ. ತಂಡದ ಪ್ರಮುಖ ಆಟಗಾರ ಮಹೇಂದ್ರ ಸಿಂಗ್ ಧೋನಿ (MS Dhoni) ಐಪಿಎಲ್​ನ ಆರಂಭಿಕ ಪಂದ್ಯಗಳಿಂದ ಹೊರಗುಳಿಯುವುದು ಖಚಿತವಾಗಿದೆ. ಎಂ.ಎಸ್. ಧೋನಿ ಅವರು ಸ್ನಾಯು ಸೆಳೆತದ ಸಮಸ್ಯೆಯಿಂದ  ಬಳಲುತ್ತಿದ್ದು, ಈ ಕಾರಣದಿಂದ ಐಪಿಎಲ್​ನ ಮೊದಲ ಎರಡು ವಾರಗಳ ಪಂದ್ಯಗಳಿಂದ ಹೊರಗುಳಿಯಲಿದ್ದಾರೆ ಎಂದು ವರದಿಯಾಗಿದೆ. ಅಂದರೆ ರಾಜಸ್ಥಾನ್ ರಾಯಲ್ಸ್, ಪಂಜಾಬ್ ಕಿಂಗ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯಗಳಿಗೆ ಧೋನಿ…

Read More

‘ನೀವೆಲ್ಲಾ ಟೆರರಿಸ್ಟ್​ಗಳು’: ಮುಸ್ಲಿಮ್ ವಿದ್ಯಾರ್ಥಿಗೆ ಕ್ಲಾಸ್​ನಲ್ಲೇ ಅವಮಾನಿಸಿದ ಪ್ರೊಫೆಸರ್!

ಬೆಂಗಳೂರು, ಮಾರ್ಚ್​ 28: ಪಿಇಎಸ್ ವಿಶ್ವವಿದ್ಯಾಲಯನಲ್ಲಿ ಪ್ರೊಫೆಸರ್ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ. ಬನಶಂಕರಿ ರಿಂಗ್ ರೋಡ್‌ನಲ್ಲಿರುವ ಕ್ಯಾಂಪಸ್‌ನಲ್ಲಿ ಪಾಠ ಮಾಡುತ್ತಿದ್ದ ವೇಳೆ ಕೋಪಗೊಂಡ ಪ್ರೊಫೆಸರ್ ಡಾ. ಮೂರಳಿಧರ ದೇಶಪಾಂಡೆ ತರಗತಿಯಲ್ಲಿದ್ದ ಮುಸ್ಲಿಂ ವಿದ್ಯಾರ್ಥಿಯನ್ನು ‘ಭಯೋತ್ಪಾದಕ’ ಎಂದು ಕರೆದು ಅವಮಾನಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಘಟನೆ ಎರಡು ದಿನಗಳ ಹಿಂದೆ ನಡೆದಿದೆ. ಪಾಠದ ಮಧ್ಯದಲ್ಲಿ ಮಕ್ಕಳ ಗಲಾಟೆಯಿಂದಲೋ ಏನೋ ದೇಶಪಾಂಡೆ ಗರಂ ಆಗಿದ್ದು, ನೀವೆಲ್ಲಾ ಭಯೋತ್ಪಾದಕರು ಎಂದೆಲ್ಲಾ ನಿಂದಿಸಿದ್ದಾರೆ. ಇದೇ ವೇಳೆ ತರಗತಿಯಲ್ಲಿ ಕುಳಿತಿದ್ದ ವಿದ್ಯಾರ್ಥಿಗಳು ತಮ್ಮ…

Read More

Viral: ಇದು ರೈತನ ವಿಭಿನ್ನ ರಾಮನವಮಿ ಸೆಲೆಬ್ರೇಶನ್; ಹೂಕೋಸಿನಲ್ಲಿ ಮೂಡಿ ಬಂದ ರಾಮ, ಸೀತೆ, ಹನುಮಂತ

ಮರ್ಯಾದಾ ಪುರುಷ, ಪುರುಷೋತ್ತಮ ಭಗವಾನ್ ಶ್ರೀ ರಾಮನ (Shri Rama) ಜನ್ಮದಿನವನ್ನು ದೇಶದೆಲ್ಲೆಡೆ ಶ್ರದ್ಧಾಭಕ್ರಿಯಿಂದ ಆಚರಿಸಲಾಗಿದೆ. ಹಿಂದೂಗಳಿಗೆ ಯುಗಾದಿ (Ugadi festival) ವರುಷದ ಮೊದಲ ಹಬ್ಬವಾದರೆ, ತದನಂತರ ಬರುವುದೇ ಈ ರಾಮನವಮಿ (Rama Navami). ಈ ಹಬ್ಬದಂದು ಕೋಟ್ಯಾಂತರ ಭಕ್ತರು ರಾಮನನ್ನು ಪೂಜಿಸಿ, ಆರಾಧಿಸುತ್ತಾರೆ. ಆದರೆ ಇಲ್ಲೊಬ್ಬ ರೈತನು ತಾನು ಬೆಳೆದ ಹೂಕೋಸಿನಲ್ಲಿ ರಾಮ, ಸೀತೆ ಹನುಮಂತನ ಚಿತ್ರ ಬಿಡಿಸಿದ ರಾಮನವಮಿಯನ್ನು ಸಂಭ್ರಮಿಸಿದ್ದಾನೆ. ಈ ಪೋಸ್ಟ್ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಮೆಚ್ಚುಗೆಗೆ ಪಾತ್ರವಾಗಿದೆ. ನಂದಿನಿ…

Read More

ರಚಿತಾ ರಾಮ್​ಗೆ ಹಾಡಿನ ಮೂಲಕ ಪ್ರಪೋಸ್ ಮಾಡಿದ ಸಿದ್ದೇಗೌಡ್ರು

‘ಲಕ್ಷ್ಮೀ ನಿವಾಸ’ ಧಾರಾವಾಹಿಯಲ್ಲಿ ಸಿದ್ದೇಗೌಡ್ರು ಹೆಸರಿನ ಪಾತ್ರವನ್ನು ಧನಂಜಯ್ ಮಾಡುತ್ತಿದ್ದಾರೆ. ಅವರು ಯುವ ಕಲಾವಿದ. ಈಗ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ವೇದಿಕೆ ಮೇಲೆ ರಚಿತಾ ರಾಮ್​​ಗೋಸ್ಕರ ಅವರು ಕವಿಯಾಗಿದ್ದಾರೆ. ಸಾಲುಗಳ ಮೂಲಕ ರಚಿತಾಗೆ ಪ್ರಪೋಸ್ ಮಾಡಿದ್ದಾರೆ. ಈ ವಿಡಿಯೋ ಗಮನ ಸೆಳೆದಿದೆ. ಸಿದ್ದೇಗೌಡ್ರ ಸಾಲುಗಳು ಗಮನ ಸೆಳೆದಿವೆ. ಆ ಸಂದರ್ಭದ ವಿಡಿಯೋ ಮೇಲಿದೆ ನೋಡಿ. ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ. Source link

Read More

ರವಿಶಂಕರ್ ಗುರೂಜಿ ವಿರುದ್ಧದ ಭೂ ಕಬಳಿಕೆ ಪ್ರಕರಣ ರದ್ದು: ಹೈ ಕೋರ್ಟ್ ಮಹತ್ವದ ತೀರ್ಪು!

ಬೆಂಗಳೂರು, ಮಾರ್ಚ್​ 28: ರವಿಶಂಕರ್ ಗುರೂಜಿ (Shri Shri Ravi Shankar Guruji) ವಿರುದ್ಧದ ಭೂ ಕಬಳಿಕೆ ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ನ್ಯಾ. ಎಂ ನಾಗಪ್ರಸನ್ನ ಅವರಿದ್ದ ಪೀಠ, ರವಿಶಂಕರ್ ವಿರುದ್ಧ ಯಾವುದೇ ಸ್ಪಷ್ಟ ಆರೋಪಗಳಿಲ್ಲದೆ ಪ್ರಕರಣ ಮುಂದುವರಿಸುವುದು ಕಾನೂನು ಪ್ರಕ್ರಿಯೆಯ ದುರುಪಯೋಗವಾಗುತ್ತದೆ ಎಂದು ತಿಳಿಸಿ ಬೆಂಗಳೂರು ಮಹಾನಗರ ಟಾಸ್ಕ್ ಫೋರ್ಸ್ ದಾಖಲಿಸಿದ್ದ ಪ್ರಕರಣವನ್ನು ರದ್ದುಪಡಿಸಿದೆ. ಸ್ಪಷ್ಟ ಆರೋಪವಿಲ್ಲ, ಸಾಕ್ಷಿಗಳಿಲ್ಲ! ಬೆಂಗಳೂರು ಮಹಾನಗರ ಟಾಸ್ಕ್ ಫೋರ್ಸ್ 19 ಸೆಪ್ಟೆಂಬರ್ 2025ರಂದು ಕರ್ನಾಟಕ ಭೂ…

Read More

IPL 2026: ಐಪಿಎಲ್​ನಲ್ಲಿ ‘ಬಾಡಿ ಕಂಟ್ರೋಲ್’ ನಿಯಮ ಜಾರಿ

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ ಸೀಸನ್-19ರ ಮೊದಲ ಪಂದ್ಯದ ಮೂಲಕ ‘ಬಾಡಿ ಕಂಟ್ರೋಲ್’ ನಿಯಮವನ್ನು ಪರಿಚಯಿಸಲಾಗುತ್ತಿದೆ. ಇಂದು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿರುವ RCB ಮತ್ತು SRH ನಡುವಣ ಪಂದ್ಯದ ಮೂಲಕ ಈ ನಿಯಮವನ್ನು ಜಾರಿಗೊಳಿಸಲಾಗುತ್ತದೆ. ಈ ನಿಯಮವು ಫೀಲ್ಡರ್​ಗಳ ಮೇಲೆ ನೇರ ಪರಿಣಾಮ ಬೀರಲಿದೆ. ಏನಿದು ಬಾಡಿ ಕಂಟ್ರೋಲ್ ನಿಯಮ? ಬಾಡಿ ಕಂಟ್ರೋಲ್ ಎಂಬುದು ದೇಹದ ಮೇಲಿನ ನಿಯಂತ್ರಣ. ಅಂದರೆ ಇಲ್ಲಿ ಈ ನಿಯಮವನ್ನು ಫೀಲ್ಡರ್​ಗಳಿಗಾಗಿ ಪರಿಚಯಿಸಲಾಗುತ್ತಿದೆ. ಅದರಲ್ಲೂ ಮುಖ್ಯವಾಗಿ ಕ್ಯಾಚ್ ಹಿಡಿದಾಗ ಈ…

Read More

Vaidurya Gemstone: ಕೇತು ದೋಷದಿಂದ ಮುಕ್ತಿ ಮತ್ತು ಹಠಾತ್ ಸಂಪತ್ತು ಪಡೆಯಲು ಈ ರತ್ನ ಧರಿಸಿ

ಜ್ಯೋತಿಷ್ಯ ಶಾಸ್ತ್ರದಲ್ಲಿ ಕೇತುವನ್ನು ಮೋಕ್ಷ ಕಾರಕ, ಆಧ್ಯಾತ್ಮಿಕತೆಯ ಅಧಿಪತಿ ಮತ್ತು ಹಠಾತ್ ಘಟನೆಗಳ ಪ್ರೇರಕ ಎಂದು ಕರೆಯಲಾಗುತ್ತದೆ. ಜಾತಕದಲ್ಲಿ ಕೇತು ದುರ್ಬಲನಾಗಿದ್ದಾಗ ಅಥವಾ ಕೇತು ಮಹಾದಶೆ ನಡೆಯುತ್ತಿರುವಾಗ ಜೀವನದಲ್ಲಿ ಅನಿರೀಕ್ಷಿತ ಏರಿಳಿತಗಳು ಎದುರಾಗುವುದು ಸಹಜ. ಇಂತಹ ಸಂದರ್ಭದಲ್ಲಿ ವೈಡೂರ್ಯ ಅಥವಾ ‘ಬೆಕ್ಕಿನ ಕಣ್ಣಿನ ರತ್ನ’ವು ಕೇವಲ ಒಂದು ಆಭರಣವಾಗಿ ಉಳಿಯದೆ, ಧರಿಸಿದವರ ಪಾಲಿಗೆ ರಕ್ಷಣಾತ್ಮಕ ಗುರಾಣಿಯಾಗಿ ಕಾರ್ಯನಿರ್ವಹಿಸುತ್ತದೆ. ಇದು ವ್ಯಕ್ತಿಯನ್ನು ದುಷ್ಟ ಶಕ್ತಿಗಳಿಂದ ಕಾಪಾಡುವುದಲ್ಲದೆ, ಆರ್ಥಿಕ ಸ್ಥಿರತೆಯನ್ನು ತಂದುಕೊಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ವೈಡೂರ್ಯ ರತ್ನದಿಂದ ಲಭಿಸುವ…

Read More

ರಸ್ತೆ ಇಲ್ಲ, ವಿದ್ಯುತ್ ಸಂಪರ್ಕವಿಲ್ಲ! ಮೂಲಭೂತ ಸೌಕರ್ಯವಿಲ್ಲದೆ ಕಾಡಂಚಿನ ಜನರು ಕಂಗಾಲು

ಚಾಮರಾಜನಗರ, ಮಾರ್ಚ್​ 28: ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬರಗಿ ಗ್ರಾಮ ಮೂಲಭೂತ ಸೌಕರ್ಯಗಳ ಕೊರತೆಯಿಂದ ನರಕಯಾತನೆ ಅನುಭವಿಸುತ್ತಿದೆ. ಗ್ರಾಮಕ್ಕೆ ವಿದ್ಯುತ್ ಸಂಪರ್ಕವಿಲ್ಲದೆ ಕತ್ತಲಲ್ಲಿ ಜೀವನ ಸಾಗುತ್ತಿದೆ. ರಸ್ತೆ ಇಲ್ಲದ ಕಾರಣ ಅನಾರೋಗ್ಯ ಸಂದರ್ಭದಲ್ಲಿ ರೋಗಿಗಳನ್ನು ಡೋಲಿಯಲ್ಲಿ 8 ಕಿಮೀ ದೂರ ಸಾಗಿಸಲು ಗ್ರಾಮಸ್ಥರು ಸಂಕಷ್ಟ ಅನುಭವಿಸುತ್ತಿದ್ದಾರೆ. ಆಂಬ್ಯುಲೆನ್ಸ್ ಸೇವೆ ಸಿಗದಿರುವುದು ಗರ್ಭಿಣಿಯರ ಪರಿಸ್ಥಿತಿಯನ್ನು ಮತ್ತಷ್ಟು ಗಂಭೀರಗೊಳಿಸಿದೆ. ಸಾರಿಗೆ ಬಸ್ ಇಲ್ಲದೆ ವಿದ್ಯಾರ್ಥಿಗಳು ಶಾಲೆ, ಕಾಲೇಜಿಗೆ ಹೋಗಲು ಸಾಧ್ಯವಾಗದೆ 5ನೇ ತರಗತಿವರೆಗೆ ಮಾತ್ರ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಚುನಾವಣೆಯ ಸಮಯದಲ್ಲಿ…

Read More

ಭಾರತಕ್ಕೆ ಶಾಕ್ ನೀಡಲಿದೆಯೇ ರಷ್ಯಾ? ಏಪ್ರಿಲ್ 1 ರಿಂದ ಕಚ್ಚಾ ತೈಲ ರಫ್ತು ಸ್ಥಗಿತ!

ನವದೆಹಲಿ, ಮಾರ್ಚ್ 28: ಇರಾನ್-ಇಸ್ರೇಲ್-ಅಮೆರಿಕ ಯುದ್ಧ ಮುಗಿಯುವ ಲಕ್ಷಣ ಗೋಚರಿಸುತ್ತಿಲ್ಲ. ಮತ್ತೊಂದೆಡೆ, ಎಲ್​ಪಿಜಿ ಗ್ಯಾಸ್ ಹಾಗೂ ಪೆಟ್ರೋಲಿಯಂ ಉತ್ಪನ್ನಗಳ ಕೊರತೆ ಹಾಗೂ ಜಾಗತಿಕ ಬಿಕ್ಕಟ್ಟು ಎದುರಾಗಿದೆ. ಈ ಎಲ್ಲ ಬೆಳವಣಿಗೆಗಳ ಮಧ್ಯೆಯೇ ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸುವಂತಹ ನಿರ್ಧಾರವೊಂದನ್ನು ರಷ್ಯಾ (Russia) ಕೈಗೊಂಡಿದೆ. ಏಪ್ರಿಲ್ 1 ರಿಂದ ಕಚ್ಚಾ ತೈಲ ರಫ್ತನ್ನು (Crude Oil Export Ban) ಸ್ಥಗಿತಗೊಳಿಸಲು ರಷ್ಯಾ ಮುಂದಾಗಿದ್ದು, ಜುಲೈ 31 ರ ವರೆಗೆ ಇದು ಜಾರಿಯಲ್ಲಿರಲಿದೆ. ರಷ್ಯಾದ ಈ ನಿರ್ಧಾರ ಭಾರತದ…

Read More

ಅಂತ್ಯಕಂಡ ‘ಲವ್ ಮಾಕ್ಟೇಲ್ 3’ ವಿವಾದ; ಕ್ಷಮೆ ಕೇಳಿ ಪ್ರಕರಣ ಸುಖಾಂತ್ಯ

‘ಲವ್ ಮಾಕ್ಟೇಲ್ 3’ (Love Mocktail 3) ಚಿತ್ರದ ಕಥೆ ನಮ್ಮದು ಎಂದು ಗುರು ದೇಶಪಾಂಡೆ ಆರೋಪ ಮಾಡಿದ್ದರು. ಗುರು ದೇಶಪಾಂಡೆ ಆರೋಪ ಸುಳ್ಳು ಎಂದು ಹೇಳಿದ್ದ ಕೃಷ್ಣ, ಅವರ ಮೇಲೆ ಮಾನನಷ್ಟ ಮೊಕದ್ದಮೆ ಹೂಡೋದಾಗಿಯೂ ಎಚ್ಚರಿಸಿದ್ದು. ಅಲ್ಲದೆ ಸುದ್ದಿಗೋಷ್ಠಿ ವೇಳೆ ಗುರು ಅವರ ವೈಯಕ್ತಿಕ ವಿಷಯಗಳನ್ನು ಎಳೆದು ತಂದಿದ್ದರು. ಈಗ ಈ ವಿವಾದ ಸುಖಾಂತ್ಯವಾಗಿದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನಡೆದ ಸಭಯೆಲ್ಲಿ ಪ್ರಕರಣ ಇತ್ಯರ್ಥವಾಗಿದೆ. ‘ಲವ್ ಮಾಕ್ಟೇಲ್ 3’ ಸಿನಿಮಾದ ದ್ವಿತೀಯಾರ್ಧದಲ್ಲಿ ಕೋರ್ಟ್ ರೂಂ…

Read More