ಹೊಸ ಹಾಲಿವುಡ್ ಸಿನಿಮಾನಲ್ಲಿ ಪ್ರಿಯಾಂಕಾ ಚೋಪ್ರಾ, ಪೋಸ್ಟರ್ ನೋಡಿ – Kannada News | Priyanka Chopra’s poster from Hollywood movie The Bluff released

ಪ್ರಿಯಾಂಕಾ ಚೋಪ್ರಾ (Priyanka Chopra) ಭಾರತದ ನಟಿಯಾದರೂ ಮಿಂಚುತ್ತಿರುವುದು ಹಾಲಿವುಡ್​​ನಲ್ಲಿ. 2017 ರಲ್ಲಿ ಹಾಲಿವುಡ್​​ಗೆ ಎಂಟ್ರಿ ಕೊಟ್ಟ ಪ್ರಿಯಾಂಕಾ ಆರಂಭದಲ್ಲಿ ಅಷ್ಟೇನೂ ಪ್ರಾಮುಖ್ಯತೆ ಇಲ್ಲದ ಕೆಲವು ಪಾತ್ರಗಳಲ್ಲಿ ನಟಿಸಿದರಾದರೂ ವರ್ಷಗಳು ಕಳೆದಂತೆ ತಮ್ಮನ್ನು ತಾವು ಹಾಲಿವುಡ್​​ನಲ್ಲಿ ಗಟ್ಟಿಯಾಗಿ ನೆಲೆಗೊಳಿಸಿಕೊಂಡಿದ್ದಾರೆ. ಇತ್ತೀಚೆಗಿನ ವರ್ಷಗಳಲ್ಲಿ ಪ್ರಿಯಾಂಕಾ ಚೋಪ್ರಾ ಅವರಿಗೆ ಪ್ರಮುಖ ನಾಯಕಿಯ ಪಾತ್ರಗಳು ಅದರಲ್ಲೂ ಆಕ್ಷನ್ ನಾಯಕಿಯ ಪಾತ್ರಗಳೇ ಹೆಚ್ಚಾಗಿ ಸಿಗುತ್ತಿವೆ. ಸಿನಿಮಾಗಳು ಯಶಸ್ವಿಯೂ ಆಗುತ್ತಿವೆ. ಇದೀಗ ಪ್ರಿಯಾಂಕಾ ಮುಖ್ಯ ಪಾತ್ರದಲ್ಲಿ ನಟಿಸಿರುವ ಮತ್ತೊಂದು ಆಕ್ಷನ್ ಸಿನಿಮಾ ಬಿಡುಗಡೆಗೆ ರೆಡಿಯಾಗಿದ್ದು, ಪೋಸ್ಟರ್ ಬಿಡುಗಡೆ ಆಗಿದೆ.

ಪ್ರಿಯಾಂಕಾ ಚೋಪ್ರಾ ‘ದಿ ಬ್ಲಫ್’ ಹೆಸರಿನ ಆಕ್ಷನ್ ಜಾನರ್​​ನ ಹಾಲಿವುಡ್ ಸಿನಿಮಾನಲ್ಲಿ ನಟಿಸಿದ್ದಾರೆ. ‘ದಿ ಬ್ಲಫ್’ ಸಿನಿಮಾನಲ್ಲಿ ಪ್ರಿಯಾಂಕಾ ಅವರದ್ದು ನಾಯಕಿಯ ಪಾತ್ರ, ಸಿನಿಮಾದ ಪ್ರಧಾನ ಪಾತ್ರವೂ ಅವರದ್ದೆ. ಸಿನಿಮಾನಲ್ಲಿ ಪೈರೇಟ್ (ಕಡಲ್ಗಳ್ಳ) ಪಾತ್ರದಲ್ಲಿ ಪ್ರಿಯಾಂಕಾ ನಟಿಸಿದ್ದಾರೆ. ತಾಯಿಯಾಗಿ ತನ್ನ ಮಗುವನ್ನು ಕಾಪಾಡಿಕೊಳ್ಳುವ ಪೈರೇಟ್ ಪಾತ್ರ ಪ್ರಿಯಾಂಕಾ ಚೋಪ್ರಾ ಅವರದ್ದು. ಸಿನಿಮಾದ ಪೋಸ್ಟರ್ ಇದೀಗ ಬಿಡುಗಡೆ ಆಗಿದ್ದು, ಅದ್ಭುತ ಆಕ್ಷನ್ ಭರಿತ ಸಿನಿಮಾ ಇದೆಂಬುದು ತಿಳಿಯುತ್ತಿದೆ.

ಸಿನಿಮಾದ ವಿಲನ್ ಪಾತ್ರದಲ್ಲಿ ಹಾಲಿವುಡ್​ನ ಖ್ಯಾತ ನಟ ಕಾರ್ಲ್ ಅರ್ಬನ್ ನಟಿಸಿದ್ದಾರೆ. ಈ ಹಿಂದೆ ಅವರು ‘ಥಾರ್’, ‘ಬ್ರೂನೊ: ಸುಪ್ರಿಮಸಿ’, ‘ಲಾರ್ಡ್ ಆಫ್ ದಿ ರಿಂಗ್ಸ್’, ‘ಸ್ಟಾರ್ ಟ್ರೆಕ್’, ‘ಸ್ಟಾರ್ ವಾರ್ಸ್’, ‘ವಾಕಿಂಗ್ ವಿತ್ ಡೈನೋಸಾರ್ಸ್’ ಇನ್ನೂ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ‘ದಿ ಬ್ಲಫ್’ ಸಿನಿಮಾನಲ್ಲಿ ಪ್ರಿಯಾಂಕಾ ಅವರಿಗೆ ಎದುರಾಗಿ ನಟಿಸುತ್ತಿದ್ದಾರೆ. ‘ದಿ ಬ್ಲಫ್’ ಸಿನಿಮಾ ನಿರ್ದೇಶನ ಮಾಡುತ್ತಿರುವುದು ಫ್ರಾಂಕ್ ಇ ಫ್ಲವರ್ಸ್.

ಇದನ್ನೂ ಓದಿ:ದೀಪಿಕಾ ಪಡುಕೋಣೆ ಸ್ಥಾನಕ್ಕೆ ಪ್ರಿಯಾಂಕಾ ಚೋಪ್ರಾ: ಡಬಲ್ ಧಮಾಕ

ಪ್ರಿಯಾಂಕಾ ಚೋಪ್ರಾ ಪ್ರಸ್ತುತ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ರಾಜಮೌಳಿ ನಿರ್ದೇಶನದ ‘ವಾರಣಾಸಿ’ ಸಿನಿಮಾನಲ್ಲಿ ಪ್ರಿಯಾಂಕಾ ಚೋಪ್ರಾ ನಾಯಕಿ. ಅದರ ಹೊರತಾಗಿ ಹಾಲಿವುಡ್ ಆಕ್ಷನ್ ಸಿನಿಮಾ ‘ಜಡ್ಜ್​​ಮೆಂಟಲ್ ಡೇ’ ಸಿನಿಮಾನಲ್ಲಿ ಸಹ ನಟಿಸುತ್ತಿದ್ದಾರೆ. ‘ದಿ ಬ್ಲಫ್’ ಸಿನಿಮಾ ಶೂಟಿಂಗ್ ಮುಗಿದಿದ್ದು, ಸಿನಿಮಾ ಫೆಬ್ರವರಿ ಆರರಂದು ಅಮೆಜಾನ್ ಪ್ರೈಮ್​​ನಲ್ಲಿ ಬಿಡುಗಡೆ ಆಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಶಾಮನೂರು ಶಿವಶಂಕರಪ್ಪ ಕ್ಷೇತ್ರದಲ್ಲಿ ಬೈ ಎಲೆಕ್ಷನ್​: ಕಾಂಗ್ರೆಸ್​​ ಟಿಕೆಟ್​​ ಯಾರಿಗೆ? – Kannada News | Davangere South Bye Election: Minister Zameer Ahmed Demands Congress Ticket for Muslims

ದಾವಣಗೆರೆ, ಜನವರಿ 08: ಶಾಮನೂರು ಶಿವಶಂಕರಪ್ಪ ಅವರ ನಿಧನದಿಂದ ತೆರವಾಗಿರೋ ದಾವಣಗೆರೆ ದಕ್ಷಿಣ ವಿಧಾನ ಸಭಾ ಕ್ಷೇತ್ರದ ಉಪಚುನಾವಣೆ ಕುರಿತು ಸಚಿವ ಜಮೀರ್ ಅಹ್ಮದ್ ಖಾನ್ ಮಹತ್ವದ ಹೇಳಿಕೆ ನೀಡಿದ್ದಾರೆ. ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯ ಮುಸ್ಲಿಂ ಮತದಾರರಿದ್ದು, ಈ ಉಪಚುನಾವಣೆ ಸಂದರ್ಭದಲ್ಲಿ ಅಲ್ಪಸಂಖ್ಯಾತ ಅಭ್ಯರ್ಥಿಗೆ ಟಿಕೆಟ್ ನೀಡುವ ಕುರಿತು ಚರ್ಚೆ ನಡೆದಿದೆ. ಶಾಮನೂರು ಶಿವಶಂಕರಪ್ಪ ಅವರು ಹಿಂದಿನ ಚುನಾವಣೆಯ ಸಂದರ್ಭದಲ್ಲಿ ತಾವು 2023ರ ಚುನಾವಣೆಯನ್ನು ತಮ್ಮ ಕೊನೆಯ ಚುನಾವಣೆ ಎಂದು ಘೋಷಿಸಿದ್ದರು. ಮುಂದಿನ ಚುನಾವಣೆಯಲ್ಲಿ ಅಲ್ಪಸಂಖ್ಯಾತ ಸಮುದಾಯದವರಿಗೆ ಟಿಕೆಟ್ ನೀಡಿ, ಅವರನ್ನು ಗೆಲ್ಲಿಸಿಕೊಂಡು ಬರುವುದಾಗಿ ಅವರು ಸ್ವತಃ ಹೇಳಿದ್ದರು ಎಂದು ಹಲವು ಮುಖಂಡರು ನನಗೆ ವಿಡಿಯೋ ಕ್ಲಿಪ್ ಸಮೇತ ತೋರಿಸಿದ್ದಾರೆ. ಪಕ್ಷದ ಮುಖಂಡರಾದ ಶಾಮನೂರು ಶಿವಶಂಕರಪ್ಪ ಅವರ ಈ ಭರವಸೆಯನ್ನು ಮುಂದಿಟ್ಟುಕೊಂಡು ಅನೇಕರು ನನ್ನನ್ನು ಭೇಟಿ ಮಾಡಿದ್ದಾರೆ. ಆದ್ರೆ ಈ ಕುರಿತು ಅಂತಿಮ ನಿರ್ಧಾರವನ್ನು ಪಕ್ಷದ ಹಿರಿಯ ನಾಯಕರು ಕೈಗೊಳ್ಳಲಿದ್ದಾರೆ ಎಂದು ಜಮೀರ್ ಅಹ್ಮದ್ ಖಾನ್ ಹೇಳಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

Weekly Love Horoscope: ಈ ವಾರ ಈ ರಾಶಿಯವರಿಗೆ ಪ್ರೀತಿಯಲ್ಲಿ ಗಾಢ ಭಾವನೆ ಮತ್ತು ಆತ್ಮೀಯತೆ ಹೆಚ್ಚಾಗಲಿದೆ – Kannada News | Weekly Love Horoscope: Jan 11 17 Zodiac Predictions for Stronger Relationships

ಜನವರಿ 11ರಿಂದ ಜನವರಿ 17ರ ವರೆಗೆ ಪ್ರೇಮವು ವಿವಿಧ ಆಯಾಮಗಳಲ್ಲಿ ವಿಸ್ತರಿಸಬಹುದು. ಆದರೆ ಅವರವರ ಮೇಲೆ ನಿಯಂತ್ರಣದ ಮೇಲೆ ಅದರ ವ್ಯಾಪಕತೆ, ಗುಣಮಟ್ಟದ ನಿರ್ಧಾರವಾಗಲಿದೆ. ಯಾವುದೇ ಆದರು ಮಿತಿಯನ್ನು ಮೀರದಂತೆ ನೋಡಿಕೊಳ್ಳಿ. ಈ ವಾರ ಅನುರಾಗವು ಸರಿಯಾದ ಲಯದಲ್ಲಿ ಇರಲಿ.

ಮೇಷ ರಾಶಿ:

ಈ ವಾರ ನಿಮ್ಮ ಆತ್ಮವಿಶ್ವಾಸ ಪ್ರೀತಿ ಜೀವನಕ್ಕೆ ಬೆಳಕು ತರುವುದು. ಬಹಳ ಸೆರೆಹರಿಸುವ ಬಗೆಗೆ ಅಲ್ಲ, ಆದರೆ ಗಂಭೀರ ಮಾತೃಕೆಯ ಸಂವಾದಗಳು ಸಂಬಂಧವನ್ನು ಗಟ್ಟಿಗೊಳಿಸಬಹುದು. ಹೊಸ ಸಂಪರ್ಕಗಳು ಸಹ ಸ್ಥಿರವಾಗಿ ಪ್ರಗತಿಯಾಗಬಹುದು.

ವೃಷಭ ರಾಶಿ:

ಈ ವಾರ ಪ್ರೀತಿಯ ಕುರಿತು ನಿಶ್ಚಿತ ಭಾವನೆಗಳು ಹೆಚ್ಚಾಗುತ್ತವೆ. ನಿರ್ಧಾರಗಳನ್ನ ತೆಗೆದುಕೊಳ್ಳುವಲ್ಲಿ ಧೈರ್ಯವಿರಲಿ. ಸಂಬಂಧದ ಭರವಸೆಗೆ ಗಮನ ಕೊಡಿ. ಇದರಿಂದ ನಿಮ್ಮ ಜೋಡಿ ಇನ್ನಷ್ಟು ಸ್ಥಿರ ಆಗಬಹುದು.

ಮಿಥುನ ರಾಶಿ:

ವಾರದಲ್ಲಿ ಸಂವಾದಗಳ ಚಲನವಲನ ಹೆಚ್ಚು. ನಿಮ್ಮ ಸಂವಹನ ಸ್ಪಷ್ಟವಾಗಿದ್ದರೆ ಪ್ರೀತಿ ಉತ್ತಮವಾಗಿ ಬೆಳೆದು ಹೋಗಬಹುದು. ಒಪ್ಪಂದ ಅಥವಾ ಭಾವನಾತ್ಮಕ ಏಕಮತಕ್ಕೆ ಹೆಚ್ಚು ಪ್ರಯತ್ನ ಬೇಕಾಗಬಹುದು.

ಕರ್ಕಾಟಕ ರಾಶಿ:

ಈ ವಾರ ನಿಮ್ಮ ಭಾವನಾತ್ಮಕ ಗಂಭೀರತೆ ಪ್ರೇಮ ಸಂಬಂಧದಲ್ಲಿ ಮಹತ್ವದ್ದಾಗಬಹುದು. ಮನಸ್ಸಿನ ಸ್ಥಿರತೆ, ಆತ್ಮೀಯತೆ ಮತ್ತು ಅರ್ಗ್ಯವನ್ನು ಹಂಚಿಕೊಳ್ಳುವಲ್ಲಿ ಹೆಚ್ಚು ಸಮಸ್ಯೆ ಇಲ್ಲದೆ ಸುಂದರ ಗೆಲುವಿಗೆ ಹೋಗಬಹುದು.

ಸಿಂಹ ರಾಶಿ:

ತೀವ್ರ ಆಕರ್ಷಣೆ ಮತ್ತು ಹೆಚ್ಚು ಹಿನ್ನಲೆ ಇಲ್ಲದ ಪ್ರೀತಿ ಚಟುವಟಿಕೆಗಳು ಸಂಭವಿಸಬಹುದು. ಆದರೆ ಹೊಸತಾಗಿ ಆರಂಭಿಸುವ ಪ್ರೀತಿಗೆ ಸ್ವಲ್ಪ ಯೋಚನೆ ಜೊತೆಗೆ ನಿರೀಕ್ಷೆಗಳನ್ನೂ ಜೋಡಿಸಿ.

ಕನ್ಯಾ ರಾಶಿ:

ಸ್ಥಿರತೆ ಮತ್ತು ಕಾರ್ಯನಿರತ ಮನೋಭಾವ ಪ್ರೇಮದಲ್ಲಿ ಹೆಚ್ಚು ಫಲಕಾರಿಯಾಗುತ್ತದೆ. ಸಹಜ ಮತ್ತು ಶಾಂತ ಸಂಬಂಧಗಳಿಗೆ ಅನುಕೂಲ. ತಪ್ಪು ಕಲ್ಪನೆಗಳಿಗೆ ದಾರಿ ಬಿಡಬೇಡಿ.

ತುಲಾ ರಾಶಿ:

ಈ ವಾರ ನೀವು ಪ್ರೀತಿ ವಿಷಯದಲ್ಲಿ ಬಲವಾದ ಸಮತೋಲನಕ್ಕೆ ತಲುಪಬಹುದು. ಸಂವಾದ ಮತ್ತು ಗಂಭೀರ ಚರ್ಚೆಗಳು ಸಂಬಂಧಕ್ಕೆ ಹೊಸ ಅಧ್ಯಾಯಗಳು ತರಬಹುದು.

ವೃಶ್ಚಿಕ ರಾಶಿ:

ಈ ವಾರದಲ್ಲಿ ಉತ್ತಮ ಸಂಪರ್ಕಗಳು, ಆಕರ್ಷಣೆ, ಮತ್ತು ವೈಯಕ್ತಿಕ ಬಾಂಧವ್ಯಗಳ ಗಂಭೀರತೆ ಹೆಚ್ಚುತ್ತದೆ. ಭಾವನಾತ್ಮಕವಾಗಿ ತೆರೆಯಿರಿ, ಆದರೆ ಸ್ವತಂತ್ರತೆಯನ್ನು ಮರೆಯದಿರಿ.

ಧನು ರಾಶಿ:

ಸ್ವಲ್ಪ ತೀವ್ರ ಹಾಗೂ ಮುಕ್ತ ಸಂವಾದಗಳೊಂದಿಗೆ ಪ್ರೀತಿ ಬೆಳವಣಿಗೆ. ಈ ವಾರ ಹೊಸ ಬದ್ಧತೆಗಳಿಗೆ ಅವಕಾಶಗಳು ಕಂಡುಬರುತ್ತವೆ, ಆದರೆ ಸ್ಪಷ್ಟತೆಯಿಲ್ಲದೆ ಹಕ್ಕು ಚಲಾಯಿಸುವುದು ಬೇಡ.

ಮಕರ ರಾಶಿ:

ನೀವು ಪ್ರೀತಿಯನ್ನು ಗಂಭೀರವಾಗಿ ನೋಡುವಿರಿ, ಭರವಸೆಯಿಂದ ಕ್ರಮಗಳನ್ನು ಕೈಗೊಳ್ಳುವಿರಿ. ಈ ವಾರ ಭಾವನಾತ್ಮಕ ವಿಶ್ವಾಸ ಮತ್ತು ದೀರ್ಘಕಾಲೀನ ಬಾಂಧವ್ಯಕ್ಕೆ ಉತ್ತಮ.

ಕುಂಭ ರಾಶಿ:

ನೀವು ಸ್ವತಂತ್ರತೆಯ ಮೇಲೆ ಹೆಚ್ಚು ಶ್ರದ್ಧೆ ಇಡುವಿರಿ, ಆದರೆ ಪ್ರೀತಿ ಸಂಬಂಧದಲ್ಲಿ ಸಹಾನುಭೂತಿ ಮತ್ತು ಗೌರವ ಅಗತ್ಯ. ಹೊಸ ಸಂಪರ್ಕಗಳು ಸಹ ರಚನಾತ್ಮಕವಾಗಿರಬಹುದು.

ಮೀನ ರಾಶಿ:

ಈ ವಾರದ ಪ್ರೀತಿಯಲ್ಲಿ ಗಾಢ ಭಾವನೆಗಳು ಮತ್ತು ಆತ್ಮೀಯತೆ ಹೆಚ್ಚಾಗಬಹುದು. ನಿಮ್ಮ ಸಹಾನುಭೂತಿ ಮತ್ತು ಶ್ರದ್ಧೆಯೊಂದಿಗೆ ಸಂಬಂಧ ಇನ್ನೂ ಗಟ್ಟಿಗೊಳ್ಳಬಹುದು.

– ಲೋಹಿತ ಹೆಬ್ಬಾರ್ – 8762924271 (what’s app only)

Source link

ಗದಗ: ಬಸ್​​ಗಳಿಗೆ ಕ್ಲಚ್ ಇಲ್ಲ, ಬ್ರೇಕ್ ಇಲ್ಲ, ಕಂಡೀಷನ್ ಇಲ್ಲ: ಪ್ರಯಾಣಿಕರ ಜೀವಕ್ಕೆ ದೇವರೇ ಗತಿ – Kannada News | Gadags Dangerous Government Buses: A Deep Dive into Their Unsafe Condition.

ಗದಗ , ಜ.8: ಟಿವಿ9 ಕನ್ನಡ ಮಾಡುತ್ತಿರುವ ಡಕೋಟಾ ಬಸ್ ರಿಯಾಲಿಟಿ ಚೆಕ್ ಅಭಿಯಾನದಲ್ಲಿ ಇದೀಗ ಗದಗ ಜಿಲ್ಲೆಯ ಬಸ್​​ಗಳ ದುಸ್ಥಿತಿ ಬಯಲಾಗಿದೆ. ಗದಗ ನಗರದ ಬಸ್ ನಿಲ್ದಾಣದಲ್ಲಿ ಗದಗ-ಹುಲಕೋಟಿ ಮತ್ತು ಹೊಸಳ್ಳಿಗೆ ಸಂಚರಿಸುವ ಬಸ್ಸುಗಳ ಸ್ಥಿತಿಗತಿ ಆತಂಕಕಾರಿಯಾಗಿದೆ. ಬಸ್​​ಗಳ ಪ್ರಮುಖ ಭಾಗಗಳಾದ ಶಾಕ್ ಅಬ್ಸಾರ್ಬರ್‌ಗಳು ಸಂಪೂರ್ಣವಾಗಿ ಕಿತ್ತು ಹೋಗಿದೆ. ಬಲೂನ್ ರೀತಿಯ ಶಾಕ್ ಅಬ್ಸಾರ್ಬರ್​​ಗಳಿಗೆ ಸಪೋರ್ಟ್ ಆಗಿ ಇರಬೇಕಾದ ಭಾಗಗಳು ಹೊರಬಂದಿವೆ. ಹಿಂಭಾಗದ ಶಾಕ್ ಅಬ್ಸಾರ್ಬರ್‌ಗಳೂ ಕೂಡ ಇದೇ ಸ್ಥಿತಿಯಲ್ಲಿದ್ದು, ಅವುಗಳಿಗೆ ಇರಬೇಕಾದ ಬೆಂಬಲ ಕಳೆದುಹೋಗಿದೆ. ಇಂತಹ ದುಸ್ಥಿತಿಯಲ್ಲೂ ಸಾರಿಗೆ ಇಲಾಖೆಯು ದುರಸ್ತಿ ಕಾರ್ಯಕ್ಕೆ ಮುಂದಾಗಿಲ್ಲ ಎಂದು ವರದಿಯಾಗಿದೆ. ಗದಗ ವಿಭಾಗದಲ್ಲಿ ಸಂಚರಿಸುವ ಬಹುತೇಕ ಬಸ್​​ಗಳು ಹಳೆಯದಾಗಿ, ಸಂಪೂರ್ಣವಾಗಿ ಹಾಳಾಗಿವೆ. ಪ್ರಯಾಣಿಕರ ಜೀವದೊಂದಿಗೆ ಚೆಲ್ಲಾಟವಾಡುತ್ತಿರುವ ಈ ಬಸ್​​ಗಳು ನಿತ್ಯವೂ ಸಾವಿರಾರು ಜನರನ್ನು ಹೊತ್ತೊಯ್ಯುತ್ತವೆ. ವಿಶೇಷವಾಗಿ ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ವಿವಿಧ ಹಳ್ಳಿಗಳಿಂದ ಗದಗಕ್ಕೆ ಮತ್ತು ಗದಗದಿಂದ ವಿವಿಧ ಹಳ್ಳಿಗಳಿಗೆ ಪ್ರಯಾಣಿಸುವವರು ಈ ಅಪಾಯಕಾರಿ ಬಸ್​​ಗಳನ್ನೇ ಅವಲಂಬಿಸಿದ್ದಾರೆ. ಬಸ್​​ಗಳ ಒಳಭಾಗದಲ್ಲಿ ಸೀಟ್‌ಗಳು ಕಿತ್ತುಹೋಗಿದ್ದು, ಕನಿಷ್ಠ ಸೌಜನ್ಯದಿಂದಲೂ ಅವುಗಳನ್ನು ದುರಸ್ತಿ ಮಾಡಿಸುವ ಪ್ರಯತ್ನ ನಡೆದಿಲ್ಲ. ಈ ಬಸ್​​ಗಳ ಚಾಲಕರು ಮತ್ತು ಅಧಿಕಾರಿಗಳು ಕೂಡ ತಮ್ಮ ಅಸಹಾಯಕತೆಯನ್ನು ವ್ಯಕ್ತಪಡಿಸಿದ್ದಾರೆ. ಬಸ್​​ಗಳಿಗೆ ಕ್ಲಚ್ ಇಲ್ಲ, ಬ್ರೇಕ್ ಇಲ್ಲ, ಕಂಡೀಷನ್ ಇಲ್ಲ. ದೇವರೇ ಗತಿ ಎಂದು ನಾವು ಇವುಗಳನ್ನು ಓಡಿಸುತ್ತೇವೆ ಎಂದು ಅವರು ಹೇಳಿದ್ದಾರೆ. ಇಂತಹ ಮಾತುಗಳು ಸಾರಿಗೆ ಇಲಾಖೆಯ ನಿರ್ಲಕ್ಷ್ಯ ಮತ್ತು ನಿರ್ವಹಣಾ ಲೋಪಗಳನ್ನು ಎತ್ತಿ ತೋರಿಸುತ್ತವೆ. ಬಸ್​​ಗಳ ಹಿಂದಿನ ಚಕ್ರಗಳ ಭಾಗದಲ್ಲಿರುವ ಸಪೋರ್ಟಿವ್ ಶಾಕ್ ಅಬ್ಸಾರ್ಬರ್‌ಗಳೂ ಕಿತ್ತುಹೋಗಿದ್ದು, ಇಲಾಖೆಯ ನಿರ್ಲಕ್ಷ್ಯ ಅಥವಾ ಹಣಕಾಸಿನ ಕೊರತೆ ಕುರಿತು ಹತ್ತಾರು ಪ್ರಶ್ನೆಗಳು ಉದ್ಭವಿಸಿವೆ. ಗದಗ ಜಿಲ್ಲೆಯಾದ್ಯಂತ ಸಂಚರಿಸುವ ಈ ಡಕೋಟಾ ಬಸ್​​ಗಳಿಂದ ಜನರು ಬೇಸತ್ತು ಹೋಗಿದ್ದಾರೆ. ಇಂತಹ ಬಸ್​​ಗಳಲ್ಲಿ ಪ್ರಯಾಣಿಸುವುದು ದೊಡ್ಡ ದುರಂತಕ್ಕೆ ಕಾರಣವಾಗಬಹುದು ಎಂಬ ಆತಂಕ ವ್ಯಕ್ತವಾಗಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕಬ್ಬಿನ ಗದ್ದೆಯಲ್ಲಿ ಸುಟ್ಟ ಸ್ಥಿತಿಯಲ್ಲಿ ಮಹಿಳೆಯ ಅರೆ ನಗ್ನ ದೇಹ ಪತ್ತೆ – Kannada News | Uttar Pradesh Burnt Woman’s Body Found In Hapur Sugarcane Field

ಹಾಪುರ್, ಜನವರಿ 08: ಕಬ್ಬಿನ ಗದ್ದೆಯಲ್ಲಿ ಸುಟ್ಟ ಸ್ಥಿತಿಯಲ್ಲಿ ಮಹಿಳೆಯ ಅರೆ ಬೆತ್ತಲೆ ದೇಹ ಪತ್ತೆಯಾಗಿರುವ ಘಟನೆ ಉತ್ತರ ಪ್ರದೇಶ(Uttar Pradesh)ದ ಹಾಪುರ್ ಜಿಲ್ಲೆಯ ಬಹದ್ದೂರ್‌ಗಢ ಪೊಲೀಸ್ ಠಾಣೆ ವ್ಯಾಪ್ತಿಯ ಲಹಾದ್ರಾ ಗ್ರಾಮದಲ್ಲಿ ನಡೆದಿದೆ. ಇಟ್ಟಿಗೆ ಗೂಡುಗಳ ಹಿಂದಿನ ಕಬ್ಬಿನ ಗದ್ದೆಯಲ್ಲಿ ಸುಮಾರು 30 ವರ್ಷ ವಯಸ್ಸಿನ ಮಹಿಳೆಯ  ದೇಹ ಪತ್ತೆಯಾಗಿದೆ.

ಮಹಿಳೆಯ ಮುಖ ಸುಟ್ಟು ಕರಕಲಾಗಿದ್ದು, ಗುರುತು ಪತ್ತೆ ಹಚ್ಚುವುದು ಅಸಾಧ್ಯವಾಗಿತ್ತು. ಗ್ರಾಮಸ್ಥರ ಪ್ರಕಾರ, ಶವ ಗಬ್ಬಿನ ಗದ್ದೆಯಲ್ಲಿ ಪತ್ತೆಯಾಗಿತ್ತು, ನಂತರ ಪೊಲೀಸರಿಗೆ ಮಾಹಿತಿ ನೀಡಲಾಯಿತು. ಹತ್ತಿರದ ರೈತರು ಮತ್ತು ನಿವಾಸಿಗಳು ಸ್ಥಳದಲ್ಲಿ ಜಮಾಯಿಸಿದ್ದರು.

ಪೊಲೀಸರು ಸ್ಥಳಕ್ಕೆ ತಲುಪಿ ಮಹಿಳೆಯ ಗುರುತನ್ನು ಪತ್ತೆ ಹಚ್ಚಲು ಪ್ರಯತ್ನಿಸಿದ್ದಾರೆ. ಆದರೆ ಅದು ವಿಫಲವಾಗಿತ್ತು. ಮಹಿಳೆಯ ಮೇಲೆ ಅತ್ಯಾಚಾರ ಮಾಡಿ ಕೊಲೆ ಮಾಡಲಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ನಂತರ ಸಾಕ್ಷ್ಯಗಳನ್ನು ನಾಶಮಾಡಲು ಆಕೆಯ ದೇಹವನ್ನು ಸುಟ್ಟು ಹಾಕಲಾಗಿದೆ ಎನ್ನುವ ಶಂಕೆ ವ್ಯಕ್ತವಾಗಿದೆ.

ಮತ್ತಷ್ಟು ಓದಿ: ತಿಂಗಳಲ್ಲಿ 15 ದಿನ ಗಂಡನ ಜೊತೆ, 15 ದಿನ ಪ್ರೇಮಿ ಜೊತೆ; ಈ ಮಹಿಳೆಯ ಶೋಕಿಗೆ ಊರವರು ಶಾಕ್!

ಕೊಲೆಯನ್ನು ಬೇರೆಡೆ ಮಾಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ, ಮೃತರ ಗುರುತು ಮರೆಮಾಡಲು ಶವವನ್ನು ಕಬ್ಬಿನ ಗದ್ದೆಗೆ ತರಲಾಗಿದೆ. ಮಹಿಳೆಯ ಬಟ್ಟೆಗಳು ಭಾಗಶಃ ಸುಟ್ಟುಹೋಗಿವೆ ಮತ್ತು ಆಕೆಯ ದೇಹದ ಹಲವಾರು ಭಾಗಗಳಲ್ಲಿ ತೀವ್ರವಾದ ಸುಟ್ಟ ಗಾಯಗಳಿದ್ದವು. ಸುತ್ತಮುತ್ತಲಿನ ಪ್ರದೇಶದಿಂದ ಯಾವುದೇ ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಿಲ್ಲ.

ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ. ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರ ಸಾವಿಗೆ ನಿಖರವಾದ ಕಾರಣ ತಿಳಿದುಬರಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದಕ್ಕೂ ಮೊದಲು, ನಂದಗ್ರಾಮ್‌ನ ರಾಜ್‌ನಗರ ಪ್ರದೇಶದಲ್ಲಿ ಬಾಡಿಗೆ ಮಾಲೀಕರ ಶವ ಸೂಟ್​ಕೇಸ್​​ನಲ್ಲಿ ಪತ್ತೆಯಾಗಿತ್ತು, ಬಾಡಿಗೆ ಕೇಳಿದ್ದಕ್ಕೆ ಅವರನ್ನು ಹತ್ಯೆ ಮಾಡಲಾಗಿತ್ತು. ಅವರು ಬಹಳ ಹೊತ್ತು ಮನೆಗೆ ಹಿಂದಿರುಗದ ಕಾರಣ ಆತಂಕ ಹೆಚ್ಚಾಗಿತ್ತು. ಕೆಲಸದವಳು ಮನೆ ಮಾಲೀಕರ ಶವವನ್ನು ಪತ್ತೆ ಹಚ್ಚಿದ್ದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಈ ಬಾರಿ ಬಹಳ ಜನರಿಗೆ ಸಿಕ್ಕಿಲ್ಲ ಇನ್ಕಮ್ ಟ್ಯಾಕ್ಸ್ ರೀಫಂಡ್; ಏನು ಕಾರಣ? – Kannada News | Many tax payers not yet received Income tax refunds, know the reasons for this delay

ನವದೆಹಲಿ, ಜನವರಿ 8: ಈ ಬಾರಿ ಐಟಿ ರಿಟರ್ನ್ಸ್ (Income Tax) ಸಲ್ಲಿಸಿರುವ ಬಹಳ ತೆರಿಗೆ ಪಾವತಿದಾರರಿಗೆ ರೀಫಂಡ್​ಗಳು ಇನ್ನೂ ಸಿಕ್ಕಿಲ್ಲ ಎಂದು ಹೇಳಲಾಗುತ್ತಿದೆ. ಹಿಂದಿನ ವರ್ಷಗಳಲ್ಲಿ ರೀಫಂಡ್ ಆಗದೇ ಇರುವ ಪ್ರಕರಣಗಳು ಕಡಿಮೆ ಇದ್ದವು. ಈ ವರ್ಷ ಇದು ಹೆಚ್ಚಾಗಿದೆ. ರೀಫಂಡ್​ಗಳು ಬರುವುದಕ್ಕೆ ಇನ್ನೂ ಸಮಯಾವಕಾಶ ಇದೆಯಾದರೂ ಬಹಳ ಜನರು ತಮಗೆ ರೀಫಂಡ್ ಸಿಗುತ್ತೋ ಇಲ್ಲವೋ ಎನ್ನುವ ಆತಂಕದಲ್ಲಿದ್ದಾರೆ.

ಆದಾಯ ತೆರಿಗೆ ಇಲಾಖೆ ಈ ಬಾರಿ ಹಲವು ಐಟಿಆರ್​ಗಳನ್ನು ಕೂಲಂಕಷವಾಗಿ ಪರಿಶೀಲಿಸಲು ಹೆಚ್ಚು ಸಮಯ ತೆಗೆದುಕೊಂಡಿದೆ. ಕಾನೂನು ಪ್ರಕಾರ ಡಿಸೆಂಬರ್ 31ರವರೆಗೂ ಇಲಾಖೆಗೆ ಐಟಿಆರ್​ಗಳ ಪ್ರೋಸಸ್ ಮಾಡಲು ಕಾಲಾವಕಾಶ ಇದೆ. ಹೀಗಾಗಿ, ರೀಫಂಡ್​ಗಳು ವಿಳಂಬವಾಗುವುದು ಸಹಜ.

ಇದನ್ನೂ ಓದಿ: ಕರ್ನಾಟಕದ ಕಾಫಿಗೆ ಯೂರೋಪ್​ನಲ್ಲಿ ಬಲು ಬೇಡಿಕೆ; 2025ರಲ್ಲಿ 2 ಬಿಲಿಯನ್ ಡಾಲರ್ ಮುಟ್ಟಿದ ಭಾರತದ ಒಟ್ಟಾರೆ ಕಾಫಿ ರಫ್ತು

ಹೆಚ್ಚಿನ ಮೌಲ್ಯದ ರೀಫಂಡ್​ಗಳನ್ನು ಕ್ಲೇಮ್ ಮಾಡಿದ್ದರೆ ವಿಳಂಬ

ತೆರಿಗೆ ಪಾವತಿದಾರರು ತಮ್ಮ ಐಟಿಆರ್​ನಲ್ಲಿ ಹೆಚ್ಚಿನ ಮೌಲ್ಯದ ರೀಫಂಡ್​ಗಳಿಗೆ ಕ್ಲೇಮ್ ಮಾಡಿದ್ದರೆ, ಅಂಥ ಪ್ರಕರಣಗಳನ್ನು ಇಲಾಖೆ ಕೂಲಂಕಷವಾಗಿ ಪರಿಶೀಲಿಸುತ್ತದೆ. ರೀಫಂಡ್ ವಿಳಂಬವಾಗಲು ಇದೂ ಒಂದು ಪ್ರಮುಖ ಕಾರಣ.

ಹಾಗೆಯೇ, ತೆರಿಗೆ ಪಾವತಿದಾರರು ಐಟಿಆರ್ ಸಲ್ಲಿಸುವಾಗ ಏನಾದರೂ ತಪ್ಪು ಮಾಡಿದ್ದರೆ ಆಗಲೂ ಕೂಡ ರೀಫಂಡ್ ವಿಳಂಬವಾಗುತ್ತದೆ. ಈ ವರ್ಷ ಇಂಥ ಪ್ರಕರಣಗಳು ಹೆಚ್ಚಾಗಿವೆ ಎನ್ನಲಾಗಿದೆ. ಐಟಿಆರ್​ನಲ್ಲಿ ದೋಷವಾಗಿದ್ದರೆ ಇಲಾಖೆಯು ತೆರಿಗೆಪಾವತಿದಾರರಿಗೆ ನೋಟೀಸ್ ಕೊಟ್ಟು, ಆ ದೋಷ ಸರಿಪಡಿಸಲು ತಿಳಿಸುತ್ತದೆ. ಹೀಗಾಗಿ, ರೀಫಂಡ್ ಪ್ರೋಸಸ್ ಆಗುವುದು ವಿಳಂಬವಾಗುತ್ತದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಗಾರ್ಮೆಂಟ್ಸ್ ಕಂಪನಿ ಶುರು ಮಾಡಿ ಕೆಲಸಗಾರರ ಆಟಕ್ಕೆ ಬೇಸ್ತು ಬಿದ್ದ ಆಸ್ಟ್ರೇಲಿಯನ್ ಉದ್ಯಮಿ

ಕೆಲ ಉದ್ಯೋಗಸ್ಥ ವ್ಯಕ್ತಿಗಳು ತಮ್ಮ ಐಟಿಆರ್​ನಲ್ಲಿ ಸೆಕ್ಷನ್ 80ಸಿ, 80ಡಿ ಇತ್ಯಾದಿ ಅಡಿ ಡಿಡಕ್ಷನ್ ಕ್ಲೇಮ್ ಮಾಡಿರುವುದುಂಟು. ಆದರೆ, ತಾವು ಕೆಲಸ ಮಾಡುವ ಕಂಪನಿ ಬಳಿ ಅದನ್ನು ಡಿಕ್ಲೇರ್ ಮಾಡದೇ ಇದ್ದಿರಬಹುದು. ಇಂಥ ಸಂದರ್ಭದಲ್ಲಿ ಆದಾಯ ತೆರಿಗೆ ಇಲಾಖೆಯು ಪರಿಶೀಲನೆ ನಡೆಸುತ್ತದೆ. ಇದೂ ಸೇರಿದಂತೆ ಬೇರೆ ಯಾವುದಾದರೂ ವ್ಯತ್ಯಾಸಗಳು ಐಟಿಆರ್​ನಲ್ಲಿ ಕಂಡು ಬಂದಲ್ಲಿ ಇಲಾಖೆ ತೆರಿಗೆ ಪಾವತಿದಾರರಿಗೆ ಎಸ್ಸೆಮ್ಮೆಸ್ ಮೂಲಕವೋ, ಇಮೇಲ್ ಮೂಲಕವೋ ನೋಟೀಸ್ ನೀಡಿ, ಸರಿಪಡಿಸಲು ತಿಳಿಸುತ್ತದೆ. ಇವೆಲ್ಲಾ ಪ್ರಕ್ರಿಯೆಗಳಿಗೆ ಸಮಯ ಹಿಡಿಯುವುದರಿಂದ ಹಲವರಿಗೆ ರೀಫಂಡ್ ಪ್ರೋಸಸ್ ಆಗುವುದು ವಿಳಂಬವಾಗಿರಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಹೆತ್ತ ಮಗನನ್ನೇ ಕೊಂದ ತಂದೆ: ಕೊಲೆ ರಹಸ್ಯ ಭೇದಿಸಿದ್ದು ಮೃತನ ಸ್ನೇಹಿತರು! – Kannada News | Chikkodi Man Kills Alcoholic Son, Friends Expose Chilling Murder Plan

ಬೆಳಗಾವಿ, ಜನವರಿ 08: ಕುಡಿದು ಬಂದು ಕಿರಿ ಕಿರಿ ಮಾಡುತ್ತಾನೆ ಎಂಬ ಕಾರಣಕ್ಕೆ ಹೆತ್ತ ತಂದೆಯೇ ಮಗನಿಗೆ ಚಟ್ಟ ಕಟ್ಟಿರುವ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣದ ಇಂದಿರಾನಗರದಲ್ಲಿ ನಡೆದಿದೆ. ಕಿರಣ್​ ಆಲೂರೆ (31) ಮೃತ ಯುವಕನಾಗಿದ್ದು, ಆರೋಪಿ ನಿಜಗುಣಿ ಮತ್ತು ಉಸ್ಮಾನ್​​ ಮುಲ್ಲಾ ಎಂಬವರನ್ನು ಪ್ರಕರಣ ಸಂಬಂಧ ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದ್ದಾರೆ. ವಿಶೇಷ ಅಂದ್ರೆ ಕಿರಣ್​​ ಕೊಲೆ ರಹಸ್ಯವನ್ನು ಇಲ್ಲಿ ಭೇದಿಸಿರೋದು ಆತನ ಸ್ನೇಹಿತರು ಅನ್ನೋದು ಗಮನಾರ್ಹ.

ಮದ್ಯದ ದಾಸನಾಗಿದ್ದ ಮಗ ಕಿರಣ್​​ನ ಕಾಟ ತಾಳಲಾರದೆ ತಂದೆ ನಿಜಗುಣಿ ಆತನ ಕೊಲೆಗೆ ಸ್ಕೆಚ್​​ ಹಾಕಿದ್ದ. ಅದರಂತೆ ತಾನು ಕೆಲಸ ಮಾಡುತ್ತಿದ್ದ ಹೋಟೆಲ್​​ ಮಾಲೀಕ ಉಸ್ಮಾನ ಮುಲ್ಲಾ ಜೊತೆ ಸೇರಿಕೊಂಡು ಮಗನನ್ನು ಮುಗಿಸಿದ್ದ. ಕುತ್ತಿಗೆಗೆ ವೈರ್​​ನಿಂದ ಬಿಗಿದು ಕಿರಣ್​ ಹತ್ಯೆಮಾಡಿದ್ದ ಆರೋಪಿಗಳು, ಕಾರಿನಲ್ಲಿ ಶವ ತೆಗೆದುಕೊಂಡು ಓಡಾಡಿದ್ದರು. ಬಳಿಕ ಕಿರಣ್​​ ಸ್ನೇಹಿತರಿಗೆ ಕರೆಮಾಡಿದ್ದ ನಿಜಗುಣಿ, ಹೃದಯಾಘಾತದಿಂದ ನಿಮ್ಮ ಸ್ನೇಹಿತ ಮೃತಪಟ್ಟಿದ್ದಾನೆ ಎಂದು ತಿಳಿಸಿದ್ದ. ಜೊತೆಗೆ ತರಾತುರಿಯಲ್ಲಿ ಮೃತದೇಹವನ್ನು ಸುಡಲು ಮುಂದಾಗಿದ್ದ. ಆದರೆ ಅವರ ಸಂಪ್ರದಾಯದಂತೆ ಶವ ಹೂಳಬೇಕಿರುವ ಕಾರಣ ನಿಜಗುಣಿ ನಡೆ ಕಿರಣ್​​ ಸ್ನೇಹಿತರಲ್ಲಿ ಅನುಮಾನ ಮೂಡಿಸಿದೆ.

ಇದನ್ನೂ ಓದಿ: ಸೊಸೆ ಕಾಟಕ್ಕೆ ಅತ್ತೆ ಆತ್ಮಹತ್ಯೆ? ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆ

ಕಿರಣ್​​ ತಂದೆ ನಿಜಗುಣಿ ವರ್ತನೆ ಬಗ್ಗೆ ಸಂಶಯಗೊಂಡು ಮೃತದೇಹ ಪರಿಶೀಲನೆ ನಡೆಸಿದಾಗ ಕುತ್ತಿಗೆ ಬಳಿ ಗಾಯ ಮತ್ತು ಕಿವಿಯಲ್ಲಿ ರಕ್ತಸ್ರಾವ ಆಗಿರೋದು ಕಂಡುಬಂದಿದೆ. ತಮ್ಮ ಅನುಮಾನಕ್ಕೆ ಮತ್ತಷ್ಟು ಪುಷ್ಠಿ ಸಿಕ್ಕ ಹಿನ್ನೆಲೆ ನಿಜಗುಣಿ ಕೆಲಸ ಮಾಡುತ್ತಿದ್ದ ಹೋಟೆಲ್ ಮಾಲೀಕ ಉಸ್ಮಾನ ಮುಲ್ಲಾನನ್ನು ಕಿರಣ್​​ ಸ್ನೇಹಿತರು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಕೊಲೆ ರಹಸ್ಯ ಬೆಳಕಿಗೆ ಬಂದಿದೆ. ಕೂಡಲೇ  ನಿಜಗುಣಿಯನ್ನ ಸ್ಮಶಾನಕ್ಕೆ ಕರೆಸಿ ಆತನನ್ನೂ ಘಟನೆ ಬಗ್ಗೆ ಪ್ರಶ್ನಿಸಿದ್ದಾರೆ. ಈ ವೇಳೆ ಆತ ಕೂಡ ಮಗನನ್ನು ಕೊಲೆ ಮಾಡಿರೋದನ್ನು ಒಪ್ಪಿಕೊಂಡಿದ್ದಾನೆ. ಕೂಡಲೇ ಪೊಲೀಸರಿಗೆ ವಿಷಯ ತಿಳಿಸಲಾಗಿದ್ದು, ಆರೋಪಿಗಳ ವಿರುದ್ಧ ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಕೊಲೆ ಕೇಸ್ ದಾಖಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಅಶ್ವಿನಿ ಆಟಕ್ಕೆ ದಂಗಾದ ಇಡೀ ಮನೆ; ಭೇಷ್ ಎಂದ ಎದುರಾಳಿ ರಘು, ರಕ್ಷಿತಾ – Kannada News | Bigg Boss Kannada: Ashwini Gowda’s Task Win and Raghu Gowda In Shock

ಬಿಗ್ ಬಾಸ್ ಮನೆಯಲ್ಲಿ ವ್ಯಕ್ತಿತ್ವ ಎಷ್ಟು ಮುಖ್ಯವಾಗುತ್ತದೆಯೋ ಟಾಸ್ಕ್ ಆಡೋದು ಕೂಡ ಅಷ್ಟೇ ಮುಖ್ಯವಾಗುತ್ತದೆ. ಟಾಸ್ಕ್​​​ ಉತ್ತಮವಾಗಿ ಆಡುತ್ತಾರೆ ಎಂದರೆ ಅವರಿಗೆ ಹೆಚ್ಚು ಸ್ಕೋಪ್ ಸಿಗುತ್ತದೆ. ಈ ಬಾರಿ ಎಲ್ಲರೂ ನಿಯಮಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದೆ ಆಟವನ್ನು ಹಲವು ಬಾರಿ ಹಾಳು ಮಾಡಿದ್ದಾರೆ. ಅಶ್ವಿನಿ ಅವರು ಈವರೆಗೆ ಟಾಸ್ಕ್ ವಿನ್ ಆಗಿ ಕ್ಯಾಪ್ಟನ್ ಆಗಿಲ್ಲ. ಆದರೆ, ಫಿನಾಲೆ ಸಮೀಪಿಸುವಾಗ ಅವರು ಆಡಿದ ರೀತಿ ಗಮನ ಸೆಳೆದಿದೆ. ಎದುರಾಳಿಗಳು ಕೂಡ ಭೇಷ್ ಎಂದಿದ್ದಾರೆ.

ಅಶ್ವಿನಿ ಗೌಡ ಅವರು ತಮ್ಮ ಮಾತುಗಳಿಂದ ಈ ಮೊದಲಿನಿಂದಲೂ ಚರ್ಚೆ ಆಗುತ್ತಾ ಬರುತ್ತಿದ್ದಾರೆ. ಅವರು ಕೆಟ್ಟ ಪದ ಬಳಕೆ ಮಾಡಿ ಚರ್ಚೆ ಹುಟ್ಟುಹಾಕಿದ್ದು ಇದೆ. ಅವರು ಕೆಲವು ಟಾಸ್ಕ್​​ಗಳಲ್ಲಿ ಉತ್ತಮವಾಗಿ ಆಡಿದ್ದು ಇದೆ. ಆದರೆ, ಕ್ಯಾಪ್ಟನ್ಸಿ ಟಾಸ್ಕ್ ವಿನ್ ಆಗೋಕೆ ಅವರಿಂದ ಸಾಧ್ಯವಾಗಿಲ್ಲ. ಈಗ ಜನವರಿ 7ರ ಎಪಿಸೋಡ್​​​ನಲ್ಲಿ ಅವರು ಉತ್ತಮವಾಗಿ ಟಾಸ್ಕ್ ಆಡಿದ್ದಾರೆ.

‘ಟಾಪ್ 6’ ರೇಸ್​ಗೆ ಸ್ಪರ್ಧಿಗಳಾಗಲು ಬಿಗ್ ಬಾಸ್ ಟಾಸ್ಕ್ ಒಂದನ್ನು ನೀಡಿದ್ದರು. ಇದರ ಅನುಸಾರ ಸ್ಪರ್ಧಿಗಳು ಒಂದು ಕಂಬದ ಮಾದರಿಯ ವಸ್ತುವನ್ನು ಹಿಡಿದು ನಿಲ್ಲಬೇಕು. ಹಿಂಭಾಗದಲ್ಲಿ ಅವರಿಗೆ ತೂಕವನ್ನು ಹೊರಿಸಲಾಗಿತ್ತದೆ. ಇದರ ಜೊತೆಗೆ ಎದುರಿದ್ದವರು ನೀರನ್ನು ಎರಚುತ್ತಾರೆ. ರಘು ಹಾಗೂ ರಾಶಿಕಾ ಒಂದು ತಂಡವಾದರೆ, ಧ್ರುವಂತ್ ಹಾಗೂ ಅಶ್ವಿನಿ ಮತ್ತೊಂದು ಟೀಂನಲ್ಲಿ ಇದ್ದರು.

ಇದನ್ನೂ ಓದಿ: ಗಿಲ್ಲಿ ಬಿಗ್ ಬಾಸ್ ಮನೆ ಒಳಗೆ ಇಟ್ಟ ಬೇಡಿಕೆಯನ್ನು ಹೊರಗೆ ಈಡೇರಿಸಿದ ಫ್ಯಾನ್ಸ್

ರಾಶಿಕಾ 29.51 ನಿಮಿಷ ಹಾಗೂ ರಘು ಅವರು 70.10 ನಿಮಿಷ ನಿಂತಿದ್ದರು. ಅಶ್ವಿನಿ ಗೌಡ ಹಾಗೂ ಧ್ರುವಂತ್ ಅವರು 70 ನಿಮಿಷದ ದಾಖಲೆಯನ್ನು ಮುರಿದು ಗೆಲುವು ಕಂಡಿದ್ದಾರೆ. ಅಶ್ವಿನಿ ಹಾಗೂ ಧ್ರುವಂತ್ ಅವರು ಅಷ್ಟಾಗಿ ನೀರೆರಚಲು ಹೋಗಿರಲಿಲ್ಲ. ಅಶ್ವಿನಿ-ಧ್ರುವಂತ್ ನಿಂತಾಗ ರಘು ಹಾಗೂ ರಾಶಿಕಾ ಜೋರಾಗಿಯೇ ನೀರು ಎರಚಿದ್ದರು. ಆದರೆ, ಇದೆಲ್ಲವನ್ನೂ ಎದುರಿಸಿ ಅವರು ನಿಂತರು. ಅವರ ಆಟ ನೋಡಿ ರಕ್ಷಿತಾ ಹಾಗೂ ರಘು ಮೆಚ್ಚಿಕೊಂಡರು. ‘ನಿಮ್ಮ ಬಗ್ಗೆ ಹೆಮ್ಮೆ ಆಗುತ್ತಿದೆ’ ಎಂದು ರಕ್ಷಿತಾ ಅವರು ಅಶ್ವಿನಿಗೆ ಹೇಳಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಟೀಮ್ ಇಂಡಿಯಾ ಆಟಗಾರನಿಗೆ ಶಸ್ತ್ರಚಿಕಿತ್ಸೆ… ತಂಡದಿಂದ ಔಟ್..! – Kannada News | Tilak Varma set to miss opening two T20Is vs New Zealand

ಭಾರತ ಮತ್ತು ನ್ಯೂಝಿಲೆಂಡ್ (IND vs NZ) ನಡುವಣ ಸರಣಿಯು ಜನವರಿ 11 ರಿಂದ ಶುರುವಾಗಲಿದೆ. ಭಾರತದಲ್ಲಿ ನಡೆಯಲಿರುವ ಈ ಸರಣಿಯಲ್ಲಿ ಮೂರು ಏಕದಿನ ಹಾಗೂ ಐದು ಟಿ20 ಪಂದ್ಯಗಳು ನಡೆಯಲಿದೆ. ಈ ಸರಣಿ ಆರಂಭಕ್ಕೂ ಮುನ್ನ ಟೀಮ್ ಇಂಡಿಯಾಗೆ ಆಘಾತ ಎದುರಾಗಿದೆ.

ಭಾರತ ಟಿ20 ತಂಡದ ಪ್ರಮುಖ ಆಟಗಾರ ತಿಲಕ್ ವರ್ಮಾ ಗಾಯದ ಕಾರಣ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ವಿಜಯ ಹಝಾರೆ ಟೂರ್ನಿಯ ವೇಳೆ ತೊಡೆಸಂಧು ಸಮಸ್ಯೆಗೆ ಒಳಗಾಗಿದ್ದ ತಿಲಕ್ ಆಸ್ಪತ್ರೆಗೆ ದಾಖಲಾಗಿದ್ದು, ನೋವಿನ ಸಮಸ್ಯೆಗೆ ಸರ್ಜರಿ ಮಾಡಿಸಿಕೊಂಡಿದ್ದಾರೆ.

ಹೀಗಾಗಿ ನ್ಯೂಝಿಲೆಂಡ್ ವಿರುದ್ಧದ ಮೊದಲೆರಡು ಟಿ20 ಪಂದ್ಯಗಳಲ್ಲಿ ತಿಲಕ್ ವರ್ಮಾ ಕಾಣಿಸಿಕೊಳ್ಳುವುದಿಲ್ಲ. ಇನ್ನು ಸಂಪೂರ್ಣ ಫಿಟ್​ನೆಸ್ ಸಾಧಿಸಿದರೆ ಮಾತ್ರ ಅವರು ಉಳಿದ ಮೂರು ಮ್ಯಾಚ್​ಗಳ ವೇಳೆ ಭಾರತ ತಂಡವನ್ನು ಕೂಡಿಕೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.

ಇತ್ತ ತಿಲಕ್ ವರ್ಮಾ ಟಿ20 ವಿಶ್ವಕಪ್​ ತಂಡದಲ್ಲೂ ಸ್ಥಾನ ಪಡೆದಿದ್ದಾರೆ. ಹೀಗಾಗಿ ಅವರ ಫಿಟ್​ನೆಸ್ ಟೀಮ್ ಇಂಡಿಯಾ ಪಾಲಿಗೆ ಅನಿವಾರ್ಯ. ಹಾಗಾಗಿ ಟಿ20 ವಿಶ್ವಕಪ್​ಗೂ ಮುನ್ನ ಬಿಸಿಸಿಐ ವೈದ್ಯಕೀಯ ತಂಡವು ತಿಲಕ್ ವರ್ಮಾ ಅವರನ್ನು ಮೇಲ್ವಿಚಾರಣೆ ಮಾಡಲಿದೆ. ಒಂದು ವೇಳೆ ಅವರು ಫೆಬ್ರವರಿ ಮೊದಲ ವಾರದೊಳಗೆ ಸಂಪೂರ್ಣ ಗುಣಮುಖರಾಗದೇ ಇದ್ದರೆ ಟಿ20 ವಿಶ್ವಕಪ್ ಟೂರ್ನಿಯಿಂದ ಹೊರಬೀಳಬಹುದು.

ಭಾರತ ಟಿ20 ತಂಡ: ಸೂರ್ಯಕುಮಾರ್ ಯಾದವ್ (ನಾಯಕ), ಅಕ್ಷರ್ ಪಟೇಲ್ (ಉಪನಾಯಕ), ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಜಸ್​ಪ್ರೀತ್ ಬುಮ್ರಾ, ಅರ್ಷದೀಪ್ ಸಿಂಗ್, ವರುಣ್ ಚಕ್ರವರ್ತಿ, ಹರ್ಷಿತ್ ರಾಣಾ, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, ಇಶಾನ್ ಕಿಶನ್ (ವಿಕೆಟ್ ಕೀಪರ್), ರಿಂಕು ಸಿಂಗ್.

Published On – 12:14 pm, Thu, 8 January 26

Source link

Video: ಬೈಕ್​ ಸವಾರನ ರಕ್ಷಿಸಲು ಹೋಗಿ ಕಾರಿಗೆ ಲಾರಿ ಡಿಕ್ಕಿ, ಮೂವರು ಸಾವು – Kannada News | Andhra Pradesh Highway Mishap Claims Three Lives After Lorry Car Collision

ಶ್ರೀಕಾಕುಳಂ, ಜನವರಿ 08: ಬೈಕ್ ಸವಾರನನ್ನು ರಕ್ಷಿಸಲು ಹೋಗಿ ಲಾರಿಯೊಂದು ವಿರುದ್ಧ ದಿಕ್ಕಿನಲ್ಲಿ ಬರುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಆಂಧ್ರಪ್ರದೇಶದ ಶ್ರೀಕಾಕುಳಂನಲ್ಲಿ ನಡೆದಿದೆ. ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ್ದಾರೆ. ಈ ದುರಂತ ಘಟನೆ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಈ ಮನಕಲಕುವ ವೀಡಿಯೊ  ವೈರಲ್ ಆಗಿದೆ. ಭಾರೀ ವಾಹನದ ಮುಂದೆ ಇದ್ದಕ್ಕಿದ್ದಂತೆ ಬಂದ ಬೈಕನ್ನು ತಪ್ಪಿಸಲು ಲಾರಿ ಚಾಲಕ ವಾಹನವನ್ನು ಬಲಕ್ಕೆ ತಿರುಗಿಸಿದ್ದಾನೆ. ಆಗ ಕಾರಿಗೆ ಡಿಕ್ಕಿ ಹೊಡೆದಿದೆ. ಜಿಲ್ಲೆಯ ಕೊರ್ಲಂ ಗ್ರಾಮದ ಬಳಿಯ ಬರುವಾ ಜಂಕ್ಷನ್‌ನಲ್ಲಿ ಈ ಅಪಘಾತ ಸಂಭವಿಸಿದೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Exit mobile version